ಗೋಲ್ಡ್ ಫಿಷ್ (ಹೊಮ್ಮೀನು)
Goldfish | |
---|---|
Conservation status | |
Domesticated
| |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | |
Subspecies: | C. a. auratus
|
Trinomial name | |
Carassius auratus auratus[೨] (Linnaeus, 1758)
|
ಗೋಲ್ಡ್ ಫಿಷ್ (ಕರಾಶಿಯಸ್ ಔರಾಟಸ್ ಔರಾಟಸ್ ) ಎಂಬುದು, ಸಿಪ್ರಿನಿಫಾಮ್ಸ್ ಕುಟುಂಬದಡಿ ಬರುವ ಸಿಪ್ರಿನಿಡೈ ಜಾತಿಗೆ ಸೇರಿದ ತಾಜಾನೀರಿನ ಮೀನಾಗಿದೆ. ಆರಂಭದಿಂದಲೂ ಪಳಗಿಸಲ್ಪಟ್ಟ ಮೀನುಗಳಲ್ಲಿ ಇದೂ ಕೂಡ ಒಂದು. ಅಲ್ಲದೇ ಇದು ಸಾಧಾರಣವಾಗಿ ಅಕ್ವೇರಿಯಂನಲ್ಲಿ ಇಡಬಹುದಾದಂತ ಮೀನುಗಳಲ್ಲಿ ಒಂದಾಗಿದೆ.
ತುಲನಾತ್ಮಕವಾಗಿ ಇವುಗಳು ಕಾರ್ಪ್(ಸೀನೀರು ಮೀನು) ಮೀನುಗಳ ಜಾತಿಯ ಸಣ್ಣ ಸದಸ್ಯನಾಗಿದೆ.(ಇದರಲ್ಲಿ ಕೋಯ್ ಕಾರ್ಪ್ ಹಾಗು ಕ್ರೂಷನ್ ಕಾರ್ಪ್ ಗಳೂ ಸೇರಿವೆ). ಗೋಲ್ಡ್ ಫಿಷ್, ಪೂರ್ವ ಏಷಿಯಾದ (ಮೊಟ್ಟ ಮೊದಲು ಚೀನಾದಲ್ಲಿ ಒಗ್ಗಿಸಲ್ಪಟ್ಟಿವೆ) ಗಾಢ-ಬೂದು/ಆಲಿವ್/ಕಂದು ಬಣ್ಣದ ಕಾರ್ಪ್ ಮೀನುಗಳ ಪಳಗಿಸಲ್ಪಟ್ಟ ರೂಪಾಂತರವಾಗಿದೆ. (ಕರಾಶಿಯಸ್ ಔರಾಟಸ್ ). ಇವುಗಳು 17ನೇ ಶತಮಾನದ ಉತ್ತಾರಾರ್ಧದಲ್ಲಿ ಯುರೋಪ್ ನಲ್ಲಿ ಪರಿಚಿತಗೊಂಡವು. ಗೋಲ್ಡ್ ಫಿಷ್ ಹುಟ್ಟಿಗೆ ಕಾರಣವಾಗುವ ರೂಪಾಂತರಗಳು ಕೂಡ ಇತರ ಸಿಪ್ರಿನಿಡ್ ಜಾತಿಗಳೆಂದು ಕರೆಯಲ್ಪಡುತ್ತವೆ, ಉದಾಹರಣೆಗೆ ಸಾಮಾನ್ಯ ಕಾರ್ಪ್ ಹಾಗು ಟೆನ್ಚ್. ಒಗ್ಗಿಸಲ್ಪಟ್ಟ ಗೋಲ್ಡ್ ಫಿಷ್ ಗಳಲ್ಲಿ ಹಲವು ವೈವಿಧ್ಯಗಳಿವೆ.
ಗೋಲ್ಡ್ ಫಿಷ್ ಗರಿಷ್ಠ ಟೆಂಪ್ಲೇಟು:In to cmರಷ್ಟು ಉದ್ದ ಹಾಗು ಗರಿಷ್ಠ ಟೆಂಪ್ಲೇಟು:Lb to kg[ಸೂಕ್ತ ಉಲ್ಲೇಖನ ಬೇಕು]ರಷ್ಟು ಗಾತ್ರದವರೆಗೂ ಬೆಳೆಯಬಹುದು, ಆದಾಗ್ಯೂ ಇದು ಬಹಳ ವಿರಳವಾಗಿರುತ್ತದೆ; ಬಹುತೇಕವಾಗಿ ಗೋಲ್ಡ್ ಫಿಷ್ ಗಳು ಮೇಲೆ ಹೇಳಲಾಗಿರುವ ಉದ್ದ ಹಾಗು ಗಾತ್ರಕ್ಕಿಂತ ಅರ್ಧದಷ್ಟು ಮಾತ್ರ ಬೆಳೆಯಬಲ್ಲವು. ಅತ್ಯಂತ ಅನುಕೂಲಕರ ಪರಿಸ್ಥಿತಿಗಳಲ್ಲಿ ಗೋಲ್ಡ್ ಫಿಷ್ 40ಕ್ಕೂ ಹೆಚ್ಚಿನ ವರ್ಷಗಳು ಬದುಕಬಲ್ಲದು;[೨] ಆದಾಗ್ಯೂ, ಮನೆಯಲ್ಲಿ ಇಟ್ಟುಕೊಳ್ಳುವಂತಹ ಹೆಚ್ಚಿನ ಗೋಲ್ಡ್ ಫಿಷ್ ಸಾಧಾರಣವಾಗಿ ಆರರಿಂದ ಎಂಟು ವರ್ಷಗಳವರೆಗೆ ಬದುಕುತ್ತದೆ.
ಇತಿಹಾಸ
[ಬದಲಾಯಿಸಿ]ಪ್ರಾಚೀನ ಚೀನಾದಲ್ಲಿ ,ಕಾರ್ಪ್ ಮೀನಿನ ವಿವಿಧ ಜಾತಿಗಳನ್ನು (ಒಟ್ಟಾಗಿ ಏಶಿಯನ್ ಕಾರ್ಪ್ಸ್ ಗಳೆಂದು ಕರೆಯಲಾಗುತ್ತದೆ) ಒಗ್ಗಿಸುವುದರ ಜೊತೆಗೆ ನೂರಾರು ವರ್ಷಗಳ ಕಾಲ ಆಹಾರ ಮೀನುಗಳೆಂದು ಸಾಕಲಾಗುತ್ತಿತ್ತು. ಇವುಗಳಲ್ಲಿ ಕೆಲವು ಸಾಮಾನ್ಯವಾಗಿ ಬೂದು ಅಥವಾ ಬೆಳ್ಳಿ ಬಣ್ಣ ಹೊಂದಿದ್ದು, ಕೆಂಪು, ಕಿತ್ತಳೆ ಅಥವಾ ಹಳದಿ ಬಣ್ಣದ ರೂಪಾಂತರವನ್ನು ಹೊಂದಿದ ಮರಿಗಳ ಹುಟ್ಟಿಗೆ ಕಾರಣವಾಗುತ್ತವೆ; ಇದು ಮೊಟ್ಟಮೊದಲ ಬಾರಿಗೆ ಜಿನ್ ರಾಜವಂಶ(265–420)ದಲ್ಲಿ ದಾಖಲಿಸಲ್ಪಟ್ಟಿದೆ.[೩]
ಟ್ಯಾಂಗ್ ರಾಜವಂಶದ (618–907) ಅವಧಿಯಲ್ಲಿ, ಕಾರ್ಪ್ ಗಳನ್ನು ಅಲಂಕಾರಿಕ ಕೊಳಗಳಲ್ಲಿ ಹಾಗು ನೀರಿನ ತೋಟಗಳಲ್ಲಿ ಸಾಕುವುದು ಜನಪ್ರಿಯವಾಗಿತ್ತು. ತಳಿಯ ಒಂದು ನೈಸರ್ಗಿಕ ಬದಲಾವಣೆಯಲ್ಲಿ, ಬೆಳ್ಳಿ ಬಣ್ಣಕ್ಕಿಂತ ಹೆಚ್ಚಾಗಿ ಚಿನ್ನದ ಬಣ್ಣದ(ವಾಸ್ತವವಾಗಿ ಹಳದಿಬಣ್ಣ ಬೆರೆತ ಕಿತ್ತಳೆ ಬಣ್ಣ) ಮರಿಗಳು ಹುಟ್ಟುತ್ತವೆ. ಜನರು ಬೆಳ್ಳಿ ಬಣ್ಣದ ಮೀನುಗಳ ಬದಲಿಗೆ ಚಿನ್ನದ ಬಣ್ಣದ ಮೀನುಗಳನ್ನು, ಕೊಳಗಳಲ್ಲಿ ಅಥವಾ ನೀರಿನ ಇತರ ಜಲರಾಶಿಗಳಲ್ಲಿ ಇಟ್ಟು ಸಾಕಲು ಪ್ರಾರಂಭಿಸಿದರು. ವಿಶೇಷ ಸಂದರ್ಭಗಳಲ್ಲಿ, ಅತಿಥಿಗಳ ಆಗಮನದ ನಿರೀಕ್ಷೆಯಲ್ಲಿದ್ದಾಗ, ಅವುಗಳನ್ನು ಸಣ್ಣ ಧಾರಕಗಳಿಗೆ ವರ್ಗಾಯಿಸಿ ಪ್ರದರ್ಶನಕ್ಕೆ ಇಡಲಾಗುತ್ತಿತ್ತು.[೪][೫]
ಕಳೆದ 1162ರಲ್ಲಿ ,ಸಾಂಗ್ ರಾಜವಂಶದ ಸಾಮ್ರಾಜ್ಞಿ, ಕೆಂಪು ಮತ್ತು ಚಿನ್ನದ ಬಣ್ಣದ ಜಾತಿಯ ಮೀನುಗಳನ್ನು ಸಂಗ್ರಹಿಸಲು, ಕೊಳದ ನಿರ್ಮಾಣಕ್ಕೆ ಆದೇಶ ನೀಡಿದಳು. ಆ ಸಮಯಕ್ಕಾಗಲೇ, ಸಾಮ್ರಾಜ್ಯಶಾಹಿ ಕುಟುಂಬದ ಹೊರತಾಗಿ ಬೇರೆಯವರು ಗೋಲ್ಡ್ ಫಿಷ್ ನ ಚಿನ್ನದ(ಹಳದಿ) ಬಣ್ಣದ ಮೀನು ಜಾತಿಗಳನ್ನು ಸಾಕದಂತೆ ನಿಷೇಧ ಹೇರಲಾಗಿತ್ತು, ಏಕೆಂದರೆ ಹಳದಿ ಬಣ್ಣವನ್ನು ಸಾಮ್ರಾಜ್ಯಶಾಹಿ ಬಣ್ಣವೆಂದು ಪರಿಗಣಿಸಲಾಗುತ್ತಿತ್ತು. ಬಹುಶಃ ಇದೇ ಕಾರಣದಿಂದಾಗಿ ಹಳದಿ ಬಣ್ಣದ ಗೋಲ್ಡ್ ಫಿಷ್ ಗಳಿಗಿಂತ ಕಿತ್ತಳೆ ಬಣ್ಣದ ಗೋಲ್ಡ್ ಫಿಷ್ ಗಳು ಹೆಚ್ಚು ಕಂಡು ಬರುತ್ತವೆ, ಆದಾಗ್ಯೂ ತಳಿವಿಜ್ಞಾನದ ಪ್ರಕಾರ ಹಳದಿ ಬಣ್ಣದ ಗೋಲ್ಡ್ ಫಿಷ್ ಗಳನ್ನು ಸಾಕುವುದು ಬಹಳ ಸುಲಭ.[೬]
ಇತರ ಬಣ್ಣಗಳುಳ್ಳ ಮೀನುಗಳ ಲಭ್ಯತೆಯ ಬಗ್ಗೆ (ಕೆಂಪು ಹಾಗು ಚಿನ್ನದ ಬಣ್ಣವನ್ನು ಹೊರತುಪಡಿಸಿ) ಮೊದಲ ಬಾರಿಗೆ 1276ರಲ್ಲಿ ದಾಖಲಿಸಲಾಯಿತು. ಅಲಂಕಾರಿಕ ಬಾಲವುಳ್ಳ ಗೋಲ್ಡ್ ಫಿಷ್ ಮೊದಲ ಬಾರಿಗೆ ಲಭ್ಯವಾಗಿದ್ದನ್ನು ಮಿಂಗ್ ರಾಜವಂಶದಲ್ಲಿ ದಾಖಲಿಸಲಾಗಿದೆ. ಜಪಾನ್ ದೇಶಕ್ಕೆ 1502ರಲ್ಲಿ ಗೋಲ್ಡ್ ಫಿಷ್ ಗಳನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸಲಾಯಿತು.ಇಲ್ಲಿ ರೂಕಿನ್ ಮತ್ತು ಟೋಸಾಕಿನ್ ಜಾತಿಗಳನ್ನು ಅಭಿವೃದ್ಧಿಪಡಿಸಲಾಯಿತು. ಇಸವಿ 1611ರಲ್ಲಿ, ಗೋಲ್ಡ್ ಫಿಷ್ ಗಳನ್ನು ಪೋರ್ಚುಗಲ್ ಗೆ ಪರಿಚಯಿಸಲಾಯಿತು. ನಂತರ ಇಲ್ಲಿಂದ ಇವುಗಳನ್ನು ಯುರೋಪಿನ ಇತರ ಭಾಗಗಳಿಗೂ ಪರಿಚಯಿಸಲಾಯಿತು.[೪]
ಇಸವಿ 1620ರ ಅವಧಿಯಲ್ಲಿ ಗೋಲ್ಡ್ ಫಿಷ್ ಗಳನ್ನು, ಅವುಗಳ ಲೋಹದಂತಹ ಶಲ್ಕಗಳು ಹಾಗು ಅದೃಷ್ಟ ಹಾಗು ಸುಯೋಗವನ್ನು ಸಂಕೇತಿಸುತ್ತದೆಂಬ ಕಾರಣಕ್ಕಾಗಿ ಇವುಗಳು ದಕ್ಷಿಣ ಯುರೋಪ್ ನಲ್ಲಿ ಹೆಚ್ಚಿನ ಮನ್ನಣೆ ಗಳಿಸಿದ್ದವು. ಮದುವೆಯಾದ ಮೊದಲ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಮದುವೆಯಾದ ಗಂಡಸರು ತಮ್ಮ ಹೆಂಡತಿಯರಿಗೆ ಗೋಲ್ಡ್ ಫಿಷ್ ನ್ನು ನೀಡುವುದು ಸಂಪ್ರದಾಯವಾಯಿತು, ಇದು ಮುಂಬರುವ ವರ್ಷಗಳು ಸಮೃದ್ದಿಯಿಂದ ಕೂಡಿರಲೆಂಬುದಕ್ಕೆ ಸಂಕೇತವಾಗಿತ್ತು. ಗೋಲ್ಡ್ ಫಿಷ್ ಗಳು ಅಧಿಕವಾಗಿ ಲಭ್ಯವಾಗತೊಡಗಿದಾಗ ಈ ಸಂಪ್ರದಾಯ ತನ್ನ ಮಹತ್ವ ಕಳೆದುಕೊಂಡಿತು.
