ಹಂದಿಗೋಡು ಸಿಂಡ್ರೋಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹಂಡಿಗೊಡು ಸಿಂಡ್ರೋಮ್ ಇಂದ ಪುನರ್ನಿರ್ದೇಶಿತ)

ಹಂದಿಗೋಡು ಸಿಂಡ್ರೋಮ್ ಅಥವಾ ಹಂದಿಗೋಡು ಕಾಯಿಲೆ ಭಾರತಕರ್ನಾಟಕ ರಾಜ್ಯದ ಮಲೆನಾಡು ಪ್ರದೇಶದಲ್ಲಿ ಸ್ಥಳೀಯವಾಗಿ ಕಂಡುಬರುವ ಒಂದು ಅಪರೂಪದ ಮತ್ತು ನೋವಿನಿಂದ ಕೂಡಿದ ಸಂಧಿವಾತದ ಕಾಯಿಲೆಯಾಗಿದೆ. [೧] ಹಂಡಿಗೊಡು ಜಾಯಿಂಟ್ ಡಿಸೀಸ್ ಎಂದೂ ಕರೆಯಲ್ಪಡುವ ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬ ಹಳ್ಳಿಯಲ್ಲಿ ಇದು ಪತ್ತೆಯಾದದ್ದರಿಂದ ಈ ಹೆಸರನ್ನು ಪಡೆದುಕೊಂಡಿದೆ. ಈ ರೋಗಕ್ಕೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ[೨]. ವೈಜ್ಞಾನಿಕವಾಗಿ ಇದನ್ನು ಮಲ್ನಾಡ್ ಎಂಡಿಮಿಕ್ ಫ್ಯಾಮಿಲಿಯಲ್ ಆರ್ಥ್ರೈಟಿಸ್ ಎಂದು ಕರೆಯಲಾಗುತ್ತದೆ. ಇದುವರೆಗು 1000 ಕ್ಕಿಂತಲೂ ಹೆಚ್ಚು ಜನರು ಇದರಿಂದ ಜೀವವನ್ನು ಕಳೆದುಕೊಂಡಿದಾರೆ ಮತ್ತು ಅನೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದಾರೆ[೩]. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕುಗಳಿಂದ ಈ ರೋಗವನ್ನು ವರದಿ ಮಾಡಲಾಗಿದೆ.

ಇತಿಹಾಸ[ಬದಲಾಯಿಸಿ]

ಹಂದಿಗೋಡು ಸಿಂಡ್ರೋಮ್ ನು 1974-75ರ ಅವಧಿಯಲ್ಲಿ ಹಂದಿಗೋಡು ಗ್ರಾಮದಲ್ಲಿ ಎಚ್ ಎಂ ಚಂದ್ರಶೇಖರ್ ಗಮನಿಸಿದರು [೪]. ತೀವ್ರ ಕೀಲು ಮತ್ತು ಸೊಂಟದ ನೋವಿನಿಂದ ಬಳಲುತ್ತಿದ್ದ ನಾಲ್ವರು ರೋಗಿಗಳನ್ನು ಸಾಗರದ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಈ ಕಾಯಿಲೆಯನ್ನು ಕಂಡುಹಿಡಿಯಲು ಸಾಧ್ಯವಾಗದ ವೈದ್ಯರು ಕೆಲವು ನರಗಳ ಅಸ್ವಸ್ಥತೆಯಿಂದಾದ ನೋವು ಎಂದು ಉಹಿಸಿದರು. ಈ ರೋಗದ ಬಗ್ಗೆ ಮಾಹಿತಿ ಪಡೆದ, ನಿಮ್ಹಾನ್ಸ್ನ ನರವಿಜ್ಞಾನಿ ಕೆ. ಎಸ್. ಮಣಿ ನೇತೃತ್ವದ ತಜ್ಞರ ತಂಡವು ಈ ಪ್ರದೇಶಕ್ಕೆ ಭೇಟಿ ನೀಡಿತು. ರೋಗಿಗಳನ್ನು ಪರೀಕ್ಷಿಸಿದ ನಂತರ, ಅವರು ಯಾವುದೇ ನರ ಸಂಬಂಧಿಸಿದ ಅಸ್ವಸ್ಥತೆಯನ್ನು ತಳ್ಳಿಹಾಕಿದರು ಹಾಗೂ ಮೂಳೆ ಮತ್ತು ಕೀಲು ಅಸ್ವಸ್ಥತೆಯಿಂದ ನೋವು ಉಂಟಾಗುತ್ತದೆ ಎಂದು ಸೂಚಿಸಿದರು[೫].

