ಸ್ಮಾರ್ಟ್ ಕಾರ್ಡ್
ಸ್ಮಾರ್ಟ್ ಕಾರ್ಡ್, ಚಿಪ್ ಕಾರ್ಡ್ , ಅಥವಾ ಇಂಟಿಗ್ರೇಟೆಡ್ ಸರ್ಕ್ಯೂಟ್ನ ಕಾರ್ಡ್ (ಐಸಿಸಿ) ಎಂಬೆಡೆಡ್ ಅನುಕಲಿತ ಮಂಡಲಗಳಲ್ಲಿ ಯಾವುದೇ ಪಾಕೆಟ್ ಗಾತ್ರದ ಕಾರ್ಡ್ ಆಗಿದೆ. ಸ್ಮಾರ್ಟ್ ಕಾರ್ಡ್ಗಳನ್ನು ಪ್ಲಾಸ್ಟಿಕ್ನಿಂದ ತಯಾರಿಸಲಾಗುತ್ತದೆ, ಸಾಮಾನ್ಯವಾಗಿ ಪೊಲಿವಿನ್ಯಲ್ ಕ್ಲೋರೈಡ್ನಿಂದ, ಆದರೆ ಕೆಲವೊಮ್ಮೆ ಪಾಲಿಎಥೈಲಿನ್ ಟೆರೆಫ್ಥಲೇಟ್ ಆಧಾರಿತ ಪಾಲಿಸ್ಟರ್, ಆಕ್ರಿನೊಲಿಟ್ರೈಲ್ ಬ್ಯೂಟಾಡಯೀನ್ ಸ್ಟೈರೀನ್ ಅಥವಾ ಪಾಲಿಕಾರ್ಬೊನೇಟ್. ಏಪ್ರಿಲ್ ೨೦೦೯ ರಿಂದ, ಜಪಾನಿನ ಕಂಪನಿಯು ಕಾಗದದಿಂದ ಮಾಡಿದ ಪುನರ್ಬಳಕೆ ಹಣಕಾಸು ಸ್ಮಾರ್ಟ್ ಕಾರ್ಡ್‍ಗಳನ್ನು ತಯಾರಿಸುತ್ತಿದೆ.
ಸ್ಮಾರ್ಟ್ ಕಾರ್ಡ್ಗಳು ಸಂಪರ್ಕಸಹಿತ ಅಥವಾ ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್ ಆಗಿರಬಹುದು. ಸ್ಮಾರ್ಟ್ ಕಾರ್ಡ್ ವೈಯಕ್ತಿಕ ಗುರುತಿಸುವಿಕೆ, ದೃಢೀಕರಣ, ದತ್ತ ಸಂಗ್ರಹಣೆ, ಮತ್ತು ಅನ್ವಯ ಸಂಸ್ಕರಣೆ ಒದಗಿಸಬಲ್ಲದು. ದೊಡ್ಡ ಸಂಸ್ಥೆಗಳಲ್ಲಿ ಸ್ಮಾರ್ಟ್ ಕಾರ್ಡ್‍ಗಳು ಸಿಂಗಲ್ ಸೈನ್-ಆನ್‍ಗಾಗಿ ಬಲವಾದ ಭದ್ರತಾ ದೃಢೀಕರಣ ಒದಗಿಸಬಲ್ಲವು.
