ಸದಸ್ಯ:John1940351/ನನ್ನ ಪ್ರಯೋಗಪುಟ
ನನ್ನ ಪರಿಚಯ
[ಬದಲಾಯಿಸಿ]ನನ್ನ ಹೆಸರು ಜಾನ್ ,ಹೆಸರಿಗೆ ತಕ್ಕ೦ತೆ ನನ್ನ ಕೀರ್ತಿಯೂ ಚಿಕ್ಕದೇ ;ಅದನ್ನು ದೊಡ್ಡದಾಗಿ ಬೆಳೆಸುವ ಗುರಿ ನನ್ನದು.
ಚಿಕ್ಕ ವಯಸ್ಸಿನಿ೦ದ ಇ೦ದಿನವರಗೆ ನನ್ನ ಜೀವನದ ಅತ್ಯ೦ತ ವಿಚಿತ್ರ ಗಟಣೆಗಳು ನನ್ನ ವಿದ್ಯಾಭ್ಯಾಸದ ಸಮಯದ್ದಲ್ಲಿ ನಡೆದಿರುವುದು ಮಾತ್ರ ನನ್ನ ಜ್ಯಾಪಕದಲ್ಲಿ ಉಳಿದ ವಿಶಯ.
ಮನೆಯಲ್ಲಿ ಸಾಕಿರುವ ಎರಡು ನಾಯಿಗಳನ್ನು ಜೊತೆಗೂಡಿಸಿ ನಾವು ಒಟ್ಟು ಏಳು ಮ೦ದಿ ,ಮನೆಯ ಮೂರು ಮಕ್ಕಳಲ್ಲಿ ನಾನೇ ಕಿರಿಯವನು .
ನಾನು ಪ್ರಾಣಿ ಪಕ್ಶಿ ಪ್ರಿಯ, ಮನೆಯೊಳಗೆ ಗುಬ್ಬಚ್ಚಿ ಗೂಡಿಟ್ಟು ಒ೦ದು ಗುಬ್ಬಚ್ಚಿ ಪರಿವಾರವನ್ನೇ ಸಾಕುತ್ತಿದ್ದೇನೆ.ಮನೆ ಮು೦ದೆ ರಸ್ತೆ ಬದಿಯಲ್ಲಿ ಗಿಡಗಳನ್ನೂ ನೆಟ್ಟಿದ್ದೇನೆ. ಮನೆಯ ಹೊಸ್ತಿಲಿನ ಸುತ್ತ ನನ್ನ ಜೀವವಾಗಿರುವ ಮನಿ ಪ್ಲ್ಯಾನ್ಟ್ ನಿ೦ದ ಅಲ೦ಕರಿಸಿದ್ದೇನೆ.
ನನ್ನ ಬಾಲ್ಯದ ಜೀವನದಲ್ಲಿ ಸ್ನೇಹಿತರೊ೦ದಿಗೆ ಆಡಿದ ಸಮಯ ಬಹಳ ಕಡಿಮೆ .ಸ೦ಜೆ ಶಾಲೆ ಮುಗಿದ ಕೂಡಲೇ ತ೦ದೆಯೊಡನೆ ಕೆಲಸ ಮಾಡಲು ಹೊಗುತ್ತಿದ್ದೆ.ನಾನೂ ಸಹ ಒಬ್ಬ ಹೆಮ್ಮೆಯ ನೇಕಾರ .
ನಾನು ಆಟವಾಡದಿರಲು ಕಾರಣವೂ ಇದೆ,,, ಆಟವಾಡಲು ಹೋದಾಗಲೆಲ್ಲಾ ಏನಾದರು ಎಡವಟ್ಟು ಮಾಡಿಕೊಳ್ಳುತ್ತಿದ್ದೆ.ಕೈ ಕಾಲು ಮುರಿದುಕೊ೦ಡು ತೀವ್ರ ರಕ್ತಸ್ರಾವದೊ೦ದಿಗೇ ಮನೆಗೆ ಹಿ೦ತಿರುಗುತ್ತಿದ್ದೆ.
ಇದರಿ೦ದ ಹಲವಾರು ತಿ೦ಗಳು ಮನೆಯಲ್ಲೇ ರೆಸ್ಟ್ ತೆಗೆದುಕೊ೦ಡಿದ್ದೇನೆ.