ರೋಗಲಕ್ಷಣಗಳು[ಬದಲಾಯಿಸಿ]

ಜನ್ಮತಃ ಕುಬ್ಜತೆ, ಸೊಂಟ ಮತ್ತು ಮೊಣಕಾಲಿನ ಕೀಲುಗಳಲ್ಲಿ ಊತ ಮತ್ತು ತೀಕ್ಷ್ಣ ನೋವು. ಏಳು ವರುಷಗಳ ನಂತರ ಮೂಳೆಗಳು ಮತ್ತು ಅಸ್ಥಿಪಂಜರ ವಿರೂಪಗೋಳುತ್ತೆ. 25 ರಿಂದ 30 ವರ್ಷಗಳು ಅಥವಾ ಅದಕ್ಕಿಂತ ಕಿರಿಯ ವಯಸ್ಸಿನಲಿಯೇ ಮರಣ ಸಂಬವಿಸುತ್ತದೆ. ಪೀಡಿತ ರೋಗಿಗಳ ಚಲನಶೀಲತೆಗೆ ಅನುಗುಣವಾಗಿ, ರೋಗವನ್ನು ಮೂರು ತೀವ್ರತೆಗಳೊಂದಿಗೆ ಗುರುತಿಸಲಾಗಿದೆ: ಸೌಮ್ಯವಾದ ಮತ್ತು ಮಧ್ಯಮ ಸಂದರ್ಭಗಳಲ್ಲಿ, ರೋಗಿಯು ಕಷ್ಟದಿಂದ ನಡೆಯಲು ಸಾಧ್ಯವಾಗುತ್ತದೆ, ತೀವ್ರತರವಾದ ಸಂದರ್ಭಗಳಲ್ಲಿ ಚಲನಶೀಲತೆ ಬಹಳ ನಿರ್ಬಂಧಿತವಾಗಿರುತ್ತದೆ, ಆದರೆ ತೀವ್ರವಾದ ಸಂದರ್ಭಗಳಲ್ಲಿ ಅಂಗಗಳು ಬಾಗುತ್ತದೆ ಮತ್ತು ರೋಗಿಗಳು ಕ್ರಾಲ್ ಮಾಡಲು ಕೆಟ್ಟದಾಗಿ ದುರ್ಬಲರಾಗಿದ್ದಾರೆ[೬].

ಸಂಶೋಧನೆ[ಬದಲಾಯಿಸಿ]

ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಹೈದರಾಬಾದ್[ಶಾಶ್ವತವಾಗಿ ಮಡಿದ ಕೊಂಡಿ]ನ ವಿಜ್ಞಾನಿಗಳು ರೋಗ ಪೀಡಿತ ಪ್ರದೇಶಗಳಲ್ಲಿ ಸಂಶೋಧನೆ ನಡೆಸಿತು ಮತ್ತು ಈ ರೋಗವು ದಲಿತ ವರ್ಗಕ್ಕೆ ಸೀಮಿತವಾಗಿದು, ಈ ರೋಗವು ಎಲ್ಲಾ ವಯಸ್ಸಿನ ಜನರಲ್ಲಿಯೂ ಪರಿಣಾಮ ಬೀರಿದೆ ಮತ್ತು ಇದು ಸಾಂಕ್ರಾಮಿಕ ಮತ್ತು ಸೋಂಕಿತವಲ್ಲದ್ದು ಎಂದು ಅವರು ಕಂಡುಹಿಡಿದರು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿವಿಧ ವೈದ್ಯಕೀಯ ಕ್ಷೇತ್ರಗಳಿಂದ ತಜ್ಞರನ್ನು ಒಳಗೊಂಡಿರುವ ಅಧ್ಯಯನ ಗುಂಪುಗಳನ್ನು ರಚಿಸಿತು. ಈ ಗುಂಪುಗಳು ನಾಲ್ಕು ವರ್ಷಗಳ (1984-88) ರೋಗ ಪೀಡಿತ ಸ್ಥಳಗಳಿಗೆ ಪ್ರಯೋಗಗಳನ್ನು ನಡೆಸಲು ಭೇಟಿ ನೀಡಿತು. ಅವರಿಗೆ ಕರ್ನಾಟಕದ ಆರೋಗ್ಯ ಇಲಾಖೆ ಸಹ ನೆರವು ನೀಡಿತು. ವ್ಯಾಪಕ ಸಂಶೋಧನೆಯನ್ನು ಕೈಗೊಂಡರೂ, ತಂಡವು ರೋಗದ ಕಾರಣಕ್ಕೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ತಂಡವು 1988 ರಲ್ಲಿ ಮೊದಲ ಹಂತದ ಸಂಶೋಧನೆಯು ಮುಕ್ತಾಯವಾಯಿತು [೫]. ಸಂಶೋಧನೆಯ ಎರಡನೆಯ ಹಂತವನ್ನು ಐಸಿಎಂಆರ್ 2001 ರಲ್ಲಿ ಲಕ್ನೌದಲ್ಲಿನ ಸಂಜಯ್ ಗಾಂಧಿ ಸ್ನಾತಕೋತ್ತರ ಕೇಂದ್ರದ ಎಸ್ ಎಸ್ ಅಗರ್ವಾಲ್ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು. ಎರಡನೇ ಹಂತದಲ್ಲಿ ರೋಗಿಗಳ ಕ್ಷ-ಕಿರಣ ಮತ್ತು ರೋಗವು ತಳಿಶಾಸ್ತ್ರಕ್ಕೆ ಸಂಬಂಧಿಸಿವೆಯೇ ಎಂದು ನೋಡಲು ತಮ್ಮ ಕುಟುಂಬದ ಇತಿಹಾಸವನ್ನು ಅಧ್ಯಯನ ಮಾಡಲಾಗುತ್ತದೆ. ಹಂದಿಗೊಡು ಸಿಂಡ್ರೋಮ್ ಕೌಟುಂಬಿಕ ಸ್ಪಾಡಿಲೊಲೋಪಿ (ಮೆಟಾ) ಫಿಸಲ್ ಡಿಸ್ಪ್ಲಾಸಿಯಾದ ಒಂದು ಸಿಂಡ್ರೋಮ್ ಎಂದು ಅಧ್ಯಯನವು ವರದಿ ಮಾಡಿತು. ಇದು ಆಟೋಸೋಮಲ್ ಪ್ರಾಬಲ್ಯ ಲಕ್ಷಣವಾಗಿ ಆನುವಂಶಿಕವಾಗಿ ಬರುತ್ತದೆ. ಮೊನೊಜೆನಿಕ್ ಅಸ್ವಸ್ಥತೆಯ ಪರಿಣಾಮವಾಗಿ ಮೂಳೆಗಳ ದೋಷಪೂರಿತ ಬೆಳವಣಿಗೆಯಿಂದ ಈ ರೋಗವು ಉಂಟಾಗುತ್ತದೆ [೭]

ಸಹಾಯ[ಬದಲಾಯಿಸಿ]

ಈ ಕಾಯಿಲೆಯಿಂದ ವಿಕಲಚೇತನಗೊಂಡವರಿಗೆ ಕರ್ನಾಟಕ ಸರ್ಕಾರದ ನಿಧಿಯಿಂದ ಜೀವನಾಧಾರ ಕೊಡುಗೆಯನ್ನು ಒದಗಿಸಲಾಗಿದೆ. ಅವರಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಸಹ ಒದಗಿಸಲಾಗಿದೆ. ಪೀಡಿತ ರೋಗಿಗಳನ್ನು ಆಸ್ಪತ್ರೆಗೆ ವರ್ಗಾಯಿಸಲು ಆಂಬುಲೆನ್ಸ್ ಅನ್ನು ಒದಗಿಸಲಾಗಿದೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಘಟಕವನ್ನು ಸ್ಥಾಪಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://www.thehindu.com/2005/09/13/stories/2005091309130100.htm
  2. https://web.archive.org/web/20070521060127/http://www.deccanherald.com/Content/May192007/state200705182509.asp
  3. B. R. Srikanth. "Helping Handigodu Battle Its Unique Malady". Online webpage of the Outlook, 1999-01-18. © Outlook Publishing (India) Private Limited. Archived from the original on 2011-06-11. Retrieved 2007-05-30
  4. https://web.archive.org/web/20110611032651/http://www.outlookindia.com/mad.asp?sid=&fodname=19990118&fname=Difference.htm&synopsis=Handigodu+syndrome
  5. ೫.೦ ೫.೧ http://www.thehindu.com/thehindu/2002/01/18/stories/2002011800720300.htm
  6. https://www.ncbi.nlm.nih.gov/pmc/articles/PMC2894646/
  7. https://www.ncbi.nlm.nih.gov/pubmed/7886470