ಇತಿಹಾಸ
[ಬದಲಾಯಿಸಿ]ಆವಿಷ್ಕಾರ
[ಬದಲಾಯಿಸಿ]೧೯೬೮ ಮತ್ತು ೧೯೬೯ ರಲ್ಲಿ ಹೆಲ್ಮಟ್ ಗ್ರೊಟ್ಟ್ರುಪ್ ಮತ್ತು ಜುರ್ಗೆನ್ ಡೆಥ್ಲೊಫ಼್ ಜಂಟಿಯಾಗಿ ಸ್ವಯಂಚಾಲಿತ ಚಿಪ್ ಕಾರ್ಡ್‍ಗಾಗಿ ಪೇಟೆಂಟ್ ಸಲ್ಲಿಸಿದರು. ರೋಲ್ಯಾಂಡ್ ಮೊರೆನೊ ಸ್ಮೃತಿಕೋಶ ಕಾರ್ಡ್ ಪರಿಕಲ್ಪನೆಗೆ ೧೯೭೪ ರಲ್ಲಿ ಪೇಟೆಂಟನ್ನು ಪಡೆದರು. ಇಂದು ಉಪಯೋಗಿಸಲಾಗುವ ಸೂಕ್ಷ್ಮಸಂಸ್ಕಾರಕ ಮತ್ತು ಸ್ಮೃತಿಕೋಶವನ್ನು ಒಳಗೊಂಡಿರುವ ಸ್ಮಾರ್ಟ್ ಕಾರ್ಡುಗಳಿಗಾಗಿ ಒಂದು ಪ್ರಮುಖ ಪೇಟೆಂಟನ್ನು ೧೯೭೬ ರಲ್ಲಿ ಜರ್ಗನ್ ಡೆಥ್ಲೊಫ಼್ ಸಲ್ಲಿಸಿದರು, ಮತ್ತು ೧೯೭೮ರಲ್ಲಿ ಯು.ಎಸ್.ಪಿ ೪೧೦೫೧೫೬ ಪೇಟೆಂಟ್ ನೀಡಲಾಯಿತು. ೧೯೭೭ರಲ್ಲಿ ಹನಿವೆಲ್ ಬುಲ್‍ನ ಮೈಕೆಲ್ ಉಗೊನ್ ಎರಡು ಚಿಪ್‍ಗಳಿರುವ ಮೊದಲ ಮೈಕ್ರೊಪ್ರೊಸೆಸರ್ ಸ್ಮಾರ್ಟ್ ಕಾರ್ಡ್ ಆವಿಷ್ಕರಿಸಿದರು ಮತ್ತು ೧೯೭೮ ರಲ್ಲಿ, ಅವರು ಚಿಪ್ಅನ್ನು ಕ್ರಮವಿಧಿಕರಿಸಲು ಅಗತ್ಯ ಸಂರಚನೆಯನ್ನು ವರ್ಣಿಸುವ ಸ್ವಯಂ ಕ್ರಮವಿಧಿಕರಿಸಬಲ್ಲ ಏಕ ಚಿಪ್ ಮೈಕ್ರೊಕಂಪ್ಯೂಟರ್‍ಗಾಗಿ ಪೇಟೆಂಟನ್ನು ಪಡೆದಿದ್ದಾರೆ. ಮೂರು ವರ್ಷಗಳ ನಂತರ, ಈ ಸ್ವಾಮ್ಯದ ಸನ್ನದನ್ನು ಮೊಟೊರೊಲಾ ತನ್ನ "ಸಿಪಿ೮" ನಲ್ಲಿ ಬಳಸಿಕೊಂಡಿದೆ . ಆ ಸಮಯದಲ್ಲಿ ಬುಲ್, ಸ್ಮಾರ್ಟ್ ಕಾರ್ಡ್‍ಗೆ ಸಂಬಂಧಿಸಿದ ೧೨೦೦ ಪೇಟೆಂಟ್ಗಳನ್ನು ಪಡೆದುಕೊಂಡಿತ್ತು. ೨೦೦೧ ರಲ್ಲಿ ಬುಲ್, ಸಿಪಿ೮ ವಿಭಾಗದ ಜೊತೆಗೆ ಅದರ ಪೇಟೆಂಟ್‍ಗಳನ್ನು ಷ್ಲುಂಬರ್ಗರ್‍ಗೆ ಮಾರಾಟಮಾಡಿತು, ತರುವಾಯ ಷ್ಲುಂಬರ್ಗರ್ ಆಕ್ಸಾಲ್ಟೊ ರಚಿಸಲು ತನ್ನದೇ ಆದ ಆಂತರಿಕ ಸ್ಮಾರ್ಟ್ ಕಾರ್ಡ್ ವಿಭಾಗವನ್ನು ಸಿಪಿ೮ನೊಂದಿಗೆ ಒಗ್ಗೂಡಿಸಿತು. ೨೦೦೬ ರಲ್ಲಿ, ಆ ಸಮಯದಲ್ಲಿ ವಿಶ್ವದ ಅಗ್ರ ಎರಡು