ನಾ. ದಾಮೋದರ ಶೆಟ್ಟಿ
ದಾಮೋದರ ಶೆಟ್ಟಿ ನಾ | |
---|---|
ಜನನ | ಆಗಸ್ಟ್ ೨, ೧೯೫೧ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿ |
ಉದ್ಯೋಗ | ನಟ, ನಾಟಕಕಾರ, ನಿರ್ದೇಶಕ |
ನಾ ದಾಮೋದರ ಶೆಟ್ಟಿ:ಕವಿ,ನಟ, ನಾಟಕಕಾರ, ಸಾಹಿತಿ ನಾ.ದಾಮೋದರ ಶೆಟ್ಟಿಯವರು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯವರು. ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ ಹಲವಾರು ನಾಟಕಗಳನ್ನೂ ರಂಗದ ಮೇಲೆ ತಂದು ಪ್ರದರ್ಶಿಸಿದ್ದಾರೆ. ಇವರು ನಿವೃತ್ತ ಪ್ರಾಧ್ಯಾಪಕರಾಗಿದ್ದು,[೧]
ಜನನ[ಬದಲಾಯಿಸಿ]
- ೧೯೫೧ ರ ಆಗಸ್ಟ್ ೨ ರಂದು ಇವರು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿ ಹುಟ್ಟಿದರು.
- ಇವರ ತಂದೆ ಕುಂಞಕಣ್ಣ ಚೆಟ್ಟಿಯಾರ್, ತಾಯಿ ಕುಂಞಮ್ಮರ ಅಕೇರಿಯ.
ಶಿಕ್ಷಣ[ಬದಲಾಯಿಸಿ]
- ಪ್ರಾರಂಭಿಕ ಶಿಕ್ಷಣ ಕುಂಬಳೆಯಲ್ಲಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ.
ಉದ್ಯೋಗ[ಬದಲಾಯಿಸಿ]
- ಕೊಡಗಿನ ನೆಲಜಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದರು.
- ೧೯೭೫ ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ೩೬ ವರ್ಷಗಳ ದೀರ್ಘಸೇವೆಯ ನಂತರ ೨೦೧೧ ರಲ್ಲಿ ನಿವೃತ್ತಿ.
ಪ್ರವೃತ್ತಿ[ಬದಲಾಯಿಸಿ]
- ಎಳೆಯ ವಯಸ್ಸಿನಿಂದಲೇ ನಾಟಕದಲ್ಲಿ ಅಭಿನಯ, ಯಕ್ಷಗಾನಗಳತ್ತ ಬೆಳೆದ ಒಲವು. ಕೇರಳದ ತ್ರಿಶೂರಿನ ಸ್ಕೂಲ್ ಆಫ್ ಡ್ರಾಮದಲ್ಲಿ ತರಬೇತಿ ಪಡೆದ ನಂತರ ಸಮುದಾಯ ನಾಟಕ ಸಂಸ್ಥೆಯಲ್ಲಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ಭಾಗಿಯಾಗಿದ್ದಾರೆ.
- ಮಂಗಳೂರಿನಲ್ಲಿ ಸಮಾನ ಮನಸ್ಕರೊಡನೆ ಸೇರಿ ಕಟ್ಟಿದ ನಾಟಕ ತಂಡವೇ ‘ಭೂಮಿಕ’,
- ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜು ಕನ್ನಡ ಬೋಧನಾ ವಿಭಾಗಕ್ಕೆ ಸೇರಿದ ನಂತರ ಮಂಗಳೂರಿನ ಕನ್ನಡ ಸಂಘ, ಭಾವಗಂಗೋತ್ರಿ, ಮಂಗಳಾ ಫಿಲಂ ಸೊಸೈಟಿ, ದರ್ಶನ್ ಫಿಲಂ ಸೊಸೈಟಿ, ಅಭಿವ್ಯಕ್ತ ಮುಂತಾದ ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರು.
- ಸಾಂಸ್ಕೃತಿಕ ರಂಗದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಗೆಳೆಯರೊಡನೆ ಸೇರಿ ಪ್ರಾರಂಭಿಸಿದ ಸಂಸ್ಥೆ ‘ದಾಸಜನ’ ಮಂಗಳೂರಿನಲ್ಲಿ ಕ್ರಿಯಾಶೀಲವಾಗಿತ್ತು.
- ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದು ಪ್ರಜಾವಾಣಿ ಪತ್ರಿಕೆಗಾಗಿ ಬರೆದ ವಿಶಿಷ್ಟ ಅಂಕಣ ‘ತೆಂಕಣದ ಸುಳಿಗಾಳಿ’ (೧೯೯೫-೨೦೦೦) ಪುಸ್ತಕವಾಗಿ ಪ್ರಕಟವಾಗಿದೆ.
- ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಗೆಜೆಟಿಯರ್, ಕರ್ನಾಟಕ ನಾಟಕ ರಂಗಾಯಣ, ಕರ್ನಾಟಕ ಸರಕಾರದ ವಿವಿಧ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸದಸ್ಯರಾಗಿ ಅಧ್ಯಕ್ಷರಾಗಿ ನಿರ್ವಹಿಸಿದ ಕಾರ್ಯಗಳು.
- ಸಾಂಸ್ಕೃತಿಕ ಸಂಘಟನೆಗಳ, ಕಾರ್ಯಕ್ರಮಗಳಿಗೆ ನೆರವು ನೀಡಲು ನಮ್ಮ ನಾಡು, ಜಾಗರೂಕ, ಜನದನಿ, ಮನತೆರೆ, ನಾದಭಾವ ಮುಂತಾದವುಗಳಿಗಾಗಿ ಬರೆದು ಸಿದ್ಧಪಡಿಸಿದ ಹಾಡುಗಳ ಸಿಡಿ ರೂಪದಲ್ಲಿ ಬಿಡುಗಡೆ.
- ತೆಂಕುತಿಟ್ಟು ಯಕ್ಷಗಾನ ಕಲೆಯನ್ನೂ ಆಳವಾಗಿ ಅಭ್ಯಸಿಸಿ ಯಕ್ಷಗಾನ ತಂಡವನ್ನು ೧೯೮೮ ರಲ್ಲಿ ಇಂಗ್ಲೆಂಡಿಗೆ ಕರೆದೊಯ್ದು ವಿವಿಧ ಸ್ಥಳಗಳಲ್ಲಿ ನೀಡಿದ ಪ್ರದರ್ಶನ ನೀಡಿದ್ದಾರೆ.
- ೧೯೯೨ ಇಂಗ್ಲೆಂಡ್ ಪ್ರವಾಸ ಕೈಗೊಂಡು ಯಕ್ಷಗಾನದ ಜೊತೆ ಭರತನಾಟ್ಯ ತಂಡವನ್ನೂ ಕೊಂಡೊಯ್ದು ಹೆಗ್ಗಳಿಕೆ ಇವರಿಗಿದೆ.
ಕೃತಿಗಳು[ಬದಲಾಯಿಸಿ]
ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ನಾದಾರವರು ಪ್ರಟಿಸಿದ್ದಾರೆ.
ಕಾವ್ಯ[ಬದಲಾಯಿಸಿ]
- ಒಡೆದ ಮುತ್ತುಗಳು,
- ನಮ್ಮನಾಡು,
- ಇಂಗ್ಲೆಂಡ್ ಕವನಗಳು,
- ಹಾಡುಮನವೆ ಹಾಡು,
- ತಟ್ಟೆಯೊಳಗಿನ ಜೀವ – ಕವನ ಸಂಕಲನಗಳು;
ಕಾದಂಬರಿ[ಬದಲಾಯಿಸಿ]
- ಸುಳಿಯೊಳಗೆ
- ಪರಿಧಿ
ವ್ಯಕ್ತಿ ಚಿತ್ರಗಳು[ಬದಲಾಯಿಸಿ]
- ಪೇಜಾವರ ಸದಾಶಿವರಾಯರು,
- ಕೆ.ಎನ್.ಟೇಲರ್,
- ಮುದ್ದಣ: ಬದುಕ-ಬರೆಹ,
- ನಾರಾಯಣ ಗುರು,
- ಕೆ.ವಿ. ಸುಬ್ಬಣ್ಣ
- ಅಮೃತ ಸೋಮೇಶ್ವರ
ಅನುವಾದಿತ ಕೃತಿಗಳು[ಬದಲಾಯಿಸಿ]
- ಭತ್ತದ ಕಾಳುಗಳು,
- ಕರಿಯದೇವರ ಹುಡುಕಿ,
- ಸಾಕ್ಷಾತ್ಕಾರ,
- ಭರತವಾಕ್ಯ,
- ಅಶ್ವತ್ಥಾಮ,
- ಬಾಲ್ಯದ ನೆನಪುಗಳು,
- ದೇವರ ವಿಕರಾಳಗಳು,
- ಕೊಚ್ಚರೇತ್ತಿ,
- ಮಹಾಕವಿ ಜಿ. ಶಂಕರ ಕುರುಪ್,
- ಮೂರುಹೆಜ್ಜೆ ಮೂರುಲೋಕ
- ಈ ಪುರಾತನ ಕಿನ್ನರಿ
- ಕಂಪನ ಮಾಪಕಗಳೇ ವಂದನೆ
ನಾಟಕ[ಬದಲಾಯಿಸಿ]
- ಅರ್ಪಣೆ
- ಹೂ ಮನಸು
- ಸಿರಿ
ಸಂಪಾದನೆ[ಬದಲಾಯಿಸಿ]
- ನವಭಾರತದಲ್ಲಿ ಶಿಂಗಣ್ಣ
- ಸಿರಿನಿವಾಸ,