ಕಳೆದ 1850ರ ಸುಮಾರಿಗೆ ಉತ್ತರ ಅಮೇರಿಕಾಗೆಗೋಲ್ಡ್ ಫಿಷ್ ಅನ್ನು ಪರಿಚಯಿಸಲಾಯಿತು. ಅದಲ್ಲದೇ ಇದು ಶೀಘ್ರವಾಗಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಜನಪ್ರಿಯತೆ ಗಳಿಸಿತು.[೭][೮]
ನಿಸರ್ಗ ಸಹಜ ಸ್ಥಿತಿ
[ಬದಲಾಯಿಸಿ]ಪ್ರಷನ್ ಕಾರ್ಪ್ ಗಳು (ಕರಾಶಿಯಸ್ ಜಿಬೆಲಿಯೊ ) ನಿಸರ್ಗ ಸಹಜ ಸ್ಥಿತಿಯಲ್ಲಿ ಇದ್ದವು. ಪರ್ಯಾಯವಾಗಿ ಕೆಲವು ಮೂಲಗಳು ಕ್ರೂಷನ್ ಕಾರ್ಪ್ (ಕರಾಶಿಯಸ್ ಕರಾಶಿಯಸ್ )ಗಳು ನಿಸರ್ಗ ಸಹಜ ಸ್ಥಿತಿಯದಲ್ಲಿದ್ದ ರೂಪಾಂತರಗಳೆಂದು ಪ್ರತಿಪಾದಿಸಿವೆ.(ಹೊಮ್ಮೀನಿಗೆ ಇನ್ನೊಂದು ಹೆಸರು ಕರಾಶಿಯಸ್ ) ಎರಡು ಜಾತಿಗಳು ಸಾದೃಶ್ಯತೆ ಹೊಂದಿದ್ದರೂ, ಈ ಕೆಳಕಂಡ ಲಕ್ಷಣಗಳ ಮೂಲಕ ಅವುಗಳ ನಡುವಿನ ವ್ಯತ್ಯಾಸವನ್ನು ಗಮನಿಸಬಹುದಾಗಿದೆ:
- C. ಔರಾಟಸ್ ಅತ್ಯಂತ ಚೂಪಾದ ಮೂತಿ ಹೊಂದಿದ್ದರೆ C. ಕರಾಶಿಯಸ್ ಸಂಪೂರ್ಣವಾಗಿ ದುಂಡಾದ ಮೂತಿಯನ್ನು ಹೊಂದಿರುತ್ತವೆ.
- C. ಜಿಬೆಲಿಯೊ ಸಾಧಾರಣವಾಗಿ ಬೂದು/ಹಸಿರಿನ ಬಣ್ಣದಿಂದ ಕೂಡಿದ್ದರೆ, ಕ್ರೂಷನ್ ಕಾರ್ಪ್ಸ್ ಗಳು ಸಾಮಾನ್ಯವಾಗಿ ಚಿನ್ನದಂತಹ ಕಂಚಿನ ಬಣ್ಣವನ್ನು ಹೊಂದಿರುತ್ತದೆ.
- ಕೌಮಾರ್ಯದ ಕ್ರೂಷನ್ ಕಾರ್ಪ್ ಗಳು ತಮ್ಮ ಬಾಲದ ತುದಿಯಲ್ಲಿ ಕಪ್ಪು ಮಚ್ಚೆಯನ್ನು ಹೊಂದಿದ್ದು ಕಾಲಕ್ರಮೇಣ ಅವುಗಳು ಬೆಳೆದಂತೆ ಈ ಮಚ್ಕೆಯಂತಹ ಚುಕ್ಕೆ ಕಣ್ಮರೆಯಾಗುತ್ತದೆ. C. ಔರಾಟಸ್ ನಲ್ಲಿ ಇಂತಹ ಚುಕ್ಕೆಯು ಕಂಡುಬರುವುದಿಲ್ಲ.
- C. ಔರಾಟಸ್ ಪಾರ್ಶ್ವರೇಖೆಯ ಜೊತೆಯಲ್ಲಿ 31ಕ್ಕಿಂತ ಕಡಿಮೆ ಶಲ್ಕಗಳನ್ನು ಹೊಂದಿದ್ದರೆ ,ಕ್ರೂಷನ್ ಕಾರ್ಪ್ 33 ಅಥವಾ ಅದಕ್ಕೂ ಹೆಚ್ಚಿನ ಶಲ್ಕಗಳನ್ನು ಹೊಂದಿರುತ್ತದೆ.
ನಿಸರ್ಗ ಸಹಜ ಸ್ಥಿತಿಯಲ್ಲಿ ಕಂಡುಬರುವಾಗ, ಗೋಲ್ಡ್ ಫಿಷ್ ಗಳು ಆಲಿವ್ ಹಸಿರು ಬಣ್ಣ ಹೊಂದಿರುತ್ತವೆ. ಒಗ್ಗಿಸಲ್ಪಟ್ಟ ಮೀನುಗಳಿಂದ ಉತ್ಪತ್ತಿಯಾದ ಪೀಳಿಗೆಯು ಮತ್ತೆ ಅದೇ ಬಣ್ಣಕ್ಕೆ ತಿರುಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಗೃಹಲಂಕಾರದಲ್ಲಿನ ಗೋಲ್ಡ್ ಫಿಷ್ ನ ವೈವಿಧ್ಯಗಳು
[ಬದಲಾಯಿಸಿ]ಶತಮಾನಗಳಿಂದ ಆಯ್ಕೆ ಮಾಡಿಕೊಂಡು ಸಾಕುತ್ತಿರುವ ಮೀನುಗಳು ಹಲವಾರು ಬಣ್ಣ ವ್ಯತ್ಯಾಸಗಳನ್ನು ತೋರಿವೆ. ಇವುಗಳಲ್ಲಿ ಕೆಲವನ್ನು ಮೂಲತಃ ಒಗ್ಗಿಸಲ್ಪಟ್ಟ ಮೀನಿನ "ಚಿನ್ನದ" ಬಣ್ಣದ ಗುಂಪಿನಿಂದ ತೆಗೆದುಹಾಕಲಾಗಿದೆ. ಇದಲ್ಲದೇ ವಿವಿಧ ಗಾತ್ರ,ಆಕಾರದ ರೆಕ್ಕೆ ; ಹಾಗು ಕಣ್ಣಿನ ರಚನೆಗಳಲ್ಲಿ ವೈವಿಧ್ಯ ಇರುವ ಮೀನುಗಳು ಕಂಡುಬರುತ್ತವೆ. ಇದಕ್ಕೆ ಅತಿರೇಕವೆನ್ನುವಂತೆ ಗೋಲ್ಡ್ ಫಿಷ್ ನ ಕೆಲವು ಜಾತಿಗಳು ಕೇವಲ ಅಕ್ವೇರಿಯಂಗಳಲ್ಲಿ ಮಾತ್ರ ಜೀವಿಸುತ್ತವೆ. ಅಲ್ಲದೇ ಅವು "ನಿಸರ್ಗ ಸಹಜ ಸ್ಥಿತಿಯ" ಮೂಲ ಉಪಜಾತಿಗಳಿಗಿಂತ ದುರ್ಬಲವಾಗಿರುತ್ತವೆ. ಆದಾಗ್ಯೂ, ಕೆಲವು ಪ್ರಬೇಧಗಳು ಗಟ್ಟಿ ಮುಟ್ಟಾಗಿರುತ್ತವೆ, ಉದಾಹರಣೆಗೆ, ಶುಬುನ್ಕಿನ್. ಇದರ ಪ್ರಮುಖ ಉಪಜಾತಿಗಳೆಂದರೆ:
ಸಾಮಾನ್ಯ ಗೋಲ್ಡ್ ಫಿಷ್ | ಬ್ಲ್ಯಾಕ್ ಮೂರ್ | ಬಬಲ್ ಐ | |||
---|---|---|---|---|---|
ಸಾಮಾನ್ಯ ಗೋಲ್ಡ್ ಫಿಷ್ ಇವುಗಳು ತಮ್ಮ ಪೂರ್ವರೂಪದ ಮೀನುಗಳಿಗಿಂತ ಕೇವಲ ಬಣ್ಣದಲ್ಲಿ ಮಾತ್ರ ಭಿನ್ನತೆಯನ್ನು ಹೊಂದಿರುತ್ತವೆ, ದಿಪ್ರಷನ್ ಕಾರ್ಪ್. ಸಾಮಾನ್ಯ ಗೋಲ್ಡ್ ಫಿಷ್ ಕೆಂಪು, ಕಿತ್ತಳೆ/ಚಿನ್ನದ, ಬಿಳಿ, ಕಪ್ಪು ಹಾಗು ಹಳದಿ ಬಣ್ಣಗಳನ್ನು ಅಥವಾ 'ಲೆಮನ್' ಗೋಲ್ಡ್ ಫಿಷ್ ಅನ್ನು ಒಳಗೊಂಡಂತೆ ವಿವಿಧ ಬಣ್ಣಗಳಲ್ಲಿ ಕಂಡುಬರುತ್ತದೆ. | ಬ್ಲ್ಯಾಕ್ ಮೂರ್ ಎಂಬುದು ಟೆಲಿಸ್ಕೋಪ್ ನಂತಹ ಕಣ್ಣುಳ್ಳ ಅಲಂಕಾರಿಕ ಗೋಲ್ಡ್ ಫಿಷ್ ನ ಉಪಜಾತಿಯಾಗಿದೆ.ಇದು ಮುಂದಕ್ಕೆ ಚಾಚಿಕೊಂಡಿರುವ ಕಣ್ಣುಗಳಿಂದ ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ. ಇದು ಪೊಪೆಯೆ, ಟೆಲಿಸ್ಕೋಪ್, ಕುರೊ ಡೆಮ್ಕಿನ್ ಎಂಬ ಹೆಸರಿನಿಂದ ಜಪಾನ್ನಲ್ಲಿ ಹಾಗು ಡ್ರ್ಯಾಗನ್-ಐ ಎಂಬ ಹೆಸರಿನಿಂದ ಚೀನಾದಲ್ಲಿ ಕರೆಯಲ್ಪಡುತ್ತದೆ. | ಪುಟ್ಟ, ಅಲಂಕಾರಿಕ ಬಬಲ್ ಐ ಗಳ ಕಣ್ಣು ಊರ್ಧ್ವಮುಖವಾಗಿರುವುದರ ಜೊತೆಗೆ, ಇದಕ್ಕೆ ಎರಡು ದೊಡ್ಡ ಸ್ರವಿಸುವ ಹಾಗು ಮುಚ್ಚಿರುವ ಪೊರೆಗಳು ಜೊತೆಗೂಡಲ್ಪಟ್ಟಿರುತ್ತವೆ | |||
ಸಿಲಿಸ್ಟಿಅಲ್ ಐ | ಕಾಮೆಟ್ (ಗೋಲ್ಡ್ ಫಿಷ್) | ಫ್ಯಾನ್ ಟೇಲ್(ಬೀಸಣಿಗೆ ಬಾಲದ) (ಗೋಲ್ಡ್ ಫಿಷ್) | |||
ಅಲಂಕಾರಿಕ ಸಿಲಿಸ್ಟಿಅಲ್ ಐ ಗೋಲ್ಡ್ ಫಿಷ್ ಅಥವಾ ಚೊಟೆನ್ ಗ್ಯಾನ್ ಎರಡು ಬಾಲಗಳನ್ನು ಹೊಂದಿರುವುದರ ಜೊತೆಗೆ ತಲೆಕೆಳಗಾಗಿರುವ ಮೀನಿನ ಒಂದು ತಳಿಯನ್ನು ಹೊಂದಿದೆ, ಆಕಾಶದ ಕಡೆಗೆ ನೋಡುತ್ತಿರುವ ಪಾಪೆಗಳ ಜೊತೆಯಲ್ಲಿ ಟೆಲಿಸ್ಕೋಪ್ ನಂತಹ ಕಣ್ಣುಗಳನ್ನು ಹೊಂದಿದೆ. | ಕಾಮೆಟ್ ಅಥವಾ ಕಾಮೆಟ್ ನಂತಹ ಬಾಲವನ್ನು ಹೊಂದಿರುವ ಗೋಲ್ಡ್ ಫಿಷ್ ಗಳು, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಹೆಚ್ಚಾಗಿ ಕಂಡುಬರುವ ಸಾಮಾನ್ಯವಾದ ಅಲಂಕಾರಿಕ ಮೀನುಗಳ ವಿಧವಾಗಿವೆ. ಸ್ವಲ್ಪಮಟ್ಟಿಗೆ ಚಿಕ್ಕದಾಗಿರುವುದನ್ನು ಬಿಟ್ಟರೆ ಇದು ಸಾಮಾನ್ಯ ಗೋಲ್ಡ್ ಫಿಷ್ ಗೆ ಸದೃಶವಾಗಿದೆ.ಅಲ್ಲದೇಮುಖ್ಯವಾಗಿ ಇದನ್ನು ಇದರ ಉದ್ದವಾದ ಹಾಗು ಸೀಳುಬಿಟ್ಟಿರುವ ಬಾಲದಿಂದ ವ್ಯತ್ಯಾಸವನ್ನು ಕಂಡುಹಿಡಿಯಲಾಗುತ್ತದೆ . | ಫ್ಯಾನ್ ಟೇಲ್ ಗೋಲ್ಡ್ ಫಿಷ್ ಎಂಬುದು ರೂಕಿನ್ ನ ಪಾಶ್ಚಾತ್ಯ ರೂಪವಾಗಿದೆ. ಜೊತೆಗೆ ಮೊಟ್ಟೆಯಾಕಾರದ ದೇಹ,ಎತ್ತರದ ಬೆನ್ನಿನ ರೆಕ್ಕೆ, ಉದ್ದವಾದ ಚತುರ್ಭಾಗದ ಬಾಲದಂತಹ ರೆಕ್ಕೆಯನ್ನು, ಹಾಗು ಗೂನಿಲ್ಲದ ಭುಜವನ್ನು ಹೊಂದಿರುತ್ತದೆ. | ಚಿತ್ರ:FT2.jpg | ||
ಲಯನ್ ಹೆಡ್ (ಗೋಲ್ಡ್ ಫಿಷ್) | ಒರಾಂಡ | ಮುತ್ತಿನ ಶಲ್ಕ(ಪರ್ಲ್ ಸ್ಕೇಲ್ ) | |||
ಅಲಂಕಾರಿಕ ಲಯನ್ ಹೆಡ್ ಮೀನು ಹೆಡೆಯನ್ನು ಹೊಂದಿರುತ್ತದೆ. ಈಮೀನು ರಾಂಚುಗೋಲ್ಡ್ ಫಿಷ್ ನ ಪೂರ್ವಗಾಮಿಯಾಗಿದೆ. | ಅಲಂಕಾರಿಕ ಒರಾಂಡಾ ಗಳನ್ನು , ಪ್ರಮುಖ ರಾಸ್ಬರಿಯಂತಹ ಹೆಡೆ ಅಥವಾ (ಗಂಟು ಅಥವಾ ತಲೆಬೆಳೆದಿರುವ ಎಂದೂ ಕೂಡ ಕರೆಯಲಾಗುತ್ತದೆ)ಕಣ್ಣು ಮತ್ತು ಬಾಯಿಯನ್ನು ಹೊರತುಪಡಿಸಿ ಇಡೀ ತಲೆಯನ್ನು ಆವರಿಸಿಕೊಂಡಿರುವುದು ವಿಶಿಷ್ಟವಾಗಿದೆ. | ಅಲಂಕಾರಿಕ ಮುತ್ತಿನ
