ಸದಸ್ಯ:Preetham Gowda T/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
 ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪ್ರಕೃತಿ ಸೌಂದರ್ಯ, ಎತ್ತ ನೋಡಿದರೂ ಗಗನ ಚುಂಬಿಯಂತಿರುವ ವೃಕ್ಷಗಳು, ಪ್ರಪಾತದಂತಿರುವ ಬೆಟ್ಟ-ಗುಡ್ಡಗಳ ಸಾಲು.

ಅದರ ತಪ್ಪಲಿನಲ್ಲಿ ಕಂಗೊಳಿಸುತ್ತಿರುವ ಜಿಲ್ಲೆ ಶಿವಮೊಗ್ಗ. ಆ ಸುಂದರ ನಗರದಲ್ಲಿ ತಲೆ ಎತ್ತಿ ನಿಂತಿರುವ ವಿಶ್ಷವಿದ್ಯಾಲಯವೇ 'ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ'. ಭಾರತದ ಬೆನ್ನೆಲುಬಾಗಿರುವವನು ರೈತ. ಅವನ ಕಸುಬು ಕೃಷಿ. ಎಲ್ಲರಿಗು ಅನ್ನ ದಾತ, ಅವನಿಗೆ ಸಹಾಯವಾಗಲೆಂದು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.[೧]

 ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ೨೦೦೮ರಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭವಾಗಿದೆ. ಕೃಷಿ ಮತ್ತು ತೋಟಗಾರಿಕೆಯ ವಿಜ್ಣಾನ ಹೊಂದಿರುವ ಭಾರತದ ಕರ್ನಾಟಕ ರಾಜ್ಯದ ಮೊದಲ ಏಕಿಕೃತ ವಿಶ್ವವಿದ್ಯಾನಿಲಯವಾಗಿದೆ. ಇದು ಕೃಷಿ ವಿಜ್ಣಾನ ವಿಶ್ವವಿದ್ಯಾಲಯ-ಬೆಂಗಳೂರುನ್ನು ಹೊರತು ಪಡೆಸಿ ಬಾಗಲಕೋಟೆ ಸಂಸ್ಥೆಗಳು ಸೇರಿದಂತೆ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ ಮತ್ತು

ಚಿತ್ರದುರ್ಗ ಜಿಲ್ಲೆಗಳು ಒಳಗೊಳ್ಳುತ್ತವೆ.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
 ಡಾ:ಸಿ.ವಾಸುದೇವಪ್ಪ ಕುಲಪತಿಗಳು ಹಾಗು ಶಿಕ್ಷಣ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಶ್ವವಿದ್ಯಾಲಯವು ವಿಶ್ವ ಪ್ರಸಿದ್ಧ ಜೋಗ್ ಜಲಪಾತ, ಶೃಂಗೇರಿ, ಆಗುಂಬೆ, ಲಯನ್ ಸಫಾರಿ, ಭದ್ರಾ ಮತ್ತು ಕುದ್ರೇಮುಖ ಮೀಸಲು ಕಾಡುಗಳು ಹಲವು ಪ್ರವಾಸೀ ಸ್ಥಳಗಳು ಸುತ್ತುವರೆದಿದೆ. ಈ ವಿಶ್ವವಿದ್ಯಾಲಯವು ೭೮ ಎಕರೆ ವಿಸ್ತಾರವನ್ನ ಹೊಂದಿದೆ. ಎಲ್ಲಾ ರೀತಿಯ ಸೌಲಬ್ಯಗಳನ್ನ ಹೊಂದಿದೆ. ನುರಿತ ಉಪನ್ಯಾಸಕರನ್ನು ಉತ್ತಮ ಕೊಠಿಡಗಳನ್ನು ಹೊಂದಿದೆ.ಇಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆಯಬವುದು. ದೂರದಿಂದ ಬರುವಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಲಾಗಿದೆ.

ವಿಶ್ವವಿದ್ಯಾಲಯದ ಉದ್ದೇಶವೇನೆಂದರೆ ಬೇಸಾಯದಲ್ಲಿ ಆಧುನಿಕ ತಾಂತ್ರಿಕತೆಯನ್ನ ಹೇಗೆ ಅಳವಡಿಕೊಳ್ಳಬೇಕೆಂಬುದರ ಬಗ್ಗೆ ತರಬೇತಿಯನ್ನ ನೀಡುತ್ತದೆ.

