ವಿಷಯಕ್ಕೆ ಹೋಗು

ಗೂಗಲ್ ವಿಶ್ಲೇಷಣೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Google Analytics
Google Analytics logo
ಅಭಿವೃದ್ಧಿಪಡಿಸಿದವರುGoogle
ಕಾರ್ಯಾಚರಣಾ ವ್ಯವಸ್ಥೆCross-platform (web-based application)
ವಿಧStatistics, Analysis
ಅಧೀಕೃತ ಜಾಲತಾಣhttp://google.com/analytics

ಗೂಗಲ್ ವಿಶ್ಲೇಷಣೆಗಳು (GA) ಎಂಬುದು ಗೂಗಲ್ ನವರು ಒದಗಿಸುತ್ತಿರುವ ಶುಲ್ಕರಹಿತ ಮುಕ್ತ ಸೇವೆ, ಇದರಲ್ಲಿ ಒಂದು ವೆಬ್‌ಸೈಟ್ ಗೆ ಭೇಟಿ ಕೊಡುವವರ ಬಗ್ಗೆ ವಿವರವಾದ ಅಂಕಿ ಅಂಶ ಗಳನ್ನು ವಿಕಾಸಗೊಳಿಸಿ ಕೊಡುತದೆ. ಗೂಗಲ್ ವಿಶ್ಲೇಷಣಾಕರ್ತರ ಗಮನ ವ್ಯಾಪಾರಸ್ಥರನ್ನು ಸೆಳೆವ ಉತ್ಪನ್ನಗಳ ಮೇಲೆಯೇ ಇರುತ್ತದೆ, ವೆಬ್‌ಮಾಸ್ಟರ್ಸ್ ಮತ್ತು ತಂತ್ರಜ್ಞರು ಇದನ್ನು ವಿರೋಧಿಸಿದರೂ ಅವರಿಂದಲ್ಲೇ ವೆಬ್ ಅನಾಲಿಟಿಕ್ಸ್ ಉದ್ಯಮ ಮೂಲಭೂತವಾಗಿ ಬೆಳೆಯುವುದು. ಇದೊಂದು, ವೆಬ್‌ಸೈಟ್‌ಗಳ ಬಗ್ಗೆ ಅದನ್ನು ಭೇಟಿ ಮಾಡುವವರ ಬಗ್ಗೆ ಅಂಕಿ ಅಂಶಗಳನ್ನು ನೀಡುವ ಸೇವೆಯಾಗಿರುತ್ತದೆ,[] ಇದನ್ನು ವ್ಯಾಪಕವಾಗಿ ಬಳಸುವುದು ಕಂಡು ಬರುತ್ತದೆ, ಪ್ರಸ್ತುತ ಇದರ ಬಳಕೆ 10,000 ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಸುಮಾರು 57%ರಷ್ಟು ಇದೆ.[]

ಎಲ್ಲಾ ರೀತಿಯ ಉಲ್ಲೇಖದಾರರಿಂದಲ್ಲೂ ವೆಬ್‌ಸೈಟ್‌ಗೆ ಭೇಟಿ ಕೊಡುವವರ ಬಗ್ಗೆ GAಯು ಜಾಡು ಹಿಡಿಯ ಬಲ್ಲುದಾಗಿರುತ್ತದೆ, ಅವುಗಳಲ್ಲಿ, ಸರ್ಚ್ ಇಂಜಿನ್ ಗಳಿಂದ, ಜಾಹೀರಾತು ಪ್ರದರ್ಶಕಗಳಿಂದ, ಪೇ-ಪರ್-ಕ್ಲಿಕ್ ಜಾಲಗಳಿಂದ, ಇಮೇಲ್ ಮಾರ್ಕೆಟಿಂಗ್ ಮತ್ತು ದಾಖಲೆಗಳೊಳಗಿನ PDF ಲಿಂಕ್‌ಗಳ ಡಿಜಿಟಲ್ ಕೊಲಾಟೆರಲ್‌ಗಳು ಮುಂತಾದ ಕಡೆಯಿಂದಲ್ಲೂ ಸೇರಿರುತ್ತದೆ.

ಆಡ್‌ಪದ ಗಳಿಂದ ಸಂಯೋಜಿಸಿರುವುದರಿಂದ, ಬಳಸುವವರು ಲ್ಯಾಂಡಿಂಗ್ ಪೇಜ್ ಕ್ವಾಲಿಟಿ ಮತ್ತು ಪರಿವರ್ತನೆಗಳು (ಗುರಿ)ಯನ್ನು ಬಳಸುತ್ತ ಆನ್‌ಲೈನ್ ವಿಮರ್ಶೆಯ ಅಭಿಯಾನವನ್ನು ಮಾಡಬಹುದಾಗಿದೆ. ಗುರಿಯೆಂದರೆ ಅದರಲ್ಲಿ ಮಾರಾಟ, ತಲೆಬರಹದ ವಿಕಾಸ, ಒಂದು ನಿರ್ದಿಷ್ಟ ಪುಟವನ್ನು ವೀಕ್ಷಿಸುವುದು ಅಥವಾ ನಿರ್ದಿಷ್ಟ ಫೈಲೊಂದನ್ನು ಡೌನ್‌ಲೋಡ್ ಮಾಡುವುದು-ಸೇರಿರುತ್ತದೆ. ಇವೆಲ್ಲವನ್ನು ನಾಣ್ಯೀಕರಿಸಲೂ ಬಹುದು. ಈ GA ಅನ್ನು ಬಳಸುವುದರಿಂದ ವ್ಯಾಪಾರಸ್ಥರು ಯಾವ ಜಾಹೀರಾತು ಹೇಗೆ ಕಾರ್ಯನಿರ್ವಹಸುತ್ತಿದೆ ಯಾವುದು ನಿರ್ವಹಿಸುತ್ತಿಲ್ಲ ಎಂದು ವಿವರ ಪಡೆಯಬಹುದು ಹೀಗೆ ಮಾಡುವುದರಿಂದ ಯಾವ ಅಭಿಯಾನಕ್ಕೆ ಭರವಸೆ ಇಡಬಹುದು ಅಥವಾ ಯಾವುದನ್ನು ತೆಗೆದು ಹಾಕಬಹುದೆಂದು ತೀರ್ಮಾನಕ್ಕೆ ಬರಲು ಅನುಕೂಲವಾಗುತ್ತದೆ.