ಶಲ್ಕ ಅಥವಾಜಪಾನ್ ನಲ್ಲಿರುವ ಚಿನ್ ಷುರಿನ್ ಗಳು,ಫ್ಯಾನ್ ಟೇಲ್ಗಳ ಮಾದರಿ ರೆಕ್ಕೆಗಳ ಜೊತೆಯಲ್ಲಿ ಗೋಲಾಕಾರದ-ದೇಹವನ್ನು ಹೊಂದಿರುತ್ತವೆ. |
|||
ಪಾಮ್ ಪಾಮ್ (ಗೋಲ್ಡ್ ಫಿಷ್) | ರೂಕಿನ್ | ಶುಬುನ್ಕಿನ್ | |||
ಅಲಂಕಾರಿಕ ಪಾಮ್ ಪಾಮ್ ಗಳು ಅಥವಾ ಪಾಮ್ ಪೊನ್ ಅಥವಾ ಹನ ಫುಸ ಗಳಲ್ಲಿ ತಲೆಯ ಎರಡು ಭಾಗದಲ್ಲಿ ಹಾಗು ಮೂಗಿನ ಹೊಳ್ಳೆಗಳ ನಡುವೆ ಹೆಚ್ಚು ಮಾಂಸದ ಹೊರಬೆಳವಣಿಗೆಯಾಗಿರುತ್ತದೆ. | ಅಲಂಕಾರಿಕ ರೂಕಿನ್ ಗೂನು ಭುಜದ ಲಕ್ಷಣದೊಂದಿಗೆ ಕುಳ್ಳನೆಯ ಆಳಕ್ಕಿಳಿದ ಕಾಯ ಹೊಂದಿರುತ್ತದೆ. | ಅಲಂಕಾರಿಕ ಹಾಗು ಗಟ್ಟಿಮುಟ್ಟಾದ ಜಪಾನೀ ಮೀನುಗಳು Shubunkins (朱文金?)("ಕೆಂಪು ಬುಟ್ಟಬಟ್ಟೆ" (ನೇಯ್ಗೆಯಂತೆ)ಎಂದು ಪದಶಃ ಅನುವಾದಿಸಲಾಗಿದೆ) ನೇಕರ್ ನಂತಹ ಶಲ್ಕಗಳ ಜೊತೆಯಲ್ಲಿ ಒಂದು ಬಾಲವನ್ನು, ಹಾಗು ಕ್ಯಾಲಿಕೊ ಎಂದು ಕರೆಯಲ್ಪಡುವ ಮಾದರಿಯನ್ನು ಹೊಂದಿರುತ್ತದೆ. | |||
ಟೆಲಿಸ್ಕೋಪ್ ಐ (ದೂರದರ್ಶಕದ ಕಣ್ಣುಳ್ಳ) | ರಾಂಚು (ಈ ಪ್ರಕಾರವನ್ನು ಗೊಲ್ಡ್ ಫಿಶ್ ಗಳ ರಾಜ ಎನ್ನಲಾಗುತ್ತದೆ) | ಪಾಂಡ ಮೂರ್ | |||
ಅಲಂಕಾರಿಕ ಟೆಲಿಸ್ಕೋಪ್ ಐ ಅಥವಾ ಡೆಮೆಕಿನ್ ಗಳು ಅವುಗಳ ಮುಂದಕ್ಕೆ ಚಾಚಿಕೊಂಡಿರುವ ಕಣ್ಣುಗಳಿಂದಾಗಿ ವಿಶೇಷತೆಯನ್ನು ಪಡೆದಿವೆ. ಇದನ್ನು ಗ್ಲೋಬ್ ಐ ಅಥವಾಡ್ರ್ಯಾಗನ್ ಐ ಗೋಲ್ಡ್ ಫಿಷ್ ಎಂದೂ ಸಹ ಕರೆಯಲಾಗುತ್ತದೆ. | ಅಲಂಕಾರಿಕ ಜಪಾನಿನ ರಾಂಚು ಮೀನುಗಳು (ತೊಗಲಿನ ಕವಚ) ಹೆಡೆಯನ್ನು ಹೊಂದಿರುತ್ತದೆ. ಜಪಾನೀಯರು ಇದನ್ನು "ಗೋಲ್ಡ್ ಫಿಷ್ ಗಳ ರಾಜ"ನೆಂದು ಕರೆಯುತ್ತಾರೆ. | ಅಲಂಕಾರಿಕ ಪಾಂಡ ಮೂರ್ ಕಪ್ಪು ಮತ್ತು ಬಿಳಿ ಬಣ್ಣದ ಮಾದರಿ ಹಾಗು ಮುಂದಕ್ಕೆ ಚಾಚಿಕೊಂಡಿರುವಂತಹ ತಲೆಯಿಂದ ವಿಶಿಷ್ಟವಾಗಿವೆ. | |||
ವೇಲ್ ಟೇಲ್ (ಅಲಂಕಾರಿಕ ಹೆಚ್ಚುವರಿಯಾಗಿ ಚಾಚಿದ ರೆಕ್ಕೆ) | ಬಟರ್ಫ್ಲೈ ಟೇಲ್ (ಗೋಲ್ಡ್ ಫಿಷ್) | ||||
ಅಲಂಕಾರಿಕ ವೇಲ್ ಟೇಲ್ , ಅದರ ಅತ್ಯಂತ ಉದ್ದವಾದ ಇಳಿಬಿದ್ದಿರುವ ಜೋಡಿ ಬಾಲಗಳಿಂದಾಗಿ ವೈಶಿಷ್ಟ್ಯತೆಯನ್ನು ಪಡೆದಿದೆ. ಆಧುನಿಕ ವೇಲ್ ಟೇಲ್ ನ ಲಕ್ಷಣಗಳು ಮದುವೆ ಹೆಣ್ಣಿಗೆ ಮದುವೆ ಬಟ್ಟೆಯೊಡನೆ ಕಾಣುವ ಮೇಲಿನ ಹೊದಿಕೆಯಂತೆ, ಬಲದ ರೆಕ್ಕೆಯ ತುದಿ ಸ್ವಲ್ಪ ಅಥವಾ ಕತ್ತರಿಸಿದಂತಿರುವುದೇ ಕಾಣುವುದು ಇಲ್ಲ. | ಬಟರ್ ಫ್ಲೈ ಟೇಲ್ ಮೂರ್ ಅಥವಾ ಬಟರ್ಫ್ಲೈ ಟೆಲಿಸ್ಕೋಪ್ , ಎಂಬುದು ಟೆಲಿಸ್ಕೋಪ್ ಐ ಜಾತಿಗೆ ಸೇರಿದ್ದು, ಮೇಲಿನಿಂದ ಸ್ಪಷ್ಟವಾಗಿ ಗೋಚರಿಸುವ ಜೋಡಿ ಬಾಲವನ್ನು ಹೊಂದಿವೆ. ಬಾಲದಂತಹ ರೆಕ್ಕೆ ಬಡಿಯುವಿಕೆಯು, ನೀರಿನಲ್ಲಿ ಚಿಟ್ಟೆಗಳನ್ನು ಅನುಕರಿಸಿದಂತೆ ತೋರುತ್ತದೆ. |
ಚೀನೀ ಗೋಲ್ಡ್ ಫಿಷ್ ವರ್ಗೀಕರಣ
[ಬದಲಾಯಿಸಿ]ಚೀನೀ ಸಂಪ್ರದಾಯವು ಗೋಲ್ಡ್ ಫಿಷ್ ಅನ್ನು 4 ಪ್ರಮುಖ ವಿಧಗಳಾಗಿ ವರ್ಗೀಕರಿಸಿದೆ. ಸಾಮಾನ್ಯವಾಗಿ ಈ ವರ್ಗೀಕರಣವು ಪಶ್ಚಿಮದಲ್ಲಿ ಕಂಡುಬರುವುದಿಲ್ಲ.
- Ce("ಗ್ರಾಸ್" ಎಂದೂ ಸಹ ಕರೆಯಬಹುದು)— ಅಲಂಕಾರಿಕ ರಚನೆಯ ಲಕ್ಷಣಗಳನ್ನು ಹೊಂದಿರದ ಗೋಲ್ಡ್ ಫಿಷ್. ಇದು ಸಾಮಾನ್ಯವಾಗಿ ಗೋಲ್ಡ್ ಫಿಷ್, ಕಾಮೆಟ್ ಗೋಲ್ಡ್ ಫಿಷ್ ಮತ್ತು ಶುಬುನ್ಕಿನ್ ಗಳನ್ನು ಒಳಗೊಂಡಿರುತ್ತವೆ.
- ವೆನ್ — ಗೋಲ್ಡ್ ಫಿಷ್ ಅಲಂಕಾರಿಕ ಬಾಲವನ್ನು ಹೊಂದಿರುತ್ತವೆ, ಉದಾಹರಣೆಗೆ.,(ಬೀಸಣಿಕೆಯಂತಹ ಬಾಲ ಹಾಗು ಕವಚದಂಥ ಬಾಲ) ಫ್ಯಾನ್ ಟೇಲ್ಸ್ ಹಾಗು ವೇಲ್ ಟೇಲ್ಸ್ ("ವೆನ್" ಎಂಬುದು ಒರಾಂಡ ಮತ್ತು ಲಯನ್ ಹೆಡ್ ನಂತಹ ಜಾತಿಗಳಲ್ಲಿ ಕಂಡುಬರುವ ವಿಶಿಷ್ಟ ತಲೆ ಬೆಳವಣಿಗೆಯ ಲಕ್ಷಣದ ಹೆಸರಾಗಿದೆ.)
- ಡ್ರ್ಯಾಗನ್ ಐ—ಗೋಲ್ಡ್ ಫಿಷ್ ಗಳು ಚಾಚಿಕೊಂಡ ಕಣ್ಣುಗಳನ್ನು ಹೊಂದಿರುತ್ತವೆ, ಉದಾಹರಣೆಗೆ.,ಕಪ್ಪು ಮೂರ್, ಬಬಲ್ ಐ, ಹಾಗು ಟೆಲಿಸ್ಕೋಪ್ ಐ
- ಎಗ್(ಮೊಟ್ಟೆ)—ಗೋಲ್ಡ್ ಫಿಷ್ ಬೆನ್ನ ಮೇಲೆ ರೆಕ್ಕೆಗಳನ್ನು ಹೊಂದಿರುವುದಿಲ್ಲ ಜೊತೆಗೆ ಸಾಮಾನ್ಯವಾಗಿ 'ಮೊಟ್ಟೆಯಾಕಾರದ' ದೇಹವನ್ನು ಹೊಂದಿರುತ್ತದೆ, ಉದಾಹರಣೆಗೆ ಲಯನ್ ಹೆಡ್ (ಬೆನ್ನ ಮೇಲೆ ರೆಕ್ಕೆಗಳಿಲ್ಲದ ಬಬಲ್ ಐ ಈ ಗುಂಪಿಗೆ ಸೇರುತ್ತವೆ ಎಂಬುದನ್ನು ಗಮನಿಸಬಹುದಾಗಿದೆ)
ಕೊಳಗಳಲ್ಲಿ
[ಬದಲಾಯಿಸಿ]ಗೋಲ್ಡ್ ಫಿಷ್ ಗಳು ಬಹಳ ಚಿಕ್ಕದಾಗಿ, ಕಡಿಮೆ ಬೆಲೆಯನ್ನು ಹೊಂದಿರುವುದರ ಜೊತೆಗೆ, ವರ್ಣಮಯ ಹಾಗು ತುಂಬ ಗಟ್ಟಿಮುಟ್ಟಾಗಿರುವುದರಿಂದ ಹೊಂಡದಲ್ಲಿ ಸಾಕಿ ಬೆಳೆಸಬಹುದಾದಂತಹ ಜನಪ್ರಿಯ ಮೀನುಗಳಾಗಿವೆ. ಹೊರಾಂಗಣ ಕೊಳ ಅಥವಾ ನೀರಿನ ತೋಟಗಳಲ್ಲಿ, ಮೇಲ್ಮೈನಲ್ಲಿ ಮಂಜಿನ ರೂಪವಿದ್ದರೆ, ನೀರಿನಲ್ಲಿ ಸಾಕಷ್ಟು ಆಮ್ಲಜನಕವಿರುವವರೆಗೆ , ಹಾಗು ಕೊಳದಲ್ಲಿನ ನೀರು ಹೆಪ್ಪುಗಟ್ಟುವವರೆಗೂ ಬದುಕಬಲ್ಲವು. ಸಾಮಾನ್ಯ ಗೋಲ್ಡ್ ಫಿಷ್, ಲಂಡನ್ ಮತ್ತು ಬ್ರಿಸ್ಟಲ್ ಶುಬುನ್ ಕಿನ್ ಗಳು, ಜಿಕಿನ್, ವಕಿನ್, ಕಾಮೆಟ್ ಹಾಗು ಕೆಲವು ಶಕ್ತಿಶಾಲಿಯಾದ ಫ್ಯಾನ್ ಟೇಲ್ ಗೋಲ್ಡ್ ಫಿಷ್ ಗಳನ್ನು, ತಾಪಮಾನ ಹಾಗು ಉಪೋಷ್ಣವಲಯದ ಹವಾಮಾನವಿರುವಂತಹ ಹೊಂಡದಲ್ಲಿ ವರ್ಷಪೂರ್ತಿ ಇರಿಸಬಹುದು. ಮೂರ್, ವೇಲ್ ಟೇಲ್, ಒರಾಂಡ ಹಾಗು ಲಯನ್ ಹೆಡ್ ಮೀನುಗಳನ್ನು ಕೇವಲ ಬೇಸಿಗೆ ಕಾಲದಲ್ಲಿ ಹಾಗು ಉಷ್ಣವಲಯದಂತಹ ಹವಾಮಾನದಲ್ಲಿ ಕೊಳಗಳಲ್ಲಿ ಸುರಕ್ಷಿತವಾಗಿ ಇರಿಸಬಹುದು.
ಸಣ್ಣದರಿಂದ ದೊಡ್ಡ ಕೊಳಗಳೂ ಸಹ ಮೀನು ಸಾಕಲು ಯೋಗ್ಯವಾಗಿರುತ್ತವೆ, ಆದರೆ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಲು ಕನಿಷ್ಠ ಟೆಂಪ್ಲೇಟು:Cm to inರಷ್ಟು ಅಡಿ ಆಳವಾದರೂ ಇರಬೇಕಾಗುತ್ತದೆ. ಚಳಿಗಾಲದ ಅವಧಿಯಲ್ಲಿ, ಗೋಲ್ಡ್ ಫಿಷ್ ಗಳು ನಿಷ್ಕ್ರಿಯವಾಗುತ್ತವೆ,ತಿನ್ನುವುದನ್ನು ನಿಲ್ಲಿಸುವುದರ ಜೊತೆಗೆ ಯಾವಾಗಲೂ ಕೊಳದ ಕೆಳಭಾಗದಲ್ಲಿರುತ್ತವೆ. ಇದು ಸಂಪೂರ್ಣವಾಗಿ ಸಹಜ ಪ್ರಕ್ರಿಯೆಯಾಗಿದೆ; ಅವುಗಳು ವಸಂತ ಕಾಲದಲ್ಲಿ ಮತ್ತೆ ಕ್ರಿಯಾಶೀಲವಾಗುತ್ತವೆ. ತ್ಯಾಜ್ಯಗಳನ್ನು ತೆಗೆದುಹಾಕಿ ಕೊಳವನ್ನು ಸ್ವಚ್ಛವಿರಿಸಲು ಶೋಧಕವು ಮುಖ್ಯವಾಗಿ ಬೇಕಾಗುತ್ತದೆ. ಸಸ್ಯಗಳು ಶುದ್ಧೀಕರಣ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುವುದರಿಂದ ಹಾಗು ಮೀನುಗಳಿಗೆ ಆಹಾರದ ಮೂಲಗಳಾಗುವುದರಿಂದ ಸಸ್ಯಗಳು ಅತ್ಯಗತ್ಯವಾಗಿವೆ. ಸಸ್ಯಗಳು ನೀರಿನಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವ ಕಾರಣಕ್ಕಾಗಿ ಮತ್ತಷ್ಟು ಉಪಯುಕ್ತವೆನಿಸುತ್ತವೆ.
