ಸಫಿಯ್ಯುರ್‍ರಹ್ಮಾನ್ ಮುಬಾರಕ್‌ಪುರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಫಿಯ್ಯುರ್‍ರಹ್ಮಾನ್ ಮುಬಾರಕ್‌ಪುರಿ
ಚಿತ್ರ:Shofiur rahman mobarakpuri.jpg
ವೈಯಕ್ತಿಕ
ಜನನ(೧೯೪೩-೦೬-೦೬)೬ ಜೂನ್ ೧೯೪೩
ಹುಸೇನಾಬಾದ್, ಮುಬಾರಕ್‌ಪುರ, ಆಝಂಘಡ ಜಿಲ್ಲೆ, ಉತ್ತರಪ್ರದೇಶ
ಮರಣ1 December 2006(2006-12-01) (aged 64)
ಧರ್ಮಇಸ್ಲಾಂ ಧರ್ಮ
ರಾಷ್ಟ್ರೀಯತೆಭಾರತೀಯ
ನ್ಯಾಯಶಾಸ್ತ್ರಸುನ್ನಿ
ಗಮನಾರ್ಹ ಕೆಲಸಗಳುಅರ್‍ರಹೀಕುಲ್ ಮಖ್ತೂಮ್
Educationದಾರುತ್ತಅಲೀಮ್ ಮದ್ರಸ (1948)
ಇಹ್ಯಾಉಲ್ ಉಲೂಮ್ ಮದ್ರಸ (1954)
ಫೈಝೆ ಆಮ್ ವಿದ್ಯಾಲಯ (1956)
ಉದ್ಯೋಗ
  • ಲೇಖಕ
  • ಶಿಕ್ಷಕ

ಸಫಿಯ್ಯುರ್‍ರಹ್ಮಾನ್ ಮುಬಾರಕ್‌ಪುರಿ (6 ಜೂನ್ 1943 – 1 ಡಿಸೆಂಬರ್ 2006) — ಭಾರತೀಯ ಇಸ್ಲಾಮೀ ವಿದ್ವಾಂಸ, ಶಿಕ್ಷಕ ಮತ್ತು ಲೇಖಕ. ಅರ್‍ರಹೀಕುಲ್ ಮಖ್ತೂಮ್ ಎಂಬ ಜಗದ್ರಸಿದ್ಧ ಪ್ರವಾದಿಚರಿತ್ರೆಯ ಲೇಖಕ.

ಜನನ:[ಬದಲಾಯಿಸಿ]

1943, ಜೂನ್ 6ರಂದು ಸಫಿಯ್ಯುರ್‍ರಹ್ಮಾನ್ ಉತ್ತರ ಪ್ರದೇಶದ ಆಝಂಘಡ ಜಿಲ್ಲೆಯ ಮುಬಾರಕ್ ಪುರದ ಹುಸೇನಾಬಾದ್‌ ಎಂಬ ಹಳ್ಳಿಯಲ್ಲಿ ಹುಟ್ಟಿದರು.

ಶಿಕ್ಷಣ:[ಬದಲಾಯಿಸಿ]

ಸಫಿಯ್ಯುರ್‍ರಹ್ಮಾನ್ ಬಾಲ್ಯದಲ್ಲಿ ತಾತ ಮತ್ತು ಚಿಕ್ಕಪ್ಪರಿಂದ ಕುರ್‌ಆನ್ ಕಲಿತರು. ನಂತರ 1948ರಲ್ಲಿ ಮುಬಾರಕ್ ಪುರದ ದಾರುತ್ತಅಲೀಮ್ ಮದ್ರಸ ಸೇರಿ 11ನೇ ವಯಸ್ಸಿನ ತನಕ ಅಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ನಂತರ 1954 ಜೂನ್ ತಿಂಗಳಲ್ಲಿ ಮುಬಾರಕ್ ಪುರದ ಇಹ್ಯಾಉಲ್ ಉಲೂಮ್ ಮದ್ರಸ ಸೇರಿ ಅಲ್ಲಿ ಅರೇಬಿಕ್ ಭಾಷೆ, ತಫ್ಸೀರ್, ಹದೀಸ್, ಫಿಕ್ಹ್ ಮುಂತಾದವುಗಳಲ್ಲಿ ಪಾರಂಗತರಾದರು. 1956ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಆಝಂಘಡದ ಫೈಝೆ ಆಮ್ ವಿದ್ಯಾಲಯವನ್ನು ಸೇರಿದರು. 1961 ಜನವರಿ ತಿಂಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪ್ರಮಾಣಪತ್ರವನ್ನು ಪಡೆದರು. ಈಮಧ್ಯೆ ಅವರು 1959 ಫೆಬ್ರುವರಿ ತಿಂಗಳಲ್ಲಿ ‘ಮೌಲವಿ’ ಪದವಿಯನ್ನು ಮತ್ತು 1960 ಫೆಬ್ರುವರಿ ತಿಂಗಳಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಿಂದ ‘ಆಲಿಂ’ ಪದವಿಯನ್ನು ಪಡೆದರು. 1976 ಫೆಬ್ರುವರಿ ತಿಂಗಳಲ್ಲಿ ಅವರು ಅರಬ್ಬಿ ಸಾಹಿತ್ಯದಲ್ಲಿಯೂ ಪದವಿಯನ್ನು ಪಡೆದರು.

ವೃತ್ತಿಜೀವನ:[ಬದಲಾಯಿಸಿ]

ಶಿಕ್ಷಣ ಮುಗಿಸಿದ ಬಳಿಕ ಅವರು ಅಧ್ಯಯನ ಮತ್ತು ಬರವಣಿಗೆಯಲ್ಲಿ ತೊಡಗಿದರು. ಅಲಹಾಬಾದ್ ಮತ್ತು ನಾಗ್ಪುರದ ಅನೇಕ ಕಡೆ ಅವರು ಧರ್ಮ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಎರಡು ವರ್ಷಗಳ ಕಾಲ ಫೈಝೆ ಆಮ್ ಮದ್ರಸದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ ಒಂದು ವರ್ಷ ಆಝಂಘಡದ ಅರ್‍ರಶಾದ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ದುಡಿದರು. 1966ರಲ್ಲಿ ಅವರು ದಾರುಲ್ ಹದೀಸ್ ಮದ್ರಸಕ್ಕೆ ಸೇರಿ ಅಲ್ಲಿ ಮೂರು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ 1969 ಜನವರಿ ತಿಂಗಳಲ್ಲಿ ಮಧ್ಯಪ್ರದೇಶದ ಸಯೋನಿಯಲ್ಲಿರುವ ಫೈಝೆ ಉಲೂಮ್ ಮದ್ರಸದಲ್ಲಿ ಪ್ರಾಂಶುಪಾಲರಾಗಿ ನೇಮಕಗೊಂಡರು.

1972ರಲ್ಲಿ ಹುಟ್ಟೂರಿನ ದಾರುತ್ತಅಲೀಮ್ ಮದ್ರಸದ ಆಹ್ವಾನ ನಿಮಿತ್ತ ಅವರು ಊರಿಗೆ ಮರಳಿ ಅಲ್ಲಿ ಪ್ರಾಂಶುಪಾಲರಾಗಿ ಸೇರಿದರು. ಎರಡು ವರ್ಷಗಳ ಬಳಿಕ ಅವರಿಗೆ ಬನಾರಸ್‌ನ ಪ್ರತಿಷ್ಟಿತ ಜಾಮಿಅ ಸಲಫಿಯ್ಯದಲ್ಲಿ ಪ್ರಾಧ್ಯಾಪಕ ಹುದ್ದೆ ದೊರೆಯಿತು. 1974 ರಿಂದ1988ರ ತನಕ ಅವರು ಅಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

1976ರಲ್ಲಿ ರಾಬಿತತುಲ್ ಆಲಮಿಲ್ ಇಸ್ಲಾಮೀ ಸಂಸ್ಥೆಯು ಪ್ರವಾದಿ ಚರಿತ್ರೆಯ ಬಗ್ಗೆ ಜಾಗತಿಕ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಸಫಿಯ್ಯುರ್‍ರಹ್ಮಾನ್ ಈ ಸ್ಪರ್ಧೆಯಲ್ಲಿ ಭಾಗವಹಿಸಿ 'ಅರ್‍ರಹೀಕುಲ್ ಮಖ್ತೂಮ್' ಎಂಬ ಪುಸ್ತಕವನ್ನು ಬರೆದರು. ಅದೇ ವರ್ಷ ಪಾಕಿಸ್ಥಾನದಲ್ಲಿ ಜರುಗಿದ ಸಂಸ್ಥೆಯ ಸಮ್ಮೇಳನದಲ್ಲಿ ಈ ಪುಸ್ತಕವು ಪ್ರಥಮ ಬಹುಮಾನವನ್ನು ಪಡೆಯಿತು.

1988ರಲ್ಲಿ ಮದೀನದ ಜಾಮಿಅ ಇಸ್ಲಾಮಿಯ್ಯದಲ್ಲಿ ‘ಪ್ರವಾದಿ ಚರಿತ್ರೆಯ ಅಧ್ಯಯನ ಕೇಂದ್ರ’ ಸ್ಥಾಪನೆಯಾದಾಗ ಸಫಿಯ್ಯುರ್‍ರಹ್ಮಾನ್‌ರಿಗೆ ಅದರಲ್ಲಿ ಸದಸ್ಯರಾಗುವ ಅವಕಾಶ ದೊರಕಿತು. ಆ ಕೇಂದ್ರದ ಸದಸ್ಯರಾಗಿ ಅವರು 10 ವರ್ಷಗಳ ಕಾಲ ದುಡಿದರು. ನಂತರ ಅವರು ರಿಯಾದ್‌ನ ‘ದಾರುಸ್ಸಲಾಮ್’ ಪ್ರಕಾಶನ ಸಂಸ್ಥೆಯ ಸಂಶೋಧನೆ ಮತ್ತು ಪರಿಶೀಲನೆ ವಿಭಾಗದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡಿದರು.

ಕೃತಿಗಳು:[ಬದಲಾಯಿಸಿ]

ಉರ್ದು:[ಬದಲಾಯಿಸಿ]

  1. ಅರ್‍ರಹೀಕುಲ್ ಮಖ್ತೂಮ್
  2. ಇನ್ಕಾರೆ ಹದೀಸ್ ಹಕ್ ಯಾ ಬಾತಿಲ್
  3. ಸುಹುಫೆ ಯಹೂದ್ ವ ನಸಾರಾ ಮೇ ಮುಹಮ್ಮದ್ ಕೆ ಮುತಅಲ್ಲಿಕ್ ಬಶಾರತೇಂ
  4. ಇಸ್ಲಾಮ್ ಔರ್ ಅದಮೆ ತಶದ್ದುದ್
  5. ತಾರೀಖ್ ಮಕ್ಕ
  6. ತಾರೀಖ್ ಮದೀನ
  7. ತಾರೀಖ್ ಆಲೆ ಸಊದ್
  8. ತಝ್ಕಿರ ಮುಹಮ್ಮದ್ ಇಬ್ನೆ ಅಬ್ದುಲ್ ವಹ್ಹಾಬ್
  9. ಕಾದಿಯಾನಿಯ್ಯಾತ್ ಐನೀ ಆಯಿನೇ ಮೇ

ಅರಬ್ಬಿ:[ಬದಲಾಯಿಸಿ]

