ವಿಷಯಕ್ಕೆ ಹೋಗು

ಕೆಂದಲೆ ಗಿಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಂದಲೆ ಗಿಳಿ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಮೇಲ್ಕುಟುಂಬ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
P. roseata
Binomial name
Psittacula roseata
Biswas, 1951

ಕೆಂದಲೆ ಗಿಳಿ (Plum-headed Parakeet) ಇವು ಈಶಾನ್ಯ ಭಾರತದ ಪಕ್ಷಿಗಳಾಗಿದ್ದು ಆಗ್ನೇಯ ಏಷ್ಯಾದೆಲ್ಲೆಡೆ ಹರಡಿವೆ. ಇವು Psittaculidae ಕುಟುಂಬಕ್ಕೆ ಸೇರಿವೆ. ಇದರ ವೈಜ್ಞಾನಿಕ ಹೆಸರು Psittacula roseata.

ವಿವರಣೆ

[ಬದಲಾಯಿಸಿ]

ಕೆಂದಲೆ ಗಿಳಿಗಳು ಅಪರೂಪದ ಪಕ್ಷಿಗಳಾಗಿದ್ದು ಹಸಿರು ಬಣ್ಣವನ್ನು ಹೊಂದಿವೆ. ಗಂಡು ಹಕ್ಕಿಗಳು ಗುಲಾಬಿ ಬಣ್ಣದ ತಲೆಯನ್ನು ಹೊಂದಿರುತ್ತವೆ. ಕುತ್ತಿಗೆಯ ಸುತ್ತ ಕಪ್ಪು ಪಟ್ಟಿ ಇರುತ್ತದೆ. ರೆಕ್ಕೆಗಳ ಮೇಲೆ ಕೆಂಪು ಮಚ್ಚೆ ಇರುತ್ತದೆ. ಪುಕ್ಕಗಳು ಹಳದಿ ಮಿಶ್ರಿತ ಹಸಿರು ಬಣ್ಣವನ್ನು ಹೊಂದಿರುತ್ತವೆ. ಮತ್ತು ಬಾಲದ ಮದ್ಯದ ಉದ್ದ ಗರಿಗಳು ನೀಲಿ ಮಿಶ್ರಿತ ಹಸಿರು ಬಣ್ಣವನ್ನು ಹೊಂದಿರುತ್ತವೆ. ಬಾಲದ ತುದಿಯಲ್ಲಿ ಹಳದಿ ಅಂಚು ಇರುತ್ತದೆ. ಹೆಣ್ಣು ಹಕ್ಕಿಗಳಲ್ಲಿ ವಯಸ್ಕ ಹಕ್ಕಿಗಳು ನಸುಕಂದು ಬಣ್ಣದ ತಲೆಯನ್ನು ಹೊಂದಿರುತ್ತವೆ. ಇವುಗಳಿಗೆ ಕುತ್ತಿಗೆಯ ಕಪ್ಪು ಪಟ್ಟಿಯಾಗಲಿ ಅಥವಾ ಬುಜದ ಕೆಂಪು ಮಚ್ಚೆಯಾಗಲಿ ಇರುವುದಿಲ್ಲ. ಯುವ ಪಕ್ಷಿಗಳು ಹಸಿರು ತಲೆಯನ್ನು ಹೊಂದಿದ್ದು ಕುತ್ತಿಗೆಯ ಸುತ್ತ ಕಪ್ಪು ಪಟ್ಟಿ ಇರುತ್ತದೆ.

ಕೆಂದಲೆ ಗಿಳಿ (ಗಂಡು)

ಪರಿಸರ ವಿಜ್ಞಾನ

[ಬದಲಾಯಿಸಿ]

ಕೆಂದಲೆ ಗಿಳಿಗಳು ಸುಮಾರು 30ಸೆಂ.ಮೀ ಉದ್ದ ಬೆಳೆಯುತ್ತವೆ. ಇದರಲ್ಲಿ ಬಾಲದ ಉದ್ದ ಸುಮಾರು 18ಸೆಂ.ಮೀ ಇರುತ್ತದೆ. ಇವು ಸುಮಾರು 75 ರಿಂದ 85ಗ್ರಾಂ ವರೆಗೆ ತೂಗುತ್ತವೆ. ಈ ಪಕ್ಷಿಗಳಲ್ಲಿ ಹೆಣ್ಣು ಹಕ್ಕಿಗಳು ವಯಸ್ಕ ಗರಿಗಳನ್ನು ಪಡೆಯಲು 15 ತಿಂಗಳುಗಳ ಕಾಲ ತೆಗೆದುಕೊಂಡರೆ, ಗಂಡು ಹಕ್ಕಿಗಳು 30 ತಿಂಗಳು ತೆಗೆದುಕೊಳ್ಳುತ್ತವೆ.