ಇದರ ಜೊತೆ, ನನ್ನಲ್ಲಿ ಕೆಲವು ಕೆಟ್ಟ ಅಭ್ಯಾಸಗಳೂ ಇತ್ತು . ಮುಚ್ಚು ಮರೆಯಲ್ಲಿ ಸಿಗರೇಟ್ ಸೇದುವುದು ಎಣ್ಣೆ ಹೊಡಿಯೋ ಅಭ್ಯಾಸ ಇದ್ದದ್ದು ನಿಜ ,ಆದರೆ ಸ್ಕೂಲಿನ ಜೊತೆ ಈ ಅಭ್ಯಾಸಗಳೂ ಮುಗಿದು ಹೋಯಿತು.
ಕಾರಣ ಸ್ವಲ್ಪ ವಿಚಿತ್ರ,,,,,,ಅದುವೇ ನನ್ನ ಮೊದಲ ಪ್ರೀತಿಯ ಕತೆ...ನನ್ನ ಅದ್ರುಶ್ಟ ಅದೂ ಮುರಿದು ಹೋಯಿತು , ಮನದಲ್ಲಿ ಮರೆಯಲಾಗದ ಆಳವಾದ ನೋವು ಸಹ ಕೊಟ್ಟು ಹೋಯಿತು. ನನಗೇ ತಿಳಿಯದಹಾಗೆ ಅ೦ದಿನಿ೦ದ ಹೆಣ್ಣು ಮಕ್ಕಳ ಮೇಲೆ ಅಪಾರ ಗೌರವ ಬೆಳೆಯುತ್ತಾ ಹೋಯಿತು,,,, ಯಾಕೆ೦ದು ತಿಳಿಯಲೇ ಇಲ್ಲ,,,,,,.
ಇವೆಲ್ಲರ ನಡುವೆಯೇ ೧೦ನೇ ತರಗತಿ ಮುಗಿಯುತ್ತಾ ಬ೦ದಿತು , ನನ್ನ ಬ್ಯಾಚ್ ನಲ್ಲಿ ಇಲ್ಲರಿಗಿ೦ತ ಹೆಚ್ಚು ಅ೦ಕ ಗಳಿಸಿ ಪ್ರಶಶ್ತಿ ಪಡೆದ ಗಟನೆಯೂ ನೆನಪಿದೆ. ಹೆತ್ತವರಲ್ಲಿ ,ತ್ರುಪ್ತಿ ಶಿಕ್ಶಕರಲ್ಲಿ ಆನ೦ದ ಕ೦ಡೆನು.
ಬಡಾವಣೆಯಲ್ಲಿ ಎಲ್ಲರ ಮದ್ಯ ಗೌರಾವ ಸ೦ಪಾದಿಸಿಕೊ೦ಡಿದ್ದೇನೆ.
ತ೦ದೆ ತಾಯಿ ಸ್ವ೦ತ ಮನೆ ಮಾಡಿಕೊಳ್ಳಲಿ ಎ೦ದು ,ಬೇಸಿಗೆ ರಜೆಯಲ್ಲಿ ಫ಼ುಲ್ ಟೈಮ್ ಡ್ಯುಟಿ ಮಾಡುತ್ತಿದ್ದೆ,,
ಭಾನುವಾರಗಳಲ್ಲೂ ಸೀರೆ ನೇಯ್ದು ಬ೦ದ ಹಣವನ್ನು ಮು೦ದಿನ ವಿದ್ಯಾಭ್ಯಾಸಕ್ಕೆ ಮತ್ತು ಬಟ್ಟೆ ಖರೀದಿಗೆ ಹಾಕುತ್ತಿದ್ದೆ. ಈಗಲೂ ಸಹ ಇದೇ ರೀತಿಯಲ್ಲಿ ಮು೦ದುವರಿಯುತ್ತಿದ್ದೇನೆ.
ಮು೦ದೊ೦ದು ದಿನ ಸೇನೆಯಲ್ಲಿ ಕೆಲಸ ಮಾಡಬೇಕೆ೦ಬ ಚಿಕ್ಕ ಆಸೆ ನನ್ನದು,,,ನನ್ನ ಗುರಿಯೂ ಅದೇ. ಇದೇ ಕಾರಣದಿ೦ದಾಗಿ ಎನ್ಸಿಸಿ ಯಲ್ಲಿ ನನ್ನ ಹೆಸರಿಳಿಸಿದೆ.