ಹೊಂದಿಕೊಂಡು ಜೊತೆಗಿರುವ ಮೀನುಗಳಲ್ಲಿ, ರಡ್, ಟೆನ್ಚ್, ಆರ್ಫ್ ಹಾಗು ಕೊಯ್ನಂತಹ ಮೀನುಗಳು ಸೇರಿವೆ, ಆದರೆ ನಂತರ ಇವುಗಳ ಬಗ್ಗೆ ವಿಶೇಷವಾದ ಗಮನ ಹರಿಸಬೇಕಾಗುತ್ತದೆ. ರಾಮ್ ಶಾರ್ನ್ ಮೃದ್ವಂಗಿಗಳು ಕೊಳದಲ್ಲಿ ಬೆಳೆಯುವ ಯಾವುದೇ ಪಾಚಿಗಳನ್ನು ತಿನ್ನುವುದರ ಮೂಲಕ ಅತ್ಯಂತ ಉಪಾಕಾರಿಯಾಗಿವೆ. ಪ್ರಾಣಿಗಳ ಸಂಖ್ಯಾ ನಿಯಂತ್ರಣದ ಕೆಲವು ರೀತಿಗಳನ್ನು ಹೊರತುಪಡಿಸಿ, ಗೋಲ್ಡ್ ಫಿಷ್ ಕೊಳಗಳಲ್ಲಿ ಬಹಳ ಸುಲಭವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಬಲ್ಲವು. ಆರ್ಫೆಯಂತಹ ಮೀನುಗಳು, ಗೋಲ್ಡ್ ಫಿಷ್ ನ ಮೊಟ್ಟೆಗಳನ್ನು ನುಂಗಿಹಾಕುತ್ತವೆ.
ಸ್ಟೆರೈಲ್ ಮಿಶ್ರ ಜಾತಿಯ ಮೀನುಗಳನ್ನು ಉತ್ಪತ್ತಿ ಮಾಡಲು ಕೊಯ್ ಕೂಡ ಗೋಲ್ಡ್ ಫಿಷ್ ನೊಡನೆ ತಳಿ ಮಿಶ್ರ ಮಾಡಬಹುದಾಗಿದೆ.(ಸಂಕರಿಸಬಹುದು).
ಅಕ್ವೇರಿಯಂನಲ್ಲಿ
[ಬದಲಾಯಿಸಿ]ಹೆಚ್ಚಿನ ಕಾರ್ಪ್ ಗಳಂತೆ, ಗೋಲ್ಡ್ ಫಿಷ್ ಗಳು ತಮ್ಮ ಹಿಕ್ಕೆಗಳನ್ನು ಹಾಗು ತಮ್ಮ ಕಿವಿರುಗಳ ಮೂಲಕ ದೊಡ್ಡ ಪ್ರಮಾಣದ ತ್ಯಾಜ್ಯವನ್ನು ಹೊರಹಾಕುತ್ತವೆ. ಇವುಗಳ ಮೂಲಕ ನೀರಿಗೆ ಹಾನಿಕರ ರಾಸಾಯನಿಕಗಳ ಬಿಡುಗಡೆಯಾಗುತ್ತವೆ. ಸ್ವಲ್ಪಕಾಲದಲ್ಲೇ ಈ ತ್ಯಾಜ್ಯ ವಸ್ತುಗಳು ವಿಷವಾಗುವ ಹಂತದವರೆಗೆ ತಲುಪುವುದರ ಜೊತೆಗೆ ಗೋಲ್ಡ್ ಫಿಷ್ ಗಳ ಸಾವಿಗೆ ಕಾರಣವಾಗಬಲ್ಲವು. ಸಾಮಾನ್ಯ ಹಾಗು ಕಾಮೆಟ್ ಜಾತಿ ಮೀನುಗಳಿಗೆ, ಪ್ರತಿ ಗೋಲ್ಡ್ ಫಿಷ್ ಗೆ ಸುಮಾರು 20 US gallons (76 L; 17 imp gal)ರಷ್ಟು ನೀರಿನ ಪ್ರಮಾಣವನ್ನು ಹೊಂದಿರಬೇಕು. ಅಲಂಕಾರಿಕ ಗೋಲ್ಡ್ ಫಿಷ್ ಗಳಲ್ಲಿ (ಸಣ್ಣ ಗಾತ್ರವನ್ನು ಹೊಂದಿರುತ್ತವೆ),ಪ್ರತಿ ಗೋಲ್ಡ್ ಫಿಷ್ 10 US gallons (38 L; 8.3 imp gal) ರಷ್ಟು ನೀರನ್ನು ಹೊಂದಿರಬೇಕು. ನೀರಿನ ಮೇಲ್ಮೈ ಪ್ರದೇಶವು, ಎಷ್ಟು ಪ್ರಮಾಣದ ಆಮ್ಲಜನಕವು ಪಸರಿಸಿ ಚದುರಿ,ನೀರಿನಲ್ಲಿ ದ್ರವೀಕರಣಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯ ನಿಯಮದ ಪ್ರಕಾರ 1 square foot (0.093 m2)ರಷ್ಟು ಪ್ರಮಾಣವನ್ನು ಹೊಂದಿರಬೇಕು. ನೀರನ್ನು ಪಂಪ್ ಮಾಡುವ ವಿಧಾನ,ಶೋಧಕದ ಮೂಲಕ ಅಥವಾ ನೀರುಬುಗ್ಗೆಯ ಸಕ್ರಿಯ ವಾತನಗೊಳಿಸುವ ವಿಧಾನದ ಮೂಲಕ ಮೇಲ್ಮೈ ಕನಿಷ್ಠ ಪ್ರದೇಶವನ್ನು ತಗ್ಗಿಸಬಹುದು.
ಗೋಲ್ಡ್ ಫಿಷ್ ಅನ್ನು ತಣ್ಣೀರಿನ ಮೀನು ಎಂದು ವರ್ಗೀಕರಿಸಲಾಗಿದೆ, ಅಲ್ಲದೇ ಇವು ತಾಪಮಾನವಿಲ್ಲದ ಅಕ್ವೇರಿಯಂಗಳಲ್ಲಿ, ಮನುಷ್ಯರಿಗೆ ಹಿತಕರವಾದ ತಾಪಮಾನದಲ್ಲಿ ಬದುಕಬಲ್ಲವು. ಅದೇನೇ ಇದ್ದರೂ, ತಾಪಮಾನದಲ್ಲಿ ಉಂಟುಮಾಡುವ ತೀವ್ರಗತಿಯ ಬದಲಾವಣೆಗಳು (ಉದಾಹರಣೆಗೆ ಚಳಿಗಾಲದ ಸಮಯದಲ್ಲಿ ಕಛೇರಿ ಕಟ್ಟಡಗಳಲ್ಲಿ ತಾಪಮಾನ ರಾತ್ರಿ ಹೊತ್ತು ಕಡಿಮೆಯಾಗುತ್ತಿತ್ತು)ವಿಶೇಷವಾಗಿ ಚಿಕ್ಕ ಟ್ಯಾಂಕ್ ಗಳು ಅವುಗಳ ಸಾವಿಗೆ ಕಾರಣವಾಗಬಹುದು. ಹೊಸ ನೀರು, ಬೇರೆ ತಾಪಮಾನ ಹೊಂದಿರಬಹುದಾದ ಕಾರಣದಿಂದಾಗಿ ನೀರನ್ನು ಬದಲಿಸುವಾಗ ಗಮನವಹಿಸಬೇಕಾಗುತ್ತದೆ. 10 °C (50 °F)ಗಿಂತ ಕಡಿಮೆ ತಾಪಮಾನವು ಅಲಂಕಾರಿಕ ಜಾತಿಯ ಮೀನುಗಳಿಗೆ ಅಪಾಯಕಾರಿಯಾಗಿದೆ, ಆದಾಗ್ಯೂ ಸಾಮಾನ್ಯ ಹಾಗು ಕಾಮೆಟ್ ಮೀನುಗಳು ಸ್ವಲ್ಪ ಕಡಿಮೆ ತಾಪಮಾನದಲ್ಲೂ ಬದುಕಬಲ್ಲವು. ಅತ್ಯಂತ ಗರಿಷ್ಠ ತಾಪಮಾನಗಳು (30 °C (86 °F)ಗೂ ಅಧಿಕ ತಾಪಮಾನವೂ ಕೂಡ ಗೋಲ್ಡ್ ಫಿಷ್ ಗಳಿಗೆ ತೊಂದರೆಯನ್ನು ಉಂಟು ಮಾಡಬಹುದು. ಆದಾಗ್ಯೂ, ಪರಾವಲಂಬಿ ಜೀವಿಗಳ ಜೀವನ ಚಕ್ರವನ್ನು ವರ್ಧಿಸುವ ಮೂಲಕ ಅಧಿಕ ತಾಪಮಾನ ಪ್ರೋಟೋಜೋವನ್ ದ ಆವರಿಸುವಿಕೆಯೊಂದಿಗೆ ಹೋರಾಡಲು ಸಹಾಯ ಮಾಡಬಹುದು —ಹೀಗೆ ತ್ವರಿತಗತಿಯಲ್ಲಿ ಅವುಗಳನ್ನು ಹೊರಹಾಕಬಹುದು. 20 °C (68 °F) ರಿಂದ 22 °C (72 °F)ವರೆಗಿನ ತಾಪಮಾನವು ಗೋಲ್ಡ್ ಫಿಷ್ ಗಳಿಗೆ ಅನುಕೂಲಕರವಾಗಿರುತ್ತವೆ.[೯]
ಎಲ್ಲಾ ಮೀನುಗಳ ಮಾದರಿ, ಗೋಲ್ಡ್ ಫಿಷ್ ಮೈದಡವುದನ್ನು ಬಯಸುವುದಿಲ್ಲ. ವಾಸ್ತವವಾಗಿ, ಗೋಲ್ಡ್ ಫಿಷ್ ಅನ್ನು ಮುಟ್ಟುವುದು ಅದರ ಆರೋಗ್ಯಕ್ಕೆ ಹಾನಿಕರವಾಗಬಹುದು, ಏಕೆಂದರೆ ಬ್ಯಾಕ್ಟೀರಿಯ ಅಥವಾ ನೀರಿನಲ್ಲೇ ಜನಿಸಿದಂತಹ ಪರಾವಲಂಬಿ ಜೀವಿಗಳಿಂದ ಮೀನಿನ ಚರ್ಮವು ಸೋಂಕಿಗೆ ಬಲಿಯಾಗಿ ಅದರ ಸುರಕ್ಷಿತ ಲೋಳೆ ಕವಚಕ್ಕೆ ಹಾನಿಯುಂಟಾಗಬಹುದು ಅಥವಾ ಅದು ಕಳಚಿ ಬೀಳಬಹುದು. ಆದಾಗ್ಯೂ, ಗೋಲ್ಡ್ ಫಿಷ್ ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಮೇಲಕ್ಕೆ ಬಂದು ಜನರಿಗೆ ಪ್ರತಿಕ್ರಿಯಿಸುತ್ತದೆ. ಜೊತೆಗೆ ಮನುಷ್ಯರು ನೀಡುವ ಆಹಾರದ ಸಣ್ಣ ಉಂಡೆಗಳನ್ನು ಅಥವಾ ಚೂರುಗಳನ್ನು ಅವರಿಂದ ಕಸಿದುಕೊಳ್ಳಲು ತರಬೇತಿ ನೀಡಬಹುದು ಅಥವಾ ಪಳಗಿಸಬಹುದು. ಸರಿಯಾಗಿ ಕಾಳಜಿವಹಿಸದಿರುವ ಕಾರಣದಿಂದಾಗಿ ಗೋಲ್ಡ್ ಫಿಷ್ ಗಳು ಬೇಗನೆ ಸಾಯುತ್ತವೆ.[೧೦]
ನಿರ್ಬಂಧದಲ್ಲಿ ಗೋಲ್ಡ್ ಫಿಷ್ ನ ಜೀವಿತಾವಧಿಯು 10 ವರ್ಷಕ್ಕಿಂತಲೂ ಹೆಚ್ಚಿರಬಹುದು.
ಗೋಲ್ಡ್ ಫಿಷ್ ಗಳನ್ನು ಕೆಲಕಾಲದವರೆಗೆ ಕತ್ತಲೆಯಲ್ಲಿ ಇರಿಸಲ್ಪಟ್ಟರೆ, ಕ್ರಮೇಣವಾಗಿ ಅವುಗಳು ಬೂದು ಬಣ್ಣಕ್ಕೆ ತಿರುಗುವವರೆಗೂ ಅವುಗಳ ಬಣ್ಣ ಬದಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಮಾನವರ ಚರ್ಮ ಹೇಗೆ ಬಿಸಿಲಿನಿಂದ ಕಂದು ಬಣ್ಣಕ್ಕೆ ತಿರುಗುತ್ತದೋ, ಅದೇ ಮಾದರಿ ಗೋಲ್ಡ್ ಫಿಷ್ ಗಳು ಬೆಳಕಿಗೆ ಪ್ರತಿಕ್ರಿಯೆಯಾಗಿ ವರ್ಣ ದೃವ್ಯವನ್ನು ಉತ್ಪತ್ತಿಮಾಡುತ್ತವೆ. ಮೀನುಗಳು ವರ್ಣ ದೃವ್ಯವನ್ನು ಉಂಟುಮಾಡುವ ವರ್ಣಕಣಕೋಶಗಳನ್ನು ಹೊಂದಿರುತ್ತವೆ, ಇವು ಬೆಳಕಿನಿಂದ ಪ್ರತಿಫಲನಗೊಂಡು ಮೀನಿಗೆ ಬಣ್ಣವನ್ನು ನೀಡುತ್ತವೆ. ಗೋಲ್ಡ್ ಫಿಷ್ ನ ಬಣ್ಣವು ಅವುಗಳ ಕೋಶಗಳಲ್ಲಿ ಯಾವ ಬಣ್ಣವಿದೆ ಎಂಬುದರ ಮೇಲೆ, ಎಷ್ಟು ವರ್ಣದ್ರವ್ಯ ಕಣಗಳಿವೆ ಎಂಬುದರ ಮೇಲೆ, ಜೊತೆಗೆ ವರ್ಣದ್ರವ್ಯವು ಕೋಶದೊಳಗೆ ಗುಂಪಾಗಿವೆಯೇ ಅಥವಾ ಕೋಶದ್ರವ್ಯದಲ್ಲೆಲ್ಲಾ ಹರಡಿವೆಯೇ ಎಂಬುದರ ಮೇಲೆ ನಿರ್ಧರಿತವಾಗುತ್ತದೆ.
ಆಹಾರ
[ಬದಲಾಯಿಸಿ]ನಿಸರ್ಗ ಸಹಜ ಪರಿಸ್ಥಿತಿಯಲ್ಲಿ, ಅವುಗಳ ಆಹಾರದಲ್ಲಿ ವಲ್ಕವಂತವರ್ಗಕ್ಕೆ ಸೇರಿದ ಜೀವಿಗಳು, ಕೀಟಗಳು ಹಾಗು ಇತರ ಸಸ್ಯಗಳ ಪದಾರ್ಥಗಳು ಸೇರಿರುತ್ತವೆ.ಅವುಗಳು ಸರ್ವಭಕ್ಷಕವಾಗಿದ್ದು, ವಿವಿಧ ತಾಜಾ ತರಕಾರಿಗಳು ಹಾಗು ಹಣ್ಣುಗಳಿಂದ ಹಿಡಿದು ಪ್ರಮುಖಾಂಶವನ್ನು ಹೊಂದಿರುವ ಆಹಾರದ ಚೂರುಗಳು ಅಥವಾ ಆಹಾರದ ಉಂಡೆಗಳನ್ನು ತಿನ್ನುತ್ತವೆ.[ಸೂಕ್ತ ಉಲ್ಲೇಖನ ಬೇಕು]
ಹೆಚ್ಚಿನ ಮೀನುಗಳಂತೆ, ಗೋಲ್ಡ್ ಫಿಷ್ ಗಳು ಸಮಯಾನುವರ್ತಿಯಾಗಿ ಆಹಾರವನ್ನು ತೆಗೆದುಕೊಳ್ಳುತ್ತವೆ. ಅಲ್ಲದೇ ಬೇಡವೆನಿಸುವವರೆಗೆ ತಿನ್ನುವುದನ್ನು ನಿಲ್ಲಿಸುವುದಿಲ್ಲ. ಅಧಿಕ ಆಹಾರವನ್ನು ತೆಗೆದುಕೊಂಡಾಗ, ಪ್ರೋಟೀನ್ ಸಂಪೂರ್ಣವಾಗಿ ಜೀರ್ಣವಾಗದ ಕಾರಣ ಅವುಗಳು ಹೆಚ್ಚು ತ್ಯಾಜ್ಯವನ್ನು ಹಾಗು ಮಲಹೆಚ್ಚಾಗಿ ವಿಸರ್ಜಿಸುತ್ತವೆ. ಕೆಲವು ಸಲ ಮೀನುಗಳ ಮಲಕುಳಿಯಿಂದ ಹೊರಹಾಕಲ್ಪಟ್ಟ ಮಲವಿಸರ್ಜನೆಯನ್ನು ಗಮನಿಸುವುದರ ಮೂಲಕ ಹೆಚ್ಚಾಗಿ ತಿಂದಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಗೋಲ್ಡ್ ಫಿಷ್ ಗಳಿಗೆ ಮೂರರಿಂದ ನಾಲ್ಕು ನಿಮಿಷಗಳಲ್ಲಿ ಎಷ್ಟು ತಿನ್ನುತ್ತವೆಯೋ ಅಷ್ಟನ್ನು ಮಾತ್ರ ತಿನ್ನಿಸಬೇಕು, ದಿನದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಆಹಾರವನ್ನು ನೀಡಬಾರದು.
