ವಿಷಯಕ್ಕೆ ಹೋಗು

ಸುಂಕಮಾಫಿ ಅಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Dutyfreeshopping.jpg
ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ಕಂಡುಬರುವ ಒಂದು ಮಾದರಿಯಾದ ತೆರಿಗೆ-ರಹಿತ ಅಂಗಡಿ,
ಟೆಲ್ ಅವಿವ್, ಇಸ್ರೇಲ್ ನ ಬೆನ್ ಗುರಿಯೋನ್ ವಿಮಾನ ನಿಲ್ದಾಣದಲ್ಲಿ ಕಂಡುಬರುವ ತೆರಿಗೆ ರಹಿತ ಅಂಗಡಿಗಳು
ಓಸ್ಲೋ, ನಾರ್ವೆಯ ಓಸ್ಲೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬರುವ ತೆರಿಗೆ ರಹಿತ ಅಂಗಡಿಗಳು
ಚಿತ್ರ:COK Duty Free 2.jpg
ಭಾರತದ ಕೊಚ್ಚಿಯಲ್ಲಿರುವ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕಂಡುಬರುತ್ತಿರುವ ತೆರಿಗೆ ರಹಿತ ಮದ್ಯದ ಅಂಗಡಿಗಳು
ತೆರಿಗೆ ರಹಿತ ಅಂಗಡಿಗಳು ಸಾಮಾನ್ಯವಾಗಿ ಮದ್ಯದ ವ್ಯಾಪಕ ಶ್ರೇಣಿಗಳನ್ನು ಮಾರಾಟ ಮಾಡುತ್ತವೆ
ಟಾರ್ಫೈಯನೋವ್ಕ-ವಾಲಿಮಾ ಗಾಡಿಯಲ್ಲಿ ಕದುಬರುತ್ತಿರುವ ತೆರಿಗೆ ರಹಿತ ಅಂಗಡಿ (E18)

ಸುಂಕ-ಮಾಫಿ ಅಂಗಡಿಗಳು (ಅಥವಾ ಮಳಿಗೆಗಳು ) ಬಿಡಿಮಾರಾಟದ ಅಂಗಡಿಗಳಾಗಿದ್ದು, ಇವುಗಳಿಗೆ ಸ್ಥಳೀಯ ಅಥವಾ ರಾಷ್ಟ್ರೀಯ ತೆರಿಗೆಗಳು ಹಾಗು ಸುಂಕಗಳನ್ನು ವಿಧಿಸಲಾಗುವುದಿಲ್ಲ. ಆದಾಗ್ಯೂ ಸುಂಕ-ಮಾಫಿ ಶಾಪಿಂಗ್ ಎಂಬುದು ಸ್ವಲ್ಪಮಟ್ಟಿಗೆ ಅಪಪ್ರಯೋಗವೆನಿಸುತ್ತದೆ ಏಕೆಂದರೆ ಗ್ರಾಹಕರು ತಮ್ಮ ದೇಶದಲ್ಲೇ ಇರುವ ತೆರಿಗೆ-ರಹಿತ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದ ಹೊರತಾಗಿಯೂ ಸುಂಕಗಳನ್ನು ಪಾವತಿಸಬೇಕಾದ ಅಗತ್ಯವಿರುತ್ತದೆ. ಇಂತಹ ಮಳಿಗೆಗಳು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಸಮುದ್ರ ತೀರದ ಬಂದರುಗಳು ಅಥವಾ ಪ್ರಯಾಣಿಕ ಹಡಗುಗಳಂತಹ ಅಂತಾರಾಷ್ಟ್ರೀಯ ವಲಯಗಳಲ್ಲಿ ಕಂಡುಬರುತ್ತವೆ. ಇಂತಹ ಮಳಿಗೆಗಳು ಸಾಮಾನ್ಯವಾಗಿ ರಸ್ತೆ ಅಥವಾ ರೈಲಿನಲ್ಲಿ ಪ್ರಯಾಣ ಬೆಳೆಸುವವರಿಗೆ ಕಂಡುಬರುವುದಿಲ್ಲ, ಆದಾಗ್ಯೂ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಕೆನಡಾದ ನಡುವೆ ಕಾರಿನಲ್ಲಿ ಪ್ರಯಾಣಿಸುವವರಿಗೆ ಹಲವಾರು ಗಡಿ ಭಾಗಗಳಲ್ಲಿ ಇಂತಹ ಸುಂಕಮಾಫಿ ಮಳಿಗೆಗಳು ಕಂಡುಬರುತ್ತವೆ.

1999ರಲ್ಲಿ ಯುರೋಪಿಯನ್ ಒಕ್ಕೂಟದೊಳಗೆ ಪ್ರಯಾಣಿಸುವವರು ಈ ಮಳಿಗೆಗಳಲ್ಲಿ ಖರೀದಿಸುವುದಕ್ಕೆ ನಿಷೇಧ ಹೇರಲಾಯಿತು, ಆದರೆ EUನ ಹೊರಭಾಗದಲ್ಲಿ ವಾಸ್ತವ್ಯ ಹೂಡಿರುವ ಪ್ರಯಾಣಿಕರಿಗೆ ಈ ಮಳಿಗೆಗಳಲ್ಲಿ ಖರೀದಿಸುವ ಅವಕಾಶ ನೀಡಲಾಯಿತು. ಮಳಿಗೆಯವರು ಅಂತರ್-EU ಪ್ರಯಾಣಿಕರಿಗೆ ವಸ್ತುಗಳನ್ನು ಮಾರಾಟ ಮಾಡುತ್ತಾರಾದರೂ ಸೂಕ್ತವಾದ ತೆರಿಗೆಯನ್ನು ವಿಧಿಸುತ್ತಾರೆ. ಕೆಲವು ವಿಶೇಷ ಸದಸ್ಯ ರಾಜ್ಯಗಳ ಭೂಪ್ರದೇಶಗಳಾದ ಅಲ್ಯಾಂಡ್, ಲಿವಿಂಗೋ ಹಾಗು ಕ್ಯಾನರಿ ದ್ವೀಪಗಳಂತಹ ಪ್ರದೇಶಗಳು, EUಗೆ ಸೇರಿದ್ದರೂ ಸಹ EU ತೆರಿಗೆ ಒಕ್ಕೂಟದ ಹೊರಗುಳಿದಿವೆ, ಹಾಗು ಈ ರೀತಿಯಾಗಿ ಎಲ್ಲ ಪ್ರಯಾಣಿಕರಿಗೆ ವಸ್ತುಗಳ ತೆರಿಗೆ-ರಹಿತ ಮಾರಾಟ ಮಾಡುತ್ತವೆ.

