ಸಹಾರ
ಗೋಚರ
(ಸಹಾರ ಮರುಭೂಮಿ ಇಂದ ಪುನರ್ನಿರ್ದೇಶಿತ)
ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ. ೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ ಅರಾಬಿಕ್ ಭಾಷೆಯಲ್ಲಿ ಒಣ ಭೂಮಿ ಎಂದರ್ಥ.
ಭೂಗೋಳ
[ಬದಲಾಯಿಸಿ]ಸಹಾರ ಮರುಭೂಮಿಯು ಆಫ್ರಿಕಾದ ಹಲವು ದೇಶಗಳಲ್ಲಿ ಹರಡಿ ಕೊಂಡಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ ಅಲ್ಜೀರಿಯ, ಚಾಡ್, ಈಜಿಪ್ಟ್, ಲಿಬ್ಯ, ಮಾಲಿ, ಮೌರಿಟೇನಿಯ, ಮೊರಾಕೊ, ನೈಜರ್, ಪಶ್ಚಿಮ ಸಹಾರ, ಸುಡಾನ್ ಮತ್ತು ಟ್ಯುನೀಶಿಯ.