ಅತಿಯಾಗಿ ಆಹಾರವನ್ನು ಒದಗಿಸುವುದರಿಂದ, ಕರಳುಗಳು ಮುಚ್ಚಿ ಹೋಗುತ್ತವೆ ಅಥವಾ ಬಿರಿದುಹೋಗುವುದರ ಮೂಲಕ ಅವುಗಳಿಗೆ ಹಾನಿಯನ್ನು ಉಂಟುಮಾಡುತ್ತವೆ. ಕರುಳಿನ ಅಂಗಪ್ರದೇಶವು ಸುರುಳಿಸುತ್ತಿಕೊಂಡಿರುವಂತಹ ಗೋಲ್ಡ್ ಫಿಷ್ ಗಳಲ್ಲಿ, ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಹೊಸ ರೂಕಿನ್, ಫ್ಯಾನ್ ಟೇಲ್, ಒರಾಂಡ, ಲಯನ್ ಹೆಡ್ ಅಥವಾ ಇತರ ಅಲಂಕಾರಿಕ ಗೋಲ್ಡ್ ಫಿಷ್ ಗಳನ್ನು ಇರಿಸಿಕೊಳ್ಳಲು ಬಯಸುವವರು, ಅವುಗಳಿಗೆ ಎಷ್ಟು ಆಹಾರ ಬೇಕೆಂಬುದನ್ನು ಜಾಗರೂಕತೆಯಿಂದ ನಿರ್ಧರಿಸಬೇಕು.
ಗೋಲ್ಡ್ ಫಿಷ್ ಗಾಗಿಯೇ ತಯಾರಾದಂತಹ ಆಹಾರಗಳು ಸಾಂಪ್ರದಾಯಿಕವಾದ ಮೀನುಗಳ ಆಹಾರಕ್ಕಿಂತ ಕಡಿಮೆ ಪ್ರೋಟೀನ್ ಅಂಶಗಳನ್ನು ಹಾಗು ಹೆಚ್ಚು ಕಾರ್ಬೋಹೈಡ್ರೇಟ್ಅಂಶಗಳನ್ನು ಹೊಂದಿರುತ್ತವೆ. ಇದನ್ನು ಎರಡು ರೂಪದಲ್ಲಿ ಮಾರಾಟ ಮಾಡಲಾಗುತ್ತದೆ— ತೇಲುವಂತಹ ಆಹಾರದ ಚೂರುಗಳು, ಹಾಗು ಮುಳುಗುವಂತಹ ಆಹಾರದ ಉಂಡೆಗಳು. ಉತ್ಸಾಹಶೀಲರು, ಚಿಪ್ಪುಳ್ಳ ಬಟಾಣಿಗಳ (ಸಿಪ್ಪೆ ತೆಗೆಯದಿರುವ) ಜೊತೆಗೆ, ಹಸಿರು ಎಲೆಯ ತರಕಾರಿಗಳ ಜೊತೆಗೆ, ಹಾಗು ಎರೆಹುಳಗಳ ಜೊತೆಗೆ ಈ ಪೂರಕ ಆಹಾರವನ್ನು ನೀಡಬಹುದು. ಎಳೆಯ ಗೋಲ್ಡ್ ಫಿಷ್ ಗಳು ತಮ್ಮ ಆಹಾರದ ಜೊತೆಗೆ ಲವಣಯುಕ್ತ ಸೀಗಡಿಗಳ ಆಹಾರ ಪ್ರಮಾಣವನ್ನೂ ಪಡೆಯುತ್ತವೆ. ಎಲ್ಲ ಪ್ರಾಣಿಗಳ ಮಾದರಿಯಲ್ಲಿ, ಗೋಲ್ಡ್ ಫಿಷ್ ನ ಆಹಾರದ ಆಯ್ಕೆಯಲ್ಲಿಯೂ ಭಿನ್ನತೆಯನ್ನು ಹೊಂದಿದೆ.
ನಿಸರ್ಗ ಸಹಜ ಸ್ಥಿತಿಯ ಗೋಲ್ಡ್ ಫಿಷ್ ಹಾಗು ಪ್ರಷನ್ ಕಾರ್ಪ್ ನೊಡನೆ ಇದರ ಸಂಬಂಧ
[ಬದಲಾಯಿಸಿ]ಅಲಂಕಾರಿಕ ಗೋಲ್ಡ್ ಫಿಷ್ ಗಳು, ಅವುಗಳ ರೆಕ್ಕೆಗಳು ಹೊಂದಿರುವ ಗಾಢವಾದ ಬಣ್ಣದ ಕಾರಣದಿಂದ ನಿಸರ್ಗ ಸಹಜ ಸ್ಥಿತಿಯಲ್ಲಿ ಬದುಕುವುದು ಅಸಂಭವವಾಗಿದೆ; ಆದಾಗ್ಯೂ ಶಕ್ತಿಶಾಲಿ ಮೀನಿನ ಜಾತಿಗಳಾದ ಉದಾಹರಣೆಗೆ, ಶುಬುನ್ಕಿನ್ ನಂತಹ ಮೀನುಗಳು ತಮ್ಮ ನಿಸರ್ಗ ಸಹಜ ಸ್ಥಿತಿಯಲ್ಲಿ ಸಹಚರರೊಂದಿಗೆ ಜೊತೆಗೆ ಸೇರಿ ಮರಿಗಳನ್ನು ಹಾಕುವವರೆಗೂ ಬದುಕುತ್ತವೆ. ಸಾಮಾನ್ಯ ಹಾಗು ಕಾಮೆಟ್ ಗೋಲ್ಡ್ ಫಿಷ್ ಗಳು ಕೊಳಕ್ಕೆ ಹೊಂದಿಕೊಳ್ಳುವ ಯಾವುದೇ ವಾತಾವರಣದಲ್ಲಿ ಬದುಕುವುದರ ಜೊತೆಗೆ ಬೆಳವಣಿಗೆಯನ್ನೂ ಸಹ ಪಡೆಯಬಹುದು.
ಕೊಳಕ್ಕೆ ನಿಸರ್ಗ ಸಹಜ ಸ್ಥಿತಿಯ ಗೋಲ್ಡ್ ಫಿಷ್ ನ ಆಗಮನದಿಂದ ನೀರಿನ ಇತರ ಜೀವಿಗಳಿಗೆ ತೊಂದರೆ ಉಂಟಾಗಬಹುದು. ಮೂರು ಪೀಳಿಗೆಗಳೊಳಗೆ ಗೋಲ್ಡ್ ಫಿಷ್ ನ ಬಹುಪಾಲು ಮೊಟ್ಟೆಗಳು, ಅವುಗಳ ಸಹಜ ಬಣ್ಣವಾದ ಆಲಿವ್ ಬಣ್ಣಕ್ಕೆ ಪ್ರತ್ಯಾವರ್ತನಗೊಳ್ಳುತ್ತವೆ.
ಕಾರ್ಪ್ ನ ಕೆಲವು ಇತರ ಜಾತಿಗಳೊಡನೆ ಗೋಲ್ಡ್ ಫಿಷ್ ನ್ನು ಸಂಕರೀಸಬಹುದಾಗಿದೆ.
ಪ್ರಷನ್ ಕಾರ್ಪ್ ಗೋಲ್ಡ್ ಫಿಷ್ ನ ಮೂಲರೂಪವಾಗಿದ್ದರೂ, ಕೆಲವೊಂದು ಸೂಕ್ಷ್ಮ ವ್ಯತ್ಯಾಸಗಳನ್ನು ಪ್ರದರ್ಶಿಸುತ್ತವೆ, ಇವುಗಳನ್ನು ಪ್ರತ್ಯೇಕ ಜಾತಿಗಳೆಂದು ಪರಿಗಣಿಸಲು ಸಾಕಷ್ಟು ಭಿನ್ನತೆಗಳೂ ಕಂಡುಬರುತ್ತವೆ.[೧೧]
ನಡವಳಿಕೆ
[ಬದಲಾಯಿಸಿ]ನಡವಳಿಕೆಗಳು ವ್ಯಾಪಕವಾಗಿ ಭಿನ್ನವಾಗಿರುತ್ತವೆ, ಏಕೆಂದರೆ ಗೋಲ್ಡ್ ಫಿಷ್ ವಿವಿಧ ವಾತಾವರಣದಲ್ಲಿ ಬದುಕುತ್ತದಲ್ಲದೆ, ಅಲ್ಲದೇ ಅವುಗಳ ನಡವಳಿಕೆಯು ಅವುಗಳ ಮಾಲೀಕರ ಒಗ್ಗಿಸುವಿಕೆಗೆ ಒಳಪಟ್ಟಿರುತ್ತದೆ.
ಗೋಲ್ಡ್ ಫಿಷ್ ಪ್ರಬಲ ಸಹಜೀವನ ಕಲಿಯುವ ಸಾಮರ್ಥ್ಯಗಳನ್ನು, ಹಾಗು ಸಂಗಜೀವಿಯಾಗಿರುವುದನ್ನು ಕಲಿಯುವ ಕೌಶಲವನ್ನು ಹೊಂದಿದೆ . ಇದರ ಜೊತೆಯಲ್ಲಿ ಅವುಗಳ ದೃಷ್ಟಿಯ ತೀಕ್ಷಣತೆಯು, ಅವುಗಳಿಗೆ ವಿವಿಧ ವ್ಯಕ್ತಿಗಳ ನಡುವಿನ ವ್ಯತ್ಯಾಸ ತಿಳಿಯುವ ಅವಕಾಶವನ್ನು ನೀಡುತ್ತದೆ. ಮೀನುಗಳು ಮಾಲೀಕರು, ಮೀನುಗಳು ಅವರಿಗೆ ಪ್ರತಿಕ್ರಿಯಿಸುತ್ತವೆಯೇ ಎಂಬುದನ್ನು ಗಮನಿಸಬಹುದು,(ಗ್ಲಾಸ್ ನ ಮುಂದಕ್ಕೆ ಈಜಿಕೊಂಡು ಬರುವುದು, ಟ್ಯಾಂಕ್ ನ ಸುತ್ತಲೂ ವೇಗವಾಗಿ ಈಜುವುದು, ಹಾಗು ಟ್ಯಾಂಕ್ ನ ಮೇಲಕ್ಕೆ ಬಂದು ಆಹಾರಕ್ಕಾಗಿ ಬಾಯಿಚಾಚುವುದು) ಬೇರೆಯವರು ಟ್ಯಾಂಕ್ ನ ಬಳಿ ಬಂದಾಗ ಮಾಲೀಕರು ಮರೆಯಾಗಿ ಇದನ್ನು ಪತ್ತೆ ಹಚ್ಚಬಹುದಾಗಿದೆ. ಕಾಲಾನುಕ್ರಮದಲ್ಲಿ, ಗೋಲ್ಡ್ ಫಿಷ್ ಗಳು ತಮ್ಮ ಮಾಲೀಕರು ಹಾಗು ಇತರ ಜನರ ಜೊತೆ ಒಡನಾಟವನ್ನು ಹೆಚ್ಚಿಸಿಕೊಳ್ಳುತ್ತವೆ, ಸಾಮಾನ್ಯವಾಗಿ ನೀರಿನ ಟ್ಯಾಂಕ್ (ಸಂಗ್ರಹಾರದ)ಬಳಿ ಮಾಲೀಕರು ಬಂದಾಗ ಆಹಾರಕ್ಕಾಗಿ "ಬೇಡುತ್ತವೆ".[ಸೂಕ್ತ ಉಲ್ಲೇಖನ ಬೇಕು]
ಕಣ್ಣಿಲ್ಲದ ಒಂದು ಗೋಲ್ಡ್ ಫಿಷ್, ಕುಟುಂಬದ ಒಬ್ಬ ನಿರ್ದಿಷ್ಟ ಸದಸ್ಯ ಹಾಗು ಆತನ ಒಬ್ಬ ಸ್ನೇಹಿತನನ್ನು ಧ್ವನಿಗೆ, ಅಥವಾ ಶಬ್ದದ ಕಂಪನಕ್ಕೆ ಪ್ರತಿಕ್ರಿಯಿಸಿದ್ದು ಸಾಬೀತಾಯಿತು.[ಸೂಕ್ತ ಉಲ್ಲೇಖನ ಬೇಕು] ಈ ನಡವಳಿಕೆ ಬಹಳ ಗಮನಾರ್ಹವಾಗಿದೆ, ಏಕೆಂದರೆ ಮೀನು ಶಬ್ದದ ಕಂಪನಕ್ಕೆ ಅಥವಾ ಮನೆಯಲ್ಲಿದ್ದ ಏಳು ಜನರಲ್ಲಿ ನಿರ್ದಿಷ್ಟವಾಗಿ ಇಬ್ಬರ ಧ್ವನಿಗೆ ಪ್ರತಿಕ್ರಿಯಿಸಿದ್ದು ವಿಶೇಷವಾಗಿತ್ತು.
ಗೋಲ್ಡ್ ಫಿಷ್ ಗಳು, ತರಬೇತು ನಡವಳಿಕೆಯನ್ನು ಪ್ರದರ್ಶಿಸುವುದರ ಜೊತೆಗೆ, ಒಂದೇ ರೀತಿಯ ಆಹಾರವನ್ನು ಸೇವಿಸುವ ನಡವಳಿಕೆಯನ್ನು ಪ್ರದರ್ಶಿಸುವಂತಹ ಸಂಘಜೀವಿಗಳಾಗಿವೆ. ಗೋಲ್ಡ್ ಫಿಷ್ ಗಳು ಕನ್ನಡಿಯಲ್ಲಿನ ಪ್ರತಿಬಿಂಬಕ್ಕೆ ಪ್ರತಿಕ್ರಿಯಿಸುವಾಗ ಒಂದೇ ರೀತಿಯ ನಡವಳಿಕೆಯನ್ನು ಪ್ರದರ್ಶಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]
ಗೋಲ್ಡ್ ಫಿಷ್, ಮಾನವರ ಜೊತೆಯಲ್ಲಿ ಸತತವಾಗಿ ಕಣ್ಣಿನ ಸಂಪರ್ಕವನ್ನು ಹೊಂದುವುದರಿಂದಲೂ ಸಹ ಅವರ ಬಗ್ಗೆ ಭಯವನ್ನೂ ತೊರೆಯುತ್ತದೆ. ಹಲವು ವಾರಗಳು, ಕೆಲವೊಂದು ಬಾರಿ ಹಲವಾರು ತಿಂಗಳ ಕಾಲ ಟ್ಯಾಂಕ್ ನಲ್ಲಿದ್ದ ನಂತರ, ಗೋಲ್ಡ್ ಫಿಷ್ ಗಳಿಗೆ ಆಹಾರವನ್ನು ಕೈಯಿಂದಲೇ ನೀಡಬಹುದು, ಆಗ ಅವುಗಳು ಗಾಬರಿ ಬೀಳದೆ ಆಹಾರವನ್ನು ಸ್ವೀಕರಿಸುತ್ತವೆ.