ಸ್ಮಾರ್ಟ್ ಕಾರ್ಡ್ ತಯಾರಕರಾಗಿದ್ದ ಆಕ್ಸಾಲ್ಟೊ ಮತ್ತು ಗೆಮ್ಪ್ಲಸ್, ವಿಲೀನಗೊಂಡು ಗೆಮಾಲ್ಟೊದ ರಚನೆಯಾಯಿತು. ೨೦೦೮ ರಲ್ಲಿ ಡೆಕ್ಸ ಸಿಸ್ಟಮ್ಸ್ ಷ್ಲುಂಬರ್ಗರ್‍ನಿಂದ ಹೊರಹೊಮ್ಮಿ ಎಂಟರ್ಪ್ರೈಸ್ ಸೆಕ್ಯುರಿಟಿ ಸರ್ವಿಸ್ ವಹಿವಾಟನ್ನು ತನ್ನದಾಗಿಸಿಕೊಂಡಿತು, ಮತ್ತು ಇದು ಮೊದಲ ಬೃಹತ್ ಪ್ರಮಾಣದ ಸಾರ್ವಜನಿಕ ಕೀಲಿ ಮೂಲಸೌಕರ್ಯ ಆಧಾರಿತ ಸ್ಮಾರ್ಟ್ ಕಾರ್ಡ್ ನಿರ್ವಹಣಾ ವ್ಯವಸ್ಥೆಗಳನ್ನು ನಿಯೋಜಿಸಲು ಜವಾಬ್ದಾರವಾಗಿದ್ದ ಸ್ಮಾರ್ಟ್ ಕಾರ್ಡ್ ಪರಿಹಾರಗಳ ವಿಭಾಗವನ್ನು ಒಳಗೊಂಡಿತ್ತು.
ಕಾರ್ಡ್‍ಗಳ ಮೊದಲ ಸಾಮೂಹಿಕ ಬಳಕೆ ಫ್ರೆಂಚ್ ಪೇ ಫೋನ್‍ಗಳಲ್ಲಿ ಪಾವತಿಗಾಗಿ ದೂರವಾಣಿ ಕಾರ್ಡ್ ರೂಪದಲ್ಲಿ ೧೯೮೩ ರಲ್ಲಿ ಆರಂಭವಾಯಿತು.
ಸಂಪರ್ಕರಹಿತ ವ್ಯವಸ್ಥೆಗಳ ಅಭಿವೃದ್ಧಿ
[ಬದಲಾಯಿಸಿ]ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್‍ಗಳಿಗೆ ಕಾರ್ಡ್ ಮತ್ತು ಓದು ಸಾಧನದ ನಡುವೆ ಭೌತಿಕ ಸಂಪರ್ಕದ ಅವಶ್ಯಕತೆ ಇಲ್ಲ. ಇವು ಹಣ ಪಾವತಿ ಮತ್ತು ಟಿಕೆಟ್ಗಳನ್ನು ಪೂರೈಸಲು ಹಾಗು ಕೊಂಡುಕೊಳ್ಳಲು ಹೆಚ್ಚು ಜನಪ್ರಿಯವಾಗುತ್ತಿವೆ. ಇದರ ವಿಶಿಷ್ಟ ಉಪಯೋಗಗಳು ಸಮೂಹ ಸಾರಿಗೆ ಮೋಟಾರುದಾರಿ ಸುಂಕದ ಪಾವತಿಯನ್ನು ಒಳಗೊಂಡಿವೆ. ವೀಸಾ ಮತ್ತು ಮಾಸ್ಟರ್‍ಕಾರ್ಡ್ ಅಮೇರಿಕಾದಲ್ಲಿ ೨೦೦೪-೨೦೦೬ರಲ್ಲಿ ನಿಯೋಜಿಸಲಾದ ಒಂದು ಆವೃತ್ತಿಯನ್ನು ಕಾರ್ಯಗತಗೊಳಿಸಿದವು. ಬಹುತೇಕ ಸಂಪರ್ಕರಹಿತ ಶುಲ್ಕ ಸಂಗ್ರಹ ವ್ಯವಸ್ಥೆಗಳು ಹೊಂದಾಣಿಕೆಯಾಗುವುದಿಲ್ಲವಾದರೂ, ಎನ್.ಎಕ್ಸ್.ಪಿ ಸೆಮಿಕಂಡಕ್ಟರ್ಸ್‍ನ ಎಮ್.ಐ.ಎಫ್.ಎ.ಆರ್.ಇ ಮಾನದಂಡ ಕಾರ್ಡ್ ಅಮೇರಿಕಾ ಮತ್ತು ಯುರೋಪ್ನಲ್ಲಿ ಒಂದು ಗಣನೀಯ ಮಾರುಕಟ್ಟೆ ಪಾಲು ಹೊಂದಿದೆ.
