ಸದಸ್ಯ:Neha khanum/ನನ್ನ ಪ್ರಯೋಗಪುಟ/2
ಗೋಚರ
ಹಬಲ್ ಸ್ಪೇಸ್ ಟೆಲಿಸ್ಕೋಪ್
[ಬದಲಾಯಿಸಿ]ಹಬಲ್ ಸ್ಪೇಸ್ ಟೆಲಿಸ್ಕೋಪ್(ಎಚ್.ಎಸ್.ಟಿ),೧೯೯೦ ರ ಏಪ್ರಿಲ್ನಲ್ಲಿ ಗಗನ ನೌಕೆಯಿಂದ ಭೂ ಕಕ್ಷದ ಪಥಕ್ಕೆ ಕೊಂಡೊಯ್ದ ಒಂದು ಬಾಹ್ಯಾಕಾಶ ದೂರದರ್ಶಕವಾಗಿದೆ.ಇದು ಅಮೇರಿಕನ್ ಖಗೋಳಶಾಸ್ತ್ರದ ಒಂದು ಬಹು ಪ್ರಖ್ಯಾತಿಯ ಸಂಶೋಧನಾ ಸಾಧನವಾಗಿದೆ.ಮೊದಲನೆಯ ಬಾಹ್ಯಾಕಾಶ ದೂರದರ್ಶಕವಲ್ಲವಾದರೂ, ಹಬಲ್ ಅತಿದೊಡ್ಡ ಮತ್ತು ಬಹುಮುಖ ಸಾಮರ್ಥ್ಯದ ಮತ್ತು ಖಗೋಳಶಾಸ್ತ್ರದ ಸಾರ್ವಜನಿಕ ಸಂಶೋಧನೆಯ ವರಮಾನ ಮತ್ತು ಪ್ರಮುಖ ಸಂಶೋಧನಾ ಸಾಧನವೆಂದು ಹೆಸರುವಾಸಿಯಾಗಿದೆ. ಎಚ್.ಎಸ್.ಟಿ ಗೆ ಖಗೋಳವಿಜ್ಞಾನಿ ಎಡ್ವಿನ್ ಹಬಲ್‍ನ ಹೆಸರನ್ನು ಇಡಲಾಗಿದೆ. ಕಾಂಪ್ಟನ್ ಗಾಮಾ ರೇ ಅಬ್ಸರ್ವೇಟರಿ, ಚಂದ್ರ ಎಕ್ಸರೆ ಅಬ್ಸರ್ವೇಟರಿ, ಮತ್ತು ಸ್ಪಿಟ್ಜರ್ ಬಾಹ್ಯಾಕಾಶ ಟೆಲಿಸ್ಕೋಪ್ ನಾಸಾದ ಪ್ರಸಿದ್ದವಾದ ವೀಕ್ಷಣೆಗಳಾಗಿವೆ.
ಎಚ್.ಎಸ್.ಟಿ ಯು ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳ ಸಹಯೋಗವಾಗಿದೆ.ಮತ್ತು ನಾಸಾದ ಒಂದು ದೊಡ್ಡ ಸಮೀಕ್ಷಾ ಮಂದಿರವಾಗಿದೆ.ಹಬಲ್‌ನ ಗುರಿಗಳನ್ನು ಮತ್ತು ಫಲಿತಾಂಶಗಳನ್ನು ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್ಸ್ಟಿಟ್ಯೂಟ್(ಎಸ್.ಟಿ.ಎಸ್ಸಿ.ಐ)ಯು ಪ್ರಕ್ರಿಯೆಗೊಳಿಸುತ್ತದೆ.ಗೊಡಾರ್ಡ್ ಬಾಹ್ಯಾಕಾಶ ವಿಮಾನ ಕೇಂದ್ರವು ಬಾಹ್ಯಾಕಾಶ ನೌಕೆಯನ್ನು ನಿಯಂತ್ರಿಸುತ್ತದೆ.