ಮೂಲ ಕಾರ್ಪ್ ನ ನಡವಳಿಕೆಯಿಂದ ಬಂದಂತಹ ಗೋಲ್ಡ್ ಫಿಷ್ ಗಳು ಗುಂಪುಗಳ ಹಾಗು ಪ್ರತ್ಯೇಕವಾದ ಎರಡು ರೀತಿಯ ನಡವಳಿಕೆಗಳನ್ನು ಪ್ರದರ್ಶಿಸುತ್ತವೆ. ಆಹಾರ, ಸಂಕರೀಸುವಿಕೆ, ಹಾಗು ಪರಭಕ್ಷಕಗಳಿಂದ ದೂರವಿರುವ ನಡವಳಿಕೆಯು ಕೆಲವು ಸಾಮಾನ್ಯ ಜಾತಿಗಳಲ್ಲಿ ಕಂಡುಬರುತ್ತವೆ, ಇವು ಅವುಗಳ ಜೀವಿತಾವಧಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮೀನುಗಳಾಗಿ ಪರಸ್ಪರ "ಸ್ನೇಹ"ದಿಂದಿರುತ್ತವೆ ಎಂದು ಹೇಳಬಹುದು. ಬಹಳ ವಿರಳವಾಗಿ ಒಂದು ಗೋಲ್ಡ್ ಫಿಷ್ ಮತ್ತೊಂದು ಗೋಲ್ಡ್ ಫಿಷ್ ಗೆ ತೊಂದರೆಯನ್ನು ಉಂಟುಮಾಡುತ್ತದೆ, ಹಾಗು ತಳಿ ಅಭಿವೃದ್ಧಿ ಮರಿ ಹುಟ್ಟುವ ಸಂದರ್ಭದಲ್ಲಿಯೂ ಸಹ ಗಂಡು ಮೀನು ಹೆಣ್ಣು ಮೀನಿಗೆ ತೊಂದರೆಯನ್ನು ಉಂಟುಮಾಡುವುದಿಲ್ಲ. ಗೋಲ್ಡ್ ಫಿಷ್ ಆಹಾರಕ್ಕಾಗಿ ಪರಸ್ಪರ ಪೈಪೋಟಿ ನಡೆಸುವಾಗ ನಿಜವಾದ ಅಪಾಯವಿರುತ್ತದೆ. ಆಹಾರವನ್ನು ಹಾಕುವ ಸಂದರ್ಭದಲ್ಲಿ ಅಲಂಕಾರಿಕ ಉಪಜಾತಿಯ ಮೀನುಗಳು ಆಹಾರವನ್ನು ತಲುಪುವ ಮೊದಲೇ ಸಾಮಾನ್ಯ ಮೀನುಗಳು, ಕಾಮೆಟ್ಗಳು, ಹಾಗು ವೇಗವಾಗಿ ಚಲಿಸುವ ಇತರ ಜಾತಿಯ ಮೀನುಗಳು, ಅಲಂಕಾರಿಕ ಮೀನುಗಳು ಆಹಾರವನ್ನು ತಿನ್ನುವ ಮೊದಲು ಆಹಾರಕ್ಕಾಗಿ ಧಾವಿಸಿ ಬರುತ್ತವೆ. ಅವುಗಳ ಒಂದೇ ಬಾಲದ ಸಹಚರರೊಂದಿಗೆ ಅವುಗಳನ್ನು ಕೊಳದಲ್ಲಿ ಇರಿಸಿದಾಗ, ಇದು ಅಲಂಕಾರಿಕ ಜಾತಿಯ ಮೀನುಗಳ ಬೆಳವಣಿಯನ್ನು ಕುಂಠಿತಗೊಳಿಸಬಹುದು. ಅದಲ್ಲದೇ ಅವುಗಳು ಹೊಟ್ಟೆಗಿಲ್ಲದೇ ಸಾಯುವಂತಾಗಬಹುದು. ಇದರ ಪರಿಣಾಮವಾಗಿ, ಒಟ್ಟಾಗಿ ಇರಿಸುವಾಗ, ದೇಹದ ರಚನೆಯಲ್ಲಿ ಸಾಮ್ಯತೆ ಇರುವ ಹಾಗು ಒಂದೇ ತೆರನಾದ ಈಜುವಿಕೆಯ ಲಕ್ಷಣಗಳನ್ನು ಹೊಂದಿರುವ ಮೀನುಗಳನ್ನು ಒಟ್ಟಾಗಿ ಇರಿಸಬಹುದು.
ಬುದ್ಧಿಶಕ್ತಿ
[ಬದಲಾಯಿಸಿ]ಧನಾತ್ಮಕ ಬಲವರ್ಧಕಗಳನ್ನು ಬಳಸಿಕೊಂಡು ಗೋಲ್ಡ್ ಫಿಷ್ ಗಳಿಗೆ, ವಿವಿಧ ಬಣ್ಣದ ಬೆಳಕಿನ ಸಂಜ್ಞೆಗಳನ್ನು ಗುರುತಿಸುವಂತೆ ಹಾಗು ಅದಕ್ಕೆ ಪ್ರತಿಕ್ರಿಯಿಸುವಂತೆ ತರಬೇತಿ ನೀಡಬಹುದು.[೧೨] ಗೋಲ್ಡ್ ಫಿಷ್ ಕನಿಷ್ಠ ಮೂರು ತಿಂಗಳ ನೆನಪಿನ ಶಕ್ತಿಯನ್ನು ಹೊಂದಿರುತ್ತದೆ ಜೊತೆಗೆ ವಿವಿಧ ಆಕಾರಗಳನ್ನು, ಬಣ್ಣಗಳನ್ನು ಹಾಗು ಶಬ್ದಗಳ ವ್ಯತ್ಯಾಸವನ್ನು ಅರಿಯಬಲ್ಲದು.[೧೩] ಮತ್ತೊಂದು ಪ್ರಯೋಗವು, ಒಂದು ತಿಂಗಳಿಗೂ ಹೆಚ್ಚು ಕಾಲ ಸ್ಮರಣಶಕ್ತಿಯನ್ನು ಹೊಂದಬಹುದು ಎಂಬುದನ್ನು ತೋರಿಸಿದೆ.[೧೪] ಆಹಾರಕ್ಕೆ ಸಂಬಂಧಿಸಿದಂತೆ ಮೀನು ಕೆಲವು ನಿರ್ದಿಷ್ಟ ಬಣ್ಣಗಳಿಗೆ ಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತದೆ.[೧೫] ಮೀನುಗಳು ಪ್ರತಿದಿನ ಒಂದೇ ಸಮಯದಲ್ಲಿ ಆಹಾರವನ್ನು ತಿನ್ನಲು ಮೇಲೆ ಬರುವುದರ ಮೂಲಕ ಆ ಸಮಯದಲ್ಲಿ ಆಹಾರವನ್ನು ನಿರೀಕ್ಷಿಸುತ್ತವೆ. ಲಿಂಬೊ, ಸ್ಲಲೊಮ್, ಹಿಮ್ಮುಖ ಚಲನೆ ಹಾಗು ಕಾಲ್ಚೆಂಡಾಟದಂತಹ ಕೌಶಲಗಳನ್ನು ಧನಾತ್ಮಕ ಬಲವರ್ಧಕ ತರಬೇತಿ ತಂತ್ರಗಳ ಮೂಲಕ ಗೊಲ್ಡ್ ಫಿಶ್ ಕಲಿಯುತ್ತದೆ.[೧೬]
ವ್ಯಾಪ್ತಿ ಹಾಗು ಆವಾಸಸ್ಥಾನ
[ಬದಲಾಯಿಸಿ]ಗೋಲ್ಡ್ ಫಿಷ್ ಕೊಳಗಳಲ್ಲಿ ವಾಸಿಸುತ್ತವೆ. ಅಲ್ಲದೇ ಇತರ ನಿಧಾನವಾಗಿ ಹರಿಯುತ್ತಿರುವ ಅಥವಾ ನಿಂತಿರುವ ನೀರಿನ ಸೆಲೆಗಳಲ್ಲಿ ಟೆಂಪ್ಲೇಟು:M to ftರಷ್ಟು ಆಳದಲ್ಲಿ ಇರುತ್ತವೆ. ಅವುಗಳ ನೈಸರ್ಗಿಕ ಹವಾಮಾನವು ಉಪೋಷ್ಣವಲಯ ದಿಂದ ಉಷ್ಣವಲಯ ಜೊತೆಗೆ ತಾಜಾನೀರಿನಲ್ಲಿ ಆಫ್ 6.0–8.0ನಷ್ಟು pH ಜೊತೆಗೆ, 5.0–19.0 dGHನಷ್ಟು ಗಡಸು ಪ್ರಮಾಣದ ನೀರಿನಲ್ಲಿ ಬದುಕುತ್ತವೆ.[ಸೂಕ್ತ ಉಲ್ಲೇಖನ ಬೇಕು]
ಅವುಗಳು 40–106 °F (4–41 °C)ರಿಂದ ಪ್ರಾರಂಭವಾಗುವಂತಹ ತಾಪಮಾನದಲ್ಲಿ ಬದುಕಬಲ್ಲವು, ಆದಾಗ್ಯೂ ಗರಿಷ್ಠ ತಾಪಮಾನದಲ್ಲಿ ಅಲ್ಪಾವಧಿಗೆ ಜೀವಿಸುತ್ತದೆ. ಅವುಗಳು ಒಂದು ಬಿಸಿಯುಳ್ಳ ಉಷ್ಣವಲಯದ ಟ್ಯಾಂಕುಗಳಲ್ಲಿ ಇರಲು ಅನರ್ಹವಾಗಿವೆ, ಬಿಸಿಯಿಲ್ಲದ ಟ್ಯಾಂಕುಗಳಲ್ಲಿ ಹೆಚ್ಚಿನ ಮಟ್ಟದ ಆಮ್ಲಜನಕದ ಅವಶ್ಯಕತೆಯಿರುತ್ತದೆ; ಕೆಲವರು ಶಾಖವು ಅವುಗಳ ಸಾವಿಗೆ ಕಾರಣವಾಗುತ್ತದೆಂದು ನಂಬುತ್ತಾರೆ. ಆದಾಗ್ಯೂ, ಗೋಲ್ಡ್ ಫಿಷ್ ಗಳು 86 °F (30 °C) ಗಿಂತ ಹೆಚ್ಚಿನ ತಾಪಮಾನವನ್ನು ಹೊಂದಿರುವ ಹೊರಾಂಗಣ ಕೊಳಗಳಲ್ಲೂ ಕೂಡ ಬದುಕಬಲ್ಲವು.[ಸೂಕ್ತ ಉಲ್ಲೇಖನ ಬೇಕು]
ನೀರಿನ ತಾಪಾಮಾನದಲ್ಲಿ ಉಂಟಾಗುವ ಧಿಡೀರ್ ಬದಲಾವಣೆಯು, ಗೋಲ್ಡ್ ಫಿಷ್ ನ್ನು ಒಳಗೊಂಡಂತೆ ಯಾವುದೇ ಮೀನಿಗಾದರೂ ಅಪಾಯಕಾರಿಯಾಗಬಹುದು. ಮಳಿಗೆಗಳಿಂದ ತಂದಂತಹ ಗೋಲ್ಡ್ ಫಿಷ್ ಗಳನ್ನು ಕೊಳಕ್ಕೆ ಅಥವಾ ಟ್ಯಾಂಕಿಗೆ ವರ್ಗಾಯಿಸುವಾಗ, ಗೋಲ್ಡ್ ಫಿಷ್ ಅನ್ನು ನೀರಿಗೆ ಬಿಡುವ ಕನಿಷ್ಠ 20 ನಿಮಿಷಗಳ ಮೊದಲು, ವರ್ಗಾವಣೆಯ ಧಾರಕದಲ್ಲಿನ ತಾಪಮಾನ ವರ್ಗಾಯಿಸಬೇಕಿರುವ ಧಾರಕದ ತಾಪಮಾನಕ್ಕೆ ಸಮನಾಗಿರಬೇಕು. ತಾಪಮಾನವೇನಾದರೂ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಯಾದರೆ, ಉದಾಹರಣೆಗೆ ಕೊಠಡಿಯ ತಾಪಮಾನ21 °C (70 °F) ಹಾಗು ತಣ್ಣನೆಯ ತೋಟದಲ್ಲಿರುವ ಹೊಂಡದ ತಾಪಮಾನ4 °C (39 °F), ಹಲವಾರು ದಿನಗಳ ಕಾಲ ಅಥವಾ ವಾರಗಳ ಕಾಲ ಬದಲಾವಣೆಯನ್ನುಂಟು ಮಾಡುವುದನ್ನು ತಡೆಯಬೇಕು.[ಸೂಕ್ತ ಉಲ್ಲೇಖನ ಬೇಕು]
ಗೋಲ್ಡ್ ಫಿಷ್ ಜೀವಂತ ಸಸ್ಯಗಳನ್ನು ತಿನ್ನುವುದರಿಂದ, ಸಸ್ಯಗಳ ಅಕ್ವೇರಿಯಂನಲ್ಲಿ ಅವುಗಳ ಅಸ್ತಿತ್ವ ಸಮಸ್ಯಾತ್ಮಕವಾಗಬಹುದು. ಕೇವಲ ಕೆಲವೇ ಅಕ್ವೇರಿಯಂ ಸಸ್ಯ ಜಾತಿಗಳು, ಉದಾಹರಣೆಗೆ ಕ್ರಿಪ್ಟೊಕ್ರೊಯನ್ ಮತ್ತು ಅನುಬಿಯಾಸ್ , ಗೋಲ್ಡ್ ಫಿಷ್ ಗೆ ಸರಿಹೊಂದುತ್ತವೆ. ಆದರೆ ಅವುಗಳು ನಾಶವಾಗದಂತೆ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ಪ್ಲ್ಯಾಸ್ಟಿಕ್ ಸಸ್ಯಗಳು ಯಾವಾಗಲೂ ಹೆಚ್ಚು ಕಾಲ ಉಳಿಯುವಂತಹವು, ಆದರೆ ಅದರ ರೆಂಬೆ ಕೊಂಬೆಗಳು ಮೀನಿಗೆ ಕಿರುಕುಳವನ್ನುಂಟು ಮಾಡಬಹುದು ಅಥವಾ ಅದನ್ನು ಮುಟ್ಟುವಂತಹ ಮೀನಿಗೆ ಹಾನಿಯುಂಟು ಮಾಡಬಹುದು.[ಸೂಕ್ತ ಉಲ್ಲೇಖನ ಬೇಕು]
ಸಂತಾನೋತ್ಪತ್ತಿ
[ಬದಲಾಯಿಸಿ]ಗೋಲ್ಡ್ ಫಿಷ್ ಸಾಕಷ್ಟು ನೀರು ಹಾಗು ಸರಿಯಾದ ಪೌಷ್ಟಿಕ ಆಹಾರದೊಂದಿಗೆ ಮಾತ್ರ ಪ್ರಬುದ್ದತೆಯ ವಿಕಸನವನ್ನು ಹೊಂದಬಹುದು.