ಸ್ಮಾರ್ಟ್ ಕಾರ್ಡಗಳನ್ನು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಗುರುತು ಮತ್ತು ಅರ್ಹತೆಗಾಗಿಯೂ ಪರಿಚಯಿಸಲಾಗುತ್ತಿದೆ. ಈ ಬಳಕೆಗಳು ನಾಗರಿಕ ಕಾರ್ಡ್, ಚಾಲಕರ ಪರವಾನಗಿ, ಮತ್ತು ರೋಗಿಗಳ ಕಾರ್ಡುಗಳನ್ನು ಒಳಗೊಂಡಿವೆ. ಮಲೇಷ್ಯಾದಲ್ಲಿ, ಕಡ್ಡಾಯ ರಾಷ್ಟ್ರೀಯ ಗುರುತಿನ ಮೈಕ್ಯಾಡ್ ೮ ಅನ್ವಯಗಳಿಗೆ ಅನುವು ಮಾಡಿಕೊಟ್ಟಿದೆ ಮತ್ತು ೧೮ ದಶಲಕ್ಷ ಬಳಕೆದಾರರನ್ನು ಹೊಂದಿದೆ. ಅಂತರರಾಷ್ಟ್ರೀಯ ಪ್ರವಾಸದ ಸುರಕ್ಷತೆಯನ್ನು ಹೆಚ್ಚಿಸಲು, ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್‍ಗಳು ಐ.ಸಿ.ಎ.ಒ ಬಯೋಮೆಟ್ರಿಕ್ ಪಾಸ್ಪೋರ್ಟ್‍ಗಳ ಭಾಗವಾಗಿವೆ.
ವಿನ್ಯಾಸ
[ಬದಲಾಯಿಸಿ]ಸ್ಮಾರ್ಟ್ ಕಾರ್ಡ್ ಕೆಳಗಿನ ಜಾತಿವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರಬಹುದು:
- ಕ್ರೆಡಿಟ್ ಕಾರ್ಡ್ಅನ್ನು ಹೋಲುವ ಆಯಾಮಗಳು. ಐ.ಎಸ್.ಒ/ಐ.ಇ.ಸಿ ೭೮೧೦ ಮಾನದಂಡದ ಐಡಿ -೧ ಅತ್ಯಲ್ಪವಾಗಿ ೮೫.೬೦ X ೫೩.೯೮ ಮಿಲಿಮೀಟರ್ ಎಂದು ಕಾರ್ಡ್‍ಗಳನ್ನು ವ್ಯಾಖ್ಯಾನಿಸುತ್ತದೆ. ಐಡಿ - ೦೦೦ ಮತ್ತೊಂದು ಜನಪ್ರಿಯ ಗಾತ್ರ ಮತ್ತು ಇದು ಅತ್ಯಲ್ಪವಾಗಿ ೨೫ X ೧೫ ಮಿಲಿಮೀಟರ್ (ಸಾಮಾನ್ಯವಾಗಿ ಸಿಮ್ ಕಾರ್ಡ್‍ಗಳಲ್ಲಿ ಬಳಸಲಾಗುತ್ತದೆ). ಎರಡೂ ೦.೭೬ ಮಿಲಿಮೀಟರ್ ದಪ್ಪವಿರುತ್ತವೆ.
- ತಿದ್ದುನಿರೋಧಕ ಭದ್ರತಾ ವ್ಯವಸ್ಥೆಯನ್ನು ಹೊಂದಿರುತ್ತದೆ (ಉದಾಹರಣೆಗೆ ಸುರಕ್ಷಿತ ಗೂಢಲಿಪಿ ಸಂಸ್ಕಾರಕ ಮತ್ತು ಸುರಕ್ಷಿತ ಕಡತ ವ್ಯವಸ್ಥೆ) ಮತ್ತು ಭದ್ರತಾ ಸೇವೆಗಳನ್ನು ಒದಗಿಸುತ್ತದೆ (ಉದಾ: ಸ್ಮೃತಿಕೋಶದಲ್ಲಿನ ಮಾಹಿತಿಯನ್ನು ರಕ್ಷಿಸುತ್ತದೆ).
