ವಿಷಯಕ್ಕೆ ಹೋಗು

ಎಂಡೊಪ್ಲಾಸ್ಮಿಕ್‌ ರೆಟಿಕ್ಯುಲಮ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯೂಕ್ಲಿಯಸ್‌ನ ಸುತ್ತಲಿರುವ ಎಂಡೊಪ್ಲಾಸ್ಮಿಕ್‌ ರೆಟಿಕ್ಯುಲಮ್ ಜಾಲದ ಕರಡು ಮೈಕ್ರೋಛಾಯಾಚಿತ್ರ (ಬಲ-ಕೆಳಭಾಗದಲ್ಲಿ ತೋರಿಸಿದ ಚಿತ್ರದಂತೆ). ಮೈಟೋಕಾಂಡ್ರಿಯಾವು ಜಾಲದಲ್ಲಿರುವ ದಟ್ಟವಾದ ಚಿಕ್ಕ ವೃತ್ತಗಳು.

ಎಂಡೊಪ್ಲಾಸ್ಮಿಕ್‌ ರೆಟಿಕ್ಯುಲಮ್‌ (ಇಆರ್‌ ) ನಾಳಗಳ, ಕೋಶಕಗಳ, ಹಾಗೂ ಜೀವಕೋಶಗಳೊಳಗಿನ ಸಿಸ್ಟರ್ನೆಗಳ ಅಂತರ ಸಂಪರ್ಕ ಜಾಲಕಲ್ಪಿಸುವ ಒಂದು ಯುಕ್ಯಾರ್ಯೋಟಿಕ್ ಅಂಗಕ. ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ಗಳು ಪ್ರೊಟೀನ್‌ಗಳನ್ನು ಸಂಯೋಜಿಸುತ್ತದೆ ಆದರೆ ನಯವಾದ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ಗಳು ಮೇದಸ್ಸು ಹಾಗೂ ಸ್ಟೆರೊಯಿಡ್‌ಗಳನ್ನು ಸಂಯೋಜಿಸುತ್ತದೆ, ಕಾರ್ಬೊಹೈಡ್ರೇಟ್ಸ್ ಹಾಗೂ ಸ್ಟೆರೊಯಿಡ್‌ಗಳ ಚಯಾಪಚಯ ಕ್ರಿಯೆಯನ್ನು ನಿರ್ವಹಿಸುತ್ತದೆ, ಕ್ಯಾಲ್ಶಿಯಮ್‌ನ ಒಟ್ಟುಗೂಡಿಕೆಯನ್ನು ನಿಯಂತ್ರಿಸುತ್ತದೆ, ಔಷಧದ ನಿರ್ವಿಶೀಕರಣ ಮಾಡುತ್ತದೆ ಹಾಗೂ ಜೀವಕೋಶ ಒಳಚರ್ಮದ ಪ್ರೋಟಿನ್‌ಗಳ ಮೇಲೆ ಗ್ರಾಹಿಗಳನ್ನು ಲಗತ್ತಿಸುತ್ತದೆ. ಸಾರ್ಕೊಪ್ಲಾಸ್ಮಿಕ್ ರೆಟಿಕ್ಯುಲಮ್‌ಗಳು ಒಂಟಿಯಾಗಿ ಕ್ಯಾಲ್ಶಿಯಮ್ ಮಟ್ಟವನ್ನು ನಿಯಂತ್ರಿಸುತ್ತವೆ. ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ಗಳ ಕಸೂತಿ ಒಳಚರ್ಮ(lacey membranes)ವನ್ನು ಮೊದಲ ಬಾರಿಗೆ ಕೆಥ್ ಆರ್. ಪೊರ್ಟರ್, ಆಲ್ಬರ್ಟ್ ಕ್ಲೌಡೆ ಹಾಗೂ ಅರ್ನಸ್ಟ್ ಎಫ್. ಫುಲ್ಲಂ‍ರು 1945ರಲ್ಲಿ ಕಂಡರು.[೧]

ಕರಡು ಇಆರ್‌ನಲ್ಲಿರುವ 1 ನೂಕ್ಲಿಯಸ್[2]2 ನ್ಯೂಕ್ಲಿಯರ್ ಪೊರ್ [3]3 ಕರಡು ಎಂಡೊಪ್ಲಾಸ್ಮಿಕ್‌ ರೆಟಿಕ್ಯುಲಮ್ (ಆರ್‌ಇಎಫ್)[4]4 ಮೃದುವಾದ ಎಂಡೊಪ್ಲಾಸ್ಮಿಕ್‌ ರೆಟಿಕ್ಯುಲಮ್ (ಎಸ್‌ಇಆರ್)[5]5 ರೈಬೊಸೋಮ್, [6]6 ಚಲಿಸಿರುವ ಪ್ರೋಟೀನ್[7]7 ಚಲಿಸುವ ಕೋಶಕ[8]8 ಗಾಲ್ಜಿ ಪರಿಕರ [9]9 ಗಾಲ್ಜಿ ಪರಿಕರದ ಸಿಸ್ ಫೇಸ್ [10]10 ಗಾಲ್ಜಿ ಪರಿಕರದ ಟ್ರಾನ್ಸ್ ಫೇಸ್[11]11 ಗಾಲ್ಜಿ ಪರಿಕರದ ಸಿಸ್ಟರ್ನೆ

ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌‌ನ ಸಾಮಾನ್ಯ ರಚನೆ ಸೈಟೊಸ್ಕೆಲಿಟನ್‌ಗಳಿಂದ ಒಟ್ಟುಗೂಡಿದ ಸಿಸ್ಟೆರ್ನೆಯ (ಚೀಲ-ತರಹದ ರಚನೆಗಳು) ಒಳಚರ್ಮದ ಒಂದು ವಿಶಿಷ್ಟವಾದ ಜಾಲ. ಫೊಸ್ಫೊ ಮೇದಸ್ಸು ಒಳಚರ್ಮ ಸೈಟೊಸೊಲ್ ಮೂಲಕ ಸಿಸ್ಟರ್ನಲ್ ಸ್ಥಳವನ್ನು (ಅಥವಾ ಲುಮೆನ್) ಆವರಿಸುತ್ತದೆ, ಈ ಸೈಟೊಸೊಲ್ ಜೀವಕಣಕೇಂದ್ರದ ಸುತ್ತದ ಸ್ಥಳದೊಂದಿಗೆ ಮುಂದುವರೆಯುತ್ತದೆ. ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನ ಕಾರ್ಯಾಚರಣೆಗಳು ಖಚಿತವಾದ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ ಹಾಗೂ ಅದು ವಾಸವಾಗಿರುವ ಜೀವಕೋಶದ ಬಗೆಯ ಆಧಾರದ ಮೇಲೆ ಹೆಚ್ಚಾಗಿ ಮಾರ್ಪಡಿಸುತ್ತದೆ. ಇದರ ಮೂರು ಬಗೆಗಳು ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ , ನಯವಾದ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ಹಾಗೂ ಸಾರ್ಕೊಪ್ಲಾಸ್ಮಿಕ್ ರೆಟಿಕ್ಯುಲಮ್ .

ಚಯಾಪಚಯ ಕ್ರಿಯೆಯ ಅಗತ್ಯಗಳ ಮೇಲೆ ಆಧಾರಿತವಾಗಿ ಆರ್‌ಇಆರ್‌ ಹಾಗೂ ಎಸ್‌ಇಆರ್‌ಗಳ ಪ್ರಮಾಣ ಒಂದು ಜೀವಕೋಶದಲ್ಲಿ ಕ್ಷಿಪ್ರವಾಗಿ ಬದಲಾಗಬಹುದು: ಒಂದು ಬಗೆಯಲ್ಲಿ ರೂಪಾಂತರವಾಗಲು ಒಳಚರ್ಮದಲ್ಲಿ ಹೊಸ ಪ್ರೊಟೀನ್‌ಗಳು ಆವರಿತವಾಗುವುದನ್ನು ಸೇರಿ ಹಲವು ಬದಲಾವಣೆಗಳು ಆಗಬಹುದು. ಅದಲ್ಲದೆ ಜೀವಕೋಶಗಳ ಕಿಣ್ವದ ಅಗತ್ಯಗಳ ಆಧಾರದ ಮೇಲೆ ರಚನಾತ್ಮಕತೆಯಲ್ಲಿ ಯಾವುದೇ ಗಣನೀಯ ಬದಲಾವಣೆಗಳಾಗದೆ ಪ್ರೊಟೀನ ಒಳಅಂಶದಲ್ಲಿ ಅಧಿಕ ಪ್ರಮಾಣದ ಬದಲಾವಣೆಗಳಾಗಬಹುದು (ಕೆಳಗೆ ನೀಡಿರುವ ಕಾರ್ಯಾಚರಣೆಗಳ ಅನುಸಾರ).

ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್

[ಬದಲಾಯಿಸಿ]
ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನ (ಆರ್‌ಇಆರ್‌) ಹೊರ ಪದರ ಪ್ರೊಟೀನ್-ಉತ್ಪಾದಿಸುವ ರೈಬೊಸೊಮ್‌ಗಳಿಂದ ಲಗತ್ತಾಗಿ ಅದಕ್ಕೆ ಒಂದು "ಒರಟು" ಚಹರೆ ನೀಡುತ್ತದೆ (ಇದೇ ಅದರ ಹೆಸರಾಯಿತು).[೨] ಹೇಗಿದ್ದರೂ, ಯಾವುದೇ ಒಂದು ಸಮಯದಲ್ಲಿ ಆರ್‌ಇಆರ್‌ಗೆ ಲಗತ್ತಾದ ರೈಬೊಸೊಮ್‌ಗಳು ಅಂಗಕದ ರಚನೆಯಲ್ಲಿ ಸ್ಥಿರ ಅಂಶವಾಗಿರುವುದಿಲ್ಲ, ಕಾರಣ ರೈಬೊಸೊಮ್‌ಗಳು ನಿರಂತರವಾಗಿ ಒಳಚರ್ಮಕ್ಕೆ ಲಗತ್ತಾಗುತ್ತವೆ ಹಾಗೂ ಬಿಡುಗಡೆಯಾಗುತ್ತವೆ. ಒಂದು ಸಲ ರೈಬೊಸೊಮ್‌ ಪ್ರೊಟೀನ್‌‌ನನ್ನು ಅದರ ಲಕ್ಷ್ಯವಾದ ಸ್ರವಿಸುವ ಪಥಕ್ಕೆ ಸಂಯೋಜಿಸಲು ಆರಂಭಿಸಿದ ನಂತರವೇ ಅದು ಇಆರ್‌ ಗೆ ಲಗತ್ತಾಗುತ್ತದೆ.[೩]  ಇಲ್ಲಿ, ಒಂದು ಸಂಕೇತ ಗುರುತಿಸುವ ಕಣ ಧನಾತ್ಮಕ ವಿದ್ಯುತ್ ಪೂರಣದ ಒಂದು ಅಮೈನೊ ಆ‍ಯ್‌ಸಿಡ್‌‌‌ಯಿಂದ ಅನುಸರಿತ 5-15 ಜಲಭೀತಿಯ ಅಮೈನೊ ಆ‍ಯ್‌ಸಿಡ್‌‌‌ಗಳ ಮುಂಚಿನ-ತುಣುಕುಗಳನ್ನು ಗುರುತಿಸುವವರೆಗೆ ಸೈಟೊಸೊಲ್‌ ಒಂದು ರೈಬೊಸೊಮ್‌ ಪ್ರೊಟೀನ್ ಅನ್ನು ಸಂಯೋಜಿಸಲು ಆರಂಭಿಸುತ್ತದೆ. ಈ ಸಂಕೇತದ ಕ್ರಮಾನುಗತಿಯು ಗುರುತಿಸುವ ಕಣವನ್ನು ರೈಬೊಸೊಮ್‌ಗೆ ಲಗತ್ತಿಸಲು ಅವಕಾಶ ಮಾಡಿಕೊಡುತ್ತದೆ, ಹೀಗೆ ಅದು ರೈಬೊಸೊಮ್‌ ಅನ್ನು ಆರ್‌ಇಆರ್‌ಗೆ ಲಗತ್ತಾಗಲು ಕಾರಣವಾಗುತ್ತದೆ ಹಾಗೂ ಹೊಸ ಪ್ರೊಟೀನ್ ಅನ್ನು ಇಆರ್‌ ಒಳಚರ್ಮದ ಮೂಲಕ ಸಾಗಿಸುತ್ತದೆ. ನಂತರ ಮುಂಚಿನ-ತುಣುಕು ಇಆರ್‌ನ ಗೂಡಿನೊಳಗೆ ಬೇರೆಯಾಗುತ್ತದೆ ಹಾಗೂ ರೈಬೊಸೊಮ್‌ ಸೈಟೊಸೊಲ್‌ಗೆ ಹಿಂದಿರುಗುತ್ತದೆ.

ಆರ್‌ಇಆರ್‌ನ ಒಳಚರ್ಮ ಬೈಜಿಕ ಹೊದಿಕೆಯ ಹೊರ ಪದರದೊಂದಿಗೆ ಮುಂದುವರೆಯುತ್ತದೆ. ಆರ್‌ಇಆರ್‌ ಹಾಗೂ ಗಾಲ್ಜಿ ಪರಿಕರದ ಮಧ್ಯ ಯಾವದೇ ಒಳಚರ್ಮವಿಲ್ಲದಿದ್ದರೂ, ಒಳಚರ್ಮಕ್ಕೆ ಲಗತ್ತಾದ ಕೋಶಕಗಳು ಪ್ರೊಟೀನ್ ಅನ್ನು ಈ ಎರಡು ವಿಭಾಗಗಳ ಮಧ್ಯೆ ನಿಯತಕಾಲದಲ್ಲಿ ಸಂಚರಿಸುತ್ತವೆ.[೪] COPI ಹಾಗೂ COPII ಎಂಬ ಕವಚದ ಪ್ರೊಟೀನ್‌ಗಳಿಂದ ಕೋಶಕಗಳು ಸುತ್ತುವರೆದಿವೆ. COPII ಕೋಶಕಗಳನ್ನು ಗಾಲ್ಜಿಗೆ ಗುರಿಯಾಗಿಸುತ್ತವೆ ಹಾಗೂ COPI ಅವುಗಳನ್ನು ಆರ್‌ಇಆರ್‌ಗೆ ಮರುತರಿಸಲು ಗುರುತಿಸುವುದು. ಹೊಸ ಪ್ರೊಟೀನ್‌ಗಳನ್ನು ಅವುಗಳ ಸರಿಯಾದ ಲಕ್ಷ್ಯಕ್ಕೆ ಗುರಿಯಾಗಿಸಲು ಆರ್‌ಇಆರ್‌ ಗಾಲ್ಜಿ ಸಂಕೀರ್ಣದೊಂದಿಗೆ ಹೊಂದಿಕೆಯಾಗಿ ಕಾರ್ಯಾಚರಣೆಯನ್ನು ನಡೆಸುತ್ತದೆ. ಇಆರ್‌ನಿಂದ ಹೊರಗಿನ ಸಾಗಣಿಕೆಯ ಎರಡನೆಯ ಕ್ರಮದ ಪ್ರದೇಶವನ್ನು ಒಳಚರ್ಮ ತಗಲುವ ನೆಲೆಗಳು ಎಂದು ಕರೆಯುತ್ತಾರೆ, ಇಲ್ಲಿ ಇಆರ್‌ ನ ಒಳಚರ್ಮಗಳು ಹಾಗೂ ಇತರ ಅಂಗಕಗಳು ನಿಕಟ ರೂಪದಲ್ಲಿ ಒಟ್ಟಾಗಿ ತಗಲಿವೆ, ಹೀಗೆ ಮೇದಸ್ಸು ಹಾಗೂ ಇತರ ಸಣ್ಣ ಕಣಗಳ ಸಾಗಾಣಿಕೆಯನ್ನು ಅನುಮತಿಸಲಾಗುತ್ತದೆ.[೫][೬] ಆರ್‌ಇಆರ್‌ ವಿವಿಧ ಕಾರ್ಯಾಚರಣೆಗಳಲ್ಲಿ ಪ್ರಮುಖವಾಗಿದೆ:

 • ಮ್ಯಾನೊಸ್-6-ಫಾಸ್ಫೇಟ್ ಮಾರ್ಕರ್‌ನೊಂದಿಗೆ ಲೈಸೊಸೊಮಲ್ ಕಿಣ್ವಗಳನ್ನು ಸಿಸ್ -ಗಾಲ್ಜಿ ಜೊತೆಗೆ ಸೆರಿಸಲಾಗುತ್ತದೆ.
 • ಸ್ರವಿಸುವ ಪ್ರೊಟೀನ್‌ಗಳು, ಯಾವುದೇ ಬಿಲ್ಲೆ ಇಲ್ಲದೆ ಸ್ಥಾಪಿತವಾಗಿ ಸ್ರವಿಸುವ ಅಥವಾ ಕ್ಲಾಥರಿನ್ ಹಾಗೂ ಸಂಕೇತ ಪೆಪ್ಟೈಡ್‌ನ ಜೋಡಿಯ ಮೂಲದ ಅಮೈನೊ ಆ‍ಯ್‌ಸಿಡ್‌‌‌ಗಳನ್ನು ಒಳಗೊಂಡ ನಿಯಂತ್ರಿತ ಸ್ರವಿಸುವಿಕೆ ಆಗುತ್ತದೆ.
 • ಕೋಶಕಗಳು ಹೊರಬಂದು ಹೊಸ ಒಳಚರ್ಮಗಳಿಗೆ ಲಗತ್ತಾದ ಕಾರಣ ಸಮಗ್ರ ಒಳಚರ್ಮದ ಪ್ರೊಟೀನ್‌ಗಳು ಒಳಚರ್ಮದಲ್ಲಿ ಆವರಿತವಾಗಿ ಉಳಿಯುತ್ತದೆ. ಒಳಚರ್ಮದ ಮೇಲೆ ಆಕ್ರಮಣ ಮಾಡುವುದರಲ್ಲಿ ರ್ಯಬ್ ಪ್ರೊಟೀನ್‌ಗಳು ಪ್ರಮುಖವಾಗಿರುತ್ತದೆ, ಎಸ್‌ಎನ್‌ಎಪಿ ಹಾಗೂ ಎಸ್‌ಎಆರ್‌ಇ ಪ್ರೊಟೀನ್‌ಗಳು ಈ ಒಗ್ಗೂಡುವಿಕೆಯ ಚಟುವಟಿಕೆಯಲ್ಲಿ ಪ್ರಮುಖವಾಗಿರುತ್ತದೆ.
 • ಒಗ್ಗೂಡುವಿಕೆ ಮುಂದುವರೆಯುತ್ತಿದ್ದಂತೆ ಪ್ರಾರಂಭದ ಗ್ಲೈಕೊಸೈಲೇಶನ್ ಉಂಟಾಗುತ್ತದೆ. ಇವುಗಳಲ್ಲಿ ಪ್ರತಿಯೊಂದೂ N-linked ಆಗಿರುತ್ತದೆ (O-linking ಗಾಲ್ಜಿಯಲ್ಲಿ ಇರುತ್ತದೆ).
  • N-linked ಗ್ಲೈಕೊಸೈಲೇಷನ್: ಪ್ರೋಟೀನ್ ಸರಿಯಾಗಿ ಮಡಿಚಿಕೊಂಡಿದ್ದರೆ, ಗ್ಲೈಕೊಸೈಲ್ಟ್ರಾನ್ಸ್‌ಫೆರೇಸ್ AA ಅನುಕ್ರಮಣಿಕೆಯನ್ನು NXS ಅಥವಾ NXT ಗುರುತಿಸುತ್ತದೆ,(S/Tಯೊಂದಿಗೆ ಉಳಿದದ್ದು ಫೊಸ್‌ಫೊರೈಲೇಟೆಡ್) ಮತ್ತು 14 ಶುಗರ್ ಬ್ಯಾಕ್‌ಬೋನ್‌ನನ್ನು (2 N -ಅಸಿಟೈಲ್‌ಗ್ಲುಕೊಸಮೈನ್ , 9 ಬ್ರಾಂಚಿಂಗ್ ಮನ್ನೊಸ್,ಮತ್ತು ಕೊನೆಯ 3 ಗ್ಲುಕೋಸ್) Asnನ ಬದಿಯ ಸರಪಣಿಯಾದ ನೈಟ್ರೋಜನ್‌ಗೆ ಸೇರಿಸುತ್ತದೆ.

ನಯವಾದ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್

[ಬದಲಾಯಿಸಿ]

ಹಲವು ಚಯಾಪಚಯ ಕ್ರಿಯೆಗಳಲ್ಲಿ ನಯವಾದ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನ (ಎಸ್‌ಇಆರ್‌) ಕಾರ್ಯವಿದೆ, ಅದರಲ್ಲಿ ಮೇದಸ್ಸು ಹಾಗೂ ಸ್ಟೆರೋಯಿಡ್‌ಗಳ ಸಂಯೋಜನೆ, ಕಾರ್ಬೊಹೈಡ್ರೇಟ್‌ಗಳ ಚಯಾಪಚಯ ಕ್ರಿಯೆ, ಕ್ಯಾಲ್ಶಿಯಂ ದಟ್ಟತೆಯನ್ನು ನಿಯಂತ್ರಿಸುವುದು, ಮದ್ದು ನಿರ್ವಿಶೀಕರಣ, ಜೀವಕೋಶ ಒಳಚರ್ಮದ ಪ್ರೊಟೀನ್‌ಗಳ ಮೇಲೆ ಗ್ರಾಹಿಗಳ ಲಗತ್ತಿಸುವಿಕೆ, ಹಾಗೂ ಸ್ಟೆರೋಯಿಡ್ ಚಯಾಪಚಯ ಕ್ರಿಯೆಯನ್ನೊಳಗೊಂಡಿವೆ.[೭] ಅದು ಅಣುವಿನ ಆವೃತಕ್ಕೆ ಕೂಡಿದೆ. ನಯವಾದ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ಹಲವು ವಿಧಗಳ ಜೀವಕೋಶಗಳಲ್ಲಿ ಕಂಡುಬರುತ್ತವೆ (ಪ್ರಾಣಿ ಹಾಗೂ ಗಿಡಗಳೆರಡರಲ್ಲೂ) ಮತ್ತು ಪ್ರತಿಯೊಂದರಲ್ಲೂ ವಿವಿಧ ಕಾರ್ಯಚರಣೆಗಳನ್ನು ನೀಡುತ್ತದೆ. ನಯವಾದ ಇಆರ್‌ ಗ್ಲುಕೋಸ್-6-ಫಾಸ್ಪೇಟ್ ಅನ್ನು ಗ್ಲುಕೋಸ್‌ಗೆ ಬದಲಾಯಿಸುವ ಗ್ಲುಕೋಸ್-6-ಫಾಸ್ಫುಟೇಸ್ ಕಿಣ್ವವನ್ನು ಕೂಡ ಹೊಂದಿರುತ್ತದೆ, ಇದು ಗ್ಲುಕೊನಿಯೋಜೆನೆಸಿಸ್‌ನ ಒಂದು ಘಟಕ. ಒಂದು ಜಾಲದ ಶಾಖೆಗಳನ್ನು ನಿರ್ಮಿಸುವ ನಾಳ ಹಾಗೂ ಕೋಶಕಗಳನ್ನು ಎಸ್‌ಇಆರ್‌ ಹೊಂದಿರುತ್ತದೆ. ಕೆಲವು ಜೀವಕೋಶಗಳಲ್ಲಿ ಆರ್‌ಇಆರ್‌ನ ಚೀಲಗಳಂತಹ ಹಿಗ್ಗಿದ ಜಾಗಗಳಿರುತ್ತವೆ. ಎಸ್‌ಇಆರ್‌ನ ಜಾಲವು ಕ್ರಿಯೆಗಳಿಗೆ ಹೆಚ್ಚಿದ ಸಮತಲದ ಜಾಗವನ್ನು ಅಥವಾ ಪ್ರಮುಖ ಕಿಣ್ವಗಳ ಹಾಗೂ ಈ ಕಿಣ್ವಗಳ ಉತ್ಪಾದನೆಗಳ ಸಂಗ್ರಹವನ್ನು ಅನುಮತಿಸುತ್ತದೆ.

ಸಾರ್ಕೊಪ್ಲಾಸ್ಮಿಕ್ ರೆಟಿಕ್ಯುಲಮ್

[ಬದಲಾಯಿಸಿ]

ಸಾರ್ಕೊಪ್ಲಾಸ್ಮಿಕ್ ರೆಟಿಕ್ಯುಲಮ್ (ಎಸ್‌ಆರ್‌ ), ಗ್ರೀಕ್‌ನ ಸಾರ್ಕ್ಸ್ ("ಮಾಂಸ") ಎಂಬ ಪದದಿಂದ ದೊರಕಿದೆ, ಇದು ನಯವಾದ ಹಾಗೂ ಕಿರಿದಾದ ಸ್ನಾಯುಗಳಲ್ಲಿ ಕಂಡು ಬರುವ ಒಂದು ವಿಶೇಷ ತರಹದ ನಯವಾದ ಇಆರ್‌. ಈ ಅಂಗಕ ಹಾಗೂ ಎಸ್‌ಇಆರ್‌ನ ನಡುವೆ ಇರುವ ಏಕ ಮಾತ್ರ ವ್ಯತ್ಯಾಸವೆಂದರೆ ಅವು ಹೊಂದಿರುವ ಪ್ರೊಟೀನ್‌ಗಳ ಮಿಶ್ರ, ಎರಡು ಕೂಡ ತನ್ನ ಒಳಚರ್ಮಗಳಿಗೆ ಲಗತ್ತಿವೆ ಹಾಗೂ ತಮ್ಮ ಗೂಡುಗಳ ಸೀಮಿತತೆಯಲ್ಲಿ ತೇಲುತ್ತವೆ. ಈ ಪ್ರಾಥಮಿಕ ವ್ಯತ್ಯಾಸ ಅವುಗಳ ಕಾರ್ಯಾಚರಣೆಗಳನ್ನು ಸೂಚಿಸುತ್ತವೆ: ಎಸ್‌ಇಆರ್‌ ಕಣಗಳನ್ನು ಸಂಯೋಜಿಸುತ್ತದೆ ಹಾಗೂ ಎಸ್‌ಆರ್‌ ಕ್ಯಾಲ್ಶಿಯಂ ಅಯಾನಗಳನ್ನು ಸಂಗ್ರಹಿಸಿ ಪಂಪ್‌ ಮಾಡುತ್ತದೆ. ಎಸ್‌ಆರ್‌ ಕ್ಯಾಲ್ಶಿಯಂನ ದೊಡ್ಡ ಸಂಗ್ರಹಣಗಳನ್ನು ಹೊಂದಿರುತ್ತದೆ, ಇವು ಪ್ರತ್ಯೇಕವಾಗಿರಿತ್ತವೆ ಹಾಗೂ ಮಾಂಸ ಜೀವಕೊಶ ಉತ್ತೇಜಿತವಾದಾಗ ಬಿಡುಗಡೆಯಾಗುತ್ತದೆ.[೮] ಜೀವಕೋಶದ ವಿದ್ಯುತ್ ಉತ್ತೇಜನದಿಂದ ಎಸ್‌ಆರ್‌ ನ ಕ್ಯಾಲ್ಶಿಯಂ ಬಿಡುಗಡೆ ಪ್ರಚೋದಕ-ಸಂಕೋಚನ ಜೋಡಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಾರ್ಯಚಟುವಟಿಕೆಗಳು

[ಬದಲಾಯಿಸಿ]

ಪ್ರೊಟೀನ್ ಮಡಿಚುಗಳ ಸೌಕರ್ಯತೆಗಳು ಹಾಗೂ ಸಿಸ್ಟರಿನ್ ಎಂದು ಕರೆಯಲಾದ ಚೀಲಗಳಲ್ಲಿ ಸಂಯೋಜಿಸಿದ ಪ್ರೊಟೀನ್‌ಗಳ ಸಾಗಣಿಕೆಯನ್ನು ಒಳಗೊಂಡಂತಹ ಹಲವು ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ವಹಿಸುತ್ತದೆ. ಹಲವು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ಚಾಪರೊನ್ ಪ್ರೊಟೀನ್‌ಗಳಿಂದ ಹೊಸದಾಗಿ-ತಯಾರಿಸಿದ ಪ್ರೊಟೀನ್‌ಗಳ ಸರಿಯಾದ ಮಡಿಚುವಿಕೆ ಸಾಧ್ಯವಾಗುತ್ತದೆ. ಈ ಚಾಪರೊನ್ ಪ್ರೊಟೀನ್‌ಗಳಲ್ಲಿ ಪ್ರೊಟೀನ್ ಡೈಸೊಫೈಡ್ ಐಸೊಮರೆಸ್ (PDI), ಇಆರ್‌ p29, Hsp70 ಪ್ರಜಾತಿ ಸದಸ್ಯ Grp78, ಕ್ಯಾಲ್ನೆಕ್ಸಿನ್, ಕ್ಯಾಲ್‌ರೆಟಿಕ್ಯುಲಿನ್, ಹಾಗೂ ಪೆಪ್ಟಿಡೈಪ್ರೊಪೈಲ್ ಐಸೊಮರೆಸ್ ಪ್ರಜಾತಿ ಒಳಗೊಂಡಿವೆ.

 ಸರಿಯಾಗಿ-ಮಡಿಚಲಾದ ಪ್ರೊಟೀನ್‌ಗಳನ್ನು ಮಾತ್ರ ಒರಟು ಇಆರ್‌ನಿಂದ ಗಾಲ್ಜಿ ಸಂಕೀರ್ಣಕ್ಕೆ ಸಾಗಣಿಕೆ ಮಾಡಲಾಗುವುದು.

ಪೊಟೀನ್‌ಗಳ ಸಾಗಣಿಕೆ

[ಬದಲಾಯಿಸಿ]

ಸ್ರವಿಸುವ ಪ್ರೊಟೀನ್‌ಗಳು, ಹೆಚ್ಚಾಗಿ ಗ್ಲೈಕೊಪ್ರೊಟೀನ್‌ಗಳನ್ನು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನ ಒಳಚರ್ಮದ ಆಚೆಗೆ ಸಾಗಿಸಲಾಗುವುದು.

ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನಿಂದ ಸಾಗಾಣಿಕೆಯಾದ ಪ್ರೊಟೀನ್‌ಗಳು ಹಾಗೂ ಅಲ್ಲಿಂದ ಜೀವಕೋಶಕದಾದ್ಯಂತ ಸಾಗುವ ಪ್ರೊಟೀನ್‌ಗಳನ್ನು ಸಂಕೇತ ಅನುಕ್ರಮ ಎಂದು ಕರೆಯಲಾದ ಒಂದು ವಿಳಾಸ ಬಿಲ್ಲೆನೊಂದಿಗೆ ಗುರುತಿಸಲಾಗಿರುತ್ತದೆ. ಪೊಲಿಪೆಪ್ಟೈಡ್ ಸರಣಿಯ (ಅಂದರೆ, ಒಂದು ಪ್ರೊಟೀನ್) N-ಟರ್ಮಿನಸ್ (ಒಂದು ತುದಿ) ವಿಳಾಸ ಬಿಲ್ಲೆಯಂತೆ ಕಾರ್ಯ ವಹಿಸುವ ಕೆಲವು ಅಮೈನೊ ಆ‍ಯ್‌ಸಿಡ್‌‌‌ಗಳನ್ನು ಹೊಂದಿರುತ್ತದೆ, ಪೊಲಿಪೆಪ್ಟೈಡ್ ತನ್ನ ಗುರಿಯನ್ನು ತಲುಪಿದ ನಂತರ ಈ ವಿಳಾಸದ ಬಿಲ್ಲೆಗಳನ್ನು ತೆಗೆಯಲ್ಪಡುತ್ತದೆ. ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನ ಹೊರಗಿನ ಸ್ಥಳಕ್ಕೆ ಗುರಿಯಾಗಿದ ಪ್ರೊಟಿನ್‌ಗಳನ್ನು ಸಾಗಣಿಕೆ ಕೋಶಕಗಳಲ್ಲಿ ಕಟ್ಟಲಾಗುವುದು ಹಾಗೂ ಸೈಟೊಸ್ಕೆಲಿಟನ್‌ನತ್ತ ಸಾಗಿಸುತ್ತಾ ತಮ್ಮ ತಲುಪಬೇಕಾದ ಸ್ಥಾನಕ್ಕೆ ಕಳುಹಿಸುತ್ತದೆ.

ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ಮಾರ್ಗ ವರ್ಗೀಕರಿಸುವ ಪ್ರೊಟೀನ್‌ನ ಒಂದು ಭಾಗ. ಇದು ಅಸ್ತಿತ್ವದಲ್ಲಿ, ಯುಕ್ಯಾರ್ಯೋಟಿಕ್ ಜೀವಕೊಶಗಳ ಸಾಗಣಿಕೆ ಕ್ರಮ. ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ‌ನಲ್ಲಿರುವ ಹೆಚ್ಚಿನ ಪ್ರೊಟೀನ್‌ಗಳನ್ನು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನಲ್ಲಿಯೆ ಉಳಿಸಿಕೊಳ್ಳುವ ಉದ್ದೇಶವಿದೆ. ಈ ಉದ್ದೇಶದಿಂದ ಪ್ರೊಟಿನ್ ಅನುಕ್ರಮದ ಕೊನೆಯಲ್ಲಿ ನಾಲ್ಕು ಅಮೈನೊ ಆ‍ಯ್‌ಸಿಡ್‌ಗಳಿಂದ ಮಾಡಲ್ಪಟ್ಟಿದೆ. ಅತಿ ಸಾಮಾನ್ಯ ಸ್ವಾಧೀನ ಅನುಕ್ರಮಣವೆಂದರೆ ಕೆಡಿಇಎಲ್‌ (lys-asp-glu-leu ). ಹಾಗಿದ್ದರೂ, ಕೆಡಿಇಎಲ್‌ನಲ್ಲಿ ವ್ಯತ್ಯಾಸಗಳು ಉಂಟಾಗುತ್ತದೆ ಮತ್ತು ಇತರ ಅನುಕ್ರಮಗಳು ಕೂಡ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನ್ನು ಉಳಿಸಿಕೊಳ್ಳಲು ಆರಂಭಿಸಬಹುದು. ಈ ತರಹದ ವ್ಯತ್ಯಾಸಗಳು ಉಪ-ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನ ಸ್ಥಳಗಳಿಗೆ ದಾರಿಯಾಗುತ್ತವೆ ಎಂಬುದು ಇನ್ನು ತಿಳಿದಿಲ್ಲ. ಸಸ್ತನಿಗಳ ಜೀವಕೊಶಗಳಲ್ಲಿ ಮೂರು ಕೆಡಿಇಎಲ್‌ ಗ್ರಾಹಿಗಳಿರುತ್ತವೆ ಹಾಗೂ ಅವುಗಳಲ್ಲಿ ಅನುಕ್ರಮಣದ ಗುರುತಿಸುವಿಕೆಯು ಅತಿ ಹೆಚ್ಚಿನ ಮಟ್ಟದಲ್ಲಿ ಇದೆ. ಈ ಗ್ರಾಹಿಗಳ ಮಧ್ಯೆ ಇರುವ ಕಾರ್ಯಚಟುವಟಿಕೆಯ ವ್ಯತ್ಯಾಸಗಳು ಇನ್ನು ಸ್ಥಾಪಿತವಾಗಬೇಕಾಗಿದೆ.

ಇತರ ಕ್ರಿಯೆಗಳು

[ಬದಲಾಯಿಸಿ]
 • ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್‌ನ ಒಳಚರ್ಮದ ಒಳಗೆ ಪ್ರೊಟೀನ್‌ಗಳ ಸೇರಿಸುವಿಕೆ: ಸಂಯೊಜಿತವಾಗುತ್ತಿರುವ ಹಾಗೆ ಸಮಗ್ರಕತಾವಶ್ಯಕ ಒಳಚರ್ಮದ ಪ್ರೊಟೀನ್‌ಗಳನ್ನು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ಒಳಚರ್ಮದಲ್ಲಿ ಸೇರಿಸಲಾಗುತ್ತದೆ (ಕೊ-ಟ್ರಾನ್ಸ್‌ಲೇಷನ್ ಟ್ರಾನ್ಸ್‌ಲೊಕೆಷನ್). ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ಒಳಚರ್ಮದ ಸೇರಿಸುವುದಕ್ಕೆ ಪ್ರೊಟೀನ್‌ನಲ್ಲಿ ಸರಿಯಾದ ಟೊಪೊಜೆನಿಕ್ ಸಂಕೇತ ಅನುಕ್ರಮಗಳ ಅಗತ್ಯವಿದೆ.
 • ಗ್ಲೈಕೊಸೈಲೇಷನ್' : ಓಲಿಗೊಸ್ಯಾಕರೈಡ್‌ಗಳ ಲಗತ್ತಿಸುವಿಕೆ ಗ್ಲೈಕೊಸೈಲೇಷನ್‌ನಲ್ಲಿ ಒಳಗೊಂಡಿದೆ.
 • ಡೈಸ್‌ಲ್ಫೈಡ್ ಸಂಕೋಲೆಯ ಸ್ಥಾಪನೆ ಹಾಗೂ ಮರುವ್ಯವಸ್ಥೆ : ಹಲವು ಪ್ರೊಟೀನ್‌ಗಳ ಮೂರನೇಯ ಹಾಗೂ ನಾಲ್ಕನೆಯ ರಚನೆಯನ್ನು ಡೈಸೊಫೈಡ್ ಸಂಕೊಲೆಗಳು ಸ್ಥರವಾಗಿಸುತ್ತದೆ.
 • ಮದ್ದಿನ ಚಯಾಪಚಯ : ಸೈಟೊಕ್ರೊಮ್ P450 ಕಿಣ್ವಗಳನ್ನು ಒಳಗೊಂಡ ಮೈಕ್ರೊಸೊಮ್‌ಲ್ ಕಿಣ್ವಗಳಿಂದ ಕೆಲವು ಮದ್ದುಗಳು ನಯವಾದ ಇಆರ್‌ನಲ್ಲಿ ಬದಲಾಗುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
 • ಇಆರ್‌ಎಡ್
 • ಪ್ರೊಟೀನ್ ಗುರುತಿಸುವಿಕೆ
 • ಸ್ರವಿಸುವ ಪಥ
 • ರೆಟಿಕ್ಯುಲಾನ್ಸ್

ಉಲ್ಲೇಖಗಳು

[ಬದಲಾಯಿಸಿ]
 1. Porter KR, Claude A, Fullam EF (1945). "A study of tissue culture cells by electron microscopy". J Exp Med. 81 (3): 233–246. doi:10.1084/jem.81.3.233. PMC 2135493. PMID 19871454. {{cite journal}}: Unknown parameter |month= ignored (help)CS1 maint: multiple names: authors list (link)
 2. ಕ್ಯಾಂಪ್‌ಬೆಲ್, ನಿಯೋಲ್ ಎ. (1996) ಜೀವಶಾಸ್ತ್ರ ನಾಲ್ಕನೇ ಆವೃತ್ತಿ. ಬೆಂಜಮಿನ್/ಕುಮಿಂಗ್ಸ್ ಪಬ್ಲಿಶಿಂಗ್, pp. 120-121 ಐಎಸ್‌ಬಿಎನ್ 0-8053-1940-9
 3. ಲಾಡಿಶ್, ಹಾರ್ವಿ, et al. (2003) ಮಾಲಿಕ್ಯುಲಾರ್ ಸೆಲ್ ಬಯಾಲಜಿ 5ನೇ ಆವೃತ್ತಿ . ಡಬ್ಲು. ಹೆಚ್. ಫ್ರೀಮನ್, pp. 659-666 ಐಎಸ್‌ಬಿಎನ್ 0716743663
 4. ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್. (n.d.). ಮ್ಯಾಕ್‌ಗ್ರಾ-ಹಿಲ್ ಎನ್ಸೈಕ್ಲೋಪೀಡಿಯಾ ಆಫ್ ಸೈನ್ಸ್ ಆ‍ಯ್‌೦ಡ್ ಟೆಕ್ನಾಲಜಿ . ಸೆಪ್ಟೆಂಬರ್ 13, 2006ರಂದು ಆನ್ಸರ್ಸ್.ಕಾಮ್‌ನ ವೆಬ್‌ಸೈಟ್‌ನಿಂದ ಮರು ಸಂಪಾದಿಸಲಾಗಿದೆ: http://www.answer[ಶಾಶ್ವತವಾಗಿ ಮಡಿದ ಕೊಂಡಿ] s.com/topic/endoplasmic-reticulum
 5. Levine T (2004). "Short-range intracellular trafficking of small molecules across endoplasmic reticulum junctions". Trends Cell Biol. 14 (9): 483–90. doi:10.1016/j.tcb.2004.07.017. PMID 15350976. {{cite journal}}: Unknown parameter |month= ignored (help)
 6. Levine T, Loewen C (2006). "Inter-organelle membrane contact sites: through a glass, darkly". Curr. Opin. Cell Biol. 18 (4): 371–8. doi:10.1016/j.ceb.2006.06.011. PMID 16806880. {{cite journal}}: Unknown parameter |month= ignored (help)
 7. Maxfield FR, Wüstner D (2002). "Intracellular cholesterol transport". J. Clin. Invest. 110 (7): 891–8. doi:10.1172/JCI16500. PMC 151159. PMID 12370264. {{cite journal}}: Unknown parameter |month= ignored (help)
 8. Toyoshima C, Nakasako M, Nomura H, Ogawa H (2000). "Crystal structure of the calcium pump of sarcoplasmic reticulum at 2.6 A resolution". Nature. 405 (6787): 647–55. doi:10.1038/35015017. PMID 10864315.{{cite journal}}: CS1 maint: multiple names: authors list (link)

ಬಾಹ್ಯ ಕೊಂಡಿಗಳು

[ಬದಲಾಯಿಸಿ]