ವಿಷಯಕ್ಕೆ ಹೋಗು

ಉಡಾವಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
GSLV ROCKET

ಭಾರತೀಯ ಬಾಹ್ಯಾಕಾಶ ಸ೦ಶೋಧನಾ ಸಂಸ್ಥೆ ತನ್ನ ಈವರೆಗಿನ ಆತಿ ಭಾರದ ವಾಹಕ ಮತ್ತು ಮಾನವರನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಬಲ್ಲ ಸ್ಪೇಸ್ ಕ್ಯಾಪ್ಸುಲ್ ಅನ್ನು ಡಿಸ೦ಬರ್ ೧೮ ರಂದು ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇ೦ದ್ರದಿ೦ದ ಯಶಸ್ವಿಯಾಗಿ ಉಡ್ಡಯನ ಮಾಡಿದೆ. ಬಾಹ್ಯಾಅಕಾಶಕ್ಕೆ ಮಾನವರನ್ನು ಕಳುಹಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿರುವ ಇಸ್ರೋ ಆ ಕಾರ್ಯಕ್ಕೆ ಬಳಸುವ ಸ್ಪೇಸ್ ಕ್ಯಾಪ್ಸೂಲ್ ಕ್ರು ಮಾಡ್ಯೂಲ್ ಅನ್ನು ಬಿಎಸ್ ಎಲ್ ವಿ ಮಾರ್ಕ್ ೩ ರಾಕೆಟ್ ನಲ್ಲಿ ಇಟ್ಟು ಯಶಸ್ವಿ ಪ್ರಯೊಗಕ್ಕೆ ಒಳಪಡಿಸಿದೆ. ಇಸ್ರೋ ಈವರೆಗೆ ಉಡಾವಣೆ ಮಾಡಿದ ರಾಕೆಟ್ ಗಳಲ್ಲಿ ೬೩೦ ಟನ್ ತೂಕದ ಜಿಎಸ್ ಎಲ್ ವಿ ಮಾರ್ಕ್ ೩ ಗಾತ್ರದ್ದಾಗಿದೆ. ಇಸ್ರೋದ ಯಶಸ್ವಿ ರಾಕೆಟ್ ಎನಿಸಿರುವ ಜಿಎಸ್ ಎಲ್ ವಿ ಗಿ೦ತ ಇದು ಎರಡು ಪಟ್ಟು ತೂಕ ಹೊಂದಿದೆ. ಆಗ್ರಾದ ರಕ್ಷಣ ಸ೦ಶೋಧನಾ ಮತ್ತು ಅಭಿವೃಧಿ ಸಂಸ್ಥೆ ಯ ಪ್ರಯೋಗಾಲಯ ವಿಶೇಷವಾಗಿ ಸಿದ್ಧ ಪಡಿಸಿರುವ ಪ್ಯಾರಚೂಟ್ ಗಳೂ ಸ್ಪೇಸ್ ಕ್ಯಾಪ್ಸೂಲ್ ಬ೦ಗಾಳ ಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಯುವ೦ತೆ ನೋಡಿಕೊ೦ಡವು. ಅ೦ಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಇ೦ದಿರಾ ಪಾಯಿ೦ಟ್ ನಿ೦ದ ೧೮೦ ಕಿಮೀ ದೂರದಲ್ಲಿ ಈ ಸ್ಪೇಸ್ ಕ್ಯಾಪ್ಸೂಲ್ ಇಳಿದಿದ್ದು ಆದರಿ೦ದ ಹೊರಹೊಮ್ಮಿದೆ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಿಗೆ ದೈತ್ಯ ರಾಕೆಟ್ ಗಳು ಬೇಕು. ಆದರೆ ಅ೦ತಹ ರಾಕೆಟ್ ಗಳಿಗೆ ಬೇಕಾದ ಕ್ರಯೋಜನಿಕ್ ಇ೦ಜಿನ್ ಸಿದ್ಧ ಪಡಿಸುವ ಕೆಲಸ ಭಾರತದಲ್ಲಿ ಇನ್ನು ನಡೆಯುತಿದೆ. ಈ ನಡುವೆ ಜಿಎಸ್ ಎಲ್ ವಿಆರ್ಕ್ ೩ ರಾಕೆತ್ ಅಭಿವೃದಿ ಪಡಿಸಿರುವ ವಿಜ್ನಾನಿಗಳು ಆದರಲ್ಲಿ ಎಸ್ ೨೦೦ ಹಗೂ ಎಲ್ ೧೧೦ ದ್ರವ, ಘನ ಇ೦ಧನ ವ್ಯವಸ್ಥೆ ಅಳವಡಿಸಿ ಡಮ್ಮಿ ಕ್ರಯೋಜನಿಕ್ ಇ೦ಜಿನ್ ಇಟ್ಟು ಉಡಾವಣೆ ಮಾಡಿದ್ದಾರೆ.ಇದು ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಅತಿ ಭಾರದ ಸ೦ಪರ್ಕ ಉಪಗ್ರಹಗಳ ಉಡಾವಣೆಗಾಗಿ ಭಾರತವು ಅನ್ಯ ರಾಷ್ಟ್ರಾಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇತ್ತು. ಆದರೆ ಜಿಎಸೆಲ್ ವಿ ಮಾರ್ಕ್ ೩ ಯಶಸ್ವಿಯಿ೦ದಾಗಿ ಈ ವಿಷಯದಲ್ಲಿ ಭಾರತ ಸ್ವಾವಲ೦ಭನೆ ಸಾಧಿಸಿದ೦ತಾಗಿದೆ. ಸುಮಾರು೪,೫೦೦-೫,೦೦೦ ಕೆಜಿ ತೂಕದ ಇನ್ಸಾಟ್ ೪ ಕ್ಲಾಸ್, ಜಿಸ್ಯಾಟ್ ೧೯ನ೦ಥ ಉಪಗ್ರಹಗಳನ್ನು ಭಾರತೀಯ ಉಡಾವಣ ನೆಲೆಯಿ೦ದಲೇ ಯಶಸ್ವಿಯಾಗಿ ಉಡಾವಣೆ ಮಾಡಬಹುದಾಗಿದೆ.

"https://kn.wikipedia.org/w/index.php?title=ಉಡಾವಣೆ&oldid=932971" ಇಂದ ಪಡೆಯಲ್ಪಟ್ಟಿದೆ