- ಕಾರ್ಡ್‍ನೊಂದಿಗೆ ಸುರಕ್ಷಿತವಾಗಿ ಮಾಹಿತಿ ಮತ್ತು ಸಂರಚನಾ ಅಳವಡಿಕೆಗಳನ್ನು ವಿನಿಮಯ ಮಾಡುವ, ಕಾರ್ಡ್ ಬಹಿಷ್ಕರಣೆ ಮತ್ತು ಅನ್ವಯ-ದತ್ತ ನವೀಕರಣಗಳನ್ನು ನಿಯಂತ್ರಿಸುವ ಒಂದು ಆಡಳಿತ ವ್ಯವಸ್ಥೆಯಿಂದ ನಿರ್ವಹಿಸಲ್ಪಡುತ್ತದೆ.
- ಟಿಕೆಟ್ ಓದು ಸಾಧನಗಳು, ಎಟಿಎಂ, ಡಿಪ್ ರೀಡರ್, ಇತ್ಯಾದಿಗಳಂತಹ ಕಾರ್ಡ್ ಓದುವ ಸಾಧನಗಳ ಮೂಲಕ ಬಾಹ್ಯ ಸೇವೆಗಳೊಂದಿಗೆ ಸಂವಹನ ಮಾಡುತ್ತದೆ.
ಸಂಪರ್ಕಸಹಿತ ಸ್ಮಾರ್ಟ್ ಕಾರ್ಡ್
[ಬದಲಾಯಿಸಿ]ಸಂಪರ್ಕಸಹಿತ ಸ್ಮಾರ್ಟ್ ಕಾರ್ಡ್‍ಗಳು ಹಲವಾರು ಸುವರ್ಣ ಲೇಪಿತ ಸಂಪರ್ಕ ಫಲಕಗಳನ್ನು ಒಳಗೊಂಡಿರುವ, ಸುಮಾರು ೧ ಚದರ ಸೆಂಟಿಮೀಟರ್‍ನ ಒಂದು ಸಂಪರ್ಕ ಪ್ರದೇಶವನ್ನು ಹೊಂದಿರುತ್ತವೆ. ಒಂದು ಓದು ಸಾಧನದಲ್ಲಿ ತೂರಿಸಿದಾಗ ಈ ಫಲಕಗಳು ವಿದ್ಯುತ್ ಸಂಪರ್ಕತೆಯನ್ನು ಒದಗಿಸುತ್ತವೆ ಮತ್ತು ಇದನ್ನು ಸ್ಮಾರ್ಟ್ ಕಾರ್ಡ್ ಮತ್ತು ಆತಿಥೇಯ ಯಂತ್ರ (ಉದಾಹರಣೆಗೆ, ಒಂದು ಕಂಪ್ಯೂಟರ್, ಮಾರಾಟ ಸ್ಥಳದ ಯಂತ್ರ) ಅಥವಾ ಚರ ದೂರವಾಣಿಯ ನಡುವೆ ಸಂವಹನ ಮಾಧ್ಯಮವಾಗಿ ಬಳಸಲಾಗುತ್ತದೆ. ಕಾರ್ಡ್‍ಗಳು ವಿದ್ಯುತ್ಕೋಶಗಳನ್ನು ಹೊಂದಿರುವುದಿಲ್ಲ; ಕಾರ್ಡ್‍ನ ಓದು ಸಾಧನ ವಿದ್ಯುತ್ ಪೂರೈಸುತ್ತದೆ.