EUನಲ್ಲಿ ವಿಮಾನ ನಿಲ್ದಾಣಗಳ ಹೊರಗೆ ಸುಂಕಮಾಫಿ

[ಬದಲಾಯಿಸಿ]

EU VAT ಪ್ರದೇಶದ ಆಚೆಗೆ ವಾಸಿಸುವ ಯಾವುದೇ ಪ್ರಯಾಣಿಕನು EUನ ಸುಂಕಮಾಫಿ ಅಂಗಡಿಗಳಲ್ಲಿ ತೆರಿಗೆ ರಹಿತವಾಗಿ ವ್ಯಾಪಾರ ಮಾಡಬಹುದು. ಪ್ರಯಾಣಿಕನು ವಸ್ತುಗಳ ಮೇಲೆ VATನ್ನು ಸಾಮಾನ್ಯ ರೀತಿಯಲ್ಲಿ ಪಾವತಿಸುತ್ತಾನೆ, ಹಾಗು ಆ ವಸ್ತುಗಳನ್ನು ರಫ್ತಾಗುವಾಗ ವೆಚ್ಚದ ಮರುಪಾವತಿಗೆ ಕೋರಿಕೊಳ್ಳಬಹುದು. ಈ ರೀತಿ ಅರ್ಹನಾಗಲು, ಒಬ್ಬ ಪ್ರಯಾಣಿಕನು ಈ ಕೆಳಕಂಡ ಅಂಶಗಳನ್ನು ಹೊಂದಿರಬೇಕು:

  • EUಯೇತರ ರಾಷ್ಟ್ರದಲ್ಲಿ ನಿವಾಸವನ್ನು ಹೊಂದಿರಬೇಕು
  • EUನೊಳಗೆ ಗರಿಷ್ಠ ಆರು ತಿಂಗಳುಗಳ ಕಾಲ ನೆಲೆಯಾಗಿರಬೇಕು
  • ರಫ್ತಾಗುವ ಮುನ್ನ ಆ ವಸ್ತುವನ್ನು ಖರೀದಿಸಿ ಕಡೇಪಕ್ಷ ಮೂರು ತಿಂಗಳಾಗಿರಬೇಕು
  • ಖರೀದಿಸಿದ ಅಂಗಡಿಯಿಂದ ಒಂದು ಅರ್ಜಿಯನ್ನು ಪಡೆದುಕೊಳ್ಳಬೇಕು
  • ಕೆಲವೊಂದು ನಿರ್ದಿಷ್ಟ ಪದಾರ್ಥಗಳನ್ನು EUನಿಂದ ಹೊರಗೆ ಕೊಂಡೊಯ್ಯುವಾಗ ಆ ಅರ್ಜಿಯನ್ನು ಕಸ್ಟಮ್ಸ್ ಅಧಿಕಾರಿಗೆ ತೋರಿಸಬೇಕು, ಅಲ್ಲಿ ಈ ಅರ್ಜಿಗೆ ಮುದ್ರೆಯೊತ್ತಲಾಗುತ್ತದೆ

ವೈಯಕ್ತಿಕವಾಗಿ ಬಳಸಲಾಗುವ ವಸ್ತುಗಳು ಮಾತ್ರ ವೆಚ್ಚದ ಮರುಪಾವತಿಗೆ ಅರ್ಹವಾಗಿರುತ್ತವೆ. ಮುದ್ರೆಯೊತ್ತಲಾದ ಅರ್ಜಿಗಳು ಹಾಗು ರಶೀದಿಗಳನ್ನು ಮಳಿಗೆದಾರರಿಗೆ, ಅಥವಾ ಅವರ ದಳ್ಳಾಳ್ಳಿಗಳಿಗೆ ವೆಚ್ಚದ ಮರುಪಾವತಿಗಾಗಿ ಕಳುಹಿಸಿ ಕೊಡಲಾಗುತ್ತದೆ.

ಹಲವು ಪರಿಸ್ಥಿತಿಗಳಲ್ಲಿ, ಕನಿಷ್ಠ ಖರೀದಿಯೂ ಸಹ ಸುಂಕಮಾಫಿ ಶಾಪಿಂಗ್ ಯೋಜನೆಯ ಬಳಕೆಗೆ ಅನ್ವಯವಾಗುತ್ತದೆ. VATನ ವೆಚ್ಚ ಮರುಪಾವತಿಯ ವಾಸ್ತವ ಮೊತ್ತವು, ವಸ್ತುವನ್ನು ಖರೀದಿಸಲಾದ ರಾಷ್ಟ್ರದಲ್ಲಿ ಅನ್ವಯವಾಗುವ VATನ ಮೊತ್ತದ ಮೇಲೆ ಅವಲಂಬಿತವಾಗಿದೆ, ಹಾಗು ಇದು ಮೇಲ್ವಿಚಾರಣಾ ಶುಲ್ಕದ ಹೆಸರಿನಲ್ಲಿ ವ್ಯವಕಲನಕ್ಕೆ ಒಳಪಡಬಹುದು.

ಇತಿಹಾಸ

[ಬದಲಾಯಿಸಿ]

ವಿಶ್ವದ ಮೊದಲ ಸುಂಕಮಾಫಿ ಅಂಗಡಿಯು ಐರ್ಲೆಂಡ್ ನ ಶಾನ್ನೊನ್ ವಿಮಾನ ನಿಲ್ದಾಣದಲ್ಲಿ ಸ್ಥಾಪನೆಯಾಯಿತು, ಇದನ್ನು 1947ರಲ್ಲಿ ಡಾ ಬ್ರೆಂಡನ್ ಓ' ರೇಗನ್ ಸ್ಥಾಪಿಸಿದರು[] ಹಾಗು ಇಂದಿಗೂ ಇದು ಗ್ರಾಹಕರಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ. ಇದನ್ನು ಯುರೋಪ್ ಹಾಗು ಉತ್ತರ ಅಮೆರಿಕದ ನಡುವೆ ಮಾದರಿಯಾಗಿ ಪ್ರಯಾಣಿಸುವ ಟ್ರಾನ್ಸ್-ಅಟ್ಲಾಂಟಿಕ್ ಏರ್ ಲೈನ್ ಗ್ರಾಹಕರಿಗೆ ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಯಿತು. ನಿರ್ಗಮಿಸುವ ಹಾಗು ಆಗಮಿಸುವ ವಿಮಾನಗಳು ತಮ್ಮ ಹಾರಾಟದ ನಡುವೆ ಇಂಧನವನ್ನು ಭರ್ತಿ ಮಾಡಿಕೊಳ್ಳಲು ಇಲ್ಲಿ ನಿಲುಗಡೆಯಾಗುತ್ತಿದ್ದವು, ಇದು ತಕ್ಷಣವೇ ಯಶಸ್ಸನ್ನು ಗಳಿಸಿತು ಹಾಗು ಈ ಮಾದರಿಯನ್ನು ವಿಶ್ವವ್ಯಾಪಿಯಾಗಿ ನಕಲು ಮಾಡಲಾಯಿತು.

