ಕನ್ನಡ ಅಕ್ಷರಮಾಲೆ
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ.
- ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ತಲೆಕಟ್ಟು ಇರುವುದಿಲ್ಲ. ಥ, ಪ, ಮ, ವ. ಲ, ಹ ಮುಂತಾದ ಅಕ್ಷರಗಳ ಬುಡಕಟ್ಟು ದುಂಡಾಗಿರುತ್ತವೆ.
- ಸಂಸ್ಕೃತ ಭಾಷೆಯ ಋ, ವಿಸರ್ಗ, ಜಿಹ್ವಾ ಮೂಲೀಯ ಮತ್ತು ಉಪಧ್ಮಾನೀಯಗಳನ್ನು ನಿರ್ದೇಶಿಸುವ ಸಂಜ್ಞೆಗಳಿರುವುದಿಲ್ಲ. ಅದರಂತೆ ಪದಾದಿಯ ದೀರ್ಘ ಈ ಕಾರವಿಲ್ಲ. ಕರ್ಣಾಟಕದಲ್ಲಿ ಅಶೋಕನ ಬಾಹ್ಮೀ ಲಿಪಿಯ ಶಾನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಎಂಬ ಸ್ಥಳಗಳಲ್ಲಿಯೂ ರಾಯಚೂರು ಜಿಲ್ಲೆಯ ಮಸ್ಕಿ, ಪಾಲ್ಕಗುಂಡು ಮತ್ತು ಗವಿಮಠ ಎಂಬ ಸ್ಥಳಗಳಲ್ಲಿಯೂ ದೊರೆತಿವೆ.
- ಅಶೋಕನ ಬ್ರಾಹ್ಮೀ ಲಿಪಿ ಮುಂದೆ 3ನೆಯ ಶತಮಾನದ ವರೆಗೆ ಶುಂಗ, ಕುಶಾನ, ಕ್ಷತ್ರಪ, ಆಂಧ್ರ, ಶಾತವಾಹನ ಮುಂತಾದ ಅರಸರ ಶಾಸನಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಕಾಸ ಹೊಂದಿರುತ್ತದೆ. ಕುಶಾನ ಕಾಲದ ಲಿಪಿಯ ಅಕ್ಷರಗಳು ಕಡಿಮೆ ಎತ್ತರವಾಗಿಯೂ ಅಗಲವಾಗಿಯೂ ದಪ್ಪವಾಗಿಯೂ ಇರುತ್ತವೆ. ಕ್ಷತ್ರಪ ಹಾಗೂ ಶಾತವಾಹನರ ಕಾಲದ ಲಿಪಿಗಳೂ ಹೆಚ್ಚು ಕಡಿಮೆ ಇದೇ ವೈಶಿಷ್ಟ್ಯಗಳನ್ನೊಳಗೊಂಡಿವೆ.
- ಕರ್ಣಾಟಕದಲ್ಲಿ ಅಶೋಕನ ಬ್ರಾಹ್ಮೀ ಲಿಪಿಯ ಮುಂದಿನ ಹಂತವನ್ನು 2-3ನೆಯ ಶತಮಾನದ ಮಳವಳ್ಳಿ ಮತ್ತು ಬನವಾಸಿಯ ಸಾತಕರ್ಣಿಯ ಶಾಸನಗಳಲ್ಲಿ ಕಾಣುತ್ತೇವೆ. ಇಲ್ಲಿಯೂ ಅಕ್ಷರಗಳ ಎತ್ತರ ಕಡಿಮೆಯಾಗಿದ್ದು ಕೆಲವು ಅಕ್ಷರಗಳಿಗೆ ತ್ರಿಕೋಣಾಕೃತಿಯುಳ್ಳ ತಲೆಕಟ್ಟು ಇರುತ್ತದೆ. ಅಗಲವಾದ ತುದಿಯುಳ್ಳ ಲೇಖನಿಯನ್ನು ಉಪಯೋಗಿಸಿದ್ದರಿಂದ ಇಂಥ ತಲೆಕಟ್ಟುಗಳು ತಲೆದೋರಿವೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ.
- ಅ, ಕ, ರ ಮುಂತಾದ ಅಕ್ಷರಗಳ ಲಂಬರೇಖೆಯ ಕೆಳಭಾಗ ವೃತ್ತಾಕಾರವಾಗಿ ಎಡಗಡೆ ಹೊರಳಿದೆ. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಸ್ಥಳದಲ್ಲಿ ದೊರೆತ 3ನೆಯ ಶತಮಾನದ ಶಾನಗಳಲ್ಲಿಯ ಕೆಲವು ಅಕ್ಷರಗಳು ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಅಕ್ಷರಗಳಂತೆ ಸುಂದರವಾಗಿಯೂ ಅಂಕಾರಯುತವಾಗಿಯೂ ಕೆತ್ತಲ್ಪಟ್ಟಿವೆ.
10-12ನೆಯ ಶತಮಾನ
- ಕನ್ನಡ ಲಿಪಿ 10-12ನೆಯ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಯನ್ನು ಹೊಂದಿ ಒಂದು ಮುಖ್ಯವಾದ ಹಂತವನ್ನು ಸೂಚಿಸುತ್ತಿವೆ. ಈ ಕಾಲದ ಕೆಲವು ಅಕ್ಷರಗಳು ಇನ್ನಷ್ಟು ದುಂಡಾಗಿದ್ದು ಆಧುನಿಕ ಕನ್ನಡ ಲಿಪಿಯ ಅಕ್ಷರಗಳ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗಾಗಿ ಕ, ರ, ಯ ಮುಂತಾದ ಅಕ್ಷರಗಳ ಮೈಕಟ್ಟು ಹೆಚ್ಚು ಕಡಿಮೆ ಈಗಿನಂತೆಯೇ ಇದೆ. ಕೆಲವು ಅಕ್ಷರಗಳ ತಲೆಕಟ್ಟು ಕೋನಾಕೃತಿಯುಳ್ಳದಾಗಿದೆ.
- ಚ, ವ, ಮ ಮುಂತಾದ ಅಕ್ಷರಗಳ ತಲೆಕಟ್ಟಿನ ಭಾಗ ಎರಡು ಭಾಗವಾಗಿ ಬೇರ್ಪಡೆಯಾಗಿದ್ದು ತಲೆಕಟ್ಟು ಬಲಭಾಗದ ರೇಖೆಗೆ ಹೊಂದಿ ಕೊಂಡಿರುತ್ತದೆ. ಅನೇಕ ಅಕ್ಷರಗಳ ತಲೆಕಟ್ಟು ಸ್ಪಷ್ಟವಾಗಿ ಎದ್ದುಕಾಣುವಂತಿದೆ. ಮುಂದೆ 12-13ನೆಯ ಶತಮಾನದಲ್ಲಿ ಹೊಯ್ಸಳ ಅರಸರ ಅನೇಕ ಶಾಸನಗಳನ್ನು ನುಣುಪಾದ ಕಲ್ಲಿನ ಹಲಗೆಗಳ ಮೇಲೆ ಅಲಂಕಾರಯುತವಾಗಿಯೂ ಕಲಾತ್ಮಕವಾಗಿಯೂ ಬರೆಯಲ್ಪಟ್ಟಿದ್ದು ಅಲ್ಲಿಯ ಅಕ್ಷರಗಳು ಬಹು ಸುಂದರವಾಗಿ ಕಾಣುತ್ತವೆ.
- ಈ ಅಕ್ಷರಗಳನ್ನು ಸ್ಪಷ್ಟವಾಗಿಯೂ ಹೆಚ್ಚು ದುಂಡಾಗಿಯೂ ಬರೆಯಲಾಗಿದೆ. ಇಲ್ಲಿ ಕನ್ನಡ ಲಿಪಿ ಊರ್ಜಿತಾವಸ್ಥೆಯನ್ನು ಹೊಂದಿದೆಯೆಂದು ಹೇಳಬಹುದು. ಆದರೆ ಮುಂದಿನ 2-3 ಶತಮಾನಗಳ ಕಾಲದಲ್ಲಿ ಅಂದರೆ 14-16ನೆಯ ಶತಮಾನದ ವಿಜಯನಗರ ಅರಸರ ಶಾಸನಗಳಲ್ಲಿ ಅಕ್ಷರಗಳನ್ನು ಡೊಂಕು ಡೊಂಕಾಗಿ ಬರೆಯಲಾಗಿದ್ದು ಅವುಗಳ ಜೋಡಣೆಯ ವಿಷಯದಲ್ಲಿ ಅಷ್ಟು ಗಮನವನ್ನಿತ್ತಿಲ್ಲ.
- ಆದುದರಿಂದ ಕಲ್ಯಾಣಿ ಚಾಳುಕ್ಯ ಹಾಗೂ ಹೊಯ್ಸಳರ ಕಾಲದ ಲಿಪಿಯ ಅಕ್ಷರಗಳಂತೆ ವಿಜನಗರ ಕಾಲದ ಲಿಪಿಯ ಅಕ್ಷರಗಳು ಅಂದವಾಗಿ ಕಾಣುವುದಿಲ್ಲ. ಆದರೂ ಈ ಕಾಲದ ಲಿಪಿಯ ಅಕ್ಷರಗಳು ಕನ್ನಡ ಲಿಪಿಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ಅ, ಞ, ಣ, ಷ, ಳ ಮುಂತಾದ ಅಕ್ಷರಗಳು ಈಗಿನ ರೂಪಗಳನ್ನು ಹೆಚ್ಚಾಗಿ ಹೋಲುತ್ತವೆ.
- ದ, ಡ, ಪ ಮುಂತಾದ ಅಲ್ಪಪ್ರಾಣದ ಅಕ್ಷರಗಳಿಗೆ ಕೆಳಗಡೆ ಒಂದು ರೇಖೆಯನ್ನು ಸೇರಿಸಿ ಧ, ಢ, ಫ, ಮುಂತಾದ ಮಹಾಪ್ರಾಣಗಳ ಸಂಜ್ಞೆಗಳನ್ನು ಸೂಚಿಸಲಾಗಿದೆ. ಇದುವರೆಗೆ ಅಕ್ಷರಗಳ ಮೇಲ್ಭಾಗದಲ್ಲಿ ಒಂದು ಚುಕ್ಕೆ ಅಥವಾ ಚಿಕ್ಕ ಬಿಂದುವಿನಿಂದ ಸೂಚಿಸಲ್ಪಡುತ್ತಿದ್ದ ಅನುಸ್ವಾರವನ್ನು ಆಯಾ ಅಕ್ಷರಗಳ ಬಲಗಡೆಗೆ ಅಷ್ಟೇ ಗಾತ್ರದ ಬಿಂದುವಿನಿಂದ ತೋರಿಸಲಾಗಿದೆ.
