ಚಿಂತಾಮಣಿ
ಚಿಂತಾಮಣಿ
ಚಿಂತಾಮಣಿ | |
---|---|
city | |
Population (2001) | |
• Total | ೬೫,೪೫೬ |
ಕ್ಷೇತ್ರದ ಕಥೆ
[ಬದಲಾಯಿಸಿ]ಚಿಂತಾಮಣಿ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪಟ್ಟಣ ಹಾಗೂ ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ೨೦೦೭ರಲ್ಲಿ ಕೋಲಾರ ಜಿಲ್ಲೆಯ ವಿಭಜನೆ ನಡೆದಾಗ ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಭಾಗವಾಯಿತು. ಇಲ್ಲಿನ ಜನರು ಕನ್ನಡ ಮತ್ತು ತೆಲಗು ಭಾಷೆಗಳನ್ನು ಮಾತನಾಡುತ್ತಾರೆ. ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವ್ಯಾಪಾರಕೇಂದ್ರ. ಚಿಂತಾಮಣಿ ನಾಯಕನೆಂಬ ಮರಾಠ ನಾಯಕ,' ನಿರ್ಮಿಸಿದ ಕಾರಣಕ್ಕಾಗಿ 'ಚಿಂತಾಮಣಿ,' ಹೆಸರು ಬಂದಿದೆ. 'ಅಂಬಾಜಿದುರ್ಗ' ಈ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ನಂತರ ಕಾಲಾನುಕ್ರಮದಲ್ಲಿ ಸ್ಥಾನಾಂತರಗೊಂಡಿತು. ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಸಮಾನ ದೂರದಲ್ಲಿರುವ ಚಿಂತಾಮಣಿ ಪ್ರಮುಖ ವ್ಯಾಪಾರಿ ಸ್ಥಳವೆಂದು ಗುರುತಿಸಿಕೊಂಡಿದೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರಥಮ ಕೃಷಿ ಮಾರುಕಟ್ಟೆ ಆರಂಭಗೊಂಡಿದ್ದು ಇಲ್ಲೇ. ಕಾಲಜ್ಞಾನ ಬರೆದ ನಾರಾಯಣ ತಾತನವರ ದೇವಾಲಯ ಕೈವಾರ ಕ್ಷೇತ್ರದ ಹತ್ತಿರದಲ್ಲೇ ಇದೆ. ಕೈಲಾಸಗಿರಿಯೆಂಬಲ್ಲಿ ಗುಹಾಂತರ ದೇವಾಲಯಗಳಿವೆ. ಅವು ಇನ್ನೂ ನಿರ್ಮಾಣದ ಹಂತದಲ್ಲಿವೆ. ಮುಸ್ಲಿಂ ಸಮುದಾಯದ ಯಾತ್ರಾಸ್ಥಳ 'ಮುರುಗಮಲ್ಲಾ ಕ್ಷೇತ್ರ' ವಿದೆ. ಅಲಂಬಗಿರಿಯಿದೆ.ಈ ತಾಲೂಕಿನ ಸುಕ್ಷೇತ್ರ ದೊಡ್ಡಬೊಮ್ಮನಹಳ್ಳಿಯಲ್ಲಿ ಇತಿಹಾಸ ಕಾಲದ ಶ್ರೀ ವೀರಭದ್ರ್ರ ಸ್ವಾಮಿ ದೇವಾಲಯವಿದೆ.