ಸುಂಕಮಾಫಿ ಶಾಪಿಂಗ್ ಇನ್ನು ಆರಂಭವಾದ ಹೊಸತರಲ್ಲಿ ಇಬ್ಬರು ಅಮೆರಿಕನ್ ವಾಣಿಜ್ಯೋದ್ಯಮಿಗಳಾದ ಚಾರ್ಲ್ಸ್ ಫೀನಿ ಹಾಗು ರಾಬರ್ಟ್ ಮಿಲ್ಲರ್, ಇಂದು ಡ್ಯೂಟಿ ಫ್ರೀ ಶಾಪರ್ಸ್ (DFS) ಎಂದು ಕರೆಯಲ್ಪಡುವ ಮಳಿಗೆಗಳನ್ನು 7 ನವೆಂಬರ್ 1960ರಲ್ಲಿ ಸ್ಥಾಪಿಸಿದರು. DFS ಹಾಂಗ್ ಕಾಂಗ್ ನಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸುವುದರ ಜೊತೆಗೆ ಇದು ಯುರೋಪ್ ಹಾಗು ವಿಶ್ವದ ಇತರ ಸ್ಥಳಗಳಿಗೆ ಹರಡಿತು. 1960ರ ಆರಂಭದಲ್ಲಿ ಹವಾಯಿಯಲ್ಲಿ ಸುಂಕಮಾಫಿ ಮಾರಾಟಕ್ಕೆ ವಿಶೇಷ ರಿಯಾಯಿತಿಯನ್ನು ಖಾತರಿ ಪಡಿಸಲಾಯಿತು, ಇದು DFSಗೆ ವ್ಯಾಪಾರದಲ್ಲಿ ಪ್ರಮುಖ ಪ್ರಗತಿಯನ್ನು ಒದಗಿಸಿಕೊಟ್ಟಿತು, ಹಾಗು ಸಂಸ್ಥೆಯು, ಅಸ್ತಿತ್ವಕ್ಕೆ ಬರುತ್ತಿದ್ದ ಜಪಾನೀಸ್ ಪ್ರಯಾಣಿಕರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಲು ಸಮರ್ಥವಾಯಿತು. DFS ಮತ್ತಷ್ಟು ಹೊಸ ವಿಧಾನಗಳನ್ನು ಪರಿಚಯಿಸಿತು, ಇದು ವಿಮಾನ ನಿಲ್ದಾಣದ ಎದುರಿಗೆ ಹಾಗು ದೊಡ್ಡ ಡೌನ್ ಟೌನ್ ಗ್ಯಾಲೆರಿಯ ಸುಂಕ ಮಾಫಿ ಮಳಿಗೆಗಳನ್ನು ಆರಂಭಿಸುವ ಮೂಲಕ ತನ್ನ ವ್ಯಾಪಾವನ್ನು ವಿಸ್ತರಿಸಿಕೊಂಡಿತು ಹಾಗು ವಿಶ್ವದ ಅತ್ಯಂತದ ದೊಡ್ಡ ಪ್ರಯಾಣಿಕರ ಮಾರಾಟ ಮಳಿಗೆಯಾಗಿ ಮಾರ್ಪಾಡಾಯಿತು. 1996ರಲ್ಲಿ, LVMH ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವುಯಿಟ್ಟನ್, ಶ್ರೀ. ಫೀನಿ ಹಾಗು ಮತ್ತಿಬ್ಬರು ಇತರ ಪಾಲುದಾರರ ಭಾಗವನ್ನು ವಶಪಡಿಸಿಕೊಂಡರು ಹಾಗು ಇಂದು DFSನ ಒಡೆತನವನ್ನು ಶ್ರೀ. ಮಿಲ್ಲರ್ ರೊಂದಿಗೆ ಜಂಟಿಯಾಗಿ ನಿರ್ವಹಿಸುತ್ತಾರೆ.

ಅದೇ ಸಮಯದಲ್ಲಿ, ಹಲವಾರು ಪ್ರದೇಶಗಳು ಸುಂಕ ಮಾಫಿ ಶಾಪಿಂಗ್ ತಾಣಗಳಾಗಿ ಬೆಳವಣಿಗೆಯಾದವು. ಇವುಗಳು ಸೈಂಟ್ ಮಾರ್ಟಿನ್ ಹಾಗು ಕೆರೆಬಿಯನ್ ನಲ್ಲಿರುವ U.S. ವರ್ಜಿನ್ ದ್ವೀಪಗಳು, ಹಾಂಗ್ ಕಾಂಗ್ ಹಾಗು ಸಿಂಗಾಪುರ್ ನಿಂದ ಅಧಿಕೃತ ಪರವಾನಗಿಯನ್ನು ಪಡೆದಿರುತ್ತವೆ. ಆದಾಗ್ಯೂ ಇತರರು ಸುಂಕಮಾಫಿಗೆ ಬೆಲೆಗಳು ಸ್ಪರ್ಧಾತ್ಮಕವಾಗಿವೆಯೆಂದು ಪ್ರತಿಪಾದಿಸುತ್ತಾರೆ. ಸಾಧಾರಣವಾಗಿ, ವಸ್ತುಗಳು ತೆರಿಗೆ ರಹಿತವಾಗಿರುತ್ತವೆ ಹಾಗು ಶಾಪಿಂಗ್ ಮಾಡುವ ಯಾವುದೇ ತಾಣದಿಂದ ಆಮದು ಮಾಡಿಕೊಳ್ಳಲಾಗುವಂತಹ ವಸ್ತುಗಳ ಮೇಲೆ ತೆರಿಗೆಯನ್ನು ಹೇರಲಾಗುತ್ತದೆ. ವ್ಯಾಪಾರಸ್ಥರು ದಾಸ್ತಾನು/ವ್ಯಾಪಾರ ಅಥವಾ ಇತರ ತೆರಿಗೆಗಳನ್ನು ಪಾವತಿಸಬಹುದು, ಆದರೆ ಅವರ ಗ್ರಾಹಕರು ಸಾಮಾನ್ಯವಾಗಿ ಇವುಗಳಲ್ಲಿ ಯಾವುದನ್ನೂ ನೇರವಾಗಿ ಪಾವತಿಸುವುದಿಲ್ಲ. ಖರೀದಿಸುವವರು, ತೆರಿಗೆಯನ್ನು ಹೇರುವ ಯಾವುದೇ ರಾಷ್ಟ್ರಕ್ಕೆ ಪ್ರವೇಶಿಸಿದಾಗ ಖರೀದಿಸಿದ ಎಲ್ಲ ವಸ್ತುಗಳಿಗೆ ದಾಖಲೆಯನ್ನು ನೀಡಬೇಕು(ತೆರಿಗೆ ರಹಿತ ಅಥವಾ ಬೇರೆಯಾವುದಾದರು).

