ಸದಸ್ಯ:Neha khanum/ನನ್ನ ಪ್ರಯೋಗಪುಟ
[[
]] ಭಾರತೀಯ ಮಹಾಕಾವ್ಯ ಭಾರತೀಯ ಉಪಖಂಡದಲ್ಲಿ ಬರೆಯಲಾದ ಮಹಾಕಾವ್ಯ. ಮೂಲತಃ ಸಂಸ್ಕೃತದಲ್ಲಿ ರಚಿತವಾದ, ಮತ್ತು ನಂತರ ಅನೇಕ ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡ ರಾಮಾಯಣ ಮತ್ತು ಮಹಾಭಾರತ ಭೂಮಿಯ ಮೇಲಿನ ಅತ್ಯಂತ ಹಳೆಯ ಅಸ್ತಿತ್ವದಲ್ಲಿರುವ ಮಹಾಕಾವ್ಯಗಳ ಪೈಕಿ ಕೆಲವು ಮತ್ತು ಇತಿಹಾಸದ ಭಾಗವಾಗಿವೆ. ನಿಶ್ಚಯವಾಗಿ, ಮಹಾಕಾವ್ಯ ರೂಪವು ಪ್ರಚಲಿತವಾಯಿತು ಮತ್ತು ಪದ್ಯ ಬಹಳ ಇತ್ತೀಚಿನವರೆಗೆ ಹಿಂದೂ ಸಾಹಿತ್ಯಕ ಕೃತಿಗಳ ಆದ್ಯತೆಯ ರೂಪವಾಗಿ ಉಳಿಯಿತು.
ಸಂಸ್ಕೃತ ಸಾಹಿತ್ಯ: ಸಂಸ್ಕೃತ ಸಾಹಿತ್ಯ ವೇದಗಳನ್ನು ಒಳಗೊಂಡಿದೆ.ಸಂಸ್ಕೃತ ಭಾಷೆಯು ಅಧುನಿಕ ಭಾರತೀಯ ಭಾಷೆಗಳ ಮೇಲೆ ಅತ್ಯಂತ ಪ್ರಭಾವ ಬೀರಿದೆ ಮತ್ತು ಸಂಸ್ಕೃತ ಸಾಹಿತ್ಯವು ಭಾರತೀಯ ಸಂಸ್ಕೃತಿಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ.ಸಂಸ್ಕೃತ ಸಾಹಿತ್ಯವು ಎರಡು ಮಹಾನ್ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಒಳಗೊಂಡಿದೆ. ರಾಮಾಯಣ: ರಾಮಾಯಣ ಮಹಾಕಾವ್ಯವನ್ನು ಹಿಂದು ಋಷಿಯದ ವಾಲ್ಮೀಕಿಯವರಿಗೆ ಅವಲಂಬಿಸಲಾಗಿದೆ ಮತ್ತು ಇವರನ್ನು "ಆದಿಕವಿ" ಅಥವಾ "ಮೊದಲ ಕವಿ" ಎಂದು ಕರೆಯುತ್ತಾರೆ.ರಾಮಯಣ ಹಿಂದುಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು.ರಾಮಯಣದ ಕಥೆಯು ಮುಖ್ಯವಾಗಿ ಆಯೋಧ್ಯೆಯ ಸೂರ್ಯವಂಶದ ರಾಜಪುತ್ರ ರಾಮ,ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರದ ಕುರಿತಾಗಿದೆ.ವಾಲ್ಮೀಕಿಯಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶ ರಿಂದ ಪ್ರಚಲಿತವಾಯಿತು.ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಾಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ.ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಪೂರ್ತಿಯಾಯಿತು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮ ಒಂದು ಭಾಗವೇ ಆಗಿದೆ.ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ,ರಾಮ ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ವಾಲ್ಮೀಕಿ ರಾಮಾಯಣವನ್ನು ರಾಮನ ಜನ್ಮದಿಂದ ಹಿಡಿದು ಅವನ ಅವತಾರ ಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳುಕಾಂಡಗಳಾಗಿ ವಿಭಜಿಸಲಾಗಿದೆ. ಬಾಲ್ಯಾಕಾಂಡ,ಅಯೋಧ್ಯಾಕಾಂಡ,ಅರಣ್ಯಕಾಂಡ,ಕಿಷ್ಕಿಂಧಾಕಾಂಡ,ಸುಂದರಕಾಂಡ,ಯುದ್ದಕಾಂಡ,ಉತ್ತರಕಾಂಡ.