ಜನಸಂಖ್ಯೆ
[ಬದಲಾಯಿಸಿ]ಚಿಂತಾಮಣಿಯಲ್ಲಿ, ೩೩೯ ನಿವಾಸಿತ ಹಾಗೂ ೬೧ ಅನಿವಾಸಿತ ಸೇರಿದಂತೆ, ಒಟ್ಟು ೪೦೦ ಗ್ರಾಮಗಳಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ೨,೦೫,೭೯೧ ಜನಸಂಖ್ಯೆಯಿದೆ. ಮತ್ತು ನಗರ ಪ್ರದೇಶದಲ್ಲಿ ೬೫,೪೯೩ ಸೇರಿದಂತೆ ಒಟ್ಟು ೨,೭೧,೨೮೪ ಜನಸಂಖ್ಯೆಯಿದೆ. ತಾಲ್ಲೂಕಿನ ವಿಸ್ತೀರ್ಣ ೯೦೨.೭೨ ಚ. ಕಿ. ಮೀ.
ರಾಜಕೀಯ
[ಬದಲಾಯಿಸಿ]K M Krishna Reddy is the first person to become minister government karnataka from this constiuncy
ಚಿಂತಾಮಣಿಯಲ್ಲಿ ಸಿಗುವ ಜೇಡಿಮಣ್ಣಿಗೆ ಬಹಳ ಬೇಡಿಕೆಯಿದೆ
[ಬದಲಾಯಿಸಿ]ಚಿಂತಾಮಣಿಯಲ್ಲಿ ದೊರೆಯುವ ಜೇಡಿಮಣ್ಣು ಪಿಂಗಾಣಿ ಉಪಕರಣಗಳಿಗೆ ಹೇಳಿ ಮಾಡಿಸಿದ ಕಚ್ಚಾವಸ್ತು. ಕನ್ನಂಪಲ್ಲಿ ಕೆರೆಯಿಂದ ನಗರಕ್ಕೆ ನೀರು ಸರಬರಾಜಾಗುತ್ತದೆ. ಚಿಂತಾಮಣಿ ಚಿನ್ನ-ಬೆಳ್ಳಿ ಕೆಲಸಕ್ಕೆ ಹೆಸರುವಾಸಿಯಾಗಿದೆ. ನಗರದ ಹೊರವಲಯದಲ್ಲಿ ’ಬೂರಗಮಾಕಲಹಳ್ಳಿ’ ಯಲ್ಲಿ ’ದೊರಶೆಟ್ಟಿ ಎಕ್ಕೇರಿ ಆಂಜನೇಯಸ್ವಾಮಿ ದೇವಾಲಯವಿದೆ. ನಗರದ ಹತ್ತಿರವಿರುವ ಅಂಜನಾದ್ರಿ ಬೆಟ್ಟದ ಮೇಲೆ ’ವರದಾಂಜನೇಯಸ್ವಾಮಿ ಗುಡಿ' ಯಿದೆ. ನಗರದೊಳಗೆ, ರಾಘವೇಂದ್ರ, ಹರಿಹರೇಶ್ವರ, ನಗರೇಶ್ವರ, ನಾಗನಾಥೇಶ್ವರ, ಸಹನೇಶ್ವರ, ಕನ್ನಿಕಾಪರಮೇಶ್ವರಿ, ಗಣಪತಿ, ಕಾಳಿಕಾಂಬ ದೇವಸ್ಥಾನಗಳಿವೆ. ’ಆಝಾದ್ ಚೌಕ' ದ ಹರಿಹರೇಶ್ವರ ದೇವಾಲಯವು ವಿಶಾಲ ಪ್ರಾಂಗಣವನ್ನು ಹೊಂದಿದೆ. ಆಝಾದ್ ಚೌಕದಲ್ಲಿ ವಾರ್ಷಿಕ ಒಂದು ತಿಂಗಳ ಕಾಲ ನಡೆಯುವ ಸಾರ್ವಜನಿಕ-ಗಣೇಶೋತ್ಸವ ಸುತ್ತಮುತ್ತಲ ಜಿಲ್ಲೆಯಲ್ಲೇ ಪ್ರಸಿದ್ಧವಾಗಿದೆ.