ಮಾರಾಟವಾದ ವಸ್ತುಗಳ ಮೇಲೆ ತೆರಿಗೆ ಅಥವಾ ಇತರ ತೆರಿಗೆಗಳು ಇಲ್ಲದಿರುವುದು, ಅವುಗಳು ಅಗ್ಗವಾಗಿ ಮಾರಾಟವಾಗಿರುವ ಬಗ್ಗೆ ಖಾತ್ರಿಪಡಿಸುವುದಿಲ್ಲ. ವಿವಿಧ ತೆರಿಗೆ-ರಹಿತ ಮೂಲಗಳಿಂದ ಒಂದೇ ಮಾದರಿಯ ವಸ್ತುಗಳ ಬೆಲೆಯು ವ್ಯಾಪಕವಾಗಿ ಬದಲಾವಣೆಯಾಗಬಹುದು. ಇವುಗಳು ಸಾಮಾನ್ಯವಾಗಿ ಹತ್ತಿರದ ಪ್ರತಿಸ್ಪರ್ಧಿಗಳ ಉಪಸ್ಥಿತಿ ಅಥವಾ ಅನುಪಸ್ಥಿತಿಗಳ ಮೇಲೆ ಅವಲಂಬನೆಯಾಗಿರಬಹುದು, ಉದಾಹರಣೆಗೆ., ವಿಮಾನ ನಿಲ್ದಾಣಗಳಲ್ಲಿರುವ ಮಳಿಗೆಗಳು, ಅದರಲ್ಲೂ ವಿಶೇಷವಾಗಿ ಡಫ್ರಿಯಂತಹ ಏಕೈಕ ಸಂಸ್ಥೆಯ ಒಡೆತನದಲ್ಲಿರುವ ಯಾವುದೇ ವಿಮಾನ ನಿಲ್ದಾಣ[]). ಅಲ್ಲದೆ, ಬೆಲೆಗಳು ಸಾಮಾನ್ಯವಾಗಿ ಗ್ರಾಹಕನ ಅನುಕೂಲಕ್ಕೆ ತಕ್ಕಂತೆ ಹೆಚ್ಚಿಸಲಾಗುತ್ತದೆ, ಉದಾಹರಣೆಗೆ., ವಿಮಾನಸಂಸ್ಥೆಗಳ ವಿಮಾನದೊಳಗಿನ ಮಾರಾಟಗಳು.

ಬಂದರಿನಾಚೆಗೆ ಮಾಡಲಾಗುವ ಸುಂಕಮಾಫಿ ಶಾಪಿಂಗ್

[ಬದಲಾಯಿಸಿ]

ಕೆಲವು ಸುಂಕಮಾಫಿ ಅಂಗಡಿಗಳು ವಿಮಾನ ನಿಲ್ದಾಣಗಳು ಅಥವಾ ಇತರ ಬಂದರುಗಳಿಂದ ದೂರವಾದ ಮುಖ್ಯ ವ್ಯಾಪಾರ ಪ್ರದೇಶದಲ್ಲಿ ತಮ್ಮ ವ್ಯಾಪಾರ ಚಟುವಟಿಕೆಯನ್ನು ನಿರ್ವಹಿಸುತ್ತವೆ. ಜಪಾನ್ ನಲ್ಲಿ, ಉದಾಹರಣೆಗೆ, ಯಾವುದೇ ಪ್ರಯಾಣಿಕರು ಪಾಸ್ ಪೋರ್ಟ್, ಆತನ ಈ ದೇಶದಲ್ಲಿ ಆರು ತಿಂಗಳಿಗೂ ಕಡಿಮೆ ಅವಧಿಗೆ ಇಲ್ಲಿ ನೆಲೆಸಿದ್ದನೆಂದು ಸೂಚಿಸಲಾದರೆ, ಅಂತಹವರು ಸುಂಕಮಾಫಿ ಪದಾರ್ಥಗಳನ್ನು ಖರೀದಿ ಮಾಡಬಹುದು. ಸುಂಕಮಾಫಿ ಅಂಗಡಿಗಳು, ಟೋಕಿಯೋದ ವಿದ್ಯುತ್ ಉಪಕರಣಗಳ ಶಾಪಿಂಗ್ ಪ್ರದೇಶವಾದ ಅಕಿಹಬಾರದ ಮೂಲಾಧಾರವಾಗಿದೆ.

ಥೈಲ್ಯಾಂಡ್ ನಲ್ಲಿ, ಕಿಂಗ್ ಪವರ್ ಸರಣಿ ಮಳಿಗೆಗಳು ಸುಂಕಮಾಫಿ ವಸ್ತುಗಳನ್ನು ಮೊದಲೇ ಖರೀದಿಸಿ, ಅವುಗಳನ್ನು ವಿಮಾನನಿಲ್ದಾಣಗಳಲ್ಲಿ ವಿಮಾನಗಳು ನಿರ್ಗಮಿಸುವ ಸಮಯದಲ್ಲಿ ಪ್ರತ್ಯೇಕವಾಗಿ ತಲುಪಿಸಲಾಗುತ್ತದೆ. ಇತರ ಕೆಲವು ಖರೀದಿಗಳಿಗಾಗಿ, VAT ಮರುವೆಚ್ಚ ಪಾವತಿಗೆ ವಿಮಾನ ನಿಲ್ದಾಣದಲ್ಲಿ ವಿಮಾನಗಳು ನಿರ್ಗಮಿಸುವ ಸಂದರ್ಭದಲ್ಲಿ ಬೇಡಿಕೆ ಇಡಬಹುದು.[]

