ಸಿದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿದ್ಧ (ಸಂಸ್ಕೃತ, "ಪರಿಪೂರ್ಣನಾದವನು") ಭಾರತೀಯ ಧರ್ಮಗಳು ಮತ್ತು ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ಒಂದು ಪದ. ಇದರರ್ಥ "ಸಾಧಿಸಿದವನು, ಪಾರಂಗತ" ಎಂದು.[೧][೨] ಈ ಪದವು ಉನ್ನತ ಮಟ್ಟದ ದೈಹಿಕ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆ ಅಥವಾ ಜ್ಞಾನೋದಯವನ್ನು ಸಾಧಿಸಿದ ಪರಿಪೂರ್ಣಗೊಂಡ ನಿಪುಣರನ್ನು ಸೂಚಿಸುತ್ತದೆ. ಜೈನ ಧರ್ಮದಲ್ಲಿ, ಈ ಪದವನ್ನು ವಿಮೋಚಿತ ಆತ್ಮಗಳನ್ನು ಸೂಚಿಸಲು ಬಳಸಲಾಗುತ್ತದೆ. ಸಿದ್ಧ ಪದವು ಅಧಿಸಾಮಾನ್ಯ ಸಾಮರ್ಥ್ಯಗಳು, ಸಿದ್ಧಿಯನ್ನು ಸಾಧಿಸಿದವನನ್ನೂ ಸೂಚಿಸಬಹುದು.

ಸಿದ್ಧ ಪದವು ಸ್ಥೂಲವಾಗಿ ಸಿದ್ಧರ್‍ರು, ನಾಥರು, ತಪಸ್ವಿಗಳು, ಸಾಧುಗಳು, ಅಥವಾ ಯೋಗಿಗಳನ್ನು ಸೂಚಿಸಬಹುದು ಏಕೆಂದರೆ ಅವರೆಲ್ಲರೂ ಸಾಧನೆ ಮಾಡುತ್ತಾರೆ.

ಹಿಂದೂ ಧರ್ಮ[ಬದಲಾಯಿಸಿ]

ಹಿಂದೂ ಧರ್ಮದಲ್ಲಿ, ಸಿದ್ಧ ಪದದ ಮೊದಲ ಬಳಕೆ ಮೈತ್ರೇಯ ಉಪನಿಷತ್‍ನಲ್ಲಿ ಆಗಿದೆ. ಇದರ ಆಧ್ಯ III ಅಧ್ಯಾಯದಲ್ಲಿ ವಿಭಾಗದ ಲೇಖಕನು "ನಾನು ಸಿದ್ಧ" ಎಂದು ಘೋಷಿಸುತ್ತಾನೆ.

ಸಿದ್ಧ ಅಥವಾ ಸಿದ್ಧರ್ (ತಮಿಳು ಸಂಪ್ರದಾಯ)[ಬದಲಾಯಿಸಿ]

ತಮಿಳುನಾಡಿನಲ್ಲಿ, ಸಿದ್ಧ ಪದವು ಉನ್ನತ ಮಟ್ಟದ ದೈಹಿಕ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆ ಅಥವಾ ಸಾಮರ್ಥ್ಯವನ್ನು ಸಾಧಿಸಿದ ಜೀವಿಯನ್ನು ಸೂಚಿಸುತ್ತದೆ. ಇದರ ಕಟ್ಟಕಡೆಯ ಪ್ರಾತ್ಯಕ್ಷಿಕೆ ಎಂದರೆ ಸಿದ್ಧರು ಶಾರೀರಿಕ ಅಮರತ್ವವನ್ನು ಸಾಧಿಸಿದರು ಎಂದು ಹೇಳಲಾಗುತ್ತದೆ. ತಮಿಳುನಾಡಿನಲ್ಲಿ, ಸಿದ್ಧ ಸಂಪ್ರದಾಯವನ್ನು ಈಗಲೂ ಆಚರಿಸಲಾಗುತ್ತದೆ. ಆ ಊಹಿತ ಪರಿಪೂರ್ಣತೆಯ ಮಾರ್ಗದಲ್ಲಿರುವ ವಿಶೇಷ ವ್ಯಕ್ತಿಗಳನ್ನು ಸಿದ್ಧರ್‍ರು ಎಂದು ಗುರುತಿಸಿ ಹಾಗೆ ಕರೆಯಲಾಗುತ್ತದೆ. ಮೊದಲು ತಮ್ಮ ದೇಹಗಳನ್ನು ದೋಷರಹಿತ ಮಾಡಲು ಇವರು ವಿಶೇಷ ರಹಸ್ಯ ರಸಾಯನಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ದೀರ್ಘಕಾಲದವರೆಗೆ ಧ್ಯಾನಮಾಡುವ ಸಾಮರ್ಥ್ಯ ಬರುತ್ತದೆ. ಜೊತೆಗೆ ಅವರು ತೆಗೆದುಕೊಳ್ಳುವ ಉಸಿರುಗಳನ್ನು ಗಣನೀಯವಾಗಿ ಕಡಿಮೆಮಾಡುವ ಪ್ರಾಣಾಯಾಮದ ಒಂದು ರೂಪವನ್ನು ಮಾಡುತ್ತಾರೆ. ಸಿದ್ಧರಿಗೆ ಹಾರಾಟ ಸೇರಿದಂತೆ ವಿಶೇಷ ಶಕ್ತಿಗಳು ಇದ್ದವು ಎಂದು ಹೇಳಲಾಗಿತ್ತು. ಈ ಎಂಟು ಶಕ್ತಿಗಳನ್ನು ಒಟ್ಟಾರೆಯಾಗಿ ಅಷ್ಟಸಿದ್ಧಿಗಳೆಂದು ಕರೆಯಲಾಗುತ್ತದೆ. ಹಿಂದೂ ವಿಶ್ವವಿಜ್ಞಾನದಲ್ಲಿ, ಸಿದ್ಧಲೋಕವು ಸಿದ್ಧರು ಜನ್ಮತಾಳುವ ಒಂದು ಸೂಕ್ಷ ಲೋಕ. ಜನನದ ಸಮಯದಲ್ಲಿ ಅವರಿಗೆ ಎಂಟು ಪ್ರಧಾನ ಸಿದ್ಧಿಗಳನ್ನು ನೀಡಲಾಗಿರುತ್ತದೆ.