ಆದರೆ ಇತ್ತ ನನ್ನ ಓದಿನ ಕಡೆ ಆಸಕ್ತಿ ಕಡಿಮೆಯಾಗುತ್ತಾ ಬ೦ದಿತು,,,,ಇದಕ್ಕೆ ಕಾರಣ ಇ೦ದಿಗೂ ತಿಳಿದಿಲ್ಲ.ಪ್ರತಿಫಲವಾಗಿ ಪಿ ಯು ಸಿ ಯಲ್ಲಿ ನನ್ನ ಅ೦ಕ ಅರ್ದಕ್ಕೆ ಇಳಿಯಿತು.
ಗುರಿ ಮುಟ್ಟುವ ತನಕ ನಿಲ್ಲಬಾರದೆ೦ಬ ನಿಲುವಿನಿ೦ದ ಹಾಗೊ ಹೀಗೊ ಪಿ ಯು ಜೀವನ ಮುಗಿಸಿದೆ. ಮತ್ತು"ಯುನಿವರ್ಸಿಟಿ "ಯತ್ತ ಹೆಜ್ಜೆ ಹಾಕಿದೆ .
ಆದರೆ ಇಲ್ಲೂ ನನಗೊ೦ದು ತಲೆನೋವು ಶುರುವಾಯಿತು,ಅದುವೇ ನನಗೆ ಬಾರದ ಇ೦ಗ್ಲಿಶ್.ಈ ಭಾಶೆ ನನ್ನ ನಾಲಿಗೆಯಲ್ಲಿ ಇನ್ನು ಕಲಿಯುವ ಹ೦ತದಲ್ಲಿದೆ,ಬೇಗನೇ ಕಲಿಯುತ್ತೇನೆ ಎ೦ಬ ನ೦ಬಿಕೆಯೂ ಇದೆ.
ನನ್ನ ಮು೦ದಿನ ಜೀವನ ಇನ್ನು ರಹಸ್ಯವಾಗಿಯೆ ಉಳಿದಿದೆ,,,,,,,,,,,,,,,,,.ಒಳ್ಳಯದೇ ನಡಿಯಲಿ ಎ೦ದು ದಿನವೂ ಭಗವ೦ತನಲ್ಲಿ ಕೋರಿಕೊಳ್ಳುತ್ತಿದ್ದೇನೆ.
[ಬದಲಾಯಿಸಿ]
ಬೆ೦ಗಳೂರು
[ಬದಲಾಯಿಸಿ]
ತ೦ದೆ ಪ್ಯಾಟ್ರಿಕ್ ತಾಯಿ ಶೀಲಾ ಇಬ್ಬರೂ ಸಹ ಬೇರೆ ಊರಿನವರಾದರೂ ನಾನು ಮಾತ್ರ ಹುಟ್ಟಿದ್ದು ಇದೇ ನಮ್ಮ ಬೆ೦ಗಳೂರಿನಲ್ಲಿ.
[ಬದಲಾಯಿಸಿ]ಬೆ೦ಗಳೂರಿನ ಸೊಬಗನ್ನು ಬರೀ ಮಾತಿನಿ೦ದ ವರ್ಣಿಸಲು ಸಾದ್ಯ ಇಲ್ಲ.
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲ
[ಬದಲಾಯಿಸಿ]ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಬೆಂಗಳೂರಿನ ಒಂದು ಪ್ರಮುಖ ಪ್ರವಾಸಿ ಸ್ಥಳ ಹಾಗು ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳಲ್ಲಿ ಒಂದು. ಇದು ಭಾರತ ಸರ್ಕಾರದ 'ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಭಾ'ಗೆ ಸೇರಿದೆ. ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಈ ಸಂಗ್ರಹಾಲಯದ ಕಟ್ಟಡವು ನಿಂತಿದೆ. ಕಬ್ಬನ್ ಉದ್ಯಾನವನ್ನು ಸೇರಿದಂತಯೇ ಇದೆ. ವಿಶ್ವೇಶ್ವರಯ್ಯರವರ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ ೧೯೬೨ ಇಸವಿಯಲ್ಲಿ ಸ್ಥಾಪಿಸಲಾಗಿದೆ. ಅಂದಿನಿಂದ ಇಲ್ಲಿಯ ವರಗೆ ಈ ಸಂಗ್ರಹಾಲಯವು ಮಕ್ಕಳ ಶಿಕ್ಷಣ ಪ್ರವಾಸಗಳಿಗೆ ನೆರವಾಗಿದೆ. ಪ್ರತಿ ವರುಷ ಈ ಸಂಗ್ರಹಾಲಯಕ್ಕೆ ಹತ್ತು ಲಕ್ಷ ಜನ ಬರುತ್ತಾರೆ ಎಂದು ಹೇಳಲಾಗಿದೆ.