ಹಬಲ್ ಮಾತ್ರವೇ ಬಾಹ್ಯಾಕಾಶ ಗಗನಯಾತ್ರಿಗಳಿಂದ ಉಪಯೋಗಿಸಲ್ಪಡುತ್ತಿರುವ ಇದುವರೆಗಿನ ಏಕೈಕ ದೂರದರ್ಶಕವಾಗಿದೆ.ಎರಡು ಹೈಪರ್ಬೋಲಿಯ ದರ್ಪಣಗಳನ್ನು ಹೊಂದಿರುವ ಎಚ್.ಎಸ್.ಟಿ ಯ ರಚನೆಯು,ವಿಶಾಲ ನೋಟದ ಕ್ಷೇತ್ರಗಳಲ್ಲಿ ಒಳ್ಳೆಯ ಬಿಂಬವನ್ನು ರೂಪಿಸುತ್ತದೆ.ಎಚ್.ಎಸ್.ಟಿ ಯು ೨.೪ ಮೀಟರ್(೭.೯ ಫ಼ೀಟ್) ಉದ್ದದ ದರ್ಪಣವನ್ನು ಹೊಂದಿದೆ ಮತ್ತು ಅದರ ನಾಲ್ಕು ಪ್ರಮುಖ ಉಪಕರಣಗಳು ಸಮೀಪದ ನೇರಳಾತೀತ,ಗೋಚರ ಮತ್ತು ಅತಿಗೆಂಪು ವರ್ಣಪಟಲದಲ್ಲಿ ವೀಕ್ಷಣೆಯನ್ನು ನಡೆಸುತ್ತವೆ. ವಾಯುಮಂಡಲದ ವಿರೂಪದ ಹೊರಗಿರುವ ಹಬಲ್‍ನ ಪಥವು,ಹಿನ್ನೆಲೆಯ ಬೆಳಕಿಲ್ಲದೆಯೇ ಬಹಳ ಸೂಕ್ಷ್ಮ ಬಿಂಬಗಳನ್ನು ಸೆರೆಹಿಡಿಯಲು ಅವಕಾಶ ಮಾಡಿಕೊಡುತ್ತದೆ.ಹಬಲ್‍ನ ಅಲ್ಟ್ರಾ ಆಳಕ್ಷೇತ್ರದ ಬಿಂಬವು,ವಿಶ್ವದ ಇದುವರೆಗಿನ ಅತಿದೂರದ ವಸ್ತುವಿನ ಬಹಳ ವಿಸ್ತಾರವಾದ ಗೋಚರ ಬೆಳಕಿನ ಬಿಂಬವಾಗಿದೆ. ಹಬಲ್‍ನ ಅಲ್ಟ್ರಾ ಆಳಕ್ಷೇತ್ರದ ಬಿಂಬಗಳು 'ಗ್ಯಾಲಕ್ಸಿಗಳು ಬಿಲಿಯನ್ ಪ್ರಕಾಶ ವರ್ಷಗಳಿಂದಾಚೆಗೆ ಇವೆ' ಎಂದು ಸಾರುತ್ತವೆ.ಹಬಲ್‍ನ ಅನೇಕ ಪರಿವೀಕ್ಷಣೆಗಳು 'ಬ್ರಹ್ಮಾಂಡವು ಯಾವ ಪ್ರಮಾಣದಲ್ಲಿ ವಿಕಸನವಾಗುತ್ತಿದೆ' ಎಂಬುದನ್ನು ಬಹಳ ಸೂಕ್ಷ್ಮವಾಗಿ ಅಳೆಯುತ್ತವೆ.ಅವು ಹಬಲ್‍ನ ಸ್ಥಿರಾಂಕವನ್ನು ಒತ್ತಾಯಿಸುತ್ತವೆ ಮತ್ತು ಬ್ರಹ್ಮಾಂಡದ ಆಯಸ್ಸನ್ನು ಲೆಕ್ಕಹಾಕುತ್ತವೆ.ಗುರು ಗ್ರಹದೊಂದಿಗೆ ಧೂಮಕೇತುವಿನ ಸಂಘರ್ಷಣೆಯ ಚಲನಾ ಶಾಸ್ತ್ರವನ್ನು ಅಭ್ಯಸಿಸುವುದರಲ್ಲಿ ಗ್ರಹಗಳ ಬಿಂಬಗಳು ನಿರ್ಣಾಯಕವಾಗಿದ್ದವು.ಈ ಘಟನೆಯು ಕೇವಲ ಕೆಲವು ಶತಮಾನಗಳಿಗೊಮ್ಮೆ ಸಂಭವಿಸುತ್ತದೆ ಎಂದು ನಂಬಲಾಗಿದೆ.ಕಪ್ಪು ರಂಧ್ರಗಳು ಎಲ್ಲಾ ಗ್ಯಾಲಕ್ಸಿಗಳ ಕೇಂದ್ರಗಳಿಗೆ ಸಾಮಾನ್ಯವಾಗಿವೆಯೆಂದು ಹಬಲ್‍ನ ಪರಿವೀಕ್ಷಣೆಗಳು ಕಂಡುಹಿಡಿದವು.ಖಗೋಳಶಾಸ್ತ್ರಜ್ಞರು ,ದೂರದ ಸೂಪರ್ನೋವಾವನ್ನು ವೀಕ್ಷಿಸಲು ಟೆಲಿಸ್ಕೋಪನ್ನು ಉಪಯೋಗಿಸಿದರು.