- 18ನೆಯ ಶತಮಾನದಲ್ಲಿ ಮೈಸೂರು ಅರಸರ ಕಾಲದಲ್ಲಿ ಕನ್ನಡ ಲಿಪಿ ವಿಜಯನಗರ ಕಾಲದ ಅಕ್ಷರಗಳ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದರೂ ಆಧುನಿಕ ಕನ್ನಡ ಲಿಪಿಗೆ ಬಹಳ ಹತ್ತಿರಬಾಗಿ ತೋರುತ್ತದೆ. ಇತ್ತೀಚೆಗೆ ಮುದ್ರಣ ಬಂದಮೇಲೆ ಇತರ ಲಿಪಿಗಳಂತೆ ಕನ್ನಡ ಲಿಪಿಯಾದರೂ ಒಂದು ಸ್ಥಿರತೆಯನ್ನು ಹೊಂದಿದ್ದರಿಂದ ಹೆಚ್ಚಿನ ವಿಕಾಸಕ್ಕೆ ಅಸ್ಪದವಿಲ್ಲದಂತಾಗಿದೆ. ಆದರೂ ಮುದ್ರಣದ ಲಿಪಿಯಲ್ಲಿ ಸಹ ಕಾಲಕಾಲಕ್ಕೆ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಹೆಚ್ಚಿನ ಅಂದವಾದ ಅಕ್ಷರಗಳನ್ನು ಅಚ್ಚು ಹಾಕುತ್ತಿರುವುದನ್ನು ನೋಡುತ್ತೇವೆ.
ಪರಿಣಾಮ
- ಕನ್ನಡ ಲಿಪಿಯ ಒಂದು ವೈಶಿಷ್ಟ್ಯವೆಂದರೆ ಪ್ರಾಚೀನಕಾಲದಿಂದಲೂ ಕಾಗುಣಿತಾಕ್ಷರದ ಹೃಸ್ವ ಮತ್ತು ದೀರ್ಘ ಎ ಮತ್ತು ಏ ಕಾರಗಳನ್ನು ಹಾಗೂ ಒ ಮತ್ತು ಓ ಕಾರಗಳನ್ನು ಒಂದೇ ಸಂಜ್ಞೆಯಿಂದ ಸೂಚಿಸುತ್ತಿದ್ದು ಅವುಗಳಲ್ಲಿಯ ಹೃಸ್ವ ಮತ್ತು ದೀರ್ಘ ವರ್ಣಗಳ ಭೇದವನ್ನು ಸಂದರ್ಭಾನುಸಾರವಾಗಿ ತಿಳಿದುಕೊಳ್ಳಬೇಕಾಗಿತ್ತು.
- ಇತ್ತೀಚೆಗೆ ಅಂದರೆ 17-18ನೆಯ ಶತಮಾನದಂದೀಚೆಗೆ ಮಾತ್ರ ಕಾಗುಣಿತಾಕ್ಷರದ ದೀರ್ಘ ಏ ಕಾರ, ದೀರ್ಘ, ಓ ಕಾರ ಮತ್ತು ದೀರ್ಘ ಈ ಕಾರಗಳನ್ನು ಆಯಾ ಅಕ್ಷರಗಳ ಬಲಗಡೆ ಕೋಡಿಯುಳ್ಳ ಒಂದು ರೇಖೆಯಿಂದ ಸೂಚಿಸಲಾಗಿದೆ.
ಇನ್ನು 4-5ನೆಯ ಶತಮಾನದಿಂದ 13-14ನೆಯ ಶತಮಾನದವರೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಸುಮಾರು ಒಂದೇ ಮಾದರಿಯ ಲಿಪಿಯನ್ನು ಉಪಯೋಗಿಸಿದ್ದುದರಿಂದ ಇವೆರಡೂ ಭಾಗದ ಲಿಪಿಗಳಿಗೆ ಕನ್ನಡ ತೆಲುಗು ಲಿಪಿಯೆಂದು ಹೇಳುವುದುಂಟು. ಅದರಲ್ಲೂ ವಿಶೇಷವಾಗಿ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದ ಕನ್ನಡ ತೆಲುಗು ಲಿಪಿ ಒಂದೇ ಸ್ವರೂಪದ್ದಾಗಿದೆಯೆಂದು ಹೇಳಬಹುದು.
- 14-15ನೆಯ ಶತಮಾನಗಳಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಕೆಲವು ವ್ಯತ್ಯಾಸಗಳು ತಲೆದೋರಿದ್ದು ಮುಂದಿನ ಎರಡು ಮೂರು ಶತಮಾನಗಳಲ್ಲಿ ಗಮನಾರ್ಹವಾದ ಭೇದಗಳು ಕಂಡುಬರುತ್ತವೆ. ಆದರೂ ಅಲ್ಪ ಪ್ರಯತ್ನದಿಂದ ಕನ್ನಡಿಗರು ತೆಲುಗು ಲಿಪಿಯನ್ನೂ ಅದರಂತೆ ಆಂಧ್ರರು ಕನ್ನಡ ಲಿಪಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಬಾದಾಮಿ ಚಳುಕ್ಯರ ಕಾಲದಲ್ಲ ಕನ್ನಡ ಲಿಪಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿಯೂ ಪ್ರಚಲಿತವಿದ್ದು ಮುಂದೆ ಅಲ್ಲಿ ನಾಗರೀ ಲಿಪಿ ಬಳಕೆಗೆ ಬಂತು. * ಅಂತೂ ಮೇಲಿನ ವಿವೇಚನೆಯಿಂದ ಕನ್ನಡ ಲಿಪಿ ಸು. 2000 ವರ್ಷಕ್ಕೂ ಹೆಚ್ಚಿನ ಪರಂಪರೆಯುಳ್ಳದ್ದಾಗಿದೆಯೆಂದು ವಿಶದವಾಗುತ್ತದೆ. ಒಂದು ಲಿಪಿಯ ಹುಟ್ಟು ಮತ್ತು ಬೆಳೆವಣಿಗೆ ಅದನ್ನು ಉಪಯೋಗಿಸುವ ಜನರ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಒಂದು ಆದರ್ಶ ಲಿಪಿಯಲ್ಲಿ ಪ್ರತಿಯೊಂದು ಶಬ್ದದ ಉಚ್ಚಾರಣೆಗೆ ಅಸಂದಿಗ್ಧವಾದ ಸಂಜ್ಞೆಯಿರಬೇಕು. ಬರೆದಂತೆ ಓದುವಂತಿರಬೇಕು. ಓದಿದಂತೆ ಬರೆಯುವಂತೆಯೂ ಇರಬೇಕು.
- ಅಂದರೆ ಉಚ್ಚಾರಿತ ಅಕ್ಷರ ಹಾಗೂ ಲಿಖಿತ ವರ್ಣ ಇವುಗಳ ಸಂಬಂಧ ಸಂಪುರ್ಣವಿರಬೇಕು. ಈ ದೃಷ್ಟಿಯಿಂದ ವಿಚಾರಿಸಿದರೆ ಕನ್ನಡ ಲಿಪಿ ಪರಿಪುರ್ಣತೆಯನ್ನು ಪಡೆದಿದೆಯೆಂದು ಹೇಳಬಹುದು. ಈ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳು ಪುರ್ಣವಾಗಿದ್ದು ಆರ್ಯ ಮತ್ತು ದ್ರಾವಿಡ ಭಾಷೆಗಳ ಧ್ವನಿಗಳನ್ನು ಕೊರತೆಯಿಲ್ಲದೆ ಸೂಚಿಸಲಿಕ್ಕೆ ಉಪಯುಕ್ತವಾದ ಸಂಕೇತಗಳಿವೆ. ವ್ಯಂಜನಾಕ್ಷರಗಳೊಡನೆ ಸ್ವರಗಳ ಸುಂದರವಾದ ಸಂಯೋಗವಿದೆ.
- ಹೀಗೆ ಕನ್ನಡ ಲಿಪಿ ಅಶೋಕನ ಬ್ರಾಹ್ಮೀಲಿಪಿಯಿಂದ ಉದ್ಬವಿಸಿ ಕಾಲಕ್ರಮದಿಂದ ಅನೇಕ ಮಾರ್ಪಾಟುಗಳನ್ನು ಹೊಂದಿ ವೈವಿಧ್ಯಪುರ್ಣವಾದ ವಿಕಾಸವನ್ನು ಪಡೆದು ಸಾಹಿತ್ಯ-ಸಂಸ್ಕೃತಿಗಳ ಹಿರಿಮೆಯನ್ನು ವ್ಯಕ್ತಪಡಿಸುತ್ತದೆ. ಕನ್ನಡ ವರ್ಣಮಾಲೆಯ ಪ್ರತಿಯೊಂದು ಅಕ್ಷರದ ಉಗಮ, ವಿಕಾಸ, ಉಚ್ಚಾರಣೆ ಮುಂತಾದ ವಿವರಗಳು ಆಯಾ ಅಕ್ಷರಗಳ ಶೀರ್ಷಿಕೆಗಳಲ್ಲಿ ಬಂದಿವೆ. ಅವನ್ನು ನೋಡಬಹುದು.[೧] ಈಚೆಗೆ ಪರಭಾಷೆಯ ಪದಗಳನ್ನು ಎರವಲಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಒದಗಿಬಂದುದರಿಂದ ಈಚಿಣheಡಿ, ಈಚಿisಚಿಟ, Zoo, ಒಚಿಟಿ ಮೊದಲಾದುವನ್ನು; ಬರೆಯಲು ವಿಶಿಷ್ಟ ಸಂಜ್ಞೆಗಳನ್ನು ಬಳಸಲಾಗುತ್ತಿದೆ. ಉದಾ : ಫಾದರ್, ಫೈಸಲ್ ಜóÆ, ಮ್ಯಾನ್-ಹೀಗೆ.