- ಅಪ್ರಮೇಯ,
- ಅಡೇಮನೆ ಅಪ್ರಮೇಯ
- ಸಂಕಥನ(ಶ್ರೀನಿವಾಸ ಹಾವನೂರ)
- ಪೊಲಿ,
- ಸ್ವಾತಂತ್ರ್ಯದ ಸುವರ್ಣ ಹೆಜ್ಜೆ,
- ಸಾನ್ನಿಧ್ಯ,
- ಅದ್ಭುತ ರಾಮಾಯಣಮ್,
- ಹೊಂಬಿದಿರು
- ಸುಗಮ ಸಂಗೀತ ಸಾಧಕಿ ಬಿ.ಕೆ.ಸುಮಿತ್ರ
- ವೈಕೆಎಂ ಎಪ್ಪತ್ತು
ವಿಮರ್ಶೆ[ಬದಲಾಯಿಸಿ]
- ರಂಗಶೋಧನ,
- ತೆಂಕಣದ ಸುಳಿಗಾಳಿ,
- ನಾಟಕದ ಅಮೃತ - ವಿಮರ್ಶೆಯ ಗರುಡ
ಪ್ರಶಸ್ತಿಗಳು[ಬದಲಾಯಿಸಿ]
- ‘ದೇವರ ವಿಕರಾಳ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ಭಾರತೀಯ ಭಾಷಾ ಸಂಸ್ಥೆಯ ಭಾಷಾಭಾರತಿ ಸಮ್ಮಾನ್
- ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ,
- ದುಬೈನ ಧ್ವನಿಪ್ರತಿಷ್ಠಾನ ‘ಶ್ರೀರಂಗರಂಗ’ಪ್ರಶಸ್ತಿ[೨]
- ರಂಗೋತ್ರಿಯ ‘ಬುದ್ಧ ಪ್ರಶಸ್ತಿ’
- ಬೆಂಗಳೂರಿನ ನಾಡಚೇತನ ಪ್ರಶಸ್ತಿ,
- ಉಡುಪಿಯ ಬೆಳ್ಳೆ ಉಪಾಧ್ಯಾಯ ಪ್ರಶಸ್ತಿ
- ಮಂಗಳೂರಿನಲ್ಲಿ ಫೆಬ್ರವರಿ ೧೧, ೨೦೧೨ರಮದು ನಾದಾಭಿನಂದನೆ[೩],[೪]
ಪುಸ್ತಕದ ಜೋಳಿಗೆ[ಬದಲಾಯಿಸಿ]
ನಾದಾ ಅವರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಪುಸ್ತಕದ ಜೋಳಿಗೆಯೆಂಬ ಪುಸ್ತಕಗಳ ಸಂಗ್ರಹದ ಕೆಲಸಗಳನ್ನು ಮಾಡಿದರು. ಇದಕ್ಕಾಗಿ ಒಂದು ವಿದ್ಯಾರ್ಥಿ ತಂಡವನ್ನು ಕಟ್ಟಿ ಹಿರಿಯ ಸಾಹಿತಿಗಳು, ಪುಸ್ತಕ ಆಸಕ್ತರ ಮನೆಗೆ ಹೋಗಿ ಅವರಲ್ಲಿ ಹೆಚ್ಚಿರುವ ಪುಸ್ತಕಗಳನ್ನು ಸಂಗ್ರಹಿಸುವುದು ಈ ಯೋಜನೆಯ ಉದ್ದೇಶ. ಹೀಗೆ ಕನ್ನಡ ವಿಭಾಗದಲ್ಲಿ ಸುಮಾರು ೫,೬೦೦ ದಾನ ಪಡೆದ ಪುಸ್ತಕಗಳನ್ನು ಕೆಟಲಾಗ್ ಮಾಡಿ ಇಡಲಾಗಿದೆ.
ಬಾಹ್ಯ ಸಂಪರ್ಕ[ಬದಲಾಯಿಸಿ]
- ನಾ. ದಾಮೋದರ ಶೆಟ್ಟಿಯವರ ಬ್ಲಾಗ್
ಉಲ್ಲೇಖ[ಬದಲಾಯಿಸಿ]
- ↑ "ಆರ್ಕೈವ್ ನಕಲು". Archived from the original on 2014-04-03. Retrieved 2021-08-10.
- ↑ http://gktest.dreamhosters.com/news-41916.html[ಶಾಶ್ವತವಾಗಿ ಮಡಿದ ಕೊಂಡಿ]
- ↑ https://naadaaloka.wordpress.com/
- ↑ http://vbnewsonline.com/Writer/83147/