ಸಸ್ಯ ಜೀವಕೋಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಸ್ಯ ಜೀವಕೋಶದ ರಚನೆ

ಸಸ್ಯ ಜೀವಕೋಶಗಳು ಯೂಕ್ಯಾರಿಯೋಟಿಕ್‌ (ಅಂದರೆ, ಒಂದು ಪೊರೆಯಿಂದ ಆವರಿಸಲ್ಪಟ್ಟ ಕೋಶಕೇಂದ್ರವನ್ನು ಒಳಗೊಂಡಿರುವ) ಜೀವಕೋಶಗಳಾಗಿದ್ದು, ತಾವು ಹೊಂದಿರುವ ಹಲವಾರು ಪ್ರಮುಖ ಅಂಶಗಳಿಂದಾಗಿ ಅವು ಇತರ ಯೂಕ್ಯಾರಿಯೋಟಿಕ್‌ ಜೀವಿಗಳ ಜೀವಕೋಶಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತವೆ. ಅವುಗಳ ಭಿನ್ನತಾ ಸೂಚಕ ಲಕ್ಷಣಗಳಲ್ಲಿ ಈ ಕೆಳಗಿನವು ಸೇರಿವೆ:

  • ಒಂದು ಬೃಹತ್ತಾದ ಮಧ್ಯಭಾಗದ ಕುಹರ: ಇದು ಟೋನೋಪ್ಲಾಸ್ಟ್‌‌ <JA ರಾವೆನ್‌‌ (1997) ದಿ ವ್ಯಾಕ್ಯುಓಲ್‌‌: ಎ ಕಾಸ್ಟ್‌‌-ಬೆನಿಫಿಟ್‌ ಅನಾಲಿಸಿಸ್‌‌. ಅಡ್ವಾನ್ಸಸ್‌‌ ಇನ್‌ ಬಟಾನಿಕಲ್‌ ರಿಸರ್ಚ್‌ 25, 59–86</ref>[೧] ಎಂದು ಕರೆಯಲ್ಪಡುವ ಒಂದು ಒಳಪೊರೆಯಿಂದ ಆವರಿಸಲ್ಪಟ್ಟಿರುವ ಒಂದು ನೀರು-ತುಂಬಿದ ಪ್ರದೇಶವಾಗಿದೆ. ಇದು ಜೀವಕೋಶದ ಅಂಗಾಂಶಗಳ ಸೆಡೆತವನ್ನು ಕಾಯ್ದುಕೊಂಡು ಹೋಗುತ್ತದೆ, ಜೀವಕೋಶಗಳ ನಡುವಿನ ಪದಾರ್ಥ ಮತ್ತು ಸಸ್ಯರಸದ ನಡುವಿನ ಸಣ್ಣ ಕಣಗಳ ಚಲನೆಯನ್ನು ನಿಯಂತ್ರಿಸುತ್ತದೆ, ಉಪಯುಕ್ತ ಮೂಲದ್ರವ್ಯವನ್ನು ಶೇಖರಿಸುತ್ತದೆ ಹಾಗೂ ತ್ಯಾಜ್ಯ ಪ್ರೋಟೀನುಗಳು ಮತ್ತು ಅಂಗಕಗಳನ್ನು ಜೀರ್ಣಿಸುತ್ತದೆ.
  • ಪ್ರಾಣಿ ಜೀವಕೋಶಗಳಿಗಿಂತ ಭಿನ್ನವಾಗಿ, ಸಸ್ಯ ಜೀವಕೋಶಗಳು ನಿಶ್ಚಲವಾಗಿರುತ್ತವೆ.

ಜೀವಕೋಶದ ಬಗೆಗಳು[ಬದಲಾಯಿಸಿ]