ಸಂಜ್ಞಾ ಪ್ರಕರಣ
ಕೇಶಿರಾಜನ ಸೂತ್ರದ ಪ್ರಕಾರ, ಅಕ್ಷರ ಮಾಲೆ/ವರ್ಣಮಾಲೆ ಎಂಬುದು ಒಂದು ಸಂಜ್ಞಾ ಪ್ರಕಾರವಾಗಿದೆ.[೨]
ಕವಿಗಳ್ ಸ್ವರದಿಂ ವರ್ಗದಿ
ನವರ್ಗದಿಂ ಯೋಗವಾಹದಿಂ ದೇಶಿಯಳು
ದ್ಭವಮಪ್ಪ ವರ್ಣದಿಂ ಪಂ
ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ
(ಸೂತ್ರ ವಿವರಣೆ:ಕವಿಗಳು ಸ್ವರದಿಂದ, ವರ್ಗಾಕ್ಷರಗಳಿಂದ, ಅವರ್ಗೀಯ ಅಕ್ಷರಗಳಿಂದ, ಯೋಗವಾಹ ಅಕ್ಷರದಿಂದದಿಂದ, ಮತ್ತು ದೇಶಿಯ ಅಕ್ಷರಗಳಿಂದ ಹುಟ್ಟಿರುವ ಐದು ವಿಧದ ಅಕ್ಷರಗಳನ್ನು ಶುದ್ಧಗೆ ಎಂದು ಹೇಳುತ್ತಾರೆ) (ಸೂತ್ರಸಂಖ್ಯೆ – ೪೧)[೩]
ಕನ್ನಡದ ಶುದ್ಧಾಕ್ಷರಗಳ ವಿಧಗಳು
ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ : ಸ್ವರ ಅಕ್ಷರಗಳು, ವರ್ಗೀಯ ವ್ಯಂಜನ ಅಕ್ಷರಗಳು, ಅವರ್ಗೀಯ ವ್ಯಂಜನ ಅಕ್ಷರಗಳು, ಯೋಗವಾಹ ಅಕ್ಷರಗಳು, ದೇಶಿಯ ಅಕ್ಷರಗಳು. ಆದರೆ ಕನ್ನಡ ಪಠ್ಯಾನುಸಾರ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಯ ವಿದ್ಯಾರ್ಥಿಗಳು ಒಟ್ಟು ಕನ್ನಡ ಅಕ್ಷರಗಳನ್ನು ಈ ಕೆಳಗಿನಂತೆ ಗ್ರಹಿಸಿಕೊಂಡಿದ್ದಾರೆ.
ಶುದ್ಧಾಕ್ಷರ ವಿಧಗಳು | ಗಣನೆ | ಅಕ್ಷರಗಳು |
---|---|---|
ಸ್ವರ | ೧೩ | ಅ - ಔ |
ವರ್ಗೀಯ ವ್ಯಂಜನ | ೨೫ | ಕಚಟತಪ-ವರ್ಗಗಳು |
ಅವರ್ಗೀಯ ವ್ಯಂಜನ | ೯ | ಯ-ಳ |
ಯೋಗವಾಹ | ೨ | ಅನುಸ್ವಾರ(ಂ), ವಿಸರ್ಗ ( ಃ) |
ಹಳಗನ್ನಡ | ೨ | ಱ(ರ) ಮತ್ತು ೞ(ಳ) |
ಈ ರೀತಿ ಕನ್ನಡದಲ್ಲಿ ೫೧ ಅಕ್ಷರಗಳಿವೆ.
ಪ್ರಸ್ತುತ ಕನ್ನಡದಲ್ಲಿ ಬಳಸುತ್ತಿರುವುದು ೪೯ ಅಕ್ಷರಗಳು.
ಕನ್ನಡ ಅಕ್ಷರಮಾಲೆ |
---|
ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ |
ಕ ಖ ಗ ಘ ಙ |
ಚ ಛ ಜ ಝ ಞ |
ಟ ಠ ಡ ಢ ಣ |
ತ ಥ ದ ಧ ನ |
ಪ ಫ ಬ ಭ ಮ |
ಯ ರ ಱ ಲ ವ ಶ ಷ ಸ ಹ ಳ ೞ |
ಕನ್ನಡ ವರ್ಣಮಾಲೆ
ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
- ಸ್ವರಗಳು -೧೩
- ವ್ಯಂಜನಗಳು -೩೪
- ಯೋಗವಾಹಗಳು-೦೨
ಸ್ವರ
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ. ಸ್ವರಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರ
- ಹೃಸ್ವ ಸ್ವರ
ಹೃಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು.
- ದೀರ್ಘ ಸ್ವರ
ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.
ವ್ಯಂಜನ
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ವರ್ಗೀಯ ವ್ಯಂಜನಗಳು(೨೫: ಕ,ಚ,ಟ,ತ,ಪ-ವರ್ಗಗಳು) ಮತ್ತು ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ)
- ವರ್ಗೀಯ ವ್ಯಂಜನ
ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,
- ಕ-ವರ್ಗ = ಕ, ಖ, ಗ, ಘ, ಙ
- ಚ-ವರ್ಗ = ಚ, ಛ, ಜ, ಝ, ಞ
- ಟ-ವರ್ಗ = ಟ, ಠ, ಡ, ಢ, ಣ
- ತ-ವರ್ಗ = ತ, ಥ, ದ, ಧ, ನ
- ಪ-ವರ್ಗ = ಪ, ಫ, ಬ, ಭ, ಮ
- ಅವರ್ಗೀಯ ವ್ಯಂಜನ
ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-
ಯ,ರ,ಲ,ವ,ಶ,ಷ,ಸ,ಹ,ಳ.
ಕನ್ನಡ ಒತ್ತಕ್ಷರಗಳು
ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ:
- ಕ್ಕ ಖ್ಖ ಗ್ಗ ಘ್ಘ ಙ್ಙ
- ಚ್ಚ ಛ್ಛ ಜ್ಜ ಝ್ಝ ಞ್ಞ
- ಟ್ಟ ಠ್ಠ ಡ್ಡ ಢ್ಢ ಣ್ಣ
- ತ್ತ ಥ್ಥ ದ್ದ ಧ್ಧ ನ್ನ
- ಪ್ಪ ಫ್ಫ ಬ್ಬ ಭ್ಭ ಮ್ಮ
- ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ
ಯೋಗವಾಹಗಳು
ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ.
- ಕರ್ನಾಟಕ ಸರ್ಕಾರವು ತನ್ನ ಪಠ್ಯ ಕ್ರಮದಿಂದ ೠ ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು.
- ಹಳೆಗನ್ನಡದ ಮೂರು ಅಕ್ಷರಗಳಾದ ಱ, ೞ ಮತ್ತು (ನ್, ಯುನಿಕೋಡ್ - U+0CDD) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು.
- ಇಂಗ್ಲಿಷ್ನ F ಮತ್ತು Z ಅಕ್ಷರಗಳಿಗೆ ಫ಼ ಮತ್ತು ಜ಼ (ಫ ಮತ್ತು ಜ) ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ. ಆದರೆ ಅವುಗಳನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿಲ್ಲ.
ಸ್ವರಗಳು
- ಕನ್ನಡದಲ್ಲಿ ಒಟ್ಟು ೧೩ ಸ್ವರಗಳಿವೆ. ಅವನ್ನು "ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ" ಹೀಗೆ 'ಅ'ಕಾರದಿಂದ ಮೊದಲು ಮಾಡಿ, 'ಔ'ಕಾರದ ವರೆಗೆ ಕೊನೆ ಮಾಡಿ, ಹೀಗೆ ಬರೆಯುವುದು ಸಂಸ್ಕೃತ ವ್ಯಾಕರಣದ ಅನುಕರಣೆ. ಸಂಸ್ಕೃತದಲ್ಲಿ ಈ ಬಗೆಯಲ್ಲಿ ಬರೆಯಲು ಕಾರಣ ಅದರ ಮಾಹೇಶ್ವರ ಸೂತ್ರ ಮತ್ತು ಸಂಧಿನಿಯಮಗಳು.
- ಆದರೆ ಹೀಗೆ ಬರೆಯುವುದರಿಂದ ಕನ್ನಡದ ಸಂಧಿನಿಯಮಗಳನ್ನು ಅರಿಯಲು ಯಾವ ಅನುಕೂಲವೂ ಆಗುವುದಿಲ್ಲವೆಂಬ ಅಭಿಪ್ರಾಯವಿದೆ. "ಇ ಈ ಎ ಏ ಉ ಊ ಒ ಓ ಅ ಆ" ಎಂದು ಇನ್ನೊಂದು ಬಗೆಯಲ್ಲಿಯೂ ಬರೆಯುವುದುಂಟು. ಇಲ್ಲಿ ಸ್ವರಗಳನ್ನು ನಾಲಗೆಯ ತುದಿಯಿಂದ ಕೊನೆಯ ತನಕ ಅವುಗಳು ಹೊರಡುವ ನಾಲಗೆಯ ಭಾಗಕ್ಕೆ ಅನುಕ್ರಮವಾಗಿ ಬರೆಯಲಾಗಿದೆ.
- ಅಂದರೆ "ಇ ಈ" ನಾಲಗೆಯ ತುತ್ತುದಿಯಿಂದ ಉಲಿದರೆ, "ಅ ಆ" ನಾಲಗೆಯ ಕಟ್ಟಕಡೆಯಲ್ಲಿ ಹೊರಡುವುದು. ೠ, ಱ, ೞ ಗಳನ್ನು ಬಿಟ್ಟಮಾತ್ರಕ್ಕೆ ಆ ಅಕ್ಷರಗಳು ಕನ್ನಡದಲ್ಲಿ ಇಲ್ಲ ಅಥವಾ ಜನರಿಗೆ ಉಚ್ಚರಿಸಲಾಗದೆಂದು ಹೇಳಲಾಗದು.
ಸ್ವರಗಳಲ್ಲಿ ನಾಲ್ಕು ವಿಧ
- ಹೃಸ್ವಸ್ವರ/ಗಿಡ್ಡಸ್ವರ : ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : ಅ ಇ ಉ ಋ ಎ ಒ
- ದೀರ್ಘಸ್ವರ/ಉದ್ದಸ್ವರ. : ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: ಆ ಈ ಊ ಏ ಐ ಓ ಔ
- ಪ್ಲುತ ಸ್ವರ : ಮೂರು ಇಲ್ಲವೆ, ಅದಕ್ಕಿಂತ ಹೆಚ್ಚು ಮಾತ್ರೆಗಳ ಹೊತ್ತು ಉಳಿಯುವ ಸ್ವರ.