ಹರಡುವಿಕೆ ಮತ್ತು ಆವಾಸಸ್ಥಾನ

[ಬದಲಾಯಿಸಿ]

ಇವು ಭಾರತ, ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಚೀನಾ, ಮಯನ್ಮಾರ್, ನೇಪಾಳ, ಥೈಲ್ಯಾಂಡ್ ಮತ್ತು ವಿಯೆಟ್ನಾಂಗಳ ಕಾಡುಗಳಲ್ಲಿ ಮತ್ತು ಅರೆ ಮಲೆನಾಡು ಕಾಡುಗಳಲ್ಲಿ ಕಂಡುಬರುತ್ತವೆ.

ಇವು ಹಣ್ಣುಗಳು, ತರಕಾರಿಗಳು ಮತ್ತು ಹೂವು ಗಳನ್ನು ತಿನ್ನುತ್ತವೆ. ಕೆಲವೊಮ್ಮೆ ಎಳೆಯ ಹುಲ್ಲುಗಳನ್ನು ಕೂಡ ತಿನ್ನುವುದುಂಟು.

ಸಂತಾನೋತ್ಪತ್ತಿ

[ಬದಲಾಯಿಸಿ]
ಕೆಂದಲೆ ಗಿಳಿ (ಹೆಣ್ಣು)

ಕೆಂದಲೆ ಗಿಳಿಗಳು ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಇವು ಮರದ ಪೊಟರೆಗಳಲ್ಲಿ ಗೂಡು ಮಾಡಿ 4 ರಿಂದ 6 ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳಿಗೆ ಗಂಡು ಮತ್ತು ಹೆಣ್ಣು ಪಕ್ಷಿಗಳೆರಡೂ ಸುಮಾರು 22 ರಿಂದ 24 ದಿನಗಳ ವರೆಗೆ ಕಾವು ಕೊಟ್ಟು ಮರಿ ಮಾಡುತ್ತವೆ. ಮರಿಗಳು 7 ರಿಂದ 8 ವಾರಗಳವರೆಗೆ ಗೂಡಿನಲ್ಲೇ ಇರುತ್ತವೆ. ನಂತರದ 2 ರಿಂದ 3 ವಾರಗಳಲ್ಲಿ ತಂದೆ ತಾಯಿಯರ ಆಶ್ರಯದಲ್ಲಿಯೇ ಬೆಳೆದು ನಂತರ ಸ್ವತಂತ್ರವಾಗುತ್ತವೆ.

ಹತ್ತಿರದ ಪಕ್ಷಿವರ್ಗ

[ಬದಲಾಯಿಸಿ]

ಕೆಂದಲೆ ಗಿಳಿ ಎಂಬ ಹೆಸರಿನ ಮತ್ತು ಇದೇ ರೀತಿ ಕಾಣುವ ಇನ್ನೊಂದು ಗಿಳಿ (Plum-headed Parakeet) ಇದೆಯಾದರೂ, ಅದನ್ನು Psittacula cyanocephala ಎಂಬ ಬೇರೆಯದೇ ವರ್ಗಕ್ಕೆ ಸೇರಿಸಲಾಗಿದೆ. ಆ ಜಾತಿಯ ಗಿಳಿಗಳಿಗೆ ಬಾಲದ ತುದಿಯಲ್ಲಿ ಬಿಳಿ ಅಂಚು ಇರುತ್ತದೆ ಮತ್ತು ಗಂಡು ಪಕ್ಷಿಗಳ ತಲೆ ಗಾಢ ಕೆಂಪು ಬಣ್ಣದಲ್ಲಿರುತ್ತದೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]