’ಕೋನಕುಂಟ್ಲು’
[ಬದಲಾಯಿಸಿ]ಇದು ಚಿಂತಾಮಣಿ ಹತ್ತಿರವಿರುವ, ರಮ್ಯ ತಾಣದಲ್ಲಿ ಆಕರ್ಷಕ ಬೆಟ್ಟ-ಗುಡ್ಡಗಳಿವೆ. ವೆಂಕಟರಮಣ ಸ್ವಾಮಿ ದೇವಾಲಯವಿದೆ. ಗರ್ಭಗುಡಿಯಲ್ಲಿ ಧಾರ್ಮಿಕ ಸಂಕೇತ ರೂಪದಲ್ಲಿರುವ ಹುತ್ತದಾಕಾರದಲ್ಲಿ ನರಸಿಂಹ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಚೈತ್ರ ಬಹುಳ ಸಪ್ತಮಿಯಂದು ನಡೆಯುವ ಬ್ರಹ್ಮ-ರಥೋತ್ಸವ ಹೆಸರುವಾಸಿ.
’ಆಲಂಬಗಿರಿ’
[ಬದಲಾಯಿಸಿ]ಚಿಂತಾಮಣಿಯಿಂದ ೮ ಕಿ. ಮೀ ದೂರದಲ್ಲಿದೆ. ಆಲಂಬಗಿರಿ ವೆಂಕಟಾರಮಣಸ್ವಾಮಿ ದೇವಾಲಯದಲ್ಲಿ ಗರ್ಭಗೃಹ ಮತ್ತು ಎರಡು ಮಂಟಪಗಳಿವೆ. ವಿಶಾಲವಾದ ನವರಂಗ, ಆಯತಾಕಾರದ ಮುಖಮಂಟಪಗಳು ಕಂಡುಬರುತ್ತವೆ. ಗರ್ಭಗುಡಿಯ ಮೇಲ್ಭಾಗದಲ್ಲಿರುವ ಚೌಕಾಕಾರದ ವಿಜಯನಗರ ಶಿಲ್ಪದ ಶೈಲಿಯ ಶಿಖರವನ್ನು ನವೀಕರಿಸಲಾಗಿದೆ. ಪೂರ್ವ ದಿಕ್ಕಿನಲ್ಲಿ ಪ್ರವೇಶದ್ವಾರ. ಚೈತ್ರ ಹುಣಿಮೆಯಂದು, ಬ್ರಹ್ಮ ರಥೋತ್ಸವ. ಮರಾಠ ನಾಯಕರು ಇದರ ನಿರ್ಮಾಣ ಮಾಡಿದ್ದಾರೆ.
ಕೈವಾರ
[ಬದಲಾಯಿಸಿ]ಮಹಾಭಾರತದ ಕಾಲದಲ್ಲಿ ಏಕಚಕ್ರಪುರವೆಂದು ಕರೆಯಲಾಗುತ್ತಿದ್ದ ಕೈವಾರ, ಅರಗಿನ ಮನೆಯಿಂದ ತಪ್ಪಿಸಿಕೊಂಡು ಪಾಂಡವರು ಸ್ವಲ್ಪ ಕಾಲ ಇಲ್ಲಿ ತಂಗಿದ್ದರೆಂದು ಹೇಳಲಾಗಿದೆ. ಈ ಗ್ರಾಮದ ಹತ್ತಿರವಿರುವ 'ಚಿದಂಬಗಿರಿ ಬೆಟ್ಟ' ದ ಮೇಲೆ ವಾಸವಾಗಿದ್ದ ಬಕಾಸುರನನ್ನು ಭೀಮಸೇನನು ಕೊಂದು, ಅವನ ಶವವನ್ನು ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿಟ್ಟಿದ್ದನೆಂಬ ಪ್ರತೀತಿಯಿದೆ. ಈ ಮೇಲೆ ಒಸರುವ ಮಣ್ಣಿನ ರಾಡಿಯನ್ನು ಬಕಾಸುರನ ಕೀವು-ರಕ್ತವೆಂದು ಸ್ಥಳೀಯ ಜನ ಭಾವಿಸುತ್ತಾರೆ. ಕೈವಾರ ಕ್ಷೇತ್ರದಲ್ಲಿ ಅಮರ ನಾರಾಯಣ, ಧರ್ಮರಾಯ, ಭೀಮೇಶ್ವರ, ಅರ್ಜುನೇಶ್ವರ, ನಕುಲೇಶ್ವರ, ಸಹದೇವೇಶ್ವರ ದೆವಾಲಯಗಳಿವೆ. ಕೈವಾರದ ನಾರಾಯಣೇಶ್ವರ ದೇವಾಲಯ ಈಗಿನ ಪ್ರಮುಖ ಆಕರ್ಷಣೆಯ ಕೇಂದ್ರ. ವಿಜಯನಗರ ಕಾಲದ ಹಲವಾರು ದೇವಾಲಯಗಳು ಕೈವಾರದ ಸುತ್ತಮುತ್ತ ಇವೆ. ’ಕಾಲಜ್ಞಾನ ಬರೆದ,ಯೋಗಿನಾರೇಯಣ, ತೆಲುಗು ಕನ್ನಡ ಕವಿ ಸಂತರು ಈ ಗ್ರಾಮದಲ್ಲಿ ನೆಲೆಸಿದ್ದರು.
ಚಿಂತಾಮಣಿಯಿಂದ ೬ ಕಿ. ಮೀ ದೂರದಲ್ಲಿರುವ ಒಂದು ಗುಹಾಂತರ ದೇವಾಲಯಗಳಲ್ಲೊಂದು. ’ಅಂಬಾಜಿದುರ್ಗ ಪರ್ವತ ಶ್ರೇಣಿ’ ಯ ಒಂದು ಬೆಟ್ಟವನ್ನು ಕೊರೆದು, ಒಂದು ಇಟ್ಟ್ಟ್ಫಿಗೆಯನ್ನೂ ಬಳಸದೇ ಕೈಲಾಸಗಿರಿ ಗುಹಾಲಯ ದೇವಸ್ಥಾನ’ ವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ’ಚತುರ್ಮುಖ ಶಿವ’, ’ಪಾರ್ವತಿ’ ಮತ್ತು ’ಗಣೇಶ’ ನ ದೇವಸ್ಥಾನಗಳಿವೆ. ಅದಲ್ಲದೇ ಒಂದು ಪ್ರಾಂಗಣವನ್ನು ಹಾಗೂ ಕಲ್ಲಿನಲ್ಲಿಯೇ ಬೃಹತ್ ಗಾತ್ರದ ’ಜಟಾಧಾರಿ ಶಿವನ ವಿಗ್ರಹ’ ಕೆತ್ತುವ ಕಾರ್ಯ, ಮಾಜಿ ಸಚಿವ, ’ಚೌಡರೆಡ್ಡಿ ಕುಟುಂಬ’ ದವರ ಮೇಲ್ವಿಚಾರಣೆಯೊಡನೆ, ಭರದಿಂದ ಸಾಗಿದೆ. ಧಾರ್ಮಿಕ ಹಾಗೂ ಸಾಹಸ ಪ್ರವೃತ್ತಿಯ ಜನರಿಗೆ ಕೈಲಾಸಗಿರಿ ಒಂದು ಹೇಳಿಮಾಡಿಸಿದ ತಾಣ.