- ಸಂಧ್ಯಕ್ಷರ : ಎರಡು ಸ್ವರಗಳಿಂದ ಉಂಟಾಗುವ ಅಕ್ಷರಗಳು. ಐ, ಔ, ಏ, ಓ
ಯೋಗವಾಹಗಳು
ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು. ಕನ್ನಡ ವರ್ಣಮಾಲೆಯಲ್ಲಿ ನಾಲ್ಕು ಯೋಗವಾಹಗಳಿದ್ದರೂ ಎರಡು ಯೋಗವಾಹಗಳು ಮಾತ್ರ ಬಳಕೆಯಲ್ಲಿವೆ.
- ಅನುಸ್ವಾರ/ಬಿಂದು (ಅಂ) ಮತ್ತು
- ವಿಸರ್ಗ (ಅಃ)
- ಉಪಾಧ್ಮಾನೀಯ : ೲ
- ಜಿಹ್ಹಾಮೂಲೀಯ : ೱ
ಉದಾಹರಣೆಗೆ:
ವಿವಿಧ ಸ್ವರಗಳೊಡನೆ ಅನುಸ್ವಾರ: ಅಂಜೂರ, ಆಂಧ್ರ, ಇಂಚರ, ಉಂಗುರ, ಎಂಬತ್ತು, ಒಂಟೆ, ಓಂಕಾರ
ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು.
ಉದಾ:
- ಅಙ್ಕ = ಅಂಕ ( ಇದನ್ನು ಅಮ್ಕ ಎಂದು ಉಲಿಯಬಾರದು )
- ಅಞ್ಚೆ = ಅಂಚೆ
- ತಙ್ಗಿ = ತಂಗಿ
- ಗಣ್ಟೆ = ಗಂಟೆ
- ಅನ್ದ = ಅಂದ
- ಅಮ್ಬ = ಅಂಬ
- ವಿವಿಧ ಸ್ವರಗಳೊಡನೆ ವಿಸರ್ಗ: ಅಂತಃಕರಣ, ದುಃಖ
ಕನ್ನಡ ಅಕ್ಷರಗಳ ಉಚ್ಚಾರಣೆ
ಐಪಿಎ ನಕಾಶೆ
ಪ್ರಯತ್ನ ನಿಯಮಾವಳಿ | ಕಂಠ್ಯ | ತಾಲವ್ಯ | ಮೂರ್ಧನ್ಯ | ದಂತ್ಯ | ದಂತೋಷ್ಟ್ಯ | ಓಷ್ಟ್ತ | |
---|---|---|---|---|---|---|---|
ಸ್ಪರ್ಶ್ಯ | ಅಲ್ಪಪ್ರಾಣ ಶ್ವಾಸ | ಕ | ಚ | ಟ | ತ | - | ಪ |
ಮಹಾಪ್ರಾಣ ಶ್ವಾಸ | ಖ | ಛ | ಠ | ಥ | - | ಫ | |
ಅಲ್ಪಪ್ರಾಣ ನಾದ | ಗ | ಜ | ಡ | ದ | - | ಬ | |
ಮಹಾಪ್ರಾಣ ನಾದ | ಘ | ಝ | ಢ | ಧ | - | ಭ | |
ಅನುನಾಸಿಕ | ಙ | ಞ | ಣ | ನ | - | ಮ | |
ಅನಾಸ್ಥ | ಅವ್ಯಾಹತ | - | ಯ | ರ | ಲ | ವ | - |
ಊಷ್ಮಾಣ | ಶ್ವಾಸ | ಃ | ಶ | ಷ | ಸ | - | - |
ನಾದ | ಹ | - | - | - | - | - |
ಮುಂದೆ | ಮಧ್ಯ | ಹಿಂದೆ | |
---|---|---|---|
ಮುಚ್ಚಿದ | ಇ ಈ | - | ಉ ಊ |
ಅರ್ಧ ಮುಚ್ಚಿದ | ಎ ಏ | - | ಒ ಓ |
ಅರ್ಧ ತೆರೆದ | - | - | - |
ತೆರೆದ | - | - | ಅ ಆ |
ಕೂಡುಸ್ವರಗಳು - ಐ ಔ
ಕನ್ನಡ | ದೇವನಾಗರಿ | ISO 15919 ಸಂಕೇತ | ಉಚ್ಚಾರಣೆ |
---|---|---|---|
ಅ | अ | a | |
ಆ | आ | ā | |
ಇ | इ | i | |
ಈ | ई | ī | |
ಉ | उ | u | |
ಊ | ऊ | ū | |
ಋ | ऋ | ru | |
ಎ | ए | e | |
ಏ | एॅ | ē | |
ಐ | ऐ | ai | |
ಒ | ओ | o | |
ಓ | ऑ | ō | |
ಔ | औ | au | |
ಅಂ | अं | aom | |
ಅಃ | अः | ahā | |
ಕ | क | ka | |
ಖ | ख | kha | |
ಗ | ग | ga | |
ಘ | घ | gha | |
ಙ | ङ | nga | |
ಚ | च | cha | |
ಛ | छ | chha | |
ಜ | ज | ja | |
ಝ | झ | jha | |
ಞ | ञ | ña | |
ಟ | ट | ṭa | |
ಠ | ठ | ṭa | |
ಡ | ड | ḍa | |
ಢ | ढ | ḍha | |
ಣ | ण | ṇa | |
ತ | त | ta | |
ಥ | थ | tha | |
ದ | द | da | |
ಧ | ध | dha | |
ನ | न | na | |
ಪ | प | pa | |
ಫ | फ | pha | |
ಬ | ब | ba | |
ಭ | भ | bha | |
ಮ | म | ma | |
ಯ | य | ya | |
ರ | र | ra | |
ಲ | ल | la | |
ವ | व | va | |
ಶ | श | śa | |
ಷ | ष | ṣa | |
ಸ | स | sa | |
ಹ | ह | ha | |
ಳ | ळ | ḷa |
ಕನ್ನಡ ಅಕ್ಷರಗಳನ್ನು ಬರೆಯುವ ವಿಧಾನ
ಅಕ್ಷರ | ಅಕ್ಷರ ಚಿತ್ರಸಂಚಲನೆ Animation |
---|---|
ಅ | |
ಆ | |
ಇ | |
ಈ | |
ಉ | |
ಊ | |
ಋ | |
ಎ | |
ಏ | |
ಐ | |
ಒ | |
ಓ | |
ಔ | |
ಅಂ | |
ಅಃ | |
ಕ | |
ಖ | |
ಗ | |
ಘ | |
ಙ | |
ಚ | |
ಛ | |
ಜ | |
ಝ | |
ಞ | |
ಟ | |
ಠ | |
ಡ | |
ಢ | |
ಣ | |
ತ | |
ಥ | |
ದ | |
ಧ | |
ನ | |
ಪ | |
ಫ | |
ಬ | |
ಭ | |
ಮ | |
ಯ | |
ರ | |
ಲ | |
ವ | |
ಶ | |
ಷ | |
ಸ | |
ಹ | |
ಳ |
ವ್ಯಂಜನಗಳು
ವ್ಯಂಜನಗಳಲ್ಲಿ ಎರಡು ವಿಧ. ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ. 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. ಪ್ರತಿ ವ್ಯಂಜನಕ್ಕೆ ಎರಡು ಸ್ವರಗಳಿವೆ:
- ಅಲ್ಪಪ್ರಾಣ: ಕ (ಕ್+ಅ)
- ಮಹಾಪ್ರಾಣ: ಕಾ (ಕ್+ಆ')
ಸಾಮಾನ್ಯ ವರ್ಣಮಾಲೆಯಲ್ಲಿ (ಅಕ್ಷರಮಾಲೆಯಲ್ಲಿ) ದೀರ್ಘ ಸ್ವರವು ಉಪಯೋಗವಾಗುತ್ತದೆ.