ಬಹುಪಾಲು ಗೋಲ್ಡ್ ಫಿಷ್ ಗಳು, ವಿಶೇಷವಾಗಿ ಕೊಳದ ವ್ಯವಸ್ಥೆಯಲ್ಲಿ ಬಂಧಿಯಾಗಿ ಬೆಳೆಯುತ್ತವೆ. ಸರಿಯಾದ ಕಾಳಜಿ ವಹಿಸಿದರೆ, ಅವುಗಳನ್ನು ಒಳಾಂಗಣದಲ್ಲಿ ಬೆಳೆಸಬಹುದು, ಆದರೆ ಸಣ್ಣ ಮತ್ಸ್ಯದಾನಿಗಳಲ್ಲಲ್ಲ.(ಫಿಷ್ ಬೌಲ್) ಒಂದು ಮಹತ್ವದ ತಾಪಮಾನದ ಬದಲಾವಣೆಯ ನಂತರ (ಸಂತಾನೋತ್ಪತ್ತಿ)ತಳಿ-ಬೆಳವಣಿಗೆಯು ಸಾಮಾನ್ಯವಾಗಿ ವಸಂತ ಋತುವಿನಲ್ಲಿ ನಡೆಯುತ್ತದೆ. ಗಂಡು ಮೀನುಗಳು ಹೆಣ್ಣು ಮೀನುಗಳನ್ನು ಬೆನ್ನಟ್ಟಿ, ಅವುಗಳನ್ನು ತಳ್ಳಾಡಿ ಹಾಗು ನೂಕಿ ಮೊಟ್ಟೆಗಳನ್ನು ಬಿಡುಗಡೆ ಮಾಡುವಂತೆ ಪ್ರೇರೇಪಿಸುತ್ತವೆ.
ಗೋಲ್ಡ್ ಫಿಷ್, ಎಲ್ಲಾ ಸಿಪ್ರಿನಿಡ್ಗಳಂತೆ ಮೊಟ್ಟೆ-ಇಡುತ್ತವೆ. ಅವುಗಳ ಮೊಟ್ಟೆಗಳು ಅಂಟುಗುಣವನ್ನು ಹೊಂದಿರುತ್ತವೆ; ಅಲ್ಲದೇ ನೀರಿನಲ್ಲಿ ಬೆಳೆದಿರುವ ಸಸ್ಯಗಳ ಜೊತೆಗೆ ಸೇರಿಕೊಳ್ಳಬಲ್ಲವಾಗಿರುತ್ತವೆ. ಇವುಗಳ ವೈಶಿಷ್ಟ್ಯವೆಂದರೆ ದಟ್ಟವಾದ ಸಸ್ಯಗಳು, ಉದಾಹರಣೆಗೆ ಕಾಬೊಂಬಾ ಅಥವಾ ಎಲೊಡಿಯ ಅಥವಾ ಒಂದು ಪೊದೆಯಲ್ಲಿ ಮೊಟ್ಟೆಗಳನ್ನು ಇಡುವ ಮಾದರಿಯ ಮೀನುಗಳಾಗಿವೆ. ನಿರ್ಬಂಧದ ಸ್ಥಿತಿಯಲ್ಲಿ, ಮೊಟ್ಟೆಗಳನ್ನು ಮತ್ತೊಂದು ಟ್ಯಾಂಕ್ ಗೆ ವರ್ಗಾಯಿಸಬೇಕಾಗುತ್ತದೆ ಏಕೆಂದರೆ, ದೊಡ್ಡ ಮೀನುಗಳು ಸಣ್ಣವುಗಳನ್ನು ಸಂಧಿಸಿದಾಗ ಅವುಗಳನ್ನು ತಿಂದುಹಾಕುತ್ತವೆ. ಸುಮಾರು 48 ರಿಂದ 72 ಗಂಟೆಗಳೊಳಗೆ ಮೊಟ್ಟೆಗಳು ಒಡೆದು ಮರಿಯಾಗುತ್ತವೆ.
ಮರಿಮೀನು, (ಆಗತಾನೆ ಮೊಟ್ಟೆಯಿಂದ ಹೊರಬಂದ ಮೀನು ಮರಿಗಳು)ಗಳು ನೋಡಲು "ಎರಡು ಕಣ್ಣುಗುಡ್ಡೆಗಳನ್ನು ಹೊಂದಿರುವ ರೆಪ್ಪೆಗೂದಲಿನಂತೆ" ಕಂಡುಬರುತ್ತದೆ. ಒಂದು ವಾರದೊಳಗೆ ಅಥವಾ ಒಂದು ವಾರಕ್ಕೆ ಮೀನಿನ ಮರಿಗಳು ಅವುಗಳ ಪೂರ್ಣ ಆಕಾರವನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತವೆ. ಆದಾಗ್ಯೂ ಸಂಪೂರ್ಣವಾಗಿ ಗೋಲ್ಡ್ ಫಿಷ್ ಬಣ್ಣವನ್ನು ಪಡೆಯಲು ಅವಕ್ಕೆ ಒಂದು ವರ್ಷವೇ ಬೇಕಾಗಬಹುದು; ಅಲ್ಲಿಯವರೆಗೂ ತಮ್ಮ ಅವುಗಳ ನಿಸರ್ಗ ಸಹಜ ಸ್ಥಿತಿಯ ಪೂರ್ವರೂಪದಂತೆ, ಅವು ಲೋಹೀಯ ಬೂದು ಬಣ್ಣವನ್ನು ಹೊಂದಿರುತ್ತವೆ. ಅವುಗಳ ಜೀವಿತಾವಧಿಯ ಮೊದಲ ವಾರಗಳಲ್ಲಿ, ಆಗ ತಾನೇ ಹುಟ್ಟಿದ ಮರಿಗಳು ಬಹಳ ಬೇಗನೆ ಬೆಳವಣಿಗೆಯಾಗುತ್ತವೆ-ಈ ಪ್ರಕ್ರಿಯೆಯಲ್ಲಿ ಅದರ ವಾತಾವರಣದಲ್ಲಿರುವ ದೊಡ್ಡ ಗೋಲ್ಡ್ ಫಿಷ್ ಗಳಿಂದ ಭಕ್ಷಣೆಗೊಳಗಾಗುವ ಅಪಾಯವನ್ನು ಹೊಂದಿರುತ್ತವೆ. (ಅಥವಾ ಇತರ ಮೀನುಗಳು ಹಾಗು ಕೀಟಗಳೂ ಸಹ ಇವುಗಳನ್ನು ಭಕ್ಷಿಸಬಹುದು.)
ವಿಶೇಷವಾಗಿ ಹೈಬ್ರೀಡ್ ತಳಿಯಾಗಿ ಬೆಳೆದ ಕೆಲವು ಗೋಲ್ಡ್ ಫಿಷ್ ಗಳು, ತಮ್ಮ ವಿಸ್ತೃತ ರೂಪದಿಂದ ನೈಸರ್ಗಿಕವಾಗಿ ಹೆಚ್ಚಿನ ಕಾಲ ಸಂತಾನೋತ್ಪತ್ತಿ ಮಾಡಲಾರವು. "ಹ್ಯಾಂಡ್ ಸ್ಟ್ರಿಪ್ಪಿಂಗ್" ಎಂದು ಕರೆಯಲ್ಪಡುವ ಕೃತಕ ಬೆಳವಣಿಗೆಯ ವಿಧಾನವು ನೈಸರ್ಗಿಕವಾಗಿ ನೆರವಾದರೂ, ಸರಿಯಾದ ವಿಧಾನದಲ್ಲಿ ಮಾಡದಿದ್ದರೆ ಮೀನಿಗೆ ಅಪಾಯವನ್ನುಂಟು ಮಾಡಬಹುದು.
ಸೊಳ್ಳೆಯ ನಿಯಂತ್ರಣ
[ಬದಲಾಯಿಸಿ]ಇತರ ಕೆಲವು ಜನಪ್ರಿಯ ಅಕ್ವೇರಿಯಂ ಮೀನಿನಂತೆ, ಉದಾಹರಣೆಗೆ ಗಪಿ,(ಸಣ್ಣ ಮೀನು) ಗೋಲ್ಡ್ ಫಿಷ್ ಮತ್ತು ಇತರ ಕಾರ್ಪ್ ಮೀನುಗಳನ್ನು ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆಮಾಡಲು ಸತತವಾಗಿ ನಿಂತ ನೀರಿಗೆ ಬಿಡಲಾಗುತ್ತದೆ. ಇವುಗಳನ್ನು,ವೆಸ್ಟ್ ನೈಲ್ ವೈರಸ್ನ (ನೈಲ್ ನದಿ ಕರಾವಳಿಯಲ್ಲಿನ ಮಾರಣಾಂತಿಕ ವೈರಸ್)ಹರಡುವಿಕೆಯನ್ನು ತಡೆಗಟ್ಟಲು ಬಳಸಲಾಗುತ್ತದೆ; ಇದರಿಂದಾಗಿ ಸೊಳ್ಳೆಗಳು ಆ ಸ್ಥಳದಿಂದ ಹೊರಟುಹೋಗುತ್ತವೆ ಎಂದು ನಂಬಲಾಗಿದೆ. ಆದಾಗ್ಯೂ ಗೋಲ್ಡ್ ಫಿಷ್ ನ್ನು ನೀರಿಗೆ ಪರಿಚಯಿಸುವುದರಿಂದ ಕೆಲವೊಂದು ಸಂದರ್ಭದಲ್ಲಿ ಸ್ಥಳಿಯ ಪರಿಸರ ವ್ಯವಸ್ಥೆಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಬಹುದು.[೧೭]
ಸೂಕ್ತ ಚಿಕಿತ್ಸೆಯ ಬಗೆಗಿರುವ ವಿವಾದ
[ಬದಲಾಯಿಸಿ]ಕೆಲವು ರಾಷ್ಟ್ರಗಳು ಸಾಂಪ್ರದಾಯಿಕ ಮತ್ಸ್ಯದಾನಿಗಳ ಮಾರಾಟವನ್ನು ಪ್ರಾಣಿಗಳ ಕ್ಷೇಮಾಭಿವೃದ್ಧಿ ಕಾನೂನಿನಡಿಯಲ್ಲಿ ನಿಷೇಧಿಸಿವೆ. ಮತ್ಯ್ಸದಾನಿಯಲ್ಲಿ ಬೆಳವಣಿಗೆ ಕುಂಠಿತವಾಗುವ, ಆಮ್ಲಜನಕದ ಕೊರತೆಯುಂಟಾಗುವಕಾರಣದಿಂದ ಹಾಗು ಅಮೋನಿಯ/ ನೈಟ್ರೈಟ್ ಆಮ್ಲಗಳು ಕಡಿಮೆ ವ್ಯಾಪ್ತಿಯ ವಾತಾವರಣದಲ್ಲಿ ವಿಷವಾಗುವ ಅಪಾಯವಿದೆ. ಅವುಗಳಿಗೆ ಹೆಚ್ಚು ಆಮ್ಲಜನಕದ ಅವಶ್ಯಕತೆಯಿರುವ ಕಾರಣ ಹಾಗು ಹೆಚ್ಚು ತ್ಯಾಜ್ಯವನ್ನು ಹೊರಹಾಕುವುದರಿಂದ, ಅಂತಹ ಮತ್ಸ್ಯದಾನಿಗಳು ಗೋಲ್ಡ್ ಫಿಷ್ ಗಳಿಗೆ ಯೋಗ್ಯ ವಾಸಸ್ಥಳವಲ್ಲವೆಂದು ಪರಿಗಣಿಸಲಾಗಿದೆ.
ಹಲವು ರಾಷ್ಟ್ರಗಳಲ್ಲಿ, ಉತ್ಸವ ಹಾಗು ಜಾತ್ರೆಯ ಆಯೋಜಕರು ಸಾಮಾನ್ಯವಾಗಿ ಗೋಲ್ಡ್ ಫಿಷ್ ಗಳನ್ನು ಪ್ಲ್ಯಾಸ್ಟಿಕ್ ಚೀಲಗಳಲ್ಲಿ, ಬಹುಮಾನಗಳ ರೂಪದಲ್ಲಿ ನೀಡುತ್ತಿದ್ದರು. ಕಳೆದ 2005ರ ಕೊನೆಯಲ್ಲಿ ರೋಮ್, ಇಟಲಿದೇಶಗಳು ಗೋಲ್ಡ್ ಫಿಷ್ ಹಾಗು ಇತರ ಪ್ರಾಣಿಗಳನ್ನು ಉತ್ಸವದಲ್ಲಿ ಬಹುಮಾನವಾಗಿ ನೀಡುವುದನ್ನು ನಿಷೇಧಿಸಿವೆ. ರೋಮ್, ಪ್ರಾಣಿಗಳನ್ನು ಅಮಾನುಷವಾಗಿ ಹಿಂಸಿಸುವುದರ ಆಧಾರದ ಮೇಲೆ "ಗೋಲ್ಡ್ ಫಿಷ್ ದಾನಿ"ಗಳ ಸಂಪ್ರದಾಯವನ್ನು ಸಹ ನಿಷೇಧಿಸಿತು.[೧೮] ಯುನೈಟೈಡ್ ಕಿಂಗ್ಡಮ್ನಲ್ಲಿ, ಪ್ರಾಣಿಗಳ ಕ್ಷೇಮಾಭಿವೃದ್ಧಿ ಮಸೂದೆಯ ಒಂದು ಭಾಗವಾಗಿ ಸರ್ಕಾರವು ಈ ಪದ್ಧತಿಯನ್ನು ನಿಷೇಧಿಸುವ ಬಗ್ಗೆ ಸಲಹೆಯನ್ನು ನೀಡಿತು.[೧೯][೨೦] ಆದರೆ ಮಸೂದೆಯನ್ನು, ಒಂಟಿಯಾದ ಅಪ್ರಾಪ್ತ ವಯಸ್ಸಿನವರಿಗೆ ಗೋಲ್ಡ್ ಫಿಷ್ ಅನ್ನು ಬಹುಮಾನವಾಗಿ ಕೊಡುತ್ತಿದ್ದ ಪದ್ದತಿಯನ್ನು ಮಾತ್ರ ತಡೆಗಟ್ಟುವಂತೆ ತಿದ್ದುಪಡಿಮಾಡಲಾಯಿತು .[೨೧]
ಜಪಾನ್ನಲ್ಲಿ ,ಬೇಸಿಗೆಯ ಹಬ್ಬಗಳ ಸಮಯದಲ್ಲಿ ಹಾಗು ಧಾರ್ಮಿಕ ರಜೆಗಳಲ್ಲಿ (ಎನ್ನಿಚ್ಚಿ), ಗೋಲ್ಡ್ ಫಿಷ್ ಸ್ಕೂಪಿಂಗ್ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಆಟವನ್ನು ಆಡಲಾಗುತ್ತದೆ. ಈ ಆಟದಲ್ಲಿ ಆಟಗಾರ ಬೇಸಿನ್ ನಲ್ಲಿರುವ ಗೋಲ್ಡ್ ಫಿಷ್ ಗಳನ್ನು ಒಂದು ವಿಶೇಷವಾದ ಸೌಟಿನಿಂದ ಬಾಚುತ್ತಾನೆ. ಕೆಲವು ಸಂದರ್ಭಗಳಲ್ಲಿ ನೆಗೆಯುವ ಬಾಲ್ಗಳನ್ನು ಗೋಲ್ಡ್ ಫಿಷ್ ಗಳಿಗೆ ಪರ್ಯಾಯವಾಗಿ ಬಳಸಲಾಗುತ್ತದೆ.