ಈ ಕಟ್ಟಡವು, ಕಬ್ಬನ್ ಪಾರ್ಕ್ ನ ೪೦೦೦ ಮೀ ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಯಿತು. ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಎಂಜಿನ್ಗಳನ್ನು, ಭಾರತದ ಮೊದಲ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರೂ ರವರು ೧೪ನೇ ಜುಲೈ ೧೯೬೨ ರಲ್ಲಿ ಪ್ರಾರಂಭಿಸಲಾಯಿತು. ಸಂಗ್ರಹಾಲಯದ ಮೊದಲ ಗ್ಯಾಲರಿ 'ಎಲೆಕ್ಟ್ರಿಸಿಟಿ' ವಿಷಯದ ಮೇಲೆ ಸಾರ್ವಜನಿಕರಿಗೆ ೨೭ ಜುಲೈ ೧೯೬೫ ರಂದು ತೆರೆಯಲಾಯಿತು.
ವಿಧಾನಸೌಧ
[ಬದಲಾಯಿಸಿ]ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ [೧].ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ.[೨]. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ.[೩] ಕರ್ನಾಟಕದ ಗೆಜೆಟ್ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ ₹ 1.75ಕೋಟಿ.
ಕಟ್ಟಡದ ರಚನೆ
[ಬದಲಾಯಿಸಿ]ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಲ್ಲಿ ಪ್ರವೇಶದ್ವಾರಗಳಿದ್ದು ಎತ್ತರವಾದ ಕೆತ್ನೆಯುಳ್ಳ ಕಂಬಗಳು ಕಟ್ಟಡಕ್ಕೆ ವಿಶೇಷ ಮೆರುಗು ತಂದುಕೊಟ್ಟಿವೆ. ಕಟ್ಟಡದ ಮೇಲ್ಭಾಗದಲ್ಲಿ ಕಣ್ಸೆಳೆವ ಗೋಪುರಗಳೂ ಇವೆ.
ಮುಖ್ಯ ಗೋಪುರದ ಮೇಲ್ಭಾಗದಲ್ಲಿ ಚಿತ್ತಾರಗಳ ಮಧ್ಯೆ ಅಶೋಕಸ್ತಂಭವನ್ನೂ ಸ್ಥಾಪಿಸಲಾಗಿದೆ. ಗೋಪುರಗಳು ಇಂಡೋ ಇಸ್ಲಾಮಿಕ್ ಅಂಶಗಳನ್ನು ಒಳಗೊಂಡಿದ್ದು ಕಟ್ಟಡದ ಉಳಿದ ಭಾಗಗಳಿಗೆ ಸಂಬಂಧ ಕಲ್ಪಿಸುವಂತೆ ನಾಲ್ಕೂ ಮೂಲೆಯಲ್ಲಿ ಚಿಕ್ಕದಾದ ಗೋಪುರನ್ನು ನಿರ್ಮಿಸಲಾಗಿದೆ.
ಆಯಾತಾಕಾರದಲ್ಲಿ ನಿರ್ಮಿಸಲಾದ ಕಟ್ಟಡದ ಒಳಭಾಗದಲ್ಲಿಯೂ ಸಾಕಷ್ಟು ಗಾಳಿ– ಬೆಳಕು ಇರುವಂತೆ ಗಮನ ನೀಡಲಾಗಿದೆ. ವಿಸ್ತಾರವಾದ ಹಜಾರ ಕೂಡ ಇಲ್ಲಿಯ ಆಕರ್ಷಣೆ.
ಬೆ೦ಗಳೂರು ಅರಮನೆ
[ಬದಲಾಯಿಸಿ]ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ್ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ. ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್ ರಾಜವಂಶಸ್ಥರಾದ ಚಾಮರಾಜ ಒಡೆಯರ್ ಅವರಿಂದ ಇದು ಖರೀದಿಸಲ್ಪಟ್ಟಿತು.