ಕನ್ನಡದ ಗುಣಿತಾಕ್ಷರಗಳು
ಅ | ಆ | ಇ | ಈ | ಉ | ಊ | ಋ | ಎ | ಏ | ಐ | ಒ | ಓ | ಔ | ಅಂ | ಅಃ | — |
---|---|---|---|---|---|---|---|---|---|---|---|---|---|---|---|
ಕ | ಕಾ | ಕಿ | ಕೀ | ಕು | ಕೂ | ಕೃ | ಕೆ | ಕೇ | ಕೈ | ಕೊ | ಕೋ | ಕೌ | ಕಂ | ಕಃ | ಕ್ |
ಖ | ಖಾ | ಖಿ | ಖೀ | ಖು | ಖೂ | ಖೃ | ಖೆ | ಖೇ | ಖೈ | ಖೊ | ಖೋ | ಖೌ | ಖಂ | ಖಃ | ಖ್ |
ಗ | ಗಾ | ಗಿ | ಗೀ | ಗು | ಗೂ | ಗೃ | ಗೆ | ಗೇ | ಗೈ | ಗೊ | ಗೋ | ಗೌ | ಗಂ | ಗಃ | ಗ್ |
ಘ | ಘಾ | ಘಿ | ಘೀ | ಘು | ಘೂ | ಘೃ | ಘೆ | ಘೇ | ಘೈ | ಘೊ | ಘೋ | ಘೌ | ಘಂ | ಘಃ | ಘ್ |
ಙ | ಙಾ | ಙಿ | ಙೀ | ಙು | ಙೂ | ಙೃ | ಙೆ | ಙೇ | ಙೈ | ಙೊ | ಙೋ | ಙೌ | ಙಂ | ಙಃ | ಙ್ |
ಚ | ಚಾ | ಚಿ | ಚೀ | ಚು | ಚೂ | ಚೃ | ಚೆ | ಚೇ | ಚೈ | ಚೊ | ಚೋ | ಚೌ | ಚಂ | ಚಃ | ಚ್ |
ಛ | ಛಾ | ಛಿ | ಛೀ | ಛು | ಛೂ | ಛೃ | ಛೆ | ಛೇ | ಛೈ | ಛೊ | ಛೋ | ಛೌ | ಛಂ | ಛಃ | ಛ್ |
ಜ | ಜಾ | ಜಿ | ಜೀ | ಜು | ಜೂ | ಜೃ | ಜೆ | ಜೇ | ಜೈ | ಜೊ | ಜೋ | ಜೌ | ಜಂ | ಜಃ | ಜ್ |
ಝ | ಝಾ | ಝಿ | ಝೀ | ಝು | ಝೂ | ಝೃ | ಝೆ | ಝೇ | ಝೈ | ಝೊ | ಝೋ | ಝೌ | ಝಂ | ಝಃ | ಝ್ |
ಞ | ಞಾ | ಞಿ | ಞೀ | ಞು | ಞೂ | ಞೃ | ಞೆ | ಞೇ | ಞೈ | ಞೊ | ಞೋ | ಞೌ | ಞಂ | ಞಃ | ಞ್ |
ಟ | ಟಾ | ಟಿ | ಟೀ | ಟು | ಟೂ | ಟೃ | ಟೆ | ಟೇ | ಟೈ | ಟೊ | ಟೋ | ಟೌ | ಟಂ | ಟಃ | ಟ್ |
ಠ | ಠಾ | ಠಿ | ಠೀ | ಠು | ಠೂ | ಠೃ | ಠೆ | ಠೇ | ಠೈ | ಠೊ | ಠೋ | ಠೌ | ಠಂ | ಠಃ | ಠ್ |
ಡ | ಡಾ | ಡಿ | ಡೀ | ಡು | ಡೂ | ಡೃ | ಡೆ | ಡೇ | ಡೈ | ಡೊ | ಡೋ | ಡೌ | ಡಂ | ಡಃ | ಡ್ |
ಢ | ಢಾ | ಢಿ | ಢೀ | ಢು | ಢೂ | ಢೃ | ಢೆ | ಢೇ | ಢೈ | ಢೊ | ಢೋ | ಢೌ | ಢಂ | ಢಃ | ಢ್ |
ಣ | ಣಾ | ಣಿ | ಣೀ | ಣು | ಣೂ | ಣೃ | ಣೆ | ಣೇ | ಣೈ | ಣೊ | ಣೋ | ಣೌ | ಣಂ | ಣಃ | ಣ್ |
ತ | ತಾ | ತಿ | ತೀ | ತು | ತೂ | ತೃ | ತೆ | ತೇ | ತೈ | ತೊ | ತೋ | ತೌ | ತಂ | ತಃ | ತ್ |
ಥ | ಥಾ | ಥಿ | ಥೀ | ಥು | ಥೂ | ಥೃ | ಥೆ | ಥೇ | ಥೈ | ಥೊ | ಥೋ | ಥೌ | ಥಂ | ಥಃ | ಥ್ |
ದ | ದಾ | ದಿ | ದೀ | ದು | ದೂ | ದೃ | ದೆ | ದೇ | ದೈ | ದೊ | ದೋ | ದೌ | ದಂ | ದಃ | ದ್ |
ಧ | ಧಾ | ಧಿ | ಧೀ | ಧು | ಧೂ | ಧೃ | ಧೆ | ಧೇ | ಧೈ | ಧೊ | ಧೋ | ಧೌ | ಧಂ | ಧಃ | ಧ್ |
ನ | ನಾ | ನಿ | ನೀ | ನು | ನೂ | ನೃ | ನೆ | ನೇ | ನೈ | ನೊ | ನೋ | ನೌ | ನಂ | ನಃ | ನ್ |
ಪ | ಪಾ | ಪಿ | ಪೀ | ಪು | ಪೂ | ಪೃ | ಪೆ | ಪೇ | ಪೈ | ಪೊ | ಪೋ | ಪೌ | ಪಂ | ಪಃ | ಪ್ |
ಫ | ಫಾ | ಫಿ | ಫೀ | ಫು | ಫೂ | ಫೃ | ಫೆ | ಫೇ | ಫೈ | ಫೊ | ಫೋ | ಫೌ | ಫಂ | ಫಃ | ಫ್ |
ಬ | ಬಾ | ಬಿ | ಬೀ | ಬು | ಬೂ | ಬೃ | ಬೆ | ಬೇ | ಬೈ | ಬೊ | ಬೋ | ಬೌ | ಬಂ | ಬಃ | ಬ್ |
ಭ | ಭಾ | ಭಿ | ಭೀ | ಭು | ಭೂ | ಭೃ | ಭೆ | ಭೇ | ಭೈ | ಭೊ | ಭೋ | ಭೌ | ಭಂ | ಭಃ | ಭ್ |
ಮ | ಮಾ | ಮಿ | ಮೀ | ಮು | ಮೂ | ಮೃ | ಮೆ | ಮೇ | ಮೈ | ಮೊ | ಮೋ | ಮೌ | ಮಂ | ಮಃ | ಮ್ |
ಯ | ಯಾ | ಯಿ | ಯೀ | ಯು | ಯೂ | ಯೃ | ಯೆ | ಯೇ | ಯೈ | ಯೊ | ಯೋ | ಯೌ | ಯಂ | ಯಃ | ಯ್ |
ರ | ರಾ | ರಿ | ರೀ | ರು | ರೂ | ರೃ | ರೆ | ರೇ | ರೈ | ರೊ | ರೋ | ರೌ | ರಂ | ರಃ | |
ಲ | ಲಾ | ಲಿ | ಲೀ | ಲು | ಲೂ | ಲೃ | ಲೆ | ಲೇ | ಲೈ | ಲೊ | ಲೋ | ಲೌ | ಲಂ | ಲಃ | ಲ್ |
ವ | ವಾ | ವಿ | ವೀ | ವು | ವೂ | ವೃ | ವೆ | ವೇ | ವೈ | ವೊ | ವೋ | ವೌ | ವಂ | ವಃ | ವ್ |
ಶ | ಶಾ | ಶಿ | ಶೀ | ಶು | ಶೂ | ಶೃ | ಶೆ | ಶೇ | ಶೈ | ಶೊ | ಶೋ | ಶೌ | ಶಂ | ಶಃ | ಶ್ |
ಷ | ಷಾ | ಷಿ | ಷೀ | ಷು | ಷೂ | ಷೃ | ಷೆ | ಷೇ | ಷೈ | ಷೊ | ಷೋ | ಷೌ | ಷಂ | ಷಃ | ಷ್ |
ಸ | ಸಾ | ಸಿ | ಸೀ | ಸು | ಸೂ | ಸೃ | ಸೆ | ಸೇ | ಸೈ | ಸೊ | ಸೋ | ಸೌ | ಸಂ | ಸಃ | ಸ್ |
ಹ | ಹಾ | ಹಿ | ಹೀ | ಹು | ಹೂ | ಹೃ | ಹೆ | ಹೇ | ಹೈ | ಹೊ | ಹೋ | ಹೌ | ಹಂ | ಹಃ | |
ಳ | ಳಾ | ಳಿ | ಳೀ | ಳು | ಳೂ | ಳೃ | ಳೆ | ಳೇ | ಳೈ | ಳೊ | ಳೋ | ಳೌ | ಳಂ | ಳಃ | ಳ್ |
ಕನ್ನಡ ಗುಣಿತಾಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ.
ಗುಣಿತಾಕ್ಷರ ಮತ್ತು ಒತ್ತಕ್ಷರ
ಕನ್ನಡದಲ್ಲಿ ಪ್ರತಿಯೊಂದು ವ್ಯಂಜನಗಳಿಗೂ ಪ್ರತ್ಯೇಕ ಒತ್ತಕ್ಷರಗಳಿವೆ. ಅವುಗಳು ಹೀಗಿವೆ;