  • ಪರೆಂಕಿಮ ಜೀವಕೋಶಗಳು: ಇವು ಜೀವಂತ ಜೀವಕೋಶಗಳಾಗಿದ್ದು, ವೈವಿಧ್ಯಮಯವಾದ ಕಾರ್ಯಚಟುವಟಿಕೆಗಳನ್ನು ಹೊಂದಿರುತ್ತವೆ. ಸಂಗ್ರಹಣೆ ಮತ್ತು ಆಧಾರಕಾರ್ಯದಿಂದ ಮೊದಲ್ಗೊಂಡು ದ್ಯುತಿಸಂಶ್ಲೇಷಣೆ ಮತ್ತು ಆಹಾರ ಕೊಳವೆಗೆ ಪೌಷ್ಠಿಕಾಂಶಗಳನ್ನು ತುಂಬುವುದರವರೆಗೆ (ವರ್ಗಾವಣೆ ಜೀವಕೋಶಗಳು) ಅವುಗಳ ಕಾರ್ಯವ್ಯಾಪ್ತಿಯಿರುತ್ತದೆ. ಎಲೆಗಳು ತಮ್ಮ ನಾಳೀಯ ಕಂತೆಗಳಲ್ಲಿ ನೀರ್ಗೊಳವೆ ಮತ್ತು ಆಹಾರ ಕೊಳವೆಯನ್ನು ಹೊಂದಿರುವುದನ್ನು ಹೊರತುಪಡಿಸಿ, ಮುಖ್ಯವಾಗಿ ಪರೆಂಕಿಮ ಜೀವಕೋಶಗಳಿಂದ ಅವು ಮಾಡಲ್ಪಟ್ಟಿರುತ್ತವೆ. ಹೊರಪದರದಲ್ಲಿರುವ ಜೀವಕೋಶಗಳಂತೆ ಕೆಲವೊಂದು ಪರೆಂಕಿಮ ಜೀವಕೋಶಗಳು ಬೆಳಕಿನ ತೂರುವಿಕೆಗೆ ಮತ್ತು ಅನಿಲ ವಿನಿಮಯದ ಕಡೆಗೆ ಗಮನಹರಿಸುವ ಅಥವಾ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ವಿಶೇಷೀಕರಿಸಲ್ಪಟ್ಟಿರುತ್ತವೆ, ಆದರೆ ಇತರ ಪರೆಂಕಿಮ ಜೀವಕೋಶಗಳು ಸಸ್ಯ ಅಂಗಾಂಶದಲ್ಲಿನ ಕನಿಷ್ಟ ಮಟ್ಟದಲ್ಲಿ ವಿಶೇಷೀಕರಿಸಲ್ಪಟ್ಟ ಜೀವಕೋಶಗಳ ಪೈಕಿ ಸೇರಿವೆ, ಮತ್ತು ಅವು ಟೋಟಿಪೊಟೆಂಟ್‌‌ ಎಂದು ಕರೆಯಲ್ಪಡುವ ವಿಶಿಷ್ಟ ಸ್ವರೂಪದಲ್ಲಿ ಉಳಿದುಕೊಳ್ಳಬಹುದು; ತಮ್ಮ ಜೀವಮಾನದುದ್ದಕ್ಕೂ ಪ್ರಭೇದ ಮಾಡಲ್ಪಡದ ಜೀವಕೋಶಗಳ ಹೊಸ ಸಮುದಾಯಗಳನ್ನು ಉತ್ಪಾದಿಸಲು ವಿಭಜನೆಗೊಳ್ಳುವ ಸಾಮರ್ಥ್ಯವನ್ನು ಟೋಟಿಪೊಟೆಂಟ್ ಎಂದು ಕರೆಯಲಾಗುತ್ತದೆ. ಪರೆಂಕಿಮ ಜೀವಕೋಶಗಳು ತೆಳುವಾದ, ಪ್ರವೇಶಸಾಧ್ಯ ಪ್ರಾಥಮಿಕ ಭಿತ್ತಿಗಳನ್ನು ಹೊಂದಿದ್ದು, ಇದರಿಂದಾಗಿ ಸದರಿ ಜೀವಕೋಶಗಳ ನಡುವೆ ಸಣ್ಣ ಸಣ್ಣ ಕಣಗಳು ಸಾಗಣೆಗೊಳ್ಳಲು ಸಾಧ್ಯವಾಗುತ್ತದೆ. ಮಕರಂದ ಸ್ರವಿಸುವಿಕೆಯಂಥ, ಅಥವಾ ಸಸ್ಯಾಹಾರಿತನವನ್ನು ಅನುಮೋದಿಸದಿರುವ ದ್ವಿತೀಯಕ ಉತ್ಪನ್ನಗಳ ತಯಾರಿಕೆಯಂಥ ಜೀವರಾಸಾಯನಿಕ ಕಾರ್ಯಚಟುವಟಿಕೆಗಳ ಒಂದು ವ್ಯಾಪಕ ಶ್ರೇಣಿಯನ್ನು ನಿರ್ವಹಿಸುವ ಹೊಣೆಯನ್ನು ಸದರಿ ಜೀವಕೋಶಗಳ ಕೋಶದ್ರವ್ಯವು ಹೊತ್ತಿರುತ್ತದೆ. ಅನೇಕ ಹರಿದ್ರೇಣುಗಳನ್ನು ಹೊಂದಿರುವ ಮತ್ತು ದ್ಯುತಿಸಂಶ್ಲೇಷಣೆಯೊಂದಿಗೆ ಪ್ರಮುಖವಾಗಿ ಸಂಬಂಧವನ್ನು ಹೊಂದಿರುವ ಪರೆಂಕಿಮ ಜೀವಕೋಶಗಳನ್ನು ಕ್ಲೋರೆಂಕಿಮ ಜೀವಕೋಶಗಳೆಂದು ಕರೆಯಲಾಗುತ್ತದೆ. ಆಲೂ ಗೆಡ್ಡೆಗಳು ಮತ್ತು ದ್ವಿದಳ ಧಾನ್ಯ ಸಸ್ಯಗಳಲ್ಲಿ ಇರುವ ಬಹುಪಾಲು ಪರೆಂಕಿಮ ಜೀವಕೋಶಗಳಂಥ ಇತರವು, ಒಂದು ಸಂಗ್ರಹಣಾ ಕಾರ್ಯಚಟುವಟಿಕೆಯನ್ನು ಹೊಂದಿರುತ್ತವೆ.
  • ಕಲಿಂಕಿಮ ಜೀವಕೋಶಗಳು: ಕಲಿಂಕಿಮ ಜೀವಕೋಶಗಳು ಪ್ರೌಢಸ್ಥಿತಿಯಲ್ಲಿ ಜೀವಂತವಾಗಿರುತ್ತವೆ ಮತ್ತು ಕೇವಲ ಒಂದು ಪ್ರಾಥಮಿಕ ಭಿತ್ತಿ ಮತ್ತು ಒಂದು ದ್ವಿತೀಯಕ ಭಿತ್ತಿಯನ್ನಷ್ಟೇ ಹೊಂದಿರುತ್ತವೆ. ಆರಂಭದಲ್ಲಿ ಪರೆಂಕಿಮವನ್ನೇ ಹೋಲುವ ವರ್ಧನೋತಕ ಉತ್ಪನ್ನಗಳಿಂದ ಈ ಜೀವಕೋಶಗಳು ಪೂರ್ತಿ ಬೆಳೆಯುತ್ತವೆಯಾದರೂ, ಭಿನ್ನತೆಗಳು ಶೀಘ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಪ್ಲಾಸ್ಟಿಡ್‌‌ಗಳು ಇದರಲ್ಲಿ ಅಭಿವೃದ್ಧಿಯಾಗುವುದಿಲ್ಲ ಮತ್ತು ಹೆಚ್ಚುವರಿ ಪ್ರಾಥಮಿಕ ಭಿತ್ತಿಯನ್ನು ಸ್ರವಿಸಲು, ಸ್ರಾವಕ ಅಂಗವ್ಯೂಹವು (ER ಮತ್ತು ಗಾಲ್ಗಿ) ಹರಡಿಕೊಳ್ಳುತ್ತದೆ. ಇದರ ಭಿತ್ತಿಯು ಮೂಲೆಗಳಲ್ಲಿ ಅತಿ ಸಾಮಾನ್ಯವಾಗಿ ಅತ್ಯಂತ ದಪ್ಪವಾಗಿದ್ದು, ಅಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಜೀವಕೋಶಗಳು ಸಂಪರ್ಕದಲ್ಲಿ ಬರುತ್ತವೆ. ಕೇವಲ ಎರಡು ಜೀವಕೋಶಗಳು ಸಂಪರ್ಕದಲ್ಲಿ ಬರುವೆಡೆ ಭಿತ್ತಿಯು ಅತ್ಯಂತ ತೆಳುವಾಗಿರುತ್ತದೆಯಾದರೂ, ಭಿತ್ತಿಯ ದಪ್ಪನಾಗುವಿಕೆಯ ಇತರ ವ್ಯವಸ್ಥೆಗಳೂ ಇಲ್ಲಿ ಸಾಧ್ಯವಿವೆ[೧೦].