ಹಬಲ್ನ ಇತಿಹಾಸ
[ಬದಲಾಯಿಸಿ]ಬಾಹ್ಯಾಕಾಶ ದೂರದರ್ಶಕಗಳನ್ನು ೧೯೨೩ರಲ್ಲಿ ಪ್ರಸ್ತಾಪಿಸಲಾಯಿತು.ಆದರೆ ೧೯೭೦ ರ ದಶಕದಲ್ಲಿ ಹಬಲ್‍ಗೆ ಬಂಡವಾಳ ಹೂಡಲಾಯಿತು.೧೯೮೩ ರಲ್ಲಿ ಪ್ರಸ್ತಾವಿತ ಉಡಾವಣೆಯೊಂದಿಗೆ ಈ ಯೋಜನೆಯನ್ನು ತಾಂತ್ರಿಕ ವಿಳಂಬಗಳು,ಬಜೆಟ್ ಸಮಸ್ಯೆಗಳು ಮತ್ತು ಚ್ಯಾಲೆಂಜರ್ ಡಿಸಾಸ್ಟರ್(೧೯೮೬) ಮುಂತಾದವುಗಳಿಗೆ ಒಳಪಡಿಸಲಾಯಿತು.ಅಂತಿಮವಾಗಿ ೧೯೯೦ ರಲ್ಲಿ ಬಿಡುಗಡೆಯಾದಾಗ ದೂರದರ್ಶಕದ ಸಾಮರ್ಥ್ಯಗಳನ್ನು ರಾಜಿ ಮಾಡುವ ಸಂದರ್ಭದಲ್ಲಿ,ಮುಖ್ಯ ದರ್ಪಣವು ನೆಲದ ಕಡೆಗೆ ತಪ್ಪಾಗಿ ತಿರುಗಿಸಲ್ಪಟ್ಟಿರುವುದಾಗಿ. ವಿಜ್ಞಾನಿಗೆ ಕಂಡುಬಂದಿತು.೧೯೯೩ ರಲ್ಲಿ ಸೇವಾ ಸಂಸ್ಥೆಯು ದರ್ಪಣವನ್ನು ಸರಿಪಡಿಸಿತು. ನಂತರ ದೂರದರ್ಶಕವು ತನ್ನ ಉದ್ದೇಶಿತ ಗುಣಮಟ್ಟವನ್ನು ತಲುಪಿತು.೧೯೯೩ ರಿಂದ ೨೦೦೨ ರವರೆಗೆ ನಾಲ್ಕು ಸೇವಾ ಸಂಸ್ಥೆಗಳು ಸ್ಥಾಪಿಸಲ್ಪಟ್ಟವು.ಆದರೆ ಐದನೆಯ ಸೇವಾ ಸಂಸ್ಥೆಯು ೨೦೦೯ ರಲ್ಲಿ ಪೂರ್ಣಗೊಂಡಿತು.ದೂರದರ್ಶಕವು ಕಡೇಪಕ್ಷ ೨೦೧೪ ರವರೆಗೆ ಕಾರ್ಯನಿರ್ವಹಿಸಬಹುದು ಎಂದು ನಿರೀಕ್ಷಸಲಾಯಿತು.೧೯೯೦ ರಲ್ಲಿ ಸ್ಪೇಸ್ ಶಟ್ಟಲ್ ಡಿಸ್ಕವರಿ ಯಿಂದ ಪ್ರಾರಂಭಿಸಲಾದ ನಂತರ ಐದು ತರುವಾಯ ಬಾಹ್ಯಾಕಾಶ ನೌಕೆಗಳು, ಪ್ರೋಗ್ರಾಂಗಳಿಂದ ದುರಸ್ತಿ ಮತ್ತು ಅಪ್ಗ್ರೇಡ್ ಮಾಡಲ್ಪಟ್ಟವು.ಮತ್ತು ಇವುಗಳ ವ್ಯವಸ್ಥೆಗಳನ್ನು ಬದಲಾಯಿಸಲಾಯಿತು. ಮೊದಲಾಗಿ ಕೊಲಂಬಿಯಾ ದುರಂತದ(೨೦೦೩) ನಂತರ ಸುರಕ್ಷತಾ ಮೈದಾನದಲ್ಲಿ ಐದನೇ ಮಿಶನ್ನನ್ನು ರದ್ದುಗೊಳಿಸಲಾಯಿತು.