ಆದಾಗ್ಯೂ ತಿನ್ನಲು ಯೋಗ್ಯವಾಗಿದ್ದರೂ, ಗೋಲ್ಡ್ ಫಿಷ್ ಗಳನ್ನು ಅಪರೂಪವಾಗಿ ತಿನ್ನಲಾಗುತ್ತದೆ. ಅನೇಕ ವರ್ಷಗಳ ಕಾಲ ಅಮೇರಿಕಾದ ಕಾಲೇಜ್ ವಿದ್ಯಾರ್ಥಿಗಳಿಗೆ ಇದ್ದಂತಹ ಗೀಳೆಂದರೆ ,ಸಾಹಸವೆಂಬಂತೆ ಗೋಲ್ಡ್ ಫಿಷ್ ಗಳನ್ನು ನುಂಗುವುದು ಹಾಗು ವಿದ್ಯಾರ್ಥಿ ಸಂಘದ ವಿಧಿವತ್ತಾದ ಪ್ರವೇಶದ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿತ್ತು. ದಾಖಲಾದ ಮೊದಲನೆಯ ಘಟನೆ ಎಂದರೆ 1939ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಿತು .[೨೨] ಅನೇಕ ಶತಮಾನಗಳು ಕಳೆದಂತೆ ಪದ್ಧತಿಯು ನಿಧಾನವಾಗಿ ಅದರ ಜನಪ್ರಿಯತೆಯನ್ನು ಕಳೆದುಕೊಳ್ಳುವುದರ ಜೊತೆಗೆ ಪ್ರಸ್ತುತದಲ್ಲಿ ಇದು ವಿರಳವಾಗಿ ಬಳಕೆಯಲ್ಲಿದೆ.
ಇವನ್ನೂ ನೋಡಿ
[ಬದಲಾಯಿಸಿ]- ಅಕ್ವೇರಿಯಂ - ವಿವಿಧ ಬಗೆಯ ಅಕ್ವೇರಿಯಂಗಳು
- ಕಾರ್ಪ್
- ಸಿಪ್ರಿನಿಡ್ - ಕಾರ್ಪ್ ಕುಟುಂಬದ ಇತರ ಸದಸ್ಯರು
- ಗೋಲ್ಡ್ ಫಿಷ್ ನೊಡನೆ ಹೊಂದಿಕೆಯಾಗುವಂತಹ ಸಸ್ಯ ಜಾತಿಗಾಗಿ ಸಸ್ಯ ಜಾತಿಗೆ ಸೇರಿದಂತಹ ತಾಜಾ ನೀರಿನ ಅಕ್ವೇರಿಯಂಗಳ ಪಟ್ಟಿ
ಟಿಪ್ಪಣಿಗಳು ಹಾಗು ಉಲ್ಲೇಖಗಳು
[ಬದಲಾಯಿಸಿ]- ↑ "Gulf States Marine Fisheries Commission: Fact Sheet. Carassius auratus (Linnaeus, 1758)". Archived from the original on 2008-03-24. Retrieved 2010-07-13.
- ↑ ೨.೦ ೨.೧ Fishbase: Carassius auratus (Linnaeus, 1758)
- ↑ "Goldfish". Ocean Park. Retrieved 2009-11-16.
- ↑ ೪.೦ ೪.೧ "Background information about goldfish". Retrieved 2006-07-28.
- ↑ ನ್ಯೂಟ್ರಫಿನ್ ಅಕ್ವಟಿಕ್ ನ್ಯೂಸ್, ಸಂಚಿಕೆ#4 Archived 2007-04-13 ವೇಬ್ಯಾಕ್ ಮೆಷಿನ್ ನಲ್ಲಿ., 2004, ರಾಲ್ಫ್ C. ಹೇಗನ್, Inc. (USA) ಮತ್ತು ರಾಲ್ಫ್ C. ಹೇಗನ್ ಕಾರ್ಪ್. (ಮಾಂಟ್ರಿಯಲ್, ಕೆನಡಾ)
- ↑ "goldfish". Archived from the original on 2009-09-01. Retrieved 2006-07-21.
- ↑ Brunner, Bernd (2003). The Ocean at Home. New York: Princeton Architectural Press. ISBN 1-56898-502-9.
- ↑ Mulertt, Hugo (1883). The Goldfish And Its Systematic Culture With A View To Profit. Retrieved 2009-07-07.
- ↑ "ಗೋಲ್ಡ್ ಫಿಷ್". Archived from the original on 2010-07-28. Retrieved 2010-07-13.
- ↑ ಗೋಲ್ಡ್ ಫಿಷ್
- ↑ Les Pearce. ""Common Gold Fish"". Aquarticles. Archived from the original on 28 ಮೇ 2006. Retrieved 20 June 2006.
- ↑ "Poissons rouges: la mémoire dans l'eau". Revue du Palais de la découverte. 217. April 1994. 1994ರಲ್ಲಿ ಪಲೈಸ್ ಡೆ ಲಾ ಡೆಕೌವೆರ್ಟೆ ವಿಜ್ಞಾನ ಸಂಗ್ರಾಹಲಯದಲ್ಲಿ ನಡೆದ ಒಂದು ಸಾರ್ವಜನಿಕ ಪ್ರಯೋಗ.
- ↑ ಕಳೆದ 2003ರಲ್ಲಿ ಪ್ಲೇಮೌತ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಸೈಕಾಲಜಿ ನಡೆಸಿಂತಹ ಇತ್ತೀಚಿನ ಸಂಶೋಧನೆ. ಆಹಾರವನ್ನು ಪಡೆಯಲು ಅವುಗಳು ಮೀಟು ಕೋಲನ್ನು ನೂಕುವಂತೆ ಅವುಗಳಿಗೆ ತರಬೇತಿಯನ್ನು ನೀಡಲಾಗಿತ್ತು; ಮೀಟುಕೋಲನ್ನು ದಿನಕ್ಕೆ ಒಂದು ಗಂಟೆ ಮಾತ್ರ ಕಾರ್ಯನಿರ್ವಹಿಸುವಂತೆ ಅಳವಡಿಸಲಾಗಿರುತ್ತದೆ, ಮೀನು ಬಹಳ ಬೇಗನೆ ಅದನ್ನು ಸರಿಯಾದ ಸಮಯಕ್ಕೆ ಸಕ್ರಿಯಗೊಳಿಸುವುದು ಹೇಗೆಂಬುದನ್ನು ಕಲಿತುಕೊಂಡಿತು.
- ↑ ದಿಡಿಸ್ಕವರಿ ಚಾನಲ್ನ ಮಿತ್ ಬಸ್ಟರ್ಸ್ ಎಂಬ ಕಾರ್ಯಕ್ರಮವು, ಗೋಲ್ಡ್ ಫಿಷ್ ಕೇವಲ 3 ನಿಮಿಷಗಳ ನೆನಪಿನ ಶಕ್ತಿಯನ್ನು ಹೊಂದಿರುತ್ತದೆ ಎಂಬ ಸಮಕಾಲೀನ ಆಖ್ಯಾನವನ್ನು ಪರೀಕ್ಷಿಸಿದರು. ಜೊತೆಗೆ ಸಾಮಾನ್ಯವಾಗಿ ಗೋಲ್ಡ್ ಫಿಷ್ ಹೆಚ್ಚು ನೆನಪಿನ ಶಕ್ತಿಯನ್ನು ಹೊಂದಿರುತ್ತವೆ ಎಂಬ ಪರಿಗಣನೆಯನ್ನು ಸಾಬೀತಿಪಡಿಸುವಲ್ಲಿ ಯಶಸ್ವಿಯಾದರು. ಈ ಪ್ರಯೋಗವು, ಒಂದು ಜಟಿಲ ಮಾರ್ಗದಲ್ಲಿ ಚಲಿಸುವಂತೆ ಮೀನುಗಳಿಗೆ ತರಬೇತಿ ನೀಡುವ ಪ್ರಕ್ರಿಯೆಯನ್ನೂ ಒಳಗೊಂಡಿತ್ತು. ಒಂದು ತಿಂಗಳ ನಂತರವೂ ಅವುಗಳು ಜಟಿಲ ಮಾರ್ಗದ ಸರಿಯಾದ ದಾರಿಯನ್ನು ನೆನಪಿನಲ್ಲಿಟ್ಟುಕೊಂಡು ಚಲಿಸುತ್ತವೆಂಬುದನ್ನು ಸ್ಪಷ್ಟಪಡಿಸಲಾಯಿತು.[೧] Archived 2010-07-16 ವೇಬ್ಯಾಕ್ ಮೆಷಿನ್ ನಲ್ಲಿ.ಮಿತ್ ಬಸ್ಟರ್ಸ್ ಫಲಿತಾಂಶ: ಗೋಲ್ಡ್ ಫಿಷ್ ಗಳ ನೆನಪಿನ ಶಕ್ತಿ ಕೇವಲ ಮೂರು ನಿಮಿಷ. Archived 2010-07-16 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಕಳೆದ 2000ದಲ್ಲಿ ಆರಂಭಗೊಂಡ ಒಂದು ಅಧ್ಯಯನದ ಪ್ರಕಾರ
- ↑ ಸೆಂಡ್ ಯುವರ್ ಫಿಷ್ ಟು ಸ್ಕೂಲ್.ABC ನ್ಯೂಸ್: ಗುಡ್ ಮಾರ್ನಿಂಗ್ ಅಮೇರಿಕ. ಪೋಸ್ಟೆಡ್: ಮೇ 7, 2008.
- ↑ "ಆರ್ಕೈವ್ ನಕಲು". Archived from the original on 2010-03-12. Retrieved 2010-07-13.
- ↑ Knight, Sam (2005-10-26). "Rome bans goldfish bowls, orders dog owners on walks - World - Times Online". The Times. London. Archived from the original on 2006-01-05. Retrieved 2006-07-21.
- ↑ "Defra, UK - Animal Health and Welfare - Animal Welfare - Animal Welfare Bill". Archived from the original on 2004-07-22. Retrieved 2006-07-21.
- ↑ BBC ನ್ಯೂಸ್ ಆನ್ ಲೈನ್ - ಗೋಲ್ಡ್ ಫಿಷ್ ಆರ್ ನೊ ಲಾಂಗರ್ ಟು ಬಿ ಗೀವನ್ ಆಸ್ ಪ್ರೈಸ್
- ↑ BBC ನ್ಯೂಸ್ ಆನ್ ಲೈನ್ - ಬ್ಯಾನ್ ಆನ್ ಗೋಲ್ಡ್ ಫಿಷ್ ಪ್ರೈಸಸ್ 'ಡ್ರಾಪಡ್'
- ↑ "Swallowing Goldfish". Retrieved 2006-07-21.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- "Carassius auratus". Integrated Taxonomic Information System.
- Froese, Rainer, and Daniel Pauly, eds. (2004). Carassius auratus auratus in FishBase. September 2004 version.
- ದಿ ಕಾಮನ್ ಗೋಲ್ಡ್ ಫಿಷ್ ಬೈ ಲೆಸ್ ಪಿಯರ್ಸ್ Archived 2006-05-28 ವೇಬ್ಯಾಕ್ ಮೆಷಿನ್ ನಲ್ಲಿ.
- ಗೋಲ್ಡ್ ಫಿಷ್ ನ ಬಗ್ಗೆ ಹಿನ್ನೆಲೆ ಮಾಹಿತಿ
- ಕಾರ್ಷಿಯಸ್ ಔರಾಟಸ್ Archived 2009-09-01 ವೇಬ್ಯಾಕ್ ಮೆಷಿನ್ ನಲ್ಲಿ.
- ಅತ್ಯಂತ ಹಳೆಯ ಗೋಲ್ಡ್ ಫಿಷ್, ಗೋಲ್ಡಿಯ ಮೇಲಿನ ಲೇಖನ.
- ವಿಧಗಳು
- ಗೋಲ್ಡ್ ಫಿಷ್ ಪುಟಗಳು -ಹೊಬಿಯಿಸ್ಟ್ ಎಂಬ ಅಂತರಜಾಲವು ಗೋಲ್ಡ್ ಫಿಷ್ ನ ಮಟ್ಟಗಳು, ಗೋಲ್ಡ್ ಫಿಷ್ ನ ವಿವಿಧ ಜಾತಿಗಳ ಬಗ್ಗೆ, ಗೋಲ್ಡ್ ಫಿಷ್ ನ ಕಾಳಜಿಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
- ಗೋಲ್ಡ್ ಫಿಷ್ ನ ಉಪಜಾತಿಗಳು: ಪುಟ 1 Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ. ಪುಟ 2 Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ.
- ಬ್ರಿಸ್ಟಲ್ ಅಕ್ವೇರಿಸ್ಟ್ ಸೊಸೈಟಿ - ಗೋಲ್ಡ್ ಫಿಷ್ ನ ವಿವಿಧ ಉಪಜಾತಿಗಳ ವರ್ಣಚಿತ್ರಗಳು ಹಾಗು ಅವುಗಳ ಬಗ್ಗೆ ವಿವರಣೆ
- ಗೋಲ್ಡ್ ಫಿಷ್ ಜೆನೆಟಿಕ್ಸ್ Archived 2006-03-07 ವೇಬ್ಯಾಕ್ ಮೆಷಿನ್ ನಲ್ಲಿ. - ಗೋಲ್ಡ್ ಫಿಷ್ ಗಳ ತಳಿವಿಜ್ಞಾನದ ಮಾಹಿತಿಯ ಜೊತೆಗೆ, ಅದರ ಪ್ರವರ್ತಕ ಕ್ರೂಷನ್ ಕಾರ್ಪ್ ನ ಬಗ್ಗೆ ಮಾಹಿತಿ ನೀಡಲಾಗಿದೆ, ಇದಲ್ಲದೆ ಹೇಗೆ ಅವುಗಳ ಮೂಲ ತಳಿವಿಜ್ಞಾನ ಸಮೂಹವು ಆಧುನಿಕ ಗೋಲ್ಡ್ ಫಿಷ್ ನ ಉಪಜಾತಿಗಳ ಹುಟ್ಟಿಗೆ ಕಾರಣವಾಗಿದೆ.
- ಕಾಳಜಿ
- ಕೊಕೋಸ್ ಗೋಲ್ಡ್ ಫಿಷ್ ವಲ್ಡ್ Archived 2010-10-31 ವೇಬ್ಯಾಕ್ ಮೆಷಿನ್ ನಲ್ಲಿ. - ಇದು ಚರ್ಚಾವೇದಿಕೆ, ವರ್ಣಚಿತ್ರಗಳು, ಮಾಹಿತಿ ಹಾಗು ಒಂದು ಸ್ನೇಹ ಸಮುದಾಯದ ಮೂಲಕ ಗೋಲ್ಡ್ ಫಿಷ್ ನ ಕಾಳಜಿಗೆ ಸಮರ್ಪಿತವಾದ ಅಂತರಜಾಲ.
- ಗೋಲ್ಡ್ ಫಿಷ್ ಇನ್ಫೊ Archived 2010-05-02 ವೇಬ್ಯಾಕ್ ಮೆಷಿನ್ ನಲ್ಲಿ. ಗೋಲ್ಡ್ ಫಿಷ್ ಗೆ ವಹಿಸಬೇಕಾದ ಕಾಳಜಿಯ ಬಗ್ಗೆ ಮಹತ್ವದ ಮಾಹಿತಿ
- ಗೋಲ್ಡ್ ಫಿಷ್ ನ ಕಾಳಜಿಯ ಬಗೆಗಿರುವ ವಿಕಿಬುಕ್
- ಗೋಲ್ಡ್ ಫಿಷ್ ನ ರೋಗಗಳು Archived 2010-12-03 ವೇಬ್ಯಾಕ್ ಮೆಷಿನ್ ನಲ್ಲಿ.
- ಮೀನು ಸಸ್ಯಗಳು
- ನಿಮ್ಮ ಗೋಲ್ಡ್ ಫಿಷ್ ನ ಪಾಲನೆ Archived 2010-03-10 ವೇಬ್ಯಾಕ್ ಮೆಷಿನ್ ನಲ್ಲಿ.
- ಇತರೆ
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Domesticated animals
- Articles with 'species' microformats
- Taxobox articles missing a taxonbar
- Articles with unsourced statements from June 2010
- Articles with invalid date parameter in template
- Articles with unsourced statements from March 2010
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles containing Japanese-language text
- Articles with unsourced statements from April 2010
- Articles with unsourced statements from December 2009
- Commons link is on Wikidata
- ಗೋಲ್ಡ್ ಫಿಷ್
- ತಣ್ಣೀರಿನ ಅಕ್ವೇರಿಯಂ ಮೀನು
- ಮೀನಿನ ಪಾಲನೆ