ಫಿಲಿಫೈನ್ಸ್ ನಲ್ಲಿ, ವಿಮಾನ ನಿಲ್ದಾಣಗಳಲ್ಲಿರುವ ಮಳಿಗೆಗಳನ್ನು ಹೊರತು ಪಡಿಸಿ, ಡ್ಯೂಟಿ ಫ್ರೀ ಫಿಯೆಸ್ಟ ಮಾಲ್ ಎಂಬ ಸುಂಕ ಮಾಫಿ ಮಾಲ್ ಸಹ ಇದೆ, ಇದು ನಿನೋಯ್ ಅಕ್ವಿನೋ ವಿಮಾನ ನಿಲ್ದಾಣದಿಂದ ಕೆಲವು ಮೈಲಿ ದೂರದಲ್ಲಿ ನೆಲೆಯಾಗಿದೆ. ಈ ಮಾಲ್ ನಲ್ಲಿ ಮಾರಾಟವಾಗುವ ವಸ್ತುಗಳು ಸಾಮಾನ್ಯವಾಗಿ ವಿಶ್ವದ ಎಲ್ಲ ಭಾಗಗಳಿಂದ ಆಮದು ಮಾಡಿಕೊಳ್ಳಲಾದ ವಸ್ತುಗಳಾಗಿರುತ್ತವೆ (ಮುಖ್ಯವಾಗಿ USA, ಏಷ್ಯಾ ಹಾಗು ಆಸ್ಟ್ರಲೆಷ್ಯಾ) ಇಲ್ಲಿ ಸಿಗುವಂತಹ ವಸ್ತುಗಳು ಡ್ಯೂಟಿ ಫ್ರೀ ಮಾಲ್ ಗಳನ್ನು ಹೊರತುಪಡಿಸಿ ದೇಶದ ಇತರ ಯಾವುದೇ ಶಾಪಿಂಗ್ ಮಾಲ್ ಗಳಲ್ಲಿ ಕಂಡುಬರುವುದಿಲ್ಲ. ಹೆಚ್ಚಿನ ಪ್ರವಾಸಿಗರು, ಇಲ್ಲಿಗೆ ಭೇಟಿ ನೀಡುವವರು ಹಾಗು ಫಿಲಿಫೈನ್ಸ್ ಗೆ ಮರಳಿ ಹಿಂದಿರುಗುವ ಪ್ರಜೆಗಳು ಇಲ್ಲಿಗೆ ಆಗಮಿಸಿದ ನಂತರ ಈ ಮಾಲ್ ಗಳಿಗೆ ಸಾಮಾನ್ಯವಾಗಿ ಭೇಟಿ ನೀಡುತ್ತಾರೆ (ಏಕೆಂದರೆ, ಕೇವಲ ಆಗಮಿಸುವ ಪ್ರಯಾಣಿಕರಿಗೆ ಮಾತ್ರ ಈ ಮಾಲ್ ಗೆ ಪ್ರವೇಶಿಸುವ ಅವಕಾಶವಿದೆ).[] ಪ್ರವೇಶವನ್ನು ಪಡೆಯಬೇಕಾದರೆ, ಪಾಸ್ ಪೋರ್ಟ್ ನ್ನು ತೋರಿಸಬೇಕು ಹಾಗು ಕಸ್ಟಮರ್ ರೆಜಿಸ್ಟ್ರೇಶನ್ ಕೌಂಟರ್ ನಲ್ಲಿ ದಾಖಲಿಸಬೇಕು, ಇದು ಮಲ್ಲ ನ ಪ್ರವೇಶದ್ವಾರದಲ್ಲಿ ಸ್ಥಿತವಾಗಿದೆ. ನಂತರ ಗ್ರಾಹಕರಿಗೆ ಶಾಪಿಂಗ್ ಕಾರ್ಡ್ ನ್ನು ನೀದಲಾಗುತದೆ, ಈ ಶಾಪಿಂಗ್ ಕಾರ್ಡ್ ಗಳನ್ನು ಖರೀದಿಸಿದ ವಸ್ತುಗಳ ಮಾರಾಟ ಕ್ರಮಬದ್ಧತೆಗಾಗಿ ಕ್ಯಾಷಿಯರ್ ಗೆ (ನಗದು ಗುಮಾಸ್ತ) ನೀಡಬೇಕು. ಈ ಹಿಂದೆ ಸುಂಕಮಾಫಿ ಮಾಲ್ ಗಳು ಕೇವಲ US ಡಾಲರ್ಸ್ ಹಾಗು ಫಿಲಿಫೈನ್ ಪೆಸೋಗಳನ್ನು ಮಾತ್ರ ಅಂಗೀಕರಿಸುತ್ತಿದ್ದವು ಆದರೆ ಇತ್ತೀಚಿನ ವರ್ಷಗಳಲ್ಲಿ, ಸುಂಕಮಾಫಿ ಮಾಲ್ ಗಳು ಜಪಾನೀಸ್ ಯೆನ್, ಬ್ರುನೆಯಿ ಡಾಲರ್, ಆಸ್ಟ್ರೇಲಿಯನ್ ಡಾಲರ್, ಬ್ರಿಟಿಶ್ ಪೌಂಡ್, ಕೆನೆಡಿಯನ್ ಡಾಲರ್, ಸ್ವಿಸ್ಸ್ ಫ್ರಾಂಕ್, ಸೌದಿ ರಿಯಾಲ್, ಬಹರೈನ್ ದಿನಾರ್, ಹಾಗು ಥೈ ಬಹ್ತ್ ಗಳನ್ನು ಅಂಗೀಕರಿಸುತ್ತಿವೆ. ಗ್ರಾಹಕರು ಫಿಲಿಫೈನ್ ಪೆಸೋ ಗೆ ಅಥವಾ US ಡಾಲರ್ ಗೆ ತಮ್ಮ ಹಣವನ್ನು ವಿನಿಮಯ ಮಾಡಿಕೊಳ್ಳಲು ಇಚ್ಚಿಸಿದರೆ ಕರೆನ್ಸಿ ವಿನಿಮಯ ಬೂತ್ ಗಳು ಮಾಲ್ ನೊಳಗೂ ಸಹ ಕಂಡುಬರುತ್ತದೆ. ವಸ್ತುಗಳನ್ನು ಖರೀದಿಸಲು ಕ್ರೆಡಿಟ್ ಕಾರ್ಡ್ ಗಳ ಬಳಕೆಯನ್ನೂ ಸಹ ಮಾಡಿಕೊಳ್ಳಬಹುದು.[]

