ಎಥಿಲೀನ್
ಎಥಿಲೀನ್ ಆಲ್ಕೀನ್ ವರ್ಗಕ್ಕೆ ಸೇರಿದ ಆಲಿಫ್ಯಾಟಿಕ್ ಹೈಡ್ರೋಕಾರ್ಬನ್. ಇದರ ರಾಸಾಯನಿಕಸೂತ್ರ C2H4. ಇದು ಅಪರ್ಯಾಪ್ತ ಸಂಯುಕ್ತವಾದ್ದರಿಂದ ಇದರಲ್ಲಿ ಎರಡು ಇಂಗಾಲದ ಪರಮಾಣುಗಳು ಸಿಗ್ಮ (σ) ಮತ್ತು ಪೈ (π) ಬಂಧಗಳ ಮೂಲಕ ಸೇರಿಸಲ್ಪಟ್ಟಿವೆ (ದ್ವಿಬಂಧಗಳು-ಡಬಲ್ ಬಾಂಡ್ಸ್). ಎಥಿಲೀನ್ ರಚನೆಯನ್ನು ಮೂರು ಮಾದರಿಯಲ್ಲಿ ತೋರಿಸುವ ವಾಡಿಕೆಯಿದೆ. π ಬಂಧ σ ಬಂಧಕ್ಕಿಂತ ದುರ್ಬಲವಾಗಿರುವುದರಿಂದ ಸುಲಭವಾಗಿ ಭೇದಿಸಲ್ಪಡುತ್ತದೆ. ಈ ಗುಣದಿಂದ ಎಥಿಲೀನ್ ಅಣುವಿನ ದ್ವಿಬಂಧಕ್ಕೆ ಕ್ಲೋರಿನ್, ಬ್ರೋಮಿನ್, ಹೈಡ್ರೊಜನ್ ಕ್ಲೋರೈಡ್, ಆಕ್ಸಿಜನ್ನುಗಳನ್ನು ಸೇರಿಸಬಹುದು.
ಈ ಕ್ರಿಯೆಗಳಿಂದ ಎಥಿಲೀನ್ ಪರ್ಯಾಪ್ತ ಅಣುವಾಗಿ ಪರಿವರ್ತನೆಗೊಳ್ಳುತ್ತದೆ.[೧]ICSC 0475
ಮೂಲಗಳು
[ಬದಲಾಯಿಸಿ]ಪೆಟ್ರೋಲಿಯಂ ಮತ್ತು ನಿಸರ್ಗ ಅನಿಲದಲ್ಲಿ (ನ್ಯಾಚುರಲ್ ಗ್ಯಾಸ್) ಹಾಗೂ ನ್ಯಾಫ್ಥಾದಲ್ಲಿ ಎಥಿಲೀನ್ ದೊರೆಯುತ್ತದೆ. ಮೋಟಾರ್ ವಾಹನಗಳು ಉಗುಳುವ ಹೊಗೆಯಲ್ಲಿಯೂ ಅಲ್ಪ ಪ್ರಮಾಣದಲ್ಲಿ ಇದೆಯೆಂದು ಪತ್ತೆಮಾಡಲಾಗಿದೆ.
ತಯಾರಿಕೆ
[ಬದಲಾಯಿಸಿ]ಪೆಟ್ರೋಲಿಯಂ ಮತ್ತು ನಿಸರ್ಗಾನಿಲಗಳನ್ನು ಅಧಿಕ ಉಷ್ಣತೆಯಲ್ಲಿ ಕಾಯಿಸಿದಾಗ (ಉತ್ತಾಪ ವಿಚ್ಛೇದನೆ-ಪೈರೋಲಿಸಿಸ್ ಕ್ರ್ಯಾಕಿಂಗ್) ಎಥಿಲೀನ್ ಉತ್ಪತ್ತಿಯಾಗುತ್ತದೆ. ಕಚ್ಚಾ ಪೆಟ್ರೋಲಿಯಂ ಎಣ್ಣೆಯ ಶುದ್ಧೀಕರಣದಲ್ಲಿ ಹೊರಬರುವ ಅನಿಲಗಳಲ್ಲಿ ಎಥಿಲೀನ್ ಹೆಚ್ಚಿನ ಪ್ರಮಾಣದಲ್ಲಿರುವುದು. ಔದ್ಯೋಗಿಕವಾಗಿ ಎಥಿಲೀನನ್ನು ಮೇಲೆ ಹೇಳಿದ ಅನಿಲಗಳಿಂದ ಆಸವನ (ಡಿಸ್ಟಿಲ್ಲೇಷನ್) ಮತ್ತು ಅಧಿಶೋಷಣ (ಅಡ್‍ಸಾರ್ಪ್ಷನ್) ವಿಧಾನಗಳಿಂದ ಪಡೆಯುತ್ತಾರೆ. ಪ್ರೋಪೈಲಿನ್ ಮತ್ತು