ವಾಲ್ಮೀಕಿಯು ತನ್ನ ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ.ವೇದದಲ್ಲಿ ಉಕ್ತವಾದದ್ದೇ ಧರ್ಮ,ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ,ನಷ್ತಗಳಿಗಾಗಿ ಅಲ್ಲ ಎಂಬುದು ಅವನ ಅಭಿಪ್ರಾಯ.ಧರ್ಮಪಾಲನೆಯಿಂದ ಇಹಲೋಕದಲ್ಲೂ ಪರಲೋಕದಲ್ಲೂ ವ್ಯಕ್ತಿಯ ಕಲ್ಯಾಣವಾಗುವುದು.ಅಷ್ಟೇ ಅಲ್ಲದೆ,ಯಾವುದೇ ಮಾತು ಕೊಡುವ ಮೊದಲೇ ಪರಿಣಾಮಗಳನ್ನು ಕುರಿತು ಯೋಚಿಸಬೇಕು ಮತ್ತು ಒಮ್ಮೆ ಮಾತು ಕೊಟ್ಟ ಮೇಲೆ ಎಷ್ಟೇ ಕಷ್ಟವಾಗಲಿ ಅದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಯಣವು ಒತ್ತು ಕೊಡುತ್ತದೆ.ವಾಲ್ಮೀಕಿಯು ರಾಮನನ್ನು ತನ್ನ ಕಥೆಯಲ್ಲಿ ಒಬ್ಬ ಅತಿಮಾನವ ಎಂದು ಚಿತ್ರಿಸದೆ,ಎಲ್ಲಗುಣ ದೋಷಗಳಿಂದ ಕೂಡಿ,ನೈತಿಕ ಸಂದಿಗ್ದಗಳನ್ನೆದುರಿಸಿ ಅವುಗಳನ್ನು ಧರ್ಮವನ್ನು ಅನುಸರಿಸುವುದರಿಂದ ಗೆದ್ದ ಒಬ್ಬ ಸಹಜ ಮಾನವನನ್ನಾಗಿ ಚಿತ್ರಿಸಿದ್ದಾನೆ.
ಮಹಾಭಾರತ:
ಮಹಾಭಾರತ ವಿಶಾಲವಾದ ತತ್ವಶಾಸ್ತ್ರವನ್ನು ಒಳಗೊಂಡ ಗ್ರಂಥ.ಕೆಲವರು ಇದನ್ನು "ಐದನೆಯ ವೇದ " ಎಂದೇ ಕರೆದಿದ್ದಾರೆ.ಮಹಾಭಾರತದ ತಾತ್ವಿಕ ಬೇರುಗಳು ಇರುವುದು ವೈದಿಕ ತತ್ವಶಾಸ್ತ್ರದಲ್ಲಿ.ಮಹಾಭಾರತದ ಒಂದು ಶ್ಲೋಕ ಹೇಳುವಂತೆ,ಅದರ ಮುಖ್ಯ ಗುರಿ ನಾಲ್ಕು ಪುರುಷಾರ್ಥಗಳನ್ನು ತಿಳಿಸಿಕೊಡುವುದು: ಅರ್ಥ,ಕಾಮ,ಧರ್ಮ ಮತ್ತು ಮೋಕ್ಷ. ವೇದಾಂತ,ಸಾಂಖ್ಯ,ಯೋಗ,ಪಂಚರಾತ್ರ,ಮೊದಲಾದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡ ಮಹಾಭಾರತ ಭಾರತೀಯ ತತ್ವಶಾಸ್ತ್ರದ ಮುಖ್ಯ ಆಕಾರಗಳಲ್ಲಿ ಒಂದು ಹೌದು.ಮಹಾಭಾರತದಲ್ಲಿ ಆಧ್ಯಾತ್ಮಿಕ ತತ್ವಶಾಸ್ತ್ರವಲ್ಲದೇ ಸಮಾಜಶಾಸ್ತ್ರ,ಅರ್ಥಶಾಸ್ತ್ರ,ರಾಜನೀತಿ,ಯುದ್ಧನೀತಿ,ಖಗೋಳಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆಯೂ ಬಹಳಷ್ಟು ಮಾಹಿತಿಯುಂಟು,
ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ,ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಯುದ್ದದಲ್ಲಿ ನಿರ್ಧಾರವಾಗುತ್ತದೆ.ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ ಆರಂಭವಾಗಿ,ಕೃಷ್ಣನ ಅವಸಾನ,ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ.ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ.ವ್ಯವಸ್ಥೆಯ ದೃಷ್ಟಿಯಿಂದ ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.
ಮಹಾಭಾರತದಲ್ಲಿ ಬರುವ ಮುಖ್ಯ ಪಾತ್ರಗಳೆಂದರೆ ಭೀಷ್ಮ,ಕೃಷ್ಣ,ಪಾಂಡವರು,ದ್ರೌಪದಿ,ಕೌರವರು,ಕರ್ಣ. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಭಗವದ್ಗೀತೆ ಹಿಂದೂ ಚಿಂತನೆ ಮತ್ತು ವೈದಿಕ,ಆಧ್ಯಾತ್ಮಿಕ,ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು.ನಾಲ್ಕು ಯೋಗಮಾರ್ಗಗಳಾದ ಭಕ್ತಿ,ಧ್ಯಾನ,ಜ್ಞಾನ ಮತ್ತು ಕರ್ಮ,ಮಾರ್ಗಗಳನ್ನು ಶ್ರೀ ಕೃಷ್ಣ ಅರ್ಜುನನಿಗೆ ತಿಳಿಸುತ್ತಾನೆ.