ಆಸ್ಟ್ರೇಲಿಯಾದಲ್ಲಿ, 2000ದ ದಶಕದಲ್ಲಿ ಆರಂಭಗೊಂಡ GSTಯ ನಂತರ ಎಲ್ಲ ಸುಂಕಮಾಫಿ ಅಂಗಡಿಗಳು ಕಣ್ಮರೆಯಾಗಿವೆ. ಪ್ರಸಕ್ತದಲ್ಲಿ, ಎಲ್ಲ ಸುಂಕಮಾಫಿ ಅಂಗಡಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ನೆಲೆಗೊಂಡಿರುತ್ತವೆ. ನಿವಾಸಿಗಳು ಹಾಗು ಪ್ರವಾಸಿಗರಿಗೆ ಅವರು ನಿರ್ಗಮಿಸುವ 30 ದಿನಗಳೊಳಗೆ ವಸ್ತುತಃ ಯಾವುದೇ ಭೌತಿಕ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗುವುದಿಲ್ಲ, ಇವುಗಳನ್ನು ನಿರ್ಗಮಿಸುವ ವಿಮಾನದಲ್ಲಿ ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ, ಹಾಗು ಕಸ್ಟಮ್ಸ್ ಮೂಲಕ ಶೋಧನೆಗೆ ಬಂದಾಗ ಟೂರಿಸ್ಟ್ ರೀಫಂಡ್ ಸ್ಕೀಮ್ ಮೂಲಕ GST ಅಂಶವನ್ನು ಹಿಂದಕ್ಕೆ ಪಡೆಯಬಹುದು. ಗ್ರಾಹಕರು ನಿರ್ಗಮಿಸುವ ಮೊದಲ ತಮ್ಮ ವಸ್ತುಗಳನ್ನು ಸಂಪೂರ್ಣವಾಗಿ ಬಳಸಲು ಸ್ವತಂತ್ರರಾಗಿರುತ್ತಾರೆ. ಇದು 2000ದ ದಶಕದಲ್ಲಿ ನಡೆಯುತ್ತಿದ್ದಕ್ಕಿಂತ ಭಿನ್ನವಾಗಿದೆ, ಅಂದು ಖರೀದಿಸಿದ ಎಲ್ಲ ವಸ್ತುಗಳನ್ನು ಸುಂಕಮಾಫಿ ಮಳಿಗೆಯಲ್ಲಿ ಪಾರದರ್ಶಕ ಪ್ಲ್ಯಾಸಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಮೊಹರು ಹಾಕಲಾಗುತ್ತಿತ್ತು, ಹಾಗು ಇದನ್ನು ನಿರ್ಗಮಿಸುವ ಸ್ವಲ್ಪ ಹೊತ್ತಿನ ಮೊದಲು ಕಸ್ಟಮ್ಸ್ ಸಿಬ್ಬಂದಿ ಮಾತ್ರ ತೆರೆದು ನೋಡಬಹುದಿತ್ತು.[]

ಸುರಕ್ಷತಾ ಪರಿಗಣನೆಗಳು

[ಬದಲಾಯಿಸಿ]

ತಾವು ನಿರ್ಗಮಿಸುವ ವಿಮಾನ ನಿಲ್ದಾಣದಿಂದ ತಾವು ಆಗಮಿಸುವ ವಿಮಾನದ ನಿಲ್ದಾಣಕ್ಕೆ ದೀರ್ಘಾವಧಿಯ ಅಂತರವಿದ್ದು, ಕಡೆಪಕ್ಷ ಮಧ್ಯದಲ್ಲಿ ಒಂದು ವಿಮಾನ ನಿಲ್ದಾಣದಲ್ಲಿ ಇಂಧನ ಭರ್ತಿಗಾಗಿ ವಿಮಾನವು ನಿಲುಗಡೆಯಾಗುತ್ತಿದ್ದರೆ, ಅಂತಹ ಪ್ರಯಾಣಿಕರು ತಾವು ಸುಂಕಮಾಫಿ ಅಂಗಡಿಯಿಂದ ಖರೀದಿಸಿದ ಮದ್ಯ ಹಾಗು ಸುಗಂಧದ್ರವ್ಯದ ಬಗ್ಗೆ ತಮ್ಮ ವಿಮಾನವು ನಿಲುಗಡೆಯಾಗುವ ಕಡೆ ವಿಮಾನ ನಿಲ್ದಾಣದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ, ಇಲ್ಲವಾದಲ್ಲಿ ಹಾದು ಹೋಗುವ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಿಂದ ವಸ್ತುಗಳು ಜಪ್ತಿಗೆ ಒಳಪಡುತ್ತವೆ, ಏಕೆಂದರೆ ಕೈ ಚೀಲಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದ್ರವ ಪದಾರ್ಥವನ್ನು ಕೊಂಡೊಯ್ಯುವಂತಿಲ್ಲ. ಇದು ಒಂದೇ ದಿನದಲ್ಲಿ EUನೊಳಗೆ, ಸಿಂಗಾಪುರ್ ಹಾಗು ಕ್ರೋವೆಷಿಯಾದ ನಡುವೆ ವಿಮಾನವನ್ನು ಬದಲಾವಣೆ ಮಾಡಿಕೊಳ್ಳುವ ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ, ತಮ್ಮ ಕೈಚೀಲದಲ್ಲಿ ಖರೀದಿಸಿದ ರಶೀದಿ ಹಾಗು ಮೋಹರಾದ ಪ್ಲ್ಯಾಸ್ಟಿಕ್ ಚೀಲವು ಇದ್ದಾರೆ ಯಾವುದೇ ತೊಂದರೆಯಾವುದುದಿಲ್ಲ. ನಿರ್ಗಮನ ತಾಣದಲ್ಲಿ ಸುಂಕಮಾಫಿ ಅಂಗಡಿಗಳು ಇದೀಗ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತಿವೆ. ದಕ್ಷಿಣ ಹಾಗು ಮಧ್ಯ ಅಮೆರಿಕ, ಹಾಗು ಕೆರೇಬಿಯನ್ ನಲ್ಲಿ ಇಂತಹ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ, ಇದೆ ರೀತಿಯಾಗಿ SE ಏಷ್ಯಾ ಹಾಗು ಒಶಿಯಾನಾದಲ್ಲೂ ಸಹ. ಸ್ವಿಟ್ಜರ್ ಲ್ಯಾಂಡ್ ಹಾಗು ಕೆನಡಾ ದೇಶಗಳು 2010ರಲ್ಲಿ ಇಂತಹ ಮಳಿಗೆಗಳನ್ನು ಆರಂಭಿಸಲು ಯೋಜಿಸಿದ್ದವು, ಈ ವಿಧಾನದಲ್ಲಿ ಮಾರಟವಾದ ಯಾವುದೇ ರೀತಿಯ ದ್ರವ ಪದಾರ್ಥಗಳು ಯಾವುದೇ ಭದ್ರತಾ ಸಮಸ್ಯೆಗಳನ್ನು ಎದುರಿಸುವುದಿಲ್ಲ, ಏಕೆಂದರೆ ಇವುಗಳನ್ನು ವಿಮಾನಗಳಲ್ಲಿ ಕೊಂಡೊಯ್ದಿರುವುದಿಲ್ಲ.[]

ಆಗಮನ ಸುಂಕಮಾಫಿ

[ಬದಲಾಯಿಸಿ]