ಸಮಾನ್ಯ ಬಳಕೆಯದಾರರಿಗೆ GAಯು ತೊಡಗಿಸಿಕೊಳ್ಳುವುದು ದೊಡ್ಡ ಮಟ್ಟದ ಡ್ಯಾಷ್‌ಬೋರ್ಡ್-ಶೈಲಿಯ ಮಾಹಿತಿಯನ್ನು ತೋರಿಸುವ ಉದ್ದೇಶದಿಂದ, ಮತ್ತು ವರದಿಯ ಭಾಗದಲ್ಲಿ ಆಳವಾದ ಮಾಹಿತಿಯನ್ನೂ ಕೊಡುವುದಾಗಿದೆ. GA ವಿಶ್ಲೇಷಣದ ಬಳಕೆಯಿಂದ ಕಡಿಮೆ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಟಗಳನ್ನು ಫನ್ನಲ್ ವಿಶ್ಯೂಲೈಜೇಷನ್ ತಂತ್ರಗಾರಿಕೆಯಿಂದ ಗುರುತಿಸಬಹುದಾಗಿದೆ ಜೊತೆಗೆ ಯಾವ (ಉಲ್ಲೇಖದಾರರ ಕಡೆಯಿಂದ) ವೆಬ್‌ಸೈಟ್ ಭೇಟಿಗಾರರು ಬಂದಿರುತ್ತಾರೆ, ಎಷ್ಟು ಹೊತ್ತು ಅಲ್ಲಿದ್ದರು ಮತ್ತು ಅವರ ಭೌಗೋಳಿಕ ಸ್ಥಾನವೇನು ಎಂದು ತಿಳಿಯಬಹುದು. ಇದು, ಗ್ರಾಹಕ ಯಾವ ವಿಭಾಗಕ್ಕೆ ಸೇರುತ್ತಾನೆ ಎಂಬಂತಹ ಉನ್ನತ ಗುಣಲಕ್ಷಣಗಳನ್ನೂ ಕೂಡ ಒದಗಿಸುತ್ತದೆ.

ಬಳಕೆದಾರರು ಅಧಿಕೃತವಾಗಿ 50 ವೆಬ್‌ಸೈಟ್‌ಗಳ ಪಾರ್ಶ್ವಚಿತ್ರವನ್ನು ಕೂಡಿಸಬಹುದು. ಪ್ರತಿಯೊಂದು ಪಾರ್ಶ್ವಚಿತ್ರವು ಸಾಮಾನ್ಯವಾಗಿ ಒಂದು ವೆಬ್‌ಸೈಟ್ ಗೆ ಹೊಂದಿಕೆಯಾಗಿರುತ್ತದೆ. ಆಡ್‌ವರ್ಡ್ಸ್ ಅಭಿಯಾನಕ್ಕೆ ನಂಟು ಮಾಡುವವರೆಗೂ, ಮಾಸವೊಂದರಲ್ಲಿ 5 ದಶಲಕ್ಷ ಪುಟಗಳ ವೀಕ್ಷಣೆಗೆ (ಅಂದರೆ ಪ್ರತಿ ಸೆಕೆಂಡಿಗೆ 2 ಪುಟಗಳ ವೀಕ್ಷಣೆ)ಯ ಸೈಟ್‌ಗಳಿಗೆ ಇದು ಸೀಮಿತಗೊಂಡಿದೆ.[]

ಇತಿಹಾಸ

[ಬದಲಾಯಿಸಿ]

ಗೂಗಲ್ ಸೇವೆಯನ್ನು ಉರ್ಚಿನ್ ಸಾಫ್ಟ್ ವೇರ್ ಕಾರ್ಪೋರೇಷನ್ ನ ವಿಶ್ಲೇಷಣ ವ್ಯವಸ್ಥೆ, ಉರ್ಚಿನ್ ಆನ್ ಡಿಮ್ಯಾಂಡ್ ಅಭಿವೃದ್ಧಿಪಡಿಸಿರುತ್ತದೆ. (ಗೂಗಲ್ ಉರ್ಚಿನ್ ಸಾಫ್ಟ್ ವೇರ್ ಕಾರ್ಪೋರೇಷನ್ ಅನ್ನು ಏಪ್ರಿಲ್ 2005ರಲ್ಲಿ ತನ್ನದಾಗಿಸಿಕೊಂಡಿತು). ಅಡಾಪ್ಟೀವ್ ಪಾಥ್ ಅವರಿಂದ ಐಡಿಯಾಗಳನ್ನು ತೆಗೆದುಕೊಂಡು ಅವರ ಉತ್ಪನ್ನವಾದ ’ಮೆಷ್ಯರ್ ಮ್ಯಾಪ್’ ಅನ್ನು ತಮ್ಮದಾಗಿಸಿಕೊಂಡು ಅದನ್ನು 2006ರಲ್ಲಿ ಪುನರ್ ವಿನ್ಯಾಸಗೊಳಿಸಿ ಗೂಗಲ್ ವಿಶ್ಲೇಷಣೆಯನ್ನು ಮಾಡುತ್ತಿದ್ದಾರೆ. [] ಗೂಗಲ್ ಅವರು ಇನ್ನೂ ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸುವ ಅಳವಡಿಸಬಹುದಾದ ಉರ್ಚಿನ್ ಸಾಫ್ಟ್‌ವೇರ್ ಅನ್ನು ವ್ಯಾಲ್ಯೂ-ಆಡೆಡ್ ರೀಸೆಲ್ಲರ್ ಎನ್ನುವ ಜಾಲದ ಮೂಲಕ ಮಾರುತ್ತಿದ್ದಾರೆ; ಏಪ್ರಿಲ್ 2008ರಲ್ಲಿ ಉರ್ಚಿನ್ 6 ಬಿಡುಗಡೆ ಆಯಿತು.