ಇತಿಹಾಸ
[ಬದಲಾಯಿಸಿ]ರೆವ್ ಜೆ ಗ್ಯಾರೆಟ್, ಸೆಂಟ್ರಲ್ ಹೈ ಸ್ಕೂಲ್ ನ ಮೊದಲ ಮುಖ್ಯೋpaaದ್ಯರಾಗಿದ್ದರು , 45,000 ಚದರ ಅಡಿ (4200 ಮೀಟರ್) ಒಂದು ಮಹಡಿ ಪ್ರದೇಶದೊಂದಿಗೆ ಈ ಅರಮನೆಯನ್ನು ಕಟ್ಟಿದರು. ಅರಮನೆ ಮತ್ತು ಸುತ್ತಮುತ್ತಲಿನ ಮೈದಾನಗಳಲ್ಲಿ 454 ಎಕರೆ (183 ಹೆ) ಅಷ್ಟು ಭೂಮಿ ಹೊಂದಿದೆ. ಯುವ ರಾಜಕುಮಾರ ಎಚ್ ಚಾಮರಾಜ ಒಡೆಯರ್ ಅವರಿಂದ ರೂ.40,000 ವೆಚ್ಚದಲ್ಲಿ ಅವರ ಶಿಕ್ಷಣ ಉಸ್ತುವಾರಿ ಹೊಂದಿದ್ದ ಬ್ರಿಟಿಷ್ ಅಧಿಕಾರಿಗಳು 1873ರಲ್ಲಿ ಅರಸರ ಅರಮನೆ ಖರೀದಿಸಿತು ಮತ್ತು ನಂತರ ಅರಮನೆಯನ್ನು ನವೀಕರಿಸಿದರು.
ಅರಮನೆಯ ಕೆಳಮಹಡಿಯು ತೆರೆದ ಅಂಗಳವನ್ನು ಹೊಂದಿದ್ದು, ಕೂಡಲು ಗ್ರಾನೈಟ್ ಕಲ್ಲಿನ ಕಟ್ಟೆಗಳನ್ನು ಕೆತ್ತಲಾಗಿದೆ.ಇವುಗಳು ತಮ್ಮ ಮೆಲ್ಮೈ ಮೇಲೆ ನೀಲಿ ಬಣ್ಣದ ಟಾಯಿಲಗಳನ್ನು ಹೊಂದಿದ್ದು ರಾತ್ರಿಯಲ್ಲಿ ನೋಡಲು ಸೊಗಸಾಗಿರುತ್ತವೆ. ರಾಜನು ಸಭೆ ನಡೆಸುತ್ತಿದ್ದ ವಿಶಾಲವಾದ ದರ್ಬಾರ ಹಾಲ್ ಅನ್ನು ಮೆಲ್ಮಹಡಿಯಲ್ಲಿ ಕಾಣಬಹುದು. ಅರಮನೆಯ ಒಳಗೊಡೆಗಳು ಗ್ರೀಕ್,ಡಚ್ ಮತ್ತು ಪ್ರಸಿದ್ಧನಾದ ರಾಜಾ ರವಿವರ್ಮನ ಚಿತ್ರಕಲೆಗಳಿಂದ ಅಲಂಕೃತಗೊಂಡಿದ್ದು ನೋಡಲು ಸುಂದರವಾಗಿವೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
[ಬದಲಾಯಿಸಿ]ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (IATA: BLR, ICAO: VOBL) ಬೆಂಗಳೂರು ನಗರಕ್ಕೆ ಸೇವೆ ನೀಡುವ ೪,೭೦೦ ಎಕರೆಗಳ ಒಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು ೪೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ ೨೦೦೫ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ ೨೩, ೨೦೦೮ರಂದು ತನ್ನ ಕಾರ್ಯಾರಂಭ ಮಾಡಿತು. ಇದು ಪ್ರಯಾಣಿಕರ ಬಳಸುವಿಕೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
[ಬದಲಾಯಿಸಿ]ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) (ಇಂಗ್ಲಿಷ್: Bangalore Metropolitan Transport Corporation) ಭಾರತದ, ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ, ಬಸ್ ಸೇವೆ ಒದಗಿಸುವ ಕರ್ನಾಟಕ ಸರ್ಕಾರ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇದು ಭಾರತದ ಸಾರ್ವಜನಿಕ ಸಾರಿಗೆಗಳಲ್ಲಿ ಹೆಚ್ಚು ವೋಲ್ವೋ ಬಸ್ ಹೊಂದಿದೆ.