ಐ.ಎಸ್.ಒ/ಐ.ಇ.ಸಿ ೭೮೧೦ ಮತ್ತು ಐ.ಎಸ್.ಒ/ಐ.ಇ.ಸಿ ೭೮೧೬ ಮಾನದಂಡಗಳ ಸರಣಿ ಕೆಳಗಿನವನ್ನು ವ್ಯಾಖ್ಯಾನಿಸುತ್ತವೆ:
- ಭೌತಿಕ ಆಕಾರ ಮತ್ತು ಗುಣಲಕ್ಷಣಗಳು
- ವಿದ್ಯುತ್ ಕೂಡುಸಾಧನದ ಸ್ಥಾನಗಳು ಮತ್ತು ಆಕಾರಗಳು
- ವಿದ್ಯುತ್ ಗುಣಲಕ್ಷಣಗಳು
- ಸಂವಹನ ಸಂಹಿತೆ, ಕಾರ್ಡಿಗೆ ಕಳುಹಿಸಲಾದ ಆದೇಶಗಳು ಮತ್ತು ಅದರಿಂದ ದೊರೆತ ಪ್ರತಿಸ್ಪಂದನಗಳು ಸೇರಿದಂತೆ
- ಮೂಲಭೂತ ಕಾರ್ಯಾತ್ಮಕತೆ
ಹಣಕಾಸು ಕಾರ್ಡ್‍ಗಳಲ್ಲಿನ ಚಿಪ್‍ಗಳು ಮೊಬೈಲ್ ಫೋನ್‍ನಲ್ಲಿನ ಚಂದಾದಾರ ಗುರುತು ಘಟಕಗಳಲ್ಲಿ (ಸಿಮ್) ಬಳಸಲಾದ ಚಿಪ್‍ಗಳಂತೆಯೇ ಇರುವುದರಿಂದ, ಮತ್ತು ಕೇವಲ ವಿಭಿನ್ನವಾಗಿ ಪ್ರೋಗ್ರಾಮ್ ಮಾಡಲಾದ ಮತ್ತು ಪಿವಿಸಿಯ ಬೇರೆ ತುಣುಕಿನಲ್ಲಿ ಹುದುಗಿಸಲಾದ್ದರಿಂದ, ಚಿಪ್ ತಯಾರಕರು[೨] ಹೆಚ್ಚು ಬೇಡಿಕೆಯ ಜಿಎಸ್ಎಮ್/೩ಜಿ ಮಾನದಂಡಕ್ಕೆ ನಿರ್ಮಿಸುತ್ತಿದ್ದಾರೆ. ಆದ್ದರಿಂದ, ಉದಾಹರಣೆಗೆ, ಇಎಮ್‍ವಿ ಮಾನದಂಡ ಒಂದು ಚಿಪ್ ಕಾರ್ಡ್‍ಗೆ ಅದರ ಟರ್ಮಿನಲ್‍ನಿಂದ ೫೦ ಮಿಲಿ ಆಂಪೇರ್‍ವರೆಗೂ ಸೆಳೆಯಲು ಅನುಮತಿಸುತ್ತದಾದರೂ, ಕಾರ್ಡ್‍ಗಳು ಸಾಮಾನ್ಯವಾಗಿ ಸಂಪೂರ್ಣವಾಗಿ ದೂರವಾಣಿ ಉದ್ಯಮದ ೬ ಮಿಲಿ ಆಂಪೇರ್ ಮಿತಿಗೂ ಕೆಳಗಿರುತ್ತವೆ. ಇದು ಹೆಚ್ಚು ಸಣ್ಣ ಮತ್ತು ಹೆಚ್ಚು ಅಗ್ಗದ ಹಣಕಾಸು ಕಾರ್ಡ್ ಟರ್ಮಿನಲ್‍ಗಳಿಗೆ ಅನುಮತಿಸುತ್ತದೆ.
ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್
[ಬದಲಾಯಿಸಿ]ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್ ಕಾರ್ಡ್‍ನ ಎರಡನೇ ಪ್ರಕಾರ ಮತ್ತು ಇದರಲ್ಲಿ ಕಾರ್ಡು ಆರ್‍ಎಫ್ ಪ್ರೇರಣಾ ತಂತ್ರಜ್ಞಾನದ ಮೂಲಕ ಓದು ಸಾಧನದೊಂದಿಗೆ ಸಂಪರ್ಕಿಸುತ್ತದೆ ಮತ್ತು ಅದರಿಂದಲೇ ಶಕ್ತಿ ಪಡೆಯುತ್ತದೆ ( ೧೦೬-೮೪೮ ಕಿಲೊಬೈಟ್/ಎಸ್ ಡೇಟಾ ದರದಲ್ಲಿ). ಸಂಪರ್ಕಿಸಲು ಈ ಕಾರ್ಡ್‍ಗಳಿಗೆ ಕೇವಲ ಒಂದು ಸ್ಪರ್ಶತಂತುವಿಗೆ ಸಾಮೀಪ್ಯದ ಅಗತ್ಯವಿರುತ್ತದೆ. ಸಂಪರ್ಕಗಳಿರುವ ಸ್ಮಾರ್ಟ್ ಕಾರ್ಡ್‍ಗಳಂತೆ, ಸಂಪರ್ಕರಹಿತ ಕಾರ್ಡ್‍ಗಳು ಆಂತರಿಕ ಶಕ್ತಿ ಮೂಲವನ್ನು ಹೊಂದಿರುವುದಿಲ್ಲ.
ಸಂಕರ ಕಾರ್ಡ್
[ಬದಲಾಯಿಸಿ]ಉಭಯ ಸಂಪರ್ಕ
ಉಭಯ ಸಂಪರ್ಕ ಕಾರ್ಡ್‍ಗಳು ಸ್ವಲ್ಪ ಹಂಚಿಕೊಂಡ ಸಂಗ್ರಹಣೆ ಮತ್ತು ಸಂಸ್ಕರಣೆಯೊಂದಿಗೆ ಒಂದೇ ಕಾರ್ಡ್‍ನಲ್ಲಿ ಸಂಪರ್ಕರಹಿತ ಮತ್ತು ಸಂಪರ್ಕಸಹಿತ ಸಾಧನಗಳನ್ನು ಕಾರ್ಯಗತ ಮಾಡಿಕೊಂಡಿರುತ್ತವೆ . ಉದಾಹರಣೆಗೆ ಸಂಪರ್ಕರಹಿತ ಮತ್ತು ಸಂಪರ್ಕಸಹಿತ ಎರಡೂ ಸಾಧನಗಳಿರುವ ಒಂದು ಚಿಪ್ಅನ್ನು ಬಳಸುವ ಆಂಡಾಂಟೆ ಎಂದು ಕರೆಯಲಾಗುವ ಪೋರ್ಟೊ ನ ಬಹು ಅನ್ವಯ ಸಾರಿಗೆ ಕಾರ್ಡ್ .
ಅನ್ವಯಗಳು
[ಬದಲಾಯಿಸಿ]ಗುರುತಿಸುವಿಕೆ
[ಬದಲಾಯಿಸಿ]ಸ್ಮಾರ್ಟ್ ಕಾರ್ಡ್ ಗುರುತನ್ನು ದೃಢೀಕರಿಸಬಹುದು. ಕೆಲವೊಮ್ಮೆ, ಅವು ಸಾರ್ವಜನಿಕ ಕೀಲಿ ಮೂಲಸೌಕರ್ಯ (ಪಿಕೆಐ) ಬಳಸಿಕೊಳ್ಳುತ್ತವೆ. ಕಾರ್ಡ್ ಪಿಕೆಐ ಒದಗಿಸುವವರು ನೀಡಿರುವ ಗೂಢಲಿಪಿಕೃತ ಡಿಜಿಟಲ್ ಪ್ರಮಾಣಪತ್ರವನ್ನು ಇತರ ಸಂಬಂಧಿತ ಮಾಹಿತಿ ಜೊತೆಗೆ ಸಂಗ್ರಹಿಸಿಡುತ್ತದೆ. ಉದಾಹರಣೆಗಳು ಅಮೇರಿಕಾದ ರಕ್ಷಣಾ ಇಲಾಖೆಯ (ಡಿಒಡಿ) ಸಾಮಾನ್ಯ ಪ್ರವೇಶ ಕಾರ್ಡ್ (ಸಿಎಸಿ), ಮತ್ತು ಇತರ ಸರ್ಕಾರಗಳು ತಮ್ಮ ನಾಗರಿಕರಿಗೆ ಬಳಸಲಾಗುವ ಇತರ ಕಾರ್ಡುಗಳನ್ನು ಒಳಗೊಂಡಿವೆ. ಅವು ಜೀವಮಿತೀಯ ಗುರುತಿನ ದತ್ತವನ್ನು ಒಳಗೊಂಡಿದ್ದರೆ, ಕಾರ್ಡ್‍ಗಳು ಉನ್ನತ ಎರಡು ಅಥವಾ ಮೂರು ಅಪವರ್ತನದ ದೃಢೀಕರಣ ಒದಗಿಸಬಲ್ಲವು.