ಕೆಲವು ರಾಷ್ಟ್ರಗಳು, ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯಾ, ಐಸ್ಲ್ಯಾಂಡ್, ಭಾರತ, ಕೀನ್ಯಾ, ನ್ಯೂಜಿಲೆಂಡ್, ನಾರ್ವೆ, ಶ್ರೀಲಂಕ ಹಾಗು ಫಿಲಿಫೈನ್ಸ್ ದೇಶಗಳು, ಇಲ್ಲಿಗೆ ಆಗಮಿಸುವ ಪ್ರಯಾಣಿಕರಿಗೆ ಸುಂಕಮಾಫಿ ಸೌಲಭ್ಯಗಳನ್ನು ಒದಗಿಸುತ್ತವೆ, ಇಲ್ಲಿಗೆ ಬರುವ ಪ್ರಯಾಣಿಕರು ಕಸ್ಟಮ್ಸ್ ತಪಾಸಣೆಗೆ ಒಳಪಡುವ ಮುನ್ನ ತಕ್ಷಣವೇ ಸುಂಕಮಾಫಿ ವಸ್ತುಗಳನ್ನು ಖರೀದಿಸಬಹುದು. ಇದು ಸುತ್ತಾಡುವಲ್ಲೆಲ್ಲ ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ಯುವ ಅನನುಕೂಲವನ್ನು ತಪ್ಪಿಸುವುದರ ಜೊತೆಗೆ ಮೇಲೆ ಉಲ್ಲೇಖಿಸಲಾದ ಭದ್ರತಾ ಸಮಸ್ಯೆಗಳನ್ನೂ ಸಹ ಪರಿಹರಿಸುತ್ತದೆ. ಇಸ್ರೇಲ್ ನಲ್ಲಿ ವಿಮಾನಕ್ಕೆ ಏರುವ ಮುನ್ನ ಖರೀದಿಸಲಾದ ವಸ್ತುಗಳನ್ನು ವಿಶೇಷವಾಗಿ ಸಂಗ್ರಹಣಾ ಘಟಕಗಳಲ್ಲಿ ಇಟ್ಟು ಇಳಿಯುವಾಗ ತಮ್ಮೊಂದಿಗೆ ಕೊಂಡೊಯ್ಯಬಹುದು, ಈ ರೀತಿಯಾಗಿ ಮೇಲೆ ಉಲ್ಲೇಖಿಸಲಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.

ಓಸ್ಲೋ ವಿಮಾನ ನಿಲ್ದಾಣ ಗಾರ್ಡೆರ್ಮೋಯೆನ್ ಯುರೋಪ್ ನಲ್ಲೇ ಅತ್ಯಂತ ದೊಡ್ಡ ಸುಂಕಮಾಫಿ ಮಳಿಗೆಯ ತವರೆನಿಸಿದೆ.

ಕೆನಡಾ, ಸ್ವೀಡನ್ ಹಾಗು ಸ್ವಿಟ್ಜರ್ಲ್ಯಾಂಡ್ ನಂತಹ ಇತರ ರಾಷ್ಟ್ರಗಳು ನಿರ್ಗಮಿಸುವ ಪ್ರಯಾಣಿಕರಿಗೆ ಸುಂಕಮಾಫಿ ಸೌಕರ್ಯವನ್ನು ನೀಡಲು ಯೋಜನೆಯನ್ನು ನಡೆಸುತ್ತಿದೆ.

ಕಾನೂನು ಆಧಾರಗಳು

[ಬದಲಾಯಿಸಿ]

ತೆರಿಗೆ ವ್ಯವಸ್ಥೆಗಳ ಒಂದು ಅತ್ಯಂತ ಸಾಮಾನ್ಯ ಲಕ್ಷಣವೆಂದರೆ, ರಫ್ತಾಗಬೇಕಿರುವ ವಸ್ತುಗಳಿಗೆ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ತೆರಿಗೆಯನ್ನು ಹೇರಿದರೆ ಇತರ ರಾಷ್ಟ್ರಗಳಿಗೆ ರಫ್ತಾಗುವ ವಸ್ತುಗಳು ಬಾರಿ ನಷ್ಟವನ್ನು ಹೊಂದುತ್ತವೆ. ತೆರಿಗೆ ವ್ಯವಸ್ಥೆಯು ತೆರಿಗೆ ಇಲ್ಲದೆ ವಸ್ತುಗಳು ರಫ್ತಾಗಲು ಅವಕಾಶ ನೀಡುತ್ತದೆ (ಕರಾರುಬದ್ಧ ಸಂಗ್ರಹಣಾ ಕೊಠಡಿಯಲ್ಲಿ ರಫ್ತಾಗುವ ಮುನ್ನ ಶೇಖರಣೆಯಾಗಿರುತ್ತವೆ), ಅಥವಾ ರಫ್ತಾದ ನಂತರದಲ್ಲಿ ತೆರಿಗೆಯನ್ನು ಪಾವತಿಸುವ ಬೇಡಿಕೆ ಇಡಬಹುದು (VAT ವಿಭಾಗವನ್ನು ನೋಡಿ).

ಇಂತಹ ವಿನಾಯಿತಿಯು ಹಡಗುಗಳು ಹಾಗು ವಿಮಾನಗಳಲ್ಲಿ ಬಳಕೆಯಾಗಲು ಸರಬರಾಜು ಮಾಡಿದ ವಸ್ತುಗಳಿಗೂ ಸಹ ಅನ್ವಯವಾಗುತ್ತದೆ, ಏಕೆಂದರೆ ಇವುಗಳನ್ನು ದೇಶದಾಚೆಗೆ ಬಳಕೆ ಮಾಡಿಕೊಂಡಿರಲಾಗುತ್ತದೆ. ಇಂತಹ ವಸ್ತುಗಳನ್ನು ಪೂರೈಸುವ ವ್ಯಾಪಾರಿಗಳು ತೆರಿಗೆಗೆ ಬೇಡಿಕೆಯನ್ನು ಇಟ್ಟು, ಸುಂಕಮಾಫಿಯಾಗಿ ಮಾರಬಹುದು.