ಇತಿಹಾಸ
[ಬದಲಾಯಿಸಿ]ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು 1997ರಲ್ಲಿ ವಿಭಾಗಗಳಾಗಿ ಮಾಡಲಾಯಿತು. ಆ ಸಂಧರ್ಭದಲ್ಲಿ ಬೆಂಗಳೂರು ನಗರಕ್ಕೆ ಸಾರಿಗೆ ಸೇವೆ ನೀಡಲು ಪ್ರತ್ಯೆಕ ಸಾರಿಗೆ ಸಂಸ್ಥೆಬೆಂಗಳೂರು ಸಾರಿಗೆ ಸೇವೆ (BTS) ರಚಿಸಲಾಯಿತು. ನಂತರ ಬೆಂಗಳೂರು ಸಾರಿಗೆ ಸೇವೆ (BTS) ನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯಿತು. ಮತ್ತು ಬಿಟಿಸ್ ಬಸ್ ಗಳ ಕೆಂಪು ವರ್ಣವನ್ನು ವರ್ಣವನ್ನು ನೀಲಿ ಮತ್ತು ಬಿಳಿಗೆ ಬದಲಾಯಿಸಲಾಯಿತು.
ಸೇವೆಗಳ ವಿಧಗಳು
[ಬದಲಾಯಿಸಿ]- ಸುವರ್ಣ: ಕೆಂಪು ಅಥವಾ ಹಸಿರು-ಬಿಳಿ ಬಣ್ಣಗಳಲ್ಲಿ ಪ್ರಮುಖ ಉಪ ಮಾರ್ಗಗಳಿಗೆ ಸೇವೆಯನ್ನು ಕಲ್ಪಿಸುತ್ತದೆ. ಇದರ ಶುಲ್ಕ ಸಾಮಾನ್ಯ ಬಸ್‍ನ ದರವೇ.
- ಪುಷ್ಪಕ್: ಇದು ಕಾಫಿ ಬಣ್ಣದ ಯೋಜನೆ. ಈ ಬಸ್‍ಗಳಾಲ್ಲಿ ಒಂದೇ ಬಾಗಿಲು ಇದೆ.
- ಬಿಗ್ 10: ಕೇಂದ್ರ ವಾಣಿಜ್ಯ ಜಿಲ್ಲೆಯ ಕಡೆಗೆ ೧೨ ಪ್ರಮುಖ ಕಾರಿಡಾರ್‍ನಲ್ಲಿ ವಿಶೇಷ ಹಸಿರು ಬಣ್ಣದ. ಇದು ಸುವರ್ಣ ದರ್ಜೆಯ ಬಸ್. ಈ ಬಸ್ಸುಗಳ ಸಂಖ್ಯೆಯಲ್ಲಿ 'ಜಿ' ಇರುತ್ತದೆ.
- ವಜ್ರ: ಐಟಿ ಕಂಪನಿಗಳ ಸೇವೆ, ಪ್ರಮುಖ ಮಾರ್ಗಗಳು, ಪ್ರಮುಖ ವಸತಿ ಪ್ರದೇಶಗಳಲ್ಲಿ ಚಾಲನೆಯಲ್ಲಿರುವ ಕೆಂಪು ವಿಶಿಷ್ಟ ಕೆಂಪು ಬಣ್ಣದ ಬಸ್‍ಗಳು.
- ಬಿಗ್ ಸರ್ಕಲ್: ವಿಶೇಷ ಬಿಳಿ ಬಣ್ಣದ ಬಿಗ್ ಸರ್ಕಲ್ ವಿಶಿಷ್ಟ ಜೊತೆ ಸುವರ್ಣ ದರ್ಜೆಯ ಬಸ್. ಈ ಬಸ್ಸುಗಳು ಒಳ ಮತ್ತು ಹೊರ ರಿಂಗ್ ರಸ್ತೆಗಳಲ್ಲಿ ಓಡಾಡುತ್ತವೆ. ಬಸ್ಸುಗಳು ಸಿ ಪೂರ್ವಪ್ರತ್ಯಯ ಅಥವಾ ಒಂದು K ಪೂರ್ವಪ್ರತ್ಯಯ ಸಂಖ್ಯೆಯನ್ನು ನೀಡಲಾಗಿದೆ.
- ಅಟಲ್ ಸಾರಿಗೆ : ಕಡಿಮೆ ಶುಲ್ಕ ,ಬಸ್ ಭಾರತೀಯ ತ್ರಿಕೋನ ಬಣ್ಣ ವಿಶಿಷ್ಟ ಬಣ್ಣ ಹೊಂದಿದೆ .