ಆದರೆ ಉತ್ಸಾಹಭರಿತ ಸಾರ್ವಜನಿಕ ಚರ್ಚೆಯ ನಂತರ,ನಾಸಾ ನಿರ್ವಾಹಕರಾದ ಮೈಕ್ ಗ್ರಿಫಿನ್ರವರು ಐದನೇ ಸೇವಾ ಸಂಸ್ಥೆಗೆ ಅನುಮೋದನೆಯನ್ನು ನೀಡಿದರು.ದೂರದರ್ಶಕವು ೨೦೩೦-೨೦೪೦ ರವರೆಗೆ ಕಾರ್ಯನಿರ್ವಹಿಸಬಹುದು.ಇದರ ವೈಜ್ಞಾನಿಕ ಉತ್ತರಾಧಿಕಾರಿಯಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್(ಜೆ.ಡಬ್ಲ್ಯೂ.ಎಸ್.ಟಿ) ನ್ನು ೨೦೧೯ ರಲ್ಲಿ ಪ್ರಾರಂಭಿಸಲು ಯೋಜನೆ ಮಾಡಲಾಗಿದೆ.
ಸಾರ್ವಜನಿಕ ಬಳಿಕೆ
[ಬದಲಾಯಿಸಿ]ರಾಷ್ಟೀಯತೆ ಅಥವಾ ಶೈಕ್ಷಣಿಕ ಸಹಯೋಗಗಳಿಗೆ ಯಾವುದೇ ನಿರ್ಬಂಧಗಳಿಲ್ಲ,ಯಾರು ಬೇಕಾದರೂ ದೂರದರ್ಶಕದ ಸಮಯಕ್ಕೆ ಅರ್ಜಿ ಸಲ್ಲಿಸಬಹುದು.ಆದರೆ ವಿಶ್ಲೇಷಣೆಯ ಹಣವು ಯು.ಎಸ್ ಸಂಸ್ಥೆಗಳಿಗೆ ಮಾತ್ರ ಲಭಿಸುತ್ತದೆ.ದೂರದರ್ಶಕದ ಸಮಯಕ್ಕೆ ಸ್ಫರ್ಧೆಯು ತೀರ ತೀವ್ರವಾಗಿರುತ್ತದೆ,ಅಂದರೆ ವೇಳಪಟ್ಟಿಯ ಪ್ರತಿ ಚಕ್ರದ ಆದಾಯದ ಸಮಯದಲ್ಲಿ ಸಲ್ಲಿಸಿದ ಪ್ರಸ್ತಾವನೆಗಳ ಐದನೇ ಒಂದು ಭಾಗವಾಗಿರುತ್ತದೆ. ಪ್ರಸ್ತಾವನೆಗಳ ಕರೆಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.ಒಂದು ವರ್ಷಕ್ಕೆ ಒಂದು ಲಯ(ಚಕ್ರ)ದ ಸಮಯವನ್ನು ಹಂಚಲಾಗುತ್ತದೆ. ಪ್ರಸ್ಥಾವನೆಗಳನ್ನು ಹಲವಾರು ವರ್ಗಗಳಾಗಿ ವಿಂಗಡಿಸಲಾಗಿದೆ."ಸಾಮಾನ್ಯ ವೀಕ್ಷಕ" ಪ್ರಸ್ಥಾವನೆಗಳು ಸಾಮಾನ್ಯವಾದವುಗಳಾಗಿವೆ.ಇವು ದಿನನಿತ್ಯದ ವೀಕ್ಷಣೆಗಳನ್ನು ಒಳಗೊಂಡಿರುತ್ತವೆ.ಸ್ನಾಪ್‍ಚಾಟ್ ವೀಕ್ಷಣೆಗಳಲ್ಲಿ ಗುರಿಗಳು ಟೆಲಿಸ್ಕೋಪಿನ ೪೫ ನಿಮಿಷಗಳು ಅಥವಾ ಅದಕ್ಕಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತವೆ.ಸ್ನಾಪ್‍ಚಾಟ್ ವೀಕ್ಷಣೆಗಳು ಗುರಿಗಳನ್ನು ಗಳಿಸುವ ಮೇಲು ವೆಚ್ಚಗಳನ್ನು ಹೊಂದಿರುತ್ತವೆ.ದೂರದರ್ಶಕದ ವೇಳಪಟ್ಟಿಗಳಲ್ಲಿನ ಅಂತರವನ್ನು ನಿಯಮಿತವಾದ "ಗೋ" ಯೋಜನೆಯಿಂದ ಭರ್ತಿಮಾಡಲು ಸಾಧ್ಯವಿಲ್ಲ ಆದ್ದರಿಂದ ಸ್ನಾಪ್‍ಚಾಟ್ ವೀಕ್ಷಣೆಗಳನ್ನು ಬಳಸಲಾಗುತ್ತದೆ. ಖಗೋಳಶಾಸ್ತ್ರಜ್ಞರು "ಟಾರ್ಗೆಟ್ ಆಫ್ ಆಪರ್ಚುನಿಟಿ" ಎಂಬ ಪ್ರಸ್ತಾಪಗಳನ್ನು ಮಾಡಬಹುದು.ವೇಳಾಪಟ್ಟಿಯ ಲಯದಲ್ಲಿ ಪ್ರಸ್ಥಾವನೆಯಿಂದ ಉಂಟಾಗುವ ಅಸ್ಥಿರವಾದ ಘಟನೆಯು ಕಂಡುಬಂದರೆ ವೀಕ್ಷಣೆಗಳು ನಿಗದಿಯಾಗುತ್ತವೆ.ಇದರ ಜೊತೆಯಲ್ಲಿ,ದೂರದರ್ಶಕದ ಸಮಯದ ಶೇಕಡ ೧೦% ವರೆಗೆ "ನಿರ್ದೇಶಕರ ವಿವೇಚನೆ(ಡಿಡಿ)" ಯ ಸಮಯವನ್ನು ಗೊತ್ತುಪಡಿಸಲಾಗುತ್ತದೆ.ಖಗೋಳಶಾಸ್ತ್ರಜ್ಞರು ವರ್ಷದ ಯಾವುದೇ ಸಮಯದಲ್ಲಿ ಡಿಡಿ ಸಮಯವನ್ನು ಬಳಸಲು ಅರ್ಜಿ ಸಲ್ಲಿಸಬಹುದು ಮತ್ತು ಸೂಪರ್ನೋವಾಗಳಂತಹ ಅನಿರೀಕ್ಷಿತ ಅಸ್ಥಿರ ವಿದ್ಯಮಾನಗಳ ಅಧ್ಯಯನಕ್ಕಾಗಿ ಡಿಡಿ ಸಮಯವನ್ನು ವಿಶಿಷ್ಟವಾಗಿ ನೀಡಲಾಗುತ್ತದೆ.
ಡಿಡಿ ಸಮಯದ ಇತರ ಉಪಯೋಗಗಳೆಂದರೆ,ಇದು ಹಬಲ್ ಡೀಪ್ ಫೀಲ್ಡ್ ಮತ್ತು ಹಬಲ್ ಅಲ್ಟ್ರಾ ಡೀಪ್ ಫೀಲ್ಡ್ ನ ವೀಕ್ಷಣೆಗಳನ್ನು ಒಳಗೊಂಡಿದೆ.ಮತ್ತು ಟೆಲಿಸ್ಕೋಪ್ ಸಮಯದ ಮೊದಲ ನಾಲ್ಕು ಚಕ್ರಗಳಲ್ಲಿ,ಹವ್ಯಾಸಿ ಖಗೋಳಶಾಸ್ತ್ರಜ್ಞರು ನಡೆಸಿದ ವೀಕ್ಷಣೆಗಳನ್ನು ಒಳಗೊಂಡಿದೆ.ದಾಖಲೆಗಳಲ್ಲಿನ ಬಹು ಮಾಹಿತಿಯು ವರ್ಣ ಚಿತ್ರಣವಾಗಿ ಸಂಸ್ಕರಿಸಲ್ಪಟ್ಟಿಲ್ಲವಾದ್ದರಿಂದ ಹಬಲ್ ದತ್ತಾಂಶವನ್ನು ಸಾರ್ವಜನಿಕ ಚಿತ್ರಣ ಪ್ರಕ್ರಿಯೆಗೆ ಪ್ರೋತ್ಸಾಹಿಸಲಾಗುತ್ತದೆ.