ಮುರುಗಮಲ್ಲಾ
[ಬದಲಾಯಿಸಿ]ಚಿಂತಾಮಣಿಯಿಂದ ೧೧ ಕಿ. ಮೀ ದೂರದಲ್ಲಿರುವ ಗ್ರಾಮ ’ಮರುಗಮಲ್ಲಾ’. ಕರ್ನಾಟಕದ ಸುಪ್ರಸಿದ್ಧ ದರ್ಗಾ ’ಫಲಿಶಾವಾಲಿಯ ಮುರುಗಮಲ್ಲಾ ದರ್ಗಾ’ ಇಲ್ಲಿದೆ. ’ವಾರ್ಷಿಕ ಉರುಸ್’ ಸಾವಿರಾರು ಶ್ರದ್ಧಾಳುಗಳಿಗೆ ಅವರ ಮನೋಕಾಮನೆಗಳನ್ನಲ್ಲದೆ, ರೋಗ-ರುಜಿನಗಳನ್ನೂ ’ಪೀರ್ ನಿವಾರಿಸಬಲ್ಲ’ ಶಕ್ತಿಯನ್ನು ಹೊಂದಿದೆಯೆಂಬ ಬಲವಾದ ನಂಬಿಕೆಯಿದೆ. ಹಿಂದೂ-ಮುಸಲ್ಮಾನರ ಭಾವೈಕ್ಯತೆಯ ಸಂಕೇತವಾಗಿದೆ ಇಲ್ಲಿನ ’ದರ್ಗಾ’. ಕ್ರಿ. ಶ. ೧೮ ನೆಯ ಶತಮಾನದಲ್ಲಿ ನಿರ್ಮಿಸಲಾದ, ೬೦೦ ಅಡಿ ಎತ್ತರದ ಕಲ್ಲಿನ ಕೋಟೆ ಬೆಟ್ಟದಮೇಲಿದೆ. ಕೋಟೆ ಗಾಳಿ-ಮಳೆಗಳಿಗೆ ತುತ್ತಾಗಿ ಶಿಥಿಲವಾಗುತ್ತಿದೆ. ಶಿವಲಿಂಗವಿರುವ ದೇವಾಲಯ ಬೆಟ್ಟದ ತಪ್ಪಲಿನಲ್ಲಿದೆ.
’ಯಗವ ಕೋಟೆ’
[ಬದಲಾಯಿಸಿ]ಚಿಂತಾಮಣಿಯಿಂದ, ’ಬಟ್ಲಹಳ್ಳಿ’ ಗೆ ಹೋಗುವ ಹಾದಿಯಲ್ಲಿ ೧೫ ಕಿ. ಮೀ ದೂರ ಸಾಗಿದರೆ, ಸಿಕ್ಕುತ್ತದೆ. ಹತ್ತಿರದಲ್ಲೇ ’ವೀರನಾರಾಯಣ ಮಂದಿರ’ ವಿದೆ. ಬೃಹದಾಕಾರದ ಬೆಟ್ಟದ ಮೇಲೆ, ’ವಿಷ್ಣುಪಾದಗಳಿವೆ’. ಇದರ ತಪ್ಪಲಿನಲ್ಲೇ ಮುತ್ತಿನ ಕೊಳ ವೆಂಬ, ವಿಶಾಲ ಕೊಳವೂಂದು ಗೋಚರಿಸುತ್ತದೆ. ಫಾಲ್ಗುಣ ಮಾಸದಲ್ಲಿ ’ವೀರ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ’ ಇಲ್ಲಿ ಜರುಗುತ್ತದೆ.