ಪೆಕ್ಟಿನ್‌‌ ಮತ್ತು ಹೆಮಿಸೆಲ್ಯುಲೋಸು ಇವು ದ್ವಿದಳ ಸಸ್ಯವಾದ ಆವೃತಬೀಜಿಗಳ (ಹೂಬಿಡುವ ಸಸ್ಯಗಳು) ಕಲಿಂಕಿಮ ಕೋಶಭಿತ್ತಿಗಳ ಪ್ರಬಲ ಘಟಕಾಂಶಗಳಾಗಿದ್ದು, ಈ ಆವೃತಬೀಜಿಗಳ ಪೆಟಾಸೈಟ್ಸ್‌‌ [೧೧] ಕುಲದಲ್ಲಿನ ಸದಸ್ಯರು 20%ನಷ್ಟು ಕಡಿಮೆ ಪ್ರಮಾಣದಲ್ಲಿ ಸೆಲ್ಯುಲೋಸನ್ನು ಹೊಂದಿರಬಹುದಾಗಿರುತ್ತದೆ. ವಿಶಿಷ್ಟವೆಂಬಂತೆ, ಕಲಿಂಕಿಮ ಜೀವಕೋಶಗಳು ಸಾಕಷ್ಟು ಉದ್ದನೆಯ ರಚನೆಯನ್ನು ಹೊಂದಿರುತ್ತವೆ, ಮತ್ತು ಒಂದು ವಿಭಜಿತ ನೋಟವನ್ನು ನೀಡಲು ಅವು ಅಡ್ಡಡ್ಡವಾಗಿ ವಿಭಜಿಸಿಕೊಳ್ಳಬಹುದು. ಇನ್ನೂ ಉದ್ದವಾಗಿ ಬೆಳೆಯುತ್ತಲೇ ಅಕ್ಷಗಳಲ್ಲಿನ ಸಸ್ಯವನ್ನು ಬೆಂಬಲಿಸುವುದು, ಮತ್ತು ಅಂಗಾಂಶಗಳ ಮೇಲೆ ಬಾಗಿಸುವಿಕೆ ಮತ್ತು ಕರ್ಷಕ ಬಲವನ್ನು ನೀಡುವುದು ಈ ಬಗೆಯ ಜೀವಕೋಶದ ಪಾತ್ರವಾಗಿದೆ. ಪ್ರಾಥಮಿಕ ಭಿತ್ತಿಗೆ ಗಡಸುತನ ಮತ್ತು ಬಾಗದಿರುವಿಕೆಯ ಸ್ವಭಾವವನ್ನು ನೀಡುವ ಲಿಗ್ನಿನ್‌‌ ಸದರಿ ಪ್ರಾಥಮಿಕ ಭಿತ್ತಿಯಲ್ಲಿ ಇರುವುದಿಲ್ಲ; ಆದ್ದರಿಂದ ಈ ಬಗೆಯ ಜೀವಕೋಶವು ಸುಲಭವಾಗಿ ಮಣಿಯುವ ಆಧಾರವನ್ನು ಅಥವಾ ಬೆಂಬಲವನ್ನು ಒದಗಿಸುತ್ತದೆ ಎಂದು ಹೇಳಬಹುದು. ಈ ಆಧಾರವು ಒಂದು ಎಳೆಯ ಕಾಂಡ ಅಥವಾ ಎಲೆಯತೊಟ್ಟನ್ನು ಗಾಳಿಗೆ ಒಡ್ಡಿ ಹಿಡಿದುಕೊಳ್ಳಬಹುದಾದರೂ, ಜೀವಕೋಶಗಳಲ್ಲಿ ಅವುಗಳ ಸುತ್ತಲಿರುವ ಜೀವಕೋಶಗಳಂತೆ ಉದ್ದನೆಯದಾಗಿ ಹಿಗ್ಗಿಸಬಲ್ಲದಾಗಿದೆ. ಕಲಿಂಕಿಮ ಜೀವಕೋಶಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಲು ಹಿಗ್ಗಬಲ್ಲ ಆಧಾರವು (ಸ್ಥಿತಿಸ್ಥಾಪಕವಾದ ಪೂರ್ವಸ್ಥಿತಿಗೆ-ಮರಳುವಿಕೆಯಿಲ್ಲದೆ) ಒಂದು ಉತ್ತಮವಾದ ವಿಧಾನವಾಗಿದೆ. ತೋಟದ ಸೊಪ್ಪಿನಲ್ಲಿನ ನಾರುಗಳ ಭಾಗಗಳು ಕಲಿಂಕಿಮ ಜೀವಕೋಶಗಳಾಗಿವೆ.

  • ಸ್ಕ್ಲಿರೆಂಕಿಮ ಜೀವಕೋಶಗಳು: ಸ್ಕ್ಲಿರೆಂಕಿಮ ಜೀವಕೋಶಗಳು (ಬಿರುಸು ಎಂಬ ಅರ್ಥವನ್ನು ಕೊಡುವ ಗ್ರೀಕ್‌ನ ಸ್ಕ್ಲಿರೋಸ್ ಎಂಬ ಶಬ್ದದಿಂದ ಬಂದಿರುವುದು) ಬಿರುಸಾದ ಮತ್ತು ಗಡಸಾದ ಜೀವಕೋಶಗಳಾಗಿದ್ದು, ಯಾಂತ್ರಿಕ ಬೆಂಬಲ ಅಥವಾ ಆಧಾರದಲ್ಲಿ ಪಾತ್ರ ವಹಿಸುವ ಒಂದು ಕಾರ್ಯಚಟುವಟಿಕೆಯನ್ನು ಅವು ಹೊಂದಿವೆ. ಅವುಗಳಲ್ಲಿ ಎರಡು ವಿಸ್ತೃತ ಬಗೆಗಳಿವೆ: ಪೆಡುಸಾದವುಗಳು ಅಥವಾ ಕಲ್ಲು ಜೀವಕೋಶಗಳು ಮತ್ತು ನಾರುಗಳು. ಪ್ರಾಥಮಿಕ ಕೋಶಭಿತ್ತಿಯ ಒಳಭಾಗದ ಮೇಲೆ ಜೋಡಿಸಲ್ಪಟ್ಟ ಒಂದು ವ್ಯಾಪಕವಾದ ದ್ವಿತೀಯಕ ಕೋಶಭಿತ್ತಿಯನ್ನು ಈ ಜೀವಕೋಶಗಳು ಬೆಳೆಸುತ್ತವೆ. ದ್ವಿತೀಯಕ ಭಿತ್ತಿಯು ಲಿಗ್ನಿನ್‌‌‌ನೊಂದಿಗೆ ವ್ಯಾಪಿಸಿಕೊಂಡಿದ್ದು, ಅದರಿಂದಾಗಿ ಭಿತ್ತಿಯು ಬಿರುಸಾಗಿರುತ್ತದೆ ಮತ್ತು ನೀರಿಗೆ ಪ್ರವೇಶ ಸಾಧ್ಯವಾಗದ ಲಕ್ಷಣವನ್ನು ಹೊಂದಿರುತ್ತದೆ. ಈ ರೀತಿಯಾಗಿ, ಸಕ್ರಿಯ ಚಯಾಪಚಯ ಕ್ರಿಯೆಯನ್ನು ಕಾಯ್ದುಕೊಂಡು ಹೋಗಲು ಅಗತ್ಯವಿರುವ ಸಾಕಷ್ಟು ಮೂಲದ್ರವ್ಯವನ್ನು ವಿನಿಮಯ ಮಾಡಲು ಈ ಜೀವಕೋಶಗಳು ಅಸಮರ್ಥವಾಗಿರುವುದರಿಂದ, ಅವು ಹೆಚ್ಚು ಸಮಯದವರೆಗೆ ಬದುಕುಳಿಯಲಾರವು. ವಿಶಿಷ್ಟವೆಂಬಂತೆ, ಸ್ಕ್ಲಿರೆಂಕಿಮ ಜೀವಕೋಶಗಳು ಕಾರ್ಯಚಟುವಟಿಕೆಯ ಪ್ರೌಢಸ್ಥಿತಿಯಲ್ಲಿ ಸತ್ತಿರುತ್ತವೆ, ಮತ್ತು ಅವುಗಳಲ್ಲಿ ಕೋಶದ್ರವ್ಯವು ಕಾಣೆಯಾಗಿರುತ್ತದೆ; ಇದರಿಂದಾಗಿ ಮಧ್ಯಭಾಗದಲ್ಲಿ ಒಂದು ಖಾಲಿ ಕುಹರವು ಉಳಿದುಕೊಂಡುಬಿಡುತ್ತದೆ.

