ಸದಸ್ಯ:Raveendra R.S.
ಡಾ. ರವೀಂದ್ರ ಆರ್.ಎಸ್. ರಸಾಯನ ಶಾಸ್ತ್ರ ಸಹ ಪ್ರಾಧ್ಯಾಪಕರು, ಕನ್ನಡ ವಿಜ್ಞಾನ ಬರಹಗಾರರು ಹಾಗು ಕಾವ್ಯಾಸಕ್ತರು.
ಶಿಕ್ಷಣ ಮತ್ತು ವೃತ್ತಿಜೀವನ
[ಬದಲಾಯಿಸಿ]ಹುಟ್ಟೂರಾದ ಮೈಸೂರು ಜಿಲ್ಲೆಯ ರಾಜನ ಬಿಳಗೂಲಿ ಗ್ರಾಮದಲ್ಲಿ ಪ್ರಾಥಮಿಕ ಹಾಗು ಪಕ್ಕದ ಕಣಗಾಲು ಗ್ರಾಮದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಮೈಸೂರಿನ ಮಹಾಜನ ವಿದ್ಯಾ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಮತ್ತು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ರಸಾಯನ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರುತ್ತಾರೆ. ನಂತರ ತಮಿಳುನಾಡಿನ ಅಳಗಪ್ಪ ವಿಶ್ವ ವಿದ್ಯಾಲಯದಿಂದ ಎಂ.ಫಿಲ್ ಪದವಿಯನ್ನು ಪಡೆದಿರುತ್ತಾರೆ. ನಂತರ ರಸಾಯನ ಶಾಸ್ತ್ರದಲ್ಲಿ ಭಾರತೀಯಾರ್ ವಿಶ್ವ ವಿದ್ಯಾಲಯದಿಂದ ಪಿ ಹೆಚ್ ಡಿ ಪಡೆದಿರುತ್ತಾರೆ. ಮೈಸೂರು ಮತ್ತು ಬೆಂಗಳೂರಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ರಾಜಾನುಕುಂಟೆಯಲ್ಲಿರುವ ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರವೃತ್ತಿಗಳು
[ಬದಲಾಯಿಸಿ]- ವೃತ್ತಿಯಲ್ಲಿ ಪ್ರಾಧ್ಯಾಪಕರಾದರೂ, ಪ್ರವೃತ್ತಿಯಲ್ಲಿ ಕನ್ನಡ ವಿಜ್ಞಾನ ಲೇಖಕರು, ಕಾವ್ಯಾಸಕ್ತರು. ನಾಡಿನ ಹಲವಾರು ಕಡೆಗಳಲ್ಲಿ/ಕವಿಗೋಷ್ಠಿಗಳಲ್ಲಿ ತಮ್ಮ ಕವನಗಳನ್ನು ವಾಚನ ಮಾಡಿ ಮೆಚ್ಚುಗೆಗಳಿಸಿದ್ದಾರೆ. ೨೦೧೨ರಲ್ಲಿ ತಮ್ಮ ಮೊದಲ ಕವನ ಸಂಕಲನವಾದ "ಕಾವ್ಯ ಲಹರಿ" ಯನ್ನು ಪ್ರಕಟಿಸಿದ್ದಾರೆ.
- ಇದುವರೆಗೆ ಸುಮಾರು ನೂರಕ್ಕೂ ಹೆಚ್ಚು ಕವಿಗೋಷ್ಥಿಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿ ಮೆಚ್ಚುಗೆಗಳಿಸಿದ್ದಾರೆ. ಸುಮಾರು ೨೦ಕ್ಕೂ ಹೆಚ್ಚು ಕವಿಗೋಷ್ಥಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
- ಔಷಧೀಯ ಸಸ್ಯಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿಯಿದ್ದು, ಬೇವು, ಕಾಡು ಮಾವು, ಲಕ್ಕಿ ಗಿಡಗಳ ಕುರಿತು ಲೇಖನಗಳನ್ನು ಬರೆದು ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ಮಂಡನೆ ಮಾಡಿರುತ್ತಾರೆ.
- ಸಾವಯವ ಕೃಷಿಯಲ್ಲಿ ಆಸಕ್ತಿಯುಳ್ಳವರಾಗಿದ್ದು, ಹಸಿರೆಲೆ ಗೊಬ್ಬರದ ಮಹತ್ವದ ಬಗ್ಗೆ ಲೇಖನ ಬರೆದು ರೈತ ಸಮ್ಮೇಳನದಲ್ಲಿ ಮಂಡಿಸಿದ್ದಾರೆ.