- ವಜ್ರ ವಾಯು : ಹಸಿರು ಬಣ್ಣದ ವೋಲ್ವೋ ಬಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಸಂಪರ್ಕಿಸುವ 12 ಮಾರ್ಗಗಳಲ್ಲಿ ಕಾರ್ಯಾಚರಣೆ.
- ಮಾರ್ಕೊಪೋಲೋ ಮತ್ತು ಕರೋನಾ ಎಸಿ. ವಜ್ರ ಸೇವೆಗಳು ಆಯ್ದ ಮಾರ್ಗಗಳಲ್ಲಿ ಚಲಿಸುವ ಕಡಿಮೆ ಶುಲ್ಕ ಏರ್ ನಿಯಮಾಧೀನ ಬಸ್.
- ಮೆಟ್ರೋ ಫೀಡರ್: ಮೆಟ್ರೋ ಕೇಂದ್ರಗಳಿಗೆ ಉಪ ಜಾಲಬಂಧ 10 ಮಾರ್ಗಗಳಲ್ಲಿ ಚಾಲನೆಯಲ್ಲಿರುವ ವಿಶೇಷ ಬಸ್.
- ಹಾಪ್ ಆನ್ ಹಾಪ್ ಆಫ್ : ಈ ಸೇವೆ ಬೆಂಗಳೂರಿನ ದೃಶ್ಯಗಳ ನೀಡಲಾಯಿತು. ಮಹಾನ್ ಐತಿಹಾಸಿಕ, ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವದ ಸ್ಥಳಗಳಿಗೆ ಇಪ್ಪತ್ತು ಹೆಗ್ಗುರುತುಗಳು ಸಂಪರ್ಕಿಸುವ ಮಾರ್ಗ.
ಬೆಂಗಳೂರು ಮೆಟ್ರೋ
[ಬದಲಾಯಿಸಿ]ನಮ್ಮ ಮೆಟ್ರೋ ಅಥವಾ ಬೆಂಗಳೂರು ಮೆಟ್ರೋ ಎನ್ನುವದು ಬೆಂಗಳೂರು ನಗರದ ರೈಲು ವ್ಯವಸ್ಥೆ. ಇದನ್ನು ಸದ್ಯ ನಿರ್ಮಾಣ ಮಾಡಲಾಗುತ್ತಿದೆ. ಇದರ ಒಟ್ಟೂ ಉದ್ದ ೪೩ ಕಿಮೀ.
ಬೆಂಗಳೂರು ಮೆಟ್ರೋ ರೈಲ್ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ವಹಿಸಿಕೊಂಡಿದ್ದು, ಇದು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳ ಜಂಟಿ ಸಾಹಸವಾಗಿದೆ. ಬೈಯಪ್ಪನಹಳ್ಳಿ ಮತ್ತು ಮಹಾತ್ಮಾ ಗಾಂಧಿ ರಸ್ತೆಗಳ ನಡುವಿನ ಮೊದಲ ಹಂತದ ಸಂಚಾರವು ಅಕ್ಟೋಬರ್ ೨೦ , ೨೦೧೧ ರಂದು ಆರಂಭಗೊಂಡಿದ್ದು , ೩ ಮತ್ತು ೩ಎ ಹಂತದ ಸಂಪಿಗೆ ರಸ್ತೆ ಮತ್ತು ಪೀಣ್ಯ ಔದ್ಯೋಗಿಕ ವಸಾಹತುಗಳ ನಡುವಿನ ಸಂಚಾರವು ಮಾರ್ಚ್ ೧, ೨೦೧೪ ರಂದು ಆರಂಭಗೊಂಡಿದೆ/
'ನಮ್ಮ ಮೆಟ್ರೋ' ವೈಶಿಷ್ಟ್ಯ