ಸ್ಮಾರ್ಟ್ ಕಾರ್ಡ್‍ಗಳು ಯಾವಾಗಲೂ ಗೋಪ್ಯತೆ ವೃದ್ಧಿಸುವ ವಸ್ತು ಅಲ್ಲ, ಏಕೆಂದರೆ ವ್ಯಕ್ತಿಯು ಕಾರ್ಡ್ ಮೇಲೆ ಆರೋಪಕ್ಕೊಳಪಡಿಸಬಹುದಾದ ಮಾಹಿತಿಯನ್ನು ಸಾಗಿಸಬಹುದು. ಸಂಚಿ ಅಥವಾ ಉಡುಪಿನ ಒಳಗಿಂದ ಸಹ ಓದಬಲ್ಲ ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್‍ಗಳು ದೃಢೀಕರಣವನ್ನು ಸರಳಗೊಳಿಸಬಹುದು; ಆದಾಗ್ಯೂ, ಅಪರಾಧಿಗಳು ಈ ಕಾರ್ಡ್‍ಗಳಿಂದ ದತ್ತಾಂಶವನ್ನು ಪಡೆದುಕೊಳ್ಳಬಹುದು.[೩]
ಗೂಢಲಿಪಿ ಆಧಾರಿತ ಸ್ಮಾರ್ಟ್ ಕಾರ್ಡ್‍ಗಳನ್ನು ಅನೇಕವೇಳೆ ಸಿಂಗಲ್ ಸೈನ್-ಆನ್‍ಗಾಗಿ ಬಳಸಲಾಗುತ್ತದೆ. ಬಹುತೇಕ ಅತ್ಯಾಧುನಿಕ ಸ್ಮಾರ್ಟ್ ಕಾರ್ಡ್‍ಗಳು ಆರ್.ಎಸ್.ಎ ಮತ್ತು ಡಿ.ಎಸ.ಎ ಯಂತಹ ಕ್ರಮಾವಳಿಗಳನ್ನು ಬಳಸುವ ವಿಶಿಷ್ಟ ಗೂಢಲಿಪಿ ಆಧಾರಿತ ಯಂತ್ರಾಂಶವನ್ನು ಒಳಗೊಂಡಿರುತ್ತವೆ. ಇಂದಿನ ಗೂಢಲಿಪಿ ಆಧಾರಿತ ಸ್ಮಾರ್ಟ್ ಕಾರ್ಡ್‍ಗಳು ಗೂಢಪದದ ಒಂದಕ್ಕಿಂತ ಹೆಚ್ಚು ನಕಲನ್ನು ಹೊಂದಿರುವ ಅಪಾಯವನ್ನು ತಪ್ಪಿಸಲು ಫಲಕದ ಮೇಲೆಯೇ ಗೂಢಪದ ಯುಗ್ಮಗಳನ್ನು ರಚಿಸುತ್ತವೆ (ಏಕೆಂದರೆ ವಿನ್ಯಾಸದಲ್ಲಿ ಸಾಮಾನ್ಯವಾಗಿ ಸ್ಮಾರ್ಟ್‍ಕಾರ್ಡ್‍ಗಳಿಂದ ಖಾಸಗಿ ಗೂಢಪದಗಳನ್ನು ಹೊರತೆಗೆಯಲು ಯಾವುದೇ ದಾರಿಯಿಲ್ಲ). ಅಂತಹ ಸ್ಮಾರ್ಟ್ ಕಾರ್ಡ್‍ಗಳನ್ನು ಮುಖ್ಯವಾಗಿ ಸಾಂಖ್ಯಿಕ ಸಹಿಗಳು ಮತ್ತು ಸುರಕ್ಷಿತ ಗುರುತಿಸುವಿಕೆಗೆ ಬಳಸಲಾಗುತ್ತದೆ.