ಪೆಡುಸಾದ ಜೀವಕೋಶಗಳಿಗೆ (ಎಲೆಗಳು ಅಥವಾ ಹಣ್ಣುಗಳಿಗೆ ಒಂದು ಸಣ್ಣ ಕಣಗಳಂತಿರುವ ರಚನಾ ವಿನ್ಯಾಸವನ್ನು ನೀಡುವ ಬಿರುಸು ಜೀವಕೋಶಗಳು) ಸಂಬಂಧಿಸಿದಂತಿರುವ ಕಾರ್ಯಚಟುವಟಿಕೆಗಳಲ್ಲಿ, ಸಣ್ಣ ಕೀಟದ ಮರಿಹುಳುವಿನ ಹಂತಗಳಲ್ಲಿ ಪಚನದ ಸಾಗುನಾಳಗಳನ್ನು ಹಾನಿಗೊಳಿಸುವ ಮೂಲಕ ಸಸ್ಯಾಹಾರಿತನವನ್ನು ಅಡ್ಡಿಪಡಿಸುವುದು, ಮತ್ತು ಶಾರೀರಿಕ ಸಂರಕ್ಷಣೆ (ಬಿರುಸಾಗಿರುವ ಪೆಡುಸಾದ ಜೀವಕೋಶಗಳ ಒಂದು ಘನ ಅಂಗಾಂಶವು, ಪೀಚ್‌ ಹಣ್ಣು ಮತ್ತು ಅನೇಕ ಇತರ ಹಣ್ಣುಗಳಲ್ಲಿನ ಓಟೆಯ ಭಿತ್ತಿಯನ್ನು ರೂಪಿಸುತ್ತದೆ) ಮಾಡುವುದು ಇವು ಸೇರಿವೆ. ಮೂಲಿಕೆಯಂಥ (ದಾರುವಿಲ್ಲದ) ಸಸ್ಯಗಳ ಎಲೆಗಳು ಮತ್ತು ಕಾಂಡಗಳಿಗೆ ಹೊರೆ-ಹೊರುವ ಆಧಾರ ಮತ್ತು ಕರ್ಷಕ ಬಲದ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ನಾರುಗಳ ಕಾರ್ಯಚಟುವಟಿಕೆಗಳಲ್ಲಿ ಸೇರಿವೆ.[೧೦] ನೀರು ಮತ್ತು ಪೌಷ್ಟಿಕದ್ರವ್ಯಗಳ ಪೈಕಿ ಯಾವೊಂದರ ಸಾಗಿಸುವಿಕೆಯಲ್ಲಿ (ನೀರ್ಗೊಳವೆಯಲ್ಲಿರುವಂತೆ) ಅಥವಾ ಇಂಗಾಲ ಸಂಯುಕ್ತಗಳ ಸಾಗಿಸುವಿಕೆಯಲ್ಲಿ (ಆಹಾರ ಕೊಳವೆಯಲ್ಲಿರುವಂತೆ) ಸ್ಕ್ಲಿರೆಂಕಿಮ ನಾರುಗಳು ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ; ಆದರೆ ಆರಂಭಿಕ ಭೂಸಸ್ಯಗಳಲ್ಲಿ ನೀರ್ಗೊಳವೆ ಮತ್ತು ಆಹಾರ ಕೊಳವೆಯ ಆರಂಭಿಕ ರೂಪಗಳ ರೂಪಾಂತರಗಳಾಗಿ ಅವು ವಿಕಸನಗೊಂಡಿರಬಹುದಾದ ಸಾಧ್ಯತೆಗಳಿವೆ.

ಅಂಗಾಂಶದ ಬಗೆಗಳು[ಬದಲಾಯಿಸಿ]

ಅರಾಬಿಡೋಪ್ಸಿಸ್‌ ಎಪಿಡರ್ಮಿಸ್‌ನ ಜೀವಕೋಶಗಳು

ಬೇರುಗಳು, ಕಾಂಡಗಳು, ಎಲೆಗಳು, ಹೂವುಗಳು ಮತ್ತು ಸಂತಾನೋತ್ಪತ್ತಿ ಮಾಡುವ ರಚನೆಗಳನ್ನು ರೂಪಿಸುವ ಸಲುವಾಗಿ, ಪ್ರಭೇದ ಮಾಡಲ್ಪಡದ ವರ್ಧನೋತಕದ ಜೀವಕೋಶಗಳಿಂದ (ಪ್ರಾಣಿಗಳ ಕಾಂಡಕೋಶಗಳನ್ನು ಹೋಲುವ) ಜೀವಕೋಶಗಳ ಪ್ರಮುಖ ವರ್ಗಗಳು ಭಿನ್ನವಾಗಿರುತ್ತವೆ.

ನೀರ್ಗೊಳವೆ ಜೀವಕೋಶಗಳು[೧೨] ಉದ್ದವಾಗಿರುವ ಜೀವಕೋಶಗಳಾಗಿದ್ದು, ಕೋಶಭಿತ್ತಿಗಳ ಕಾಷ್ಠೀಕರಿಸಲ್ಪಟ್ಟ ದ್ವಿತೀಯಕ ದಪ್ಪನಾಗುವಿಕೆಯನ್ನು ಅವು ಹೊಂದಿರುತ್ತವೆ. ನೀರ್ಗೊಳವೆಯ ಜೀವಕೋಶಗಳು ನೀರಿನ ಸಾಗಿಸುವಿಕೆಗೆ ಸಂಬಂಧಿಸಿದಂತೆ ವಿಶೇಷೀಕರಿಸಲ್ಪಟ್ಟಿರುತ್ತವೆ. ಸುಮಾರು 425 ದಶಲಕ್ಷ ವರ್ಷಗಳಿಗೂ ಹಿಂದಿದ್ದ ಸೈಲೂರಿಯನ್‌‌ ಅವಧಿಯಲ್ಲಿ, ನೆಲದ ಸಸ್ಯಗಳಾಗಿ ಅವು ರೂಪಾಂತರಗೊಂಡ ಸಮಯದಲ್ಲಿ ನೀರ್ಗೊಳವೆಯ ಜೀವಕೋಶಗಳು ಮೊದಲಿಗೆ ಸಸ್ಯಗಳಲ್ಲಿ ಕಾಣಿಸಿಕೊಂಡವು (ನೋಡಿ: ಕುಕ್‌ಸೊನಿಯಾ ). ನೀರ್ಗೊಳವೆಯ ಹೊಂದಿರುವಿಕೆಯು ನಾಳೀಯ ಸಸ್ಯಗಳು ಅಥವಾ ಟ್ರೇಕಿಯೋಫೈಟ್‌‌‌‌ಗಳನ್ನು ವಿಶದೀಕರಿಸುತ್ತದೆ. ನೀರ್ಗೊಳವೆಯ ಟ್ರೇಕಿಡ್‌ಗಳು ಚೂಪಾದ, ಉದ್ದವಾಗಿಸಲ್ಪಟ್ಟ ನೀರ್ಗೊಳವೆಯ ಜೀವಕೋಶಗಳಾಗಿದ್ದು, ಇವುಗಳ ಪೈಕಿ ಅತ್ಯಂತ ಸರಳವಾಗಿ ಇರುವಂಥವು ನಿರಂತರ ಪ್ರಾಥಮಿಕ ಕೋಶಭಿತ್ತಿಗಳನ್ನು ಮತ್ತು ಕಾಷ್ಠೀಕರಿಸಲ್ಪಟ್ಟ ದ್ವಿತೀಯಕವಾದ ಭಿತ್ತಿಯ ದಪ್ಪನಾಗುವಿಕೆಗಳನ್ನು ಹೊಂದಿರುತ್ತವೆ; ಈ ದಪ್ಪನಾಗುವಿಕೆಗಳು ಉಂಗುರಗಳು, ದೊಡ್ಡಬಳೆಗಳು ಅಥವಾ ಜಾಲರಚನೆಯ ಜಾಲಬಂಧಗಳ ಸ್ವರೂಪದಲ್ಲಿರುತ್ತವೆ. ಅಂಚುಕಟ್ಟಿದ ಕುಳಿಗಳು ಎಂದು ಕರೆಯಲ್ಪಡುವ, ಕವಾಟದ-ರೀತಿಯಲ್ಲಿರುವ ರಂಧ್ರೀಕರಣಗಳೊಂದಿಗಿನ ಹೆಚ್ಚು ಸಂಕೀರ್ಣವಾದ ಟ್ರೇಕಿಡ್‌ಗಳು ಅನಾವೃತ ಬೀಜಿಗಳ ಸ್ವರೂಪವನ್ನು ನಿರೂಪಿಸುತ್ತವೆ. ಜರೀಗಿಡಗಳು ಮತ್ತು ಇತರ ಅಪುಷ್ಪಸಸ್ಯಗಳು ಹಾಗೂ ಅನಾವೃತ ಬೀಜಿಗಳು ಮಾತ್ರವೇ ನೀರ್ಗೊಳವೆಯ ಟ್ರೇಕಿಡ್‌‌‌‌ಗಳನ್ನು ಹೊಂದಿದ್ದರೆ, ಆವೃತಬೀಜಿಗಳು ನೀರ್ಗೊಳವೆಯ ಸಸ್ಯನಾಳಗಳನ್ನೂ ಹೊಂದಿರುತ್ತವೆ. ತುದಿಯಿಂದ-ತುದಿಗೆ ಜೋಡಿಸಲ್ಪಟ್ಟ ಟೊಳ್ಳಾದ ನೀರ್ಗೊಳವೆಯ ಜೀವಕೋಶಗಳು ಸಸ್ಯನಾಳದ ಸದಸ್ಯರಾಗಿದ್ದು, ಉದ್ದನೆಯ ನಿರಂತರ ಕೊಳವೆಗಳಾಗಿ ಜೋಡಿಸಲ್ಪಟ್ಟಿರುವ ಅಂತ್ಯದ ಭಿತ್ತಿಗಳನ್ನು ಅವು ಹೊಂದಿರುವುದಿಲ್ಲ. ಬ್ರಯೋಫೈಟ್‌‌ಗಳು ನಿಜವಾದ ನೀರ್ಗೊಳವೆಯ ಜೀವಕೋಶಗಳನ್ನು ಹೊಂದಿರುವುದಿಲ್ಲವಾದರೂ, ಅವುಗಳ ಬೀಜಕ ಸಸ್ಯಗಳು ಹೈಡ್ರೋಮ್‌ ಎಂದು ಕರೆಯಲ್ಪಡುವ ಒಂದು ನೀರು ಸಾಗಿಸುವ ಅಂಗಾಂಶವನ್ನು ಹೊಂದಿರುತ್ತವೆ ಮತ್ತು ಸರಳವಾದ ನಿರ್ಮಾಣ-ರಚನೆಯನ್ನು ಒಳಗೊಂಡ ಉದ್ದಮಾಡಲ್ಪಟ್ಟ ಜೀವಕೋಶಗಳಿಂದ ಈ ಹೈಡ್ರೋಮ್‌ ಮಾಡಲ್ಪಟ್ಟಿರುತ್ತದೆ.

ಆಹಾರ ಕೊಳವೆಯು ಉನ್ನತ ಸಸ್ಯಗಳಲ್ಲಿ ಆಹಾರ ಸಾಗಿಸುವಿಕೆಗೆ ಸಂಬಂಧಿಸಿದಂತೆ ವಿಶೇಷೀಕರಿಸಲ್ಪಟ್ಟ ಒಂದು ಅಂಗಾಂಶವಾಗಿದೆ.ಆಹಾರದ ಸಾಗಿಸುವಿಕೆಯು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಆಹಾರ ಕೊಳವೆಯ ಜೀವಕೋಶಗಳೆಂದು ಕರೆಯಲ್ಪಡುವ ವಿಶೇಷ ಜೀವಕೋಶದ ನೆರವಿನಿಂದ ಸಸ್ಯದಲ್ಲಿ ಈ ಪ್ರಕ್ರಿಯೆಯು ನಡೆಸಲ್ಪಡುತ್ತದೆ. ಪರಾಸರಣ ಪ್ರಕ್ರಿಯೆಯ ಮೂಲಕ ಈ ಜೀವಕೋಶಗಳು ಕೋಶಾಂತರದ ಮತ್ತು ಅಂತರ್ಜೀವಕೋಶದ ಸ್ರಾವವನ್ನು (ಆಹಾರ:- ಸಸ್ಯಕ್ಕೆ ತನ್ನ ಚಯಾಪಚಯ ಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯವಾಗಿರುವ ಪ್ರೋಟೀನುಗಳು ಮತ್ತು ಇತರ ಅತ್ಯಾವಶ್ಯಕ ಧಾತುಗಳು) ಸಾಗಿಸುತ್ತವೆ. ಸಸ್ಯಗಳಲ್ಲಿನ ಈ ಸಂಗತಿಯನ್ನು ಸಸ್ಯರಸದ ಏರುವಿಕೆ ಎಂದು ಕರೆಯಲಾಗುತ್ತದೆ. ಆಹಾರದ ಕೊಳವೆಯು ಎರಡು ಬಗೆಯ ಜೀವಕೋಶಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ: ಜರಡಿಯಂಥ ಕೊಳವೆಗಳು ಮತ್ತು ನಿಕಟವಾಗಿ-ಸಂಬಂಧವನ್ನು ಹೊಂದಿರುವ ಸಹವರ್ತಿ ಜೀವಕೋಶಗಳು. ಕೋಶಕೇಂದ್ರಗಳು ಮತ್ತು ರೈಬೋಸೋಮ್‌‌‌‌ಗಳನ್ನು ಜರಡಿಯಂಥ ಕೊಳವೆಯ ಘಟಕಗಳು ಹೊಂದಿರುವುದಿಲ್ಲ, ಮತ್ತು ಅವುಗಳ ಚಯಾಪಚಯ ಕ್ರಿಯೆ ಮತ್ತು ಕಾರ್ಯಚಟುವಟಿಕೆಗಳನ್ನು ಅಕ್ಕಪಕ್ಕದಲ್ಲಿರುವ ಕೋಶಕೇಂದ್ರವುಳ್ಳ ಸಹವರ್ತಿ ಜೀವಕೋಶಗಳು ನಿಯಂತ್ರಿಸುತ್ತವೆ. ಜರಡಿಯಂಥ ಫಲಕಗಳು ಎಂದು ಕರೆಯಲ್ಪಡುವ ರಂಧ್ರಿತ ಅಂತ್ಯ-ಫಲಕಗಳನ್ನು ನಡುವೆ ಹೊಂದಿರುವುದರೊಂದಿಗೆ ಜರಡಿಯಂಥ ಕೊಳವೆಗಳು ತುದಿಯಿಂದ ತುದಿಗೆ ಜೋಡಿಸಲ್ಪಟ್ಟಿರುತ್ತವೆ; ಜರಡಿಯಂಥ ಘಟಕಗಳ ನಡುವೆ ಫೋಟೋಸಿಂಥೇಟ್‌ನ ಸಾಗಣೆಯಾಗಲು ಈ ಜರಡಿಯಂಥ ಫಲಕಗಳು ಅನುವುಮಾಡಿಕೊಡುತ್ತವೆ. ಕೋಶದ್ರವದ ಸಪುರ ಎಳೆಗಳ ಮುಖೇನ ಜರಡಿಯಂಥ ಕೊಳವೆಗಳೊಂದಿಗೆ ಸಂಪರ್ಕಿಸಲ್ಪಟ್ಟಿರುವ ಸಹವರ್ತಿ ಜೀವಕೋಶಗಳು, ಆಹಾರ ಕೊಳವೆಗಳಿಗೆ ಶರ್ಕರ ಪದಾರ್ಥಗಳನ್ನು ತುಂಬುವ ಹೊಣೆಹೊತ್ತಿರುತ್ತವೆ. ಆಹಾರ ಕೊಳವೆಯು ಬ್ರಯೋಫೈಟ್‌‌‌ಗಳಲ್ಲಿ ಇರುವುದಿಲ್ಲ, ಆದರೆ ಇದೇ ರೀತಿಯ ಕಾರ್ಯಚಟುವಟಿಕೆಯನ್ನು ನಡೆಸುವ ಲೆಪ್ಟೋಮ್ ಎಂದು ಕರೆಯಲ್ಪಡುವ ಒಂದು ಸರಳವಾದ ಅಂಗಾಂಶವನ್ನು ಪಾಚಿ ಬೀಜಕ ಸಸ್ಯಗಳು ಹೊಂದಿರುತ್ತವೆ.