’ಗರುಡಮಾರಲಹಳ್ಳಿ’
[ಬದಲಾಯಿಸಿ]ಚಿಂತಾಮಣಿಯಿಂದ ೧೮ ಕಿ. ಮೀ ದೂರದಲ್ಲಿರುವ ಪ್ರಾಚೀನ ಲಕ್ಷಣವನ್ನು ಹೊಂದಿರುವ ’ಭೈರವೇಶ್ವರ ದೇವಾಲಯ’ ವು, 'ಸೀತೆಬೆಟ್ಟ' ದಂತೆಯೇ ’ವೊರಸು ಒಕ್ಕಲಿಗರು,’ ನಡೆದುಕೊಳ್ಳುವ ಯಾತ್ರಾ ಸ್ಥಳವಾಗಿದೆ. ಈ ದೇವಾಲಯದ ವಿಶೇಷತೆಯೆಂದರೆ, ದೇವಾಲಯದ ಸುತ್ತಲೂ ವಿಶಾಲವಾದ ಒಳ ಪ್ರಾಕಾರವಿದ್ದು, ಹಲವು ಪುಟ್ಟ ಪುಟ್ಟ ದೇವಾಲಯಗಳನ್ನು ಹೊಂದಿದೆ. ’ಏರು ಬಯ್ಯಮ್ಮ’ ಎಂಬ ಕನ್ಯಾ ಪೂಜಾ-ಗುಡಿ ಇಲ್ಲಿಯೇ ಇದೆ. ಇದು ’ಶಕ್ತಿದೇವತೆ’ ಯೆಂಬ ನಂಬಿಕೆಯಿದೆ. ಇದರಂತೆಯೇ ’ಇರಗರು ಎಂಬ ಬಾಲಕರ ಗುಡಿ,’ ಯನ್ನು ಕಾಣಬಹುದು. ಮಾನವಾತೀತ ಶಕ್ತಿಗಳ ಆರಾಧನೆಯ ಒಂದು ಪದ್ಧತಿ ಇಲ್ಲಿ ಬೆಳೆದುಬಂದಿದೆ.
'ಕೆಂಪೆಗೌಡ ಕೋಟೆ’
[ಬದಲಾಯಿಸಿ]ಚಿಂತಾಮಣಿಯಿಂದ ನೈರುತ್ಯ ದಿಕ್ಕಿಗೆ ಹೋದರೆ, ೧೨ ಕಿ. ಮೀ. ದೂರದಲ್ಲಿ, ’ಕೆಂಪೇಗೌಡ,’ ನಿರ್ಮಿಸಿದ, ಕೈವಾರ ಕೋಟೆಯಿದೆ. ಸಮುದ್ರಮಟ್ಟದಿಂದ ೪,೨೨೭ ಅಡಿ ಎತ್ತರದಲ್ಲಿದೆ. ’ಮಹಾಭಾರತ’ ದ ಕಾಲದಲ್ಲಿ ಪಾಂಡವರ ಸಹೋದರ ’ಭೀಮಸೇನ’ ನನ್ನು ಇಲ್ಲಿ ಸೆರೆಯಿಡಲಾಗಿತ್ತೆಂಬ ಪ್ರತೀತಿಯಿದೆ. ಹಿಂದೂಗಳು ಬೆಟ್ಟವನ್ನು ’ತಪಸ್ ಗಿರಿ’ ಎನ್ನುತ್ತಾರೆ. ಬೆಟ್ಟದಮೇಲೆ ಪುಷ್ಕರಣಿ, ದೇವಾಲಯ, ಹಾಗೂ ಅನೇಕ ಶಿಥಿಲ-ಕಟ್ಟಡಗಳ ಅವಶೇಷಗಳು ಕಣ್ಣಿಗೆ ಬೀಳುತ್ತವೆ.
ಗ್ರಾಮಗಳು
[ಬದಲಾಯಿಸಿ]ಚಿಂತಾಮಣಿ ತಾಲೂಕಿನ ಗ್ರಾಮಗಳ ಪಟ್ಟಿ:
|
|
ಖ್ಯಾತ ವ್ಯಕ್ತಿಗಳು[ಬದಲಾಯಿಸಿ]ಚಿಂತಾಮಣಿಯಲ್ಲಿ ಜನಿಸಿದ ಖ್ಯಾತ ವ್ಯಕ್ತಿಗಳು. ಬಾಹ್ಯ ಸಂಪರ್ಕ[ಬದಲಾಯಿಸಿ]
|
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ವಿಜಯಪೂರ ತಾಲ್ಲೂಕಿನ ಹಳ್ಳಿಗಳು
- ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೋಕುಗಳು