ವಿಷಯಕ್ಕೆ ಹೋಗು

RFID (ಆರ್‌ಎಫ್‌ಐಡಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

GPS RFID ತಂತ್ರಜ್ಞಾನ ಬಳಸಿ ಪಶುಗಳ ದಿನಚರಿ ನಿಗಾ-ನಿರ್ವಹಣೆ. ಸ್ಯಾಂಟಾ ಜರ್ಟ್ರೂಡಿಸ್‌ ದನ: ಕರುವಿನ ಕಿವಿಗೆ ವಿದ್ಯುನ್ಮಾನ ಸಂವೇದಕ ಟ್ಯಾಗ್‌ ಮತ್ತು ಪಶುಪ್ರಾಣಿಗಳ ನಿರ್ವಹಣಾ ಸಂವೇದಕ ಟ್ಯಾಗ್‌.

ರೇಡಿಯೊ ತರಂಗಾಂತರಗಳನ್ನು ಗುರುತಿಸಿ ಪತ್ತೆ ಹಚ್ಚಲು ಯಾವುದೇ ವಸ್ತು, ಪ್ರಾಣಿ ಅಥವಾ ವ್ಯಕ್ತಿಯೊಳಗೆ ಅಳವಡಿಸಿದ 'RFID ಟ್ಯಾಗ್‌' ಉಪಕರಣಕ್ಕೆ ರೇಡಿಯೊ-ಫ್ರೀಕ್ವೆನ್ಸಿ ಗುರುತಿಸುವಿಕೆ ಅಥವಾ ಅವುಗಳ ಜಾಡನ್ನು ಕಂಡು ಹಿಡಿಯುವುದು (RFID) ಎನ್ನಲಾಗಿದೆ. ಕೆಲವು ಟ್ಯಾಗ್‌ಗಳನ್ನು ಹಲವು ಮೀಟರ್‌ಗಳ ದೂರದಿಂದ, ಪತ್ತೆಹಚ್ಚುವವರ ದೃಷ್ಟಿಯಾಚೆಗಿನ ಅಂತರದಲ್ಲಿಯೂ ಕಂಡುಹಿಡಿಯಬಹುದು. ಹಲವು RFID ಟ್ಯಾಗ್‌ಗಳು ಕನಿಷ್ಠ ಪಕ್ಷ ಎರಡು ಭಾಗಗಳನ್ನು ಹೊಂದಿವೆ. ಒಂದು ಭಾಗವು ಮಾಹಿತಿ ಶೇಖರಿಸಿ ಸಂಸ್ಕರಿಸುವ ಇಂಟೆಗ್ರೇಟೆಡ್‌ ಸರ್ಕ್ಯೂಟ್‌ ಆಗಿದೆ. ಇದು (RF) ರೇಡಿಯೊ-ಫ್ರೀಕ್ವೆನ್ಸಿ ಸಂಕೇತದ ಮಾಡುಲೇಟ್‌ ಮತ್ತು ಡಿಮಾಡುಲೇಟ್‌(ಶಬ್ದಗಳ ಹೊಂದಾಣಿಕೆ) ಮಾಡುವುದು; ಅಲ್ಲದೇ ಇದಕ್ಕೆ ಸಂಬಂಧಿಸಿದ ವಿಶಿಷ್ಟ ಕಾರ್ಯಚಟುವಟಿಕೆಗಳನ್ನು ನಡೆಸುತ್ತದೆ. ಸಂಕೇತಗಳ ಗ್ರಹಿಸಲು ಹಾಗೂ ಪ್ರೇಷಿಸಲು(ಬೇರೆಡೆ ವರ್ಗಾಯಿಸಲು ಇರುವ) ಆಂಟೆನಾ(ಸ್ಪರ್ಶ ತಂತು) ಎರಡನೆಯ ಭಾಗವಾಗಿದೆ. ಸಾಮಾನ್ಯವಾಗಿ ಮೂರು ತರಹದ RFID ಟ್ಯಾಗ್‌ಗಳಿವೆ: ಸಕ್ರಿಯ RFID ಟ್ಯಾಗ್‌ಗಳು ವಿದ್ಯುತ್ಕೋಶಹೊಂದಿದ್ದು ಸಂಕೇತಗಳ್ನು ಸ್ವಯಂಚಾಲಿತವಾಗಿ ಪ್ರೇಷಿಸುತ್ತವೆ. ವಿದ್ಯುತ್ಕೋಶರಹಿತ ನಿಷ್ಕ್ರಿಯ, ಜಡ RFID ಟ್ಯಾಗ್‌ಗಳು ; ಸಂಕೇತಗಳನ್ನು ಪ್ರೇಷಿಸಲು (ವರ್ಗಾಯಿಸಲು) ಬಾಹ್ಯ ಮೂಲಗಳ ಅಗತ್ಯವಿದೆ. ವಿದ್ಯುತ್ಕೋಶದ ನೆರವಿನಿಂದ ಜಡ (BAP) ಟ್ಯಾಗ್‌ಗಳನ್ನು ಸಕ್ರಿಯಗೊಳಿಸಲು ಬಾಹ್ಯ ಶಕ್ತಿ ಮೂಲಗಳ ಅಗತ್ಯವಿದೆ, ಆದರೆ ಇವುಗಳಲ್ಲಿ ಹೆಚ್ಚಿನ ವ್ಯಾಪ್ತಿ ನೀಡುವ ಉನ್ನತ ಫಾರ್ವರ್ಡ್‌ ಲಿಂಕ್‌ ನ ಕ್ಷಮತೆ ಹೊಂದಿದೆ. RFID ಹಲವು ದೈನಂದಿನ ಉಪಯೋಗಗಳನ್ನು ಹೊಂದಿದೆ. ಉದಾಹರಣೆಗೆ, ದಾಸ್ತಾನು ಗುರುತಿಸಿ ನಿರ್ವಹಿಸಿ ಕ್ಷಮತೆ ಉತ್ತಮಗೊಳಿಸಲು, ಉದ್ದಿಮೆ ಉತ್ಪಾದನೆಗಳ ಸರಬರಾಜು ಆಡಳಿತ ನಿರ್ವಹಣೆಯಲ್ಲಿ ಬಳಸಲಾಗುತ್ತದೆ.

ಐತಿಹಾಸಿಕ ಮತ್ತು ತಾಂತ್ರಿಕ ಹಿನ್ನೆಲೆ[ಬದಲಾಯಿಸಿ]

ವಿದ್ಯುನ್ಮಾನ ಟೋಲ್‌ ಸಂಗ್ರಹಿಸಲು ಬಳಸಲಾದ RFID ಟ್ಯಾಗ್‌.

ಸುಮಾರು 1945ರಲ್ಲಿ, ಶ್ರವಣದ ಮಾಹಿತಿ ಹೊಂದಿರುವ ರೇಡಿಯೊ ತರಂಗಗಳನ್ನು ಮರು-ರವಾನಿಸುವ ಬೇಹುಗಾರಿಕಾ ಕಾರ್ಯಕ್ಕೆ ನೆರವಾಗುವ ಒಂದು ಉಪಕರಣವನ್ನು ಲೆಯಾನ್‌ ಥೆರೆಮಿನ್‌ ಎಂಬಾತ ಸೊವಿಯತ್‌ ಒಕ್ಕೂಟಕ್ಕಾಗಿ ನಿರ್ಮಿಸಿದ. ಶಬ್ದ ತರಂಗಗಳು ಕಂಪನಫಲಕ(ಪೊರೆ)ವನ್ನು ಕಂಪಿಸುವಂತೆ ಮಾಡುವವು. ಇದು ಪ್ರತಿಧ್ವನಿಯ ರೂಪವನ್ನು ಅಲ್ಪಮಟ್ಟಿಗೆ ಬದಲಿಸುತ್ತದೆ, ಹಾಗಾಗಿ ಪ್ರತಿಫಲನದ ರೇಡಿಯೊ ಫ್ರಿಕ್ವೆನ್ಸಿಯನ್ನು ಮಾಡುಲೇಟ್‌ ಮಾಡುವುದಾಗಿದೆ. ಗುರುತಿಸುವ ಟ್ಯಾಗ್‌ನ ಬದಲಾಗಿ ಕದ್ದಾಲಿಕೆಯ ಉಪಕರಣವಾಗಿದ್ದರೂ, ಇದು RFID ತಂತ್ರಜ್ಞಾನದ ಪೂರ್ವದ ನಿರ್ಮಾಣ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಜಡವಾಗಿದ್ದು, ಬಾಹ್ಯ ಮೂಲಗಳಿಂದ ಬರುವ ವಿದ್ಯುತ್ಕಾಂತೀಯ ತರಂಗಗಳಿಂದ ಸಕ್ರಿಯಗೊಂಡು ಶಕ್ತಿ ಪಡೆಯುತ್ತದೆ.[೧] ಇಂತಹದೇ ತಂತ್ರಜ್ಞಾನ ಮೂಲದ, 1915ರಲ್ಲಿ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ರಚನೆಯಾದ IFF ಗ್ರಾಹಕ-ಪ್ರೇಷಕ ಉಪಕರಣದ(ವಿಶಿಷ್ಟ ವಿದ್ಯುತ್ ಸಾಧನ ಸ್ವಯಂಚಾಲಿತ ಸಂವಾಹಕ ಕೆಲಸದ)_ ಮೂಲಕ, ಎರಡನೆಯ ಮಹಾಯುದ್ದದಲ್ಲಿ ವಿಮಾನಗಳನ್ನು ಮಿತ್ರರದೋ ಶತ್ರುಗಳದ್ದೋ ಎಂಬುದನ್ನು ಕಂಡುಕೊಂಡು ಕ್ರಮದ ಬಗ್ಗೆ ಸಂಬಂಧಿಸಿದವರು ನಿರ್ಣಯಿಸುತ್ತಿದ್ದರು.

ಇಂದೂ ಸಹ ಹಲವು ಪ್ರಬಲ ಶಕ್ತಿಯ ವಿಮಾನಗಳಲ್ಲಿ ಗ್ರಾಹಕ-ಪ್ರೇಷಕಗಳನ್ನು ಬಳಸಲಾಗುತ್ತಿದೆ.

1948ರಲ್ಲಿ ಹ್ಯಾರಿ ಸ್ಟಾಕ್ಮನ್ ಪ್ರಕಟಿಸಿದ "ಕಮ್ಯೂನಿಕೇಷನ್‌ ಬೈ ಮೀನ್ಸ್‌ ಆಫ್‌ ರಿಫ್ಲೆಕ್ಟೆಡ್‌ ಪಾವರ್‌" ಎಂಬ ಮಹತ್ವದ ಮಂಡನೆಯು, RFID ತಂತ್ರಜ್ಞಾನದ ಅಧ್ಯಯನ ಮತ್ತು ಸಂಶೋಧನೆಗೆ ಇನ್ನೊಂದು ಆರಂಭಿಕ ಯತ್ನದ ಹೆಗ್ಗುರುತಾಗಿತ್ತು (ಪ್ರೊಸೀಡಿಂಗ್ಸ್‌ ಆಫ್‌ ದಿ IRE, ಪಿಪಿ 1196-1204, ಅಕ್ಟೋಬರ್‌ 1948). "... ಪ್ರತಿಫಲಿತ ಶಕ್ತಿ ಸಂವಹನ ಕುರಿತು ಉಳಿದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಹಾಗೂ ಉಪಯುಕ್ತ ಅಳವಡಿಕೆಗಳ ಕ್ಷೇತ್ರವನ್ನು ಸಂಸ್ಕರಿಸುವ ಮುನ್ನ, ಗಂಭೀರ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಕೈಗೊಳ್ಳಬೇಕಾದ ಅಗತ್ಯವಿದೆ" ಎಂದು ಸ್ಟಾಕ್ಮನ್‌ ಭವಿಷ್ಯ ನುಡಿದರು. ಮ್ಯಾರಿಯೊ ಕಾರ್ಡುಲೋಯು.ಎಸ್ ಪೇಟೆಂಟ್ ೩,೭೧೩,೧೪೮ 1973ರಲ್ಲಿ ಸ್ಮೃತಿಪಟಲ ಹೊಂದಿರುವ ಒಂದು(ನಿಷ್ಕ್ರಿಯ) ಜಡ ರೇಡಿಯೊ ಗ್ರಾಹಕ-ಪ್ರೇಷಕವನ್ನು ಆವಿಷ್ಕರಿಸಿದರು. ಇದರಿಂದಾಗಿ ಇವರನ್ನು ಆಧುನಿಕ 'RFIDಯ ಜನಕ' ಎಂದು ಮನ್ನಣೆ ನೀಡಲಾಗಿದೆ. ಆರಂಭಿಕ ಉಪಕರಣವು ಜಡವಾಗಿತ್ತು. ಬರುವ ಸಂಕೇತವು ಇದನ್ನು ಸಕ್ರಿಯಗೊಳಿಸುತ್ತಿತ್ತು. 1971ರಲ್ಲಿ ನ್ಯೂಯಾರ್ಕ್‌ ಬಂದರು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಂಭಾವ್ಯ ಬಳಕೆದಾರರಿಗಾಗಿ ಈ ಉಪಕರಣ ಪ್ರದರ್ಶಿಸಲಾಯಿತು. ಇದು 16-ಬಿಟ್‌ ಸ್ಮೃತಿಪಟಲ ಮತ್ತು ಗ್ರಾಹಕ-ಪ್ರೇಷಕ ಹೊಂದಿದ್ದು, ಟೋಲ್‌ (ಸುಂಕ)ಸಂಗ್ರಹಣೆಗಾಗಿ ಅನುಕೂಲವಾಗುವ) ಉಪಕರಣವಾಗಿ ಬಳಸಲಾಗಿತ್ತು. ಮೂಲಭೂತ ಕಾರ್ಡುಲೋ ಹಕ್ಕುಸ್ವಾಮ್ಯವು RF, ಧ್ವನಿ ಮತ್ತು ಬೆಳಕು ರವಾನೆಯ ಮಾಧ್ಯಮ ರೂಪವನ್ನು ಒಳಗೊಳ್ಳುತ್ತದೆ. ಹೂಡಿಕೆದಾರರಿಗೆ 1969ರಲ್ಲಿ ಪರಿಚಯಿಸಲಾದ ಮೂಲ ವ್ಯವಹಾರದ ಯೋಜನೆಯಡಿ, ಸಾರಿಗೆ (ಸ್ವಯಂಚಾಲಿತ ವಾಹನ ಗುರುತಿಸುವಿಕೆ, ಸ್ವಯಂಚಾಲಿತ ಟೋಲ್‌ ವ್ಯವಸ್ಥೆ, ವಿದ್ಯುನ್ಮಾನ ವಾಹನ ಸಂಖ್ಯಾಫಲಕ, ವಿದ್ಯುನ್ಮಾನ ಸರಕು-ಸಾಮಾನು/ಪ್ರಯಾಣಿಕರ ಪಟ್ಟಿ, ವಾಹನ ಮಾರ್ಗನಿರ್ದೇಶನ, ವಾಹನ ಕ್ರಿಯಾಶೀಲತೆಯ ಮೇಲ್ವಿಚಾರಣೆ), ಬ್ಯಾಂಕಿಂಗ್‌ (ವಿದ್ಯುನ್ಮಾನ ಚೆಕ್‌ಬುಕ್‌, ವಿದ್ಯುನ್ಮಾನ ಕ್ರೆಡಿಟ್‌ ಕಾರ್ಡ್‌), ಭದ್ರತಾ ವ್ಯವಸ್ಥೆ (ಸಿಬ್ಬಂದಿ ಗುರುತಿಸುವಿಕೆ, ಸ್ವಯಂಚಾಲಿತ ದ್ವಾರಗಳು, ಬೇಹುಗಾರಿಕೆ) ಮತ್ತು ವೈದ್ಯಕೀಯ (ಗುರುತಿಸುವಿಕೆ, ರೋಗಿಯ ಇತಿಹಾಸ) ಇತ್ಯಾದಿ ಉಪಯೋಗಗಳನ್ನು ಪ್ರದರ್ಶಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಪ್ರತಿಫಲಿತ ಶಕ್ತಿ (ಮಾಡ್ಯುಲೇಟೆಡ್‌ ರೇಡಿಯೇಶನ್ ಸಂವಾಹಕದ ಮಾಧ್ಯಮ ) ಹೊಂದಿರುವ RFID ಟ್ಯಾಗ್‌ಗಳ (ಜಡ ಮತ್ತು ಅರೆ-ಜಡ) ಇನ್ನೊಂದು ಆರಂಭಿಕ ಪ್ರದರ್ಶನವನ್ನು ಸ್ಟೀವೆನ್‌ ಡೆಪ್‌, ಆಲ್ಫ್ರೆಡ್‌ ಕೊಯೆಲ್‌ ಮತ್ತು ರಾಬರ್ಟ್‌ ಫ್ರೇಯ್ಮನ್‌ 1973ರಲ್ಲಿ ಲಾಸ್‌ ಅಲಾಮೊಸ್‌ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಪ್ರದರ್ಶಿಸಿದರು.[೨] ಸುಲಭವಾಗಿ ಒಯ್ಯಬಹುದಾದ ಈ ಉಪಕರಣವು 915 MHz ತರಂಗಾಂತರಗಳಲ್ಲಿ ಕಾರ್ಯನಿರ್ವಹಿಸಿ 12-ಬಿಟ್‌ ಟ್ಯಾಗ್‌ಗಳನ್ನು ಬಳಸುತ್ತಿತ್ತು. ಇಂದಿನ UHFID ಮತ್ತು ಮೈಕ್ರೊವೇವ್‌ RFID ಟ್ಯಾಗ್‌ಗಳಲ್ಲಿ ಬಹಳಷ್ಟು ಪ್ರಮಾಣದ ಈ ತಂತ್ರಜ್ಞಾನ ಬಳಸಲಾಗುತ್ತಿದೆ. RFID ಎಂಬ ಸಂಕ್ಷೇಪಣದೊಂದಿಗಿನ ಮೊದಲ ಹಕ್ಕುಸ್ವಾಮ್ಯ (ಪೇಟೆಂಟ್‌)ನ್ನು 1983ರಲ್ಲಿ ಚಾರ್ಲ್ಸ್‌ ವಾಲ್ಟನ್‌ರಿಗೆ ನೀಡಲಾಯಿತು.ಯು.ಎಸ್ ಪೇಟೆಂಟ್ ೪,೩೮೪,೨೮೮ ಸಕ್ರಿಯ RFIDಯ ಅತಿದೊಡ್ಡ ಪ್ರಮಾಣದ ಅಳವಡಿಕೆಯು US ರಕ್ಷಣಾ ಇಲಾಖೆಯ 'ಸಾವಿ' [೩] ಯಲ್ಲಿನ ಸಕ್ರಿಯ ಟ್ಯಾಗ್‌ಗಳೆನಿಸಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ (CONUS) ಹೊರ ಹೋಗುವ ಒಂದು ದಶಲಕ್ಷಕ್ಕೂ ಹೆಚ್ಚಿನ ತನ್ನ ಜಲಸಾರಿಗೆ ಕಂಟೇನರ್‌ಗಳಲ್ಲಿ ಇಂತಹ ಸಕ್ರಿಯ ಟ್ಯಾಗ್‌ಗಳನ್ನು ಅಳವಡಿಸಲಾಗಿತ್ತು. ಅತಿದೊಡ್ಡ ಜಡ RFID ಅನ್ವಯಿಕೆಯು ಡಿಫೆನ್ಸ್‌ ಲಾಜಿಸ್ಟಿಕ್ಸ್‌ ಏಜೆನ್ಸಿ (DLA)ಯ 72 ಘಟಕಗಳಲ್ಲಿದೆ. ಇದನ್ನು ODIN [೪] ಸಂಸ್ಥೆ ಯಶಸ್ವಿಯಾಗ ನಿರ್ವಹಿಸಿತು. ಇದಲ್ಲದೆ ಏರ್ಬಸ್‌[೫] ಸಂಸ್ಥೆಯ ವಿಶ್ವಾದ್ಯಂತದ 13 ಯೋಜನೆಗಳನ್ನೂ ಸಹ ODIN ನಿಭಾಹಿಸಿತು.

ಪ್ರಮಾಣ ಕುಗ್ಗಿಸುವುದು[ಬದಲಾಯಿಸಿ]

RFID ಇತರೆ ವಸ್ತುಗಳಲ್ಲಿ ಸುಲಭ, ರಹಸ್ಯವಾಗಿ ಅಳವಡಿಸುವಷ್ಟು ಕಿರಿಯ ಮಟ್ಟದ ತಂತ್ರಜ್ಞಾನವಾಗಿದೆ. ಉದಾಹರಣೆಗೆ, 2009ರಲ್ಲಿ ಬ್ರಿಸ್ಟಾಲ್‌ ವಿಶ್ವವಿದ್ಯಾನಿಲಯದ ಸಂಶೋಧಕರು ಇರುವೆಗಳ ನಡವಳಿಕೆ ಅಧ್ಯಯನ ನಡೆಸಲು RFID ಮೈಕ್ರೊಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸುವಲ್ಲಿ ಯಶಸ್ವಿಯಾದರು.[೬]

ತಂತ್ರಜ್ಞಾನವು ಮುಂದುವರೆಯುತ್ತಿದ್ದಂತೆಯೇ RFID ಯ ಗಾತ್ರ ಇನ್ನಷ್ಟು ಕಿರಿದಾಗಲಿದೆ. ಆದರೆ, ದೂರದಿಂದ ಗುರುತಿಸುವ ಕ್ಷಮತೆಯನ್ನು ಇನ್ವರ್ಸ್‌ ಸ್ಕ್ವೇರ್‌ ಲಾ ದಿಂದ ಮಿತಪ್ರಮಾಣಕ್ಕೆ ಇಳಿಸಲ್ಪಡುತ್ತದೆ.

ಅತಿ ಕಿರಿದಾದ RFID ಚಿಪ್‌ ತಯಾರಿಸುವ ದಾಖಲೆಯು ಹಿಟಾಚಿ ಸಂಸ್ಥೆಗೆ ಸಲ್ಲುತ್ತದೆ. ಅದರ ಅಳತೆ 0.05mm x 0.05mm. ಮ್ಯು(ಗ್ರೀಕ್ ಭಾಷೆಯ ವರ್ಣಮಾಲೆಯ 12ನೆಯ್ ಅಕ್ಷರ) ಚಿಪ್‌ ಟ್ಯಾಗ್‌ಗಳು ಹೊಸ RFID ಟ್ಯಾಗ್‌ಗಳಿಗಿಂತ 64 ಪಟ್ಟು ಕಿರಿಗಾತ್ರದ್ದಾಗಿವೆ.[೭] ಉತ್ಪಾದಕನು ಸಿಲಿಕಾನ್‌-ಆನ್‌-ಇನ್ಸುಲೇಟರ್‌ (SOI) ಪ್ರಕ್ರಿಯೆಯನ್ನು ಬಳಸಿ ತಯಾರಿಸುತ್ತಾನೆ. ಈ 'ಧೂಳಿನ ಕಣ ಗಾತ್ರದ' ಚಿಪ್‌ಗಳು 128-ಬಿಟ್‌ ರೀಡ್‌ ಒನ್ಲಿ ಮೆಮೊರಿ (ಓದಲು ಮಾತ್ರ ಸಾಧ್ಯವಾದ ಸ್ಮೃತಿಪಟಲ) (ROM) ಬಳಸಿ 38-ಅಂಕಿಗಳ ಸಂಖ್ಯೆಗಳನ್ನು ಮಾತ್ರ ಇವು ಶೇಖರಿಸಬಲ್ಲವು.[೮] ಆಂಟೆನಾಗಳ ಅಳವಡಿಕೆಯೇ ಪ್ರಮುಖ ಸವಾಲಾಗಿತ್ತು. ಹಾಗಾಗಿ ಓದುವ ಶ್ರೇಣಿ ಕೇವಲ ಮಿಲಿಮೀಟರುಗಳಿಗಷ್ಟೆ ಸೀಮಿತಗೊಳ್ಳುತ್ತಿತ್ತು. ರೇಡಿಯೊ ಫ್ರೀಕ್ವೆನ್ಸಿಗಳಿಗೆ (0.125–0.1342, 0.140–0.1485, 13.56, ಮತ್ತು 840–960 MHz) ಬಳಸಲಾದ ಸಂಭಾವ್ಯ ಪರ್ಯಾಯಗಳು ದೃಷ್ಟಿಯ RFID (OPID)ಯಲ್ಲಿ ಕಂಡುಬಂದಿವೆ (ತರಂಗಾಂತರಗಳು: 333 THz (900 nm), 380 THz (788 nm), 750 THz (400 nm)).[೯] RFIDಯ 'ಎಡವಟ್ಟಾದ' ಆಂಟೆನಾಗಳ ಬದಲಿಗೆ ICಗಳಲ್ಲಿ ಫೊಟೊವೊಲ್ಟಾಯಿಕ್‌ ಭಾಗಗಳು ಮತ್ತು IR-LEDಗಳನ್ನು ಬಳಸಬಹುದಾಗಿದೆ.

ಪ್ರಚಲಿತ ಉಪಯೋಗಗಳು[ಬದಲಾಯಿಸಿ]

RFID ತಂತ್ರಜ್ಞಾನದ ಅಳವಡಿಕೆಯ ಬೆಲೆಯು ಕಡಿಮೆಯಾಗುತ್ತಿದ್ದಂತೆ ಇದರ ಬಳಕೆ ಹೆಚ್ಚಾಗುತ್ತಿದೆ. ತಾನು ಏಲಿಯೆನ್‌ ಟೆಕ್ನಾಲಜೀಸ್‌ನಿಂದ 500 ದಶಲಕ್ಷ ಟ್ಯಾಗ್‌ಗಳಿಗೆ ಬೇಡಿಕೆ ಸಲ್ಲಿಸಿರುವುದಾಗಿ ಜಿಲೆಟ್‌ ಸಂಸ್ಥೆಯು ಜನವರಿ 2003ರಲ್ಲಿ ಘೋಷಿಸಿತು. ಸಂಸ್ಥೆಯು ಪ್ರತಿ ಟ್ಯಾಗ್‌ಗೂ '10 ಸೆಂಟ್‌ಗಳಿಗಿಂತಲೂ ಕಡಿಮೆ ಬೆಲೆ' ನೀಡಿತು ಎಂದು ಅಂದಿನ ಜಿಲೆಟ್‌ ಉಪಾಧ್ಯಕ್ಷ, ಇಂದಿನ ಸಿಸ್ಕೊ ಉದ್ಯೋಗಿ ಡಿಕ್‌ ಕ್ಯಾಂಟ್ವೆಲ್‌ ಹೇಳುತ್ತಾರೆ. ಜಪಾನಿನ HIBIKI ಸಂಸ್ಥೆ RFID ಟ್ಯಾಗ್‌ಗಳ ಬೆಲೆಯನ್ನು ಆರಂಭದಲ್ಲಿ 5 ಯೆನ್‌ (4 ಯುರೋಸೆಂಟ್‌)ಗಳಿಗೆ ಇಳಿಸಲು ಯತ್ನಿಸಲಿದೆ. ಜನವರಿ 2009ರಲ್ಲಿ ಎನ್ವೆಗೊ 5.9 ಸೆಂಟ್‌ ಬೆಲೆಯ ಟ್ಯಾಗ್‌ನ್ನು ಘೋಷಿಸಿತು.[ಸೂಕ್ತ ಉಲ್ಲೇಖನ ಬೇಕು]

ಮೊಬೈಲ್‌ ಮೂಲಕ ಹಣ ಪಾವತಿ[ಬದಲಾಯಿಸಿ]

ಹೊಸ ರೀತಿಯ ಹಣಪಾವತಿ ವ್ಯವಸ್ಥೆಗಳಿಗಾಗಿ ಕ್ರೆಡಿಟ್‌ ಕಾರ್ಡ್‌ ಸಂಸ್ಥೆಗಳು ಯತ್ನಿಸುತ್ತಿವೆ. ಅವು ಮೊಬೈಲ್‌ ದೂರವಾಣಿಗಳಿಗೆ ಕಾಂಟ್ಯಾಕ್ಟ್‌ಲೆಸ್‌ ಪಾವತಿ ಕಾರ್ಡ್‌ಗಳನ್ನು ನೀಡಲು ಮುಂದಾಗಿವೆ. ಈ (ಕ್ರೆಡಿಟ್‌ ಕಾರ್ಡ್‌) ಕ್ಷೇತ್ರದ ಅಗತ್ಯಗಳಿಗೆ ಹೊಂದುವಂತಹ ಮೊಬೈಲ್‌ ಸೇವಾ ಯೋಜನೆಯ ಉದ್ಯಮಗಳು ಇಂದು ಲಭ್ಯವಿವೆ. ಇದರ ದಪ್ಪ 3ಮಿಮೀಗಿಂತಲೂ ಕಡಿಮೆಯಿರುವ, ಈ ಉಪ-ಕಾರ್ಡ್‌ನ್ನು ಒಮ್ಮೆ ಅಳವಡಿಸಿದರೆ, ಮೊಬೈಲ್‌ ಸೇವೆಯು ಸುರಕ್ಷಿತವಾಗಿರುತ್ತದೆ, ಪರಿಸರ-ಹವಾಮಾನಗಳ ಬಗ್ಗೆ ವಿವರವಾಗಿ ಸುಮಾರು ಎರಡು ವರ್ಷಗಳ ತನಕ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ.[೧೦] ವಿಶಿಷ್ಟವಾಗಿ ರೂಪಿಸಿದ ಮೈಕ್ರೊSD ಕಾರ್ಡ್‌ಗಳ ತಯಾರಿಕೆಗೆ, ಎರಡು ಕ್ರೆಡಿಟ್‌ ಕಾರ್ಡ್‌ ಸಂಸ್ಥೆಗಳು (ಟೆಕ್ಸಾಸ್‌ ರಾಜ್ಯದ ಡಲ್ಲಾಸ್‌ನಲ್ಲಿರುವ) ಡಿವೈಸ್‌ಫಿಡೆಲಿಟಿ ಸಂಸ್ಥೆಯೊಂದಿಗೆ 2009ರ ಬೇಸಿಗೆ ಅವಧಿಯಿಂದಲೂ ಕಾರ್ಯನಿರತವಾಗಿವೆ. ಮೊಬೈಲ್‌ ಫೋನ್‌ನೊಳಗೆ ಅಳವಡಿಸಿದಾಗ, ಮೈಕ್ರೊSD ಕಾರ್ಡ್‌ ಜಡ (ನಿಷ್ಕ್ರಿಯ) ಟ್ಯಾಗ್‌ ಹಾಗೂ RFID ಗುರುತಿಸುವ ಉಪಕರಣದಂತೆ ಕೆಲಸವನ್ನೂ ಸಹ ಮಾಡಬಹುದು.[೧೧]

ಮೈಕ್ರೊSD ಅಳವಡಿಸಿದ ನಂತರ, ಬಳಕೆದಾರರ ಮೊಬೈಲ್‌ ದೂರವಾಣಿಯನ್ನು ಬ್ಯಾಂಕ್‌ ಖಾತೆಗಳೊಂದಿಗೆ ಸಂಪರ್ಕ ಕಲ್ಪಿಸಿ , ಮೊಬೈಲ್‌ ಮೂಲಕ ಹಣ ಪಾವತಿಸಲು ಬಳಸಬಹುದಾಗಿದೆ.

ತಮ್ಮ ಹೊಸ ಸವಾಲುಗಳು ಮತ್ತು ಪ್ರತಿಫಲ ಯೋಜನೆಯ ಅಂಗವಾಗಿ, ಡೇಯ್ರಿ ಕ್ವೀನ್‌ ಕಂಪನಿಯು ವೀವೊಟೆಕ್‌ನ ಸಹಯೋಗದೊಂದಿಗೆ ಮೊಬೈಲ್‌ ದೂರವಾಣಿಗಳಿಗೆ RFIDಗಳನ್ನು ಅಳವಡಿಸಲಾರಂಭಿಸಿದೆ.

ಕಂಪನಿಗಳ ಆಶ್ರಯದಾತ ಗ್ರಾಹಕರು ತಮ್ಮ ದೂರವಾಣಿಗಳಲ್ಲಿ ಅಳವಡಿಸಿಕೊಳ್ಳಲು RFID ಟ್ಯಾಗ್‌ಗಳನ್ನು ಕೇಳಿ ಪಡೆಯಬಹುದು. ಸಕ್ರಿಯಗೊಳಿಸಿದ ನಂತರ, ಗ್ರಾಹಕರ ದೂರವಾಣಿಯು, ವೀವೊಟೆಕ್‌ನ ವಿಶಿಷ್ಟ NFC ಉಪಕರಣಗಳ ಮೂಲಕ ಓದಬಹುದಾದ ಜಾಹೀರಾತುಗಳು ಮತ್ತು ಕೂಪನ್‌ಗಳನ್ನು ಪಡೆಯಬಹುದು. 

ಇದೇ ರೀತಿ, ಹೊಸ ಟಚ್‌-ಫ್ರೀ ಪಾವತಿ ವ್ಯವಸ್ಥೆ ಉತ್ತೇಜಿಸಲು 7-ಇಲೆವೆನ್‌ ಸಂಸ್ಥೆಯು ಮಾಸ್ಟರ್‌ಕಾರ್ಡ್‌ ಸಹಯೋಗದೊಂದಿಗೆ ಕಾರ್ಯಪ್ರವೃತ್ತವಾಗಿದೆ. ಈ ಪ್ರಯೋಗದಲ್ಲಿ ಭಾಗವಹಿಸುವವರಿಗೆ ಸಕ್ರಿಯಗೊಳಿಸಲಾದ ನೊಕಿಯಾ 3220 ಮೊಬೈಲ್‌ನ್ನು ಕೊಡುಗೆಯಾಗಿ ನೀಡಲಾಯಿತು. ವಿಶ್ವಾದ್ಯಂತ 7-ಇಲೆವೆನ್‌ ಮಳಿಗೆಗಳಲ್ಲಿ ಈ ಮೊಬೈಲ್‌ ದೂರವಾಣಿಯನ್ನು RFID-ಯುಕ್ತ ಮಾಸ್ಟರ್‌ಕಾರ್ಡ್‌ ಕ್ರೆಡಿಟ್‌ ಕಾರ್ಡ್‌ನಂತೆ ಬಳಸಬಹುದಾದ ವ್ಯವಸ್ಥೆ ಇದರಲ್ಲಿದೆ.[೧೨] 2008 ಮಾದರಿಯ ನೊಕಿಯಾ ದೂರವಾಣಿಯು RFID ಕ್ಷಮತೆ ಸಹ ಹೊಂದಿದೆ. ಸಕ್ರಿಯಗೊಳಿಸಿದ ದೂರವಾಣಿ ಮೂಲಕ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಶೇಖರಿಸಬಹುದು; ಮೊಬೈಲ್ ಮೂಲಕವೇ ಬ್ಯಾಂಕ್ ಖಾತೆಗಳತ್ತ ನೇರ ಪ್ರವೇಶಾನುಮತಿ ಪಡೆಯಬಹುದು. ದೂರವಾಣಿಯನ್ನ ಮೊಬೈಲ್‌ ಪಾವತಿಸೌಲಭ್ಯಕ್ಕೆ ವಾಹಕವಾಗಿ ಬಳಸಿದಲ್ಲಿ, ಹಣ ಮಂಜೂರು ಮಾಡುವ ಮುನ್ನ ಗ್ರಾಹಕರು ಒಂದು ಪಾಸ್‌ವರ್ಡ್ ಅಥವಾ PINನ್ನು ಕಡ್ಡಾಯವಾಗಿ ನಮೂದಿಸಬೇಕಾವುದು. ಹೀಗೆ ಇದು ಹೆಚ್ಚಿನ ಭದ್ರತೆ ಒದಗಿಸುತ್ತದೆ.[೧೩]

ಸಾರಿಗೆ ಸಂದಾಯಗಳು[ಬದಲಾಯಿಸಿ]

ಸಂಚಾರ ನಿರ್ವಹಣೆಗಾಗಿ ಸರ್ಕಾರವು RFID ಸೂತ್ರಗಳನ್ನು ಬಳಸುತ್ತದೆ. ಉತ್ಪಾದನಾ ನಿರ್ವಹಣೆಯ ಆಡಳಿತಕ್ಕೆ ಮೋಟಾರು ತಯಾರಿಕಾ ಸಂಸ್ಥೆಗಳು ವಿವಿಧ RFID ಗುರುತಿಸುವ ಯೋಜನೆಗಳನ್ನು ಬಳಸುತ್ತವೆ. ಮುಂಬರುವ ದಿನಗಳಲ್ಲಿ ಇಂತಹ ಅನ್ವಯಿಕೆಗಳಲ್ಲಿ ಹಲವು ಒಟ್ಟಿಗೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಆದರೂ, ತಂತ್ರಜ್ಞಾನವು ಅವಕಾಶ ನೀಡುವಷ್ಟು ವೇಗದಲ್ಲಿ ಮುಂದೆ ಸಾಗುವ ಯಾವುದೇ ಯತ್ನವನ್ನು ಗೌಪ್ಯತೆಗಳ ನಿಯಮಗಳು ಅಡ್ಡಿಪಡಿಸುತ್ತವೆ.

ಕಾರ್‌-ಮಾಲಿಕತ್ವಕ್ಕೆ ಮಿತವ್ಯಯಿ ಪರ್ಯಾಯ: ಕಾರ್‌-ಹಂಚಿಕೆ (ಕಾರ್‌-ಶೇರಿಂಗ್)[ಬದಲಾಯಿಸಿ]

ಝಿಪ್‌ಕಾರ್‌ ಎಂಬ ಕಾರ್‌-ವಿತರಣಾ ಸೇವಾ ಸಂಸ್ಥೆಯು ತನ್ನ ಸದಸ್ಯರನ್ನು ಗುರುತಿಸಿ, ಕಾರ್‌ಗಳನ್ನು ಲಾಕ್‌ ಮತ್ತು ಅನ್‌ಲಾಕ್‌ ಮಾಡುವ ವ್ಯವಸ್ಥೆಗಳಿಗಾಗಿ RFID ಕಾರ್ಡ್‌ಗಳನ್ನು ಬಳಸುತ್ತದೆ.

ಸೀಸನ್‌ ಪಾರ್ಕಿಂಗ್‌ ಟಿಕೆಟ್‌ಗಳು (ಋತುಮಾನದ ವಾಹನ ನಿಲುಗಡೆ ಚೀಟಿಗಳು)[ಬದಲಾಯಿಸಿ]

ತಮ್ಮ ಯಶಸ್ವಿ ಪ್ರಯೋಗದ ನಂತರ, ಸಿಂಗಪುರದ ಗೃಹನಿರ್ಮಾಣ ಮತ್ತು ಅಭಿವೃದ್ಧಿ ಮಂಡಳಿ (HDB) ಕಾಗದರೂಪದ ಸೀಸನ್‌ ಪಾರ್ಕಿಂಗ್‌ ಟಿಕೆಟ್‌ (SPT) ಬದಲಿಗೆ RFID ಅಳವಡಿಕೆಯ ಯೋಜನೆಗಾಗಿ 2006ರಲ್ಲಿ ಎರಡು ಟೆಂಡರ್‌ ಕರೆ ನೀಡಿತು. ಯಶಸ್ವಿ ಟೆಂಡರ್‌ದಾರರು ಮಾರ್ಚ್‌ 2007ರಿಂದಲೂ SPTದಾರರಿಗೆ RFID ಟ್ಯಾಗ್‌ಗಳನ್ನು ವಿತರಿಸುತ್ತಿದ್ದಾರೆ.[೧೪] ವಿಯೆಟ್ನಾಮ್‌ನಲ್ಲಿ ಫ್ಯೂಟೆಕ್‌ ಸಂಸ್ಥೆಯು, ಈ ದೇಶದಲ್ಲಿ ಹಲವು ಕಟ್ಟಡಗಳಲ್ಲಿ ಅಳವಡಿಸಿದ ಸ್ವಯಂಚಾಲಿತ ಟಿಕೆಟ್‌ ತಪಾಸಣಾ ವ್ಯವಸ್ಥೆಯನ್ನು ಹಲವು ಕಟ್ಟಡಗಳಲ್ಲಿ ಜಾರಿಗೊಳಿಸಲು ಗುತ್ತಿಗೆ ವಹಿಸಿಕೊಂಡಿದೆ.

ಟೋಲ್‌ ರಸ್ತೆಗಳು (ಸುಂಕ ವಸೂಲಿ ರಸ್ತೆಗಳು)[ಬದಲಾಯಿಸಿ]

ಸಾರ್ವಜನಿಕ ಸಾರಿಗೆ (ಬಸ್‌, ರೈಲು, ಸುರಂಗಮಾರ್ಗ)[ಬದಲಾಯಿಸಿ]

 • ಯುರೋಪ್‌ನಾದ್ಯಂತ, ಅದರಲ್ಲೂ ವಿಶಿಷ್ಟವಾಗಿ ಪ್ಯಾರಿಸ್‌ನಲ್ಲಿ, (RATP 1995ರಲ್ಲಿ ಆರಂಭಿಸಿದ ವ್ಯವಸ್ಥೆ), ಫ್ರಾನ್ಸ್‌ ದೇಶದ ಲಯನ್‌, ಬಾರ್ಡೋ, ಗ್ರೆನೊಬಲ್‌, ನ್ಯಾನ್ಸಿ ಮತ್ತು ಮಾರ್ಸೇಯ್ಲ್ಸ್‌, ಪೊರ್ಚುಗಲ್‌ನ ಇಡೀ ಹೆದ್ದಾರಿ ವ್ಯವಸ್ಥೆ ಮತ್ತು ಹಲವು ಪೊರ್ಚುಗೀಸ್‌ ಸಾರ್ವಜನಿಕ ಕಾರ್‌ ನಿಲುಗಡೆಗಳು, ಇಟಲಿ ದೇಶದ ಮಿಲಾನ್‌, ಟುರಿನ್‌, ನ್ಯಾಪ್ಲ್‌ಸ್‌ ಮತ್ತು ಪ್ಲಾರೆನ್ಸ್‌ ಹಾಗೂ ಬೆಲ್ಜಿಯಮ್‌ನ ಬ್ರಸೆಲ್ಸ್‌ - ಇಂತಹ ಸ್ಥಳಗಳಲ್ಲಿ ಸಾರ್ವಜನಿಕ ಸಾರಿಗೆ ವ್ವವಸ್ಥೆಗಳಲ್ಲಿ ಕೆಲಿಪ್ಸೊ ಅಂತಾರಾಷ್ಟ್ರೀಯ ಪ್ರಮಾಣಕ್ಕೆ ಹೊಂದುಕೊಳ್ಳುವ RFID ಪಾಸ್‌ಗಳನ್ನು ನೀಡಲಾಗಿದೆ. ಇದೀಗ ಕೆನಡಾ ದೇಶದ ಮಾಂಟ್ರಿಯಾಲ್‌, ಮೆಕ್ಸಿಕೊ, ಇಸ್ರೇಲ್‌, ಕೊಲೊಂಬಿಯಾ ದೇಶದ ಬೊಗೊಟೆ ಮತ್ತು ಪೆರೇರಾ ನಗರಗಳು, ನಾರ್ವೇಯ ಸ್ಟಾವಾಂಜರ್‌, ಲಕ್ಸೆಂಬರ್ಗ್‌ ಇತ್ಯಾದಿ ದೇಶಗಳಲ್ಲಿ ಸಹ ಬಳಸಲಾಗಿದೆ.
 • ದಕ್ಷಿಣ ಕೋರಿಯಾದ ಸೋಲ್‌ ಮತ್ತು ಸುತ್ತಮುತ್ತಲ ನಗರಗಳಲ್ಲಿ, ಸಾರ್ವಜನಿಕ ಸಾರಿಗೆಯ ಶುಲ್ಕ ಪಾವತಿಸಲು ಟಿ-ಮನಿ ಕಾರ್ಡ್‌ಗಳನ್ನು ಬಳಸಬಹುದು. ದಕ್ಷಿಣ ಕೋರಿಯಾದ ಇನ್ನು ಇತರೆ ಕೆಲವು ನಗರಗಳು ಈ ವ್ಯವಸ್ಥೆಯನ್ನು ಕೈಗೆತ್ತಿಕೊಂಡಿವೆ. ಇದನ್ನು ನಗದಂತೆ ಪರಿಗಣಿಸಿ ಮಳಿಗೆಗಳಲ್ಲಿ ಬಳಸಬಹುದಾಗಿದೆ. MIFARE ತಂತ್ರಜ್ಞಾನ ಬಳಸಿ 1996ರಲ್ಲಿ ಸಾರಿಗೆ ಶುಲ್ಕ ಪಾವತಿಗಳಿಗಾಗಿ ಮೊದಲಬಾರಿಗೆ ಪರಿಚಯಿಸಲಾದ ಯುಪಾಸ್‌ ಸ್ಥಾನದಲ್ಲಿ ಟಿ-ಮನೀ ಬಳಸಲಾಯಿತು.
 • ಆಕ್ಟೊಪಸ್‌ ಕಾರ್ಡ್‌ ಎನ್ನಲಾದ RFID ತಂತ್ರಜ್ಞಾನದ ಬಳಕೆಯ ಮೂಲಕ, ಹಾಂಗ್‌ಕಾಂಗ್‌ನಲ್ಲಿ ಸಾಮೂಹಿಕ ಸಾರಿಗೆಯ ಶುಲ್ಕ ಪಾವತಿಸಲಾಗುತ್ತಿದೆ. ಮೂಲತಃ ಇದನ್ನು ಸೆಪ್ಟೆಂಬರ್‌ 1997ರಲ್ಲಿ ಸಾರಿಗೆ ಶುಲ್ಕ ಸಂಗ್ರಹಕ್ಕೆಂದೇ ಆರಂಭಿಸಲಾಯಿತು. ಆದರೆ ಇದು ಬೆಳೆದು ಕ್ಯಾಷ್‌ ಕಾರ್ಡ್‌ ತರಹವೇ ಆಗಿದೆ. ಇದನ್ನು ವಿತರಣಾ ಯಂತ್ರಗಳು, ಲಘು ಉಪಾಹಾರ ಕೇಂದ್ರಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಇಂದಿಗೂ ಬಳಸಬಹುದಾಗಿದೆ. ಮೌಲ್ಯವರ್ಧನಾ ಯಂತ್ರಗಳು ಅಥವಾ ಅಂಗಡಿಗಳಲ್ಲಿ ಕಾರ್ಡ್‌ನ್ನು ನಗದೊಂದಿಗೆ ರಿಚಾರ್ಜ್‌ ಮಾಡಬಹುದು, ಹಾಗೂ ಸಂವೇದಕದಿಂದ ಹಲವು ಸೆಂಟಿಮೀಟರ್‌ಗಳ ದೂರದಲ್ಲಿಯೇ ಗುರುತಿಸಬಹುದು. ಈ ವ್ಯವಸ್ಥೆಯು ಭಾರತದ ರಾಜಧಾನಿ ನವದೆಹಲಿಯಲ್ಲಿರುವ ಚುರುಕಿನ ವೇಗದ ಸಾರಿಗೆ ವ್ಯವಸ್ಥೆಯಾದ ದಿಲ್ಲಿ ಮೆಟ್ರೊಗೂ ಅನ್ವಯಿಸುತ್ತದೆ.
 • ವಿಶ್ವದಲ್ಲಿ ಎರಡನೆಯ ಅತಿಹೆಚ್ಚು ಜನನಿಬಿಡವೆನಿಸಿದ ಮಾಸ್ಕೊ ಮೆಟ್ರೊ ಯುರೋಪ್‌ನಲ್ಲಿ ಮೊದಲ ಬಾರಿಗೆ 1998ರಲ್ಲಿ RFID ಸ್ಮಾರ್ಟ್‌ಕಾರ್ಡ್‌ಗಳನ್ನು ಬಳಸಿದ ವ್ಯವಸ್ಥೆಯಾಯಿತು.[ಸೂಕ್ತ ಉಲ್ಲೇಖನ ಬೇಕು]
 • 1999ರಲ್ಲಿ ಸ್ಮಾರ್ಟ್‌ಟ್ರಿಪ್‌ ಕಾರ್ಡ್‌ನ್ನು ಪರಿಚಯಿಸಿದ ವಾಷಿಂಗ್ಟನ್‌ ಡಿ.ಸಿ. ಮೆಟ್ರೊರೈಲ್‌ RFID ತಂತ್ರಜ್ಞಾನ ಬಳಸುವ ಮೊದಲ U.S. ನಗರ ವಲಯ ಸಾಮೂಹಿಕ ಸಾರಿಗೆಯ ವ್ಯವಸ್ಥೆ ಎನಿಸಿಕೊಂಡಿದೆ.
 • ಜಪಾನ್‌ನಲ್ಲಿ ಜೆಆರ್‌ ಈಸ್ಟ್‌ ನವೆಂಬರ್‌ 2001ರಲ್ಲಿ ತನ್ನ ರೈಲ್ವೆ ಸಾರಿಗೆ ಸೇವಾ ಶುಲ್ಕ ಪಾವತಿಗಾಗಿ SUICa (ಸೂಪರ್‌ ಅರ್ಬನ್‌ ಇಂಟೆಲಿಜೆಂಟ್‌ ಕಾರ್ಡ್‌) ಪರಿಚಯಿಸಿತು. ಇದು ಸೋನಿ ಸಂಸ್ಥೆಯ FeliCa (ಫೆಲಿಸಿಟಿ ಕಾರ್ಡ್‌) ತಂತ್ರಜ್ಞಾನ ಬಳಸಿತ್ತು. ಹಾಂಗ್‌ಕಾಂಗ್‌ನ ಆಕ್ಟೊಪಸ್‌ ಕಾರ್ಡ್‌ ಮತ್ತು ಸಿಂಗಪುರದ ಇಝಡ್‌-ಲಿಂಕ್‌ ಕಾರ್ಡ್‌ಗಳಲ್ಲಿ ಇದೇ ಸೋನಿ ತಂತ್ರಜ್ಞಾನ ಬಳಸಲಾಯಿತು.
 • 2002ರಿಂದಲೂ, ಟೈವಾನ್‌ನ ಟೈಪೆಯಲ್ಲಿ ಸಾರಿಗೆ ವ್ಯವಸ್ಥೆಯು RFID ಚಾಲಿತ ಕಾರ್ಡ್‌ಗಳನ್ನು ಬಳಸಿ ಶುಲ್ಕ ಸಂಗ್ರಹದ ವಿಧಾನ ಅಳವಡಿಸಿದೆ. ಈಜಿ ಕಾರ್ಡ್‌ನ್ನು ಸ್ಥಳೀಯ ಅಂಗಡಿಗಳು ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ರಿಚಾರ್ಜ್‌ ಮಾಡಲಾಗಿದ್ದು, ಮೆಟ್ರೊ, ಬಸ್‌ಗಳು ಮತ್ತು ಪಾರ್ಕಿಂಗ್‌ ಸ್ಥಳಗಳಲ್ಲಿ ಬಳಸಬಹುದಾಗಿದೆ. ಭವಿಷ್ಯದಲ್ಲಿ ಇದರ ಬಳಕೆಯು ಇಡೀ ಟೈವಾನ್‌ ದ್ವೀಪದಲ್ಲಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.
 • ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಶಿಕಾಗೊ ಟ್ರ್ಯಾನ್ಸಿಟ್‌ ಅಥಾರಿಟಿಯು ಇಡೀ ವ್ಯವಸ್ಥೆಯುದ್ದಕ್ಕೂ ರೈಲ್‌ ಸಾರಿಗೆ ಪಾವತಿಗಾಗಿ 2002ರಿಂದ ಹಾಗೂ ಬಸ್‌ ಸಾರಿಗೆ ಪಾವತಿಗಾಗಿ 2005ರಿಂದ ಶಿಕಾಗೊ ಕಾರ್ಡ್‌ ಮತ್ತು ಶಿಕಾಗೊ ಕಾರ್ಡ್‌ ಪ್ಲಸ್‌ ಪರಿಚಯಿಸಿದೆ. ದಶಕಗಳಷ್ಟು ಹಳೆಯ ಟೋಕನ್‌-ಆಧಾರಿತ ಸಾರಿಗೆ ಶುಲ್ಕ ಸಂಗ್ರಹ ವ್ಯವಸ್ಥೆಯ ಬದಲಿಗೆ, ಬೊಸ್ಟನ್‌ನ ಸಬ್ವೇ, ಸ್ಟ್ರೀಟ್‌ಕಾರ್‌ ಮತ್ತು ಬಸ್‌ ವ್ಯವಸ್ಥೆಗಳಲ್ಲಿ ಬಳಕೆಗಾಗಿ RFID-ಯುಕ್ತ ಚಾರ್ಲೀಕಾರ್ಡ್‌ನ್ನು MBTA ಪರಿಚಯಿಸಿತು.
 • ಮಾಸ್ಟರ್‌ಕಾರ್ಡ್‌ಪೇಪಾಸ್‌ ಬಳಸಿದ RFID ಪ್ರಯೋಗದಿಂದ ಅದರ ಉಪಯೋಗವನ್ನು ನ್ಯೂಯಾರ್ಕ್‌ ಮಹಾನಗರ ಸಾರಿಗೆ ಪ್ರಾಧಿಕಾರವು ಆರಂಭಿಸಿತು. ಆರಂಭದಲ್ಲಿ IRT ಲೆಕ್ಸಿಂಗ್ಟನ್‌ ಅವೆನ್ಯೂ ಲೈನ್‌ನಲ್ಲಿ ಪರೀಕ್ಷೆ ನಡೆಯಿತು; ಜೊತೆಗೆ ಇತರೆ ಲೈನ್‌ಗಳಲ್ಲಿರುವ ಹಲವು ಜನನಿಬಿಡ ನಿಲ್ದಾಣಗಳಲ್ಲಿಯೂ ಸಹ ಪ್ರಯೋಗ ನಡೆಸಲಾಯಿತು. 31 ಮೇ 2009ರಂದ ಈ ಪ್ರಾಯೋಗಿಕತೆ ಅಂತ್ಯಗೊಂಡಿತು. ಆದರೂ, ಪೇಪಾಸ್‌ ಬಳಸುವ ಆಯ್ಕೆಯನ್ನು ನಂತರದ ದಿನಗಳಲ್ಲಿ ಪುನಃ ವಿಶಾಲ ತಳಹದಿ ಮೇಲೆ ಜಾರಿಗೊಳಿಸಬಹುದಾಗಿದೆ. ನ್ಯೂಯಾರ್ಕ್‌ ನಗರ ಸಬ್ವೇ ಮತ್ತು ಬಸ್‌ ಪ್ರಯಾಣಕ್ಕೆ ಶುಲ್ಕ ವಸೂಲಿಗೆ ಮೆಟ್ರೊಕಾರ್ಡ್‌ನ ಬದಲಿಗೆ PATH ಪರಿಚಯಿಸಿ ಸ್ಮಾರ್ಟ್‌ಲಿಂಕ್‌ನ್ನು ಸ್ವೀಕರಿಸುವ ಸಾಧ್ಯತೆಯನ್ನು MTA ಪರಿಶೀಲಿಸುತ್ತಿದೆ.
 • UKದಲ್ಲಿ, RFID ತಂತ್ರಜ್ಞಾನ ಬಳಸಿ ಸಾರ್ವಜನಿಕ ಸಾರಿಗೆಯ ಅಮಿತ ಸೌಲಭ್ಯ ಪಡೆಯಲು ಪೂರ್ವ-ಪಾವತಿಗಾಗಿ(ಪ್ರಿಪೇಡ್ ) ಚಾಲನಾ ಪದ್ದತಿ ರೂಪಿಸಲಾಗಿದೆ.
ಕ್ರೆಡಿಟ್‌-ಕಾರ್ಡ್‌ವಿನ್ಯಾಸನಂತಿರುವ ಪಾಸ್‌ನಲ್ಲಿ ಇದನ್ನು ಸೇರಿಸಲಾಗಿರುತ್ತದೆ. ಇದನ್ನು ಸ್ಕ್ಯಾನ್‌ ಮಾಡಿದಾಗ, ಪಾಸ್‌ನ ಸಿಂಧುತ್ವ, ಹಾಗೂ ಇನ್ನೂ ಎಷ್ಟು ದಿನಗಳ ಕಾಲ ಪಾಸ್‌ ಬಳಕೆಗಿದೆ ಎಂಬ ವಿವರಗಳನ್ನು ಹೊರಗೆಡಹುತ್ತದೆ. ನಾಟಿಂಗ್‌ಹ್ಯಾಮ್‌ ನಗರದ NCT ಕಂಪನಿ ಇದನ್ನು ಜಾರಿಗೊಳಿಸಿದ ಮೊದಲ ಸಂಸ್ಥೆಯಾಗಿದೆ. ಇಲ್ಲಿ ಸಾರ್ವಜನಿಕರು ಮೆಚ್ಚುಗೆಯಿಂದ ಇದನ್ನು 'ಬೀಪ್‌ ಕಾರ್ಡ್ಸ್‌' ಎನ್ನುತ್ತಾರೆ. ಲಂಡನ್‌ ನಗರದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಇಲ್ಲಿ ಆಯ್ಸ್ಟರ್‌ ಕಾರ್ಡ್‌ಗಳು ಪೇ-ಆಸ್‌-ಯು-ಗೊ ಪ್ರಯಾಣಕ್ಕೆ ಅವಕಾಶ ನೀಡುತ್ತದೆ; ಜೊತೆಗೆ ವಿವಿಧ ಕಾಲಾವಧಿ ವರೆಗೂ ಹಾಗೂ ವಿವಿಧ ವಲಯಗಳಲ್ಲಿ ಸಿಂಧುವಾಗಿರುವ ಪಾಸ್‌ಗಳು ಸಹ ದೊರೆಯುತ್ತವೆ.(ಆಯ್ಸ್ಟರ್‌ ಅಥವಾ ಒಯಸ್ಟರ್ ಇದು ಸಮುದ್ರ ಕರಾವಳಿಯಲ್ಲಿನ ಪ್ರಾಣಿವರ್ಗದ ಸ್ನಾಯು ಭಾಗ)
 • ನಾರ್ವೇ ದೇಶದ ಓಸ್ಲೊ ನಗರದಲ್ಲಿ ಸಾರ್ವಜನಿಕ ಸಾರಿಗೆಯ ಮುಂಬರುವ ಪಾವತಿ ವ್ಯವಸ್ಥೆಯನ್ನು ಇಡಿಯಾಗಿ RFID-ಆಧಾರದ ಮೇಲೆ ನಡೆಸಲಿದೆ. 2007ರ ವಸಂತ ಋತುವಿನಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲು ನಿಶ್ಚಯಿಸಲಾಗಿತ್ತು.
 • ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ ನಗರದಲ್ಲಿರುವ 'ಟ್ರಾನ್ಸ್‌ಪರ್ತ್‌' ಸಾರ್ವಜನಿಕ ಸಾರಿಗೆ ಜಾಲವು ತನ್ನ ಸ್ಮಾರ್ಟ್‌ರೈಡರ್‌ ಟಿಕೆಟಿಂಗ್ ವ್ಯವಸ್ಥೆಯಲ್ಲಿ RFID ತಂತ್ರಜ್ಞಾನ ಬಳಸುತ್ತದೆ. ಇದರಿಂದಾಗಿ ಪ್ರಯಾಣಿಕರು ಟ್ಯಾಗ್‌ ಆನ್‌, ಟ್ಯಾಗ್‌ ಆಫ್‌ ಆಗಲು ಅವಕಾಶ ನೀಡುತ್ತದೆ. ಎಷ್ಟು ವಲಯಗಳಲ್ಲಿ ಅವರು ಪ್ರಯಾಣಿಸಿದ್ದಾರೆ, ಹಾಗೂ ಯಾವ ವಿಧದ ಸಾರಿಗೆ ಬಳಸಿದ್ದಾರೆ ಎಂಬುದಕ್ಕನುಗುಣವಾಗಿ, ಸ್ವಯಂಚಾಲಿತ ಶುಲ್ಕ ಕಡಿತವಾಗುತ್ತದೆ.
 • ಅಟ್ಲ್ಯಾಂಟಾದಲ್ಲಿ MARTA (ಮಹಾನಗರ ಅಟ್ಲ್ಯಾಂಟಾ ತ್ವರಿತ ಸಾರಿಗೆ ಪ್ರಾಧಿಕಾರ) ತನ್ನ ಬಸ್‌ ಮತ್ತು ರೈಲ್‌ ಸೇವೆಗಳನ್ನು ನಾಣ್ಯದ ಟೋಕನ್‌ಗಳಿಂದ ಹೊಸ ಬ್ರೀಜ್‌ ಕಾರ್ಡ್‌ ವಿಧಾನಕ್ಕೆ ಪರಿವರ್ತಿಸಿದೆ. ಬಳಕೆಯ ನಂತರ ಬಿಸಾಡಬಹುದಾದ ಕಾಗದದ ಟಿಕೆಟ್‌ಗಳಲ್ಲಿರುವ RFID ಟ್ಯಾಗ್‌ಗಳನ್ನು ಇದು ಬಳಸುತ್ತದೆ. ಪದೇಪದೇ ಅಥವಾ ಆಗಿಂದಾಗ್ಗೆ ಬಳಸುವವರಿಗಾಗಿ ಸಾಕಷ್ಟು ಶಾಶ್ವತ ಪ್ಲ್ಯಾಸ್ಟಿಕ್‌ ಕಾರ್ಡ್‌ಗಳು ಲಭ್ಯವಿವೆ.
 • ರಿಯೊ ಡಿ ಜನೇರೊ ನಗರದ ಬಸ್‌, ದೋಣಿ, ರೈಲ್ಲ್ವೆ ಮತ್ತು ಸಬ್ವೇಗಳಲ್ಲಿ ಬಳಸಲು 'ರಿಯೊಕಾರ್ಡ್‌' ಪಾಸ್‌ಗಳು ಲಭ್ಯವಿವೆ. ಎರಡು ರೀತಿಗಳ ಪಾಸ್‌ಗಳಿವೆ. ಒಂದನ್ನು ನೀವು ರಿಚಾರ್ಜ್‌ ಮಾಡಲು ಸಾಧ್ಯವಿಲ್ಲ. ಇನ್ನೊಂದು ರೀತಿಯ ಕಾರ್ಡ್‌ - ನೀವು ಉದ್ಯೋಗಿಯಾಗಿರುವ ಸಂಸ್ಥೆಯು ಅದನ್ನು ಕೊಂಡು, ಕೇವಲ ಬ್ರೆಜಿಲ್‌ನಲ್ಲಿ ಮಾತ್ರ ಅದನ್ನು ಒದಗಿಸಿದಲ್ಲಿ, ನಿಮ್ಮ ಕಾರ್ಡ್‌ನ್ನು ರಿಚಾರ್ಜ್‌ ಮಾಡಬಹುದಾಗಿದೆ.
 • ಚಿಲಿ ದೇಶದ ಸಾಂಟಿಯಾಗೊ ನಗರದ ಸಬ್ವೇ ವ್ಯವಸ್ಥೆ ಮೆಟ್ರೊ ಮತ್ತು ಇತ್ತೀಚೆಗೆ ಆರಂಭಿಸಿದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಟ್ರಾನ್ಸಾಂಟಿಯಾಗೊ 'ಬಿಪ್‌' ಅಥವಾ 'ಮಲ್ಟಿವಿಯಾ' ಎಂಬ RFID ಕಾರ್ಡನ್ನು ಬಳಸುತ್ತದೆ.
 • ಕೊಲೊಂಬಿಯಾ ದೇಶದ ಮೆಡೆಲ್ಲಿನ್‌ ನಗರದ ಮೆಟ್ರೊಗಾಗಿ ಇತ್ತೀಚೆಗೆ ಜಾರಿಗೊಳಿಸಿದ ವ್ಯವಸ್ಥೆಯು ಸಿವಿಕಾ ಎಂಬ RFID ಕಾರ್ಡ್‌ನ್ನು ಬಳಸುತ್ತದೆ.
 • ಯುನೈಟೆಡ್‌ ಅರಬ್‌ ಎಮಿರೇಟ್ಸ್ ಪ್ರದೇಶದ ದುಬೈ ಪ್ರಾಂತ್ಯದಲ್ಲಿ ಷೇಖ್‌ ಜಯದ್‌ ರಸ್ತೆ ಮತ್ತು ಗರ್ಹೌದ್‌ ಸೇತುವೆಯ ಮೇಲೆ ಹಾದುಹೋಗುವ ಚಾಲಕರು, ಸಲಿಕ್‌ (ಎಂಬ ರಸ್ತೆಯ ಶುಲ್ಕನ್ನು) RFID ಟ್ಯಾಗ್‌ಗಳನ್ನು ಬಳಸಿ ಟೋಲ್‌ ಪಾವತಿಸುವರು. ಜೊತೆಗೆ, (Nol) [೯] ('ದರ'ದ ಅರಬಿಕ್‌ ಅರ್ಥ) ಎಂಬ ಸಾರ್ವಜನಿಕ ಸಾರಿಗೆಯ ಕಾರ್ಡ್‌ನ್ನು ದುಬೈ 9 ಸೆಪ್ಟೆಂಬರ್‌ 2009ರಂದು ಪರಿಚಯಿಸಿತು. ದುಬೈ ಮೆಟ್ರೊ ಸಹ ಇದೇ ದಿನ ಅಧಿಕೃತವಾಗಿ ಆರಂಭಗೊಳಿಸಲಾಯಿತು. ಈ ಕಾರ್ಡ್‌ನ್ನು ಮೆಟ್ರೊ, ಬಸ್ ಮತ್ತು ವಾಟರ್‌ಬಸ್‌ ಸಾರಿಗೆಗಳಿಗಾಗಿ ಬಳಸಬಹುದಾಗಿತ್ತು.Nol
 • ಕ್ಯಾಲಿಫೊರ್ನಿಯಾಸ್ಯಾನ್‌ ಡೀಗೊದಲ್ಲಿ ಮೆಟ್ರೊಪೊಲಿಟನ್‌ ಟ್ರ್ಯಾನ್ಸಿಟ್‌ ಸಿಸ್ಟಮ್‌ (MTS), ನಾರ್ತ್‌ ಕೌಂಟಿ ಟ್ರ್ಯಾನ್ಸಿಟ್‌ ಡಿಸ್ಟ್ರಿಕ್ಟ್‌ (NCTD) ಮತ್ತು ಸ್ಯಾನ್‌ ಡೀಗೊ ಅಸೊಷಿಯೆಷನ್‌ ಆಫ್‌ ಗವರ್ನ್‌ಮೆಂಟ್ಸ್‌ (SANDAG) ಸಂಸ್ಥೆಗಳು ಪುನಃ ಬರೆಯಬಹುದಾದ RFID ಸ್ಮಾರ್ಟ್‌ ಕಾರ್ಡ್‌ನ್ನು ಬಳಸುತ್ತವೆ. ಇದನ್ನು ಸ್ಥಳೀಯವಾಗಿ ಕಾಂಪಾಸ್‌ ಕಾರ್ಡ್‌ ಎನ್ನಲಾಗುತ್ತದೆ. ದೈನಿಕ, ವಾರದ ಅಥವಾ ತಿಂಗಳ ಪಾಸ್‌ಗಳ ಅಥವಾ ನಗದು ಮೌಲ್ಯಗಳನ್ನು ಶೇಖರಿಸಬಹುದು. ಇದನ್ನು ಹೊಂದಿದವರು ಬಸ್‌ ಮತ್ತು ರೈಲುಗಳಲ್ಲಿ ಪ್ರಯಾಣಿಸುವುದು ಸುಲಭವಾಗುತ್ತದೆ.
 • ಫಿನ್ಲೆಂಡ್‌ ದೇಶದಲ್ಲಿ, ಗ್ರೇಟರ್‌ ಹೆಲ್ಸಿಂಕಿ ವಲಯದಲ್ಲಿ ಬಳಸಲಾಗುತ್ತಿರುವ RFID ಪ್ರಯಾಣ ಕಾರ್ಡ್‌ಗಳು ಇಡೀ ಯುರೋಪ್‌ನಲ್ಲಿರುವ ವ್ಯವಸ್ಥೆಗಳಲ್ಲಿಯೇ ಅತಿದೊಡ್ಡದಾಗಿದೆ. ಇದು 2001ರ ಇಸವಿಯಿಂದಲೂ ಎಲ್ಲಾ ರೀತಿಯ ಸಂಚಾರಗಳನ್ನು (ಬಸ್‌, ಟ್ರ್ಯಾಮ್‌, ಪ್ರಯಾಣಿಕರ ರೈಲು, ಮೆಟ್ರೊ ಮತ್ತು ದೋಣಿ ಬಂದರುಗಳು) ಒಳಗೊಂಡಿವೆ.
ಟ್ಯಾಂಪಿಯರ್‌ನಲ್ಲಿ RFID ಸಾರಿಗೆ ಕಾರ್ಡ್‌ ಪದ್ದತಿಯು 1995ರಿಂದಲೂ ಚಾಲ್ತಿಯಲ್ಲಿದೆ.[೧೫]

ಆಸ್ತಿಪಾಸ್ತಿ ನಿರ್ವಹಣೆ ಮತ್ತು ಚಿಲ್ಲರೆ ಮಾರಾಟ[ಬದಲಾಯಿಸಿ]

ಮೊಬೈಲ್‌ ಕಂಪ್ಯುಟಿಂಗ್‌ ಮತ್ತು ವೆಬ್‌ ತಂತ್ರಜ್ಞಾನಗಳೊಂದಿಗೆ ಸೇರಿ RFID,ಯು ಸಂಸ್ಥೆಗಳಿಗೆ ತಮ್ಮ ಆಸ್ತಿಪಾಸ್ತಿಗಳ ಗುರುತಿಸಿ ನಿರ್ವಹಿಸಲು ನೆರವಾಗುತ್ತದೆ. ಆರಂಭಿಕ, TN (ಟೆನ್ನಸೀ) ರಾಜ್ಯದ ಕ್ರೇಗ್‌ ಪ್ಯಾಟರ್ಸನ್‌ ಮೂಲಕ ದೊಡ್ಡ ಪ್ರಮಾಣದ ಚಿಲ್ಲರೆ ವ್ಯಾಪಾರವಲಯದಲ್ಲಿ ಇದನ್ನು ಪರಿಚಯಿಸಲಾಯಿತು. ಸಮಗ್ರ RFID ರೀಡರ್‌ಗಳನ್ನು ಹೊಂದಿರುವ ಮೊಬೈಲ್‌ ಕಂಪ್ಯೂಟರ್‌ ಉಪಕರಣಗಳ ಸಮಗ್ರ ಮಾಹಿತಿ ನೀಡಬಹುದಾಗಿದೆ. ಇವು ಇಂದು ಯಾವುದೇ ಕಾಗದದ ಮೇಲಣ ಕೆಲಸವನ್ನು (ಲೇಖನಿ-ಕೆಲಸ) ಅನಗತ್ಯಗೊಳಿಸಿ, ಗುರುತಿನ ಸಾಕ್ಷ್ಯಾಧಾರ ಮತ್ತು ಹಾಜರಿ ವಿವರ-ಮಾಹಿತಿ ನೀಡುತ್ತವೆ. ಈ ಯತ್ನವು ಶ್ರಮಿಕ ಕೆಲಸದ ಮೂಲಕ ಮಾಹಿತಿ ಸಂಗ್ರಹಿಸುವುದನ್ನು ಅನಗತ್ಯಗೊಳಿಸುತ್ತದೆ. ಅಂತರಜಾಲ-ಆಧಾರಿತ ನಿರ್ವಹಣಾ ಉಪಕರಣಗಳ ಮೂಲಕ ಸಂಸ್ಥೆಗಳು ತಮ್ಮ ಆಸ್ತಿ-ಪಾಸ್ತಿಗಳ ಉಸ್ತುವಾರಿ ನಡೆಸಬಹುದು, ಇದರಂತೆ ವಿಶ್ವದಲ್ಲಿ ಎಲ್ಲಿಂದಾದರೂ ಆಡಳಿತ ನಿರ್ವಹಣಾ ನಿರ್ಧಾರಗಳನ್ನು ಕೈಗೊಳ್ಳಬಹುದು. ಅಂತರಜಾಲ-ಆಧಾರಮೂಲ ಬಳಸಿ ತೃತೀಯ ಪಕ್ಷದವರು (ಉತ್ಪಾದಕರು ಮತ್ತು ಗುತ್ತಿಗೆದಾರರು) ಆಸ್ತಿ-ಪಾಸ್ತಿ ಮಾಹಿತಿಯನ್ನು (ಉದಾಹರಣೆಗೆ, ತಪಾಸಣಾ ಹಿನ್ನಲೆ ಮತ್ತು ವರ್ಗಾವಣಾ ದಾಖಲೆಗಳನ್ನು) ಆನ್ಲೈನ್‌ ವಿಧಾನದಿಂದ ಪರಿಷ್ಕರಿಸಬಹುದಾಗಿದೆ. ಇದರಿಂದಾಗಿ, ಬಳಕೆದಾರರಿಗೆ ಎಂದೆಂದಿಗೂ ನಿಖರ, ನಿಗದಿತ ಅವಧಿಯ ಮಾಹಿತಿ ಲಭ್ಯವಿರುವುದು. ಚರಾಸ್ತಿ-ಪಾಸ್ತಿ ನಿರ್ವಹಣಾ ವ್ಯವಸ್ಥೆಯೊಂದಿಗೆ ಸುಸಜ್ಜಿತ RFID ಟ್ಯಾಗ್‌ಗಳನ್ನು ಸಂಸ್ಥೆಗಳು ಈಗಾಗಲೇ ಬಳಸುತ್ತಿವೆ. ತಮ್ಮ ಆಸ್ತಿ-ಪಾಸ್ತಿಗಳನ್ನು ದಾಖಲಿಸಿ, ಅವು ಎಲ್ಲಿವೆ, ಅವುಗಳ ತಾಜಾ ಸ್ಥಿತಿ ಹಾಗೂ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿವೆಯೇ ಎಂಬುದರ ಜಾಡುಹಿಡಿಯಬಹುದು. ವಸ್ತು-ಮಟ್ಟದ ಸಣ್ಣಪುಟ್ಟ ಉಪಯೋಗಗಳಿಗೆ RFIDಯನ್ನು ಆಯ್ದುಕೊಳ್ಳಲಾಗಿದೆ. ದಕ್ಷತೆ ಮತ್ತು ಉತ್ಪನ್ನ ಲಭ್ಯತೆಯ ಲಾಭದ ವಿಚಾರಗಳಷ್ಟೇ ಅಲ್ಲದೆ, ಈ ವಿಧಾನ ವಿದ್ಯುನ್ಮಾನ ವಸ್ತು ನಿಗಾ ವ್ಯವಸ್ಥೆಯ (EAS) ಸೇವಾ ಆವೃತ್ತಿ ಮತ್ತು ಗ್ರಾಹಕರಿಗಾಗಿ ಸ್ವಯಂ-ನಿರ್ಗಮನ ಪ್ರಕ್ರಿಯೆಯನ್ನು ಪ್ರಸ್ತುತಪಡಿಸುತ್ತದೆ. ವಾಣಿಜ್ಯಿಕವಾಗಿ , ಮೊದಲ ಬಾರಿಗೆ ಸಾರ್ವಜನಿಕ ವಸ್ತು-ಮಟ್ಟದ RFID ಚಿಲ್ಲರೆ (ಕಿರುಕಳ)ವ್ಯವಸ್ಥೆಗಾಗಿ ಈ ವಿಧಾನದ ಅಳವಡಿಕೆಯನ್ನು 2005ರಲ್ಲಿ USAದ ಉತ್ತರ ಕ್ಯಾರೊಲಿನಾ ರಾಜ್ಯದಲ್ಲಿರುವ ಫ್ರೀಡಮ್‌ ಷಾಪಿಂಗ್‌ ಇಂಕ್‌. ಸಂಸ್ಥೆ ಆರಂಭಿಸಿತೆಂದು ನಂಬಲಾಗಿದೆ.

ಉತ್ಪನ್ನ ನಿಗಾ[ಬದಲಾಯಿಸಿ]

ಉತ್ಪನ್ನ ನಿಗಾ ಅಳವಡಿಕೆಗಳಲ್ಲಿ RFID ಬಳಕೆಯು ಕಾರ್ಯಾಗಾರದಲ್ಲಿನ ಉತ್ಪನ್ನ ಪ್ರಕ್ರಿಯೆಯೊಂದಿಗೆ ಆರಂಭಗೊಂಡು, ದೊಡ್ಡ-ಪ್ರಮಾಣದ ಖರೀದಿದಾರರಿಗೆ ಮಾರಾಟ-ನಂತರದ ವಿನ್ಯಾಸ ನಿರ್ವಹಣಾ ನೀತಿಗಳ ವರೆಗೂ ಸೇವೆಯನ್ನು ವಿಸ್ತರಿಸುತ್ತದೆ.

IT ಆಸ್ತಿ-ಪಾಸ್ತಿ ನಿಗಾ (ಮಾಹಿತಿ ತಂತ್ರಜ್ಞಾನದ ಮೂಲಕ)[ಬದಲಾಯಿಸಿ]

2008ರಲ್ಲಿ, ವಿಶಿಷ್ಟವಾಗಿ ಲೋಹದ ಮೇಲೆ ಅಳವಡಿಸುವಂತಹ, ಜಡ UHF RFID ಟ್ಯಾಗ್‌ಗಳು ಡಜನ್‌ಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಹೊರಹೊಮ್ಮಿದವು. VA (ವರ್ಜಿನಿಯಾ) ರಾಜ್ಯದ ರೆಸ್ಟನ್‌ನಲ್ಲಿರುವ ODIN ಟೆಕ್ನಾಲಜೀಸ್‌ ಒಂದು ವೈಜ್ಞಾನಿಕ ಮಾನದಂಡವನ್ನು ಹೊರತಂದಿತು. ಇದು ಲೋಹದ ಮೇಲೆ ಜೋಡಿಸಿದ ಟ್ಯಾಗ್‌ಗಳಲ್ಲಿ ವ್ಯತ್ಯಾಸಗೊಳ್ಳುವ ಕ್ರಿಯಾಶೀಲತೆಯನ್ನು ಗುರುತಿಸಿತು. ನೈಜಕಾಲದ ಸ್ಥಿತಿಯಲ್ಲಿ 25 ಅಡಿಗಳಷ್ಟು ದೂರದ ಅಂತರದಿಂದ ಓದಬಹುದಾಗಿದೆ. ಇದೇ ಸಮಯದಲ್ಲಿ, ಏಲಿಯೆನ್‌, ಇಂಪಿಂಜ್‌ ಮತ್ತು NXP (ಮುಂಚೆ ಫಿಲಿಪ್ಸ್‌) ಹೊಸ ಇಂಟೆಗ್ರೇಟೆಡ್‌ ಸರ್ಕ್ಯೂಟ್‌ಗಳನ್ನು (ICಗಳು) ಪರಿಚಯಿಸಿದವು. ಇವು ಇನ್ನಷ್ಟು ಉತ್ತಮ ಕ್ರಿಯಾಶೀಲತೆ ಸಾಧಿಸಿದವು. ಇದರ ಫಲವಾಗಿ IT ಆಸ್ತಿ-ಪಾಸ್ತಿ ನಿಗಾ ಮೂಲಗಳು ಹೆಚ್ಚು ಜನಪ್ರಿಯತೆ ಗಳಿಸಿದವು. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿಕೊಂಡದ್ದು ಬ್ಯಾಂಕ್ ಆಫ್‌ ಅಮೆರಿಕಾ ಮತ್ತು ವೆಲ್ಸ್ ಫ್ಯಾರ್ಗೊ ಸಂಸ್ಥೆಗಳು. ಎರಡೂ ಸಂಸ್ಥೆಗಳು ತಲಾ ಡಜನ್‌ಗಿಂತಲೂ ಹೆಚ್ಚು ಮಾಹಿತಿ ಕೇಂದ್ರಗಳಲ್ಲಿ 100,000ಕ್ಕಿಂತಲೂ ಹೆಚ್ಚು ಆಸ್ತಿ-ಪಾಸ್ತಿ ಹೊಂದಿದ್ದವು.[೧೬]

ಸಾರಿಗೆ ಮತ್ತು ಸಾಮಾನುಸರಂಜಾಮುಗಳ ಸಾಗಾಟ[ಬದಲಾಯಿಸಿ]

 • RFID ತಂತ್ರಜ್ಞಾನ ಅಳವಡಿಸಲು ಸರಕುಸಾಗಾಟದ ವ್ಯವಸ್ಥೆಯ ತಂತ್ರ ಮತ್ತು ಸಾರಿಗೆ ಪ್ರಮುಖ ಕ್ಷೇತ್ರಗಳಾಗಿವೆ. ಉದಾಹರಣೆಗೆ, ವ್ಯಾಪಾರಿ ಪ್ರಾಂಗಣ ನಿರ್ವಹಣೆ, ಸಾಗಾಣಿಕೆ, ಸರಕು ರವಾನೆಯ ಬಾಡಿಗೆ ಮತ್ತು ವಿತರಣಾ ಕೇಂದ್ರಗಳು RFID ನಿಗಾ ತಂತ್ರಜ್ಞಾನ ಬಳಸಬಹುದಾದ ಕೆಲವು ಕ್ಷೇತ್ರಗಳಾಗಿವೆ. ವ್ಯಾವಹಾರಿಕ ಮೌಲ್ಯಗಳು ಮತ್ತು ದಕ್ಷತೆಯ ಮೇಲೆ ಪ್ರಭಾವ ಬೀರುವ ಕಾರಣ ವಿಶ್ವಾದ್ಯಂತದ ಸಾರಿಗೆ ಸಂಸ್ಥೆಗಳು RFID ತಂತ್ರಜ್ಞಾನವು ಬಹಳ ಉಪಯುಕ್ತವೆಂದು ಪರಿಗಣಿಸಿವೆ.
 • ಉತ್ತರ ಅಮೆರಿಕಾ ರೈಲುಮಾರ್ಗ ಕ್ಷೇತ್ರವು RFID ಆಧಾರಿತ ಸ್ವಯಂಚಾಲಿತ ಉಪಕರಣ ಗುರುತಿಸುವ ಪದ್ದತಿಯನ್ನು ನಿರ್ವಹಿಸುತ್ತದೆ. ರೈಲಿನ ಇಂಜಿನ್‌ಗಳು ಮತ್ತು ಹಳಿ-ಬಂಡಿಗಳಿಗೆ ಎರಡು ಜಡ RFID ಟ್ಯಾಗ್‌ ಅಳವಡಿಸಲಾಗಿರುತ್ತದೆ (ಉಪಕರಣದ ಒಂದರ ಬದಿಗೆ ಒಂದನ್ನು ಅಳವಡಿಸಲಾಗಿರುತ್ತದೆ). ಪ್ರತಿಯೊಂದು ಟ್ಯಾಗ್‌ನಲ್ಲಿ ಎಂಕೋಡ್‌ ಆಗಿರುವ ಮಾಹಿತಿಯು ಉಪಕರಣದ ಮಾಲೀಕ, ಕಾರಿನ ಸಂಖ್ಯೆ, ಉಪಕರಣದ ರೀತಿ, ಗಾಲಿಗಳ ಸಂಖ್ಯೆ ಇತ್ಯಾದಿಯನ್ನು ಹೊಂದಿರುತ್ತದೆ. ಅಮೆರಿಕನ್‌ ರೈಲುಮಾರ್ಗ ಘಟಕದ ಕಾರ್‌ ತಪಸೀಲು, ಹಾಗೂ, ಸರಕು ಭರ್ತಿ , ಸರಕಿನ ಮೂಲಸ್ಥಳ, ಗಮ್ಯಸ್ಥಳವನ್ನು ಸೂಚಿಸುವ ರೈಲುಮಾರ್ಗದ್ದೇ ಮಾಹಿತಿಗಳನ್ನು ಬಳಸಿ, ಉಪಕರಣ ಹೊಂದಿರುವವರು ಮತ್ತು ಕಾರಿನ ಸಂಖ್ಯೆಯನ್ನು ಬಳಸಿ ಉಪಕರಣದ ಭೌತಿಕ ಲಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.[೨೧]
 • RFID ತಂತ್ರಜ್ಞಾನ ಅಳವಡಿಸುವ ಏರೊಸ್ಪೇಸ್‌ ಅನ್ವಯಿಕೆಗಳನ್ನು ಜಾಲ-ಕೇಂದ್ರೀಕೃತ ಉತ್ಪನ್ನದ ಪೂರಕ ವಿನ್ಯಾಸದೊಳಗೆ ಅಳವಡಿಸಬಹುದಾಗಿದೆ.
ವಾಣಿಜ್ಯೋದ್ಯಶದ ವಿಮಾನಗಳಲ್ಲಿನ ವ್ಯವಸ್ಥೆಗಳ ನಿರ್ವಹಣಾ ಕಾರ್ಯಕ್ಕೆ ಇನ್ನಷ್ಟು ಕಾರ್ಯದಕ್ಷ ತಂತ್ರಗಳಿಗೆ ಈ ತಂತ್ರಜ್ಞಾನ ನೆರವಾಗುತ್ತದೆ.

ಪಶುಗಳನ್ನು ಗುರುತಿಸುವುದು[ಬದಲಾಯಿಸಿ]

ಕಿವಿಗೆ ಟ್ಯಾಗ್‌ ಹೊಂದಿರುವ ಒಂದು ಕುರಿ.

ಪಶುಪ್ರಾಣಿಗಳಿಗಾಗಿ ಅಳವಡಿಸುವ RFID ಟ್ಯಾಗ್‌ಗಳು RFID ತಂತ್ರಜ್ಞಾನದ ಅತಿ ಹಳೆಯ ಉಪಯೋಗಗಳಲ್ಲೊಂದು. ಮೂಲತಃ ವಿಶಾಲ ಕೃಷಿ ಕ್ಷೇತ್ರಗಳು ಮತ್ತು ಕಡಿದಾದ ಪ್ರದೇಶಗಳಿಗೆ ಈ ತಂತ್ರಜ್ಞಾನತಲುಪಿಸುವ ಗುರಿಯಾಗಿತ್ತು. ಆದರೆ, ಹಸುಗಳ ಮೆದುಳಿನ ಊತ ರೋಗ ಸಂಭವಿಸಿದಾಗಿಂದಲೂ ಪಶುಗಳನ್ನು ಗುರುತಿಸಲು RFID ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ.

ಪಶುಗಳನ್ನು ಗುರುತಿಸಲು, ಅವುಗಳಲ್ಲಿ ಅಳವಡಿಸಲಾಗುವ RFID ಟ್ಯಾಗ್‌ ಮಾದರಿಗಳು ಅಥವಾ ಗ್ರಾಹಕ-ಪ್ರೇಕ್ಷಕಗಳನ್ನು ಬಳಸಬಹುದು. ಈ ಗ್ರಾಹಕ-ಪ್ರೇಷಕಗಳು 'ಜಡ RFID ತಂತ್ರಜ್ಞಾನ', ಅಥವಾ ಸರಳವಾಗಿ ಪಶುಗಳಒಳಗೆ ಸೇರಿಸುವ 'ಚಿಪ್ಸ್‌' ಎಂದು ಚಿರಪರಿಚಿತವಾಗಿವೆ.[೨೨]

ಮಾಂಸಸಂಸ್ಕರಣೆದಾರರಿಗೆ RFID ನಿಗಾ ಮತ್ತು ಜಾಡು[ಬದಲಾಯಿಸಿ]

ಕೆನಡಿಯನ್‌ ದನಕರು ಹಾಗು ಸಾಕುಪ್ರಾಣಿಗಳ ಗುರುತಿಸುವ ನಿಯೋಗ ವು ಬಾರ್‌ಕೋಡ್‌ ಗಳ ಬದಲಿಗೆ RFID ಟ್ಯಾಗ್‌ಗಳನ್ನು ಬಳಸಲಾರಂಭಿಸಿತು. ಗೋವಿನ ಹಿಂಡನ್ನು ಗುರುತಿಸಲು ಈ RFID ಟ್ಯಾಗ್‌ಗಳ ಅಗತ್ಯವಿದೆ. ಮಾಂಸದ ಪ್ಯಾಕಿಂಗ್,ಸಂಸ್ಕರಣಾ ಉದ್ದಿಮೆಯು ದನದ ಮೃತದೇಹ ತಿರಸ್ಕರಿಸಿದಲ್ಲಿ ಈ ಟ್ಯಾಗ್‌ಗಳ ಜಾಡು ಹಿಡಿಯಬಹುದು. ಸದ್ಯಕ್ಕೆ CCIA ಟ್ಯಾಗ್‌ಗಳನ್ನು ವಿಸ್ಕಾನ್ಸಿನ್‌ನಲ್ಲಿ ಹಾಗೂ ಸ್ವಪ್ರೇರಣೆಯಾಗಿ US ರೈತರಿಂದ ಬಳಸಲಾಗುತ್ತದೆ. USDA ಸದ್ಯಕ್ಕೆ ತನ್ನದೇ ಆದ ಯೋಜನೆಯನ್ನು ರೂಪಿಸುತ್ತಿದೆ.

ತಪಸೀಲು ವ್ಯವಸ್ಥೆಗಳು(ಸ್ಟಾಕ್ ವ್ಯವಸ್ಥೆ)[ಬದಲಾಯಿಸಿ]

ಉತ್ಪನ್ನದಿಂದ ತೆಗೆದುಹಾಕಲಾದ ಮಾಡರ್ನ್‌ ಕನ್ಸುಮರ್‌ ರೀಟೈಲ್‌ RFID ಟ್ಯಾಗ್‌.

ರೇಡಿಯೊ-ಫ್ರೀಕ್ವೆನ್ಸಿ ಗುರುತಿಸುವಿಕೆ (RFID) ತಂತ್ರಜ್ಞಾನ ಆಧರಿಸಿದ ಆಟೋ-ID ಲ್ಯಾಬ್ಸ್‌ನಂತಹ ಆಧುನಿಕ ಸ್ವಯಂಚಾಲಿತ ಗುರುತಿಸುವಿಕೆಯ ತಪಸೀಲು ವ್ಯವಸ್ಥೆಗಾಗಿ ಗಮನಾರ್ಹ ಮೌಲ್ಯಾದ್ಯತೆ ಹೊಂದಿದೆ. ಗಮನಾರ್ಹವಾಗಿ, ಈ ತಂತ್ರಜ್ಞಾನವು ಸದ್ಯದ ತಪಸೀಲಿನ ಬಗ್ಗೆ ನಿಖರ ಮಾಹಿತಿ ಒದಗಿಸುತ್ತದೆ. ವಾಲ್‌-ಮಾರ್ಟ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ,[೨೩] ಯಾವ ಸಾಮಗ್ರಿಗಳು 0.1ರಿಂದ 15 ಏಕಮಾನಗಳ ಹೊಂದಿವೆಯೋ ಅವುಗಳ ದಾಸ್ತಾನು ಇಲ್ಲದ ಸ್ಥಿತಿಯನ್ನು 30%ರಷ್ಟು ಕಡಿಮೆಗೊಳಿಸಿತು.

RFID ಬಳಕೆಯ ಇತರೆ ಅನುಕೂಲಗಳಲ್ಲಿ ಶ್ರಮ ವೆಚ್ಚಗಳಲ್ಲಿ ಇಳಿತ, ವ್ಯಾವಹಾರಿಕ ಪ್ರಕ್ರಿಯೆಗಳ ಸರಳೀಕರಣ ಹಾಗೂ ತಪಸೀಲು ಏರುಪೇರಾಗುವ ಸಾಧ್ಯತೆ ಕಡಿಮೆಯಾಗುವುದು ಸೇರಿವೆ.

2004ರಲ್ಲಿ ಬೋಯಿಂಗ್‌ ತನ್ನ Boeing 787 ಡ್ರೀಮ್‌ಲೈನರ್‌ ವಿಮಾನದಲ್ಲಿ ನಿರ್ವಹಣಾ ಮತ್ತು ತಪಸೀಲಿನ ಖರ್ಚುಗಳನ್ನು ಕಡಿಮೆಗೊಳಿಸಲು RFID ತಂತ್ರಜ್ಞಾನ ಬಳಕೆಯನ್ನು ಏಕೀಕೃತಗೊಳಿಸಿತು. ವಿಮಾನದ ಬಿಡಿಭಾಗಗಳ ಬೆಲೆ ದುಬಾರಿಯಾಗಿರುವುದರಿಂದ, ಅಪೂರ್ವ ಗಾತ್ರ, ಆಕಾರ ಮತ್ತು ನಿಸರ್ಗದ ಸಮಸ್ಯೆಗಳಿದ್ದರೂ ಸಹ, ಬೋಯಿಂಗ್‌ ಸಂಸ್ಥೆಯು ತಪಸೀಲಿನ ನಿಗಾ ವಹಿಸಲು RFID ತಂತ್ರಜ್ಞಾನ ನೆರವಾಯಿತು. ಏಕೀಕೃತಗೊಳಿಸಿದ ಮೊದಲ ಆರು ತಿಂಗಳಲ್ಲಿ ಸಂಸ್ಥೆಯು ಶ್ರಮಿಕ ವಲಯದ ವೆಚ್ಚದಲ್ಲಿಯೇ $29,000 ಉಳಿತಾಯ ಮಾಡಲು ಬೋಯಿಂಗ್‌ ಗೆ ಶಕ್ಯವಾಯಿತು.[೨೪]

RFID ಕರಾರುಗಳು[ಬದಲಾಯಿಸಿ]

ವಾಲ್‌-ಮಾರ್ಟ್‌ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ರಕ್ಷಣಾ ಇಲಾಖೆಯು ಕೆಲ ಅವಶ್ಯಕತೆಗಳನ್ನು ಪ್ರಕಟಿಸಿದ್ದವು. ಇದರಂತೆ, ಅವರ ಮಾರಾಟಗಾರು ಪೂರೈಕೆ ಸರಪಳಿ ನಿರ್ವಹಣೆಯನ್ನು ಉತ್ತಮಗೊಳಿಸಲು ಪ್ರತಿಯೊಂದು ಸರಕು ಸಾಗಾಣಿಕೆಗೂ RFID ಟ್ಯಾಗ್‌ಗಳನ್ನು ಅಳವಡಿಸಬೇಕಾಗಿತ್ತು. ಇವೆರಡೂ ಸಂಸ್ಥೆಗಳ ಗಾತ್ರದ ಫಲವಾಗಿ ಅವರ RFID ಕರಾರುಗಳು ವಿಶ್ವಾದ್ಯಂತ ಸಾವಿರಾರು ಉದ್ದಿಮೆಗಳ ಮೇಲೆ ಪ್ರಭಾವ ಬೀರಲಿದೆ. ಮಾರಾಟಗಾರರು RFID ವ್ಯವಸ್ಥೆ ಅಳವಡಿಸುವುದರಲ್ಲಿ ಎದುರಿಸಿದ ಗಮನಾರ್ಹ ಕಷ್ಟಗಳ ಕಾರಣ ಗಡುವನ್ನು ಬಹಳ ಸಲ ವಿಸ್ತರಿಸಲಾಗಿವೆ. ಪ್ರಯೋಗದಲ್ಲಿ, ಉತ್ಪನ್ನಗಳು ಮತ್ತು ಪ್ಯಾಕೇಜಿಂಗ್‌ ವಸ್ತುಗಳಿಂದ ರೇಡಿಯೊ ತರಂಗಗಳ ಕುಗ್ಗುವಿಕೆಯುಂಟಾಗುವ ಕಾರಣ, ಗುರುತಿಸುವಿಕೆಯ ದರವು ಕೇವಲ 80%ರಷ್ಟು ಯಶಸ್ಸು ಕಂಡಿದೆ. ಕಾಲಾನಂತರದಲ್ಲಿ, ಸಣ್ಣ ಉದ್ದಿಮೆಗಳೂ ಸಹ ತಮ್ಮ ಹೊರಹೋಗುವ ಸಾಮಗ್ರಿಗಳ ಸಮುದ್ರ ಸಾಗಾಣಿಕೆಗಳ ಮೇಲೆ RFID ಟ್ಯಾಗ್‌ಗಳನ್ನು ಬಳಸುವರೆಂಬ ನಿರೀಕ್ಷೆಯಿದೆ.

ವಾಲ್‌-ಮಾರ್ಟ್‌ ಕರಾರು(ಆದೇಶ ಆಜ್ಞೆ)[ಬದಲಾಯಿಸಿ]
ವಾಲ್-ಮಾರ್ಟ್‌ ಬಳಸಿದ EPC RFID ಟ್ಯಾಗ್‌.

ತನ್ನ 100 ಪ್ರಮುಖ ಪೂರೈಕೆದಾರರಲ್ಲಿ ಪ್ರತಿಯೊಬ್ಬರೂ ತಾವು ಪೂರೈಸುವ ಎಲ್ಲಾ ಸಾಗಾಣಿಕೆಗಳಲ್ಲೂ RFID ಟ್ಯಾಗ್‌ಗಳನ್ನು ಲಗತ್ತಿಸಬೇಕೆಂದು ವಾಲ್‌-ಮಾರ್ಟ್‌ ಜನವರಿ 2005ರಲ್ಲಿ ಕರಾರು ಹಾಕಿತು. ಈ ಆವಶ್ಯಕತೆ ಪೂರೈಸಲು, ಪೂರೈಕೆದಾರರು ವಾಲ್‌-ಮಾರ್ಟ್‌ಗಾಗಿ EPC ಟ್ಯಾಗ್‌ ಆವಶ್ಯಕತೆ ಹೊಂದಿರುವ ಲೇಬಲ್‌ ಕೇಸ್‌ಗಳು ಮತ್ತು ಪ್ಯಾಲೆಟ್‌ಗಳಿಗೆ RFID ಮುದ್ರಕ/ಎಂಕೋಡರ್‌ಗಳನ್ನು ಬಳಸುತ್ತಾರೆ. ಲೇಬೆಲ್‌ ವಸ್ತುಗಳೊಳಗೇ RFID ಜೋಡಣೆಗಳ ಕೂಡಿಸಿ, ನಂತರ ಲೇಬಲ್‌ನ ಮೇಲೆ ಬಾರ್‌ಕೋಡ್‌ ಮತ್ತು ಇತರೆ ದೃಶ್ಯ ಮಾಹಿತಿಯನ್ನು ಅಚ್ಚುಗೊಳಿಸಿ ಈ ಸ್ಮಾರ್ಟ್‌ ಲೇಬಲ್‌ಗಳನ್ನು ಉತ್ಪಾದಿಸಬಹುದಾಗಿದೆ. ಅಕ್ಟೋಬರ್‌ 2005ರಂದು, ಅರ್ಕನ್ಸಾಸ್‌ ವಿಶ್ವವಿದ್ಯಾನಿಲಯದ ಮಾಹಿತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯು 'ಔಟ್‌-ಆಫ್‌-ಸ್ಟಾಕ್‌ ಕಡಿಮೆಗೊಳಿಸುವುದರಲ್ಲಿ RFID ಪಾತ್ರ'ದ ಬಗ್ಗೆ ವರದಿಯೊಂದನ್ನು ಪ್ರಕಟಿಸಿತು. ಇದರಂತೆ, RFIDಯು ಔಟ್‌ ಆಫ್‌ ಸ್ಟಾಕ್‌ ಸಮಸ್ಯೆಯನ್ನು ಸುಮಾರು 16%ರಷ್ಟು ಕಡಿಮೆಗೊಳಿಸಿತು. ಎರಡು ವರ್ಷಗಳ ನಂತರ, ವಾಲ್‌ ಸ್ಟ್ರೀಟ್‌ ಜರ್ನಲ್‌ 'ಜಡಸ್ಥಿತಿಗೆ ಬಿದ್ದ ವಾಲ್‌-ಮಾರ್ಟ್‌ನ ರೇಡಿಯೊ-ನಿಗಾ ತಪಸೀಲು' ಎಂಬ ಲೇಖನ ಪ್ರಕಟಿಸಿತು. ವಾಲ್‌-ಮಾರ್ಟ್‌ ಪರಿಚಯಿಸಿದ RFID ಯೋಜನೆಯು ನಿಂತುಹೋಗುವಂತೆ ಕಾಣುತ್ತಿದೆ; ಏಕೆಂದರೆ, ತನ್ನ ಮಳಿಗೆಗಳಿಗೆ ಈ ತಂತ್ರಜ್ಞಾನ ಪರಿಚಯಿಸಲು ವಾಲ್-ಮಾರ್ಟ್‌ ಸಿಬ್ಬಂದಿಯ ನಿಧಾನಗತಿ, ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡ ಪೂರೈಕೆದಾರರಿಗೆ ಯಾವುದೇ ಪ್ರೋತ್ಸಾಹ ಧನ ನೀಡದಿರುವುದು ಪ್ರಮುಖ ಕಾರಣಗಳಾಗಿದ್ದವು. ಅಕ್ಟೋಬರ್‌ 2007ರಲ್ಲಿ ತನ್ನ RFID ಅನ್ವಯಿಕೆಗಾಗಿ ಹೊಸ ಕ್ಷೇತ್ರಗಳನ್ನು ಘೋಷಿಸಿತು.

 • 1) ಸ್ಯಾಮ್ಸ್‌ ಕ್ಲಬ್‌ನತ್ತ ಹೋಗುತ್ತಿರುವ ಸಾಗಾಣಿಕೆಗಳು
 • 2) ಉತ್ತೇಜಕ ಜಾಹೀರಾತು ಹಾಗೂ ವಾಲ್‌-ಮಾರ್ಟ್‌ ಮಳಿಗೆಗಳತ್ತ ಸಾಗುತ್ತಿರುವ ಉತ್ಪನ್ನಗಳು
 • 3) ಆಯ್ದ ಕ್ಷೇತ್ರಗಳಲ್ಲಿ ವರ್ಗ ನಿರ್ವಹಣೆಯನ್ನು ಉತ್ತಮಗೊಳಿಸುವುದರಲ್ಲಿ RFIDಯ ಪ್ರಭಾವ ಅಳೆಯುವ ಪ್ರಯೋಗಗಳು.

ಸ್ಯಾಮ್ಸ್ ಕ್ಲಬ್‌ ಎಂಬ ವಾಲ್‌-ಮಾರ್ಟ್‌ನ ವಿಭಾಗವು ಈ ದಾರಿಯಲ್ಲಿ ಮುಂದುವರೆದಿದೆ. ಟೆಕ್ಸಾಸ್‌ನಲ್ಲಿರುವ ತನ್ನ ವಿತರಣಾ ಕೇಂದ್ರಕ್ಕೆ ಅಥವಾ ಆ DCಯೊಳಗಿರುವಂತಹ ಅಂಗಡಿಯೊಂದಕ್ಕೆ ನೇರವಾಗಿ ಕಳುಹಿಸಿದ ಪ್ರತಿಯೊಂದು ಪೂರ್ಣ ಪ್ಯಾಲೆಟ್‌ 31 ಜನವರಿ 2008ರಷ್ಟರೊಳಗೆ EPC ಜೆನ್‌ 2 RFID ಟ್ಯಾಗ್‌ ಹೊಂದಿರತಕ್ಕದ್ದು ಎಂದು ವಾಲ್‌-ಮಾರ್ಟ್‌ 7 ಜನವರಿ 2008ರಲ್ಲಿ ತನ್ನ ಪೂರೈಕೆದಾರರಿಗೆ ಸಂದೇಶ ಕಳುಹಿಸಿತು.

ಇದರೊಂದಿಗೆ ಕರಾರು ಉಲ್ಲಂಘಿಸುವ ಪೂರೈಕೆದಾರರಿಗೆ ಸೇವಾಶುಲ್ಕ ವಿಧಿಸಲಾಗುವುದು.[೨೫]

ಜನವರಿ 2009ರಲ್ಲಿ ಸ್ಯಾಮ್ಸ್‌ ಕ್ಲಬ್‌, ಪ್ಯಾಲೆಟ್‌ಗಳನ್ನು ಟ್ಯಾಗ್‌ ಮಾಡದಿರುವುದಕ್ಕೆ ಪ್ರತಿ ಪ್ಯಾಲೆಟ್‌ಗೆ ದಂಡದ ಪ್ರಮಾಣವನ್ನು $2ರಿಂದ ಕೇವಲ 12 ಸೆಂಟ್‌ಗಳಿಗೆ ಇಳಿಸಿತು. ವಾಲ್‌-ಮಾರ್ಟ್‌ ಅಂದಾಜಿನಂತೆ, ಸ್ಯಾಮ್ಸ್‌ ಕ್ಲಬ್‌ ತಾನೇ ಟ್ಯಾಗ್‌ ಮಾಡಲು ಪ್ರತಿ ಪ್ಯಾಲೆಟ್‌ಗೆ 12 ಸೆಂಟ್‌ಗಳಷ್ಟೇ ವೆಚ್ಚ ಆಗಬಹುದು. 2010ರವೇಳೆಗೆ ತನ್ನ ಇಡೀ ಸರಣಿಯಲ್ಲಿ ಪ್ಯಾಲೆಟ್‌-ಮಟ್ಟದ ಟ್ಯಾಗಿಂಗ್‌ನ್ನು ಪರಿಚಯಿಸಲಾಗುವುದು ಎಂದು ಘೋಷಿಸಿತು. ವೈಯಕ್ತಿಕ ವಸ್ತುಗಳಿಗೆ ಟ್ಯಾಗಿಂಗ್‌ ಮಾಡುವ ಬಗೆಗಿನ ಗಡುವು 'ಪರಿಶೀಲನೆಯಲ್ಲಿದೆ' ಎಂದೂ ಘೋಷಿಸಿತು. ವ್ಯಾಪಾರೀ ಉತ್ಪನ್ನಗಳ ಪರಿಚಯ ಮತ್ತು ವ್ಯಾಪಾರ ಪ್ರೊತ್ಸಾಹಿಸುವ ಜಾಹೀರಾತುಗಳಲ್ಲಿ RFID ಯೋಜನೆಯ ಅನುಕೂಲಗಳನ್ನು ಊರ್ಜಿತಗೊಳಿಸಿದ ನಂತರ, ತಾನು ವಾಲ್‌-ಮಾರ್ಟ್‌ನೊಂದಿಗಿನ ಪ್ರೊತ್ಸಾಹಕರ ಯೋಜನೆಯನ್ನು ಅಂತ್ಯಗೊಳಿಸುತ್ತಿರುವುದಾಗಿ ಪ್ರಾಕ್ಟರ್‌ ಅಂಡ್‌ ಗ್ಯಾಂಬ್ಲ್‌ ಉದ್ದಿಮೆ ಫೆಬ್ರವರಿ 2009ರಲ್ಲಿ ತಿಳಿಸಿತು. ಮಳಿಗೆಯ ಕಾರ್ಯವಿಧಾನ ರೀತಿಗಳನ್ನು ಉತ್ತಮಗೊಳಿಸಲು ವಾಲ್‌-ಮಾರ್ಟ್‌ ಏನನ್ನೂ ಮಾಡಿಲ್ಲ ಎಂಬುದು ಇದರ ಒಳ-ಅರ್ಥವಾಗಿತ್ತು.[೨೬]

ರಕ್ಷಣಾ ಇಲಾಖೆಯ ಕರಾರು[ಬದಲಾಯಿಸಿ]

ಪ್ಯಾಕೇಜ್‌ಗಳ ಮೇಲೆ RFID ಟ್ಯಾಗ್‌ಗಳಿಗಾಗಿ DoD (ರಕ್ಷಣಾ ಇಲಾಖೆ) ಅಗತ್ಯಗಳನ್ನು ಡಿಫೆನ್ಸ್‌ ಫೆಡೆರಲ್‌ ಅಕ್ವಿಸಿಷನ್‌ ರೆಗ್ಯುಲೇಷನ್ಸ್‌ ಸಪ್ಲೆಮೆಂಟ್ಸ್‌ (DFARS) ನಲ್ಲಿ ವಿವರಿಸಲಾಗಿದೆ 252.211-7006. MIL STD 129ನಲ್ಲಿರುವ ನಿಯಮಾವಳಿಗಳಿಗೆ ಹೊಂದಿಕೊಳ್ಳುವಂತೆ RFID ಟ್ಯಾಗ್‌ಗಳ ಲಗತ್ತಿಸಿ; 1 ಮಾರ್ಚ್‌ 2007ರಂತೆ EPC ಗ್ಲೋಬಲ್ ಟ್ಯಾಗ್‌ಗಳು EPCಗ್ಲೋಬಲ್‌ ಕ್ಲಾಸ್‌ 1 ಜನರೇಷನ್‌ 2 ನಿರ್ದಿಷ್ಟ ವಿವರಣೆ Archived 2010-02-27 ವೇಬ್ಯಾಕ್ ಮೆಷಿನ್ ನಲ್ಲಿ. ಗಳೊಂದಿಗೆ ಹೊಂದಿಕೊಳ್ಳಬೇಕು.[೨೭]

ಪ್ರಗತಿಯ ಮೇಲಿನ ನಿಗಾ[ಬದಲಾಯಿಸಿ]

ಚಿಲ್ಲರೆ ವ್ಯಾಪಾರಿಗಳ ಮೂಲಕ ಉತ್ಪನ್ನಗಳನ್ನು ಮಾರುವವರು, ಚಿಲ್ಲರೆ ವ್ಯಾಪಾರಿಗಳಿಗೆ ಸೀಮಿತ ಕಾಲಾವಧಿಗೆ ತಮ್ಮ ಉತ್ಪಾದನೆಗಳ ಮೇಲೆ ರಿಯಾಯತಿ ನೀಡುತ್ತಾರೆ. ಏಕೆಂದರೆ, ಈ ಚಿಲ್ಲರೆ ವ್ಯಾಪಾರಿಗಳು ಇಂತಹ ರಿಯಾಯತಿ ಅನುಕೂಲಗಳನ್ನು ತಮ್ಮ ಗ್ರಾಹಕರಿಗೆ ವರ್ಗಾಯಿಸುವರೆಂದು ನಿರೀಕ್ಷೆಯಿಟ್ಟುಕೊಂಡಿರುತ್ತಾರೆ. ಆದರೂ, ಚಿಲ್ಲರೆ ವ್ಯಾಪಾರಿಗಳು ಈ ದರಗಳ ರಿಯಾಯಿತಿ ಪ್ರೊತ್ಸಾಹದ ಅವಧಿಯಲ್ಲಿ, ಮಾರುವುದಕ್ಕಿಂತಲೂ ಹೆಚ್ಚಾಗಿ ಉತ್ಪನ್ನಗಳನ್ನು ಕೊಂಡುಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ ಮುಂಗಡ ಕೊಳ್ಳುವಿಕೆ ಇತ್ಯಾದಿ. ಇನ್ನು ಕೆಲವು ಚಿಲ್ಲರೆ ವ್ಯಾಪಾರಿಗಳು ಮಧ್ಯವರ್ತಿಗಳಿಗೆ ಇದನ್ನು ವಹಿಸುತ್ತಾರೆ - ರಿಯಾಯತಿಯಲ್ಲಿ ಕೊಂಡ ಸರಕನ್ನು ಇತರೆ ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಾರೆ. ಇದಕ್ಕೆ 'ಬೇರೆಡೆ ವ್ಯಾಪಾರದ ಹರಿವನ್ನು ವರ್ಗಾಯಿಸುವುದು ' ಎಂದರ್ಥ. ಈ ಪದ್ಧತಿಗೆ ಕಡಿವಾಣ ಹಾಕಲು, ತಯಾರಕರು ತಾವು ಉತ್ತೇಜಿಸುವ ಸರಕುಗಳಿಗೆ RFID ಟ್ಯಾಗ್‌ಗಳನ್ನು ಅಳವಡಿಸಿ, ಯಾವ ಉತ್ಪನ್ನವು ಪೂರೈಕೆ ಸರಪಳಿಯ ಮೂಲಕ ಸಂಪೂರ್ಣ ರಿಯಾಯಿತಿ ದರದಲ್ಲಿ ಮಾರಾಟವಾಗಿದೆ ಎಂಬುದರ ಜಾಡು ಹಿಡಿಯಲು ಮುಂದಾಗುತ್ತಾರೆ.[೨೮]

ಗ್ರಂಥಾಲಯಗಳು[ಬದಲಾಯಿಸಿ]

ಗ್ರಂಥಾಲಯಗಳಲ್ಲಿ ಬಳಸಲಾದ RFID ಟ್ಯಾಗ್‌ಗಳು: ಚೌಕಾಕಾರದ ಪುಸ್ತಕದ ಟ್ಯಾಗ್‌, ದುಂಡನೆಯ CD/DVD ಟ್ಯಾಗ್‌ ಹಾಗೂ ಆಯತಾಕಾರದ VHS ಟ್ಯಾಗ್‌.

RFID ತಂತ್ರಜ್ಞಾನದ ಹಲವು ಉಪಯುಕ್ತತೆಗಳ ಪೈಕಿ ಗ್ರಂಥಾಲಯಗಳಲ್ಲಿ ಅವುಗಳ ಅಳವಡಿಕೆ ಸಹ ಸೇರಿದೆ. ಈ ತಂತ್ರಜ್ಞಾನವು ಪುಸ್ತಕಗಳು, CDಗಳು, DVDಗಳು ಮುಂತಾದ ಗ್ರಂಥಾಲಯದ ಸಾಮಗ್ರಿಗಳ ಮೇಲಿರುವ ಸಾಂಪ್ರದಾಯಿಕ ಬಾರ್ಕೋಡ್‌ಗಳ ಸ್ಥಾನವನ್ನು RFID ಹಂತ-ಹಂತವಾಗಿ ತುಂಬುತ್ತಿದೆ. ಪ್ರತ್ಯೇಕ ದತ್ತಾಂಶ ಸಂಗ್ರಹ ಅದನ್ನು ತೋರಿಸುವ ಬದಲಿಗೆ, ಗ್ರಂಥದ ಶಿರೋನಾಮೆ ಅಥವಾ ವಸ್ತುವಿನ ವಿಧ ಗುರುತಿಸುವ ಮಾಹಿತಿ RFID ಟ್ಯಾಗ್‌ಗಳು ಹೊಂದಬಹುದು (ಆದರೆ, ಉತ್ತರ ಅಮೆರಿಕಾದಲ್ಲಿ ಇಂತಹದ್ದು ಅಪರೂಪ). RFID ಓದುವ ಸಾಧನ ಬಳಸಿ ಮಾಹಿತಿ ಗ್ರಹಿಸಹುದಾಗಿದೆ. ಗ್ರಂಥಾಲಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಬಾರ್ಕೋಡ್‌ ಓದುವ ಸಾಧನದ ಬದಲಾಗಿ RFID ಹೊಂದಿರುವ ಸಲಕರಣೆ ಬಳಸಬಹುದಾಗಿದೆ. ಗ್ರಂಥಾಲಯಗಳ ಉಪಯೋಗದಲ್ಲಿರುವ RFID ಟ್ಯಾಗ್‌ ಉತ್ತರ ಅಮೆರಿಕಾದಲ್ಲಿ 50 ಎಂಎಂ X 50 ಎಂಎಂ ಹಾಗೂ ಯುರೋಪ್‌ನಲ್ಲಿ 50 ಎಂಎಂ X 75 ಎಂಎಂ ಅಳತೆಯದ್ದಾಗಿರುತ್ತವೆ. ಇದನ್ನು ಬಾರ್ಕೋಡ್‌ನ ಬದಲಿಗೆ ಬಳಸಬಹುದು ಅಥವಾ ಬಾರ್ಕೋಡ್‌ಗೆ ಸೇರಿಸಬಹುದು ಸಹ. ಇದರಿಂದಾಗಿ ಸಿಬ್ಬಂದಿಯಿಂದ ತಪಸೀಲು(ಸ್ಟಾಕ್ ) ನಿರ್ವಹಣೆಯ ವಿಭಿನ್ನ ರೀತಿ ಹಾಗೂ ಎರವಲು ಪಡೆಯುವವರಿಂದ ಅವರಿಗಾಗಿ ಸ್ವಸಹಾಯ ಪದ್ಧತಿಯನ್ನು ಪರಿಚಯಿಸುತ್ತದೆ. ಇದನ್ನು ಭದ್ರತಾ ಸಾಧನದ ರೂಪದಲ್ಲಿಯೂ ಸಹ ಬಳಸಬಹುದು. ಇದನ್ನು ವಿದ್ಯುತ್ಕಾಂತೀಯ ಭದ್ರತಾ ಪಟ್ಟಿಯಲ್ಲಿಯೂ [೨೯] ಉಪಯೋಗಿಸಬಹುದಾಗಿದೆ. ಕೇವಲ ಪುಸ್ತಕಗಳು ಮಾತ್ರವಲ್ಲ, ಸದಸ್ಯತ್ವದ ಕಾರ್ಡ್‌ಗಳಿಗೂ ಸಹ RFID ಟ್ಯಾಗ್‌ ಅಳವಡಿಸಬಹುದು. ಗ್ರಂಥಾಲಯಗಳಲ್ಲಿ RFID ಬಳಕೆಯು ಎಂದು ಆರಂಭವಾಯಿತು ಎಂಬುದರ ಬಗ್ಗೆ ಚರ್ಚೆಗಳಿದ್ದರೂ, 1990ರ ದಶಕದ ಉತ್ತರಾರ್ಧದಲ್ಲಿ ಇದನ್ನು ಗ್ರಂಥಾಲಯಗಳಲ್ಲಿ ಕಾರ್ಯಚಟುವಟಿಕೆಗಳ ಸುಗಮಕೆ ಸಾಧನವೆಂದು ಪ್ರಸ್ತುತಪಡಿಸಲಾಯಿತು. ಗ್ರಂಥಾಲಯಗಳಲ್ಲಿ RFID ಬಳಸಿದ ಮೊದಲ ಪ್ರಮಖ ದೇಶಗಳಲ್ಲಿ ಸಿಂಗಪುರ ಸಹ ಒಂದು. ನ್ಯೂಯಾರ್ಕ್‌ರಾಕ್ಫೆಲರ್‌ ವಿಶ್ವವಿದ್ಯಾಲಯವು RFID ತಂತ್ರಜ್ಞಾನ ಬಳಸಿದ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲೇ ಮೊದಲ ಶೈಕ್ಷಣಿಕ ಗ್ರಂಥಾಲಯವಾಗಿತ್ತು. ಮಿಷಿಗನ್‌ಫಾರ್ಮಿಂಗ್ಟನ್‌ ಸಮುದಾಯ ಗ್ರಂಥಾಲಯ RFID ಬಳಸುವ ಮೊದಲ ಸಾರ್ವಜನಿಕ ಗ್ರಂಥಾಲಯವಾಯಿತು. ಇವೆರಡೂ 1999ರಲ್ಲಿ RFID ತಂತ್ರಜ್ಞಾನ ಅಳವಡಿಸಿದವು.

ನೆದರ್ಲೆಂಡ್ಸ್‌ಹುಗೆಜಂಡ್‌-ಸ್ಯಾಪೆಮೀರ್‌ನಲ್ಲಿರುವ ಸಾರ್ವಜನಿಕ ಗ್ರಂಥಾಲಯವು 2001ರಲ್ಲಿ RFID ಸೇವೆ ಅಳವಡಿಸಿ, ಯುರೋಪ್‌ನಲ್ಲೇ ಮೊದಲ ಸಾರ್ವಜನಿಕ ಗ್ರಂಥಾಲಯವಾಯಿತು. ಇದರಲ್ಲಿ ಎರವಲುದಾರರಿಗೆ ಆಯ್ಕೆ ಪ್ರಸ್ತುತಪಡಿಸಲಾಯಿತು. ವಯೋವೃದ್ಧರೂ ಸೇರಿದಂತೆ, 70%ರಷ್ಟು ಎರವಲುದಾರರು RFIDಗೆ ಸಮ್ಮತಿ ಸೂಚಿಸಿದ್ದು

ಗ್ರಂಥಾಲಯದ ಅಧಿಕಾರಿಗಳನ್ನು ಬೆರಗುಗೊಳಿಸಿತು. ವಿಶ್ವಾದ್ಯಂತ, ಸಂಪೂರ್ಣವಾಗಿ ಅಳವಡಿಸಿದ್ದೆಂದರೆ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ RFIDಯ ಅತಿಹೆಚ್ಚು ಬಳಕೆಯಾಗಿದೆ. (300 ದಶಲಕ್ಷ ನಿವಾಸಿಗರು). ನಂತರ ಯುನೈಟೆಡ್‌ ಕಿಂಗ್ಡಮ್‌ ಮತ್ತು ಜಪಾನ್‌ ದೇಶಗಳಲ್ಲಿ RFID ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗಿದೆ. ವಿಶ್ವಾದ್ಯಂತ, 30 ದಶಲಕ್ಷಕ್ಕಿಂತಲೂ ಹೆಚ್ಚು ಗ್ರಂಥಾಲಯ ಸಾಮಗ್ರಿಗಳು ಇಂದು RFID ಟ್ಯಾಗ್‌ಗಳನ್ನು ಹೊಂದಿವೆ. ಇವುಗಳಲ್ಲಿ ರೋಮ್‌ ನಗರದ ವ್ಯಾಟಿಕನ್‌ ಗ್ರಂಥಾಲಯದಲ್ಲಿನ ಕೆಲವು ಸಹ ಸೇರಿವೆ.[೩೦] RFID ತಂತ್ರಜ್ಞಾನ ಹಲವು ಗ್ರಂಥಾಲಯಗಳಲ್ಲಿದ್ದು,ವಿಶಿಷ್ಟವಾಗಿ ಗ್ರಂಥಾಲಯದ ಪ್ರಸರಣದ ವಿಭಾಗದ ಸಿಬ್ಬಂದಿಗೆ ಅತ್ಯುಪಯುಕ್ತವಾಗಬಲ್ಲದು. RFID ಟ್ಯಾಗ್‌ ಹೊಂದಿದ ವಸ್ತುಗಳ ಬಗೆಗೆ ಓದಬಹುದಾಗಿದ್ದರಿಂದ, ವಸ್ತುವನ್ನು ಸ್ಕ್ಯಾನ್‌ ಮಾಡಲು ಪುಸ್ತಕದ ರಕ್ಷಾಪುಟ ಅಥವಾ DVDಯ ಕವಚ ತೆರೆಯುವ ಅಗತ್ಯವಿರುವುದಿಲ್ಲ. ಇದರಿಂದ ಸಂಭವಿಸುವ ಪುನರಾವರ್ತಿತ ಧಕ್ಕೆ ಅಥವಾ ಹಾನಿಯನ್ನು ಕನಿಷ್ಠಗೊಳಿಸಬಹುದು. ಪುಸ್ತಕಗಳ ಹೊರಬದಿಯಲ್ಲಿ ಬಾರ್ಕೋಡ್‌ ಇದ್ದಲ್ಲಿ ಇನ್ನಷ್ಟು ಅನುಕೂಲಗಳುಂಟು. ಎರವಲುದಾರರು ಒಂದೇ ಹೊತ್ತಿಗೆ ಒಂದು ಪುಸ್ತಕದ ಬದಲಿಗೆ, ಪುಸ್ತಕಗಳ ಇಡೀ ಸಮೂಹವನ್ನೇ ಸ್ಕ್ಯಾನ್‌ ಮಾಡಬಹುದು. ವಸ್ತುವೊಂದು ಚಾಲನೆಯಲ್ಲಿರುವಾಗಲೂ RFID ಟ್ಯಾಗ್‌ಗಳನ್ನು ಓದಬಹುದಾದ್ದರಿಂದ, ಕನ್ವೇಯರ್‌ ಬೆಲ್ಟ್‌ ಮೇಲೆ ಒಳಬರುವ ವಸ್ತುಗಳನ್ನು RFID ಸ್ಕ್ಯಾನರ್‌ ಬಳಸುವುದರ ಮೂಲಕ ಸಿಬ್ಬಂದಿಯ ಸಮಯ ಉಳಿತಾಯ ಮಾಡಬಹುದು. ಆದರೆ, ಬಾರ್ಕೋಡ್‌ ತರಹವೇ, ಇದನ್ನೂ ಸಹ ಎರವಲುದಾರರೇ ಮಾಡಬಹುದು. ಅರ್ಥಾತ್‌, ಅವರಿಗೆ ಸಿಬ್ಬಂದಿ ನೆರವಿನ ಅಗತ್ಯವಿರುವುದಿಲ್ಲ. ನಿಶ್ಚಿತ ಸ್ಥಳದಲ್ಲಿರುವ ಸ್ಕ್ಯಾನರ್‌ ಸಾಧನಗಳೊಂದಿಗೆ ಒಯ್ಯಬಹುದಾದ ಉಪಕರಣಗಳೂ ಉಂಟು (ಸದ್ಯಕ್ಕೆ ಗ್ರಂಥಾಲಯ ಅಧಿಕಾರಿಗಳೊಂದಿಗೆ ಮಾತ್ರ ಇದು ಲಭ್ಯ, ಭವಿಷ್ಯದಲ್ಲಿ ಸಾಮಾನ್ಯ ಓದುಗರಿಗೆ ಹಾಗೂ ಎರವಲುದಾರರಿಗೂ ಸೌಲಭ್ಯ ವಿಸ್ತರಿಸಬಹುದಾಗಿದೆ). ಇವುಗಳೊಂದಿಗೆ, ಕೇವಲ ಕೆಲವೇ ಸೆಕೆಂಡುಗಳಲ್ಲಿಯೇ ವಸ್ತುಗಳ ಇಡೀ ದಾಸ್ತಾನಿನ ತಪಸೀಲು(ಸ್ಟಾಕ್ ವೇರಿಫಿಕೇಶನ್ ) ನಡೆಸಬಹುದು (ಒಂದೇ ಒಂದು ಪುಸ್ತಕವನ್ನೂ ಸಹ ಗೂಡಿನಿಂದ ಎತ್ತುವ ಅಗತ್ಯವಿರುವುದಿಲ್ಲ).[೩೧] ಸ್ವೀಡೆನ್‌ಉಮಿಯಾದಲ್ಲಿ ದೃಷ್ಟಿ ದೋಷದವರು ಆಡಿಯೊ ಪುಸ್ತಕ ಎರವಲು ಪಡೆಯುವುದರಲ್ಲಿ RFID ಬಳಸಲಾಗುತ್ತಿದೆ.[೩೨] ಮಲೇಷ್ಯಾದ ಸೈಬರ್‌ಜಯಾದಲ್ಲಿರುವ ಮಲ್ಟಿಮೀಡಿಯಾ ಯುನಿವರ್ಸಿಟಿ ಗ್ರಂಥಾಲಯದಲ್ಲಿ ಪುಸ್ತಕಗಳಿರುವ ಸ್ಥಳವನ್ನು ನಿಖರವಾಗಿ ಗುರುತಿಸಲು(ಕಪಾಟು ಖಾನೆ) ಸ್ಮಾರ್ಟ್‌ಷೆಲ್ವ್ಸ್‌ಗಳ ಬಳಕೆಯಾಗುತ್ತಿವೆ.[೩೩] ನೆದರ್ಲೆಂಡ್ಸ್‌ನಲ್ಲಿ, ಈ ಉದ್ದೇಶಕ್ಕೆ ಕೈಯಲ್ಲಿ ಹಿಡಿಯಬಹುದಾದ ಸ್ಕ್ಯಾನರ್‌ಗಳನ್ನು ಪರಿಚಯಿಸಲಾಗುತ್ತಿವೆ. ಡಚ್‌ ಸಾರ್ವಜನಿಕ ಗ್ರಂಥಾಲಯಗಳ ಒಕ್ಕೂಟವು ('Vereniging van Openbare Bibliotheken') ‘ಪರಸ್ಪರ ಸ್ಪಂದಿಸುವ ಗ್ರಂಥಾಲಯ’ದ ಪರಿಕಲ್ಪನೆಯ ಕುರಿತ ಅಧ್ಯಯನ ನಡೆಸುತ್ತಿದೆ. ಇದರಂತೆ, ಎರವಲುದಾರರು ಒಂದು ಸ್ಕ್ಯಾನರ್‌/ಹೆಡ್‌ಫೋನ್‌ ಸಾಧನದ ಮೂಲಕ ತಮಗೆ ಬೇಕಾಧ ಗ್ರಂಥಾಲಯ ವಿಭಾಗದ ಗೂಡುಗಳಲ್ಲಿರುವ ಪುಸ್ತಕಗಳಲ್ಲಿರುವ ಮಾಹಿತಿಯ ಮುನ್ನೋಟವನ್ನು GPS ಮೂಲಕ ತಿಳಿದುಕೊಳ್ಳಬಹುದು. ಇನ್ನಷ್ಟು ವಿವರಣೆಗಳು ಬೇಕಾಗಿದ್ದಲ್ಲಿ, ಅದರ ಪಂಕ್ತಿಯನ್ನು ಆ ಪುಸ್ತಕದ ಟ್ಯಾಗ್‌ನಿಂದಲೋ ಅಥವಾ ಅದಕ್ಕೆ ಸಂಬಂಧಿತ ದತ್ತಾಂಶ ಸಂಗ್ರಹದಿಂದಲೋ, ಶ್ರಾವ್ಯಮೂಲಕ ಕೇಳಬಹುದು (ರೀಡ್‌-ಔಟ್‌). ಇವಿಷ್ಟೇ ಅಲ್ಲದೆ, ಎರವಲುದಾರರ ಇಚ್ಚೆಯ ಮೇರೆಗೆ ಪರ್ಯಾಯಗಳ ಬಗ್ಗೆ ಸಹಾಯ-ಸೂಚಿಗಳನ್ನು ಪಡೆಯಬಹುದು. ಇದರಿಂದಾಗಿ ಗ್ರಂಥಾಲಯದ ವೈಯಕ್ತಿಕ ಆವೃತ್ತಿ ಪಡೆಯಬಹುದು. ಇದರಿಂದಾಗಿ, ಎರವಲುದಾರರು ಬಹುಶಃ ಸಂದರ್ಶಿಸಲಾಗದ ವಿಭಾಗಗಳಿಗೆ ಭೇಟಿ ನೀಡಲು ಪ್ರೇರೇಪಿಸಬಹುದು. ಪುಸ್ತಕಗಳಲ್ಲಿನ ವಿಷಯದ ಬಗೆಗಿನ ಅನುಭವಗಳನ್ನು ಹಂಚಿಕೊಂಡು, ಅದರ ಪರಾಮರ್ಶೆ ಮಾಡಲು ಎರವಲುದಾರರು ಈ ವ್ಯವಸ್ಥೆ ಬಳಸಿಕೊಳ್ಳಬಹುದು. mijnstempel.nl Archived 2007-06-23 ವೇಬ್ಯಾಕ್ ಮೆಷಿನ್ ನಲ್ಲಿ. ವಸ್ತುತಃ ಸದ್ಯ ಮಕ್ಕಳು ಇದನ್ನು ಆಗಲೇ ಮಾಡಿದ್ದರೂ, ಭೌತಿಕವಾಗಿ ಇನ್ನೂ ಅನ್ವಯಿಕೆ ಮಾಡಲಾಗಿಲ್ಲ. ವಾಪಸಾತಿಯ ವೇಳೆಯಲ್ಲಿ ಎರವಲುದಾರರು ಪುಸ್ತಕಗಳ ಬಗ್ಗೆ ಮಾಹಿತಿ ನೀಡಬಹುದು. ಆದರೂ, 2008ರಲ್ಲಿ ಈ ತಂತ್ರಜ್ಞಾನವು ಹಲವು ಸಣ್ಣ ಗಾತ್ರದ ಗ್ರಂಥಾಲಯಗಳಿಗೆ ನಿಲುಕದಷ್ಟು ದುಬಾರಿಯಾಗಿದೆ. ಸರಾಸರಿ ಗಾತ್ರದ ಗ್ರಂಥಾಲಯಕ್ಕೆ ಇದರ ಅಳವಡಿಕೆ-ಪರಿವರ್ತನಾ ಕಾಲವು 11 ತಿಂಗಳು ಎಂದು ಅಂದಾಜು ಮಾಡಲಾಗಿದೆ. 2004ರಲ್ಲಿ ನಡೆಸಿದ ಡಚ್‌ ದೇಶದ ಅಂದಾಜಿನ ಪ್ರಕಾರ, ವಾರ್ಷಿಕ 100,000 ಪುಸ್ತಕಗಳನ್ನು ಎರವಲು ನೀಡುವ ಗ್ರಂಥಾಲಯವು €50,000 ಮೊತ್ತದ ಯೋಜನೆ ರೂಪಿಸಿಕೊಳ್ಳಬೇಕಾಗಿದೆ (ಎರವಲು ಮತ್ತು ವಾಪಸಾತಿ ಕೌಂಟರ್‌ಗಳು: ತಲಾ 12,500, ತಪಾಸಣೆಯ ಪ್ರವೇಶ ಜಾಗೆಗಳು ತಲಾ 10,000; ಟ್ಯಾಗ್‌ಗಳು ತಲಾ 0.36) ತಂತ್ರಜ್ಞಾನ RFID ಬಳಕೆಯಿಂದ ಹೊರೆ ಕಡಿಮೆ ಮಾಡುವುದರ ಅರ್ಥ ಕಡಿಮೆ ಸಿಬ್ಬಂದಿಯ ಅಗತ್ಯವಿರುವುದು; ಇದರಿಂದಾಗಿ ಕೆಲವರನ್ನು ಕೆಲಸದಿಂದ ತೆಗೆಯಬೇಕಾದ ಸಂದರ್ಭ ಬರುತ್ತದೆ. ಆದರೆ ಉತ್ತರ ಅಮೆರಿಕಾದಲ್ಲಿ ಇದು ನಡೆದಿಲ್ಲ. ಏಕೆಂದರೆ ಇತ್ತೀಚಿಗಿನ ಸಮೀಕ್ಷೆಗಳ ಪ್ರಕಾರ, RFID ಅಳವಡಿಸಿದ ಕಾರಣವೊಡ್ಡಿ ಸಿಬ್ಬಂದಿ ವಜಾಗೊಳಿಸಿದ ಯಾವುದೇ ನಿದರ್ಶನವಿಲ್ಲ. ಇದರ ಬದಲಿಗೆ, ಗ್ರಂಥಾಲಯ ಬಜೆಟ್‌ಗಳನ್ನು ಸಿಬ್ಬಂದಿಗಾಗಿ ಕಡಿಮೆಗೊಳಿಸಿ, ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಇದರಿಂದಾಗಿ ಹೊಸ ಗ್ರಂಥಾಲಯಗಳು ಕಡಿಮೆ ಸಿಬ್ಬಂದಿಯ ಬದಲಿಗೆ ಸ್ವಯಂಚಾಲಿತ ತಂತ್ರ ಅಳವಡಿಸಿಕೊಳ್ಳುವ ಅಗತ್ಯವೆನಿಸಿತು. ಇದಲ್ಲದೆ, RFID ಮಾಡುವ ಕಾರ್ಯಚಟುವಟಿಗಳೆಲ್ಲವೂ ಹೆಚ್ಚಾಗಿ ಗ್ರಂಥಾಲಯ ಅಧಿಕಾರಿಗಳ ಪ್ರಾಥಮಿಕ ಕಾರ್ಯಗಳಾಗಿರುವದಿಲ್ಲ. ನೆದರ್ಲೆಂಡ್ಸ್‌ನಲ್ಲಿ ದೊರೆತ ಮಾಹಿತಿ ಪ್ರಕಾರ, ತಮ್ಮ ಯಾವುದೇ ಪ್ರಶ್ನೆಗಳನ್ನು ಉತ್ತರಿಸಬಲ್ಲರೆಂದು ಪುಸ್ತಕ ಎರವಲುದಾರರು ಸಂತುಷ್ಟರಾಗಿದ್ದಾರೆ. ಗ್ರಂಥಾಲಯಗಳಲ್ಲಿ RFID ಕುರಿತು ಗಮನಾರ್ಹ ಪ್ರಚಾರ ಗಿಟ್ಟಿಸಿಕೊಂಡ ವಿಚಾರವೇನೆಂದರೆ ಗೌಪ್ಯತೆ. RFID ಪ್ರೇಷಕ ಮತ್ತು ಸ್ಕ್ಯಾನರ್‌ ಸಾಮರ್ಥ್ಯ ಅವಲಂಬಿಸಿ, RFID ಟ್ಯಾಗ್‌ಗಳನ್ನು ಸುಮಾರು 350 ಅಡಿ ಅಥವಾ 100 ಮೀಟರುಗಳ ತನಕ ಸ್ಕ್ಯಾನ್ ಮಾಡಬಹುದಾಗಿದೆ (ಉದಾಹರಣೆಗೆ ಸ್ಮಾರ್ಟ್‌ ಲೇಬೆಲ್‌ RFIDಗಳು). ಟ್ಯಾಗ್‌ನ ಮಾದರಿ ಆಧರಿಸಿ RFID ವಿವಿಧ ತರಂಗಾಂತರಗಳನ್ನು ಬಳಸುವ ಕಾರಣ, ಸೂಕ್ಷ್ಮ ಮಾಹಿತಿಯನ್ನು ಬೇಡದ ಮೂಲಗಳಿಂದ ಸಂಗ್ರಹಿಸುವ ಕುರಿತು ತಳಮಳ ವ್ಯಕ್ತವಾಗಿದೆ. ಆದರೂ, ಗ್ರಂಥಾಲಯದ RFID ಟ್ಯಾಗ್‌ಗಳು ಯಾವುದೇ ಎರವಲುದಾರರ ಮಾಹಿತಿ-ವಿವರ ಹೊಂದಿರುವುದಿಲ್ಲ,[೩೪] ಇದಲ್ಲದೇ, ಗ್ರಂಥಾಲಯಗಳಲ್ಲಿ ಹೆಚ್ಚಿನವು ಕೇವಲ 10 ಅಡಿಗಳ ದೂರದಿಂದಷ್ಟೇ ಗುರುತಿಸಬಲ್ಲವು.[೨೯] ಜೊತೆಗೆ, ಗ್ರಂಥಾಲಯಗಳು ಯಾರು ಏನನ್ನು ಎರವಲು ಪಡೆದಿದ್ದಾರೆ ಎಂಬುದರ ಬಗ್ಗೆ ಯಾವಾಗಲೂ ದಾಖಲೆಗಳನ್ನು ಇಟ್ಟುಕೊಳ್ಳಬೇಕಿತ್ತು, ಹಾಗಾಗಿ ಇದರಲ್ಲಿ ಹೊಸತೇನಿಲ್ಲ. ಆದರೂ, ಎರವಲು ಸಾಮಾನು ವಾಪಸಾದ ಕೂಡಲೇ ಹಲವು ಗ್ರಂಥಾಲಯಗಳು ಈ ಮಾಹಿತಿಗಳನ್ನು ನಾಶಗೊಳಿಸುತ್ತವೆ. ಓದುಗರ ಗೌಪ್ಯತೆಯ ಈ ವಿಚಾರವನ್ನು RFID ಸಂಕೀರ್ಣ ಅಥವಾ ಶೂನ್ಯಗೊಳಿಸಬಹುದು. ಇನ್ನೂ ಹೆಚ್ಚಿಗೆ, ಗ್ರಂಥಾಲಯ ಅಧಿಕಾರಿಗಳ ಅರಿವಿಲ್ಲದೆ ಅಥವಾ ಸಮ್ಮತಿಯಿಲ್ಲದೆ ಹೊರಹೋಗುವ ಪ್ರತಿಯೊಬ್ಬ ವ್ಯಕ್ತಿಯ RFID ಟ್ಯಾಗ್‌ಗಳನ್ನು ಇನ್ನೊಂದು ಗ್ರಂಥಾಲಯೇತರ ನಿಯೋಗವು ಸಂಭಾವ್ಯವಾಗಿ ದಾಖಲಿಸಬಲ್ಲದು. ಗ್ರಂಥಾಲಯದ ದತ್ತಾಂಶ ಸಂಗ್ರಹಕ್ಕೆ ಸಂಬಂಧಿಸಿದ ಸಂಕೇತವೊಂದನ್ನು ರವಾನಿಸಲು ಪುಸ್ತಕ ಅವಕಾಶ ನೀಡುವುದು ಒಂದು ಸರಳ ಆಯ್ಕೆಯಾಗಿದೆ. ಮುಂದೆ ಇನ್ನೊಂದು ಹೆಜ್ಜೆಯೇನೆಂದರೆ, ಪ್ರತಿ ಬಾರಿ ವಾಪಸ್‌ ಮಾಡಿದ ಪುಸ್ತಕಕ್ಕೆ ಒಂದು ಹೊಸ ಸಂಕೇತ ನೀಡುವುದು. ಭವಿಷ್ಯದಲ್ಲಿ ಓದುಗರು ಜಾಲದಲ್ಲಿದ್ದಲ್ಲಿ ಅಥವಾ ಸರ್ವತ್ರವಾಗಿದ್ದಲ್ಲಿ, ಕಳವಾದ ಪುಸ್ತಕಗಳನ್ನು ಗ್ರಂಥಾಲಯದ ಹೊರಗೂ ಸಹ ಪತ್ತೆ ಮಾಡಬಹುದಾಗಿದೆ. ಟ್ಯಾಗ್‌ಗಳು ಅತೀ ಕಿರಿದಾಗಿದ್ದು, ಅದನ್ನು ಪ್ರಕಾಶಕರು ಯಾವುದೋ ಒಂದು ಪುಟದೊಳಗೆ ಅಳವಡಿಸಿದ್ದಲ್ಲಿ, ಟ್ಯಾಗ್‌ ಹೊರ ತೆಗೆಯುವುದು ಬಹಳ ಕಷ್ಟಕರ. RFID ತಂತ್ರಜ್ಞಾನದ ಪ್ರಯೋಜನಗಳು:

 1. ತ್ವರಿತ ಸರ್ಕ್ಯುಲೇಶನ್
 2. ಸಮರ್ಥ ಟ್ರಾಕಿಂಗ್
 3. ಸರಳ ಸ್ವ-ಚೆಕ್ಕಿಂಗ್ಸ್
 4. ತ್ವರಿತ ಸರಂಜಾಮು ನಿರ್ವಹಣೆ ಇತ್ಯಾದಿ.[೩೫]

ಮನುಷ್ಯರನ್ನು ಗುರುತಿಸುವುದು[ಬದಲಾಯಿಸಿ]

1990ರ ದಶಕದಿಂದಲೂ, ಪಶುಪ್ರಾಣಿಗಳನ್ನು ಗುರುತಿಸುವುದರಲ್ಲಿ RFID ಟ್ಯಾಗ್‌ಗಳು ಕಂಡ ಯಶಸ್ಸು, ಮನುಷ್ಯರ ಮೇಲೆ ವಿವಿಧ ರೀತಿಗಳಲ್ಲಿ ನಿಗಾ ವಹಿಸುವ ಕುರಿತು RFID ಸಂಶೋಧನೆಗೆ ಮುಂದಾಗಿದೆ.

ಪಾಸ್‌ಪೋರ್ಟ್‌ಗಳು (ವಿದೇಶ ಪ್ರವಾಸಾಧಿಕಾರ ಪತ್ರಗಳು)[ಬದಲಾಯಿಸಿ]

"E-ಪಾಸ್ಪೋರ್ಟ್‌" ಎಂಬ ಮೊದಲ RFID ಪಾಸ್ಪೋರ್ಟ್‌ಗಳನ್ನು 1998ರಲ್ಲಿ ಮಲೇಷ್ಯಾದಲ್ಲಿ ನೀಡಲಾಯಿತು. ಪಾಸ್ಪೋರ್ಟ್‌ನ ದೃಶ್ಯ ಮಾಹಿತಿ ಪುಟದಲ್ಲಿರುವ ಮಾಹಿತಿಯ ಜೊತೆಗೆ, ಮಲೇಷ್ಯಾದ ಇ-ಪಾಸ್ಪೋರ್ಟ್‌ಗಳು ಪ್ರವಾಸದ ವಿವರ (ಸಮಯ, ದಿನಾಂಕ ಮತ್ತು ಸ್ಥಳ) ದೇಶದೊಳಗೆ ಪ್ರವೇಶ ಮತ್ತು ನಿರ್ಗಮನಗಳ ಮಾಹಿತಿಗಳನ್ನು ದಾಖಲಿಸುತ್ತವೆ. ಪಾಸ್ಪೋರ್ಟ್‌ಗಳಲ್ಲಿ RFID ಅಳವಡಿಸಿರುವ ಇತರೆ ದೇಶಗಳಲ್ಲಿ ನಾರ್ವೇ (2005),[೩೬] ಜಪಾನ್‌ (1 ಮಾರ್ಚ್‌ 2006), ಬಹುಪಾಲು EU ದೇಶಗಳು (2006 ಇಸವಿಯಲ್ಲಿ) ಸ್ಪೇನ್‌, ಐರ್ಲೆಂಡ್‌ ಮತ್ತು UK ಸೇರಿದಂತೆ, ಆಸ್ಟ್ರೇಲಿಯಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ (2007), ಸರ್ಬಿಯಾ (ಜುಲೈ 2008), ಕೊರಿಯಾ ಗಣರಾಜ್ಯ (ಆಗಸ್ಟ್‌ 2008), ಟೈವಾನ್‌ (ಡಿಸೆಂಬರ್‌ 2008), ಅಲ್ಬಾನಿಯಾ (ಜನವರಿ 2009), ಫಿಲಿಪೀನ್ಸ್‌ (ಆಗಸ್ಟ್‌ 2009) ಸೇರಿವೆ. RFID ಪಾಸ್ಪೋರ್ಟ್‌ಗಳಿಗಾಗಿ ಮಾನದಂಡಗಳನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯು (ICAO) ನಿರ್ಣಯಿಸುತ್ತದೆ. ಇವು ಈ ದಾಖಲೆಯಲ್ಲಿವೆ: ICAO ದಾಖಲೆ 9303, ಭಾಗ 1, ಸಂಪುಟಗಳು 1 ಮತ್ತು 2 (6ನೆಯ ಆವೃತ್ತಿ, 2006). ಇ-ಪಾಸ್ಪೋರ್ಟ್‌ಗಳಲ್ಲಿರುವ ISO/IEC 14443 RFID ಚಿಪ್‌ಗಳ 'ಸಂಪರ್ಕವಿಲ್ಲದ ಇಂಟೆಗ್ರೇಟೆಡ್‌ ಸರ್ಕ್ಯೂಟ್‌ಗಳು' ಎಂದು ICAO ಉಲ್ಲೇಖಿಸುತ್ತದೆ. ಮೊದಲ ರಕ್ಷಾಪುಟದ ಮೇಲೆ ಪ್ರಮಾಣಿತ ಇ-ಪಾಸ್ಪೋರ್ಟ್‌ ಲಾಂಛನದ ಮೂಲಕ ಇ-ಪಾಸ್ಪೋರ್ಟ್‌ಗಳನ್ನು ಗುರುತಿಸಬಹುದೆಂದು ICAO ಮಾನದಂಡಗಳು ಸೂಚಿಸುತ್ತವೆ. 2006ರಲ್ಲಿ, ಹೊಸ US ಪಾಸ್ಪೋರ್ಟ್‌ಗಳಲ್ಲಿ RFID ಟ್ಯಾಗ್‌ಗಳನ್ನು ಅಳವಡಿಸಲಾಯಿತು. 2005ರಲ್ಲಿ US 10 ದಶಲಕ್ಷ ಪಾಸ್ಪೋರ್ಟ್‌ಗಳನ್ನು ತಯಾರಿಸಿತು. 2006ರಲ್ಲಿ 13 ದಶಲಕ್ಷದಷ್ಟು ಪಾಸ್ಪೋರ್ಟ್‌ಗಳ ಬಿಡುಗಡೆಯ ಅಂದಾಜಿದೆ. ಸ್ಮಾರ್ಟ್‌ರಾಕ್ ನಿರ್ಮಿಸಿದ ಚಿಪ್ಸ್‌ ಇನ್ಲೇಸ್‌ ಪಾಸ್ಪೋರ್ಟ್‌ನಲ್ಲಿ ಅಚ್ಚಾಗಿರುವ ಮಾಹಿತಿಯನ್ನೇ ಹೊಂದಿರುತ್ತದೆ, ಜೊತೆಗೆ ಪಾಸ್ಪೋರ್ಟ್‌ದಾರರ ಭಾವಚಿತ್ರವನ್ನೂ ಹೊಂದಿರುತ್ತದೆ.[೩೭] ಇಲ್ಲಿ ಅಳವಡಿಸಿದ ಚಿಪ್‌ಗಳನ್ನು ಕೇವಲ 10 ಸೆಮೀ (4 ಅಂಗುಲ) ದೂರದಿಂದ ಮಾತ್ರ ಓದಬಹುದಾಗಿದೆ ಎಂದು US ಸ್ಟೇಟ್ ಡಿಪಾರ್ಟ್ಮೆಂಟ್‌ ಆರಂಭದಲ್ಲಿ ತಿಳಿಸಿತ್ತು. ಆದರೆ ವಿಶೇಷ ಉಪಕರಣಗಳ ಬಳಸಿ 10 ಮೀಟರ್‌ಗಳಷ್ಟು (33 ಅಡಿ) ದೂರದಿಂದಲೂ ಸಹ ಚಿಪ್‌ನ್ನು ಓದಬಹುದು, ವ್ಯಾಪಕ ಟೀಕೆಗಳು ಬಂದ ನಂತರ, ಪಾಸ್ಪೋರ್ಟ್‌ಗಳಿಗೆ ಲೋಹದ ತೆಳು ಪದರ ಲೇಪಿಸಲಾಯಿತು. ಇದರಿಂದಾಗಿ, ಪಾಸ್ಪೋರ್ಟ್‌ನ್ನು ಮುಚ್ಚಿದಾಗ ಅನಧಿಕೃತ ಸ್ಕ್ಯಾನರ್‌ಗಳು ಮಾಹಿತಿ ಸಂಗ್ರಹಿಸುವ ಸಂಭವವನ್ನು ಕನಿಷ್ಠಗೊಳಿಸಬಹುದಾಗಿದೆ. ಇಲಾಖೆಯು ಮೂಲಭೂತ ಪ್ರವೇಶಾನುಮತಿ ನಿಯಂತ್ರಣ (ಬೇಸಿಕ್‌ ಆಕ್ಸೆಸ್‌ ಕಂಟ್ರೊಲ್‌) (BAC)ಯನ್ನೂ ಸ್ಥಾಪಿಸುತ್ತದೆ. ಇದು ಪಾಸ್ಪೋರ್ಟ್‌ ಮಾಹಿತಿ ಪುಟದಲ್ಲಿ ಅಕ್ಷರ ರೂಪಗಳಲ್ಲಿ ಅಚ್ಚಾಗಿರುವ ವೈಯಕ್ತಿಕ ಗುರುತಿನ ಸಂಖ್ಯೆ (PIN)ಯಂತೆ ವರ್ತಿಸುತ್ತದೆ. ಪಾಸ್ಪೋರ್ಟ್‌ನ ಟ್ಯಾಗ್‌ನ್ನು ಓದುವ ಮುನ್ನ ಈ PINನ್ನು RFID ಸ್ಕ್ಯಾನರ್‌ನೊಳಗೆ ನಮೂದಿಸಬೇಕು. ಚಿಪ್‌ ಮತ್ತು ಇಂಟರೊಗೆಟರ್‌ ನಡುವಿನ ಸಂವಹನವನ್ನು ಗುಪ್ತ ಭಾಷೆಯಾಗಿ ಪರಿವರ್ತಿಸಲು BAC ನೆರವಾಗುತ್ತದೆ.[೩೮] ಭದ್ರತಾ ತಜ್ಞ ಬ್ರೂಸ್‌ ಷ್ನೀಯರ್‌ ಕೆಲವು ಅಹಿತಕರ ಘಟನೆಗಳ ಸಂಭವವನ್ನು ಸೂಚಿಸಿದರು: ವಿಮಾನ ನಿಲ್ದಾಣದ ಬಳಿಯಿರುವ ಶ್ರೀಮಂತ ದೇಶಗಳಿಂದ ಆಗಮಿಸುವವರ ಮೇಲೆ ಸುಲಿಗೆಕೋರ ಹಲ್ಲೆ ನಡೆಸಬಹುದು; ಅಥವಾ, (ನಿರ್ದಿಷ್ಟ ದೇಶದಿಂದ ಆಗಮಿಸುವವರು ತಮ್ಮ ಕಾರ್ಡ್‌ಗಳನ್ನು ಶರೀರಕ್ಕ ಸನಿಹ ಇಟ್ಟುಕೊಳ್ಳದಿದ್ದಲ್ಲಿ (ಹೆಚ್ಚು ದ್ರವ ಮತ್ತು ಲವಣಾಂಶವುಳ್ಳ) ಅಥವಾ ಪದರ-ಲೇಪಿತ ಚೀಲದಲ್ಲಿ ಇಟ್ಟುಕೊಳ್ಳದಿದ್ದಲ್ಲಿ)) ಒಬ್ಬ ಆತಂಕವಾದಿಯು ಇದ್ದಕ್ಕಿದ್ದಂತೆ ಸ್ಫೋಟಿಸುವ ಉಪಕರಣ (ಇಂಪ್ರೊವೈಸ್ಡ್‌ ಎಕ್ಸ್‌ಪ್ಲೋಸಿವ್‌ ಡಿವೈಸ್‌) ವಿನ್ಯಾಸ ಮಾಡಿ ನಿರ್ದಿಷ್ಟ ದೇಶದಿಂದ ಆಗಮಿಸುವವರು ಹತ್ತಿರ ಬಂದಾಗ ಸ್ಫೋಟಿಸುವಂತೆ ಮಾಡಬಹುದು. ಇನ್ನು ಕೆಲವು ಯುರೋಪ್‌ ಒಕ್ಕೂಟ ದೇಶಗಳು ಬೆರಳಚ್ಚು ಮುದ್ರಣ ಮತ್ತು ಇತರೆ ಜೀವಿಸಂಖ್ಯಾಶಾಸ್ತ್ರದ ಮಾಹಿತಿ ಸೇರಿಸಲು ಮುಂದಾಗಿವೆ. ಕೆಲವು ದೇಶಗಳು ಈ ಕ್ರಮವನ್ನಾಗಲೇ ಕೈಗೆತ್ತಿಕೊಂಡಿವೆ.[೩೯]

ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು[ಬದಲಾಯಿಸಿ]

ಜಪಾನ್‌ನ ಒಸಾಕಾ ನಗರದಲ್ಲಿ ಶಾಲಾ ಅಧಿಕಾರಿಗಳು ಇಂದು ಪ್ರಾಥಮಿಕ ಶಾಲಾ ಮಕ್ಕಳ ಉಡುಪು, ಶಾಲಾಚೀಲಗಳು ಮತ್ತು ವಿದ್ಯಾರ್ಥಿಗಳ IDಗಳಲ್ಲಿ ಚಿಪ್‌ಗಳನ್ನು ಅಳವಡಿಸುತ್ತಿದ್ದಾರೆ.[೪೦] ಇಂಗ್ಲೆಂಡ್‌ಡಾಂಕ್ಯಾಸ್ಟರ್‌ನಲ್ಲಿರುವ ಶಾಲೆಯಲ್ಲಿ ನಿಗಾ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಂತೆ ಶಾಲಾ ವಿದ್ಯಾರ್ಥಿಗಳ ಸಮವಸ್ತ್ರಗಳಲ್ಲಿರುವ ರೇಡಿಯೊ ಚಿಪ್‌ಗಳ ಜಾಡು ಹಿಡಿದು ಶಾಲಾ ಆಡಳಿತ ಅವರ ಚಲನವನದ ನಿಗಾ ವಹಿಸುತ್ತದೆ.[೪೧] ಇಂಗ್ಲೆಂಡ್‌ನ ಪಶ್ಚಿಮ ಲಂಡನ್‌ನಲ್ಲಿರುವ ಸೇಂಟ್‌ ಚಾರ್ಲ್ಸ್‌ ಸಿಕ್ಸ್ತ್‌ ಫಾರ್ಮ್‌ ಕಾಲೇಜ್‌ ಸೆಪ್ಟೆಂಬರ್‌ 2008ರಿಂದ ಆರಂಭಿಸಿ, ಮುಖ್ಯ ಪ್ರವೇಶದ್ವಾರದಲ್ಲಿ ಆಗಮನ-ನಿರ್ಗಮನಗಳ ಚಟುವಟಿಕೆಗಳ ಜಾಡು ಕಂಡು ಹಿಡಿಯಲು RFID ಕಾರ್ಡ್‌ ವ್ಯವಸ್ಥೆಯನ್ನು ಬಳಸುತ್ತಿದೆ. ಹಾಜರಿಯ ದಾಖಲಾತಿ ಮತ್ತು ಅತಿಕ್ರಮ ಪ್ರವೇಶ ತಡೆಗಟ್ಟುವುದು ಇದರ ಉದ್ದೇಶ.

ಇಂಗ್ಲೆಂಡ್‌ನ ಕ್ಲೆಕ್‌ಹೀಟನ್‌ನಲ್ಲಿರುವ ವ್ಹಿಟ್‌ಕ್ಲಿಫ್‌ ಮೌಂಟ್‌ ಸ್ಕೂಲ್‌ನಲ್ಲಿಯೂ ಸಹ, ವಿಶೇಷ ವಿನ್ಯಾಸ ಮಾಡಿದ ಕಾರ್ಡ್‌ಗಳ ಮೂಲಕ, ವಿದ್ಯಾರ್ಥಿ ಮತ್ತು ಸಿಬ್ಬಂದಿವರ್ಗದವರು ಶಾಲೆಗೆ ಆಗಮನ ಮತ್ತು ಅಲ್ಲಿಂದ ನಿರ್ಗಮನದ ಮೇಲೆ ನಿಗಾ ವಹಿಸಲು RFID ಬಳಸುತ್ತದೆ. ಫಿಲಿಪೀನ್ಸ್‌ನಲ್ಲಿ, ಕೆಲವು ಶಾಲೆಗಳು ಪುಸ್ತಕಗಳ ಎರವಲಿಗೆ IDಗಳಲ್ಲಿ RFIDಗಳನ್ನು ಆಗಲೇ ಬಳಸುತ್ತಿವೆ. ಇಂತಹ ಶಾಲೆಗಳ ಪ್ರವೇಶದ್ವಾರಗಳಲ್ಲಿಯೂ ಸಹ RFID ID ಸ್ಕ್ಯಾನರ್‌ಗಳಿವೆ. ಇವು ಕ್ವೆಜಾನ್‌ ಸಿಟಿಯಲ್ಲಿರುವ ಕ್ಲಾರೆಟ್‌‌ ಶಾಲೆ, ಕಾಲೆಜಿಯೊ ಡಿ ಸ್ಯಾನ್‌ ಜ್ಯುಯಾನ್‌ ಡಿ ಲೆಟ್ರಾನ್‌ ಮತ್ತು ಇತರೆ ಖಾಸಗಿ ಶಾಲೆಗಳು.

ವಸ್ತು ಸಂಗ್ರಹಾಲಯಗಳು[ಬದಲಾಯಿಸಿ]

ಸಂಗ್ರಹಾಲಯದಲ್ಲಿ ಬಳಕೆದಾರರ ಅನ್ವಯಿಕೆಗಳಲ್ಲಿ RFID ತಂತ್ರಜ್ಞಾನ ಅಳವಡಿಸಲಾಗಿದೆ.

ಕ್ಯಾಲಿಫೊರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಎಕ್ಸ್‌ಪ್ಲೊರೆಟೊರಿಯಮ್‌ ವಿಜ್ಞಾನ ಸಂಗ್ರಹಾಲಯದಲ್ಲಿರುವ 'ಎಕ್ಸ್‌ಸ್ಪಾಟ್‌‌' ಎಂಬ ಗ್ರಾಹಕ-ಇಚ್ಛಾ-ಮೇರೆಗೆ ವಿನ್ಯಾಸವಾದ ಅನ್ವಯಿಕೆಯು ಇದಕ್ಕೆ ಉದಾಹರಣೆಯಾಗಿದೆ. ಸಂಗ್ರಹಾಲಯಕ್ಕೆ ಆಗಮಿಸುವ ಭೇಟಿಗಾರರು ಒಂದು RF ಟ್ಯಾಗ್‌ ಪಡೆಯುವವರು; ಇದನ್ನು ಕಾರ್ಡ್‌ನಲ್ಲಿ ಒಯ್ಯಬಹುದು ಅಥವಾ ಕೊರಳಲ್ಲಿ ಧರಿಸಬಹುದು. ಪ್ರದರ್ಶಿತ ವಸ್ತುವಿನ ಬಗ್ಗೆ ಮಾಹಿತಿ ಪಡೆಯಲು ಹಾಗು ಉಡುಗೊರೆಯ ಅಂಗಡಿಯಲ್ಲಿ ಬರುವ ಗ್ರಾಹಕರ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಎಕ್ಸ್‌ಸ್ಪಾಟ್‌ ವ್ಯವಸ್ಥೆ ಅವಕಾಶ ನೀಡುತ್ತದೆ. ಆನಂತರ, ತಾವು ಭೇಟಿ ನೀಡಿದ ದಿನಾಂಕ, ಪ್ರದರ್ಶಿತ ವಸ್ತುಗಳು ವೀಕ್ಷಿಸಿದ್ದು ಹಾಗು ತೆಗೆದುಕೊಂಡ ಛಾಯಾಚಿತ್ರಗಳ ಮಾಹಿತಿಗಳನ್ನು ಅವರು ತಮ್ಮ ವೈಯಕ್ತಿಕ ಅಂತರ್ಜಾಲಪುಟದಲ್ಲಿ ನೋಡಬಹುದು.[೪೨]

ಸಾಮಾಜಿಕವಾದ ಕಿರುಕಳಮಾರಾಟ[ಬದಲಾಯಿಸಿ]

ಗ್ರಾಹಕರು ಡ್ರೆಸಿಂಗ್‌ ಕೊಠಡಿ ಪ್ರವೇಶಿಸಿದಾಗ, ಅಲ್ಲಿರುವ ಕನ್ನಡಿ ಅವರನ್ನು ಪ್ರತಿಬಿಂಬಿಸುವುದಲ್ಲದೆ, 'ಪರಸ್ಪರ-ಕಾರ್ಯ ನಡೆಸುವ' ಪ್ರದರ್ಶನದಲ್ಲಿ ಖ್ಯಾತನಾಮರು ಧರಿಸಿದ ಉಡುಪುಗಳ ಚಿತ್ರಗಳನ್ನೂ ಸಹ ಪ್ರದರ್ಶಿಸುತ್ತದೆ. ಗ್ರಾಹಕರು ಧರಿಸಿರುವ ಉಡುಪಿನ ಚಿತ್ರ ವೆಬ್‌ಕ್ಯಾಮ್‌ ಮೂಲಕ ಪ್ರಸಾರವಾಗಿ ಅದನ್ನು ಆ ಮಳಿಗೆಯ ಜಾಲತಾಣದಲ್ಲಿ ಎಲ್ಲರೂ ವೀಕ್ಷಿಸಬಹುದಾಗಿದೆ. ಮಳಿಗೆಯಲ್ಲಿರುವ ಗ್ರಾಹಕರ ಮತ್ತು ಮಳಿಗೆಯಾಚೆಗಿನ ಅವರ ಸಾಮಾಜಿಕ ಜಾಲತಾಣದ ನಡುವೆ ಪರಸ್ಪರ ಸಂವಹನ ನಡೆಯುತ್ತದೆ. ಈ ವ್ಯವಸ್ಥೆಯಲ್ಲಿನ ತಂತ್ರಜ್ಞಾನ, ಡ್ರೆಸಿಂಗ್‌ ಕೊಠಡಿಯಲ್ಲಿರುವ ಒಂದು RFID ಇಂಟರೊಗೇಟರ್‌ ಆಂಟೆನಾ, ಹಾಗೂ ಉಡುಪಿಗೆ ಲಗತ್ತಿಸಿರುವ ವಿದ್ಯುನ್ಮಾನ ಉತ್ಪನ್ನ ಸಂಕೇತ (ಇಲೆಕ್ಟ್ರಾನಿಕ್‌ ಪ್ರಾಡಕ್ಟ್‌ ಕೋಡ್‌) RFID ಟ್ಯಾಗ್‌ಗಳನ್ನು ಹೊಂದಿರುತ್ತದೆ.[೪೩]

ರೇಸ್ ಟೈಮಿಂಗ್‌ (ಓಟದ ಕಾಲಯೋಜನೆ)[ಬದಲಾಯಿಸಿ]

ಸ್ವೀಕರಿಸುವ ಸಂವೇದಕದ ಪಕ್ಕದಲ್ಲಿರುವ ಚಾಂಪಿಯನ್‌ಚಿಪ್‌ ಟ್ರಾನ್ಸ್‌ಪಾಂಡರ್‌.ತನ್ನ ಷೂನಲ್ಲಿ ಚಿಪ್‌ ಧರಿಸಿರುವ ಒಬ್ಬ ಅಥ್ಲೀಟ್‌.1992ರಿಂದಲೂ, TIRIS ತಯಾರಿಸಿದ ಟೆಕ್ಸಾಸ್‌ ಇನ್ಸ್‌ಟ್ರುಮೆಂಟ್ಸ್‌ TMS370 ಮೈಕ್ರೊಕಂಟ್ರೊಲರ್‌ನ್ನು ಆಧಾರಿಸಿರುವ ಡಚ್‌ ವ್ಯವಸ್ಥೆ.
ಚಾಂಪಿಯನ್‌ಚಿಪ್‌.

1990ರ ದಶಕದ ಆರಂಭದಿಂದಲೂ, ವಿವಿಧ ರೀತಿಯ ಸಮಯಗಳ ನಿರ್ಣಯಿಸಲು RFID ರೇಸ್‌ ಟೈಮಿಂಗ್‌ನ ಹಲವು ವಿಧಗಳನ್ನು ಬಳಸಲಾಗುತ್ತಿದೆ. ಪಾರಿವಾಳಗಳ 'ರೇಸಿಂಗ್‌'ನೊಂದಿಗೆ ಈ ಪ್ರಯೋಗ ಆರಂಭವಾಯಿತು. ಇದನ್ನು ಜರ್ಮೆನಿಯ ಬರ್ಸಿಂಗ್‌ಹಾಸೆನ್‌ನಲ್ಲಿರುವ ಡೇಯ್ಸ್ಟರ್‌ ಇಲೆಕ್ಟ್ರಾನಿಕ್‌ ಜಿಎಂಬಿಹೆಚ್‌ (ಡೇಯ್ಸ್ಟರ್‌ ಇಲೆಕ್ಟ್ರಾನಿಕ್ಸ್‌) ಉದ್ದಿಮೆ ಪರಿಚಯಿಸಿತು. ಮ್ಯಾರಥಾನ್‌-ತರಹದ ಓಟಗಳಲ್ಲಿ, ಪಶುಪ್ರಾಣಿಗಳು ಮತ್ತು ಮನುಷ್ಯರ ಓಟದ ಆರಂಭ ಮತ್ತು ಮುಕ್ತಾಯ ಸಮಯಗಳನ್ನು ನೋಂದಾಯಿಸಲು ಬಳಸಲಾಗುತ್ತದೆ. ಏಕೆಂದರೆ ಭಾಗವಹಿಸುವ ಪ್ರತಿಯೊಬ್ಬ ಪ್ರತಿಸ್ಪರ್ದಿಯ ಟೈಮಿಂಗ್‌ಗಳನ್ನು ನಿಖರವಾಗಿ ಗುರುತಿಸಲಾಗದು. ಪಾದದ ಓಟಗಳಲ್ಲಿ, ಓಟಗಾರರು ಜಡ (ನಿಷ್ಕ್ರಿಯ)ಟ್ಯಾಗ್‌ಗಳ ಧರಿಸುವರು. ಇವನ್ನು ಓಟದ ಟ್ರ್ಯಾಕ್‌ ಬದಿಗಳಲ್ಲಿ ಅಥವಾ ಟ್ರ್ಯಾಕ್‌ಗೆ ಅಡ್ಡಲಾಗಿ ಹಾಸಿದ ಮ್ಯಾಟ್‌ಗಳಲ್ಲಿ ಅಳವಡಿಸಲಾಗಿರುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ ಆಂಟೆನಾಗಳಿರುವ UHF-ಆಧಾರಿತ ಟ್ಯಾಗ್‌ಗಳು, ಕಡಿಮೆ ಅಥವಾ ಹೆಚ್ಚಿನ ಆವರ್ತನದ ಹಿಂದಿನ ಮಾದರಿಯ ಟ್ಯಾಗ್‌ಗಳಿಗಿಂತಲೂ ಹೆಚ್ಚು ನಿಖರ ಮಾಹಿತಿ ನೀಡುತ್ತವೆ.

'ರಷ್‌ ಎರರ್‌', ಸುತ್ತುಗಳ ಎಣಿಕೆಯ ದೋಷ (ಲ್ಯಾಪ್‌ ಕೌಂಟ್‌ ಎರರ್‌) ಮತ್ತು ಆರಂಭಕಾಲಿಕ ಅವಘಡಗಳನ್ನು ತಪ್ಪಿಸಬಹುದು; ಏಕೆಂದರೆ ಯಾರು ಬೇಕಾದರು ಪಂಗಡದಲ್ಲಿರುವ ಅಗತ್ಯವಿಲ್ಲದೆ, ಯಾವಾಗಾದರೂ ಆರಂಭಿಸಿ ಯಾವಾಗಾದರೂ ಸಹ ಓಟ ಮುಕ್ತಾಯಗೊಳಿಸಬಹುದು.
ಲ್ಯಾಪ್‌ ಸ್ಕೋರಿಂಗ್‌[ಬದಲಾಯಿಸಿ]

ಜಡ (ನಿಷ್ಕ್ರಿಯ)ಮತ್ತು ಸಕ್ರಿಯ RFID ವ್ಯವಸ್ಥೆಗಳನ್ನು ರಸ್ತೆಗಳ ಸ್ಪರ್ಧೆ-ಅಥವಾ ಇತರ ಪಂದ್ಯಗಳಾದ ಒರಿಯೆಂಟಿಯರಿಂಗ್‌, ಎಂಡ್ಯೂರೊ ಮತ್ತು ಹೇರ್‌ ಅಂಡ್‌ ಹೌಂಡ್ಸ್‌ (ಮೊಲ ಮತ್ತು ಬೇಟೆನಾಯಿ) ಓಟಗಳಲ್ಲಿ ಬಳಸಲಾಗುತ್ತದೆ. ಸವಾರರು ಗ್ರಾಹಕ-ಪ್ರೇಷಕವನ್ನು ಸಾಮಾನ್ಯವಾಗಿ ತಮ್ಮ ತೋಳುಗಳಲ್ಲಿ ಕಟ್ಟಿಕೊಂಡಿರುತ್ತಾರೆ. ಒಂದು ಸುತ್ತು ಪೂರ್ಣಗೊಳಿಸಿದ ಕೂಡಲೇ ಸವಾರರು ರಿಸೀವರ್‌ನ್ನು ಸ್ವೈಪ್‌ ಮಾಡುತ್ತಾರೆ ಅಥವಾ ಸ್ಪರ್ಶಿಸುತ್ತಾರೆ. ರಿಸೀವರ್‌ ಒಂದು ಕಂಪ್ಯೂಟರ್‌ಗೆ ಸಂಪರ್ಕವಾಗಿದ್ದು, ಓಟಗಾರರ ಲ್ಯಾಪ್‌ ಸಮಯ ಸಹ ದಾಖಲಿಸುತ್ತಾರೆ. ಈ ವ್ಯವಸ್ಥೆಯನ್ನು ಕ್ಯಾಸಿಮೊ ಗ್ರೂಪ್‌ ಲಿಮಿಟೆಡ್‌ ಹಾಗೂ ಸ್ವೀಡೆನ್‌ನ ಸ್ಪೋರ್ಟ್‌‌ಐಡೆಂಟ್‌ ಸಂಸ್ಥೆಗಳು ಮಾರಾಟ ಮಾಡುತ್ತವೆ. PET (ದೈಹಿಕ ಸಹಿಷ್ಣುತಾ ಪರೀಕ್ಷೆ) ನಡೆಸುವ ಹಲವು ಉದ್ಯೋಗ ಒದಗಿಸುವ ಸಂಸ್ಥೆಗಳು(ರೆಕ್ರೂಯ್ಟ್‌ಮೆಂಟ್‌ ಏಜೆನ್ಸಿಗಳು) RFID ತಂತ್ರಜ್ಞಾನ ಆಯ್ದುಕೊಂಡಿವೆ. ದಶಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು (ಉದಾಹರಣೆಗೆ ಭಾರತೀಯ ರೇಲ್ವೆ ನೇಮಕಾತಿ ಮಂಡಳಿ, ಪೊಲೀಸ್‌ ಮತ್ತು ವಿದ್ಯುತ್ಛಕ್ತಿ ಕ್ಷೇತ್ರ) ಅರ್ಜಿಗಳ ಪರಿಶೀಲನೆಗೆ RFID ತಂತ್ರಜ್ಞಾನದ ಅಗತ್ಯವಿದೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ತಂತ್ರಾಂಶ ಹೊರಗುತ್ತಿಗೆ ಸೇವಾ ಕೇಂದ್ರವು ಇದೇ ಉದ್ದೇಶಕ್ಕಾಗಿ ಈ ವ್ಯವಸ್ಥೆ ಅಳವಡಿಸಿದೆ. ಇದರಲ್ಲಿ ಮೊದಲ ಬಾರಿಗೆ UHF ಟ್ಯಾಗ್‌ಗಳನ್ನು ಬಳಸಲಾಗಿದೆ. ಅವರು ದಿನಕ್ಕೆ 30,000ಕ್ಕೂ ಹೆಚ್ಚು ಅಭ್ಯರ್ಥಿಗಳ ಅರ್ಜಿಗಳನ್ನು ಪರಿಷ್ಕರಿಸಬಹುದು.

ಸ್ಕೀ ರೆಸಾರ್ಟ್‌ಗಳು (ಹಿಮಬಂಡೆಜಾರಾಟದ ರೆಸಾರ್ಟ್ಸ್ )[ಬದಲಾಯಿಸಿ]

ಹಲವು ಸ್ಕೀ ರೆಸಾರ್ಟ್‌ಗಳು,(ಹಿಮಾವೃತ್ತ ಪ್ರದೇಶಗಳಲ್ಲಿನ ಕ್ರೀಡೆ) ವಿಶಿಷ್ಟವಾಗಿ ಸ್ಕ್ಯಾಂಡಿನೇವಿಯಾ, ಫ್ರೆಂಚ್‌ ಆಲ್ಪ್ಸ್‌ ಮತ್ತು ಸ್ಪಾನಿಷ್‌ ಮತ್ತು ಫ್ರೆಂಚ್‌ ಪೈರೆನೀಸ್‌ನಲ್ಲಿರುವವು ಮಾತ್ರ RFID ಟ್ಯಾಗ್‌ ಆಯ್ದುಕೊಂಡಿವೆ. ಇದರಿಂದಾಗಿ ಸ್ಕೀದಾರರು ಸ್ಕೀ ಲಿಫ್ಟ್‌ಗಳಿಗೆ ಪ್ರವೇಶಾನುಮತಿ ಪಡೆಯಬಹುದಾಗಿದೆ.

ಸ್ಕೀದಾರರು ಅವರ ಜೇಬುಗಳಿಂದ ಅವರ ಪಾಸ್‌ಗಳನ್ನು ಹೊರತೆಗೆಯುವ ಅಗತ್ಯವಿರುವುದಿಲ್ಲ.

ಮನುಷ್ಯರಲ್ಲಿನ ಅಳವಡಿಕೆ (ಅಂತರ್ನಿವೇಶನ)[ಬದಲಾಯಿಸಿ]

RFID ಚಿಪ್‌ನ ಉದ್ದೇಶಿತ ಅಳವಡಿಕೆ ಹೊತ್ತ ಹಸ್ತ.
RFID ಟ್ಯಾಗ್ ಅಳವಡಿಸಲು ನಡೆಸಿದ ಶಸ್ತ್ರಕ್ರಿಯೆ ಮುಗಿದ ಕೂಡಲೇ.ಗಮನಿಸಿ: ಚಿಪ್‌ನ್ನು ಅಳವಡಿಸುವ ಮುಂಚೆ ನೈರ್ಮಲ್ಯ ಘಟಕದಿಂದ ತಂದಿರುವ ಹಳದಿ.

ಪಶುಪ್ರಾಣಿಗಳಿಗೆ ಟ್ಯಾಗ್‌ ಮಾಡಲು ಬಳಸಲಾದ ಅಂತರ್ನಿವೇಶಿಸಬಲ್ಲ RFID ಚಿಪ್‌ಗಳು ಇಂದು ಮನುಷ್ಯರಲ್ಲಿಯೂ ಸಹ ಬಳಸಬಹುದಾಗಿದೆ. ಕೆವಿನ್‌ ವಾರ್ವಿಕ್‌ ಎಂಬ ಒಬ್ಬ ಬ್ರಿಟಿಷ್‌ ಸೈಬರ್ನೆಟಿಕ್ಸ್‌ ಪ್ರಾಧ್ಯಾಪಕರು 1998ರಲ್ಲಿ ತಮ್ಮ ಕೈಯೊಳಗೇ ಚಿಪ್‌ನ್ನು ಅಂತರ್ನಿವೇಶಿಸುವುದರ ಮೂಲಕ, RFID ಅಂತರ್ನಿವೇಶನಗಳೊಂದಿಗೆ ಆರಂಭಿಕ ಪ್ರಯೋಗವನ್ನು ನಡೆಸಿದರು. 2004ರಲ್ಲಿ, ಕಾನ್ರಾಡ್‌ ಚೇಸ್‌ ಬಾರ್ಸಿಲೊನಾ[೪೪] ಮತ್ತು ರಾಟರ್ಡ್ಯಾಮ್‌ ನಗರಗಳಲ್ಲಿರುವ ತಮ್ಮ ನೈಟ್‌ಕ್ಲಬ್‌ಗಳಲ್ಲಿ VIP ಗ್ರಾಹಕರ ಗುರುತಿಸಲು ಆಗಾಗ್ಗೆ ಅಂತರ್ನಿವೇಶಿತ ಚಿಪ್‌ಗಳನ್ನು ಅಳವಡಿಸುತ್ತಿದ್ದರು; ಈ ಗ್ರಾಹಕರು ಇದನ್ನು ಬಳಸಿ ತಮ್ಮ ಪಾನೀಯಗಳಿಗೆ ಹಣ ಪಾವತಿಸುತ್ತಿದ್ದರು. 2004ರಲ್ಲಿ, ಮೆಕ್ಸಿಕನ್‌ ಅಟಾರ್ನಿ ಜನರಲ್‌ ಕಾರ್ಯಾಲಯದ ಸಿಬ್ಬಂದಿವರ್ಗದಲ್ಲಿ 18 ಜನರಿಗೆ ವೆರಿಚಿಪ್‌ ಅಳವಡಿಸಲಾಯಿತು. ಸುಭದ್ರತೆಯ ಮಾಹಿತಿ ಅಂಕಿಅಂಶದ ಸಂಗ್ರಹ ಕೊಠಡಿಯ ಪ್ರವೇಶಾನುಮತಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಯಿತು.[೪೫] ಗುರುತಿನ ಕಳ್ಳತನದ ಅಪಾಯದ ಕಾರಣ, ಜನರನ್ನು ದೃಢೀಕರಿಸಲು RFID ಬಳಕೆಯ ವಿರುದ್ಧ ಭದ್ರತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಉದಾಹರಣೆಗೆ, ನೈಜ ಸ್ಥಿತಿಯಲ್ಲಿ, ಹಲ್ಲೆ ನಡೆಸುವವನು ವ್ಯಕ್ತಿಯ ಗುರುತನ್ನು ಕದಿಯುವ ಸಾಧ್ಯತೆಗಳಿವೆ (ಮ್ಯಾನ್‌-ಇನ್‌-ದಿ-ಮಿಡ್ಲ್‌-ಅಟ್ಯಾಕ್‌).

RFIDಗಳ ಸಂಪನ್ಮೂಲಗಳ ನಿರ್ಬಂಧಗಳಿರುವುದರಿಂದ, ಇಂತಹ ಹಲ್ಲೆಗಳ ವಿರುದ್ಧ ರಕ್ಷಿಸಿಕೊಳ್ಳುವುದು ವಸ್ತುತಃ ಅಸಾಧ್ಯವಾಗಿದೆ. ಏಕೆಂದರೆ, ಇದಕ್ಕೆ ಜಟಿಲವಾದ ದೂರ-ಬಂಧಕವಾಗಿರುವ ನಿಯಮಾವಳಿಗಳ ಅಗತ್ಯವಿದೆ.[೪೬][೪೭][೪೮][೪೯]

ಅಂತರ್ನಿವೇಶಿಸಬಹುದಾದ RFID ಚಿಪ್‌ಗಳ ವಿರುದ್ಧ ಗೌಪ್ಯತೆಯ ಸಮರ್ಥಕರು ಪ್ರತಿಭಟಿಸಿದ್ದಾರೆ. ಅವರು ಇದರ ಸಂಭಾವ್ಯ ದುರುಪಯೋಗದ ಕುರಿತು ಎಚ್ಚರಿಕೆ ನೀಡಿ, ಇಂತಹ RFID ಉಪಕರಣಗಳನ್ನು 'ಸ್ಪೈಚಿಪ್‌ಗಳು' ಎಂದು ಟೀಕಿಸಿದ್ದಾರೆ. ಸರ್ಕಾರಗಳು RFID ಉಪಕರಣಗಳನ್ನು ಬಳಸುವುದು ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಹಾಗೂ ದುರುಪಯೋಗಕ್ಕೆ ಎಡೆಮಾಡಬಹುದು ಎಂದು ಅವರು ವಾದಿಸುತ್ತಾರೆ. ನಿಗಾ ವಹಿಸುವ ಉಪಕರಣ ದ ರೂಪದಲ್ಲಿ ಈ ಮೈಕ್ರೊಚಿಪ್‌ನ ಬಳಕೆಯು ದುರುಪಯೋಗದ ಒಂದು ಮಾದರಿಯಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇಂತಹ ಆತಂಕಗಳಿಗೆ ಆಧಾರವಿತ್ತು. COINTELPRO ಎಂಬ CIA ಯೋಜನೆಯನ್ನು ಒಬ್ಬ ಜನಪ್ರಿಯ ರಾಜಕೀಯ ಕಾರ್ಯಕರ್ತ ಮತ್ತು ಭಿನ್ನಮತೀಯ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಬಳಸಲಾಗಿತ್ತು. ಸರ್ಕಾರೇತರ ವ್ಯಕ್ತಿ ಅಥವಾ ಸಂಘಟನೆಗಳಿಗೂ (ಉದಾಹರಣೆಗೆ, ಖಾಸಗಿ ವ್ಯವಹಾರಗಳು) ಸಹ ಚಿಪ್‌ನ ಮಾಹಿತಿ ಲಭ್ಯವಾಗುವ ಸಾಧ್ಯತೆಯೂ ಉಂಟು. ಇದರಿಂದಾಗಿ ಉದ್ಯೋಗಿಗಳ ಬಗ್ಗೆ ತೀರಾ ವೈಯಕ್ತಿಕ ಮಾಹಿತಿಯನ್ನು ಸಹ ನೀಡಬಲ್ಲದು. ಇದರ ಜೊತೆಗೆ, ಗೌಪ್ಯತೆಯ ಸಮರ್ಥಕರು ಹೇಳುವುದೇನೆಂದರೆ, ಚಿಪ್‌ನಲ್ಲಿರುವ ಮಾಹಿತಿಯನ್ನು ಕದಿಯಬಹುದು, ಇದರಿಂದಾಗಿ ಅದರಲ್ಲಿ ಏನೇ ವೈಯಕ್ತಿಕ ಮಾಹಿತಿಯಿದ್ದಲ್ಲಿ ಗುರುತಿನ ಕಳ್ಳತನದ ಅಪಾಯವಿರಬಹುದು. FDA ಪ್ರಕಾರ, RFID ಚಿಪ್‌ ಅಳವಡಿಕೆಯು (ಅಂತರ್ನಿವೇಶನವು), ಸಂಭಾವ್ಯ ವೈದ್ಯಕೀಯ ಪರಿಣಾಮಗಳನ್ನು ಬೀರುತ್ತದೆ. ಆಹಾರ ಮತ್ತು ಔಷಧ ಆಡಳಿತ (FDA) 12 ಅಕ್ಟೋಬರ್‌ 2004ರಂದು ಹೊರಡಿಸಿದ ಪ್ರಕಟಣೆಯಲ್ಲಿ, ವೆರಿಚಿಪ್‌ ID ಅಂತರ್ನಿವೇಶನ ಉಪಕರಣದೊಂದಿಗಿರುವ ಸಂಭಾವ್ಯ ಅಪಾಯಗಳನ್ನು ತಿಳಿಸಿತು: ವಿದ್ಯುತ್‌ ತರಂಗಗಳ ಅಪಾಯಗಳು, MRI ಅಸಾಮರಸ್ಯ, ಪ್ರತಿಕೂಲವಾದ ಅಂಗಾಂಶ ಪ್ರತಿಕ್ರಿಯೆ ಹಾಗೂ ಅಂತರ್ನಿವೇಶಿತ ಗ್ರಾಹಕ-ಪ್ರೇಷಕದ ವಲಸೆ.[೫೦] ಇತ್ಯಾದಿ.

ಬಹುಮುಖ ವಿಚಾರಗಳು[ಬದಲಾಯಿಸಿ]

 • NEXUS ಮತ್ತು SENTRI ಸತತ ಪ್ರವಾಸ ಯೋಜನೆಗಳು U.S. ಕೆನಡಾ ಮತ್ತು ಮೆಕ್ಸಿಕೊ ದೇಶಗಳ ನಡುವೆ ಭೂಗಡಿಯಲ್ಲಿ ದಾಖಲೆಗಳ ಪರಿಷ್ಕರಣೆಯನ್ನು ತ್ವರಿತಗೊಳಿಸಲು RFID ಬಳಸುತ್ತವೆ.[೫೧]
 • NADRA ಸಂಸ್ಥೆಯು RFID-ಆಧಾರಿತ 0}ಚಾಲನಾ ಆದೇಶದ ಪರವಾನಿಗೆ ಪತ್ರದ ವಿನ್ಯಾಸವನ್ನು-ಆಭಿವೃದ್ಧಿಗೊಳಿಸಿದೆ. ಇದು ಲೈಸೆನ್ಸ್‌ ಹೊಂದಿರುವವರ ವೈಯಕ್ತಿಕ ಮಾಹಿತಿ ಹೊಂದಿದ್ದು, ಸಂಚಾರ ನಿಯಮಗಳ ಉಲ್ಲಂಘನೆ, ಇದಕ್ಕೆ ನೀಡಲಾದ ಟಿಕೆಟ್‌ ಮತ್ತು ಬಾಕಿಯುಳಿದಿರುವ ದಂಡಗಳ ಬಗ್ಗೆ ಮಾಹಿತಿ ಶೇಖರಿಸುತ್ತದೆ. ಗಂಭೀರ ಪ್ರಮಾಣದ ನಿಯಮ ಉಲ್ಲಂಘನೆಗಳಾದಲ್ಲಿ, ವಿದ್ಯುನ್ಮಾನ ರೀತ್ಯಾ ವಾಹನ ಚಾಲನಾ ಹಕ್ಕುಗಳನ್ನು ರದ್ದುಗೊಳಿಸುವಂತೆ ಪರವಾನಿಗೆ (ಲೈಸನ್ಸ್ )ಪತ್ರಗಳನ್ನು ವಿನ್ಯಾಸ ಮಾಡಲಾಗಿದೆ.[೫೨]
 • RFID ಪ್ರೇಷಕ-ಗ್ರಾಹಕ ಬಳಸಿ ಭೂಕಂಪದ ತರಂಗಾಂತರಂಗದ ಸಂವೇದಕಗಳನ್ನು ಓದುವುದರ ಮೂಲಕ, ಪರೋಕ್ಷ ಮಾಹಿತಿ ಸಂಗ್ರಹಣ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಸರಳಗೊಳಿಸಬಹುದಾಗಿದೆ.
 • ಮೈಕ್ರೊಮೀಟರ್‌ನಷ್ಟು ಅಂತರವಿರುವ ಛಾಯಾಸಂವೇದಕ ಸೇರಿಸಿ, RFID ಟ್ಯಾಗ್‌ನೊಂದಿಗೆ ಸಮ್ಮಿಶ್ರ RF-ಆಪ್ಟಿಕಲ್‌ ಸಂವಹನ ನಡೆಸುವುದರ ಮೂಲಕ, ಮಿಲಿಮೀಟರ್‌ವರೆಗೂ ನಿಖರ ಸ್ಥಳ ಸಂವೇದನೆಯನ್ನು ಸಾಧಿಸಬಹುದು. ಇದನ್ನು ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಟಿ ಅಂಡ್‌ ಜಿಯೊಮೀಟ್ರಿ (RFIG) ಎನ್ನಲಾಗಿದೆ.
 • ಅಲ್ಯಾನ್ಕೋ ಟೆಕ್ನಾಲಜೀಸ್‌ ಸಂಸ್ಥೆಯು ವಿನ್ಯಾಸ-ಅಭಿವೃದ್ಧಿಗೊಳಿಸಿದ ಸಿಬ್ಬಂದಿ ನಿಗಾ ತಂತ್ರಜ್ಞಾನದ ಮೌಲ್ಯಮಾಪನ ಮಾಡಲು, ಒಹಾಯೊ ಡಿಪಾರ್ಟ್ಮೆಂಟ್‌ ಆಫ್‌ ರಿಹ್ಯಾಬಿಲಿಟೇಷನ್‌ ಅಂಡ್‌ ಕರೆಕ್ಷನ್‌ (ODRC) $415,000 ಗುತ್ತಿಗೆಯನ್ನು ಆಗಸ್ಟ್‌ 2004ರಲ್ಲಿ ಮಂಜೂರು ಮಾಡಿತು.
ಇದರಂತೆ, ನಿವಾಸಿಗಳು ಕೈಗಡಿಯಾರ ಗಾತ್ರದ ಪ್ರೇಷಕಗಳನ್ನು ಧರಿಸುವರು. ಇದನ್ನು ತೆಗೆಯಲು ಯತ್ನಿಸಿದಲ್ಲಿ, ಕಾರಾಗೃಹದ ಕಂಪ್ಯೂಟರ್‌ಗಳಿಂದ ಎಚ್ಚರಿಕೆಯ ಸಂಕೇತಗಳು ತ್ವರಿತವಾಗಿ ಮೂಡಿಬರುತ್ತವೆ. US ಕಾರಾಗೃಹದಲ್ಲಿ ಚಿಪ್‌ಸೆಟ್‌ಗಳನ್ನು ಹೊರತಂದಿದ್ದು ಇದು ಮೊದಲನೆಯ ಯೋಜನೆಯಲ್ಲ. ಮಿಷಿಗನ್‌, ಕ್ಯಾಲಿಫೊರ್ನಿಯಾ ಮತ್ತು ಇಲಿಯಾಯ್‌ನಲ್ಲಿರುವ ಕಾರಾಗೃಹಗಳು ಈ ತಂತ್ರಜ್ಞಾನವನ್ನು ಆಗಲೇ ಬಳಸುತ್ತಿವೆ.
 • ಮ್ಯಾಟೆಲ್‌ ರಚಿಸಿದ 'ಹೈಪರ್‌ಸ್ಕ್ಯಾನ್‌' ಎಂಬ ವೀಡಿಯೊ ಆಟದ ವಿಧಾನದಲ್ಲಿ ಇದನ್ನು ಬಳಸಲಾಗಿದೆ.
 • ವೀಟಾ ಕ್ರಾಫ್ಟ್‌ ವಿನ್ಯಾಸ ಮಾಡಿದ RFIQಇನ್‌ ಸ್ವಯಂಚಾಲಿತ ಅಡುಗೆ ಮಾಡುವ ಉಪಕರಣವಾಗಿದೆ. ಇದು ಮೂರು ವಿವಿಧ-ಗಾತ್ರದ ಹರಿವಾಣಗಳು, ಒಯ್ಯಬಹುದಾದ ಇಂಡಕ್ಷನ್‌ ಹೀಟರ್‌ ಮತ್ತು ರೆಸಿಪಿ ಕಾರ್ಡ್‌ ಹೊಂದಿದೆ. ಪ್ರತಿಯೊಂದು ಭಾಗಕ್ಕೆ RFID ಟ್ಯಾಗ್‌ಗಳನ್ನು ಅಳವಡಿಸಲಾಗಿದ್ದು, ಅದು ಪ್ರತಿ ಸೆಕೆಂಡಿಗೆ 16 ಬಾರಿ ಆಹಾರಪದಾರ್ಥಗಳ ತಪಾಸಣೆ ಮಾಡುತ್ತದೆ. ಇಲ್ಲಿನ ಕೈಹಿಡಿಯಲ್ಲಿ MI ಟ್ಯಾಗ್‌, ಉಷ್ಣಾಂಶ ಸರಿಹೊಂದಿಸಲು ಇಂಡಕ್ಷನ್‌ ಹೀಟರ್‌ಗೆ ಸಂಕೇತಗಳನ್ನು ರವಾನಿಸುತ್ತದೆ.
 • ದೂರದರ್ಶನಗಳಲ್ಲಿ ಪ್ರಸಾರವಾಗುವ ಪೋಕರ್‌ ಪಂದ್ಯಾವಳಿಗಳಿಗೆ ಬಳಸಲಾದ ಇಸ್ಫೀಟೆಲೆಗಳಲ್ಲಿ ಇಂದು RFID ಟ್ಯಾಗ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ, ಹಂಚಿಕೆ ಪೂರ್ಣಗೊಂಡ ಮೇಲೆ, ಎಂತಹ ಕಾರ್ಡ್‌ಗಳು ಯಾರಿಗೆ ಹಂಚಲಾಗಿದೆ ಎಂಬುದು ವೀಕ್ಷಕ ವಿವರಣೆಗಾರರಿಗೆ ನಿಖರವಾಗಿ ಗೊತ್ತಾಗುತ್ತದೆ.
 • ಸೈನಿಕನ ಬಯೊಮೀಟ್ರಿಕ್‌ ಚಿತ್ರ ಹೊಂದಿರುವ RFID ಭದ್ರತಾ ಕಾರ್ಡ್‌ನ್ನು ಇರಾಕ್‌ ಭೂಸೇನೆಯು ಬಳಸುತ್ತದೆ. ಕಳ್ಳರುಜು ತಡೆಯಲು, ಚಿಪ್‌ನಲ್ಲಿರುವ ಚಿತ್ರವು ಕಾರ್ಡ್‌ನಲ್ಲಿರುವ ಚಿತ್ರದೊಂದಿಗೆ ಹೊಂದಿಕೊಳ್ಳಬೇಕು.[೫೩]
 • ಯುನೈಟೆಡ್‌ ಕಿಂಗ್ಡಮ್‌ನಲ್ಲಿರುವ ಆಲ್ಟನ್‌ ಟವರ್ಸ್‌ನಂತಹ ಥೀಮ್‌ ಪಾರ್ಕ್‌ಗಳು ತಮ್ಮೊಳಗೆ RFID ಬಳಸುವುದು ರೂಢಿಯಾಗಿದೆ. ಸವಾರಿಯ ಬಳಕೆದಾರರನ್ನು ಗುರುತಿಸಿ, ಅವರು ಪಾರ್ಕ್‌ನಲ್ಲಿದ್ದ ಸಮಯದ ಒಂದು DVD ರೂಪಿಸಲು ಇದು ಸಹಾಯವಾಗುತ್ತದೆ. ದಿನದ ಅಂತ್ಯದಲ್ಲಿ ಪಾರ್ಕ್‌ಗೆ ಭೇಟಿ ನೀಡಿದವರು ಇದನ್ನು ಕೊಂಡುಕೊಳ್ಳಲು ಲಭ್ಯವಾಗುವುದು. ಭೇಟಿ ನೀಡುವವರು ತಮ್ಮ ಇಚ್ಛೆಯಂತೆ ಪಾರ್ಕ್‌ನಲ್ಲಿ ನೀಡಲಾದ ಒಂದು ಮಣಿಪಟ್ಟಿ (ರಿಸ್ಟ್‌ಬ್ಯಾಂಡ್‌) ಧರಿಸುವರು.
 • ಪ್ರವೇಶಾನುಮತಿ ನಿಯಂತ್ರಣಕ್ಕಾಗಿ ಸಾಂಪ್ರದಾಯಿಕ ಸ್ವೈಪ್‌ ಕಾರ್ಡ್‌ಗಳನ್ನು ಬಳಸುವ ಹಲವು ಸ್ಥಳಗಳು ಹಂತ-ಹಂತವಾಗಿ RFID ನೊ-ಕಾಂಟ್ಯಾಕ್ಟ್‌ ಕಾರ್ಡ್‌ಗಳತ್ತ ವಲಸೆ ಹೋಗುತ್ತಿವೆ.
 • ಸಭೆ ಮತ್ತು ಸಮ್ಮೇಳನಗಳಲ್ಲಿಯೂ ಸಹ ಉಪಸ್ಥಿತರ ಬ್ಯಾಡ್ಜ್‌ಗಳಲ್ಲಿ RFID ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದಾಗಿ ಸಮ್ಮೇಳನದಲ್ಲಿ ಹಾಜರಾದವರ ಬಗೆಗಿನ ನಿಗಾ ವಹಿಸಬಹುದು. ದಿನದಲ್ಲಿ ಜನರು ಯಾವ ಸ್ಥಳಗಳನ್ನು ಪ್ರವೇಶಿಸಿ ನಿರ್ಗಮಿಸಿದ್ದಾರೆ ಎಂಬುದರ ಮಾಹಿತಿ ಪ್ರದರ್ಶಿಸುವ ದತ್ತಾಂಶವನ್ನು ಇದು ನೀಡುತ್ತದೆ.[೫೪] ಲಭ್ಯ ಈ ಮಾಹಿತಿಯು, ಸಮ್ಮೇಳನದ ಒಳಾಂಶ ಮತ್ತು ವಿನ್ಯಾಸಗಳನ್ನು ಉತ್ತಮಗೊಳಿಸಲು ಆಯೋಜಕರಿಗೆ ನೆರವು ನೀಡುತ್ತದೆ. ಪ್ರದರ್ಶನಗಳಲ್ಲಿ ಪ್ರದರ್ಶಕರಿಗೆ ಫಲಿತಾಂಶಗಳ ಪ್ರತಿಕ್ರಿಯೆ ಪದೆಯಲುಲೀಡ್ ರಿಟ್ರೀವಲ್‌ನ್ನು ಉತ್ತಮಗೊಳಿಸಲು RFIDಯನ್ನು ಬಳಸಲಾಗಿದೆ.
 • ಗಾಲ್ಫ್‌ ಆಟದ ಚೆಂಡುಗಳಲ್ಲಿ RFID ಗ್ರಾಹಕ-ಪ್ರೇಷಕ ಚಿಪ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಈ ಚೆಂಡುಗಳು ಹೋಗಿ ಬಿದ್ದಿರುವ ಸ್ಥಳಗಳನ್ನು ಪತ್ತೆ ಮಾಡಬಹುದು. ಹೀಗೆ ಪತ್ತೆ ಹಚ್ಚುವಿಕೆಯಿಂದ ವಿವಿಧ ಉಪಯೋಗಗಳಿವೆ. 'ಹೋಮಿಂಗ್‌ ಡಿವೈಸ್‌' ಬಳಸಿ ಕಳೆದುಹೋದ ಚೆಂಡನ್ನು ಹುಡುಕಿ ಪತ್ತೆ ಹಚ್ಚುವುದು; ಕಂಪ್ಯೂಟರೀಕೃತ ಡ್ರೈವಿಂಗ್‌ ರೇಂಜ್‌ನಲ್ಲಿ ಆಟಗಾರರೊಬ್ಬರು ಹೊಡೆದ ಚೆಂಡಿನ ಜಾಡು ಹಿಡಿದು ಹೊಡೆತದ ದೂರ ಮತ್ತು ನಿಖರತೆಯನ್ನು ಆಟಗಾರರಿಗೆ ತಿಳಿಸಲು ಉಪಯುಕ್ತವಾಗಿದೆ.
 • 2007ರಲ್ಲಿ, ಕಲಾವಿದ ಜೋಡಿ ಆರ್ಟ್‌ಕೂನ್‌ ತಮ್ಮ ವಿಶ್ವಾದ್ಯಂತ 'ಕನ್ಸಾ' ಯೋಜನೆ ಆರಂಭಿಸಿತು.(ಕನ್ಸಾ ಒಂದು ಕ್ರೀಡೆ ಅಥವಾ ಕಲೆಗೆ ಒಗ್ಗಿಹೋದ ಜನಸಮೂದಾಯ) ಸಿರ್ಪಾ ಮಸಾಲಿನ್‌ರ ಮಾನವನಂತಿರುವ ಮರದ ಶಿಲ್ಪಾಕೃತಿಗಳು ತಮ್ಮೊಳಗೆ RFID ಹೊಂದಿವೆ. ಹ್ಯಾನ್ಸ್‌-ಉಲ್ರಿಕ್‌ ಗೊಲ್ಲರ್‌-ಮಸಾಲಿನ್‌ ನ್ಯೂ ಮೀಡಿಯಾ ಆರ್ಟ್‌ ಕೃತಿಗಳನ್ನು ರಚಿಸಿದರು. ಇವು ಅಂತರಜಾಲದಲ್ಲಿ ಕನ್ಸಾದ ವ್ಯಯಕ್ತಿಕ ಶಿಲ್ಪಾಕೃತಿಗಳ ಪತ್ತೆಗೆ ದಾರಿ ಮಾಡುತ್ತವೆ. ತಮ್ಮ ಶಿಲ್ಪಾಕೃತಿಗಳಿರುವ ಸ್ಥಳದ ನಗರಪ್ರದೇಶವನ್ನು ನೋಂದಾಯಿಸಲು ಮಾಲಿಕರಿಗೆ ಸೂಚಿಸಲಾಗಿದೆ. ಆರ್ಟ್‌ಕೂನ್‌ನಲ್ಲಿ ಉಲ್ಲೇಖಿಸಿದ RFIDಯ ಅಪೂರ್ವ ಸಂಖ್ಯೆಯನ್ನು ಹೋಲಿಸುವುದರ ಮೂಲಕ, ಮಾಲೀಕರು ತಮ್ಮ ಶಿಲ್ಪಾಕೃತಿಯನ್ನು ನೈಜ ಕೃತಿ ಎಂದು ಗುರುತಿಸಿಬಲ್ಲರು.
 • ಕೆಲವು ಮೋಜುಮಂದಿರಗಳಲ್ಲಿ (ಕ್ಯಾಸಿನೊಗಳು) ತಮ್ಮ ಚಿಪ್‌ಗಳೊಳಗೆ RFID ಟ್ಯಾಗ್‌ಗಳನ್ನು ಅಳವಡಿಸಲಾಗುತ್ತಿವೆ. ಇದರಿಂದಾಗಿ ಮೋಜುಮಂದಿರದ ನೆಲದಮೇಲೆ ಚಿಪ್‌ಗಳನ್ನು ಪತ್ತೆಮಾಡಿ, ನಕಲೀ ಚಿಪ್‌ಗಳನ್ನು ಗುರುತಿಸಿ, ಕಳ್ಳತನ ತಡೆಗಟ್ಟಲು ಮೋಜುಮಂದಿರದವರಿಗೆ ನೆರವಾಗುತ್ತದೆ. ಇನ್ನೂ ಹೆಚ್ಚಾಗಿ, ಬಾಜಿ ಕಟ್ಟುವ ಆಟಗಾರರ ವರ್ತನೆಗಳನ್ನು ಅಧ್ಯಯನ ಮಾಡಲು ಮೋಜುಮಂದಿರಗಳ RFID ವಿಧಾನ ಬಳಸಬಹುದಾಗಿದೆ.
 • ಹಾಂಗ್‌ಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸುವ ಎಲ್ಲಾ ಸರಕುಗಳು ಸ್ವೀಕೃತಿಯಾದಾಗ RFID ಸ್ಟಿಕರ್‌ಗಳನ್ನು ಅಳವಡಿಸಲಾಗುತ್ತದೆ. ಇದರಲ್ಲಿ ಅಜ್ಞಾತ ಸ್ಥಳ ಮತ್ತು ವಿಮಾನದ ವಿವರಗಳು ಉಂಟು.
 • 2006ನೆಯ ಇಸವಿಯಲ್ಲಿ, ಬ್ಲೂ ವೆಕ್ಟರ್‌ ವಿನ್ಯಾಸಗೊಳಿಸಿದ ಸ್ಮಾರ್ಟ್‌ ಕನ್ವೆಯರ್‌ ಟನೆಲ್‌ನ್ನು ಪರಿಚಯಿಸಲಾಯಿತು. ಇದರಿಂದಾಗಿ ಔಷಧ ತಯಾರಿಕೆಯ ಉದ್ದಿಮೆಯು UHF ಮತ್ತು HF ಟ್ಯಾಗ್‌ಗಳ ಪತ್ತೆಗೆ ಅವಕಾಶ ನೀಡಿತು. ಮೆಕೆಸನ್‌ ಕಾರ್ಪೊರೇಷನ್‌ನ ಉತ್ಪನ್ನಗಳಲ್ಲಿ ಕೆಲವೊಂದಿಗೆ ರೈಟ್‌ ಏಯ್ಡ್‌ ತಂತ್ರಜ್ಞಾನ ಬಳಸಲಾಯಿತು.[೫೫]
 • ಇಂದು ಡಿಪೋಲ್‌ RFID ಇಂಜಿನಿಯರ್ಸ್‌ ಬಾರ್ಸಿಲೊನಾ ಉದ್ಯೋಗಿಗಳಾಗಿರುವ ಸ್ಪಾನಿಷ್‌ ತಂತ್ರಜ್ಞರು, ಫೆಬ್ರವರಿ 2007ರಲ್ಲಿ 100ಕ್ಕೂ ಹೆಚ್ಚು ಪೆಟ್ಟಿಗೆಗಳನ್ನು ಹೊಂದಿದ್ದ ಟೆಟ್ರಾ ಪ್ಯಾಕ್‌ ಹಾಲಿನ ಪ್ಯಾಲೆಟ್‌ನ 99.8%ರಷ್ಟನ್ನು ಸ್ಕ್ಯಾನ್‌ ಮಾಡುವುದರಲ್ಲಿ ಸಫಲರಾದರು.
ಪ್ರಮುಖ ತಂತ್ರಜ್ಞಾನ ಪೂರೈಕೆದಾರ ಸಂಸ್ಥೆಯಾಗಿ ಇಂಪಿನ್ಜ್‌ ಸಹಯೋಗ ನೀಡಿತ್ತು.[೫೬]
 • ಮಕ್ಕಳಿಗಾಗಿ ಆಡಿಯೊಬುಕ್‌ಗಳು.
 • ಸೆಪ್ಟೆಂಬರ್‌ 2008ರಲ್ಲಿ ನಡೆದ ಡೆಮೊ ಫಾಲ್‌ 2008 ಕಾರ್ಯಕ್ರಮದಲ್ಲಿ ಆಲ್ಕಾಟೆಲ್‌-ಲ್ಯೂಸೆಂಟ್‌ ಮೊದಲ ಬಳಕೆದಾರ RFID ಸೇವೆ ಟಚ್‌ಎಟ್ಯಾಗ್‌ನ್ನು ಪ್ರಸ್ತುತಪಡಿಸಿತು. ಇದು USB ಮೂಲಕ PC (ವಿಂಡೊಸ್‌ ಅಥವಾ ಮ್ಯಾಕ್‌)ಗೆ ಸಂಪರ್ಕ ಹೊಂದಿದ್ದು, RFID-ಟ್ಯಾಗ್‌ ಹೊಂದಿರುವ ವಸ್ತು ಪತ್ತೆಮಾಡಿದಾಗ, ಎಲ್ಲಾ ತರಹದ ಬಹುಮಾಧ್ಯಮ (ಮಲ್ಟಿಮೀಡಿಯಾ) ಅನ್ವಯಿಕೆಗಳನ್ನು ಉಪಯೋಗಿಸುತ್ತದೆ. ಅವು ಅಳವಡಿಕೆಯ ವಿನ್ಯಾಸ-ಅಭಿವೃದ್ಧಿ ಯೋಜನೆ ಮತ್ತು ವ್ಯಾವಹಾರಿಕ ಪರಿಹಾರಗಳನ್ನು ಹೊಂದಿವೆ (ಉದಾಹರಣೆಗೆ: ಅಕಾರ್‌ ಸರ್ವೀಸಸ್‌ಗಾಗಿ 0}ಪಿಂಗ್‌ಪಿಂಗ್‌ - ಬೆಲ್ಜಿಯಮ್‌ ಮತ್ತು ಒಬ್ಬ ನಾಗರಿಕ ವಿಮಾನ ಚಾಲಕರೊಂದಿಗೆ ಸಹಯೋಗ‌) [೫೭]
 • ಸೆಪ್ಟೆಂಬರ್‌ 2008ರಲ್ಲಿ IFAದಲ್ಲಿ ವಯೊಲೆಟ್‌ ಗ್ರಾಹಕ USB RFID ಸ್ಕ್ಯಾನರ್‌ನ್ನು ಪ್ರಸ್ತುತಪಡಿಸಿತು. Mir:ror USB ಮೂಲಕ PC (ವಿಂಡೋಸ್‌ ಅಥವಾ ಮ್ಯಾಕ್‌)ಗೆ ಸಂಪರ್ಕವೇರ್ಪಡಿಸಿ, RFID-ಟ್ಯಾಗ್‌ ಹೊಂದಿರುವ ಯಾವುದೇ ವಸ್ತುವನ್ನು ಪತ್ತೆಮಾಡಿದೊಡನೆ ಎಲ್ಲಾ ಬಹುಮಾಧ್ಯಮ ಅನ್ವಯಿಕೆಗಳನ್ನು ಚಲಾಯಿಸುತ್ತದೆ.
 • ಸರಿಯಾದ ಸಮಯ ತಿಳಿಯಲು ಆಸ್ತಿ-ಪಾಸ್ಟಿ ನಿಗಾ ವಹಿಸಲು ಕೆಲವು ಆಸ್ಪತ್ರೆಗಳು ಸಕ್ರಿಯ RFID ಟ್ಯಾಗ್‌ಗಳನ್ನು ಬಳಸುತ್ತವೆ.[೫೮]
 • ಫೆಬ್ರವರಿ 2008ರಲ್ಲಿ ಥಿಂಗ್‌ಮ್ಯಾಜಿಜ್‌ ಡಿವಾಲ್ಟ್‌ ಮತ್ತು ಫೊರ್ಡ್‌ನೊಂದಿಗೆ ಪಾಲುದಾರಿಕೆ ಘೋಷಿಸಿತು. ಇದರ ಉದ್ದೇಶ, RFID ಆಸ್ತಿ-ಪಾಸ್ಟಿ ನಿಗಾ ವ್ಯವಸ್ಥೆಯೊಂದಿಗೆ, 2009 ಫೊರ್ಡ್‌ F-150, F-ಸೀರಿಸ್‌ ಸೂಪರ್‌ ಡ್ಯೂಟಿ ಪಿಕ್‌ಅಪ್‌ಗಳು ಮತ್ತು E-ಸೀರಿಸ್‌ ವ್ಯಾನ್‌ಗಳನ್ನು ಸುಸಜ್ಜಿತಗೊಳಿಸುವುದು. ಈ RFID ಉಪಕರಣವನ್ನು ಥಿಂಗ್‌ಮ್ಯಾಜಿಕ್‌ನ ಮರ್ಕ್ಯುರಿ5ಇ ಸ್ಕ್ಯಾನರ್‌ಗಳಿಂದ ಸಕ್ರಿಯಗೊಳಿಸಲಾಗಿದೆ.
 • ನವೆಂಬರ್‌ 2008ರಲ್ಲಿ, ಸ್ಪೇನ್‌ನ ಬಾರ್ಸಿಲೊನಾದ ಡಿಪೋಲ್‌ RFID ಇಂಜಿನಿಯರ್ಸ್‌ ವಾಹನ ವಿದ್ಯುತ್ಕೋಶಗಳ ಪ್ಯಾಲೆಟ್‌ಒಂದರ 100% ಸ್ಕ್ಯಾನ್‌ ಕಾರ್ಯ ಪ್ರದರ್ಶಿಸಿತು. ವಿಶೇಷ ಟ್ಯಾಗ್‌ ವಿನ್ಯಾಸಗಳು ಮತ್ತು ಉನ್ನತ ಆಂಟೆನಾ ಗ್ರಹಣಶಕ್ತಿಯಿಂದ ಇದು ಸಾಧ್ಯವಾಯಿತು.[೫೯]
 • ವಿಭಿನ್ನ RFID ಉಪಕರಣಗಳಿಗೆ ಬೆಂಬಲ ನೀಡುವಂತಹ ಓಪನ್‌ ಸೋರ್ಸ್‌ ತಂತ್ರಾಂಶ ಭಂಡಾರಗಳು ಇವೆರಡು: librfid Archived 2006-04-29 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು libnfc.

ಸಂಭಾವ್ಯ ಉಪಯುಕ್ತತೆಗಳು[ಬದಲಾಯಿಸಿ]

RFID ಹಲವು ವಿವಿಧ ಅನ್ವಯಿಕೆಗಳಲ್ಲಿ RFID ಬಳಸಬಹುದು:[೬೦][೬೧]

 • ಪ್ರವೇಶಾನುಮತಿ ನಿರ್ವಹಣೆ
 • ಸರಕುಗಳ ಮೇಲಿನ ನಿಗಾ ಹಾಗೂ ಚಿಲ್ಲರೆ ವ್ಯಾಪಾರದಲ್ಲಿ RFID
 • ಮನುಷ್ಯರು ಪಶುಪ್ರಾಣಿಗಳ ಮಾಹಿತಿಯ ಜಾಡು ಹಿಡಿಯುವುದು
 • ಟೋಲ್‌ ಸಂಗ್ರಹ ಮತ್ತು ಸಂಪರ್ಕವಿಲ್ಲದೇ ಹಣ ಪಾವತಿ
 • ಯಂತ್ರಗಳಿಂದ ಸ್ಕ್ಯಾನ್‌ ಮಾಡಬಲ್ಲ ಪ್ರವಾಸದ ಪತ್ರಗಳು
 • ಸ್ಮಾರ್ಟ್‌ ಡಸ್ಟ್‌ (ವ್ಯಾಪಕವಾಗಿ ವಿಸ್ತೃತ ಸಂವೇದಕ ಜಾಲಗಳಿಗಾಗಿ)
 • ಸ್ಥಳ-ಆಧಾರಿತ ಸೇವೆಗಳು
 • ದೃಢೀಕರಣ ಪರಿಶೀಲಿಸಲು ಕ್ರೀಡಾ ಸ್ವತ್ತುಗಳ ಮೇಲೆ ನಿಗಾ
 • ವಿಮಾನ ನಿಲ್ದಾಣದಲ್ಲಿ ಸರಕು ನಿಗಾ ವ್ಯವಸ್ಥಾಪನಾ ತಂತ್ರ[೬೨]

ಬಾರ್ಕೋಡ್‌ಗಳ ಸ್ಥಾನ ಪಲ್ಲಟ[ಬದಲಾಯಿಸಿ]

RFID ಟ್ಯಾಗ್‌ಗಳು UPC ಅಥವಾ EAN ಬಾರ್ಕೋಡ್‌ಗಳ ಬದಲಿವ್ಯವಸ್ಥೆಯಾಗಿವೆ. ಇವು ಹಳೆಯ ಬಾರ್ಕೊಡ್‌ ತಂತ್ರಜ್ಞಾನಕ್ಕಿಂತಲೂ ಹಲವಾರು ಮುಖ್ಯ ಸವಲತ್ತುಗಳನ್ನು ಹೊಂದಿವೆ. RFID ಟ್ಯಾಗ್‌ಗಳು ಬಾರ್ಕೋಡ್‌ಗಳ ಸ್ಥಾನವನ್ನು ಸಂಪೂರ್ಣವಾಗಿ ತುಂಬದಿರಲೂಬಹುದು, ಭಾಗಶಃ ಅವುಗಳ ದುಬಾರಿ ಬೆಲೆಯೇ ಇದಕ್ಕೆ ಕಾರಣ; ಅಲ್ಲದೇ, ಒಂದೇ ವಸ್ತುವಿನ ಮೇಲೆ ಮಾಹಿತಿಯ ಹಲವು ಮೂಲಗಳ ಸೌಲಭ್ಯವೂ ಕಾರಣವಾಗಿದೆ. ಇತರೆ ಪೂರಕ ಯೋಜನೆಗಳೊಂದಿಗೆ ಹೊಸ EPC ಸುಲಭವಾಗಿ ಎಟುಕುವ ಬೆಲೆಗಳಲ್ಲಿ ವ್ಯಾಪಕವಾಗಿ ಲಭ್ಯವಿದೆ. ನಿಗಾ ವಹಿಸಬೇಕಾದ ವಸ್ತುಗಳಿಗೆ ಸಂಬಂಧಿತ ಮಾಹಿತಿ ಶೇಖರಣೆಗೆ ಹಲವು (ಮಾಹಿತಿ ಘಟಕಗಳು) ಟೆರಾಬೈಟ್‌ಗಳ ಇರುವ ಜಾಗವೇ ಬೇಕಾಗಿದೆ. ಉಪಯುಕ್ತ ಮಾಹಿತಿ ಪಡೆಯಬೇಕಾದಲ್ಲಿ, RFID ವಿವರ ಶೋಧಿಸಿ ವರ್ಗೀಕರಿಸುವ ಅಗತ್ಯವಿದೆ. RFID ಟ್ಯಾಗ್‌ಗಳನ್ನು ಬಳಸಿ ಪ್ಯಾಲೆಟ್‌ ಮೂಲಕ ಸರಕುಗಳ ನಿಗಾ ವಹಿಸುವ ಸಂಭವವಿದೆ. ಪ್ಯಾಕೇಜ್‌ ಹಂತದಲ್ಲಿ ಅಪೂರ್ವ ಬಾರ್ಕೋಡ್‌ಗಳಿಂದ, ಯುನಿವರ್ಸಲ್‌ ಪ್ರಾಡಕ್ಟ್‌ ಕೋಡ್‌ (UPC) ಅಥವಾ EANನೊಂದಿಗೆ ನಿಗಾ ವಹಿಸುವ ಸಂಭವವಿದೆ. ಗಣಕದ ಯೋಜನೆಯ ವಿಶೇಷ ಆಯ್ಕೆಯಿದ್ದರೂ ಸಹ, ಅಪೂರ್ವ ಗುರುತು RFID ಟ್ಯಾಗ್‌ಗಳಿಗೆ ಕಡ್ಡಾಯವಾಗಿದೆ. RFID ಟ್ಯಾಗ್‌ ದತ್ತಾಂಶ ಕ್ಷಮತೆಯು ಪ್ರತಿಯೊಂದು ವಸ್ತುವಿಗೂ ಅಪೂರ್ವ ಸಂಕೇತ ಹೊಂದಿರುವಷ್ಟು ವಿಶಾಲವಾಗಿದೆ. ಆದರೆ, ಸದ್ಯದ ಬಾರ್ಕೋಡ್‌ಗಳು ವಿಶಿಷ್ಟ ಉತ್ಪನ್ನವೊಂದಕ್ಕೆ ಒಂದೇ ರೀತಿಯ ಸಂಕೇತಕ್ಕೆ ಸೀಮಿತಗೊಂಡಿವೆ. RFID ಟ್ಯಾಗ್‌ಗಳ ಅಪೂರ್ವತೆಯ ಅರ್ಥ, ಸ್ಥಳದಿಂದ ಸ್ಥಳಕ್ಕೆ ವರ್ಗಾವಣೆಗೊಂಡುಗ್ರಾಹಕರ ಕೈಸೇರುವವರೆಗೂ ಅದರ ಸಂಪೂರ್ಣ ಹೆಜ್ಜೆ ಗುರುತುಗಳನ್ನು ಹಿಡಿಯಬಹುದಾಗಿದೆ.ಮಾಹಿತಿ ಸಂಗ್ರಹ ಕೈಬೆರಳ ತುದಿಯಲ್ಲಿರುತ್ತದೆ. ಕಳ್ಳತನ ಮತ್ತು ಇತರೆ ರೀತಿಯ ಉತ್ಪಾದನೆಗಳ ಹಾನಿ ತಡೆಯಲು ನೆರವಾಗಬಹುದು. ಉತ್ಪನ್ನಗಳ ಮಾಹಿತಿ ಪಡೆಯುವುದು ಒಂದು ಪ್ರಮುಖ ಲಕ್ಷಣವಾಗಿದೆ. ಇದು ಟ್ಯಾಗ್‌ನ ಅಪೂರ್ವ ಸಂಜ್ಞೆಯ ಸಂಕೇತ ಹೊಂದಿರುವ RFID ಟ್ಯಾಗ್‌ಗಳು ಹಾಗೂ ವಸ್ತುವಿನ ಕ್ರಮಸಂಖ್ಯೆಯಿಂದಲೂ ಪೂರಕವಾಗಿದೆ. ಗುಣಮಟ್ಟದಲ್ಲಿ ಉಂಟಾಗುವ ಕೊರತೆಗಳನ್ನು ಬಗೆಹರಿಸುವುದು ಹಾಗೂ ದೋಷಪೂರಿತ ಉತ್ಪನ್ನದ ವಾಪಸಾತಿ ಪ್ರಕ್ರಿಯೆಗಳಲ್ಲಿ ತೊಡಗುವ ಉದ್ದಿಮೆಗಳಿಗೆ ನೆರವಾಗಬಹುದು. ಇಷ್ಟೇ ಅಲ್ಲದೆ, ಮಾರಾಟದ ನಂತರ ಗ್ರಾಹಕರ ಹೆಜ್ಜೆಗುರುತುಗಳ ಜಾಡು ಮತ್ತು ಮಾಹಿತಿ ಸಂಗ್ರಹದ ಸಂಬಂಧ ಕಲ್ಪಿಸುತ್ತದೆ. POS ಮಳಿಗೆಗಳ ಹಣಸಂದಾಯದ ಸ್ಥಾನದಲ್ಲೀಗ ನಗದು ಗುಮಾಸ್ತೆಯ ಬದಲಿಗೆ, ಬಾರ್ಕೋಡ್‌ ಸ್ಕ್ಯಾನಿಂಗ್‌ ಅಗತ್ಯವಿರದ RFID-ಸುಸಜ್ಜಿತ ಸ್ವಯಂಚಾಲಿತ ವ್ಯವಸ್ಥೆ ಅಳವಡಿಸುವ ಪ್ರಸ್ತಾಪಗಳೂ ಇವೆ. ಈ ಮೊದಲು ಸದ್ಯದ POS ಸಂಸ್ಕರಣಾ ತಂತ್ರಜ್ಞಾನ ಮತ್ತು RFID ಟ್ಯಾಗ್‌ಗಳು ದುಬಾರಿಯಾಗಿರುವುದರಿಂದ ಇದರ ಬಳಕೆ ವಿರಳ ಮತ್ತು ಸಾಧ್ಯವಾಗುತ್ತಿರಲಿಲ್ಲ. ಆದರೂ, ಒಹಾಯೊದಲ್ಲಿರುವ 'ಇಂಡಸ್ಟ್ರಿ ಸ್ಟ್ಯಾಂಡರ್ಡ್‌' ಎಂಬ ಉಡುಪು-ವಿನ್ಯಾಸ ಮಳಿಗೆ ಮತ್ತು ಧ್ವನಿಮುದ್ರಣಾ ಸ್ಟುಡಿಯೊದಲ್ಲಿ, ಮಳಿಗೆಯುದ್ದಕ್ಕೂ ತ್ವರಿತ ವಹಿವಾಟಕ್ಕೆ ಅವಕಾಶ ನೀಡುವ POS ವ್ಯವಸ್ಥೆಯನ್ನು ಯಶಸ್ವಿಯಾಗಿ ಪ್ರತಿಷ್ಟಾಪಿಸಲಾಯಿತು. ಸದ್ಯ ಲಭ್ಯವಿರುವ ವಿವಿಧ ತಂತ್ರಜ್ಞಾನಗಳ ಅಧ್ಯಯನ ಮಾಡಿ, ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಯಾವ ತಂತ್ರಜ್ಞಾನವು/ತಂತ್ರಜ್ಞಾನಗಳು ಸೂಕ್ತವೆಂಬುದನ್ನು FDA-ನಾಮನಿರ್ದೇಶಿತ ಕಾರ್ಯಪಡೆ ನಿರ್ಧರಿಸಿತು. ಬಾರ್ಕೋಡಿಂಗ್‌ ಸೇರಿದಂತೆ ಎಲ್ಲಾ ತಂತ್ರಜ್ಞಾನಗಳ ಅಧ್ಯಯನ ನಡೆಸಿದ ನಂತರ, RFID ತಂತ್ರಜ್ಞಾನವೇ ಅತ್ಯಂತ ಭರವಸೆಯ ಅಧ್ಯಯನ ಎಂದು ತೋರಿತು. ಸುಲಭ ಲಭ್ಯ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ನಿರ್ದಿಷ್ಟ ಅಗತ್ಯಗಳನ್ನು ಪೂರೈಸಬಹುದೆಂದು ಸಮಿತಿ ತಿಳಿಸಿತು. (ಹೆಚ್ಚಿನ ವಿವರಣೆಗಳಿಗಾಗಿ RFID-FDA-ನಿಯಮಾವಳಿ ಗಳನ್ನು ನೋಡಿ)

ಅಂತರಸ್ಥಾಪಕ ವ್ಯವಸ್ಥೆ/ವಿಜ್ಞಾನ (ಟೆಲಿಮಿಟ್ರಿ)[ಬದಲಾಯಿಸಿ]

ಸಕ್ರಿಯ RFID ಟ್ಯಾಗ್‌ಗಳು ಕಡಿಮೆ-ವೆಚ್ಚದ ದೂರಸಂವೇದಕಗಳಂತೆ ವರ್ತಿಸಬಲ್ಲವು. ಇದು ಅಂತರಮಾಪನವನ್ನು ಮೂಲ ಕೇಂದ್ರಕ್ಕೆ ಪ್ರಸಾರಕ್ಕಾಗಿ ರವಾನೆ ಮಾಡಬಲ್ಲವು. ಅಳವಡಿಸಿದ ಬೀಕನ್‌ಗಳು(ಸಂಜ್ಞೆಗಳು), ಹವಾಮಾನ ವರದಿಗಳು ಮತ್ತು ಶಬ್ದ ಮಟ್ಟದ ತಪಾಸಣೆಗಳ ಮೂಲಕ ರಸ್ತೆಯ ಸ್ಥಿತಿಗತಿಯ ಸಂವೇದನಗಳು ಟ್ಯಾಗೊಮಿಟ್ರಿ [ಸೂಕ್ತ ಉಲ್ಲೇಖನ ಬೇಕು] ಮಾಹಿತಿಯ ಅನ್ವಯಿಕೆಗಳಲ್ಲಿ ಸೇರಿವೆ. ಜಡ ಅಥವಾ ನಿಷ್ಕ್ರಿಯ RFID ಟ್ಯಾಗ್‌ಗಳು ಸಹ ಸಂವೇದಕ ಮಾಹಿತಿಯನ್ನು ವರದಿ ಮಾಡಬಲ್ಲವು. ಉದಾಹರಣೆಗೆ, ನಿಸ್ತಂತುವಿನ ಗುರುತಿಸುವಿಕೆ ಮತ್ತು ಸಂವೇದನಾ ಭಾಗವು ಒಂದು ಜಡ ಟ್ಯಾಗ್‌ ಆಗಿದ್ದು, ಉಷ್ಣಾಂಶ, ವೇಗವರ್ಧನ ಮತ್ತು ವಾಣಿಜ್ಯ ಉಪಯೋಗಿ ಜೆನ್‌2 RFID ಸ್ಕ್ಯಾನರ್‌ಗಳಿಗಾಗಿ ಕ್ಷಮತೆ ಪ್ರಮಾಣವನ್ನು ವರದಿ ಮಾಡಬಲ್ಲದು. ಬಾರ್ಕೋಡ್‌ಗಳೊಂದಿಗೆ ಅಥವಾ ಅವುಗಳ ಸ್ಥಾನದಲ್ಲಿ ಬಳಸಿದ ಸಕ್ರಿಯ ಅಥವಾ ಅರೆ-ಜಡ RFID ಟ್ಯಾಗ್‌ಗಳು, ಸಂಬಂಧಿತ ಉತ್ಪನ್ನ ಮಳಿಗೆಯಲ್ಲಿವೆಯೇ ಎಂದು ತಿಳಿಸಲು ಅಲ್ಲಿರುವ ಗ್ರಾಹಕ ಉಪಕರಣಕ್ಕೆ ಸಂಕೇತ ರವಾನಿಸಬಹುದು.

ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಸಿಬ್ಬಂದಿ ಗುರುತಿಸುವಿಕೆ[ಬದಲಾಯಿಸಿ]

ಜುಲೈ 2004ರಲ್ಲಿ USನ ಅಹಾರ ಮತ್ತು ಔಷಧ ಆಡಳಿತವಿಭಾಗದ ತೀರ್ಪಿನ ಪ್ರಕಾರ , ಆಸ್ಪತ್ರೆಗಳು ರೋಗಿಗಳ ಗುರುತು ಹಾಗೂ,ವೈದ್ಯಕೀಯ ದಾಖಲೆಗಳತ್ತ ಸಂಬಂಧಿತ ಆಸ್ಪತ್ರೆ ಸಿಬ್ಬಂದಿಗೆ ಪ್ರವೇಶಾನುಮತಿ ನೀಡಲು RFID ವ್ಯವಸ್ಥೆ ಬಳಸಬಹುದೇ ಎಂದು ನಿರ್ಣಯಿಸಲು ಒಂದು ಅಂತಿಮ ಪರಿಶೀಲನಾ ಸಭೆ ನಡೆಸಲಾಯಿತು. ಅಂದಿನಿಂದಲೂ, U.S.ನಲ್ಲಿರುವ ಹಲವು ಆಸ್ಪತ್ರೆಗಳು ತಮ್ಮ ರೋಗಿಗಳಲ್ಲಿ RFID ಟ್ಯಾಗ್‌ ಅಳವಡಿಸಿ, ಚಿಕಿತ್ಸೆಯ ಕಾರ್ಯಪ್ರಗತಿ ಮತ್ತು ತಪಸೀಲು ನಿರ್ವಹಣೆಗಾಗಿ RFID ವಿಧಾನಗಳನ್ನು ಬಳಸುತ್ತಿವೆ.[೬೩]

ಆಸ್ಪತ್ರೆಗಳಲ್ಲಿ RFID ವ್ಯವಸ್ಥೆ ಅಳವಡಿಸಿದರ ಫಲವಾಗಿ, ಆಸ್ಪತ್ರೆಯ ಶುಶ್ರೂಷಕಿಯರು ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ಚಟುವಟಿಕೆಗಳ ಮೇಲೆ ಹೆಚ್ಚಿದ ಬೇಹುಗಾರಿಕೆ, ಅಥವಾ ಕ್ರಮ ತೀವ್ರಗೊಂಡ ಪುರಾವೆಗಳಿವೆ.[೬೪] 

IVF (ವಿಟ್ರೊ ಫರ್ಟಿಲೈಜೇಶನ್ )ಚಿಕಿತ್ಸಾಲಯಗಳಲ್ಲಿ ವೀರ್ಯಾಣು ಮತ್ತು ಅಂಡಾಣುಗಳ ಕಲಬೆರಕೆ ತಡೆಗಟ್ಟಲು RFID ಬಳಕೆಯನ್ನು ಪರಿಗಣಿಸಲಾಗಿದೆ [೧೦]. USAದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಅಳವಡಿಸಬಹುದಾದ RFID ಚಿಪ್‌ಗಳನ್ನು FDA ಅಕ್ಟೋಬರ್‌ 2004ರಲ್ಲಿ ಮಂಜೂರು ಮಾಡಿತು. RFID ಚಿಪ್‌ ತಯಾರಿಸುವ ವೆರಿಚಿಪ್ ಕಾರ್ಪ್‌ ಉದ್ದಿಮೆ ಪ್ರಕಾರ, ಈ 134 kHz (ಕಿಲೊಹರ್ಟ್ಜ್‌) RFID ಚಿಪ್‌ಗಳಲ್ಲಿ ವೈಯಕ್ತಿಕ ವೈದ್ಯಕೀಯ ವಿವರಗಳನ್ನು ಶೇಖರಿಸಬಹುದು. ಇದರಿಂದಾಗಿ ಜೀವ ರಕ್ಷಣೆ ಮತ್ತು ವೈದ್ಯಕೀಯ ಚಿಕಿತ್ಸಾ ಸಮಯ ಸಂಭವಿಸಬಹುದಾದ ದೋಷಗಳನ್ನು ಕನಿಷ್ಠಗೊಳಿಸಬಹುದಾಗಿದೆ ಹೂಡಿಕೆದಾರರೊಂದಿಗೆ ನಡೆದ ವಿಡಿಯೊ ಕಾನ್ಫೆರನ್ಸ್ ಮೂಲಕ ಸಂವಾದ ನಡೆಸಿದಾಗ FDA ಮಂಜೂರಾತಿಯ ಬಗ್ಗೆ ತಿಳಿಸಲಾಯಿತು. ಇದರ ಸಮ್ಮತಿಯ ಮರುಕ್ಷಣದಲ್ಲೇ, ಲೇಖಕರು ಹಾಗೂ RFID-ವಿರೋಧಿ ಕಾರ್ಯಕರ್ತೆಯರಾದ ಕ್ಯಾಥರೀನ್‌ ಆಲ್ಬ್ರೆಕ್ಟ್‌ ಮತ್ತು ಲಿಝ್‌ ಮೆಕಿಂಟೈರ್‌, ವೆರಿಚಿಪ್‌ನಿಂದ ಆರೋಗ್ಯದ ಮೇಲಾಗುವ ತೀವ್ರ ಅಪಾಯಗಳ Archived 2012-03-23 ವೇಬ್ಯಾಕ್ ಮೆಷಿನ್ ನಲ್ಲಿ. ನ್ನು ನಮೂದಿಸಿದ FDA ದಿಂದ ಬಂದ ಪತ್ರವೊಂದನ್ನು ಪತ್ತೆಹಚ್ಚಿದರು. FDA ಪ್ರಕಾರ, ಈ ಅಪಾಯಗಳೆಂದರೆ 'ಅಂಗಾಂಶದ ವ್ಯತಿರಿಕ್ತ ಪ್ರತಿಕ್ರಿಯೆ', 'ಅಳವಡಿಸಿದ ಗ್ರಾಹಕ-ಪ್ರೇಷಕದ ವರ್ಗಾವಣೆ', 'ಗ್ರಾಹಕ-ಪ್ರೇಷಕದ ವೈಫಲ್ಯ', 'ವಿದ್ಯುತ್‌ ಅಪಾಯಗಳು' ಮತ್ತು 'ಆಯಸ್ಕಾಂತೀಯ ಅನುರಣನ ಸಂಕೇತಿಸುವಿಕೆ [MRI] ಹೊಂದಿಕೊಳ್ಳದಿರುವುದು' ಎನ್ನಬಹುದು. ಪಿಟ್ಸ್‌ಬರ್ಗ್‌ನಲ್ಲಿರುವ ಸೇಂಟ್‌ ಕ್ಲೇರ್‌ ಆಸ್ಪತ್ರೆಯಲ್ಲಿ RFID ಮತ್ತು ಬಾರ್ಕೋಡ್‌-ಆಧಾರಿತ ರೋಗಿಯ ಹಾಸಿಗೆಬದಿಯ ಚಿಕಿತ್ಸಾ ಪರಿಶೀಲನಾ ವ್ಯವಸ್ಥೆಯನ್ನು ಅಳವಡಿಸಿದೆ. ಔಷಧೀಯ ಚಿಕಿತ್ಸೆಯಲ್ಲಿ ಉಂಟಾಗುವ ದೋಷಗಳ ಕಡಿಮೆಗೊಳಿಸಿ, ಇದು ರೋಗಿಗಳ ಸುರಕ್ಷೆಯನ್ನು ಕೂಡಾ ಉತ್ತಮಗೊಳಿಸುತ್ತದೆ. ಶುಶ್ರೂಷೆ ಸಿಬ್ಬಂದಿಯವರು ಒಯ್ಯಬಹುದಾದ RFID ಸ್ಕ್ಯಾನರ್‌ ಮತ್ತು ಬಾರ್ಕೋಡ್‌ ಸ್ಕ್ಯಾನರ್‌ ಸುಸಜ್ಜಿತ PDA(ಅಂಕಿಅಂಶಗಳುಳ್ಳ ದಿನಚರಿಯ ಕೈಪಿಡಿ) ಬಳಸಿ, ರೋಗಿಯ ಗುರುತು ಮತ್ತು ಔಷಧ ವಿವರಗಳನ್ನು ಪರಿಶೀಲಿಸುತ್ತಾರೆ. IV ಪಂಪ್‌ಗಳ ಮೂಲಕ ನೀಡುವ ಔಷಧಗಳು ಸೇರಿದಂತೆ, ಯಾವುದನ್ನೇ ನೀಡುವ ಮುನ್ನ ಈ ವಿವರ ಪರಿಶೀಲಿಸುತ್ತಾರೆ.[೬೫] ಗೃಹ ಆರೋಗ್ಯಕ್ಷೇತ್ರದಲ್ಲಿನ ಮೋಸಗಾರಿಕೆ ತಡೆಗಟ್ಟಲು, 'ಔಷಧೀಯ ಶುಶ್ರೂಷೆ ಮತ್ತು ನೆರವು ಸೇವಾ ಕೇಂದ್ರಗಳು' ಗೃಹ ಆರೋಗ್ಯಕ್ಷೇತ್ರ ಉದ್ದಿಮೆಯ ಪರಾಮರ್ಶೆಯನ್ನು ತೀವ್ರಗೊಳಿಸುವ ಬಗ್ಗೆ ಪ್ರಕಟಿಸಿತು. ಮಾರ್ಚ್‌ 2009ರಲ್ಲಿ, ನ್ಯೂಯಾರ್ಕ್‌ನ 'ಎಲೀಟ್‌ ಮೆಡಿಕಲ್‌ ಸಪ್ಲೈ' ಎಂಬ ವೈದ್ಯಕೀಯ ವಲಯದ ಬಾಳಿಕೆಖಾತ್ರಿ ಉಪಕರಣ ಸರಬರಾಜುದಾರ ಸಂಸ್ಥೆಯು ಈ ಔಷಧ ವಲಯದ ಮೋಸಗಾರಿಕೆಯ ವಿರುದ್ಧ ಹೋರಾಟದಲ್ಲಿ ಸಹಕರಿಸಲು ಮುಂದಾಯಿತು. ಈ ಪ್ರಕ್ರಿಯೆಗಾಗಿ ಅವರು CYBRAದ ಎಡ್ಜ್‌ಮ್ಯಾಜಿಕ್‌ RFID ಮತ್ತು ಬಾರ್ಕೋಡ್‌ ತಂತ್ರಾಂಶ ಆಯ್ಕೆ ಮಾಡಿಕೊಂಡರು. [೧೧] Archived 2009-06-05 ವೇಬ್ಯಾಕ್ ಮೆಷಿನ್ ನಲ್ಲಿ.

ನಿಯಂತ್ರಣ ಮತ್ತು ಗುಣಮಟ್ಟದ ವಿಶ್ಲೇಷಣೆ[ಬದಲಾಯಿಸಿ]

RFIDಗೆ ಬಳಸಲಾದ (ರೇಡಿಯೊ ತರಂಗಗಳು) ಅವರ್ತನಗಳ ಕುರಿತು ನೀತಿ-ನಿಯಮಾವಳಿ ವಿಧಿಸುವ ಯಾವುದೇ ಜಾಗತಿಕ ಪ್ರಾಧಿಕಾರವಿಲ್ಲ. ತತ್ವಕ್ಕನುಗುಣವಾಗಿ, ಪ್ರತಿ ದೇಶವೂ ತನ್ನದೇ ಆದ ಸೂತ್ರಗಳನ್ನು ರೂಪಿಸಿಕೊಳ್ಳಬಹುದು. RFIDಗಾಗಿ ತರಂಗಾಂತರಣ ವಿತರಣೆಯ ಕುರಿತು ಪ್ರಮುಖ ಪ್ರಾಧಿಕಾರಗಳು ಕೆಳಕಂಡಂತಿವೆ:

ಕಡಿಮೆ ತರಂಗಾಂತರಣ (LF: 125–134.2 kHz ಮತ್ತು 140–148.5 kHz) (ಲೋFID) ಟ್ಯಾಗ್‌ಗಳು ಮತ್ತು ಹೆಚ್ಚಿನ ತರಂಗಾಂತರಣ (HF: 13.56 MHz) (ಹೈFID) ಟ್ಯಾಗ್‌ಗಳನ್ನು ಸೂಕ್ತ ಅನುಮತಿ ಇಲ್ಲದೇ ಜಾಗತಿಕವಾಗಿ ಬಳಸಬಹುದು. ಏಕರೂಪದ ಜಾಗತಿಕ ಮಾಪನವಿಲ್ಲದ ಕಾರಣ, ಅತಿಹೆಚ್ಚು ತರಂಗಾಂತರಣ (UHF: 868–928 MHz) (ಅಲ್ಟ್ರಾ-ಹೈFID ಅಥವಾ UHFID) ಟ್ಯಾಗ್‌ಗಳನ್ನು ಜಾಗತಿಕವಾಗಿ ಬಳಸಲಾಗದು. ಉತ್ತರ ಅಮೆರಿಕಾದಲ್ಲಿ, 902–928& MHzಗಾಗಿ (915 MHz ಮಧ್ಯದ ಪುನರಾವರ್ತಿತ ತರಂಗಗಳ ±13 MHz) UHFನ್ನು ಬಳಸಲು ಅನುಮತಿಯ ಅಗತ್ಯವಿಲ್ಲ; ಆದರೆ ಪ್ರಸರಣಾ ಶಕ್ತಿಗೆ ನಿರ್ಬಂಧಗಳು ಅನ್ವಯಿಸುತ್ತವೆ. ಯುರೋಪ್‌ನಲ್ಲಿ RFID ಮತ್ತು ಇತರೆ ಕಡಿಮೆ-ಸಾಮರ್ಥ್ಯದ ರೇಡಿಯೊ ಅನ್ವಯಿಕೆಗಳು: ETSI ಶಿಫಾರಸುಗಳಾದ EN 300 220, EN 302 208 ಹಾಗೂ ERO ಶಿಫಾರಸು 70 03 - ಇವುಗಳಡಿ ನಿಯಮಾಧೀನವಾಗಿವೆ. ಇದರಂತೆ, 865–868 MHzರಿಂದ ಸ್ವಲ್ಪಮಟ್ಟಿಗಿನ ಬ್ಯಾಂಡ್‌ ನಿರ್ಬಂಧಗಳೊಂದಿಗೆ RFID ನಿರ್ವಹಣೆಗೆ ಅವಕಾಶವುಂಟು. ಸ್ಕ್ಯಾನರ್‌ಗಳು ಚಾನೆಲ್‌ ಒಂದನ್ನು ಪ್ರಸಾರಿಸುವ ಮುನ್ನ ಅದರ ಮೇಲೆ ನಿಗಾ ವಹಿಸುವ ಅಗತ್ಯವಿರುತ್ತದೆ ('ಲಿಸೆನ್ ಬಿಫೋರ್‌ ಟಾಕ್'‌) ಈ ಅಗತ್ಯದಿಂದ ಪ್ರತಿಭೆಯ ಪ್ರದರ್ಶನ ಮತ್ತು ಕ್ರಿಯಾಶೀಲತೆಯ ಮೇಲೆ ನಿರ್ಬಂಧಗಳಾಗುತ್ತವೆ. ಈ ಸಮಸ್ಯೆಯ ಪರಿಹಾರವು ಸದ್ಯದ ಸಂಶೋಧನೆಯ ವಿಷಯವಾಗಿದೆ. ಉತ್ತರ ಅಮೆರಿಕಾದ UHF ಪ್ರಮಾಣಗಳು ಫ್ರಾನ್ಸ್‌ನಲ್ಲಿ ಸ್ವೀಕಾರವಾಗುವದಿಲ್ಲ, ಏಕೆಂದರೆ ಮಿಲಿಟರಿ ಬ್ಯಾಂಡ್‌ಗಳ ಕಾರ್ಯಾಚರಣೆಗೆ ಇವು ಅಡಚಣೆಯಾಗಬಹುದೆಂಬ ಅನುಮಾನವಿದೆ. ಚೀನಾ ಮತ್ತು ಜಪಾನ್‌ ದೇಶಗಳಲ್ಲಿ, UHF ಬಳಕೆಗೆ ಯಾವುದೇ ನೀತಿ-ನಿಯಮಾವಳಿಗಳಿಲ್ಲ. ಈ ದೇಶಗಳಲ್ಲಿ UHFಗಾಗಿ ಪ್ರತಿಯೊಂದು ಅರ್ಜಿಗೂ ಒಂದು ಸೈಟ್‌‌ ಲೈಸೆನ್ಸ್‌ ಅಗತ್ಯವಿದೆ. ಸ್ಥಳೀಯ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನು ಅನೂರ್ಜಿತಗೊಳಿಸಲೂಬಹುದು. ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್‌ ದೇಶಗಳಲ್ಲಿ 918–926 MHz ಪುನರಾವರ್ತಿತ ತರಂಗಗಳು ಪರವಾನಿಗೆ ರಹಿತವಾದ್ದಲ್ಲ. ಆದರೆ ವಿದ್ಯುತ್ ಶಕ್ತಿ ರವಾನೆಗೆ ಮಾತ್ರ ನಿರ್ಬಂಧಗಳುಂಟು. ಈ ಪುನರಾವರ್ತಿತ ತರಂಗಗಳ ISM ಬ್ಯಾಂಡ್‌ಗಳು (ಕೈಗಾರಿಕಾ ವೈಜ್ಞಾನಿಕ ಮತ್ತು ವೈದ್ಯಕೀಯ ಬ್ಯಾಂಡ್‌ಗಳು) ಎನ್ನಲಾಗಿವೆ. ಟ್ಯಾಗ್‌ನ 'ಪ್ರತಿ' ಸಂಕೇತವು ಇತರೆ ರೇಡಿಯೊ ಬಳಕೆದಾರರಲ್ಲಿ ಅಡಚಣೆಗಳನ್ನುಂಟು ಮಾಡಬಲ್ಲವು. RFID ತಂತ್ರಜ್ಞಾನ ಕುರಿತು ಮಾಡಲಾದ ಕೆಲವು (ಗುಣಮಟ್ಟ ನಿರ್ಧಾರಕಗಳು)ಪ್ರಮಾಣಕಗಳು ಹೀಗಿವೆ:

 • ISO 14223/1 – ಪ್ರಾಣಿಗಳ ರೇಡಿಯೊ ಫ್ರೀಕ್ವೆನ್ಸಿ ಗುರುತಿಸುವಿಕೆ, ಆಧುನಿಕ ಗ್ರಾಹಕ-ಪ್ರೇಷಕಗಳು - ಗಾಳಿಯ ಅಂತರಮುಖ.
 • ISO/IEC 14443: ICAO 9303ಯಡಿ RFID-ಸಕ್ರಿಯ ಪಾಸ್ಪೋರ್ಟ್‌ಗಳ ಆಧಾರವಾಗಿ ಬಳಸಲಾದ ಹೈFIDಗಳಿಗೆ ಇದು ಜನಪ್ರಿಯ HF (13.56 MHz) ಪ್ರಮಾಣಕವಾಗಿದೆ.
 • ISO 15693: ಸ್ಪರ್ಶರಹಿತ ಸ್ಮಾರ್ಟ್‌ ಪೇಮೆಂಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳಿಗೆ ಬಳಸಲಾದ ಹೈFIDಗಳಿಗೆ ಇದು ಜನಪ್ರಿಯ HF (13.56 MHz) ಪ್ರಮಾಣಕವಾಗಿದೆ.
 • ISO/IEC 18000: ಮಾಹಿತಿ ತಂತ್ರಜ್ಞಾನ - ವಸ್ತುಗಳ ನಿರ್ವಹಣೆಗಾಗಿ ರೇಡಿಯೊ ಫ್ರಿಕ್ವೆನ್ಸಿ ಗುರುತಿಸುವಿಕೆ:
  • ಭಾಗ 1: ಉಲ್ಲೇಖನ ರಚನೆ ಮತ್ತು ಪ್ರಮಿತಿಗಳ ವ್ಯಾಖ್ಯಾನಗಳನ್ನು ಪ್ರಮಾಣಕವಾಗಿಸಬೇಕಿದೆ.
  • ಭಾಗ 2: 135 kHzಗಿಂತಲೂ ಕಡಿಮೆಯಿರುವ ಗಾಳಿಯ ಅಂತರಮುಖ ಸಂವಹನಗಳಿಗಾಗಿ ಮಾನದಂಡಗಳು
  • ಭಾಗ 3: 13.56& MHz ತರಂಗಾಂತರಣಗಳಲ್ಲಿ ಗಾಳಿಯ ಅಂತರಮುಖ ಸಂವಹನಗಳಿಗೆ ಮಾನದಂಡಗಳು MODE 1 ಮತ್ತು MODE 2.
  • ಭಾಗ 4: 2.45 GHz ತರಂಗಾಂತರಣಗಳಲ್ಲಿ ಗಾಳಿಯ ಅಂತರಮುಖ ಸಂವಹನಗಳಿಗೆ ಮಾನದಂಡಗಳು.
  • ಭಾಗ 6: 860-960 MHz ತರಂಗಾಂತರಣಗಳಲ್ಲಿ ಗಾಳಿಯ ಅಂತರಮುಖ ಸಂವಹನಗಳಿಗೆ ಮಾನದಂಡ.
  • ಭಾಗ 7: 433 MHz ತರಂಗಾಂತರಣಗಳಲ್ಲಿ ಸಕ್ರಿಯ ಗಾಳಿಯ ಅಂತರಮುಖ ಸಂವಹನಗಳಿಗಾಗಿ ಮಾನದಂಡಗಳು.
 • ISO 18185: 433 MHz ಮತ್ತು 2.4 GHz ತರಂಗಾಂತರಣಗಳನ್ನು ಬಳಸಿ ಸರಕಿನ ಕಂಟೇನರ್‌ಗಳ ಜಾಡು ಹಿಡಿಯಲು ವಿದ್ಯುನ್ಮಾನ ಸೀಲ್‌ಗಳು ಅಥವಾ ಇ-ಸೀಲ್‌ಗಳಿಗಾಗಿ ಉದ್ಯಮ ಮಟ್ಟದಲ್ಲಿ ಪ್ರಮಾಣಕರಣ ಮಾಡಬಹುದಾಗಿದೆ.
 • EPCಗ್ಲೋಬಲ್‌ - ವಿಶ್ವದ ಎಲ್ಲಾ ದೃಢ ಗುಣಮಟ್ಟದ ಪ್ರಮಾಣಕಗಳಂತೆ, (ಸುಂಕ ನಿಯಮಾವಳಿಗಳು, ವಿಮಾನ ಸಂಚಾರ ನಿಯಮಾವಳಿಗಳು ಮತ್ತು ಇತರೆ ನಿಯಮಾವಳಿಗಳಂತೆ ನಿಯಮಿತ ಧ್ಯೇಯಗಳೊಂದಿಗೆ ಕಾರ್ಯನಿರ್ವಹಿಸದಿದ್ದಲ್ಲಿ) ಇದು ಬಹುಶಃ ISO ನಿಯಮಗಳಡಿ ಅಂತಾರಾಷ್ಟ್ರೀಯ ಪ್ರಮಾಣಕೀಕರಣಗೊಳ್ಳುವ ಗುಣಮಟ್ಟ ನಿರ್ಧರಿಸುವ ಚೌಕಟ್ಟಾಗಿದೆ. ಸದ್ಯಕ್ಕೆ ದೊಡ್ಡ ಪ್ರಮಾಣದ ವಿತರಕರು ಮತ್ತು ಸರ್ಕಾರೀ ಗ್ರಾಹಕರು ತಮ್ಮ ಸಮುದಾಯದಲ್ಲಿ ಸರ್ವ-ಸ್ವೀಕೃತವಾದ ಪ್ರಮಾಣವೆಂದು EPCಗಾಗಿ ಒತ್ತು ನೀಡುತ್ತಿದ್ದಾರೆ. ಆದರೆ ವಿಶ್ವದ ಇತರೆಡೆ ಇದರ ಅನುಮೋದನೆ ಇನ್ನೂ ಆಗಬೇಕಿದೆ.
 • ASTM D7434: ಇದು ಪ್ಯಾಲೆಟ್‌-ಮಾಡಲಾದ, ಅಥವಾ ಏಕಮಾನ ಮಾಡಲಾದ ಸರಕುಗಳ ಮೇಲೆ ಜಡ ರೇಡಿಯೊ ಫ್ರಿಕ್ವೆನ್ಸಿ ಗುರುತಿನ (RFID) ಗ್ರಾಹಕ-ಪ್ರೇಷಕಗಳ ಕ್ರಿಯಾಶೀಲತೆಯನ್ನು ನಿರ್ಣಯಿಸಲು ಇದು ಪ್ರಮಾಣಕವಾದ ಪ್ರಯೋಗವಾಗಿದೆ.
 • ASTM D7435: ಇದು ಸರಕುಗಳ ಕಂಟೇನರ್‌ಗಳ ಮೇಲೆ ಜಡ ರೇಡಿಯೊ ಫ್ರಿಕ್ವೆನ್ಸಿ ಗುರುತಿನ (RFID) ಗ್ರಾಹಕ-ಪ್ರೇಷಕಗಳ ಕ್ರಿಯಾಶೀಲತೆ ನಿರ್ಣಯಿಸಲು ಇದು ಪ್ರಮಾಣಕವಾದ ಪ್ರಾಯೋಗಿಕ ವಿಧಾನವಾಗಿದೆ.
 • ASTM D7580: ಒಂದೇ ಬಗೆಯ ಪ್ಯಾಲೆಟ್‌ ಅಥವಾ ಏಕಮಾನ ಮಾಡಿದ ಸರಕುಗಳ ಮೇಲೆ ಜಡ ರೇಡಿಯೊ ಫ್ರಿಕ್ವೆನ್ಸಿ ಗುರುತಿನ (RFID) ಗ್ರಾಹಕ-ಪ್ರೇಷಕಗಳ ಕ್ರಿಯಾಶೀಲತೆಯನ್ನು ನಿರ್ಣಯಿಸಲು ರೊಟರಿ ಸ್ಟ್ರೆಚ್‌ ರಾಪರ್‌ ರೀತಿಯಲ್ಲಿ ಇದು ಪ್ರಮಾಣಕ ಪ್ರಯೋಗದ ವಿಧಾನವಾಗಿದೆ.

EPC ಜೆನ್‌2[ಬದಲಾಯಿಸಿ]

EPC ಜೆನ್‌2 ಎಂಬುದು EPCಗ್ಲೋಬಲ್‌ UHF ಕ್ಲಾಸ್‌ 1 ಜನರೇಷನ್‌ 2 ರ ಸಂಕ್ಷಿಪ್ತ ರೂಪವಾಗಿದೆ. ವಿಶ್ವಾದ್ಯಂತ ಉದ್ದಿಮೆಗಳಿಗಾಗಿ ಪೂರೈಕೆ ಸರಣಿಯಲ್ಲಿರುವ ಹಲವು ವಸ್ತುಗಳ ಗುರುತಿಸಲು EPCಗ್ಲೋಬಲ್‌ (GS1 ಮತ್ತು GS1 US ನಡುವಿನ ಒಂದು ಸಹಯೋಗ ಉದ್ಯಮ), ಬಹುಮಟ್ಟಿಗೆ ಜಡ RFID ಮತ್ತು EPCಯ ಬಳಕೆಗಾಗಿ ಅಂತಾರಾಷ್ಟ್ರೀಯ ಪ್ರಮಾಣಕಗಳ ಕುರಿತು ಕಾರ್ಯ ಕೈಗೊಂಡಿದೆ. ಪ್ರಪಂಚದಾದ್ಯಂತ 1990ರ ದಶಕದಲ್ಲಿ RFID ಗೊಂದಲಮಯ ನಿಯಮಾವಳಿಗಳನ್ನು ಸರಳಗೊಳಿಸುವುದು EPCಗ್ಲೋಬಲ್‌ನ ಧ್ಯೇಯಗಳಲ್ಲೊಂದಾಗಿತ್ತು. 2003ಗೆ ಮುಂಚೆ EPCಗ್ಲೋಬಲ್‌, ಎರಡು ಟ್ಯಾಗ್‌ ಏರ್‌ ಅಂತರಮುಖಗಳಿಗೆ (ಟ್ಯಾಗ್‌ ಮತ್ತು ಸ್ಕ್ಯಾನರ್‌ ನಡುವೆ ಮಾಹಿತಿ ವಿನಿಮಯದ ನಿಯಮಾವಳಿ) ವ್ಯಾಖ್ಯಾನ ನೀಡಿತು (ಆದರೆ ಅದನ್ನು ಅನುಮೋದಿಸಿರಲಿಲ್ಲ). ಸಾಮಾನ್ಯವಾಗಿ ಕ್ಲಾಸ್ 0 ಮತ್ತು ಕ್ಲಾಸ್‌ 1 ನಿಯಮಾವಳಿಗಳ ವಾಣಿಜ್ಯಮಟ್ಟದ ಅಳವಡಿಕೆಯ ಮಹತ್ವವನ್ನು 2002-2005ರ ಅವಧಿಯಲ್ಲಿ ಕಂಡುಕೊಳ್ಳಲಾಯಿತು. ಕ್ಲಾಸ್‌ 0 ಮತ್ತು ಕ್ಲಾಸ್‌ 1 ಟ್ಯಾಗ್‌ಗಳಲ್ಲಿ ಉಂಟಾಗುವ ಹಲವು ತೊಂದರೆಗಳನ್ನು ಬಗೆಹರಿಸಲು, 2004ರಲ್ಲಿ ಹಾರ್ಡ್‌ವೇರ್‌ ಆಕ್ಷನ್‌ ಗ್ರೂಪ್‌ 'ಕ್ಲಾಸ್‌ 1 ಜನರೇಷನ್‌ 2 ಅಂತರಮುಖ' ಎಂಬ ಹೊಸ ನಿಯಮಾವಳಿ ರಚಿಸಿತು. ಡಿಸೆಂಬರ್‌ 2004ರಲ್ಲಿ EPC ಜೆನ್‌2 ಗುಣಮಟ್ಟವನ್ನು ಸಮ್ಮತಿಸಲಾಯಿತು. ನಂತರದ,ಬೆಳವಣಿಗೆಗಳಲ್ಲಿ ಇದು ಜಡ RFID ಟ್ಯಾಗ್‌ ಗುಣಮಟ್ಟದ ದರ್ಜೆ ನಿರ್ಧರಿಸುವಲ್ಲಿ ಆಧಾರವಾಗುವ ಸಾಧ್ಯತೆಯಿದೆ. ಈ ಪ್ರಮಾಣಕವು ತಮ್ಮ RFID-ಸಂಬಂಧಿತ ಹಕ್ಕುಸ್ವಾಮ್ಯಗಳ ಉಲ್ಲಂಘನೆಯಾಗಬಹುದು ಎಂದು ಇಂಟರ್ಮೆಕ್‌ ಸಂಸ್ಥೆಯು ವಾದಿಸಿದ ನಂತರ ಈ ವಿಷಯಕ್ಕೆ ಅನುಮೋದಿಸಲಾಯಿತು. ಪ್ರಮಾಣಕವು ಇಂಟರ್ಮೆಕ್‌ನ ಹಕ್ಕುಸ್ವಾಮ್ಯಗಳನ್ನು ಉಲ್ಲಂಘಿಸಿಲ್ಲ ಎಂದು ತೀರ್ಮಾನಿಸಲಾಯಿತು. ಆದರೆ, ಟ್ಯಾಗ್‌‌ನ್ನು ಒಂದು ವಿಶಿಷ್ಟ ರೀತಿಯಲ್ಲಿ ಸ್ಕ್ಯಾನ್‌ ಮಾಡಬೇಕಾದಲ್ಲಿ, ಇಂಟರ್ಮೆಕ್‌ ಸಂಸ್ಥೆಗೆ ರಾಯಧನ ನೀಡಬೇಕಾಗಬಹುದು ಎಂದೂ ಸಹ ತೀರ್ಮಾನಿಸಲಾಯಿತು. ಸಣ್ಣ ಪ್ರಮಾಣದ ಪರಿವರ್ತನೆಯ ನಂತರ, 2006ರಲ್ಲಿ EPC ಜೆನ್‌2 ಪ್ರಮಾಣವನ್ನು ISO 18000-6C ರೂಪದಲ್ಲಿ ಆಯ್ದುಕೊಳ್ಳಲಾಯಿತು. ಸ್ಮಾರ್ಟ್‌ಕೋಡ್‌ ಸಂಸ್ಥೆಯು ಜೆನ್‌2 EPCಯ ಕನಿಷ್ಠ ಬೆಲೆಯನ್ನು ಒಂದಕ್ಕೆ $0.05 ನಂತೆ, 100 ದಶಲಕ್ಷ ಅಥವಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಸ್ತುತಪಡಿಸುತ್ತದೆ.[೬೬] ಅದೇನೇ ಇರಲಿ, (ಹೆಚ್ಚುವರಿ ಅಂಶಗಳ ಸೇರ್ಪಡೆ ಅಥವಾ ಕೋಶನಿಕ್ಷೇಪನದ ಸಂಸ್ಕರಣ/ಅಳವಡಿಕೆ ಮತ್ತು ಘಟಕಕ್ಕೆ ಅಥವಾ DCಗೆ ಸರಕು ಸಾಗಣೆ ವೆಚ್ಚ ಸೇರಿದಂತೆ) ಇನ್ನಷ್ಟು ಪರಿವರ್ತನೆ ಮತ್ತು ಅಂತರ್ನಿಕ್ಷೇಪನೆಗಳನ್ನು ಉಪಯುಕ್ತ RFID ಅಂಶಗಳಾಗಿಸುವುದು.ಸದ್ಯದ ಜೆನ್‌2 ನಿಯಮಾವಳಿ ಪ್ರಮಾಣಕದ ವಿನ್ಯಾಸದಿಂದಾಗಿ (ವಿಶಿಷ್ಟವಾಗಿ, RFID ಪೂರೈಕೆ ಸರಣಿಯ ವಸ್ತು-ಮಟ್ಟದಲ್ಲಿ ಟ್ಯಾಗಿಂಗ್‌ಗಾಗಿ ಭದ್ರತಾ ಲಕ್ಷಣ ವಿಸ್ತರಣೆಗಳನ್ನು ಸೇರಿಸಿದಲ್ಲಿ) ಅಲ್ಲಿನ ಅಂತಿಮ-ವೆಚ್ಚ ಅಧಿಕವಾಗುತ್ತದೆ. ವಿಶ್ವದೆಲ್ಲೆಡೆ UHF ಜೆನ್‌2 ನಿಯಮಾವಳಿಗಳ ಕುರಿತು ಇತ್ತೀಚಿನ ಮಾಹಿತಿಯ ಪೂರ್ಣ ವಿವರಗಳು Archived 2010-02-21 ವೇಬ್ಯಾಕ್ ಮೆಷಿನ್ ನಲ್ಲಿ. ಇಲ್ಲಿವೆ. ಇದನ್ನು ಕೊನೆಯ ಬಾರಿಗೆ ಜನವರಿ 2009ರಲ್ಲಿ ಪರಿಷ್ಕರಿಸಲಾಗಿದೆ.

ವ್ಯಾಪಾರೀಕರಣ (ವಾಣಿಜ್ಯದ ಸೂತ್ರಗಳು)[ಬದಲಾಯಿಸಿ]

ಹೈFID (13.56 MHz) ವಾಣಿಜ್ಯಮಟ್ಟದ ಉಪಯುಕ್ತತೆಯ ಹೊಸ್ತಿಲಲ್ಲಿದೆ.

ಸಮಸ್ಯೆಗಳು ಮತ್ತು ಕಾಳಜಿಗಳು[ಬದಲಾಯಿಸಿ]

ಜಾಗತಿಕ ಪ್ರಮಾಣೀಕರಣ (ಜಾಗತಿಕ ಮಟ್ಟದ ಗುಣಮಟ್ಟದ ಪರಿಮಾಣ)[ಬದಲಾಯಿಸಿ]

USAದಲ್ಲಿ RFIDಗಾಗಿ ಬಳಸುವ ತರಂಗಾಂತರಣಗಳು ಸದ್ಯಕ್ಕೆ ಯುರೋಪ್‌ ಅಥವಾ ಜಪಾನ್‌ನಲ್ಲಿನ ತರಂಗಾಂತರಣಗಳೊಂದಿಗೆ ಹೊಂದಿಕೊಳ್ಳುತ್ತಿಲ್ಲ. ಇನ್ನೂ ಹೆಚ್ಚಿಗೆ, ಬಾರ್ಕೋಡ್‌ಗೆ ಸಮನಾಗಿರುವ ಯಾವುದೇ ಗುಣಮಟ್ಟದ ಪ್ರಮಾಣಕವು ಇನ್ನೂ ಸಾರ್ವತ್ರಿಕವಾಗಿ ಜಾರಿಗೆ ಬಂದಿಲ್ಲ.[೬೭] (ಬಾರ್ಕೋಡ್‌;ಉತ್ಪಾದನೆಗಳ ಮೇಲಿನ ಅಡ್ಡ-ಉದ್ದ ಅಸಮ ಗೆರೆಗಳು)

ಭದ್ರತಾ ವಿಚಾರಗಳು[ಬದಲಾಯಿಸಿ]

ನ್ಯಾಯಬಾಹಿರ ರೀತಿಯಲ್ಲಿ RFID ಟ್ಯಾಗ್‌ಗಳ ಜಾಡು ಹಿಡಿಯುವುದು ಕೂಡಾ ಒಂದು ಪ್ರಮುಖ RFID ಯ ಕಾಳಜಿಯಾಗಿದೆ. ವಿಶ್ವದೆಲ್ಲೆಡೆ ಗುರುತಿಸಿ ಪತ್ತೆಹಚ್ಚಬಹುದಾದ ಟ್ಯಾಗ್‌ಗಳಿಂದಾಗಿ ವೈಯಕ್ತಿಕ ಸ್ಥಳದ ಗೌಪ್ಯತೆ ಮತ್ತು ಉದ್ದಿಮೆಯ/ಸೇನಾ ಭದ್ರತಾ ವ್ಯವಸ್ಥೆಗೂ ಸಹ ಅಪಾಯವನ್ನೊಡ್ಡಬಹುದು. ಅಮೆರಿಕಾ ಸಂಯುಕ್ತ ಸಂಸ್ಥಾನದ ರಕ್ಷಣಾ ಇಲಾಖೆಯು ಇತ್ತೀಚೆಗೆ ತನ್ನ ಪೂರೈಕೆಗಳ ಸರಣಿ ಆಡಳಿತ ನಿರ್ವಹಣೆಗಾಗಿ RFID ಟ್ಯಾಗ್‌ಗಳನ್ನು ಆಯ್ದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಹಲವೆಡೆ ಕಳವಳ ವ್ಯಕ್ತವಾಗಿದೆ.[೬೮] ಸರ್ವೆಸಾಮಾನ್ಯವಾಗಿ, ಗ್ರಾಹಕ ಉತ್ಪನ್ನಗಳಲ್ಲಿ (EPC) (ವಿದ್ಯುನ್ಮಾನ ಉತ್ಪನ್ನ ಸಂಕೇತ) RFID ಟ್ಯಾಗ್‌ಗಳನ್ನು ಅಳವಡಿಸುವ ಅಥವಾ ಸೇರಿಸುವ ಯತ್ನಗಳ ಸಂದರ್ಭದಲ್ಲಿ ಗೌಪ್ಯತಾ-ಪರ ಸಂಸ್ಥೆಗಳು ತಳಮಳ ವ್ಯಕ್ತಪಡಿಸಿವೆ. ವಿನ್ಯಾಸಕ್ಕೆ ಸಂಬಂಧಿಸಿದಂತೆ, EPCಗ್ಲೋಬಲ್‌ ನೆಟ್ವರ್ಕ್‌ ಸಹ DoS ಅತಿಕ್ರಮಣದ (ದಾಳಿ)ಗಳಿಗೆ ಈಡಾಗುವ ಸಾಧ್ಯತೆಗಳಿವೆ. EPC ದತ್ತಾಂಶ ಕೋರಿಕೆಗಳನ್ನು ಸರಿಪಡಿಸುವದರಲ್ಲಿ DNSನೊಂದಿಗೆ ಇದೇ ರೀತಿ ತಂತ್ರ ಬಳಸಿದರೆ ONS ರೂಟ್‌ ಸರ್ವರ್‌ಗಳು DoS ಅತಿಕ್ರಮಣಗಳಿಗೆ ಈಡಾಗುತ್ತವೆ. EPCಗ್ಲೋಬಲ್‌ ನೆಟ್ವರ್ಕ್‌ (ಕಾರ್ಯ ಜಾಲ) ಆಯ್ದುಕೊಳ್ಳಲು ಯಾವುದೇ ರೀತಿಯ ಯೋಜನೆಯನ್ನು, EPCಗ್ಲೋಬಲ್‌ ನೆಟ್ವರ್ಕ್‌ ವ್ಯವಸ್ಥೆಯು DNSನಂತೆಯೇ ಭದ್ರತಾ ನ್ಯೂನತೆಗಳನ್ನು ಹೊಂದಿರುತ್ತವೆ ಎಂಬುದು ಗೊತ್ತಾದರೆ ತಪ್ಪಿಸಬಹುದು.[೬೯] ಟ್ಯಾಗ್‌ ನಕಲು ಮಾಡುವುದನ್ನು ತಡೆಗಟ್ಟಲು ಎರಡನೆಯ ರೀತಿಯ ಸುರಕ್ಷಾ ವ್ಯವಸ್ಥೆಯು ಗುಪ್ತ ಭಾಷೆಯ ಅಂಶವನ್ನು ಬಳಸುತ್ತದೆ. ಕೆಲವು ಟ್ಯಾಗ್‌ಗಳು 'ರೊಲಿಂಗ್‌ ಕೋಡ್‌'ವ್ಯವಸ್ಥೆಯನ್ನು ಬಳಸುತ್ತದೆ. ಇದರಲ್ಲಿ ಪ್ರತಿಯೊಂದೂ ಸ್ಕ್ಯಾನ್‌ ನಂತರ ಟ್ಯಾಗ್‌ ಗುರುತಿಸುವ ಮಾಹಿತಿ ಬದಲಾಗುತ್ತದೆ. ಇದರಿಂದಾಗಿ ಪ್ರತಿಕ್ರಿಯೆಯ ಉಪಯುಕ್ತತೆ ಕಡಿಮೆಗೊಳಿಸುತ್ತದೆ. ಇನ್ನೂ ಆಧುನಿಕ ಉಪಕರಣಗಳು ಚಾಲೆಂಜ್‌-ರೆಸ್ಪಾನ್ಸ್‌ ಆತೆಂಟಿಕೇಷನ್‌ ಕ್ರಿಯೆಯಲ್ಲಿ ತೊಡಗುತ್ತವೆ. ಇದರಲ್ಲಿ ಟ್ಯಾಗ್‌ ಸ್ಕ್ಯಾನರ್‌ದೊಂದಿಗೆ ಪರಸ್ಪರಕಾರ್ಯ ನಡೆಯುತ್ತದೆ. ಈ ನಿಯಮಾವಳಿಗಳಲ್ಲಿ, ರಹಸ್ಯವಾಗಿರುವ ಮಾಹಿತಿಯನ್ನು ಟ್ಯಾಗ್‌ ಮತ್ತು ಇದರ ಅಕ್ರಮ ಓದುಗನ ನಡುವಿನ ಅಭದ್ರ ಸಂವಹನ ಮಾರ್ಗದಲ್ಲಿ ರವಾನಿಸಲಾಗುವುದಿಲ್ಲ. ಟ್ಯಾಗ್‌ ವಿವರವನ್ನು ಅನಧಿಕೃತವಾಗಿ ಓದುವವರು ಎನ್ನುವುದಕ್ಕಿಂತ ಟ್ಯಾಗ್‌ನತ್ತ ಸವಾಲೆಸೆಯುವರು ಎನ್ನುವುದು ಸೂಕ್ತ. ರಹಸ್ಯ ಸಂಕೇತದೊಂದಿಗೆ ರಚಿಸಿದ ಗುಪ್ತ ಭಾಷೆಯ ಸುತ್ತುಗಳ ಬಳಸಿ ಗಣಿಸಿದ ಮೌಲ್ಯವನ್ನು ಟ್ಯಾಗ್‌ ಪ್ರದರ್ಶಿಸುತ್ತದೆ. ಇಂತಹ ನಿಯಮಾವಳಿಗಳು ಸಮಸೂತ್ರತೆ ಅಥವಾ ಪಬ್ಲಿಕ್‌ ಕೀ ಗುಪ್ತ ಭಾಷೆ ವಿಶ್ಲೇಷಣೆಯನ್ನು ಆಧರಿಸುತ್ತವೆ. ಗುಪ್ತ ಭಾಷೆಯ-ಸುಸಜ್ಜಿತ ಟ್ಯಾಗ್‌ಗಳು ಬಹಳ ದುಬಾರಿಯಾಗಿದ್ದು ಉಳಿದ ಉಪಕರಣಗಳಿಗೆ ಹೋಲಿಸಿದರೆ ಹೆಚ್ಚು ವಿದ್ಯುತ್‌ನ ಅಗತ್ಯ ಹೊಂದಿವೆ. ಇದರ ಪರಿಣಾಮ, ಈ ಟ್ಯಾಗ್‌ಗಳನ್ನು ಆಯಕಟ್ಟಿನ ನೆಲೆಗಳಲ್ಲಿ ನಿಯೋಜನೆ ಅಥವಾ ಅಳವಡಿಕೆ ಸೀಮಿತವಾಗಿದೆ. ಈ ದುಬಾರಿ ವೆಚ್ಚ/ವಿದ್ಯುತ್‌ ಮಿತಿಗಳ ಕಾರಣ, ಕೆಲವು ಉತ್ಪಾದಕರು ಗಮನಾರ್ಹವಾಗಿ ದುರ್ಬಲಗೊಳಿಸಿದ, ಸ್ವಂತಸ್ವಾಮ್ಯದ ಗೂಢಲಿಪೀಕರಣ ಸೂತ್ರಗಳ ಬಳಸಿ ಟ್ಯಾಗ್‌ಗಳನ್ನು ಅಳವಡಿಸುತ್ತಾರೆ. ಇವು ಬಹುಮಟ್ಟಿಗೆ ಅಕ್ರಮಪ್ರವೇಶದ ಅನಧಿಕೃತ ವ್ಯವಸ್ಥಿತ ದಾಳಿಗಳನ್ನು ತಡೆಗಟ್ಟಲಾರವು. ಉದಾಹರಣೆಗೆ, ಎಕ್ಸನ್‌-ಮೊಬಿಲ್‌ ಸ್ಪೀಡ್‌ಪಾಸ್‌ ಸಂಸ್ಥೆಯು, ಟೆಕ್ಸಾಸ್‌ ಇಂಸ್ಟ್ರುಮೆಂಟ್ಸ್‌ ತಯಾರಿಸಿದ ಡಿಜಿಟಲ್‌ ಸಿಗ್ನೇಚರ್‌ ಟ್ರಾನ್ಸ್‌ಪಾಂಡರ್‌ (DST) ಎಂಬ ಗುಪ್ತ ಭಾಷೆಯಿಂದ ಸುಸಜ್ಜಿತ ಟ್ಯಾಗ್‌ನ್ನು ಬಳಸುತ್ತದೆ. ಕಡಿಮೆ ವೆಚ್ಚದಲ್ಲಿ ಇದು ಚಾಲೆಂಜ್‌-ರೆಸ್ಪಾನ್ಸ್‌ ನಿಯಮಾವಳಿಗಳ ಚಾಲನೆಗೆ, ಇದು ದುರ್ಬಲ, ಸ್ವಂತಸ್ವಾಮ್ಯದ ಗೂಢಲಿಪಿ ಯ ಸೂತ್ರ ವ್ಯವಸ್ಥೆಯನ್ನು ಬಳಸುತ್ತದೆ. ಇನ್ನೂ ಕೆಲವು ಗುಪ್ತ ಭಾಷೆಯ ನಿಯಮಾವಳಿಗಳು ಅನಧಿಕೃತ (ಹ್ಯಾಕರ್ಸ್ )ಪಠ್ಯಗಾರರ ವಿರುದ್ಧ ಗೌಪ್ಯತೆಯ ರಕ್ಷಣೆಗೆ ಯತ್ನಿಸುತ್ತವೆ. ಆದರೂ ಈ ನಿಯಮಾವಳಿಗಳು ಇನ್ನೂ ಸಂಶೋಧನೆಯ ಹಂತದಲ್ಲಿವೆ. RFID ಟ್ಯಾಗ್‌ಗಳ ರಕ್ಷಣೆಗೆ ಟ್ಯಾಗ್‌ನೊಳಗಿನ ಲೆಕ್ಕಕ್ಕೆ ದೊರೆವ ಮೂಲಗಳ ಕೊರತೆಯು ಪ್ರಮುಖ ಸವಾಲಾಗಿದೆ. ಪ್ರಮಾಣಕ ಗುಪ್ತ ಭಾಷೆಯ ತಂತ್ರಗಳಿಗೆ, ಹಲವು ಅಗ್ಗ ಬೆಲೆಯ RFID ಉಪಕರಣಗಳಲ್ಲಿನ ಲಭ್ಯ ಮೂಲಗಳಿಗಿಂತಲೂ ಹೆಚ್ಚಿನ ಆಕರ ಮೂಲಗಳ ಅಗತ್ಯವಿದೆ. RSA ಸೆಕ್ಯೂರಿಟಿ ಯು ಮೂಲರೂಪದ ಒಂದು ಪರೀಕ್ಷಾ ಮಾದರಿಯ ಉಪಕರಣಕ್ಕೆ ಹಕ್ಕುಸ್ವಾಮ್ಯ ಪಡೆದುಕೊಂಡಿದೆ. ಈ ಉಪಕರಣವು ಗುಣಮಟ್ಟದ ಸಂಘರ್ಷ-ನಿವಾರಣಾ ನಿಯಮಾವಳಿ (ಸ್ಟ್ಯಾಂಡರ್ಡ್‌ ಕೊಲಿಷನ್‌ ಅವಾಯ್ಡನ್ಸ್‌ ಪ್ರೊಟೊಕಾಲ್‌) ಅಡ್ಡಿಪಡಿಸುವುದರ ಮೂಲಕ, RFID ಸಂಕೇತಗಳನ್ನು ಸ್ಥಳೀಯವಾಗಿ ಸ್ಥಗಿತಗೊಳಿಸುತ್ತದೆ. ಬಳಕೆದಾರರು ಇಚ್ಛಿಸಿದಲ್ಲಿ, ತಮ್ಮ ಗುರುತನ್ನು ಮರೆಮಾಚುವ ಅವಕಾಶವನ್ನು ಪಡೆಯಬಹುದು.[೭೦]

ವಿವಿಧ ನೀತಿಸೂತ್ರದ -ಕ್ರಮಗಳನ್ನು ಪ್ರಸ್ತಾಪಿಸಲಾಗಿವೆ. ಉದಾಹರಣೆಗೆ, RFID-ಟ್ಯಾಗ್‌ ಹೊಂದಿರುವ ವಸ್ತುಗಳಿಗೆ ಉದ್ಯಮ-ಪ್ರಮಾಣಿತ ಲೇಬೆಲ್‌ ಹಚ್ಚುವುದು.ಅಂದರೆ ಇದಕ್ಕೊಂದು ಪ್ರಮಾಣಿತ ಗುಣಮಟ್ಟವನ್ನು ತರುವುದು ಇದರ ಉದ್ದೇಶವೆನ್ನಲಾಗಿದೆ. ಕೆಲವು ವರ್ಷಗಳಿಂದ RFID ಯ ಭದ್ರತಾ ವಲಯವು ಬಹಳ ಸಕ್ರಿಯವಾದ ಸಂಶೋಧನಾ ಕ್ಷೇತ್ರವಾಗಿದೆ. ಈ ಕುರಿತಂತೆ 2002ರಿಂದಲೂ 400ಕ್ಕೂ ಹೆಚ್ಚು ವೈಜ್ಞಾನಿಕ ಮಂಡನೆ ಹಾಗು ಪ್ರಸ್ತಾವಗಳು ಪ್ರಕಟವಾಗಿವೆ. ಈ ಕ್ಷೇತ್ರದಲ್ಲಿ ಆಕರಗಳ ವಿಸ್ತೃತ ಪಟ್ಟಿಯು ಇಲ್ಲಿ ಲಭ್ಯ: RFID ಭದ್ರತೆ ಮತ್ತು ಗೌಪ್ಯತಾ ಉಲ್ಲೇಖ(RFID ಸೆಕ್ಯುರಿಟಿ ಅಂಡ್‌ ಪ್ರೈವೆಸಿ ಲೌಂಜ್‌).

ಶೋಷಣೆ[ಬದಲಾಯಿಸಿ]

'ಬಫರ್‌ ಒವರ್‌ಫ್ಲೊ' ಎಂಬ ತಂತ್ರಾಂಶ ದೋಷವು ವಿಮಾನ ನಿಲ್ದಾಣದಲ್ಲಿರುವ ಸರಕಿನ RFID ದತ್ತಾಂಶ ಸಂಗ್ರಹವನಷ್ಟೇ ಅಲ್ಲ, ಪಾಸ್ಪೋರ್ಟ್‌ ದತ್ತಾಂಶ ಸಂಗ್ರಹವನ್ನೂ ಸಹ ಅಕ್ರಮಿಸಿ, ಪಾಸ್ಪೋರ್ಟ್‌ದಾರರ ಗೌಪ್ಯ ಮಾಹಿತಿಯನ್ನು ಅಕ್ರಮವಾಗಿ ಪಡೆಯುವಂತೆ ಮಾಡಬಹುದು ಎಂದು ಆರ್ಸ್‌ ಟೆಕ್ನಿಕಾ ಮಾರ್ಚ್‌ 2006ರಲ್ಲಿ ವರದಿ ಮಾಡಿತು. (2/)

ಪಾಸ್‌ಪೋರ್ಟ್‌ಗಳು(ಪ್ರವಾಸಾಧಿಕಾರದ ಪತ್ರಗಳು)[ಬದಲಾಯಿಸಿ]

ಪಾಸ್ಪೋರ್ಟ್‌ಗಳ ಮಾಹಿತಿಯ ರಕ್ಷಣೆ ಮತ್ತು ಇನ್ನಷ್ಟು ಭದ್ರಗೊಳಿಸಲು, ಹಲವು ದೇಶಗಳು ಪಾಸ್ಪೋರ್ಟ್‌ಗಳಲ್ಲಿ RFID ಗಳನ್ನು ಅಳವಡಿಸಿವೆ. ಆದರೆ, ಕೇವಲ 48 ಗಂಟೆಗಳೊಳಗೇ, UK ಚಿಪ್‌ಗಳ ಗುಪ್ತ ಭಾಷೆಯನ್ನು ಭೇದಿಸಲಾಯಿತು.[೭೧] ಈ ಘಟನೆ ನಡೆದಾಗಿನಿಂದಲೂ, ಪಾಸ್ಪೋರ್ಟ್‌ನ್ನು ತಮ್ಮ ಮಾಲೀಕರಿಗೆ ರವಾನಿಸುವ ಮುನ್ನ ಸಂಶೋಧಕರು ಮಾಹಿತಿಯ ನಕಲನ್ನು ಪಡೆಯುವ ಮುಂದುವರೆದ ಯತ್ನಗಳಿಗೆ ಅವಕಾಶ ನೀಡಿವೆ. ಅಪರಾಧಿಯೊಬ್ಬ ಲಕೋಟೆಯನ್ನು ರಹಸ್ಯವಾಗಿ ತೆರೆದು ನಂತರ ಅದನ್ನು ಪುನಃ ವಾಪಸ್‌ ಮುಚ್ಚಲು ಸಾಧ್ಯವಾಗುತ್ತದೆ. ಇದರಿಂದಾಗಿ ಪಾಸ್ಪೋರ್ಟ್‌‌‌ ವ್ಯವಸ್ಥೆಯ ರಕ್ಷಣೆಗೆ ಸ್ವಲ್ಪಮಟ್ಟಿನ ಅಭದ್ರತೆ ಕಾಣುತ್ತದೆ.[೭೨]

ರಕ್ಷಣಾ ಕವಚ[ಬದಲಾಯಿಸಿ]

RFID-ಸಕ್ರಿಯಗೊಳಿಸಿದ ಕಾರ್ಡ್‌ಗಳು ಅಥವಾ ಪಾಸ್ಪೋರ್ಟ್‌ಗಳ ವಾಹಕಗಳು ತಮ್ಮ ಮಾಹಿತಿಗಳ ರಕ್ಷಿಸಲು ಅವಕಾಶ ನೀಡುವ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ತಮ್ಮ ಹೊಸ ಉದ್ಯೋಗಿಗಳ ID ಕಾರ್ಡ್‌ಗಳು(ಗುರುತಿನ ಚೀಟಿ) ಅನುಮೋದನೆ ಪಡೆದಿರುವ ರಕ್ಷಣಾ ಕವಚ ಹೊಂದಿರಬೇಕು ಎಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರ ಕಡ್ಡಾಯದ ನಿರ್ಬಂಧನೆಯನ್ನು ಹಾಕಿದೆ.[೭೩] RFID ಚಿಪ್‌ನ ವಿವರಗಳನ್ನು ಓದುವುದನ್ನು ತಡೆಗಟ್ಟಲು ಅಲ್ಯುಮಿನಿಯಮ್‌ ಲೋಹವು ಸೂಕ್ತವೇ ಎಂಬುದರ ಬಗ್ಗೆ ಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೆಲವರು ಹೇಳಿಕೊಳ್ಳುವಂತೆ, ಅಗತ್ಯವಾಗಿ(ಸ್ಥಾಯಿ ವಿದ್ಯುತ್ ಪ್ರಭಾವದಿಂದ ರಕ್ಷಣೆ ಪಡೆಯುವುದು) ಫ್ಯಾರಡೆ ಪಂಜರವನ್ನು ಅಗತ್ಯವಾಗಿ ಸೃಷ್ಟಿಸುವ ಅಲ್ಯುಮಿನಿಯಮ್‌ನ ಕವಚವು ಕೆಲಸ ಮಾಡುತ್ತದೆ.[೭೪] RFID ಕಾರ್ಡ್‌ನ್ನು ಸುಮ್ಮನೆ ಅಲ್ಯುಮಿನಿಯಮ್‌ ಹಾಳೆಯಲ್ಲಿ ಸುತ್ತಿಡುವುದರಿಂದ ಮಾಹಿತಿಯ ರವಾನೆಯ ಕಷ್ಟವಾಗುತ್ತದೆಯೇ ಹೊರತು, ಅದು ಬೇರೆಡೆಗೆ ಪ್ರಸಾರವಾಗುವುದನ್ನು ಸಂಪೂರ್ಣವಾಗಿ ತಡೆಗಟ್ಟುವುದಿಲ್ಲ ಎಂದು ಕೆಲವರು ಹೇಳಿಕೊಂಡಿದ್ದಾರೆ.[೭೫]

ರಕ್ಷಣೆಯೆಂಬುದು ಬಳಸಿದ ತರಾಂಗಾಂತರದ ಕಾರ್ಯ ವೈಖರಿಯನ್ನು ಅವಲಂಬಿಸಿದೆ. ಮನುಷ್ಯರು ಮತ್ತು ಸಾಕುಪ್ರಾಣಿಗಳಲ್ಲಿ ಅಳವಡಿಸುವ ಕಡಿಮೆ ತರಂಗಾಂತರದ ಲೋFID ಟ್ಯಾಗ್‌ಗಳು ರಕ್ಷಣೆಗೆ ಪ್ರತಿರೋಧವೊಡ್ಡುತ್ತವೆ. ಆದರೂ, ದಪ್ಪ ಲೋಹದ ಹಾಳೆಯು ಬಹಳಷ್ಟು ಪಠನಗಳನ್ನು ತಡೆಗಟ್ಟುತ್ತವೆ. ಉನ್ನತ ತರಂಗಾಂತರಣದ ಹೈFID tags (13.56 MHz — ಸ್ಮಾರ್ಟ್‌ ಕಾರ್ಡ್‌ಗಳು ಮತ್ತು ಪ್ರವೇಶಾನುಮತಿ ಬ್ಯಾಡ್ಜ್‌ಗಳು) ರಕ್ಷಣಾ ಕ್ರಮಗಳಿಗೆ ಸಂವೇದನೆ ತೋರುತ್ತವೆ. ಲೋಹ ಪದರಿನ ಮೇಲ್ಮೈಯು ಕೆಲವೇ ಸೆಂಟಿಮೀಟರ್‌ಗಳ ಅಂತರದಲ್ಲಿದ್ದರೆ ಇವನ್ನು ಗುರುತಿಸಲು ಬಹಳ ಕಷ್ಟವಾಗುವುದು. ಲೋಹದ ಪದರ ಕೇವಲ ಕೆಲವೇ ಮಿಲಿಮೀಟರ್‌ಗಳ ಅಂತರದಲ್ಲಿಟ್ಟಲ್ಲಿ UHF (ಅಲ್ಟ್ತ್ರಾಹೈ ಫ್ರೆಕ್ವೆನ್ಸಿ) ಅಲ್ಟ್ರಾ-ಹೈFID ಟ್ಯಾಗ್‌ಗಳು (ಪ್ಯಾಲೆಟ್‌ಗಳು ಮತ್ತು ಕಾರ್ಟನ್‌ಗಳು) ಪಠಿಸಲು ಕಷ್ಟವಾಗುತ್ತದೆ. ಆದರೂ, ಲೋಹ ಪದರದಿಂದ 2-4 ಸೆಮೀ ಅಂತರದಲ್ಲಿ ಟ್ಯಾಗ್‌ ಹಿಡಿದಾಗ,ಅಲ್ಲಿ ಆಪಾತ ತರಂಗ ಮತ್ತು ಪ್ರತಿಫಲಿತ ತರಂಗದ ಬಲವರ್ಧನೆಯ ಕಾರಣ, ಅವುಗಳ(ಓದಿನ) ಪಠನ ಶ್ರೇಣಿಯು ಹೆಚ್ಚಾಗುವುದು.

ಆಂಟಿ-ಸ್ಟ್ಯಾಟಿಕ್‌ (ದುಷ್ಪರಿಣಾಮರಹಿತ) ಪ್ಲಾಸ್ಟಿಕ್‌ ಚೀಲದಲ್ಲಿರಿಸುವುದರಿಂದ UHFID ಟ್ಯಾಗ್‌ಗಳನ್ನು ಬಹಳಷ್ಟು ಪ್ರಮಾಣದ ಖಾಸಗಿತನ ಕದಿಯುವರಿಂದಾ ಅಥವಾ ಇತರರ ಪಠನಗಳಿಂದ ರಕ್ಷಿಸಬಹುದು. [dubious ]

ವಿವಾದಗಳು[ಬದಲಾಯಿಸಿ]

ಜರ್ಮನ್‌ ಗೌಪ್ಯತಾ ಸಮುದಾಯ FoeBuDನ RFID-ವಿರೋಧಿ ಅಭಿಯಾನದ ಲೊಗೊ.

ಖಾಸಗಿತನ[ಬದಲಾಯಿಸಿ]

"How would you like it if, for instance, one day you realized your underwear was reporting on your whereabouts?"
ಕ್ಯಾಲಿಫೊರ್ನಿಯ State Senator Debra Bowen, at a 2003 hearing[೭೬]

RFID ತಂತ್ರಜ್ಞಾನದ ಬಳಕೆಯು ಗಮನಾರ್ಹ ವಿವಾದಗಳು ಮತ್ತು ಗ್ರಾಹಕ ಗೌಪ್ಯತೆ ಕಾಪಾಡುವ ಪ್ರತಿಪಾದಕರಿಂದಾಗಿ ಈ ಉತ್ಪನ್ನ ಬಹಿಷ್ಕಾರಗಳಿಗೂ ಈಡಾಗಿದೆ. CASPIAN (ಕಂಸ್ಯೂಮರ್ಸ್‌ ಎಗೇಯ್ನ್ಸ್ಟ್‌ ಸೂಪರ್‌ಮಾರ್ಕೆಟ್‌ ಪ್ರೈವೆಸಿ ಇನ್ವೇಜನ್‌ ಅಂಡ್‌ ನಂಬರಿಂಗ್‌) ಸಂಸ್ಥಾಪಕರಾದ ಕ್ಯಾಥೆರೀನ್‌ ಆಲ್ಬ್ರೆಕ್ಟ್‌ ಮತ್ತು ಲಿಜ್‌ ಮೆಕಿಂಟೈರ್‌ ಈ ತಂತ್ರಜ್ಞಾನದ ಬಳಕೆ ಕುರಿತಂತೆ ಇಬ್ಬರು ಕಟು ಟೀಕಾಕಾರರಾಗಿದ್ದಾರೆ. ಇವರು ಈ RFID ಟ್ಯಾಗ್‌ಗಳನ್ನು 'ಗೂಢಚರ್ಯೆಯ ಚಿಪ್‌ಗಳು (ಸ್ಪೈಚಿಪ್‌ಗಳು)' ಎಂದು ಜರೆದಿದ್ದಾರೆ. RFID ಸಂಬಂಧಿತ ಎರಡು ಪ್ರಮುಖ ರಹಸ್ಯಗಳ ಬಗೆಗಿನ ಕಳವಳಗಳು ಕೆಳಕಂಡಂತಿವೆ:

 • ಅಂತಹ ವಸ್ತುಗಳ ಹೊಂದಿರುವವರಿಗೆ ಅದರಲ್ಲಿ RFID ಟ್ಯಾಗ್‌ ಇರುವ ಬಗ್ಗೆ ಅರಿವಿರದೇ, ಅಂತಹ ವ್ಯಕ್ತಿಗೆ ಗೊತ್ತಾಗದೇ ದೂರದಿಂದ ಟ್ಯಾಗ್‌ಗಳನ್ನು ಪತ್ತೆಹಚ್ಚಬಹುದಾದ ಕಾರಣ, ವ್ಯಕ್ತಿಯ ಬಗೆಗಿನ ಗೌಪ್ಯ ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದೆ.
 • ಖರೀದಿ ಮಾಡಲಾದ ವಸ್ತುವಿಗೆ ಕ್ರೆಡಿಟ್‌ ಕಾರ್ಡ್‌ ಅಥವಾ ಅದರೊಂದಿಗೆ ಬಳಸಲಾದ ನಿಯಮಬದ್ದ ಕಾರ್ಡ್‌ ಮೂಲಕ ಪಾವತಿಸಿದಲ್ಲಿ, RFID ಟ್ಯಾಗ್‌ನಲ್ಲಿರುವ ಜಾಗತಿಕ ಮಟ್ಟದಲ್ಲೇ ಅಪೂರ್ವವಾದ IDಯನ್ನು ಓದಿ, ಖರೀದಿಸುವ ವ್ಯಕ್ತಿಯ ಮಾಹಿತಿಯನ್ನು ಪರೋಕ್ಷವಾಗಿ ಸಂಗ್ರಹಿಸಬಹುದು.
ಗಮನಿಸುವವರು ತಮ್ಮ ಕಾರ್ಡ್‌ ಹಾಗೂ ಕ್ರೆಡಿಟ್ ಕಾರ್ಡ್‌ನಲ್ಲಿರುವ ಮಾಹಿತಿಗೆ ಪ್ರವೇಶಾನುಮತಿಯಿದ್ದಲ್ಲಿ ಇದು ಸತ್ಯ. ಟ್ಯಾಗ್‌ ವಿಷಯ ವಾಚಕ ಉಪಕರಣದೊಂದಿರುವವರಿಗೆ ನೀವು ಎಲ್ಲಿರುವಿರಿ ಎಂವುದನ್ನೂ ಬಲ್ಲರು.

ಉತ್ಪನ್ನಗಳನ್ನು ಖರೀದಿಸಿ, ಮನೆಗೆ ತೆಗೆದುಕೊಂಡು ಹೋದ ನಂತರವೂ ಸಹ, ಅವುಗಳಿಗೆ ಅಂಟಿಕೊಂಡಿರುವ RFID ಟ್ಯಾಗ್‌ಗಳು ಇನ್ನೂ ಸಕ್ರಿಯವಾಗುಳಿಯುತ್ತವೆ; ಬೇಹುಗಾರಿಕೆ ಮತ್ತು ಇತರೆ ಪೂರೈಕೆ ವಸ್ತುಗಳ ದಾಸ್ತಾನು ಕ್ರಿಯೆಗಳಿಗೆ ಸಂಬಂಧವಿಲ್ಲದವುಗಳಿಗೆ ಟ್ಯಾಗ್‌ಗಳ ಬಳಕೆಯು ಬಹಳಷ್ಟು ತಳಮಳಗಳಿಗೆ ಕಾರಣವಾಗಿವೆ.[೭೭] ಕ್ಲಿಪ್‌ಡ್‌ ಟ್ಯಾಗ್‌ಗಳ ಬಳಸುವುದರ ಮೂಲಕ ಮೇಲೆ ವಿವರಿಸಿದ ಕಳವಳಗಳನ್ನು ಭಾಗಶಃ ಬಗೆಹರಿಸಬಹುದು. ಕ್ಲಿಪ್ಡ್‌ ಟ್ಯಾಗ್‌ ಗ್ರಾಹಕರ ಖಾಸಗಿತನ ಅಥವಾ ಗೌಪ್ಯತೆ ರಕ್ಷಿಸಲು ವಿನ್ಯಾಸವಾದ RFID ಟ್ಯಾಗ್‌ ಆಗಿದೆ. IBM ಸಂಶೋಧಕರಾದ ಪಾಲ್‌ ಮೊಸ್ಕೊವಿಟ್ಜ್‌ ಮತ್ತು ಗ್ವೆಂಟರ್‌ ಕರ್ಜೊತ್‌ ಈ ಕ್ಲಿಪ್ಡ್‌ ಟ್ಯಾಗ್‌ನ್ನು ಪರಿಚಯಿಸಿದರು. ಮಾರಾಟದ ನಂತರವೇ ಸ್ಥಳದಲ್ಲಿ, ಗ್ರಾಹಕರು ಟ್ಯಾಗ್‌ನ ಒಂದು ಭಾಗವನ್ನು ಕತ್ತರಿಸಿಬಿಡಬಹುದು. ಇದರ ಫಲವಾಗಿ ಲಂಬ ಶ್ರೇಣಿಯ ಟ್ಯಾಗ್‌ನ್ನು ಹತ್ತಿರದ ಟ್ಯಾಗ್‌ ಆಗಿ ಕಿರಿದುಗೊಳಿಸಲು ಅವಕಾಶವುಂಟು. ತುಂಡರಿಸಿದ ಟ್ಯಾಗ್‌ನ್ನು ಸಹ ಓದಬಹುದು, ಆದರೆ ಕಡಿಮೆ ಶ್ರೇಣಿಯಲ್ಲಿ ಮಾತ್ರ - ಕೆಲವೇ ಅಂಗುಲ ಅಥವಾ ಸೆಂಟಿಮೀಟರ್‌ಗಳಲ್ಲಿ. ಟ್ಯಾಗ್‌ನ ಪರಿವರ್ತನೆ ಅಥವಾ ಸುಧಾರಣೆಯನ್ನು ದೃಷ್ಟಿಗೋಚರದ ಮೂಲಕ ಖಚಿತಪಡಿಸಿಕೊಳ್ಳಬಹುದು. ನಂತರದ ಹಂತದಲ್ಲಿ, ಉತ್ಪನ್ನದ ವಾಪಸಾತಿ, ಮರುಕಳಿಕೆ,ಜ್ಞಾಪಿಸು ಅಥವಾ ಮರುಬಳಕೆ ಉದ್ದೇಶಕ್ಕಾಗಿ ಟ್ಯಾಗ್‌ನ್ನು ಬಳಸಬಹುದಾಗಿದೆ. ಆದರೂ ಸಹ, ಪಠಿಸಬಹುದಾದ ಶ್ರೇಣಿಯು ಪಠಿಸುವವರ ಮತ್ತು ಟ್ಯಾಗ್‌ನ ಮೇಲೆ ಅವಲಂಬಿತವಾಗಿದೆ. ತಂತ್ರಜ್ಞಾನದಲ್ಲಿನ ಸುಧಾರಣೆಗಳು ಟ್ಯಾಗ್‌ಗಳ ಓದುವ ಶ್ರೇಣಿಗಳನ್ನು ವಿಸ್ತರಿಸಬಹುದು. ಸ್ಕ್ಯಾನರ್‌ಗಳನ್ನು ಟ್ಯಾಗ್‌ಗಳಿಗೆ ಬಹಳ ಹತ್ತಿರವಿಟ್ಟಲ್ಲಿ ಕಡಿಮೆ ಶ್ರೇಣಿಯ ಟ್ಯಾಗ್‌ಗಳನ್ನು ಓದಬಹುದಾಗಿದೆ. ಸಾಮಾನ್ಯವಾಗಿ, ಟ್ಯಾಗ್‌ನ ಮಾಹಿತಿ ಕಂಡುಹಿಡಿಯುವ ಅಥವಾ ಪಠನಾ ಶ್ರೇಣಿಯು ಓದುವ ಸಾಧನದಿಂದ ಇರುವ ಅಂತರಕ್ಕೆ ಸೀಮಿತವಾಗಿದೆ, ಈ ಅಂತರದ ಮೂಲಕ ಟ್ಯಾಗ್‌ ಓದುವ ಸಾಧನದಿಂದ ಸಾಕಷ್ಟು ಶಕ್ತಿ ಪಡೆದು ತನ್ಮೂಲಕ ಅದನ್ನು ಸಂಚಾಲಿತಗೊಳಿಸಬಹುದು. ಓದಬಹುದಾದ ಸಾಧನಗಳ ಸಾಮರ್ಥ್ಯ ಹೆಚ್ಚಿಸಿ , ಮೂಲತಃ ವಿನ್ಯಾಸಕ್ಕಿಂತಲೂ ಇನ್ನೂ ಹೆಚ್ಚಿಗೆ ವಿಸ್ತರಿಸಿದ ಶ್ರೇಣಿಗಳಲ್ಲಿ ಟ್ಯಾಗ್‌ಗಳನ್ನು ಸಾಮಾನ್ಯವಾಗಿ ಗ್ರಹಿಸಬೇಕಾಗಿದೆ. ಓದಬಹುದಾದ ಅಂತರದ ಮಿತಿಯು, ಟ್ಯಾಗ್‌ನಿಂದ ಇತರ ಸಾಧನಕ್ಕೆ ಪ್ರತಿಫಲಿತ ಸಂಕೇತದ 'ಸಿಗ್ನಲ್‌-ಟು-ನಾಯ್ಸ್‌' ಉತ್ಪತ್ತಿಗೆ ಕಾರಣವಾಗುತ್ತದೆ. US ಪಾಸ್ಪೋರ್ಟ್‌ಗಳಲ್ಲಿ ಬಳಸಿದ ಹೈFID ತರಹದ್ದಲ್ಲದ ನಿಷ್ಕ್ರಿಯ ಅಲ್ಟ್ರಾ-ಹೈ FID ಟ್ಯಾಗ್‌ಗಳನ್ನು ಸಾಮಾನ್ಯವಾಗಿ 30 ಅಡಿಗಳ ಅಂತರದ ಶ್ರೇಣಿಗಳ ವರೆಗೂ ಓದಬಹುದು; ಸೂಕ್ತ ಉಪಕರಣಗಳ ಬಳಸಿ ಇಂಥಹದನ್ನು 50ರಿಂದ 69 ಅಡಿಗಳ ಶ್ರೇಣಿಯ ವರೆಗೂ ಗುರುತಿಸಬಹುದು ಎಂದು ಸಂಶೋಧಕರು ಎರಡು ಭದ್ರತಾ ಸಮ್ಮೇಳನಗಳಲ್ಲಿ ತೋರಿಸಿಕೊಟ್ಟಿದ್ದಾರೆ.[೭೮][೭೯]

ಚಿತ್ರ:051118-WSIS.2005-Richard.Stallman - RFID.png
RFID ಗೌಪ್ಯತಾ ವಿವಾದಗಳನ್ನು ಪ್ರತಿಭಟಿಸಿ, WSIS 2005ರಲ್ಲಿ ಅಲ್ಯುಮಿನಿಯಮ್‌ ಫಾಯಿಲ್‌ನಲ್ಲಿ ಸುತ್ತಿಟ್ಟ ತಮ್ಮ RFID ಬಿಲ್ಲೆಯನ್ನು ಪ್ರದರ್ಶಿಸಿದ ರಿಚರ್ಡ್‌ ಸ್ಟಾಲ್ಮನ್‌.

ಜನವರಿ 2004ರಲ್ಲಿ, CASPIAN(ಇರಾನ್ ಮತ್ತು ರಶಿಯಾ ಮಧ್ಯದ ಉಪ್ಪು ನೀರಿನ ವಿಶಾಲ ಸರೋವರದ ಹೆಸರು) ಮತ್ತು ಜರ್ಮೆನಿಯ ಗೌಪ್ಯತಾ (ಖಾಸಗಿತನ) ಕಾಪಾಡುವವರ ಪರ ಗುಂಪು FoeBuDಗೆ ಜರ್ಮೆನಿಯಲ್ಲಿರುವ METRO ಫ್ಯೂಚರ್‌ ಸ್ಟೋರ್‌ಗೆ ಆಮಂತ್ರಿಸಲಾಯಿತು. ಇಲ್ಲಿ RFID ಯೋಜನೆಯನ್ನು ಮೊದಲ ಬಾರಿಗೆ ಸ್ಥಾಪಿಸಲಾಗಿತ್ತು. METRO "ಪೇಬ್ಯಾಕ್‌" ಗ್ರಾಹಕ ನಿಯಮಬದ್ದ ಕಾರ್ಡ್‌ಗಳಲ್ಲಿ ಗ್ರಾಹಕರ ID ಸಹಿತ RFID ಟ್ಯಾಗ್‌ಗಳಿದ್ದದ್ದು ಆಕಸ್ಮಿಕವಾಗಿ ಕಂಡುಬಂತು. ಈ ವಿಚಾರವನ್ನು ಕಾರ್ಡ್‌ ಪಡೆಯುವ ಗ್ರಾಹಕರಿಗಾಗಲೀ, ಗೌಪ್ಯತಾ ಸಮರ್ಥಕರಿಗಾಗಲೀ ಬಹಿರಂಪಡಿಸಿರಲಿಲ್ಲ. ತಾನು ಯಾವುದೇ ಗ್ರಾಹಕರ ಗುರುತಿನ ಮಾಹಿತಿಯ ಜಾಡು ಭೇದಿಸಿಲ್ಲ ಅಥವಾ ಹಿಡಿದಿಲ್ಲ. ಎಲ್ಲಾ RFID ಬಳಕೆಯ ವಿಷಯಗಳನ್ನು ಸ್ಪಷ್ಟವಾಗಿ ಬಹಿರಂಗಪಡಿಸಲಾಗುವುದು ಎಂದು METRO ಭರವಸೆ ನೀಡಿದ್ದರೂ ಸಹ RFID ಯ ಅಂಶಗಳ ಅಪಹರಣದೊಂದಿಗೆ ಬಹಿರಂಗ ಹೀಗಾಗಿತ್ತು.[೮೦] ಕಳೆದ 2005ರ 16ರಿಂದ 18 ನವೆಂಬರ್‌ಲ್ಲಿ ನಡೆದ UN ಮಾಹಿತಿ (ವಿಜ್ಞಾನದ) ಸಮಾಜ ಕುರಿತ ವಿಶ್ವ ಶೃಂಗ ಸಭೆ ಯಲ್ಲಿ (WSIS), ಉಚಿತ ತಂತ್ರಾಂಶ ಅಭಿಯಾನದ ಸಂಸ್ಥಾಪಕ ರಿಚರ್ಡ್‌ ಸ್ಟಾಲ್ಮನ್‌ RFID ಭದ್ರತಾ ಕಾರ್ಡ್‌ಗಳ ವಿರುದ್ಧ ಪ್ರತಿಭಟಿಸಿದರು. ಇನ್ನು ಮುಂದಿನ ಸಭೆಗಳಲ್ಲಿ RFID ಕಾರ್ಡ್‌ಗಳ ಬಳಸುವುದು ಬೇಡ ಎಂದು ಮೊದಲ ಸಭೆಯಲ್ಲಿ ಒಪ್ಪಿಕೊಳ್ಳಲಾಯಿತು. ಈ ಭರವಸೆ ಈಡೇರದೇ ಹೋದದ್ದು ಗೊತ್ತಾದಾಗ, ಅವರು ತಮ್ಮ ಕಾರ್ಡ್‌ನ್ನು ಅಲ್ಯುಮಿನಿಯಮ್‌ ಹಾಳೆಯಲ್ಲಿ ಸುತ್ತಿಟ್ಟುಕೊಂಡರು. ಭದ್ರತಾ ಸ್ಥಳಗಳಲ್ಲಿ ಮಾತ್ರ ಅದನ್ನು ಹೊರತೆಗೆಯುವೆನೆಂದರು. ಈ ಪ್ರತಿಭಟನೆ ಭದ್ರತಾ ಸಿಬ್ಬಂದಿಗೆ ತೀವ್ರ ಕಳವಳವನ್ನುಂಟು ಮಾಡಿತು. ಕೆಲವರು ಮುಖ್ಯ ಭಾಷಣಕಾರರಾಗಿದ್ದವರನ್ನು ಸಮ್ಮೇಳನಾ ಕೊಠಡಿಯಿಂದ ಹೊರಬರಲು ಅವಕಾಶ ನೀಡಲಿಲ್ಲ; ಭಾಷಣ ನೀಡಬೇಕಿದ್ದ ಇನ್ನೊಂದು ಸಮ್ಮೇಳನ ಕೊಠಡಿ ಪ್ರವೇಶಿಸಲೂ ಬಿಡಲಿಲ್ಲ.[೮೧][೮೨] ಸುಮಾರು 2004-2005 ರಲ್ಲಿ ಫೆಡರಲ್ ಟ್ರೇಡ್ ಕಮಿಶನ್ ಸ್ಟಾಫ್ ಆಯೋಗ (ಸ್ಟೇಟ್‌ ಟ್ರೇಡ್‌ ಕಮಿಷನ್‌) ಸಿಬ್ಬಂದಿ ಒಂದು ವಿಚಾರಸಂಕೀರ್ಣ ಮತ್ತು RFID ಗೌಪ್ಯತೆಯ ಕದಿಯುವ ಆತಂಕಗಳ ಪುನರ್ಪರಿಶೀಲನೆ ನಡೆಸಿ, ಉತ್ತಮ ಕಾರ್ಯವಿಧಾನಗಳನ್ನು ಶಿಫಾರಸು ಮಾಡುವ ವರದಿಯನ್ನು ಹೊರತಂದಿತು.[೮೩] 2006ರಲ್ಲಿ ಬರ್ಲಿನ್‌ನಲ್ಲಿ ಕಾವೊಸ್‌ ಕಂಪ್ಯೂಟರ್‌ ಕ್ಲಬ್‌ ಆಯೋಜಿಸಿದ ಕಾವೊಸ್‌ ಕಮ್ಯೂನಿಕೇಷನ್‌ ಕಾಂಗ್ರೆಸ್ನಲ್ಲಿ ಚರ್ಚಿಸಿದ ವಿಷಯಗಳಲ್ಲಿ RFID ಸಹ ಒಂದಾಗಿತ್ತು. ಈ ವಿಷಯ ಪತ್ರಿಕಾವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ವಿದ್ಯುನ್ಮಾನ ಪಾಸ್ಪೋರ್ಟ್‌ಗಳು, ಮೈಫೇರ್‌ ಗುಪ್ತಭಾಷೆ (ಗೂಢಲಿಪೀಕರಣ) ಮತ್ತು 2006 FIFA ವಿಶ್ವ ಕಪ್‌ ಫುಟ್‌ಬಾಲ್‌ ಪಂದ್ಯಾವಳಿಗಾಗಿ ಟಿಕೆಟ್‌ಗಳ ಕುರಿತು ಚರ್ಚೆ ನಡೆದವು. 2006 FIFA ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ RFID ತಂತ್ರಜ್ಞಾನದ ಸಾರ್ವತ್ರಿಕ ಅನ್ವಯಿಕೆ ಮೊದಲ ಬಾರಿಗೆ ಸಮಗ್ರವಾಗಿ ಹೇಗೆ ಕಾರ್ಯಪ್ರವೃತ್ತವಾಯಿತು ಎಂಬುದನ್ನು ಇಲ್ಲಿ ಸಾಧಿಸಲಾಯಿತು. ಮೊನೊಕ್ರೊಮ್‌ ಎಂಬ ಸಮೂಹವು 'ಹ್ಯಾಕ್‌ RFID' ಎಂಬ ವಿಶೇಷ ಹಾಡಿನ ಪ್ರದರ್ಶನದ ಮೂಲಕ ಜನರಿಗೆ ಮಾಹಿತಿ-ಜಾಗೃತಿ ನೀಡಿತು.[೮೪] ಮುಂದೊಂದು ದಿನ, ವಿಶ್ವದ ಜನಸಂಖ್ಯೆ ಏರಿಳಿತ ಗುರುತಿಸಿ ಅದನ್ನು ನಿಯಂತ್ರಿಸಲು RFID ಚಿಪ್‌ಗಳನ್ನು ಬಳಸಲಾಗುವುದು ಎಂದು ಝೀಟ್‌ಗೀಸ್ಟ್‌ ದಿ ಮೂವೀ ತನ್ನ ಸಾಧ್ಯತೆಗಳನ್ನು ವಿವರಿಸಿತು.

ಈ ಚಲನಚಿತ್ರದಲ್ಲಿ ನಿರೂಪಿಸಿದಂತೆ RFIDಯನ್ನು ಒಂದು ನಕಾರಾತ್ಮಕ ತಂತ್ರಜ್ಞಾನವೆಂದು ನಿರೂಪಿಸಲಾಗಿದೆ.

ಮನುಷ್ಯರಲ್ಲಿ RFID ಅಳವಡಿಕೆ[ಬದಲಾಯಿಸಿ]

USನಲ್ಲಿ ಆಹಾರ ಮತ್ತು ಔಷಥ ಪ್ರಾಧಿಕಾರವು ಮನುಷ್ಯರಲ್ಲಿ RFID ಚಿಪ್‌ಗಳ ಅಳವಡಿಕೆಯನ್ನು ಸಮ್ಮತಿಸಿದೆ.[೮೫] ಬಾರ್ಸಿಲೊನಾದ ಬಾಜಾ ಬೀಚ್‌ ನೈಟ್‌ಕ್ಲಬ್‌ನಂತಹ ವಹಿವಾಟಿನ ಉದ್ದಿಮೆಗಳು ಸೇವಾಶುಲ್ಕ ಸಂದಾಯಕ್ಕೆ RFID-ಆಧಾರಿತ ಟ್ಯಾಬ್‌ಗಳನ್ನು ಬಳಸುವ ಆಯ್ಕೆಯನ್ನು ತಮ್ಮ ಗ್ರಾಹಕರಿಗೆ ನೀಡುತ್ತವೆ.[೮೬] ಇದು ವೈಯಕ್ತಿಕ ಖಾಸಗಿ ರಹಸ್ಯಗಳ ಬಹಿರಂಗದ ಕುರಿತು ತಳಮಳಗಳಿಗೆ ಕಾರಣವಾಗಿದೆ. ಅಪೂರ್ವ ಗುರುತಿನ ಸಂಕೇತದ ಮೂಲಕ ಗ್ರಾಹಕರು ಎಲ್ಲಿದ್ದರೂ ಅವರ ಜಾಡು ಹಿಡಿಯಬಹುದಾಗಿದೆ. ಸರ್ವಾಧಿಕಾರದ ಸರ್ಕಾರದಿಂದ ದಬ್ಬಾಳಿಕೆಗೆ ಅಥವಾ ಸ್ವಾತಂತ್ರ್ಯದ ಹರಣಕ್ಕೆ ಇದು ಕಾರಣವಾಗಬಹುದು ಎಂಬ ತಳಮಳಗಳಿವೆ.[೮೭] ಮನುಷ್ಯರಲ್ಲಿ ಅಳವಡಿಸಿದ RFID ಚಿಪ್‌ನಿಂದ ಹೊರಬರುವ RFID ಸಂಕೇತದ ತದ್ರೂಪ ಅಥವಾ ನಕಲನ್ನು ರಚಿಸಬಹುದು; ಇದರಿಂದಾಗಿ ಈ ಹಿಂದೆ ತಿಳಿಸಿದಂತೆ ಈ ಚಿಪ್‌ ಅತಿಕ್ರಮ ಪ್ರವೇಶಕ್ಕೆ ತಡೆಯೊಡ್ಡುವಷ್ಟು(ಹ್ಯಾಕ್ ಪ್ರೂಫ್ )ಗೆ ಸುಭದ್ರವಾಗಿಲ್ಲ ಎಂದು ನ್ಯೂಯಾರ್ಕ್‌ನ ಸಭೆಯೊಂದರಲ್ಲಿ ನೆವಿಟ್ಜ್‌ ಮತ್ತು ವೆಸ್ಟ್‌ಹ್ಯೂಸ್‌ ಎಂಬ ಇಬ್ಬರು ಹ್ಯಾಕರ್‌ಗಳು ತೋರಿಸಿಕೊಟ್ಟರೆಂದು 22 ಜುಲೈ 2006ರಂದು ರಾಯ್ಟರ್ಸ್‌ ವರದಿ ಮಾಡಿತು.[೮೮] ಅತ್ಯಲ್ಪ ಪ್ರಮಾಣದ ಶಸ್ತ್ರ ಚಿಕಿತ್ಸೆಯೂ ಸಹ ತನ್ನದೇ ಆದ ಅಪಾಯಗಳನ್ನು ಹೊಂದಿದೆ. RFID ಚಿಪ್‌ ಅಳವಡಿಕೆಯೂ ಇದಕ್ಕೆ ಹೊರತಾಗಿಲ್ಲ. 'ಯೂಸಿಂಗ್‌ ರೇಡಿಯೊ ಫ್ರೀಕ್ವೆಂಸಿ ಐಡೆಂಟಿಫಿಕೇಷನ್‌ ಟೆಕ್ನಾಲಜಿ ಇನ್‌ ಹ್ಯೂಮನ್ಸ್‌ ಇನ್‌ ದಿ ಯುನೈಟೆಡ್‌ ಸ್ಟೇಟ್ಸ್‌ ಫಾರ್‌ ಟೋಟಲ್‌ ಕಂಟ್ರೋಲ್‌' [೧೨] ಎಂಬ ಲೇಖನದ ಕರ್ತೃ ಡೇವಿಡ್‌ ಬಿ. ಸ್ಮಿತ್‌ ಪ್ರಕಾರ, ಆರೋಗ್ಯದ ಗಂಡಾಂತರಗಳ ಬಗೆಗಿನ ಉದಾಹರಣೆಗಳನ್ನು ಸ್ಮಿತ್‌ ನೀಡುತ್ತಾರೆ - 'ಅಳವಡಿಸಿದ ಗ್ರಾಹಕ-ಪ್ರೇಷಕದಿಂದ ಅಂಗಾಂಶಗಳ ಪ್ರತಿಕೂಲಕರ ಪ್ರತಿಕ್ರಿಯೆ, ಮಾಹಿತಿ ಭದ್ರತೆಯ ಗುಣಮಟ್ಟದಲ್ಲಿ ರಾಜಿ, ಅಳವಡಿಸಿದ ಗ್ರಾಹಕ-ಪ್ರೇಷಕದ ವೈಫಲ್ಯ, ಅಳವಡಿಕೆಯ ವೈಫಲ್ಯ, ವಿದ್ಯುನ್ಮಾನ ಸ್ಕ್ಯಾನರ್‌ನ ವೈಫಲ್ಯ, ವಿದ್ಯುತ್ಕಾಂತೀಯ ಅಡಚಣೆಗಳು, ವಿದ್ಯುತ್‌ ಅಪಾಯಗಳು, ಅಯಸ್ಕಾಂತೀಯ ಅನುರಣದ ಚಿತ್ರಣ ಮತ್ತು ಸೂಜಿಯ ನಾಟುವಿಕೆ. (38)' ಈ ರೀತಿಯ ಅಪಾಯಗಳು ಯಾರಿಗಾದರೂ ಸಂಭವಿಸಬಹುದು.

ಸರ್ಕಾರಿ ನಿಯಂತ್ರಣ[ಬದಲಾಯಿಸಿ]

ತಂತ್ರಜ್ಞಾನದ ಉದವಾಗುತ್ತಿದ್ದಂತೆ, RFID ಅಳವಡಿಕೆಯಿಂದ ತಮ್ಮ ಹಕ್ಕುಗಳ ಚ್ಯುತಿಯಾಗಬಹುದೆಂದು ಕೆಲವು ವ್ಯಕ್ತಿಗಳು ಆತಂಕ ವ್ಯಕ್ತಪಡಿಸಿದ್ದಾರೆ. GPS-ಜಾಡು ಹಿಡಿಯುವ ಸಾಮರ್ಥ್ಯವುಳ್ಳ RFID ಅಳವಡಿಕೆಯ ಮೇಲೆ ವೆರಿಚಿಪ್‌ ಪ್ರಯೋಗ ನಡೆಸುತ್ತಿದೆ.[೮೯] ಯಾವುದೇ ವ್ಯಕ್ತಿಯನ್ನಷ್ಟೇ ಅಲ್ಲ, ಪ್ರತಿಯೊಂದು ಭೌತಿಕ ವಸ್ತುವಿನ ಭೌಗೋಳಿಕ ಸ್ಥಿತಿಯನ್ನು ಸಂಪೂರ್ಣ ಅರಿತು; ನಿರಂತರವಾಗಿ ಅದರ ಜಾಡು ಹಿಡಿಯಲು ಈ ತಂತ್ರಜ್ಞಾನ ಅಮೆರಿಕಾ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ತಂತ್ರಜ್ಞಾನದಿಂದ ನಾಪತ್ತೆಯಾಗಿರುವ ಮಕ್ಕಳು ಅಥವಾ ಪರಾರಿಯಾಗಿರುವ ಕೈದಿಗಳನ್ನು ಪತ್ತೆಮಾಡಲು ನೆರವಾಗಬಹುದು; ಇಷ್ಟೇ ಅಲ್ಲ, RFID ಚಿಪ್‌ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಯಾವಾಗಲೂ ನಿಗಾ ವಹಿಸಲು ಸರ್ಕಾರಕ್ಕೆ ಅವಕಾಶವಾಗುತ್ತದೆ. ಇನ್ನೂ ಹೆಚ್ಚಿಗೆ, ವ್ಯಕ್ತಿಯ ಅರಿವು ಅಥವಾ ಸಮ್ಮತಿಯಿಲ್ಲದೆ ಇದನ್ನು ಪಡೆದುಕೊಳ್ಳಬಹುದು, ಇದುವೇ ಈಗ ವಿವಾದಕ್ಕೆ ಕಾರಣವಾಗಿದೆ. ಕೇವಲ $250 ಮೌಲ್ಯದ ಉಪಕರಣ ಬಳಸಿ RFID ಮೂಲಕ ವ್ಯಕ್ತಿಗಳ ಖಾಸಗಿ ಮಾಹಿತಿ ಸಂಗ್ರಹಿಸಬಹುದು ಎಂದು ಕ್ಯಾಲಿಫೊರ್ನಿಯಾದ ಸ್ಯಾನ್‌ಫ್ರಾನ್ಸಿಸ್ಕೊ ನಗರದ ಕ್ರಿಸ್‌ ಪ್ಯಾಜೆಟ್‌ ಎಂಬುವವರು 2007ರ ಆರಂಭದಲ್ಲಿ ತೋರಿಸಿಕೊಟ್ಟರು. ಸಂಗ್ರಹಿಸಿದ ಮಾಹಿತಿ ಬಳಸಿ ನಕಲೀ ಪಾಸ್ಪೋರ್ಟ್‌ಗಳನ್ನು ಸಿದ್ದಪಡಿಸುವುದು ತೀರಾ ಸುಲಭ ಎಂಬ ಹೇಳಿಕೆಗೆ ಪುಷ್ಟಿ ನೀಡುತ್ತದೆ.[೯೦] ZDNet ಪ್ರಕಾರ, ಈ ತಂತ್ರಜ್ಞಾನ ವ್ಯಕ್ತಿಗಳ ಪ್ರತಿಯೊಂದು ಚಲನವಲನ-ಚಟುವಟಿಕೆಗಳ ಮೇಲೆ ಬೇಹುಗಾರಿಕೆ ನಡೆಸಿ, ಗೌಪ್ಯತೆಯ ಮೇಲೆ ಆಕ್ರಮಣಕಾರಿ ದಾಳಿಯಾಗುತ್ತದೆ ಎಂದು ಟೀಕಾಕಾರರು ವಾದಿಸುತ್ತಾರೆ. ಸರ್ಕಾರ ಈ ಅಧಿಕಾರದ ದುರುಪಯೋಗ ಮಾಡಿಕೊಳ್ಳಬಹುದೇ ಎಂಬ ಅನುಮಾನವನ್ನು ಟೀಕಾಕಾರರು ಗೊಂದಲದಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಸರ್ಕಾರವು ಪ್ರತಿಯೊಂದು ಚಲನವಲನ-ಚಟುವಟಿಕೆಯನ್ನೂ ಜಾಡು ಹಿಡಿಯುವ ಸಾಧ್ಯತೆಯನ್ನು ಕೆಲವರು ಪರಿಕಲ್ಪಿಸುತ್ತಾರೆ.[೯೧] ಕ್ಯಾಥರೀನ್‌ ಆಲ್ಬ್ರೆಕ್ಟ್‌ರ 'ಸ್ಪೈಚಿಪ್ಸ್‌: ಹೌ ಮೇಜರ್‌ ಕಾರ್ಪೊರೇಷನ್ಸ್‌ ಅಂಡ್‌ ಗವರ್ನ್‌ಮೆಂಟ್ಸ್‌ ಪ್ಲ್ಯಾನ್‌ ಟು ಟ್ರ್ಯಾಕ್‌ ಯುವರ್‌ ಎವರಿ ಮೂವ್‌ ವಿತ್‌ RFID' ಲೇಖನದಲ್ಲಿ, ರಹಸ್ಯರಹಿತ ಪ್ರಪಂಚದ ಕಲ್ಪನೆ ಮಾಡಿಕೊಳ್ಳಲು ಜನರಿಗೆ ಪ್ರೇರೇಪಿಸಿದ್ದಾರೆ. ನಿಮ್ಮ ಪ್ರತಿಯೊಂದು ಖರೀದಿಯನ್ನೂ ನಿಗಾ ವಹಿಸಿ, ಒಂದು ದತ್ತಾಂಶ ಸಂಗ್ರಹದಲ್ಲಿ ದಾಖಲಿಸಲಾಗುತ್ತದೆ, ನಿಮ್ಮ ಪ್ರತಿಯೊಂದು ಸ್ವತ್ತನ್ನೂ ಈ ಮೂಲಕ ಗಣಿಸಲಾಗುತ್ತದೆ. ನೀವು ಖರೀದಿಸಿದ ಪ್ರತಿಯೊಂದು ವಸ್ತುವಿನ ದಾಖಲೆಯನ್ನು ಬಹಳ ದೂರದ ರಾಜ್ಯ ಅಥವಾ ರಾಷ್ಟದಲ್ಲಿರುವ ಯಾರೋ ಒಬ್ಬರು ಜಾಡು ಹಿಡಿದಿರುತ್ತಾರೆ. ಇನ್ನೂ ಹೆಚ್ಚಿಗೆ, ಪರೋಕ್ಷವಾಗಿ ಅವುಗಳ ಜಾಡು ಹಿಡಿದು ನಿಗಾ ವಹಿಸಲಾಗುತ್ತದೆ.'.[೯೨] ಇನ್ನೂ ಸರಳವಾಗಿ, ಸರ್ಕಾರವು RFID ಚಿಪ್‌ಗಳನ್ನು ಬಳಸಿದರೆ ವ್ಯಕ್ತಿಯ ಗೌಪ್ಯತೆ ಅವರಿಗೆ ಅರಿವಿಲ್ಲದೆಯೇ ಅತಿಕ್ರಮ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಟೀಕಾಕಾರರು ವಾದಿಸುತ್ತಾರೆ.

ಇದನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Hacking Exposed Linux: Linux Security Secrets & Solutions (third ed.). McGraw-Hill Osborne Media. 2008. p. 298. ISBN 978-0-07-226257-5.
 2. Landt, Jerry (2001). "Shrouds of Time: The history of RFID" (PDF). AIM, Inc. Archived from the original (PDF) on 2009-03-27. Retrieved 2006-05-31.
 3. http://www.savi.com
 4. http://www.odintechnologies.com
 5. ಏರ್ಬಸ್‌ನಿಂದ ವಿಶಿಷ್ಟ ವಿಶ್ವಾದ್ಯಂತ RFID ಪಾಲುದಾರರಾಗಿ ODIN ಟೆಕ್ನಾಲಜೀಸ್‌ ಆಯ್ಕೆ Archived 2009-10-02 ವೇಬ್ಯಾಕ್ ಮೆಷಿನ್ ನಲ್ಲಿ.
 6. ಇರುವೆಗಳು ಸೂರು ಹುಡುಕುವ ಪ್ರವೃತ್ತಿಯ ಮೇಲೆ ಚೆಲ್ಲಿದ ಬೆಳಕು
 7. http://www.engadget.com/2007/02/14/hitachis-rfid-powder-freaks-us-the-heck-out
 8. TFOT (2007). "Hitachi Develops World's Smallest RFID Chip". Retrieved 2009-03-27.
 9. Imagineering (2007). "Optically Powered RFID Tags and Optical Tag Readers". Retrieved 2009-03-27.
 10. RFID ಪೇಮೆಂಟ್‌ ಕ್ಯಾರಿಯರ್‌
 11. http://www.rfidjournal.com/article/view/7224 RFID ಜರ್ನಲ್‌
 12. http://www.rfidjournal.com/article/articleview/2800/ RFID ಜರ್ನಲ್‌
 13. http://www.rfid-world.com/products/207200945 Archived 2010-03-23 ವೇಬ್ಯಾಕ್ ಮೆಷಿನ್ ನಲ್ಲಿ. RFID ವರ್ಲ್ಡ್‌
 14. Tay, Lay (2007-11-01). "HDB Introduces RFID Season Parking Ticket". RFID Asia. Retrieved 2009-10-17.
 15. "Tampereen Kaupunkiliikenne Liikelaitoksen historiaa". Retrieved 2009-12-10.
 16. http://www.banktech.com/architecture-infrastructure
 17. Webster (2008-02-13). "BAA and Emirates test new baggage tagging technology". Jetvine. Retrieved 2008-02-13.
 18. Beth Bacheldor (2007-10-18). "Agricultural Company Tracks Equipment Loaned to Farmers". RFID Journal. Retrieved 2008-01-03.
 19. Mary Catherine O'Connor (2007-02-13). "Purdue Moving OxyContin RFID Pilot to Full Production". RFID Journal. {{cite web}}: Text "accessdate-2008-12-13" ignored (help)
 20. Rhea Wessel. "Berliner Wasserbetriebe Gets RFID Tagging Project Flowing". RFID Journal. {{cite web}}: Text "accessdate-2009-02-09" ignored (help)
 21. "AEI technology". Softrail. Archived from the original on 2008-04-06. Retrieved 2008-10-12.
 22. *ಅನಿಮಲ್‌ ID ಪ್ರೊಗ್ರಾಮ್‌ ಸಂಬಂಧಿಸಿದಂತೆ USDAದಿಂದ ಖಾತರಿ
 23. ವಾಲ್‌-ಮಾರ್ಟ್‌ನಲ್ಲಿ RFIDನ ಔಟ್‌-ಆಫ್‌-ಸ್ಟಾಕ್‌ ಅಧ್ಯಯನದ ಸರಳೀಕರಣ, RFID ರೇಡಿಯೊ
 24. RFIDನ ಸೆಕೆಂಡ್‌ ವೇವ್‌, ಬುಸಿನೆಸ್‌ವೀಕ್‌
 25. Bacheldor, Beth (2008-01-11). "Sam's Club Tells Suppliers to Tag or Pay". Retrieved 2008-01-17.
 26. ""Looking Back at the Wal-Mart RFID Time Line". 2009-03-24. Retrieved 2009-12-3. {{cite news}}: |first= missing |last= (help); Check date values in: |accessdate= (help)
 27. DFARS 252.211-7006 ಕ್ಲಾಸ್‌ (a) (2).
 28. "Keeping Track of Promotion Progress: How Marketing Will Become the Greatest Advocate of RFID". Consumer Goods Technology. Archived from the original on 2008-04-11. Retrieved 2008-04-10. {{cite web}}: Italic or bold markup not allowed in: |publisher= (help); Unknown parameter |coauthers= ignored (help)
 29. ೨೯.೦ ೨೯.೧ ರೇಡಿಯೊ ಫ್ರೀಕ್ವೆನ್ಸಿ ಗುರುತಿಸುವಿಕೆ: ಗ್ರಂಥಾಲಯ ವೃತ್ತಿಯಲ್ಲಿರುವವರಿಗಾಗಿ ಪರಿಚಯ. ಅಲ್ಯಾನ್‌ ಬಟರ್ಸ್‌. ಆಸ್ಟ್ರಲೇಷಿಯನ್‌ ಪಬ್ಲಿಕ್‌ ಲೈಬ್ರರೀಸ್‌ v19.n4(2006) pp.2164–174.
 30. "ದಿ ಸ್ಟೇಟ್‌ ಆಫ್‌ RFID ಅಪ್ಲಿಕೇಷನ್ಸ್‌ ಇನ್‌ ಲೈಬ್ರರೀಸ್‌." ಜಯ್‌ ಸಿಂಗ್‌ ಮತ್ತು ಇತರರು. ಇನ್ಫರ್ಮೇಷನ್‌ ಟೆಕ್ನಾಲಜೀಸ್‌ ಅಂಡ್‌ ಲೈಬ್ರೆರೀಸ್‌ ನಂ.1(ಮಾರ್ಚ್‌.2006) ಪಿಪಿ.24–32.
 31. "ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌." ರಾಚೆಲ್‌ ವ್ಯಾಡ್‌ಹ್ಯಾಮ್‌. "ಲೈಬ್ರೆರಿ ಮೊಸಾಯಿಕ್ಸ್‌" ಸಂಪುಟ14 ಸಂಖ್ಯೆ.5 (S/O 2003) ಪುಟ.22.
 32. ಆಡಿಯೊಇಂಡೆಕ್ಸ್‌ - ದಿ ಟಾಕಿಂಗ್‌ ಲೈಬ್ರೆರಿ Archived 2010-01-17 ವೇಬ್ಯಾಕ್ ಮೆಷಿನ್ ನಲ್ಲಿ., 2007-07-25ರಂದು ಪುನಸೇರ್ಪಡೆಯಾದದ್ದು.
 33. Rahman, Rohisyam (2007-07-23). "Case Study: Malaysian Smart Shelf". RFID Asia. Retrieved 2007-08-03.
 34. "RFID ಪೊಸೆಸ್‌ ನೋ ಪ್ರಾಬ್ಲಮ್‌ ಫಾರ್‌ ಪ್ಯಾಟ್ರನ್‌ ಪ್ರೈವೆಸಿ." "ಅಮೆರಿಕನ್‌ ಲೈಬ್ರೆರೀಸ್‌" ಸಂಪುಟ34 ಸಂಖ್ಯೆ11 (D 2003) ಪು.86.
 35. Suman Sumi & Jatinder Kumar
 36. ಡಾಟಾಡಿಲ್ಸೈನೆಟ್‌ ಮಿಸ್ಫೊರ್ನಾಯ್ಡ್‌ ಮೆಡ್‌ ನೈ ಪಾಸ್‌ - ಡಿಜಿ.ಸಂಖ್ಯೆ Archived 2008-04-05 ವೇಬ್ಯಾಕ್ ಮೆಷಿನ್ ನಲ್ಲಿ. ಬಯೊಮೀಟ್ರಿಕ್‌ ಪಾಸ್‌ಪೋರ್ಟ್‌#ನಾರ್ವೇ ಇದರಲ್ಲೂ ಸಹ
 37. "Contactless inlays from SMARTRAC ordered for US ePassport project". Retrieved 2009-03-25.
 38. "United States sets date for E-passports".
 39. "ಆರ್ಕೈವ್ ನಕಲು". Archived from the original on 2011-08-13. Retrieved 2010-03-22.
 40. http://networks.silicon.com/lans/0,39024663,39122042,00.htm Archived 2012-04-27 ವೇಬ್ಯಾಕ್ ಮೆಷಿನ್ ನಲ್ಲಿ. ಶಾಲಾಮಕ್ಕಳಲ್ಲಿ RFID-ಅಳವಡಿಕೆ
 41. ಶಾಲಾಮಕ್ಕಳಿಗೆ ಚಿಪ್‌ ಅಳವಡಿಕೆಯ ಪ್ರಯೋಗ 'ಯಶಸ್ಸು'
 42. ಎಸ್‌. ಹ್ಸಿ ಎನ್‌ ಎಚ್‌. ಫೈಟ್‌, "ಭೇಟಿನೀಡುವವರಿಗೆ ಪರಿಶೋಧನಾ ತಾಣದಲ್ಲಿ ಸಂಗ್ರಹಾಲಯ ಅನುಭವವನ್ನು RFID ವರ್ಧಿಸುತ್ತದೆ," ಕಮ್ಯುನಿಕೇಷನ್ಸ್ ಆಫ್‌ ದಿ ACM 48, 9 (2005): 60
 43. ಪೂರ್ಣ ಸುಸಜ್ಜಿತ RFID ಅಂಗಡಿಯಲ್ಲಿ 'ಸೋಷಿಯಲ್‌ ಷಾಪಿಂಗ್‌, RFID ರೇಡಿಯೊ
 44. ಬಾರ್ಸಿಲೊನಾ ಕ್ಲಬ್‌-ಹೋಕರಲ್ಲಿ ಚಿಪ್‌ ಅಳವಡಿಕೆ. BBC ನ್ಯೂಸ್‌, 29 ಸೆಪ್ಟೆಂಬರ್‌ 2004
 45. "ಆರ್ಕೈವ್ ನಕಲು". Archived from the original on 2011-02-18. Retrieved 2010-03-22.
 46. "ಹೈಟೆಕ್‌ ಕ್ಲೋನಿಂಗ್‌". Archived from the original on 2010-04-28. Retrieved 2010-03-22.
 47. ವೆರಿಚಿಪ್‌ನೊಳಗೆ ಅಕ್ರಮಪ್ರವೇಶ - ಸುದ್ದಿ ಬಿಡುಗಡೆ Archived 2010-12-11 ವೇಬ್ಯಾಕ್ ಮೆಷಿನ್ ನಲ್ಲಿ., ಸ್ಪೈಚಿಪ್ಸ್‌
 48. "Demo: Cloning a Verichip". Retrieved 2007-02-03.
 49. "VeriChips Implanted at CityWatcher.com". Compliance and Privacy. Retrieved 2007-02-03. No one I spoke with at Six Sigma Security or at CityWatcher knew that the VeriChip had been hacked. They were also surprised to hear of VeriChip's downsides as a medical device. It was clear they weren't aware of some of the controversy surrounding the implant. (Liz McIntyre)
 50. http://www.spychips.com/devices/verichip-fda-report.html Archived 2012-03-23 ವೇಬ್ಯಾಕ್ ಮೆಷಿನ್ ನಲ್ಲಿ. CASPIAN ವಿಶೇಷ ವರದಿ, 19 ಅಕ್ಟೋಬರ್‌ 2004: ವೆರಿಚಿಪ್‌ ಸುರಕ್ಷೆ, ಮಾಹಿತಿ ಭದ್ರತೆ ಕುರಿತು ಪ್ರಶ್ನೆಗಳನ್ನೆತ್ತಿದ FDA ಪತ್ರ
 51. US ಕಸ್ಟಮ್ಸ್‌ ಅಂಡ್‌ ಬಾರ್ಡರ್‌ ಪ್ರೊಟೆಕ್ಷನ್‌ NEXUSನ ಜಾಲತಾಣ[ಶಾಶ್ವತವಾಗಿ ಮಡಿದ ಕೊಂಡಿ]US ಕಸ್ಟಮ್ಸ್‌ ಅಂಡ್‌ ಬಾರ್ಡರ್‌ ಪ್ರೊಟೆಕ್ಷನ್‌ SENTRIಯ ಜಾಲತಾಣ[ಶಾಶ್ವತವಾಗಿ ಮಡಿದ ಕೊಂಡಿ]
 52. NADRA ಚಾಲನಾ ಅನೂಜ್ಞಾ ಪತ್ರ Archived 2009-02-05 ವೇಬ್ಯಾಕ್ ಮೆಷಿನ್ ನಲ್ಲಿ.NADRA ಚಾಲನಾ ಅನೂಜ್ಞಾ ಪತ್ರ Archived 2009-02-05 ವೇಬ್ಯಾಕ್ ಮೆಷಿನ್ ನಲ್ಲಿ.
 53. ಜನಪ್ರಿಯ ಕೆಲವು ಉತ್ತರ ಅಮೆರಿಕಾದ ಆಕರ್ಷಕ ಕೆಲವು RFID ಅನ್ವಯಿಕೆಗಳು, RFID ರೇಡಿಯೊ
 54. "ನ್ಯೂಸ್ಕ್ರಿಪ್ಟ್ಸ್‌", ಕೆಮಿಕಲ್‌ ಅಂಡ್‌ ಇಂಜಿನಿಯರಿಂಗ್‌ ನ್ಯೂಸ್‌ ಮ್ಯಾಗಜೀನ್‌, ಸಂಪುಟ. 86 ಸಂಖ್ಯೆ. 31, 04 ಆಗಸ್ಟ್‌ 2008, ಪುಟ 56
 55. ಏಕಮಾನ-ಮಟ್ಟದಲ್ಲಿ ಗುರುತಿಸುವ ಯೋಜನೆ ನಡೆಸಹೊರಟ ರೈಟ್‌ ಏಯ್ಡ್‌, RFID ಜರ್ನಲ್‌
 56. "ಆರ್ಕೈವ್ ನಕಲು". Archived from the original on 2009-03-07. Retrieved 2010-03-22.
 57. http://www.touchatag.com Archived 2009-02-26 at the Library of Congress
 58. ರಿಯಲ್‌ ಟೈಮ್‌ ಲೊಕೇಷನ್‌ ಸಿಸ್ಟಮ್ಸ್‌ (RTLS)ನ ವ್ಯಾವಹಾರಿಕ ಔಚಿತ್ಯ, RFID ರೇಡಿಯೊ
 59. "ಸ್ಯಾನ್ಟಿಯಾಗೊ ಡಿಪೇರೆಸ್‌". Archived from the original on 2009-09-06. Retrieved 2010-03-22.
 60. ಮಾರ್ಟೇನ್‌ ಮೆಯಿನ್ಟ್ಸ್‌ (2007), D3.7 ರೇಡಿಯೊ ಫ್ರೀಕ್ವೆನ್ಸಿ ಗುರುತಿಸುವಿಕೆ(RFID)ಯ ತಾಂತ್ರಿಕ ಉಪಯೋಗದ ವಿಚಾರ ಕುರಿತು ಮಾಹಿತಿ ಮತ್ತು ಲೇಖನಗಳ ವ್ಯವಸ್ಥಿತ ಸಂಗ್ರಹ, FIDIS ಡೆಲಿವರಬಲ್‌ 3(7), ಜೂನ್‌ 2007. [೧]
 61. Paolo Magrassi (2001). "A World Of Smart Objects: The Role Of Auto Identification Technologies". Retrieved 2007-06-24.
 62. Pete Harrison (2009). "EU considers overhauling rules for lost air luggage". Retrieved 2009-09-09.
 63. ಫಿಷರ್‌, ಜಿಲ್‌ ಎ. 2006. ಒಳಾಂಗಣ ಆವರಿಸುವಿಕೆ ಮತ್ತು ಡಿಜಿಟಲ್‌ ನಿರ್ವಹಣೆ: ಆಸ್ಪತ್ರೆಗಳಲ್ಲಿ ಉದಯೋನ್ಮುಖ ಬೇಹುಗಾರಿಕೆಯ ವ್ಯವಸ್ಥೆಗಳು. ಇನ್‌ ಟಿ. ಮೊನಹನ್‌ (ಸಂಪಾದಕರು), ಬೇಹುಗಾರಿಕೆ ಮತ್ತು ಭದ್ರತಾ ವ್ಯವಸ್ಥೆ: ದೈನಿಕ ಜೀವನದಲ್ಲಿ ತಾಂತ್ರಿಕ ರಾಜಕೀಯ ಮತ್ತು ಅಧಿಕಾರ (ಪಿಪಿ. 77–88). ನ್ಯೂಯಾರ್ಕ್‌: ರುಟ್ಲೆಡ್ಜ್‌.[೨]
 64. ಫಿಷರ್‌, ಜಿಲ್‌ ಎ. ಮತ್ತು ಮೊನಹನ್‌, ಟೊರಿನ್‌. ಆಸ್ಪತ್ರೆಗಳಲ್ಲಿ RFID ವ್ಯವಸ್ಥೆಗಳ ಸಾಮಾಜಿಕ ಪ್ರಮಾಣಗಳನ್ನು ಅರಸುವುದು. ಇಂಟರ್ನ್ಯಾಷನಲ್‌ ಜರ್ನಲ್‌ ಆಫ್‌ ಮೆಡಿಕಲ್‌ ಇನ್ಫರ್ಯಾಟಿಕ್ಸ್‌ 77 (3): 176-183.[೩]
 65. ಬ್ಯಾಚೆಲ್ಡರ್‌, ಬೆತ್‌. "ಶುಶ್ರೂಷಕಿಯರ ವೈದ್ಯಕೀಯ ತಪಾಸಣೆಗೆ RFID-ಸಕ್ರಿಯ ಹಸ್ತ-ಉಪಕರಣದ ನೆರವು." RFID ಜರ್ನಲ್‌. ಜುಲೈ 2007. [೪]
 66. Roberti, Mark (2006-05-06). "A 5-Cent Breakthrough". RFID Journal. Retrieved 2007-01-26.
 67. "Radio Silence". The Economist. 7 June 2007.
 68. "What's New". Radio Frequency Identification (RFID). 4 April 2007.
 69. Tedjasaputra, Adi (2006-12-11). "Putting RFID Network Security in Perspective". RFID Asia. Retrieved 2007-08-03.
 70. "RFID Privacy and Security". RSA Laboratories. Archived from the original on 2006-12-18. Retrieved 2010-03-22.
 71. "RFID Passports cracked. Easily, cheaply, and quickly". wired. Retrieved 2007-03-21.
 72. "RFID Passports cracked through the mail". the register. Retrieved 2007-03-21.
 73. "FIPS-201, Personal Identity Verification (PIV) of Federal Employees and Contractors" (PDF). NIST.
 74. "Can Aluminum Shield RFID Chips?". RFID Shield. Archived from the original on 2014-03-30. Retrieved 2010-03-22.
 75. "Aluminum Foil Does Not Stop RFID". Omniscience is Bliss.
 76. Gilbert, Alorie (18 August 2003). "Privacy advocates call for RFID regulation". News.com.
 77. ಮಾರ್ಕಸ್‌ ಹ್ಯಾನ್ಸೆನ್‌, ಸೆಬಸ್ಟೀನ್‌ ಮೀಸ್ನರ್‌: RFID ಟ್ಯಾಗ್‌ಗಳ ಮೇಲಿರುವ ವಿದ್ಯುನ್ಮಾನ ಉತ್ಪನ್ನ ಸಂಕೇತ ಬಳಸಿ ವ್ಯಕ್ತಿಗಳ ಮತ್ತು ಸಾಮಾಜಿಕ ಜಾಲತಾಣಗಳನ್ನು ಗುರುತಿಸಿ ನಿಗಾ ವಹಿಸುವುದು Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ., IFIP ಸಮ್ಮರ್‌ ಸ್ಕೂಲ್‌, ಕಾರ್ಲ್‌ಸ್ಟಾಡ್‌, 2007, ಚಿತ್ರಪಟಗಳು Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ..
 78. "Today at PC World". Archived from the original on 2011-09-28. Retrieved 2010-03-22.
 79. "@DEFCON RFID World Record Attempt..." Archived from the original on 2009-02-07. Retrieved 2010-03-22.
 80. Katherine Albrecht, Liz McIntyre. "The METRO "Future Store" Special Report". Spychips. Archived from the original on 2005-05-08. Retrieved 2010-03-22.
 81. Richard M Stallman. "The WSIS in Tunis".
 82. K. C. Jones. "Free Software Advocate Attracts U.N. Security After Blocking RFID Tags". Infowars.
 83. FTC "ರೇಡಿಯೊ ಫ್ರೀಕ್ವೆನ್ಸಿ ಗುರುತಿಸುವಿಕೆ: ಗ್ರಾಹಕರಿಗಾಗಿ ಅನ್ವಯಿಕೆಗಳು ಮತ್ತು ಅಂತರಾರ್ಥಗಳು" (March 2005) http://www.ftc.gov/os/2005/03/050308rfidrpt.pdf 2008-01-29ರಂದು ಹಿಂಪಡೆದದ್ದು.
 84. monochrom. "R F I D".
 85. Greene, Thomas C. (2004). "Feds approve human RFID implants". Retrieved 2007-03-01.
 86. "Barcelona clubbers get chipped". news.bbc.co.uk. BBC News. 2004-09-29. Retrieved 2008-10-12. {{cite news}}: Cite has empty unknown parameter: |coauthors= (help)
 87. ಮೊನಹನ್‌, ಟೊರಿನ್‌ ಅಂಡ್‌ ಟೈಲರ್‌ ವಾಲ್‌. 2007. ಸೊಮ್ಯಾಟಿಕ್‌ ಸರ್ವೇಲೆಂಸ್‌: ಕಾರ್ಪೊರಿಯಲ್‌ ಕಂಟ್ರೊಲ್‌ ತ್ರೂ ಇನ್ಫರ್ಮೇಷನ್‌ ನೆಟ್ವರ್ಕ್ಸ್‌. ಸರ್ವೇಲೆಂಸ್‌ ಅಂಡ್‌ ಸೊಸೈಟಿ 4 (3): 154-173.[೫] Archived 2016-06-15 ವೇಬ್ಯಾಕ್ ಮೆಷಿನ್ ನಲ್ಲಿ.
 88. "ರಾಯ್ಟರ್ಸ್‌". Archived from the original on 2008-05-16. Retrieved 2010-03-22.
 89. [೬]
 90. [೭]
 91. "ಆರ್ಕೈವ್ ನಕಲು". Archived from the original on 2010-03-24. Retrieved 2010-03-22.
 92. [೮]

ಬಾಹ್ಯ ಕೊಂಡಿಗಳು[ಬದಲಾಯಿಸಿ]