  1. ಅರ್‍ರಹೀಕುಲ್ ಮಖ್ತೂಮ್
  2. ರೌದತುಲ್ ಅನ್ವಾರ್ ಫೀ ಸೀರತಿ ನ್ನಬಿಯ್ಯಿಲ್ ಮುಖ್ತಾರ್
  3. ಇತ್‌ಹಾಫುಲ್ ಕಿರಾಮ್ ತಅಲೀಕ್ ಬುಲೂಗಿಲ್ ಮರಾಮ್
  4. ಶರ್ಹ್ ಅಝ್‌ಹಾರುಲ್ ಅರಬ್
  5. ಮಿನ್ನತುಲ್ ಮುನ್‌ಇಮ್ ಫೀ ಶರ್ಹಿ ಸಹೀಹ್ ಮುಸ್ಲಿಮ್
  6. ತರ್ಜುಮ ವತೌದೀಹ್ ಕಿತಾಬಿಲ್ ಅರ್ಬಈನ್ ಲಿನ್ನವವೀ
  7. ತರ್ಜುಮ ಅಲ್‌ಕಲಿಮುತ್ತಯ್ಯಿಬ್ ಲಿಬ್ನಿ ತೈಮಿಯ್ಯ
  8. ಅಲ್‌ಮಸಾಬೀಹ್ ಫೀ ಮಸ್‌ಅಲತಿ ತ್ತರಾವೀಹ್ ಲಿಸ್ಸುಯೂತೀ
  9. ಬಹ್ಜತು ನ್ನಝರ್ ಫೀ ಮುಸ್ತಲಹ್ ಅಹ್ಲಿಲ್ ಅಸರ್
  10. ಅಲ್‌ಫಿರ್ಕತು ನ್ನಾಜಿಯ ವಲ್ ಫಿರಕುಲ್ ಇಸ್ಲಾಮಿಯ್ಯತಿಲ್ ಉಖ್ರಾ
  11. ಇಬ್ರಾಝುಲ್ ಹಕ್ಕಿ ವಸ್ಸವಾಬ್ ಫೀ ಮಸ್‌ಅಲತಿ ಸ್ಸುಫೂರಿ ವಲ್ ಹಿಜಾಬ್
  12. ಅಲ್‌ಅಹ್‌ಝಾಬು ಸ್ಸಿಯಾಸಿಯ್ಯ ಫಿಲ್ ಇಸ್ಲಾಮ್.
  13. ತತವ್ವುರು ಶ್ಶುಊಬಿ ವದ್ದಿಯಾನಾತ್ ಫಿಲ್ ಹಿಂದ್ ವಮಜಾಲು ದ್ದಅ್‌ವತಿಲ್ ಇಸ್ಲಾಮಿಯ್ಯತಿ ಫೀಹಾ
  14. ಅಲ್‌ಬಿಶಾರಾತ್ ಬಿ ಮುಹಮ್ಮದಿನ್ ಫೀ ಕುತುಬಿಲ್ ಹಿಂದಿ ವಲ್‌ಬೂದಿಯ್ಯೀನ್
  15. ಅಲ್‌ಮಿಸ್ಬಾಹುಲ್ ಮುನೀರ್ ಫಿ ತಹ್ದೀಬಿ ತಫ್ಸೀರಿಬ್ನಿ ಕಸೀರ್

ಮರಣ:[ಬದಲಾಯಿಸಿ]

ಸಫಿಯ್ಯುರ್‍ರಹ್ಮಾನ್ ಅಲ್ಪಕಾಲದ ಅಸೌಖ್ಯದಿಂದ 2006 ಡಿಸೆಂಬರ್ 1ನೇ ಶುಕ್ರವಾರ ಜುಮಾ ನಮಾಝಿನ ಬಳಿಕ ಇಹಲೋಕ ಯಾತ್ರೆಯನ್ನು ಮುಗಿಸಿದರು.

ಆಧಾರ ಗ್ರಂಥಗಳು[ಬದಲಾಯಿಸಿ]

  • ಅರ್‍ರಹೀಕುಲ್ ಮಖ್ತೂಮ್, ಪ್ರ. ದಾವಾ ಪಬ್ಲಿಕೇಶನ್ಸ್ ಮಂಗಳೂರು, (2019)