ಸಸ್ಯದ ಹೊರಚರ್ಮದ ಜೀವಕೋಶಗಳು ವಿಶೇಷೀಕರಿಸಲ್ಪಟ್ಟ ಪರೆಂಕಿಮ ಜೀವಕೋಶಗಳಾಗಿದ್ದು, ಎಲೆಗಳು, ಕಾಂಡಗಳು ಮತ್ತು ಬೇರುಗಳ ಬಾಹ್ಯ ಮೇಲ್ಮೈಗಳ ಹೊದಿಕೆಗಳಾಗಿ ಅವು ಕಾರ್ಯನಿರ್ವಹಿಸುತ್ತವೆ. ಗಾಳಿಯಲ್ಲಿ ಬೆಳೆದ ಅಂಗಗಳ ಹೊರಚರ್ಮದ ಜೀವಕೋಶಗಳು, ಗಟ್ಟಿ ಹೊರಪದರ (ಟ್ಯುನಿಕ) (L1 ಮತ್ತು L2 ಪದರಗಳು) ಎಂದು ಕರೆಯಲ್ಪಡುವ, ಸಸ್ಯದ ಎಳೆ ರೆಂಬೆಯ ತುದಿಯನ್ನು[೧೦] ಹೊದಿಕೆಯಂತೆ ಆವರಿಸುವ ಜೀವಕೋಶಗಳ ಮೇಲುಮೇಲಿನ ಪದರದಿಂದ ಹುಟ್ಟಿಕೊಂಡರೆ, ವಿಶೇಷ ರಚನೆ (ಕಾರ್ಪಸ್‌) (L3 ಪದರ) ಎಂದು ಕರೆಯಲ್ಪಡುವ ಎಳೆ ರೆಂಬೆಯ ತುದಿಯ ಅತ್ಯಂತ ಒಳಗಿನ ಪದರದಿಂದ ತೊಗಟೆ ಮತ್ತು ನಾಳೀಯ ಅಂಗಾಂಶಗಳು ಹುಟ್ಟಿಕೊಳ್ಳುತ್ತವೆ. ಬೇರು ಟೋಪಿಯ ಸನಿಹದ ಕೆಳಭಾಗದಲ್ಲಿಯೇ ಇರುವ ಜೀವಕೋಶಗಳ ಪದರದಿಂದ ಬೇರುಗಳ ಹೊರಪದರವು ಹುಟ್ಟಿಕೊಳ್ಳುತ್ತದೆ.


ಬೇರುಗಳನ್ನು ಹೊರತುಪಡಿಸಿದ, ಗಾಳಿಯಲ್ಲಿ ಬೆಳೆದ ಎಲ್ಲಾ ಅಂಗಗಳ ಹೊರಪದರವು, ಮೇಣದಂಥ ದ್ರವ್ಯಗಳು ಮತ್ತು ಕ್ಯೂಟಿನ್‌‌ ಎಂಬ ಪಾಲಿಯೆಸ್ಟರ್‌‌‌‌‌ನಿಂದ ಮಾಡಲ್ಪಟ್ಟ ಒಂದು ಹೊರಪೊರೆಯನ್ನು ಹೊದಿಕೆಯಾಗಿ ಹೊಂದಿರುತ್ತವೆ. ಹಲವಾರು ಬಗೆಯ ಜೀವಕೋಶಗಳು ಹೊರಪದರದಲ್ಲಿ ಇರಲು ಸಾಧ್ಯವಿದೆ. ರಂಧ್ರಗಳ ರಕ್ಷಕ ಜೀವಕೋಶಗಳು, ಗ್ರಂಥಿಗಳಿರುವ ಮತ್ತು ಹೊದಿಕೆಯ ಕೂದಲುಗಳು ಅಥವಾ ರೋಮಗಳು, ಮತ್ತು ಪ್ರಾಥಮಿಕ ಬೇರುಗಳ ಬೇರು ಕೂದಲುಗಳು ಇವುಗಳ ಪೈಕಿ ಗಮನಾರ್ಹವಾಗಿವೆ. ಬಹುಪಾಲು ಸಸ್ಯಗಳ ಬಳ್ಳಿಯ ಹೊರಪದರದಲ್ಲಿ, ಕೇವಲ ರಕ್ಷಕ ಜೀವಕೋಶಗಳು ಹರಿದ್ರೇಣುಗಳನ್ನು ಹೊಂದಿರುತ್ತವೆ. ಪ್ರಾಥಮಿಕ ಬಳ್ಳಿಯ ಹೊರಚರ್ಮದ ಜೀವಕೋಶಗಳು ಕ್ಯೂಟಿನ್‌ನ್ನು ಸಂಶ್ಲೇಷಿಸುವುದಕ್ಕೆ ಸಂಬಂಧಿಸಿದ ಜೀವರಾಸಾಯನಿಕ ಸಾಮರ್ಥ್ಯವನ್ನು ಹೊಂದಿರುವ ಏಕೈಕ ಸಸ್ಯ ಜೀವಕೋಶಗಳು ಎಂದು ಭಾವಿಸಲಾಗಿದೆ.[೧೩]



ಪರಾಮರ್ಶನಗಳು[ಬದಲಾಯಿಸಿ]