ಒಪ್ಪಂದಕ್ಕೆ ಸಹಿ ಹಾಕುವವರಿಗಾಗಿ ಗೂಗಲ್-ಬ್ರಾಂಡಡ್ ವರಸೆಯು ನವೆಂಬರ್ 2005ರಲ್ಲಿ ಆಚೆಬಂದಿತು. ಒಂದೇ ವಾರದ ನಂತರ, ತೀರಾ ಅಧಿಕವಾದ ಬೇಡಿಕೆಯ ಕಾರಣ, ಹೊಸದಾಗಿ ಒಪ್ಪಂದಕ್ಕೆ ಸಹಿ ಹಾಕಬೇಕೆನ್ನುವವರಿಗೆ ಇಲ್ಲವೆನ್ನಬೇಕಾಯಿತು. ವ್ಯವಸ್ಥೆಗೆ ಸಾಮರ್ಥ್ಯ ಸೇರಿದಂತೆಲ್ಲಾ, ಗೂಗಲ್‌ನವರು ಲಾಟರಿ-ಶೈಲಿಯ ಆಹ್ವಾನದ ಮಾದರಿಯನ್ನು ಅಳವಡಿಸಿದರು. ಆಗಸ್ಟ್ 2006ಕ್ಕೂ ಮುಂಚೆ ಗೂಗಲ್‌ನವರು ಸರ್ವರ್ ಸಾಧ್ಯತೆಗಳನ್ನು ನೋಡಿಕೊಂಡು ತಂಡೋಪಾದಿಯಲ್ಲಿ ಆಹ್ವಾನವನ್ನು ಕಳುಹಿಸುತ್ತಿದ್ದರು; ಆದರೆ ಆಗಸ್ಟ್ ಮಧ್ಯದಿಂದೀಚೆಗೆ ಗೂಗಲ್ ಜಾಹೀರಾತನ್ನು ಉಪಯೋಗಿಸಲಿ ಬಿಡಲಿ ಎಲ್ಲಾ ಬಳಕೆದಾರರಿಗೆ ಸೇವೆಯು ಪೂರ್ಣವಾಗಿ ಲಭ್ಯವಾಗುತ್ತಿದೆ. ಮೇ 17, 2007ರಂದು ಹೊಸ ವರಸೆ ಯೂಸರ್ ಇಂಟರ್‌ಫೇಸ್ ಅನ್ನು ಬಿಡುಗಡೆ ಮಾಡಿದರು.[]

ಡಿಸೆಂಬರ್ 2007ರಲ್ಲಿ ಗೂಗಲ್‌ನವರು ಹೊಸ ga.js ಪೇಜ್ ಅನ್ನು ಜೊತೆಗೆ ಕೊಟ್ಟು ಎಲ್ಲಾ ಬಳಕೆದಾರರಿಗೆ ತಮ್ಮ ಎಲ್ಲಾ ಹೊಸ ಖಾತೆಗಳನ್ನು ಮತ್ತು ಹೊಸ ಪಾರ್ಶ್ವಗಳನ್ನು ತಮ್ಮ ಹೊಸ ಡೊಮೈನ್‌ಗಳಲ್ಲಿ ಬಳಸಲು ಸೂಚಿಸಿತು. ಪ್ರಸ್ತುತ ಕಾರ್ಯನಿರ್ವಹಿಸುವ urchin.js ಪುಟವೂ ಕೂಡ ತನ್ನ ಕಾರ್ಯ ಮುಂದುವರೆಸುತ್ತದೆ, ಆದಾಗ್ಯೂ ಈ ಹೊಸ ಟ್ಯಾ‌ಗ್‌ನಿಂದ, ಸೈಟ್ ಮಾಲೀಕರು ತೀರಾ ಇತ್ತೀಚಿನ-ಹೊಸದಾದ ಟ್ರ್ಯಾಕಿಂಗ್ ಕಾರ್ಯವನ್ನು ಮಾಡುವ ಸೌಲಭ್ಯವನ್ನು ಹೊಂದಬಹುದು, ಇದರಲ್ಲಿ ಬಹುಸಂಖ್ಯೆಯ ಗ್ರಾಫ್ ಅಂಕಿಅಂಶಗಳನ್ನು ಹಾಗೂ ಒಂದೇ ಸರ್ತಿಗೆ ಇ-ಕಾಮರ್ಸ್ ವಹಿವಾಟುಗಳನ್ನು ಇನ್ನೂ ಚನ್ನಾಗಿ ಓದಬಲ್ಲ ರೀತಿಯಲ್ಲಿ ಟ್ರ್ಯಾಕ್ ಮಾಡಬಹುದು.[]

ಉತ್ಪನ್ನದ ವೇದಿಕೆ ಬೀಟಾ ಆಗದ ಕಾರಣ ಹೊಸ ಬೀಟಾದ ಗುಣವಿಶೇಷಣಗಳನ್ನು ಕಾಲದಿಂದ ಕಾಲಕ್ಕೆ ಸೇರಿಸಲಾಗುತ್ತದೆ.