ಕ | ಖ | ಗ | ಘ | ಙ | ಚ | ಛ | ಜ | ಝ | ಞ | ಟ | ಠ | ಡ | ಢ | ಣ | ತ | ಥ | ದ | ಧ | ನ | ಪ | ಫ | ಬ | ಭ | ಮ | ಯ | ರ | ಱ | ಲ | ವ | ಶ | ಷ | ಸ | ಹ | ಳ | ೞ | |
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಕ | ಕ್ಕ | ಕ್ಖ | ಕ್ಗ | ಕ್ಘ | ಕ್ಙ | ಕ್ಚ | ಕ್ಛ | ಕ್ಜ | ಕ್ಝ | ಕ್ಞ | ಕ್ಟ | ಕ್ಠ | ಕ್ಡ | ಕ್ಢ | ಕ್ಣ | ಕ್ತ | ಕ್ಥ | ಕ್ದ | ಕ್ಧ | ಕ್ನ | ಕ್ಪ | ಕ್ಫ | ಕ್ಬ | ಕ್ಭ | ಕ್ಮ | ಕ್ಯ | ಕ್ರ | ಕ್ಱ | ಕ್ಲ | ಕ್ವ | ಕ್ಶ | ಕ್ಷ | ಕ್ಸ | ಕ್ಹ | ಕ್ಳ | ಕ್ೞ |
ಖ | ಖ್ಕ | ಖ್ಖ | ಖ್ಗ | ಖ್ಘ | ಖ್ಙ | ಖ್ಚ | ಖ್ಛ | ಖ್ಜ | ಖ್ಝ | ಖ್ಞ | ಖ್ಟ | ಖ್ಠ | ಖ್ಡ | ಖ್ಢ | ಖ್ಣ | ಖ್ತ | ಖ್ಥ | ಖ್ದ | ಖ್ಧ | ಖ್ನ | ಖ್ಪ | ಖ್ಫ | ಖ್ಬ | ಖ್ಭ | ಖ್ಮ | ಖ್ಯ | ಖ್ರ | ಖ್ಱ | ಖ್ಲ | ಖ್ವ | ಖ್ಶ | ಖ್ಷ | ಖ್ಸ | ಖ್ಹ | ಖ್ಳ | ಖ್ೞ |
ಗ | ಗ್ಕ | ಗ್ಖ | ಗ್ಗ | ಗ್ಘ | ಗ್ಙ | ಗ್ಚ | ಗ್ಛ | ಗ್ಜ | ಗ್ಝ | ಗ್ಞ | ಗ್ಟ | ಗ್ಠ | ಗ್ಡ | ಗ್ಢ | ಗ್ಣ | ಗ್ತ | ಗ್ಥ | ಗ್ದ | ಗ್ಧ | ಗ್ನ | ಗ್ಪ | ಗ್ಫ | ಗ್ಬ | ಗ್ಭ | ಗ್ಮ | ಗ್ಯ | ಗ್ರ | ಗ್ಱ | ಗ್ಲ | ಗ್ವ | ಗ್ಶ | ಗ್ಷ | ಗ್ಸ | ಗ್ಹ | ಗ್ಳ | ಗ್ೞ |
ಘ | ಘ್ಕ | ಘ್ಖ | ಘ್ಗ | ಘ್ಘ | ಘ್ಙ | ಘ್ಚ | ಘ್ಛ | ಘ್ಜ | ಘ್ಝ | ಘ್ಞ | ಘ್ಟ | ಘ್ಠ | ಘ್ಡ | ಘ್ಢ | ಘ್ಣ | ಘ್ತ | ಘ್ಥ | ಘ್ದ | ಘ್ಧ | ಘ್ನ | ಘ್ಪ | ಘ್ಫ | ಘ್ಬ | ಘ್ಭ | ಘ್ಮ | ಘ್ಯ | ಘ್ರ | ಘ್ಱ | ಘ್ಲ | ಘ್ವ | ಘ್ಶ | ಘ್ಷ | ಘ್ಸ | ಘ್ಹ | ಘ್ಳ | ಘ್ೞ |
ಙ | ಙ್ಕ | ಙ್ಖ | ಙ್ಗ | ಙ್ಘ | ಙ್ಙ | ಙ್ಚ | ಙ್ಛ | ಙ್ಜ | ಙ್ಝ | ಙ್ಞ | ಙ್ಟ | ಙ್ಠ | ಙ್ಡ | ಙ್ಢ | ಙ್ಣ | ಙ್ತ | ಙ್ಥ | ಙ್ದ | ಙ್ಧ | ಙ್ನ | ಙ್ಪ | ಙ್ಫ | ಙ್ಬ | ಙ್ಭ | ಙ್ಮ | ಙ್ಯ | ಙ್ರ | ಙ್ಱ | ಙ್ಲ | ಙ್ವ | ಙ್ಶ | ಙ್ಷ | ಙ್ಸ | ಙ್ಹ | ಙ್ಳ | ಙ್ೞ |
ಚ | ಚ್ಕ | ಚ್ಖ | ಚ್ಗ | ಚ್ಘ | ಚ್ಙ | ಚ್ಚ | ಚ್ಛ | ಚ್ಜ | ಚ್ಝ | ಚ್ಞ | ಚ್ಟ | ಚ್ಠ | ಚ್ಡ | ಚ್ಢ | ಚ್ಣ | ಚ್ತ | ಚ್ಥ | ಚ್ದ | ಚ್ಧ | ಚ್ನ | ಚ್ಪ | ಚ್ಫ | ಚ್ಬ | ಚ್ಭ | ಚ್ಮ | ಚ್ಯ | ಚ್ರ | ಚ್ಱ | ಚ್ಲ | ಚ್ವ | ಚ್ಶ | ಚ್ಷ | ಚ್ಸ | ಚ್ಹ | ಚ್ಳ | ಚ್ೞ |
ಛ | ಛ್ಕ | ಛ್ಖ | ಛ್ಗ | ಛ್ಘ | ಛ್ಙ | ಛ್ಚ | ಛ್ಛ | ಛ್ಜ | ಛ್ಝ | ಛ್ಞ | ಛ್ಟ | ಛ್ಠ | ಛ್ಡ | ಛ್ಢ | ಛ್ಣ | ಛ್ತ | ಛ್ಥ | ಛ್ದ | ಛ್ಧ | ಛ್ನ | ಛ್ಪ | ಛ್ಫ | ಛ್ಬ | ಛ್ಭ | ಛ್ಮ | ಛ್ಯ | ಛ್ರ | ಛ್ಱ | ಛ್ಲ | ಛ್ವ | ಛ್ಶ | ಛ್ಷ | ಛ್ಸ | ಛ್ಹ | ಛ್ಳ | ಛ್ೞ |
ಜ | ಜ್ಕ | ಜ್ಖ | ಜ್ಗ | ಜ್ಘ | ಜ್ಙ | ಜ್ಚ | ಜ್ಛ | ಜ್ಜ | ಜ್ಝ | ಜ್ಞ | ಜ್ಟ | ಜ್ಠ | ಜ್ಡ | ಜ್ಢ | ಜ್ಣ | ಜ್ತ | ಜ್ಥ | ಜ್ದ | ಜ್ಧ | ಜ್ನ | ಜ್ಪ | ಜ್ಫ | ಜ್ಬ | ಜ್ಭ | ಜ್ಮ | ಜ್ಯ | ಜ್ರ | ಜ್ಱ | ಜ್ಲ | ಜ್ವ | ಜ್ಶ | ಜ್ಷ | ಜ್ಸ | ಜ್ಹ | ಜ್ಳ | ಜ್ೞ |
ಝ | ಝ್ಕ | ಝ್ಖ | ಝ್ಗ | ಝ್ಘ | ಝ್ಙ | ಝ್ಚ | ಝ್ಛ | ಝ್ಜ | ಝ್ಝ | ಝ್ಞ | ಝ್ಟ | ಝ್ಠ | ಝ್ಡ | ಝ್ಢ | ಝ್ಣ | ಝ್ತ | ಝ್ಥ | ಝ್ದ | ಝ್ಧ | ಝ್ನ | ಝ್ಪ | ಝ್ಫ | ಝ್ಬ | ಝ್ಭ | ಝ್ಮ | ಝ್ಯ | ಝ್ರ | ಝ್ಱ | ಝ್ಲ | ಝ್ವ | ಝ್ಶ | ಝ್ಷ | ಝ್ಸ | ಝ್ಹ | ಝ್ಳ | ಝ್ೞ |
ಞ | ಞ್ಕ | ಞ್ಖ | ಞ್ಗ | ಞ್ಘ | ಞ್ಙ | ಞ್ಚ | ಞ್ಛ | ಞ್ಜ | ಞ್ಝ | ಞ್ಞ | ಞ್ಟ | ಞ್ಠ | ಞ್ಡ | ಞ್ಢ | ಞ್ಣ | ಞ್ತ | ಞ್ಥ | ಞ್ದ | ಞ್ಧ | ಞ್ನ | ಞ್ಪ | ಞ್ಫ | ಞ್ಬ | ಞ್ಭ | ಞ್ಮ | ಞ್ಯ | ಞ್ರ | ಞ್ಱ | ಞ್ಲ | ಞ್ವ | ಞ್ಶ | ಞ್ಷ | ಞ್ಸ | ಞ್ಹ | ಞ್ಳ | ಞ್ೞ |
ಟ | ಟ್ಕ | ಟ್ಖ | ಟ್ಗ | ಟ್ಘ | ಟ್ಙ | ಟ್ಚ | ಟ್ಛ | ಟ್ಜ | ಟ್ಝ | ಟ್ಞ | ಟ್ಟ | ಟ್ಠ | ಟ್ಡ | ಟ್ಢ | ಟ್ಣ | ಟ್ತ | ಟ್ಥ | ಟ್ದ | ಟ್ಧ | ಟ್ನ | ಟ್ಪ | ಟ್ಫ | ಟ್ಬ | ಟ್ಭ | ಟ್ಮ | ಟ್ಯ | ಟ್ರ | ಟ್ಱ | ಟ್ಲ | ಟ್ವ | ಟ್ಶ | ಟ್ಷ | ಟ್ಸ | ಟ್ಹ | ಟ್ಳ | ಟ್ೞ |
ಠ | ಠ್ಕ | ಠ್ಖ | ಠ್ಗ | ಠ್ಘ | ಠ್ಙ | ಠ್ಚ | ಠ್ಛ | ಠ್ಜ | ಠ್ಝ | ಠ್ಞ | ಠ್ಟ | ಠ್ಠ | ಠ್ಡ | ಠ್ಢ | ಠ್ಣ | ಠ್ತ | ಠ್ಥ | ಠ್ದ | ಠ್ಧ | ಠ್ನ | ಠ್ಪ | ಠ್ಫ | ಠ್ಬ | ಠ್ಭ | ಠ್ಮ | ಠ್ಯ | ಠ್ರ | ಠ್ಱ | ಠ್ಲ | ಠ್ವ | ಠ್ಶ | ಠ್ಷ | ಠ್ಸ | ಠ್ಹ | ಠ್ಳ | ಠ್ೞ |
ಡ | ಡ್ಕ | ಡ್ಖ | ಡ್ಗ | ಡ್ಘ | ಡ್ಙ | ಡ್ಚ | ಡ್ಛ | ಡ್ಜ | ಡ್ಝ | ಡ್ಞ | ಡ್ಟ | ಡ್ಠ | ಡ್ಡ | ಡ್ಢ | ಡ್ಣ | ಡ್ತ | ಡ್ಥ | ಡ್ದ | ಡ್ಧ | ಡ್ನ | ಡ್ಪ | ಡ್ಫ | ಡ್ಬ | ಡ್ಭ | ಡ್ಮ | ಡ್ಯ | ಡ್ರ | ಡ್ಱ | ಡ್ಲ | ಡ್ವ | ಡ್ಶ | ಡ್ಷ | ಡ್ಸ | ಡ್ಹ | ಡ್ಳ | ಡ್ೞ |