ಬ್ಯೂಟಾಡಯೀನ್ ಅನಿಲಗಳನ್ನೊಳಗೊಂಡು ಅಶುದ್ಧವಾಗಿದ್ದರೂ ಈ ವಿಧಾನಗಳಿಂದ ಬರುವ ಎಥಿಲೀನನ್ನು ನೇರವಾಗಿ ಅನೇಕ ರಾಸಾಯನಿಕ ಕ್ರಿಯೆಗಳಿಗೆ ಉಪಯೋಗಿಸುತ್ತಾರೆ. ಶುದ್ಧವಾದ ಎಥಿಲೀನನ್ನು ಅಲ್ಪಪ್ರಮಾಣದಲ್ಲಿ ಮದ್ಯಸಾರದ ಆವಿಯನ್ನು ಪಟುಗೊಳಿಸಿದ (ಆಕ್ಟಿವೇಟೆಡ್) ಅಲ್ಯುಮಿನ (ಅಲ್ಯೂಮಿನಿಯಂ ಆಕ್ಸೈಡ್) ಮೇಲೆ ಹಾಯಿಸಿ ಪಡೆಯಬಹುದು.[೨][೩][೪]
ಭೌತಗುಣಗಳು
[ಬದಲಾಯಿಸಿ]ಬಣ್ಣವಿಲ್ಲದ ಅನಿಲ. ವಿಶಿಷ್ಟವಾದ ಸುವಾಸನೆ ಮತ್ತು ರುಚಿಯುಳ್ಳದ್ದು.[೫] 3% ಪ್ರಮಾಣದ ಗಾಳಿಯೊಂದಿಗೆ ಸೇರಿದರೆ ಸ್ಫೋಟಕ ಮಿಶ್ರಣವುಂಟಾಗುತ್ತದೆ. ಕರಗುವ ಉಷ್ಣತೆ -169೦ ಸೆಂ.ಗ್ರೇ. ಆವಿಯಾಗುವ ಉಷ್ಣತೆ- 1025೦ ಸೆಂ.ಗ್ರೇ. ಸಾಪೇಕ್ಷ ಸಾಂದ್ರತೆ 00 ಸೆಂಟಿಗ್ರೇಡಿನಲ್ಲಿ 0.೬೧೦. ಆವಿಯ ಸಾಂದ್ರತೆ (0೦ ಸೆಂ. ಗ್ರೇ. ಮತ್ತು 760 ಮಿ.ಮಿ. ಒತ್ತಡದಲ್ಲಿ ಗಾಳಿ=1) 0. 975. ದ್ರವಿಸುವ ಅವಧಿಕ ಉಷ್ಣತೆ (ಕ್ರಿಟಿಕಲ್ ಟೆಂಪರೇಚರ್) 9.5೦. ಸೆಂಗ್ರೇ.
ರಾಸಾಯನಿಕ ಗುಣಗಳು
[ಬದಲಾಯಿಸಿ]- ಎಥಿಲೀನ್ ಅಪರ್ಯಾಪ್ತ ಸಂಯುಕ್ತವಾದದ್ದರಿಂದ ಕೂಡಿಕೆ ಕ್ರಿಯೆಗಳನ್ನು ಹೊಂದುತ್ತದೆ. ಇದು ಅಪಕರ್ಷಕಾರಿಯಂತೆಯೂ ವರ್ತಿಸುತ್ತದೆ.
C2H4 + Cl2 → C2H4Cl2
C2H4 + HBr → C2H5Br
ಪ್ಲಾಟಿನಂ
C2H4 + H2 → C2H6
ವೇಗವರ್ಧಕ
- ಎರಡು ಹೈಡ್ರಾಕ್ಸಿಲ್ ಗುಂಪುಗಳನ್ನು ಸೇರಿಸಿ ಗ್ಲೈಕಾಲನ್ನು ರಚನೆ ಮಾಡಬಹುದು.
- ಎಥಿಲೀನನ್ನು ಒತ್ತಡದಲ್ಲಿ ಆಕ್ಸಿಜನ್ನನೊಂದಿಗೆ ಕಾಯಿಸಿದಾಗ ಪಾಲಿ ಎಥಿಲೀನ್ ದೊರಕುತ್ತದೆ. ಇದರ ಅಣುತೂಕ ಸುಮಾರು 20,000. ಈ ಸಂಯುಕ್ತದಲ್ಲಿ ಅನೇಕ ಎಥಿಲೀನ್ ಅಣುಗಳು ಒಂದಕ್ಕೊಂದು ಸೇರಿ ಉದ್ದವಾದ ಸರಪಳಿಯನ್ನು ರಚಿಸುತ್ತವೆ.
ಆಕ್ಸಿಜನ್ ಒತ್ತಡ
nCH2=CH2 ~CH2-(CH2-CH2-CH2)n-CH2 ಉಷ್ಣ
ಉಪಯೋಗಗಳು
[ಬದಲಾಯಿಸಿ]- ಎಥಿಲೀನನ್ನು ಮೂಲವಸ್ತುವನ್ನಾಗಿ ಉಪಯೋಗಿಸಿ ಟನ್ನುಗಟ್ಟಲೆ ಎಥಿಲೀನ್ ಡೈಕ್ಲೋರೈಡ್, ಪಾಲಿ ಎಥಿಲೀನ್, ಸ್ಟೈರೀನ್, ಎಥಿಲೀನ್ ಡೈಆಕ್ಸೈಡ್, ಅಸಿಟೈಲುಗಳು, EP ರಬ್ಬರು, ಈಥೈಲ್ ಆಲ್ಕೊಹಾಲ್ ಮತ್ತು ಇತರ ನೀಳವಾದ ರಚನೆಯುಳ್ಳ ಆಲ್ಕೊಹಾಲುಗಳನ್ನು ತಯಾರಿಸುತ್ತಾರೆ.[೬]
- ಹಣ್ಣುಗಳಿಗೆ ಬಣ್ಣವನ್ನು ಕೊಡಲು, ಮೊಳಕೆ ಮತ್ತು ತರಕಾರಿ ಮತ್ತು ಹಣ್ಣಿನ ಗಿಡಗಳ ಬೆಳವಣಿಗೆಯನ್ನು ತ್ವರಿತಗೊಳಿಸಲು ಹಣ್ಣಿನ ಮಾಗಾಣಿಕೆಯನ್ನು ತ್ವರಿತಗೊಳಿಸಲು ಎಥಿಲೀನಿನ ಉಪಯೋಗವಿದೆ.[೭][೮]
- ಎಥಿಲೀನ್ ಮತ್ತು ಆಕ್ಸಿಜನ್ನಿನ ಮಿಶ್ರಣದ ಜ್ವಾಲೆಯನ್ನು ಬೆಸುಗೆ ಹಾಕಲು ಮತ್ತು ಲೋಹವನ್ನು ಕತ್ತರಿಸಲು ಉಪಯೋಗಿಸುತ್ತಾರೆ.[೯]
ಉಲ್ಲೇಖಗಳು
[ಬದಲಾಯಿಸಿ]- ↑ ETHYLENE | CAMEO Chemicals | NOAA. Cameochemicals.noaa.gov. Retrieved on 2016-04-24.
- ↑ Research and Markets. "The Ethylene Technology Report 2016 - Research and Markets". www.researchandmarkets.com. Retrieved 19 June 2016.
- ↑ "Production: Growth is the Norm". Chemical and Engineering News (PDF). 84 (28): 59–236. July 10, 2006. doi:10.1021/cen-v084n034.p059.
{{cite journal}}
:|format=
requires|url=
(help) - ↑ "Propylene Production from Methanol". by Intratec, ISBN 978-0-615-64811-8.
- ↑ Zimmermann H, Walz R (2008). "Ethylene". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a10_045.pub3. ISBN 978-3527306732.
- ↑ "OECD SIDS Initial Assessment Profile — Ethylene" (PDF). inchem.org. Archived from the original (PDF) on 2015-09-24. Retrieved 2008-05-21.
- ↑ Arshad, Muhammad; Frankenberger, William (2002). Ethylene. Boston, MA: Springer. p. 289. ISBN 978-0-306-46666-3.
- ↑ Melton, Laurence, et al eds. (2019). Encyclopedia of Food Chemistry. Netherlands: Elsevier. p. 114. ISBN 978-0-12-814045-1.
{{cite book}}
:|first=
has generic name (help)CS1 maint: multiple names: authors list (link) - ↑ "Informational Bulletin". 12. California Fresh Market Advisory Board. June 1, 1976.
{{cite journal}}
: Cite journal requires|journal=
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- International Chemical Safety Card 0475
- European Chemicals Bureau Datasheet
- Speculations Towards a General Plant Hormone Theory
- MSDS Archived 2006-11-13 ವೇಬ್ಯಾಕ್ ಮೆಷಿನ್ ನಲ್ಲಿ.
- CS1 errors: format without URL
- CS1 errors: generic name
- CS1 maint: multiple names: authors list
- CS1 errors: missing periodical
- Pages using ISBN magic links
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಪೆಟ್ರೋಕೆಮಿಕಲ್ಸ್
- ರಾಸಾಯನಿಕ ಸಂಯುಕ್ತಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