ತಂತ್ರಜ್ಞಾನ

[ಬದಲಾಯಿಸಿ]

ಗೂಗಲ್ ವಿಶ್ಲೇಷಣೆಗಳನ್ನು "ಪೇಜ್ ಟ್ಯಾಗ್‌ನಲ್ಲಿ" ಅಥವಾ "ಪುಟದ ಅನುಬಂಧದಲ್ಲಿ" ಸೇರಿಸಲಾಗಿರುತ್ತದೆ. ಇದನ್ನು ಗೂಗಲ್ ಅನಾಲಿಟಿಕ್ಸ್ ಟ್ರ್ಯಾಕಿಂಗ್ ಕೋಡ್ ಎಂದು ಉದ್ಧರಿಸಲಾಗಿದೆ (GATC) ಮತ್ತು ಇದನ್ನು ಜಾವಾಸ್ಕ್ರಿಪ್ಟ್ ಕೋಡ್‌ನಲ್ಲಿ ಆಯ್ದಿಟ್ಟ ತುಣುಕಿನ ಭಾಗವೆಂಬಂತೆ ಮರೆಮಾಚಿ ಇಟ್ಟಿರುವುದಾಗಿರುತ್ತದೆ ಹಾಗು ಇದನ್ನು ಬಳಕೆದಾರಳು/ನು ತನ್ನ ವೆಬ್‌ಸೈಟ್‌ನ ಪ್ರತಿ ಪುಟಕ್ಕೂ ಅಳವಡಿಸಿಕೊಳ್ಳಬಹುದು. ಈ ಕೋಡ್ ಒಂದು ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ಇದು ಭೇಟಿಗಾರರ ಮಾಹಿತಿಯನ್ನು ಸಂಗ್ರಹಿಸಿ ಗೂಗಲ್ ಡಾಟಾ ಕಲೆಕ್ಷನ್ ಸರ್ವರ್‌ಗಳಿಗೆ ಸಂಸ್ಕರಣಕ್ಕಾಗಿ ಕಳುಹಿಸುತ್ತದೆ. ಅಂಕಿಅಂಶಗಳ ಸಂಸ್ಕರಣವು ಗಂಟೆಗೊಮ್ಮೆ ನಡೆಯುತ್ತದೆ ಆದಾಗ್ಯೂ ಅದು ರೀಯಲ್ ಟೈಂಗೆ ಬರಲು 3ರಿಂದ 4 ಗಂಟೆ ಹಿಡಿಯುತ್ತದೆ. ಏನೇ ಆಗಲಿ, ಗೂಗಲ್ ನೌಕರನ ಪ್ರಕಾರ ಕಾಮೆಂಟ್ ಆನ್ ಎ ವೆಬ್ ಅನಾಲಿಟಿಕ್ಸ್ ಬ್ಲಾಗ್ Archived 2011-07-17 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಸೂಚಿಸಿರುವಂತೆ ಎಲ್ಲಾ ಮಾಹಿತಿಗಳು 12 ಗಂಟೆಯ ಒಳಗೆ ಸಂಸ್ಕರಿಸಲಾಗಿದೆ ಎಂದು ಹೇಳಲು ಆಗುವುದಿಲ್ಲ.

ಕಾರ್ಯನಿರ್ವಹಿಸಲು, GATC ಗೂಗಲ್ ವೆಬ್‌ಸರ್ವರ್ ನಿಂದ ದೊಡ್ಡ ಫೈಲನ್ನು ತುಂಬಿಸಿಕೊಳ್ಳಬೇಕು ಆನಂತರ ಅದನ್ನು ಮಾರ್ಪಡಿಸಹುದಾದ ಬಳಕೆದಾರರ ಖಾತೆ ಸಂಖ್ಯೆಯೊಡನೆ ಒಂದುಗೂಡಿಸಬೇಕಾಗುತ್ತದೆ. ದೊಡ್ಡ ಫೈಲ್ (ಪ್ರಸ್ತುತ ga.js ಎಂದು ಕರೆಯಲ್ಪಡುವುದು) ಅಂದಾಜು 18 KB ಗಾತ್ರದಲ್ಲಿರುತ್ತದೆ ಮತ್ತು ಇದನ್ನು ಒಂದೇ ಸಾರಿ ಆರಂಭದಲ್ಲಿ ಡೌನ್‌ಲೋಡ್ ಮಾಡಲು ಪ್ರಾರಂಭಿಸಿದರೆ ಅದು ಅವಧಿ ಪೂರ್ತಿ ಅವಿತ್ತಿಟ್ಟುಕೊಂಡಿರುತ್ತದೆ. ga.js ಕೋಡ್‌ಗಳ ಮುಖಾಂತರ ನೆರವೇರಿಸುವ GA ಗೂಗಲ್‌ನಿಂದ ಮಾಸ್ಟರ್ ಫೈಲನ್ನು ಬಳಸುತ್ತದೆ, ವೆಬ್‌ಸೈಟ್‌ನ ಭೇಟಿಗಾರ ಇದೇ ‌ಕೋಡ್ ನಿರ್ವಹಣೆಯಲ್ಲಿ ಹಿಂದೆ ಭೇಟಿ ಮಾಡಿದ ವೆಬ್‌ಸೈಟ್‌ನ ಫೈಲನ್ನು ಕೂಡ ಅವಿತ್ತಿಟ್ಟುಕೊಳ್ಳುತ್ತದೆ. ಪರಿಣಾಮವಾಗಿ ವೆಬ್‌ಪುಟದ ಮೇಲ್ಗಡೆ ಇರಿಸಲಾಗಿರುವ GATC ಅನ್ನು ಕನಿಷ್ಠದಲ್ಲಿ ಇರಿಸಲಾಗಿರುತ್ತದೆ.