ಢ | ಢ್ಕ | ಢ್ಖ | ಢ್ಗ | ಢ್ಘ | ಢ್ಙ | ಢ್ಚ | ಢ್ಛ | ಢ್ಜ | ಢ್ಝ | ಢ್ಞ | ಢ್ಟ | ಢ್ಠ | ಢ್ಡ | ಢ್ಢ | ಢ್ಣ | ಢ್ತ | ಢ್ಥ | ಢ್ದ | ಢ್ಧ | ಢ್ನ | ಢ್ಪ | ಢ್ಫ | ಢ್ಬ | ಢ್ಭ | ಢ್ಮ | ಢ್ಯ | ಢ್ರ | ಢ್ಱ | ಢ್ಲ | ಢ್ವ | ಢ್ಶ | ಢ್ಷ | ಢ್ಸ | ಢ್ಹ | ಢ್ಳ | ಢ್ೞ |
ಣ | ಣ್ಕ | ಣ್ಖ | ಣ್ಗ | ಣ್ಘ | ಣ್ಙ | ಣ್ಚ | ಣ್ಛ | ಣ್ಜ | ಣ್ಝ | ಣ್ಞ | ಣ್ಟ | ಣ್ಠ | ಣ್ಡ | ಣ್ಢ | ಣ್ಣ | ಣ್ತ | ಣ್ಥ | ಣ್ದ | ಣ್ಧ | ಣ್ನ | ಣ್ಪ | ಣ್ಫ | ಣ್ಬ | ಣ್ಭ | ಣ್ಮ | ಣ್ಯ | ಣ್ರ | ಣ್ಱ | ಣ್ಲ | ಣ್ವ | ಣ್ಶ | ಣ್ಷ | ಣ್ಸ | ಣ್ಹ | ಣ್ಳ | ಣ್ೞ |
ತ | ತ್ಕ | ತ್ಖ | ತ್ಗ | ತ್ಘ | ತ್ಙ | ತ್ಚ | ತ್ಛ | ತ್ಜ | ತ್ಝ | ತ್ಞ | ತ್ಟ | ತ್ಠ | ತ್ಡ | ತ್ಢ | ತ್ಣ | ತ್ತ | ತ್ಥ | ತ್ದ | ತ್ಧ | ತ್ನ | ತ್ಪ | ತ್ಫ | ತ್ಬ | ತ್ಭ | ತ್ಮ | ತ್ಯ | ತ್ರ | ತ್ಱ | ತ್ಲ | ತ್ವ | ತ್ಶ | ತ್ಷ | ತ್ಸ | ತ್ಹ | ತ್ಳ | ತ್ೞ |
ಥ | ಥ್ಕ | ಥ್ಖ | ಥ್ಗ | ಥ್ಘ | ಥ್ಙ | ಥ್ಚ | ಥ್ಛ | ಥ್ಜ | ಥ್ಝ | ಥ್ಞ | ಥ್ಟ | ಥ್ಠ | ಥ್ಡ | ಥ್ಢ | ಥ್ಣ | ಥ್ತ | ಥ್ಥ | ಥ್ದ | ಥ್ಧ | ಥ್ನ | ಥ್ಪ | ಥ್ಫ | ಥ್ಬ | ಥ್ಭ | ಥ್ಮ | ಥ್ಯ | ಥ್ರ | ಥ್ಱ | ಥ್ಲ | ಥ್ವ | ಥ್ಶ | ಥ್ಷ | ಥ್ಸ | ಥ್ಹ | ಥ್ಳ | ಥ್ೞ |
ದ | ದ್ಕ | ದ್ಖ | ದ್ಗ | ದ್ಘ | ದ್ಙ | ದ್ಚ | ದ್ಛ | ದ್ಜ | ದ್ಝ | ದ್ಞ | ದ್ಟ | ದ್ಠ | ದ್ಡ | ದ್ಢ | ದ್ಣ | ದ್ತ | ದ್ಥ | ದ್ದ | ದ್ಧ | ದ್ನ | ದ್ಪ | ದ್ಫ | ದ್ಬ | ದ್ಭ | ದ್ಮ | ದ್ಯ | ದ್ರ | ದ್ಱ | ದ್ಲ | ದ್ವ | ದ್ಶ | ದ್ಷ | ದ್ಸ | ದ್ಹ | ದ್ಳ | ದ್ೞ |
ಧ | ಧ್ಕ | ಧ್ಖ | ಧ್ಗ | ಧ್ಘ | ಧ್ಙ | ಧ್ಚ | ಧ್ಛ | ಧ್ಜ | ಧ್ಝ | ಧ್ಞ | ಧ್ಟ | ಧ್ಠ | ಧ್ಡ | ಧ್ಢ | ಧ್ಣ | ಧ್ತ | ಧ್ಥ | ಧ್ದ | ಧ್ಧ | ಧ್ನ | ಧ್ಪ | ಧ್ಫ | ಧ್ಬ | ಧ್ಭ | ಧ್ಮ | ಧ್ಯ | ಧ್ರ | ಧ್ಱ | ಧ್ಲ | ಧ್ವ | ಧ್ಶ | ಧ್ಷ | ಧ್ಸ | ಧ್ಹ | ಧ್ಳ | ಧ್ೞ |
ನ | ನ್ಕ | ನ್ಖ | ನ್ಗ | ನ್ಘ | ನ್ಙ | ನ್ಚ | ನ್ಛ | ನ್ಜ | ನ್ಝ | ನ್ಞ | ನ್ಟ | ನ್ಠ | ನ್ಡ | ನ್ಢ | ನ್ಣ | ನ್ತ | ನ್ಥ | ನ್ದ | ನ್ಧ | ನ್ನ | ನ್ಪ | ನ್ಫ | ನ್ಬ | ನ್ಭ | ನ್ಮ | ನ್ಯ | ನ್ರ | ನ್ಱ | ನ್ಲ | ನ್ವ | ನ್ಶ | ನ್ಷ | ನ್ಸ | ನ್ಹ | ನ್ಳ | ನ್ೞ |
ಪ | ಪ್ಕ | ಪ್ಖ | ಪ್ಗ | ಪ್ಘ | ಪ್ಙ | ಪ್ಚ | ಪ್ಛ | ಪ್ಜ | ಪ್ಝ | ಪ್ಞ | ಪ್ಟ | ಪ್ಠ | ಪ್ಡ | ಪ್ಢ | ಪ್ಣ | ಪ್ತ | ಪ್ಥ | ಪ್ದ | ಪ್ಧ | ಪ್ನ | ಪ್ಪ | ಪ್ಫ | ಪ್ಬ | ಪ್ಭ | ಪ್ಮ | ಪ್ಯ | ಪ್ರ | ಪ್ಱ | ಪ್ಲ | ಪ್ವ | ಪ್ಶ | ಪ್ಷ | ಪ್ಸ | ಪ್ಹ | ಪ್ಳ | ಪ್ೞ |
ಫ | ಫ್ಕ | ಫ್ಖ | ಫ್ಗ | ಫ್ಘ | ಫ್ಙ | ಫ್ಚ | ಫ್ಛ | ಫ್ಜ | ಫ್ಝ | ಫ್ಞ | ಫ್ಟ | ಫ್ಠ | ಫ್ಡ | ಫ್ಢ | ಫ್ಣ | ಫ್ತ | ಫ್ಥ | ಫ್ದ | ಫ್ಧ | ಫ್ನ | ಫ್ಪ | ಫ್ಫ | ಫ್ಬ | ಫ್ಭ | ಫ್ಮ | ಫ್ಯ | ಫ್ರ | ಫ್ಱ | ಫ್ಲ | ಫ್ವ | ಫ್ಶ | ಫ್ಷ | ಫ್ಸ | ಫ್ಹ | ಫ್ಳ | ಫ್ೞ |
ಬ | ಬ್ಕ | ಬ್ಖ | ಬ್ಗ | ಬ್ಘ | ಬ್ಙ | ಬ್ಚ | ಬ್ಛ | ಬ್ಜ | ಬ್ಝ | ಬ್ಞ | ಬ್ಟ | ಬ್ಠ | ಬ್ಡ | ಬ್ಢ | ಬ್ಣ | ಬ್ತ | ಬ್ಥ | ಬ್ದ | ಬ್ಧ | ಬ್ನ | ಬ್ಪ | ಬ್ಫ | ಬ್ಬ | ಬ್ಭ | ಬ್ಮ | ಬ್ಯ | ಬ್ರ | ಬ್ಱ | ಬ್ಲ | ಬ್ವ | ಬ್ಶ | ಬ್ಷ | ಬ್ಸ | ಬ್ಹ | ಬ್ಳ | ಬ್ೞ |
ಭ | ಭ್ಕ | ಭ್ಖ | ಭ್ಗ | ಭ್ಘ | ಭ್ಙ | ಭ್ಚ | ಭ್ಛ | ಭ್ಜ | ಭ್ಝ | ಭ್ಞ | ಭ್ಟ | ಭ್ಠ | ಭ್ಡ | ಭ್ಢ | ಭ್ಣ | ಭ್ತ | ಭ್ಥ | ಭ್ದ | ಭ್ಧ | ಭ್ನ | ಭ್ಪ | ಭ್ಫ | ಭ್ಬ | ಭ್ಭ | ಭ್ಮ | ಭ್ಯ | ಭ್ರ | ಭ್ಱ | ಭ್ಲ | ಭ್ವ | ಭ್ಶ | ಭ್ಷ | ಭ್ಸ | ಭ್ಹ | ಭ್ಳ | ಭ್ೞ |
ಮ | ಮ್ಕ | ಮ್ಖ | ಮ್ಗ | ಮ್ಘ | ಮ್ಙ | ಮ್ಚ | ಮ್ಛ | ಮ್ಜ | ಮ್ಝ | ಮ್ಞ | ಮ್ಟ | ಮ್ಠ | ಮ್ಡ | ಮ್ಢ | ಮ್ಣ | ಮ್ತ | ಮ್ಥ | ಮ್ದ | ಮ್ಧ | ಮ್ನ | ಮ್ಪ | ಮ್ಫ | ಮ್ಬ | ಮ್ಭ | ಮ್ಮ | ಮ್ಯ | ಮ್ರ | ಮ್ಱ | ಮ್ಲ | ಮ್ವ | ಮ್ಶ | ಮ್ಷ | ಮ್ಸ | ಮ್ಹ | ಮ್ಳ | ಮ್ೞ |
ಯ | ಯ್ಕ | ಯ್ಖ | ಯ್ಗ | ಯ್ಘ | ಯ್ಙ | ಯ್ಚ | ಯ್ಛ | ಯ್ಜ | ಯ್ಝ | ಯ್ಞ | ಯ್ಟ | ಯ್ಠ | ಯ್ಡ | ಯ್ಢ | ಯ್ಣ | ಯ್ತ | ಯ್ಥ | ಯ್ದ | ಯ್ಧ | ಯ್ನ | ಯ್ಪ | ಯ್ಫ | ಯ್ಬ | ಯ್ಭ | ಯ್ಮ | ಯ್ಯ | ಯ್ರ | ಯ್ಱ | ಯ್ಲ | ಯ್ವ | ಯ್ಶ | ಯ್ಷ | ಯ್ಸ | ಯ್ಹ | ಯ್ಳ | ಯ್ೞ |