ಕಾಶ್ಮೀರಿ ಶೈವ ಪಂಥ[ಬದಲಾಯಿಸಿ]

ಕಾಶ್ಮೀರ ಶೈವ ಪಂಥದಲ್ಲಿ, ಸಿದ್ಧ ಪದವು ಶಕ್ತಿಪಾತದ ಮಾರ್ಗದಿಂದ ಶಿಷ್ಯರಿಗೆ ಯೋಗದಲ್ಲಿ ದೀಕ್ಷೆ ನೀಡಬಹುದಾದ ಸಿದ್ಧ ಗುರುವನ್ನು ಸೂಚಿಸುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಸಿದ್ಧರು ಅಹಂಕಾರವನ್ನು ಮೀರಿದವರು, ತಮ್ಮ ಮನಸ್ಸುಗಳನ್ನು ತಮ್ಮ ಅರಿವಿಗೆ ಅಧೀನವಾಗುವಂತೆ ನಿಗ್ರಹಿಸಿದವರು, ಮತ್ತು ತಮ್ಮ ದೇಹಗಳನ್ನು ಸತ್ವ ಗುಣವು ಪ್ರಬಲವಾಗಿರುವಂತಹ ಬೇರೆ ರೂಪದಲ್ಲಿ ಮಾರ್ಪಡಿಸಿಕೊಂಡವರು.

ಕರಾವಳಿ ಪ್ರದೇಶದಲ್ಲಿ ಕಂಡುಬರುವ ನಾಥ ಪರಂಪರೆ[ಬದಲಾಯಿಸಿ]

  1. ಕುರುಬ ಹಾಗೂ ಗೌಡ ಜನಾಂಗ ದಲ್ಲಿ ಕಂಡುಬರುವ ನಾಥರು.
  2. ಅಜಿಲರಲ್ಲಿ ಕಂಡುಬರುವ ನಾಥರು.
  3. ಕೊಡಗಿನ ಮಲೆ ಕುಡಿಯರಲ್ಲಿ ಕಂಡುಬರುವ ನಾಥರು.

ಆರಾಧನೆಯಲ್ಲಿ ನಾಥ ಪಂಥ[ಬದಲಾಯಿಸಿ]

  1. ಪುರುಷ ದೈವ.

ಉಲ್ಲೇಖಗಳು[ಬದಲಾಯಿಸಿ]

  1. "Definition: Mahasiddha (Indian Adept) & Siddha Appearance". http://www.himalayanart.org. {{cite journal}}: External link in |journal= (help)External link in |journal= (help)
  2. "Siddha-asana The accomplished or adept pose". http://www.santosha.com. {{cite journal}}: External link in |journal= (help)External link in |journal= (help)
"https://kn.wikipedia.org/w/index.php?title=ಸಿದ್ಧ&oldid=1047574" ಇಂದ ಪಡೆಯಲ್ಪಟ್ಟಿದೆ