ಮಾಹಿತಿಗಳನ್ನ ಗೂಗಲ್ ಸರ್ವರ್‌ಗಳಿಗೆ ಪ್ರಸಾರ ಮಾಡುವುದರ ಜೊತೆಗೆ, GATC ಕುಕೀಸ್ ಅನ್ನು ಪ್ರತಿ ವೆಬ್ ಭೇಟಿಗಾರರ ಕಂಪ್ಯೂಟರ್ ಮೇಲೆ ಅಳವಡಿಸಿರುತ್ತದೆ. ಇದು ಅನಾಮಿಕವಾದ ಮಾಹಿತಿಗಳನ್ನು ಶೇಕರಿಸಿರುತ್ತದೆ ಅವುಗಳಲ್ಲಿ ಭೇಟಿಗಾರರು ಹಿಂದೆ ಭೇಟಿ ಕೊಟ್ಟಿದ್ದರೆ ಅಥವಾ ಇದೇ ಮೊದಲ ಭೇಟಿಯೇ ಈಗಿನ ಭೇಟಿಯ ಕಾಲಾವಧಿ ಎಷ್ಟು? ಮತ್ತು ಯಾವ ವೆಬ್‌ಸೈಟ್ ಉಲ್ಲೇಖಿಸಿರುತ್ತದೆ ಅಥವಾ ಯಾವ ಅಭಿಯಾನದಿಂದ ಉದಾಹರಣೆಗೆ ಸರ್ಚ್ಇಂಜಿನ್, ಕೀವರ್ಡ್ಸ್, ಬ್ಯಾನರ್,ಇಮೇಲ್ ಇತ್ಯಾದಿಗಳಿಂದ ಬಂದಿರಲಾಗಿದೆ ಎಂಬ ಮಾಹಿತಿಗಳು ಇರುತ್ತದೆ.

ಮಿತಿಗಳು

[ಬದಲಾಯಿಸಿ]

ಅನೇಕ ಜಾಹೀರಾತು ಶೋಧಕಗಳು ಮತ್ತು ವಿಸ್ತರಣೆಗಳು (ಫೈರ್‌ಫಾಕ್ಸ್‌ನ ಆಡ್‌ಬ್ಲಾಕ್ ಮತ್ತು ನೋಸ್ಕ್ರಿಪ್ಟ್ ಮುಂತಾದವು) ಗತಕ್ ಅನ್ನು ತಡೆಹಿಡಿಯಬಲ್ಲವು. ಇದು ದಟ್ಟಣೆಯನ್ನು ಮತ್ತು ಬಳಸುವವರು ಟ್ರ್ಯಾಕ್ ಆಗುವುದನ್ನು ತಡೆಯುತ್ತದೆ ಮತ್ತು ಇದರಿಂದಾಗಿ ಶೇಖರಿಸಲ್ಪಟ್ಟ ಮಾಹಿತಿಯಲ್ಲಿ ತೂತುಗಳು ಕಂಡು ಬರುತ್ತದೆ. ಜೊತೆಗೆ, ಟೋರ್ ನಂಥ ಗೋಪ್ಯತೆ ಜಾಲಗಳು ಬಳಕೆದಾರರ ನೈಜ ಸ್ಥಳವನ್ನು ಮತ್ತು ಹಾಜರಿರುವ ಅಸಿಂಧು ಭೌಗೋಳಿಕ ಮಾಹಿತಿಯನ್ನು ಮುಸುಕು ಮಾಡುತ್ತದೆ. ಈ ಗುಣ ವಿಶೇಷಣಗಳನ್ನು ನಿಲ್ಲಿಸಿಬಿಡಲು ಕೆಲವು ಬಳಕೆದಾರರಲ್ಲಿ ಜಾವಾಸ್ಕ್ರಿಪ್ಟ್-ಎನೇಬಳ್ಡ್/ಕ್ಯಾಪಬಲ್ ಬ್ರೌಸರ್‌ಗಳು ಇರುವುದಿಲ್ಲ. ಆದಾಗ್ಯೂ, ಕಡಿಮೆ ಶೇಖಡವಾರು ಭೇಟಿದಾರರಿಂದ ಮಾತ್ರ ಈ ಸೀಮಿತಗಳು ಪರಿಣಾಮ ಬೀರುತ್ತವೆ ಎಂದು ಪರಿಗಣಿಸಲಾಗಿದೆ.[]