- ರಸಾಯನ ಶಾಸ್ತ್ರದ ಲೇಖನಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಸೇರಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಸಂಶೋಧನಾ ಲೇಖನಗಳು
[ಬದಲಾಯಿಸಿ]ಪ್ರಸ್ತುತ ರಸಾಯನ ಶಾಸ್ತ್ರದಲ್ಲಿ ಪಿ.ಹೆಚ್.ಡಿ ಮಾಡುತ್ತಿರುವ ಇವರು ೨೩ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾಷ್ತ್ರೀಯ, ಅಂತರಾಷ್ತ್ರೀಯ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ೨೫ಕ್ಕೂ ಹೆಚ್ಚು ರಾಷ್ತ್ರೀಯ, ಅಂತರಾಷ್ತ್ರೀಯ ವೈಜ್ಞಾನಿಕ ಸಮ್ಮೇಳನಗಳಲ್ಲಿ ಭಾಗವಹಿಸಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ.[೧]
ಸದಸ್ಯತ್ವ
[ಬದಲಾಯಿಸಿ]- ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ನ ಸದಸ್ಯ. (MISTE)
- ಲ್ಯುಮಿನಿಸೆನ್ಸ್ ಸೊಸೈಟಿ ಆಫ್ ಇಂಡಿಯ ಕರ್ನಾಟಕ ಛಾಪ್ಟರ್ ನ ಸದಸ್ಯ. (MLSIKC)
- ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ.
ಪ್ರಶಸ್ತಿಗಳು
[ಬದಲಾಯಿಸಿ]- ಅಕ್ಟೋಬರ್ ೨೦೧೪ ರಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿ. (ಬೆಳಗಾವಿಯಲ್ಲಿ ನಡೆದ ರಸಾಯನ ಶಾಸ್ತ್ರ ರಾಷ್ತ್ರೀಯ ಸಮ್ಮೇಳನ)
- ಸೆಪ್ಟೆಂಬರ್ ೨೦೧೫ ರಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿ. (ರಾಯಚೂರಿನಲ್ಲಿ ನಡೆದ ಕನ್ನಡ ವಿಜ್ಞಾನ ಸಮ್ಮೇಳನ)
- ಫೆಬ್ರವರಿ ೨೦೧೬ ರಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿ. (ಬೆಂಗಳೂರಿನಲ್ಲಿ ನಡೆದ ರಸಾಯನ ಶಾಸ್ತ್ರ ರಾಷ್ತ್ರೀಯ ಸಮ್ಮೇಳನ)
- ಸೆಪ್ಟೆಂಬರ್ ೨೦೧೬ ರಲ್ಲಿ ಯುವ ವಿಜ್ಞಾನಿ ಪ್ರಶಸ್ತಿ. (ಬೀದರ್ ನಲ್ಲಿ ನಡೆದ ಕನ್ನಡ ವಿಜ್ಞಾನ ಸಮ್ಮೇಳನ)
- ಸೆಪ್ಟೆಂಬರ್ ೨೦೧೭ ರಲ್ಲಿ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿ. (ಬೆಂಗಳೂರಿನಲ್ಲಿ ನಡೆದ ಕನ್ನಡ ವಿಜ್ಞಾನ ಸಮ್ಮೇಳನ)
- ೧೨.೧೧.೨೦೧೭ರಲ್ಲಿ ನವ ಚೈತನ್ಯ ಉದಯ ಪ್ರತಿಷ್ಠಾನದ ವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯುವ ಸಾಹಿತ್ಯ ರತ್ನ ಪ್ರಶಸ್ತಿ.
- ೧೧.೦೨.೨೦೧೮ ರಲ್ಲಿ ಕವಿ, ಕಾವ್ಯ ಸ್ನೇಹ ಬಳಗದ ವತಿಯಿಂದ ಕವಿ-ಕಾವ್ಯ ಸ್ನೇಹ ಸೌರಭ ಪ್ರಶಸ್ತಿ.
- ೩೦.೦೩.೨೦೧೮ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಜಿಲ್ಲಾ ಘಟಕದಿಂದ ಕನ್ನಡ ಸೇವಾ ರತ್ನ ಪ್ರಶಸ್ತಿ.
- ೨೭.೦೫.೨೦೧೮ ರಲ್ಲಿ ಸಂತ ಶ್ರೀ ಕೃಷ್ಣದಾಸ ಪ್ರತಿಷ್ಠಾನ (ಹಾಲಿಗೇರಿ) ಬೆಂಗಳೂರು, ವತಿಯಿಂದ ಸಂತ ಶ್ರೀ ಕೃಷ್ಣದಾಸ ಪ್ರಶಸ್ತಿ.
- ೧೦.೦೬.೨೦೧೮ ರಲ್ಲಿ ದಿವ್ಯ ಜ್ಯೋತಿ ಕಲಾ ಮತ್ತು ಸಾಹಿತ್ಯ ವೇದಿಕೆಯಿಂದ ಮಂಡ್ಯ ಕೃಷ್ಣರಾಜ ಒಡೆಯರ್ ಪ್ರತಿಭಾ ಪ್ರಶಸ್ತಿ.
- ೧೪.೧೨.೨೦೧೯ ರಂದು ಶ್ರೀ ಕೃಷ್ಣರಾಜ ಪರಿಷನ್ಮಂದಿರ,ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿ ನವ ಚೈತನ್ಯ ಉದಯ ಪ್ರತಿಷ್ಠಾನದ ವತಿಯಿಂದ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನವ ಚೈತನ್ಯ ರಾಜ್ಯೋತ್ಸವ ಸೌರಭ ಪ್ರಶಸ್ತಿ.
- ೨೭.೦೧.೨೦೨೧ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಇಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ೧೧೭ನೇ ಜಯಂತಿಯಲ್ಲಿ ಕುವೆಂಪು ಕನ್ನಡ ರತ್ನ ಪ್ರಶಸ್ತಿ.