  1. RA ಲೀಗ್‌‌ ಮತ್ತು D ಸ್ಯಾಂಡರ್ಸ್‌‌ (1997) ಅಡ್ವಾನ್ಸಸ್‌‌ ಇನ್‌ ಬಟಾನಿಕಲ್‌ ರಿಸರ್ಚ್‌, ಸಂಪುಟ 25: ದಿ ಪ್ಲಾಂಟ್‌ ವ್ಯಾಕ್ಯುಓಲ್‌‌. ಅಕಾಡೆಮಿಕ್‌ ಪ್ರೆಸ್‌‌‌, ಕ್ಯಾಲಿಫೋರ್ನಿಯಾ ಮತ್ತು ಲಂಡನ್‌‌‌. ISBN 0-12-441870-8
  2. ಒಪರ್ಕಾ, KJ (1993) ಸಿಗ್ನಲಿಂಗ್‌ ವಯಾ ಪ್ಲಾಸ್ಮೊಡೆಸ್ಮೇಟಾ-ದಿ ನೆಗ್ಲೆಕ್ಟೆಡ್‌ ಪಾತ್‌ವೇ. ಸೆಮಿನಾರ್ಸ್‌‌ ಇನ್‌ ಸೆಲ್‌ ಬಯಾಲಜಿ 4, 131-138
  3. ‌‌ಹೆಪ್ಲರ್, PK (1982) ಎಂಡೋಪ್ಲಾಸ್ಮಿಕ್‌ ರೆಟಿಕ್ಯುಲಮ್‌ ಇನ್‌ ದಿ ಫಾರ್ಮೇಷನ್‌ ಆಫ್‌ ದಿ ಸೆಲ್‌ ಪ್ಲೇಟ್‌ ಅಂಡ್‌ ಪ್ಲಾಸ್ಮೋಡೆಸ್ಮೇಟಾ. ಪ್ರೋಟೋಪ್ಲಾಸ್ಮಾ 111, 121-133
  4. ‌‌ಆಂಡರ್‌ಸನ್ S, ಬ್ಯಾಂಕಿಯರ್‌‌‌ AT, ಮತ್ತು ಇತರರು (1981) ಸೀಕ್ವೆನ್ಸ್‌ ಅಂಡ್‌ ಆರ್ಗನೈಸೇಷನ್‌ ಆಫ್‌ ದಿ ಹ್ಯೂಮನ್‌ ಮೈಟೋಕಾಂಡ್ರಿಯಲ್‌ ಜೀನೋಮ್‌‌. ನೇಚರ್‌‌‌ 290, 4–65
  5. L ಕ್ಯೂಯಿ, N ವೀರರಾಘವನ್‌‌, ಮತ್ತು ಇತರರು (2006) ಕ್ಲೋರೋಪ್ಲಾಸ್ಟ್‌‌DB: ದಿ ಕ್ಲೋರೋಪ್ಲಾಸ್ಟ್‌ ಜೀನೋಮ್‌ ಡೇಟಾಬೇಸ್‌. ನ್ಯೂಕ್ಲಿಯಿಕ್‌ ಆಸಿಡ್ಸ್‌ ರಿಸರ್ಚ್‌, 34, D692-696
  6. L. ಮಾರ್ಗುಲಿಸ್‌‌ (1970) ಆರಿಜನ್‌ ಆಫ್‌ ಯೂಕ್ಯಾರಿಯೋಟಿಕ್‌ ಸೆಲ್ಸ್‌‌. ಯೇಲ್‌ ಯೂನಿವರ್ಸಿಟಿ ಪ್ರೆಸ್‌‌, ನ್ಯೂ ಹ್ಯಾವನ್‌‌
  7. ‌ಲೆವಿಸ್, LA, ಮೆಕ್‌ಕೋರ್ಟ್‌, RM (2004) ಗ್ರೀನ್‌ ಆಲ್ಗೇ ಅಂಡ್‌ ದಿ ಆರಿಜನ್‌ ಆಫ್‌ ಲ್ಯಾಂಡ್‌ ಪ್ಲಾಂಟ್ಸ್‌‌. ಅಮೆರಿಕನ್‌ ಜರ್ನಲ್‌ ಆಫ್‌ ಬಾಟನಿ 91, 1535-1556
  8. ಲೋಪೆಜ್‌-ಬೌಟಿಸ್ಟಾ, JM, ವಾಟರ್ಸ್‌‌, DA ಮತ್ತು ಚಾಪ್‌ಮನ್‌‌, RL (2003) ಫ್ರಾಗ್ಮೋಪ್ಲಾಸ್ಟಿನ್‌, ಗ್ರೀನ್‌ ಆಲ್ಗೇ ಅಂಡ್‌ ದಿ ಎವಲ್ಯೂಷನ್‌ ಆಫ್‌ ಸೈಟೋಕೈನೆಸಿಸ್‌‌. ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಸಿಸ್ಟಮ್ಯಾಟಿಕ್‌ ಅಂಡ್‌ ಎವಲ್ಯೂಷನರಿ ಮೈಕ್ರೋಬಯಾಲಜಿ 53, 1715-1718
  9. PH ರಾವೆನ್‌‌ , ಎವರ್ಟ್‌ RF, ಐಕೊರ್ಮ್‌ SE (1999) ಬಯಾಲಜಿ ಆಫ್‌ ಪ್ಲಾಂಟ್ಸ್‌‌, 6ನೇ ಆವೃತ್ತಿ. WH ಫ್ರೀಮನ್‌‌, ನ್ಯೂಯಾರ್ಕ್‌
  10. ೧೦.೦ ೧೦.೧ ೧೦.೨ EG ಕಟ್ಟರ್‌‌‌ (1977) ಪ್ಲಾಂಟ್‌ ಅನಾಟಮಿ ಪಾರ್ಟ್‌ 1. ಸೆಲ್ಸ್‌‌ ಅಂಡ್‌ ಟಿಶ್ಯೂಸ್‌. ಎಡ್ವರ್ಡ್‌ ಅರ್ನಾಲ್ಡ್‌‌, ಲಂಡನ್‌‌‌
  11. PA ರೊಯೆಲೊಫ್ಸೆನ್‌ (1959) 'ದಿ ಪ್ಲಾಂಟ್‌ ಸೆಲ್‌ ವಾಲ್‌‌.' ಹ್ಯಾಂಡ್‌ಬುಕ್‌ ಫರ್‌ ಫ್ಲಾಂಜೆನಾನಾಟೊಮಿ . ಬ್ಯಾಂಡ್‌ III. ಜೆಬ್ರೂಡರ್‌ ಬಾರ್ನ್‌ಟ್ರೇಗರ್‌, ಬರ್ಲಿನ್‌‌
  12. MT ಟೈರೀ; MH ಝಿಮ್ಮೆರ್‌ಮನ್‌‌ (2003) ಕ್ಸೈಲಮ್‌ ಸ್ಟ್ರಕ್ಚರ್‌‌ ಅಂಡ್‌ ದಿ ಅಸೆಂಟ್‌ ಆಫ್‌ ಸ್ಯಾಪ್‌‌, 2ನೇ ಆವೃತ್ತಿ, ಸ್ಪ್ರಿಂಗರ್‌-ವೆರ್ಲಾಗ್‌‌, ನ್ಯೂಯಾರ್ಕ್‌ USA
  13. ಕೊಲಾಟ್ಟುಕುಡಿ, PE (1996) ಬಯೋಸಿಂಥೆಟಿಕ್‌ ಪಾತ್‌ವೇಸ್‌ ಆಫ್‌ ಕ್ಯೂಟಿನ್‌ ಅಂಡ್‌ ವ್ಯಾಕ್ಸಸ್‌‌, ಅಂಡ್‌ ದೆರ್‌ ಸೆನ್ಸಿಟಿವಿಟಿ ಟು ಎನ್ವಿರಾನ್ಮೆಂಟಲ್‌ ಸ್ಟ್ರೆಸಸ್‌‌. ಇನ್‌: ಪ್ಲಾಂಟ್‌ ಕ್ಯೂಟಿಕಲ್ಸ್‌‌. ಸಂಪಾದಕ: G. ಕರ್ಸ್ಟೀನ್ಸ್‌‌, BIOS ಸೈಂಟಿಫಿಕ್‌ ಪಬ್ಲಿಷರ್ಸ್‌ ಲಿಮಿಟೆಡ್‌., ಆಕ್ಸ್‌ಫರ್ಡ್‌, ಪುಟಗಳು 83-108

ಬಾಹ್ಯ ಕೊಂಡಿಗಳು[ಬದಲಾಯಿಸಿ]