ಮಾಹಿತಿಯ ನಿಖರತೆಯ ಮೇಲೆ ಬೀಳುವ ಅತ್ಯಂತ ದೊಡ್ಡ ಮಟ್ಟದ ಸಂಭಾವ್ಯ ಪರಿಣಾಮವೆಂದರೆ ಅದು ಬಳಕೆದಾರರು ಗೂಗಲ್ ವಿಶ್ಲೇಷಣೆಗಳ ಕುಕ್ಕೀಸ್ ಅನ್ನು ನಾಶಪಡಿಸಿದ್ದಲ್ಲಿ ಅಥವಾ ತಡೆಹಿಡಿದಿದ್ದಲ್ಲಿ.[] ಕುಕ್ಕೀಸ್ ಇದ್ದರೆ ಮಾತ್ರ GAಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಯಾವುದೇ ಒಬ್ಬ ವೆಬ್ ಬಳಕೆದಾರ ಕುಕ್ಕೀಸ್ ಅನ್ನು ನಾಶ ಪಡಿಸಿದ್ದಲ್ಲಿ ಅಥವಾ ತಡೆ ಹಿಡಿದಿದ್ದಲ್ಲಿ ಆಗ GA ಬಳಕೆದಾರರಿಗೆ ಆ ಭೇಟಿಯ ಮಾಹಿತಿ ನಷ್ಟವಾದಂತೆಯೇ. ಇದನ್ನು ತಡೆಹಿಡಿಯಲು ವೆಬ್‌ಸೈಟ್‌ನ ಮಾಲೀಕರಿಗೆ ಒಂದೇ ಒಂದು ಮಾರ್ಗವೆಂದರೆ ಒಳ್ಳೆ ಅಭ್ಯಾಸದ ನಿಯಮವನ್ನು ವೆಬ್‌ಸೈಟ್‌ನಲ್ಲಿ ಪಾಲಿಸುವುದು. ಇದರಲ್ಲಿ ವೆಬ್ ಭೇಟಿದಾರರು ಪಾರದರ್ಶಕತೆಯನ್ನು ಕಾಪಾಡಿದಂತೆ ಆಗುತ್ತದೆ. ಈ ಮಾಹಿತಿಯನ್ನು ಸಾಮಾನ್ಯವಾಗಿ ’ಖಾಸಗಿ ನಿಯಮದ ಹೇಳಿಕೆಯ ಪುಟ’ದಲ್ಲಿ ಇರಿಸಲಾಗಿರುತ್ತದೆ.

ಮಾಹಿತಿ ಸಂಗ್ರಹಕ್ಕಾಗಿ GAಯು ಟ್ಯಾಗಿಂಗ್ ತಂತ್ರಗಾರಿಕೆಯನ್ನು ಜಾವಾಸ್ಕ್ರಿಪ್ಟ್ ಮತ್ತು ಕುಕ್ಕೀಸ್‌ಗಳ ಸಂಯೋಜನೆಯ ಮುಖೇನ ಮಾಡುವುದರಿಂದ ಮೊಬೈಲ್‌ಗಳಿಂದ ಮಾಡಿದ ಬ್ರೌಸಿಂಗ್‌ನಲ್ಲಿ ವೆಬ್‌ಸೈಟ್‌ಗಳ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಸ್ಮಾರ್ಟ್ ಫೋನ್ಸ್ ಮತ್ತು PDAಗಳ ನವ ವಿಧಾನ ಫೋನ್‌ಗಳು ಮಾತ್ರ ಪ್ರಸ್ತುತ ಜಾವಾಸ್ಕ್ರಿಪ್ಟ್ ಅಥವಾ ಕುಕ್ಕೀಸ್ ಒಳಗೊಂಡಿರುತ್ತದೆ.

ಈ ಸೀಮಿತವು, ಪೇಜ್ ಟ್ಯಾಗ್ ಬಳಸಿ ಮಾಹಿತಿ ಸಂಗ್ರಹಿಸುವ ಎಲ್ಲಾ ವೆಬ್ ಅನಾಲಿಟೀಕ್ಸ್ ಸಲಕರಣೆಗಳಿಗೆ ತೊಂದರೆಯಾಗುತ್ತದೆ. ಅದು ಒಂದು ಸಣ್ಣ ಕೋಡ್‌ನ ತುಣುಕು (ಸಾಮಾನ್ಯವಾಗಿ ಜಾವಾಸ್ಕ್ರಿಪ್ಟ್) ಭೇಟಿಗಾರರ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.

ವರದಿಗಳನ್ನು ಉತ್ಪಾದಿಸುವುದಕ್ಕಾಗಿ ಮಾದರಿಗಳನ್ನು ಬಳಸುವುದಕ್ಕೆ GAಗೆ ಆಗದಿರುವುದೂ ಅದರ ಒಂದು ಸೀಮಾರೇಖೆಯೇ ಹೌದು. ಸರ್ವರ್ ಮೇಲಿನ ಒತ್ತಡವನ್ನು ಕಡಿತಗೊಳಿಸಲು ಮತ್ತು ಬಳಕೆದಾರರಿಗೆ ಅವರ ಪ್ರಶ್ನೆಗಳಿಗೆ ತಕ್ಷಣದ ತುಲನಾತ್ಮಕ ಪ್ರತಿಕ್ರಿಯೆಯನ್ನು ಕೊಡುವುದಕ್ಕಾಗಿ GAಯು ವರದಿಯನ್ನು 200,000ಕ್ಕೆ ಸೀಮಿತಗೊಳಿಸುತ್ತದೆ ಮತ್ತು ಇದರಲ್ಲಿ ಭೇಟಿಗಾರರ ಯದ್ವಾತದ್ವಾ ಮಾದರಿಗಳನ್ನು ಅದರ ಲೆಕ್ಕಾಚಾರಕ್ಕೆ ಆಯ್ದುಕೊಳ್ಳುತ್ತದೆ. ವೆಬ್ ಭೇಟಿದಾರರ ಅಂಕಿಅಂಶಗಳನ್ನು ನೀಡುವುದರಲ್ಲಿ ತಪ್ಪಾಗಬಹುದು ಆದರೆ ಇನ್ಯಾವುದೇ ಅಂಕಿಅಂಶಗಳ ತಪ್ಪನ್ನು GAಯ ವರದಿಯಲ್ಲಿ ಕಂಡು ಬರುವುದಿಲ್ಲ. ಸಣ್ಣ ವರ್ಗದ ಅಂಕಿಅಂಶಗಳಲ್ಲಿ ತಪ್ಪುಗಳು ದೊಡ್ಡ ಮಟ್ಟದಲ್ಲಿಯೇ ಇರುತ್ತವೆ.[]