ಹಡಗುಗಳು ಅಥವಾ ವಿಮಾನಕ್ಕೆ ಏರುವ ಪ್ರಯಾಣಿಕರಿಗೆ ಮಾರಾಟ ಮಾಡಲಾದ ವಸ್ತುಗಳು ತೆರಿಗೆಯಿಂದ ಮುಕ್ತವಾಗಿರುತ್ತವೆ. ಪ್ರಯಾಣಿಕರು ಅವುಗಳನ್ನು ಪ್ರಯಾಣದ ನಡುವೆಯೇ ಬಳಕೆ ಮಾಡಿಕೊಳ್ಳಬಹುದು, ಅಥವಾ ಪ್ರಯಾಣಿಕನು ತಾನು ಹೊಂದಿರುವ ಸುಂಕ ಮಾಫಿ ರಿಯಾಯಿತಿ ಅನ್ವಯವಾಗುವವರೆಗೂ ಪ್ರಯಾಣಿಸುತ್ತಿರುವ ರಾಷ್ಟ್ರಕ್ಕೆ ತೆರಿಗೆ ಮುಕ್ತವಾಗಿ ಆಮದು ಮಾಡಿಕೊಳ್ಳಬಹುದು,. ಹಲವು ತೆರಿಗೆ ಪದ್ಧತಿಗಳು, ಯಾವುದೇ ತೆರಿಗೆ ಭರಿಸದೆ ವೈಯಕ್ತಿಕ ಬಲಕೆಗಾಗಿ ನಿರ್ದಿಷ್ಟ ಮಟ್ಟದ ವಸ್ತುಗಳನ್ನು ತಮ್ಮೊಂದಿಗೆ ಪ್ರಯಾಣಿಕರು ತರಲು ಅವಕಾಶವನ್ನೂ ಸಹ ಮಾಡಿಕೊಡುತ್ತವೆ, ಸಣ್ಣ ಪ್ರಮಾಣದ ತೆರಿಗೆಯನ್ನು ಸಂಗ್ರಹಿಸವು ಆರ್ಥಿಕವಾಗಿ ಸಮರ್ಥನೀಯವಲ್ಲದ ಕಾರಣಕ್ಕೆ "ಸುಂಕಮಾಫಿ ರಿಯಾಯಿತಿ" ಎಂದು ಇದನ್ನು ಕರೆಯಲಾಗುತ್ತದೆ, ಹಾಗು ಇದು ಪ್ರಯಾಣಿಕರಿಗೆ ಬಹಳ ಅನನುಕೂಲವನ್ನು ಉಂಟುಮಾಡುತ್ತದೆ.

ಒಂದು ಸುಂಕಮಾಫಿ ಅಂಗಡಿಯೂ ಸಹ ಇದೆ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸರಕುಗಳನ್ನು ಸಂಪೂರ್ಣವಾಗಿ ರಫ್ತು ಮಾಡಿಕೊಳ್ಳಬೇಕು(ಇದನ್ನು ವಿಮಾನ ನಿಲ್ದಾಣದಲ್ಲಿ ಬಳಕೆ ಮಾಡಬಾರದು), ಹಾಗು ಇವುಗಳು ಒಂದು ರಾಷ್ಟ್ರದ ತೆರಿಗೆ ನಿಯಮಗಳಡಿಯಲ್ಲಿ ಬರಬೇಕಾಗಿರುವ ರಾಷ್ಟ್ರಕ್ಕೆ ಆಮದಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ, ಸರಕುಗಳು ಸಂಪೂರ್ಣವಾಗಿ ರಫ್ತಾಗಿರುವ ಬಗ್ಗೆ ಭರವಸೆ ನೀಡಲು, ಇವುಗಳನ್ನು ಪ್ರಯಾಣಿಕನ ಟಿಕೆಟ್ ತಪಾಸಣೆಯಾದ ನಂತರ ಗೇಟ್ ನಲ್ಲಿ ಅವನಿಗೆ ಮುಚ್ಚಿದ ಚೀಲವನ್ನು ಕೈಗೆ ನೀಡಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಕೆಲವು ಸುಂಕಮಾಫಿ ಮಳಿಗೆಗಳು ತಮ್ಮ ಸರಕುಗಳನ್ನು ಸೂಕ್ತವಾದ ತೆರಿಗೆಗಳನ್ನು ಒಳಗೊಂಡಂತೆ ತಮ್ಮ ದೇಶದ ಪ್ರಯಾಣಿಕರಿಗೆ ಮಾರಾಟ ಮಾಡುತ್ತವೆ. ಮದ್ಯ ಹಾಗು ಹೊಗೆಸೊಪ್ಪು ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿಷೇಧಿಸಲಾಗುತ್ತದೆ ಹಾಗು ಕ್ರಮವಾಗಿ 21 ಹಾಗು 18 ವರ್ಷ ವಯಸ್ಸಿನ ಪ್ರಯಾಣಿಕರು ಇದಕ್ಕೆ ಒಳಪಡುತ್ತಾರೆ, ಆದಾಗ್ಯೂ ಮತ್ತೊಂದು ರಾಷ್ಟ್ರಕ್ಕೆ ಇಂತಹ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬೇಕಾದರೆ ಇದಕ್ಕಿಂದ ಕಡಿಮೆ ವಯಸ್ಸಿನವರಾಗಿರಬಹುದು.

U.S. ಪಾಲಿತ ಪ್ರದೇಶಕ್ಕೆ ಭೇಟಿ ನೀಡುವುದು

[ಬದಲಾಯಿಸಿ]

ಮುಖ್ಯವಾಗಿ U.S. ನಾಗರೀಕರು ಗುವಾಮ್, U.S. ವರ್ಜಿನ್ ದ್ವೀಪಗಳಂತಹ ಪ್ರದೇಶಗಳಿಗೆ ಭೇಟಿ ನೀಡಿದಾಗ ಇತರರಿಗಿಂತ ಹೆಚ್ಚಿನ ಸುಂಕ ವಿನಾಯಿತಿಯನ್ನು ಪಡೆಯುತ್ತಾರೆ. ಖಚಿತವಾದ ವಿವರಗಳಿಗಾಗಿ [೧] Archived 2010-10-07 ವೇಬ್ಯಾಕ್ ಮೆಷಿನ್ ನಲ್ಲಿ. ವಿಭಾಗವನ್ನು ನೋಡಿ.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಇಂಧನ ತೆರಿಗೆ, ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬಳಕೆಯಾಗುವ ಇಂಧನವನ್ನು ಸಾಮಾನ್ಯವಾಗಿ ತೆರಿಗೆ-ರಹಿತವಾಗಿ ಮಾರಾಟ ಮಾಡಲಾಗುತ್ತದೆ

ಉಲ್ಲೇಖಗಳು‌‌

[ಬದಲಾಯಿಸಿ]
  1. "Brendan O'Regan". The Times. 2008-02-13. Archived from the original on 2010-05-25. Retrieved 2009-09-05.
  2. "ಆರ್ಕೈವ್ ನಕಲು". Archived from the original on 2011-07-16. Retrieved 2011-05-18.
  3. "ಆರ್ಕೈವ್ ನಕಲು". Archived from the original on 2011-05-30. Retrieved 2011-05-18.
  4. "ಆರ್ಕೈವ್ ನಕಲು". Archived from the original on 2013-01-13. Retrieved 2011-05-18.
  5. "ಆರ್ಕೈವ್ ನಕಲು". Archived from the original on 2011-10-06. Retrieved 2011-05-18.
  6. https://web.archive.org/web/20050307231408/http://www.customs.gov.au/webdata/resources/files/travellers___english1.pdf
  7. Kaye, Ken (March 24, 2007). "Passengers lose their booze as TSA alcohol rules are ignored". Sun Sentinel. Archived from the original on ಮೇ 28, 2011. Retrieved December 28, 2010. {{cite news}}: Cite has empty unknown parameters: |pmd= and |trans_title= (help)

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]