ಹೆನ್ರಿ ಗ್ವಿನ್ ಜೆಫ್ರಿಸ್ ಮೋಸ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆನ್ರಿ ಮೋಸ್ಲೆ

ಹೆನ್ರಿ ಗ್ವಿನ್ ಜೆಫ್ರಿಸ್ ಮೋಸ್ಲೆ (1887-1915) ಇಂಗ್ಲೆಂಡಿನ ಒಬ್ಬ ಭೌತವಿಜ್ಞಾನಿ. ಈತನ ಹೆಸರಿನಿಂದ ಪ್ರಸಿದ್ಥವಾಗಿರುವ ಭೌತನಿಯಮದ ಆವಷ್ಕರ್ತೃ.

ಜೀವನ ಮತ್ತು ಸಾಧನೆಗಳು[ಬದಲಾಯಿಸಿ]

ಜನನ ಇಂಗ್ಲೆಂಡಿನ ಡಾರ್ಸೆಟ್‌ಶೈರಿನ ವೇಮೌತ್ ಎಂಬಲ್ಲಿ 23-11-1887. ಆಕ್ಸಫರ್ಡ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಪದವೀಧರನಾಗಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನಿ ರುದರ್ಫರ್ಡ್ ಜೊತೆ ಸಂಶೋಧನೆ ಕಾರ್ಯವನ್ನು ಮಾಡತೊಡಗಿದ.

ಎಕ್ಸ್‌ಕಿರಣಗಳನ್ನು ಆಳವಾಗಿ ಅಧ್ಯಯನಮಾಡಿದ್ದ ಈತ ಅದೇತಾನೇ (1913) ಬೋರ್ ಎಂಬ ವಿಜ್ಞಾನಿಯಿಂದ ಪ್ರತಿಪಾದಿಸಲ್ಪಟ್ಟ ಹೈಡ್ರೊಜನ್ ಪರಮಾಣು ಸಿದ್ಧಾಂತವನ್ನು ಎಕ್ಸಕಿರಣಗಳಿಗೂ ಅನ್ವಯಿಸಬಹುದೆಂಬುದನ್ನು ತೋರಿಸಿಕೊಟ್ಟ. ಅನೇಕ ಪರಮಾಣುಗಳ ಎಕ್ಸಕಿರಣ ರೋಹಿತಗಳನ್ನು ಸಮೀಕ್ಷಿಸಿ[೧] ಮತ್ತು Kx ಮತ್ತು Lx ಎಂಬರೆಡು ವಿಶಿಷ್ಟ ಎಕ್ಸಕಿರಣಗಳ ಅವರ್ತಾಂಕವನ್ನು

ಎಂಬ ಸೂತ್ರದಿಂದ ನಿರೂಪಿಸಿದ. ಇಲ್ಲಿ R ರಿಡ್ಬರ್ಗ್ ಸ್ಥಿರಾಂಕ, Z ಪರಮಾಣು ಸಂಖ್ಯೆ,  n1, n2  ಪೂರ್ಣಾಂಕಗಳು, σ ಮರೆಮಾಡುವ ಸ್ಥಿರಾಂಕ.

ಈಗ ನ್ನು Zನ ಎದುರು ಆಲೇಖಿಸಿದರೆ ಸರಳರೇಖೆಗಳು ದೊರೆಯುತ್ತದೆ. ಮೋಸ್ಲೆ ಚಿತ್ರಗಳೆಂಬ ಹೆಸರಿನ ಇವು ಬೋರ್ ಪ್ರತಿಪಾದಿಸಿದ ಪರಮಾಣು ಸಿದ್ಧಾಂತವನ್ನು ದೃಢಪಡಿಸಿದವಲ್ಲದೆ ಆವರ್ತಕೋಷ್ಟಕದಲ್ಲಿಯ ಕೆಲವೊಂದು ದೋಷಗಳನ್ನು ಸರಿಪಡಿಸಿದುವು ಕೂಡ. ಉದಾಹರಣೆಗೆ ಮೋಸ್ಲೆಯ ನಿಯಮ ಸ್ಥಾಪಿತವಾಗುವ ಮುನ್ನ ಆವರ್ತಕೋಷ್ಟಕದಲ್ಲಿ ನಿಕಲಿನ ಸ್ಥಾನ ಕೋಬಾಲ್ಟಿನದಕ್ಕಿಂತ ಮೊದಲಿಗೆ ಬರುತ್ತಿತ್ತು. ಏಕೆಂದರೆ ನಿಕಲಿನ ಪರಮಾಣು ತೂಕ (28) ಕೋಬಾಲ್ಟಿನದಕ್ಕಿಂತ (27) ಕಿಂಚಿತ್ ಕಡಿಮೆ ಆದರೆ ಮೋಸ್ಲೆ ಚಿತ್ರಗಳಿಂದ ಕೋಬಾಲ್ಟಿನ ಪರಮಾಣು ಸಂಖ್ಯೆ ನಿಕಲಿನದಕ್ಕಿಂತ ಕಡಿಮೆ ಎಂದು ನಿಸ್ಸಂದೇಹವಾಗಿ ಸಿದ್ಧವಾಯಿತು. ಆದ್ದರಿಂದ ಆವರ್ತಕೋಷ್ಟಕದಲ್ಲಿ ಮೊದಲು ಕೋಬಾಲ್ಟ್ (Z=27) ತದನಂತರ ನಿಕಲ್ (Z=28) ಎಂದು ಸಿದ್ಧವಾಯಿತು. ಹೀಗೆ ಪರಮಾಣುಸಂಖ್ಯೆ ಆವರ್ತಕೋಷ್ಟಕದಲ್ಲಿ ಆ ಪರಮಾಣುವಿನ ಸ್ಥಾನವನ್ನು ನಿರ್ಧರಿಸುತ್ತದೆಯೇ ವಿನಾ ಭಾರವನ್ನಲ್ಲ ಎಂಬುದು ಮನದಟ್ಟಾಯಿತು. ಅಲ್ಲಿಯ ತನಕ ಶೋಧವಾಗಿರದಿದ್ದ ಹಲವು ಧಾತುಗಳು ಮೋಸ್ಲೆ ಬೆಳಕಿಗೆ ಬಂದುವು.

ಒಂದನೆಯ ಮಹಾಯುದ್ಧ ಪ್ರಾರಂಭವಾದೊಡನೆ ಮೋಸ್ಲೆ ರಾಯಲ್ ಎಂಜಿನಿಯರ್ಸ್ ಎಂಬ ಮಿಲಿಟರಿ ವಿಭಾಗದಲ್ಲಿ ಅಧಿಕಾರಿಯಾಗಿ ದಾಖಲಾದ. ತುರ್ಕಿಯ ಗ್ಯಾಲಿಪೋಲಿ ಎಂಬಲ್ಲಿ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ 1915 ಆಗಸ್ಟ್ 10ರಂದು ಅಕಾಲಮೃತ್ಯುವಿಗೆ ಬಲಿಯಾದ.

ಉಲ್ಲೇಖಗಳು[ಬದಲಾಯಿಸಿ]

  1. Moseley, H.G.J. (1913). "The high-frequency spectra of the elements". Philosophical Magazine. 6th series. 26: 1024–1034.

ಹೆಚ್ಚಿನ ಓದಿಗೆ[ಬದಲಾಯಿಸಿ]