ಬಗ್ಸ್ ಮತ್ತು ಬೆಂಬಲ

[ಬದಲಾಯಿಸಿ]

ಬೆಂಬಲಕ್ಕಾಗಿ ಬಳಕೆದಾರರಿಗೆ ಅನೇಕ ಆಯ್ಕೆಗಳಿವೆ : ಗೂಗಲ್‌ನವರು ನೇರ ಇಮೇಲ್ ಬೆಂಬಲವನ್ನು ಅನೇಕ ಭಾಷೆಗಳಲ್ಲಿ ಒದಗಿಸುತ್ತಾರೆ. ಬಳಕೆದಾರರು ಗೂಗಲ್ ವಿಶ್ಲೇಷಣಾಕಾರರಿಗೆ ಪ್ರಶ್ನೆಯನ್ನು ಕೇಳಲು ಸಲಹೆ ಮಾಡಲು ಸಂಪರ್ಕಿಸಬಹುದು ಅಥವಾ ವಿಷಯಗಳಲ್ಲಿ ಪ್ರವೇಶ ಪಡೆಯಬಹುದು. ಗೂಗಲ್ ವಿಶ್ಲೇಷಣಾ ಸಹಾಯಕ್ಕಾಗಿಯೇ ಗೂಗಲ್‌ನವರು ಒಂದು ವೆಬ್‌ಸೈಟ್ ಅನ್ನು ಕೂಡ ಒದಗಿಸಿರುತ್ತಾರೆ. ಇದಲ್ಲದೆ, ಗೂಗಲ್ ವಿಶ್ಲೇಷಣೆ ಬಳಕೆದಾರರಿಗೆಂದೇ ಗೂಗಲ್ ಹೆಲ್ಪ್ ಫಾರಂ ಅನ್ನು ಮಾಡಿರುತ್ತಾರೆ ಇದರಲ್ಲಿಯೂ ಬಳಕೆದಾರರು ತಮ್ಮ ಪ್ರಶ್ನೆಗೆ ಉತ್ತರವನ್ನು ಪಡೆಯಬಹುದು ಅಥವಾ ಹೊಸ ಪ್ರಶ್ನೆಗಳನ್ನೂ ಕಳುಹಿಸಬಹುದು.

ಗೋಪ್ಯತೆಯ ವಿಷಯಗಳು

[ಬದಲಾಯಿಸಿ]

ಗೂಗಲ್ ವಿಶ್ಲೇಷಣೆಯೂ ಸರ್ವತ್ರ ಅಸ್ತಿತ್ವದಲ್ಲಿರುವುದರಿಂದ ಅನೇಕ ಬಗೆಯ, ಗೋಪ್ಯತೆಯ ಪ್ರಶ್ನೆಯನ್ನು ಎತ್ತುತ್ತದೆ. ಯಾವಾಗಲಾದರು ಒಬ್ಬರು ಗೂಗಲ್ ವಿಶ್ಲೇಷಣೆಯನ್ನು ಭೇಟಿ ಮಾಡಿದಾಗ ಗೂಗಲ್ನವರು ಅವರ ಆ ಭೇಟಿಯನ್ನು ಬಳಕೆದಾರರ ಮಾಹಿತಿಯನ್ನು ಅವರ IP ವಿಳಾಸವನ್ನು ಬಳಸಿ ಟ್ರ್ಯಾಕ್ ಮಾಡುತ್ತದೆ. ಅನೇಕ ವೆಬ್‌ಸೈಟ್‌ಗಳು ಗೂಗಲ್ ವಿಶ್ಲೇಷಣೆಗಳನ್ನು ಬಳಸುವುದರಿಂದ ಗೂಗಲ್ ಯಾವುದೇ ವೆಬ್‌ಸೈಟ್‌ ಅನ್ನು ಟ್ರ್ಯಾಕ್ ಮಾಡಬಲ್ಲುದಾಗಿದೆ, ಊಹಾತ್ಮಕವಾಗಿ ವೆಬ್ ವೀಕ್ಷಣೆಯ ನಿಜವಾದ ಸಮಯವನ್ನು, ದಟ್ಟಣೆಯನ್ನು ಅದು ಸೂಚಿಸುತ್ತದೆ.