ರ | ರ್ಕ | ರ್ಖ | ರ್ಗ | ರ್ಘ | ರ್ಙ | ರ್ಚ | ರ್ಛ | ರ್ಜ | ರ್ಝ | ರ್ಞ | ರ್ಟ | ರ್ಠ | ರ್ಡ | ರ್ಢ | ರ್ಣ | ರ್ತ | ರ್ಥ | ರ್ದ | ರ್ಧ | ರ್ನ | ರ್ಪ | ರ್ಫ | ರ್ಬ | ರ್ಭ | ರ್ಮ | ರ್ಯ | ರ್ರ | ರ್ಱ | ರ್ಲ | ರ್ವ | ರ್ಶ | ರ್ಷ | ರ್ಸ | ರ್ಹ | ರ್ಳ | ರ್ೞ |
ಱ | ಱ್ಕ | ಱ್ಖ | ಱ್ಗ | ಱ್ಘ | ಱ್ಙ | ಱ್ಚ | ಱ್ಛ | ಱ್ಜ | ಱ್ಝ | ಱ್ಞ | ಱ್ಟ | ಱ್ಠ | ಱ್ಡ | ಱ್ಢ | ಱ್ಣ | ಱ್ತ | ಱ್ಥ | ಱ್ದ | ಱ್ಧ | ಱ್ನ | ಱ್ಪ | ಱ್ಫ | ಱ್ಬ | ಱ್ಭ | ಱ್ಮ | ಱ್ಯ | ಱ್ರ | ಱ್ಱ | ಱ್ಲ | ಱ್ವ | ಱ್ಶ | ಱ್ಷ | ಱ್ಸ | ಱ್ಹ | ಱ್ಳ | ಱ್ೞ |
ಲ | ಲ್ಕ | ಲ್ಖ | ಲ್ಗ | ಲ್ಘ | ಲ್ಙ | ಲ್ಚ | ಲ್ಛ | ಲ್ಜ | ಲ್ಝ | ಲ್ಞ | ಲ್ಟ | ಲ್ಠ | ಲ್ಡ | ಲ್ಢ | ಲ್ಣ | ಲ್ತ | ಲ್ಥ | ಲ್ದ | ಲ್ಧ | ಲ್ನ | ಲ್ಪ | ಲ್ಫ | ಲ್ಬ | ಲ್ಭ | ಲ್ಮ | ಲ್ಯ | ಲ್ರ | ಲ್ಱ | ಲ್ಲ | ಲ್ವ | ಲ್ಶ | ಲ್ಷ | ಲ್ಸ | ಲ್ಹ | ಲ್ಳ | ಲ್ೞ |
ವ | ವ್ಕ | ವ್ಖ | ವ್ಗ | ವ್ಘ | ವ್ಙ | ವ್ಚ | ವ್ಛ | ವ್ಜ | ವ್ಝ | ವ್ಞ | ವ್ಟ | ವ್ಠ | ವ್ಡ | ವ್ಢ | ವ್ಣ | ವ್ತ | ವ್ಥ | ವ್ದ | ವ್ಧ | ವ್ನ | ವ್ಪ | ವ್ಫ | ವ್ಬ | ವ್ಭ | ವ್ಮ | ವ್ಯ | ವ್ರ | ವ್ಱ | ವ್ಲ | ವ್ವ | ವ್ಶ | ವ್ಷ | ವ್ಸ | ವ್ಹ | ವ್ಳ | ವ್ೞ |
ಶ | ಶ್ಕ | ಶ್ಖ | ಶ್ಗ | ಶ್ಘ | ಶ್ಙ | ಶ್ಚ | ಶ್ಛ | ಶ್ಜ | ಶ್ಝ | ಶ್ಞ | ಶ್ಟ | ಶ್ಠ | ಶ್ಡ | ಶ್ಢ | ಶ್ಣ | ಶ್ತ | ಶ್ಥ | ಶ್ದ | ಶ್ಧ | ಶ್ನ | ಶ್ಪ | ಶ್ಫ | ಶ್ಬ | ಶ್ಭ | ಶ್ಮ | ಶ್ಯ | ಶ್ರ | ಶ್ಱ | ಶ್ಲ | ಶ್ವ | ಶ್ಶ | ಶ್ಷ | ಶ್ಸ | ಶ್ಹ | ಶ್ಳ | ಶ್ೞ |
ಷ | ಷ್ಕ | ಷ್ಖ | ಷ್ಗ | ಷ್ಘ | ಷ್ಙ | ಷ್ಚ | ಷ್ಛ | ಷ್ಜ | ಷ್ಝ | ಷ್ಞ | ಷ್ಟ | ಷ್ಠ | ಷ್ಡ | ಷ್ಢ | ಷ್ಣ | ಷ್ತ | ಷ್ಥ | ಷ್ದ | ಷ್ಧ | ಷ್ನ | ಷ್ಪ | ಷ್ಫ | ಷ್ಬ | ಷ್ಭ | ಷ್ಮ | ಷ್ಯ | ಷ್ರ | ಷ್ಱ | ಷ್ಲ | ಷ್ವ | ಷ್ಶ | ಷ್ಷ | ಷ್ಸ | ಷ್ಹ | ಷ್ಳ | ಷ್ೞ |
ಸ | ಸ್ಕ | ಸ್ಖ | ಸ್ಗ | ಸ್ಘ | ಸ್ಙ | ಸ್ಚ | ಸ್ಛ | ಸ್ಜ | ಸ್ಝ | ಸ್ಞ | ಸ್ಟ | ಸ್ಠ | ಸ್ಡ | ಸ್ಢ | ಸ್ಣ | ಸ್ತ | ಸ್ಥ | ಸ್ದ | ಸ್ಧ | ಸ್ನ | ಸ್ಪ | ಸ್ಫ | ಸ್ಬ | ಸ್ಭ | ಸ್ಮ | ಸ್ಯ | ಸ್ರ | ಸ್ಱ | ಸ್ಲ | ಸ್ವ | ಸ್ಶ | ಸ್ಷ | ಸ್ಸ | ಸ್ಹ | ಸ್ಳ | ಸ್ೞ |
ಹ | ಹ್ಕ | ಹ್ಖ | ಹ್ಗ | ಹ್ಘ | ಹ್ಙ | ಹ್ಚ | ಹ್ಛ | ಹ್ಜ | ಹ್ಝ | ಹ್ಞ | ಹ್ಟ | ಹ್ಠ | ಹ್ಡ | ಹ್ಢ | ಹ್ಣ | ಹ್ತ | ಹ್ಥ | ಹ್ದ | ಹ್ಧ | ಹ್ನ | ಹ್ಪ | ಹ್ಫ | ಹ್ಬ | ಹ್ಭ | ಹ್ಮ | ಹ್ಯ | ಹ್ರ | ಹ್ಱ | ಹ್ಲ | ಹ್ವ | ಹ್ಶ | ಹ್ಷ | ಹ್ಸ | ಹ್ಹ | ಹ್ಳ | ಹ್ೞ |
ಳ | ಳ್ಕ | ಳ್ಖ | ಳ್ಗ | ಳ್ಘ | ಳ್ಙ | ಳ್ಚ | ಳ್ಛ | ಳ್ಜ | ಳ್ಝ | ಳ್ಞ | ಳ್ಟ | ಳ್ಠ | ಳ್ಡ | ಳ್ಢ | ಳ್ಣ | ಳ್ತ | ಳ್ಥ | ಳ್ದ | ಳ್ಧ | ಳ್ನ | ಳ್ಪ | ಳ್ಫ | ಳ್ಬ | ಳ್ಭ | ಳ್ಮ | ಳ್ಯ | ಳ್ರ | ಳ್ಱ | ಳ್ಲ | ಳ್ವ | ಳ್ಶ | ಳ್ಷ | ಳ್ಸ | ಳ್ಹ | ಳ್ಳ | ಳ್ೞ |
ೞ | ೞ್ಕ | ೞ್ಖ | ೞ್ಗ | ೞ್ಘ | ೞ್ಙ | ೞ್ಚ | ೞ್ಛ | ೞ್ಜ | ೞ್ಝ | ೞ್ಞ | ೞ್ಟ | ೞ್ಠ | ೞ್ಡ | ೞ್ಢ | ೞ್ಣ | ೞ್ತ | ೞ್ಥ | ೞ್ದ | ೞ್ಧ | ೞ್ನ | ೞ್ಪ | ೞ್ಫ | ೞ್ಬ | ೞ್ಭ | ೞ್ಮ | ೞ್ಯ | ೞ್ರ | ೞ್ಱ | ೞ್ಲ | ೞ್ವ | ೞ್ಶ | ೞ್ಷ | ೞ್ಸ | ೞ್ಹ | ೞ್ಳ | ೞ್ೞ |
ಸಂಯುಕ್ತಾಕ್ಷರಗಳಲ್ಲಿ ಎರಡು ವಿಧಗಳಿವೆ.
ಕನ್ನಡ ಒತ್ತಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ.
ಅವರ್ಗೀಯ ವ್ಯಂಜನ ಎಂದರೇನು?ಅವು ಎಷ್ಟಿವೆ?
ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ.
ನೋಡಿ
ಹೊರಸಂಪರ್ಕ
- ಕರ್ನಾಟಕ ಜನಾಂಗದ ಮೊತ್ತಮೊದಲ ಬರಹ ಭಾಷೆ, ಪ್ರಾಕೃತ; ಲಿಪಿ, ಬ್ರಾಹ್ಮೀ. ಇಲ್ಲಿಯ ಜನಾಂಗಕ್ಕೆ ಇವನ್ನು ಪರಿಚಯಿಸಿದವನು, ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಪಾಟಲೀಪುತ್ರ (ಬಿಹಾರ ರಾಜ್ಯ)ದಿಂದ ಆಳುತ್ತಿದ್ದ ಮೌರ್ಯಚಕ್ರವರ್ತಿ ಅಶೋಕ. ಒಂದು ಭಾಷೆ ಮತ್ತು ಒಂದು ಲಿಪಿಯ ಮೂಲಕ ಈತನು ಬೆಸೆದ ದಖ್ಖಣವು ಸುಮಾರು ಆರು ಶತಮಾನಗಳ ಕಾಲ (ಕ್ರಿ.ಪೂ. 3ರಿಂದ ಕ್ರಿ.ಶ. 3ರವರೆಗೆ) ಈ ಮಾಧ್ಯಮಗಳ ಮೂಲಕವೇ ಸಂಭಾಷಿಸಿತು.[೪]
ಉಲ್ಲೇಖಗಳು
- ↑ http://mupadhyahiri.blogspot.in/2011/07/blog-post_6978.html
- ↑ http://shabdkosh.com/kn/translate/ಅಕ್ಷರಮಾಲೆ/ಅಕ್ಷರಮಾಲೆ-meaning-in-English-Kannada
- ↑ ಕೇಶಿರಾಜನ ಶಬ್ದಮಣಿದರ್ಪಣಂ
- ↑ http://www.prajavani.net/news/article/2017/02/05/470193.html Archived 2017-02-04 ವೇಬ್ಯಾಕ್ ಮೆಷಿನ್ ನಲ್ಲಿ. ಭಾಷೆಗಳ ಬಳ್ಳಿ ಮತ್ತು ಅಕ್ಷರಸಮಾಜ;ಷ. ಶೆಟ್ಟರ್;5 Feb, 2017