 ಹೂವು, ತರಕಾರಿ, ಹಣ್ಣು ಮುಂತಾದ ತೋಟಗಾರಿಕೆ ಬೆಳೆಗಳು, ರಾಗಿ, ಭತ್ತ, ಜೋಳ ಮುಂತಾದ ಆಹಾರ ಬೆಳೆಗಳು, ಕಾಳುಮೆಣಸು ಏಲಕ್ಕಿ ಮುಂತಾದ ಸಾಂಬಾರು ಬೆಳೆಗಳನ್ನು[೨]

ಹೇಗೆ ಬೆಳೆಯಬೇಕು, ಅದಕ್ಕೆ ಬೇಕಾದ ಮಣ್ಣಿನ ಪಲವತ್ತತೆ ಮುಂತಾದವುದರ ಬಗ್ಗೆ ಮಾಹಿತಿಯನ್ನು ನೀಡುಲು ತಂತ್ರಜ್ಣಾನ ಮತ್ತು ವಿಜ್ಣಾನವನ್ನು ಅಳವಡಿಸಿಕೊಂಡು ಶಿಕ್ಷಣವನ್ನು ನೀಡುತ್ತಿದೆ.

 ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿಯನ್ನು ಪಡೆಯುತ್ತಿದ್ದಾರೆ.ಅದರಲ್ಲೂ ವಿಶೇಷವಾಗಿ ಗ್ರಾಮೀಣ ರೈತರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತರಬೇತಿಯನ್ನು ನೀಡಲು ಸಂಶೋಧನೆಯನ್ನು ನಡೆಸುತ್ತಿದೆ.ವಿಶ್ವವಿದ್ಯಾಲಯ ಪ್ರತಿಯೊಬ್ಬ ಸಾಮಾನ್ಯ ನಾಗರೀಕನಿಗೂ ಮಾಹಿತಿಯನ್ನ ಒದಗಿಸಲು "ನೇಗಿಲ ಮಿಡಿತ" ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಆ ಮೂಲಕ ಜನರಿಗೆ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸುತ್ತಿದೆ.  
                            ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
                            ಫಲವನು ಬಯನದೆ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು
                            ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗೀ
                            ಉಳುವಾ ಯೋಗಿಯ ನೋಡಲ್ಲಿ||                             
 "ನೇಗಿಲ ಮೇಲೆಯು ನಿಂತಿದೆ ಧರ್ಮ " ಎಂಬ ಕುವೆಂಪುರವರ ವಾಣಿಯಂತೆ ದೇಶದ ಬೆನ್ನೆಲುಬಾಗಿರುವ ರೈತನಿಗೆ ಅನುಕೂಲವಾಗಲೆಂದು ಅನೇಕ ರೀತಿಯ ಮಾಹಿತಿಯನ್ನು, ಸೌಕರ್ಯವನ್ನು ಕಲ್ಪಿಸಿದೆ. ಸಾಂಪ್ರದಾಯಿಕ ಕೃಷಿ ತಳಿಗಳ ರಕ್ಷಣೇ ಕೀಟ ಮತ್ತು ರೋಗಗಳ ನಿವಾರಣೆ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಬಗೆ ಹೇಗೆ ಎಂಬುದನ್ನ ತಿಳಿಸಿ ಕುಡುತ್ತಾರೆ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಅದೇ ವ್ಯಾಪ್ತಿಯಲ್ಲಿ ಮಾರಾಟ ಮಳಿಗೆಗಳನ್ನು ತೆರೆದಿದೆ. ಹಾಗು ಕೃಷಿ ಮೇಳಗಳನ್ನ ಏರ್ಪಡಿಸಿ ಬೆಳೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡುತ್ತದೆ. 
 ಮಲೆನಾಡಿನ ಸೊಬಗಿನ ಮೈಸಿರಿ, ಕರುನಾಡು ಕಂಪು, ಪ್ರಕೃತಿಯ ಹಚ್ಚ ಹಸಿರನ್ನು ಹೊದಿಕೆಯಾಗಿ ಹೊಂದಿರುವ ಇತಿಯಾಸ ಪ್ರಸಿದ್ಧವಾದ ಸ್ವತಂತ್ರ ಹೋರಾಟಗಾರ ಶಿವಪ್ಪನಾಯಕನು. ನೆಲೆಸಿದಂತಹ ತಾಣ

ಶಿವಮೊಗ್ಗ ಇಲ್ಲಿ ಸ್ಥಾಪಿತವಾಗಿರುವ ಈ ವಿಶ್ವ ವಿದ್ಯಾನಿಲಯವು ರೈತನಿಗೆ ಮಿತ್ರನಂತೆ, ಸಲಹೆಗಾರನಂತೆ ಮಾರ್ಗದರ್ಶನ ನೀಡುತ್ತಿದೆ. ಇಂತಹ ವಿಶ್ವವಿದ್ಯಾನಿಲಯವು ಶಿವಮೊಗ್ಗದಲ್ಲಿ ತಲೆ ಎತ್ತಿ ನಿಂತಿರುವುದು ನಮ್ಮೆಲರಿಗೂ ಹೆಮ್ಮೆಯ ವಿಷಯವಾಗಿದೆ.

<ಉಲ್ಲೇಖನಗಳು>

  1. http://vijaykarnataka.indiatimes.com/district/shivamogga/-/articleshow/55857460.cms
  2. http://uahs.edu.in/Publication.html