ಜೊತೆಗೆ ಗೂಗಲ್ ಒಂದು ಬ್ರೊಸರ್ ಪ್ಲಗಿನ್ ಅನ್ನು ಕೂಡ ಬಿಡುಗಡೆ ಮಾಡಿದೆ ಅದರಿಂದ ಗೂಗಲ್‌ಗೆ ರವಾನಿಸಲ್ಪಡುವ ಮಾಹಿತಿಯನ್ನು ನಿಲ್ಲಿಸಿಬಿಡಬಹುದು. [೧೦]

ಗೂಗಲ್ ವಿಶ್ಲೇಷಣೆಯನ್ನು ವೀಕ್ಷಿಸುವ ದೊಡ್ಡ ಮಟ್ಟದ ಸೈಟ್‌ಗಳು

[ಬದಲಾಯಿಸಿ]

10,000 ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಗೂಗಲ್ ವಿಶ್ಲೇಷಣೆಯನ್ನು 3813 ವೆಬ್‌ಸೈಟ್‌ಗಳು ಬಳಸುತ್ತವೆ ಅಂದರೆ 38.13%ರಷ್ಟು ಎಂದಾಯಿತು, (ಅಲೆಕ್ಸಾ ಇಂಟರ್‌ನೆಟ್‌ನವರು ಸಮೀಕ್ಷಿಸಿರುವ ಪ್ರಕಾರ) ಇದು ಜನಪ್ರಿಯತೆಯ ಆಧಾರದ ಮೇಲೆ ಶ್ರೇಣೀಕರಿಸಲಾಗಿದೆ ಎಂದು BackendBattles.com Archived 2010-04-14 ವೇಬ್ಯಾಕ್ ಮೆಷಿನ್ ನಲ್ಲಿ. ವರದಿ ಹೇಳುತ್ತದೆ.

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Usage of traffic analysis tools for websites". W3Techs. Retrieved 2009-12-10.
  2. "Google Analytics Usage Statistics". BuiltWith. Retrieved 2010-02-17.
  3. ಗೂಗಲ್ ಅನಾಲಿಟಿಕ್ಸ್ ಹೆಲ್ಪ್: ಡಸ್ ಗೂಗಲ್ ಅನಾಲಿಟಿಕ್ಸ್ ಹ್ಯಾವ್ ಎ ಪೇಜ್‌ವ್ಯೂ ಲಿಮಿಟ್?
  4. http://googleblog.blogspot.com/2006/02/here-comes-measure-map.html
  5. ಯು ನೌ ಹ್ಯಾವ್ ಅಸೆಸ್ ಟು ದಿ ನ್ಯೂ ಗೂಗಲ್ ಅನಾಲಿಟಿಕ್ಸ್! ಆಟ್ ದಿ ಗೂಗಲ್ ಅನಾಲಿಟಿಕ್ಸ್ ಬ್ಲಾಗ್
  6. ಅನೌನ್ಸಿಂಗ್ ನ್ಯೂ ಗ್ರಾಫಿಂಗ್ ಟೂಲ್ಸ್ ಆಂಡ್ ga.js ಟ್ರ್ಯಾಕಿಂಗ್
  7. EU ಆಂಡ್ US ಜಾವಾಸ್ಕ್ರಿಫ್ಟ್ ಡಿಸೇಬಲ್ಡ್ ಇಂಡೆಕ್ಸ್ ನಂಬರ್ಸ್ + ವೆಬ್ ಅನಾಲಿಟಿಕ್ಸ್ ಡಾಟಾ ಕಲೆಕ್ಷನ್ ಇಂಪ್ಯಾಕ್ಟ್
  8. [5] ^ ಇನ್‌ಕ್ರಿಜಿಂಗ್ ಅಕ್ಯೂರಸಿ ಫಾರ್ ಆನ್‌ಲೈನ್ ಬಿಜಿನೆಸ್ ಗ್ರೋತ್ - ಎ ವೆಬ್ ಅನಾಲಿಸ್ಟಿಕ್ಸ್ ಅಕ್ಯೂರಸಿ ವೈಟ್‌ಪೇಪರ್
  9. "ಸೆಗ್ಮಂಟೇಷನ್ ಆಪ್‌ಶ್ಯನ್ಸ್ ಇನ್ ಗೂಗಲ್ ಅನಾಲಿಟಿಕ್ಸ್". Archived from the original on 2009-06-22. Retrieved 2010-06-28.
  10. http://www.pcmag.com/article2/0,2817,2364174,00.asp "ಆಪ್ಟ್ ಔಟ್ ಆಫ್ ಗೂಗಲ್ ಅನಾಲಿಟಿಕ್ಸ್ ಡಾಟಾ ಗ್ಯಾದರಿಂಗ್ ವಿಥ್ ನ್ಯೂ ಬೀಟಾ ಟೂಲ್" ಬೈ ಕ್ಲೋಯಿ ಅಲ್ಬಾನಿಸೀಯಸ್ ಮೇ 25, 2010


ಪ್ಲಾಜಾ, ಬಿ (2009) ಮಾನಿಟರಿಂಗ್ ವೆಬ್ ಟ್ರಾಫಿಕ್ ಸೋರ್ಸ್ ಎಫೆಕ್ಟೀವ್‌ನೆಸ್ ವಿಥ್ ಗೂಗಲ್ ಅನಾಲಿಟೀಕ್ಸ್: ಆನ್ ಎಕ್ಸ್‌ಪರೀಮೆಂಟ್ ವಿಥ್ ಟೈಂ ಸೀರೀಸ್. ಅಸ್ಲೀಬ್ ಪ್ರೊಸೀಡಿಂಗ್ಸ್ , 61(5): 474–482. Article URL: [೧]

ಪ್ಲಾಜಾ, ಬಿ (2009) ಯೂಸಿಂಗ್ ಗೂಗಲ್ ಅನಾಲಿಟಿಕ್ಸ್ ಫಾರ್ ಮೆಷ್ಯೂರಿಂಗ್ ಇನ್‌ಲಿಂಕ್ಸ್ ಎಫೆಕ್ಟೀವ್‌ನೆಸ್. MPRA ಪೇಪರ್ ನಂ. 19676. Article URL: http://mpra.ub.uni-muenchen.de/19676/

ಬಾಹ್ಯ ಕೊಂಡಿಗಳು

[ಬದಲಾಯಿಸಿ]