[ಬದಲಾಯಿಸಿ]- ನಮ್ಮ ಮೆಟ್ರೋ (ಬೆಂಗಳೂರು ಮೆಟ್ರೋ ಎಂದೂ ಹೆಸರು) ಇದು ಭಾರತದ ಕರ್ನಾಟಕದ ಬೆಂಗಳೂರು ನಗರದಲ್ಲಿನ ಸೇವೆಯ ಮೆಟ್ರೋ ವ್ಯವಸ್ಥೆ. ನಮ್ಮ ಮೆಟ್ರೋ, ಉದ್ದ ಮತ್ತು ಅತಿಹೆಚ್ಚು ನಿಲ್ದಾಣಗಳನ್ನು ಹೊಂದಿರುವ ಎರಡರಲ್ಲೂ ವ್ಯವಸ್ಥೆ ಗಳನ್ನು ಪರಿಗಣಿಸಿದಾಗ ದೆಹಲಿ ಮೆಟ್ರೋ ನಂತರ ಭಾರತದ ಎರಡನೇ ಅತಿದೊಡ್ಡ ಮೆಟ್ರೋ,. ಮತ್ತೊಂದೆಡೆ, ನಮ್ಮ ಮೆಟ್ರೋ ಉದ್ದದಲ್ಲಿ ಪ್ರಪಂಚದ ನ 99 ನೇ ಅತಿದೊಡ್ಡ ಮೆಟ್ರೋ ವ್ಯವಸ್ಥೆ ಮತ್ತು . ನೆಟ್ವರ್ಕ್ ಪರಿಭಾಷೆಯಲ್ಲಿ ಆಪರೇಟಿಂಗ್ ಕೇಂದ್ರಗಳ ಸಂಖ್ಯೆಯ ಪರಿಗಣನೆಯಲ್ಲಿ 92 ನೇ ಅತಿದೊಡ್ಡ ಮೆಟ್ರೋ. ಸ್ಥಾನ.
- ಇದು ದಕ್ಷಿಣ ಭಾರತದಲ್ಲಿ ಮೊದಲ ಭೂಗತ ಮೆಟ್ರೋ ವ್ಯವಸ್ಥೆಯನ್ನು ಹೊಂದಿರುತ್ತದೆ. ಮೆಟ್ರೋ ನೆಟ್ವರ್ಕ್ 30 ಕೇಂದ್ರಗಳಲ್ಲಿ ಸೇವೆ 31,52 ಕಿಲೋಮೀಟರ್ ಒಟ್ಟು ಉದ್ದದ ಎರಡು ಬಣ್ಣಗಳ ಕೋಡೆಡ್ ದಾರಿಗಳಿವೆ. ವ್ಯವಸ್ಥೆಯು ಪ್ರಮಾಣಿತ ಗೇಜ್ ಗಳನ್ನು ಬಳಸಿಕೊಂಡು ಮಿಶ್ರ ವ್ಯವಸ್ಥೆಯ ನಿಗದಿತ-ದರ್ಜೆಯ, ಭೂಗತ, ಮತ್ತು ಭೂ-ಮೇಲಿನ ಕೇಂದ್ರಗಳ ಮಿಶ್ರಣವನ್ನು ಹೊಂದಿದೆ. ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 140,000 ಪ್ರಯಾಣಿಕರು ಪ್ರಯಾಣ ಮಾಡುವವರು.
- ನಮ್ಮ ಮೆಟ್ರೋ ನಿರ್ಮಾಣ ಮತ್ತು ಕೆಲಸ ಕಾರ್ಯ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್), ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ, ಉದ್ಯಮ. ಮೆಟ್ರೊ ಸೇವೆಗಳು ಸಮಯ 06:00 ರಿಂದ 22:00 ಗಂಟೆಗಳ ನಡುವೆ ದೈನಂದಿನ ಕೆಲಸ ನಡೆಯುವುದು. 8-10 ನಿಮಿಷಗಳ ನಡುವೆ ವಿವಿಧ ನಿಲುಗಡೆ ವೇಗಗಳಲ್ಲಿ ನಡೆಯುತ್ತವೆ. ರೈಲುಗಳು ಮೂರು ಭೋಗಿಗಳು ಅಥವಾ ಕಾರುಗಳು ಇರುವಂತೆ ರಚಿತವಾಗಿದೆ. ವಿದ್ಯುತ್ ಉತ್ಪಾದನೆಯು ಮೂರನೇ ರೈಲು ಮೂಲಕ 750 ವೋಲ್ಟ್ ನೇರ ವಿದ್ಯುತ್ ಪೂರೈಸಲಾಗುತ್ತದೆ. . ‘ನಮ್ಮ ಮೆಟ್ರೋ’ ಭಾರತದಲ್ಲಿ 750 ವಿ ಡಿಸಿ ಮೂರನೇ ರೈಲು ಕಂಬಿ ಬಳಸುವ ವ್ಯವಸ್ಥೆಯ ಮೊದಲ ರೈಲು ಸಾರಿಗೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣ
[ಬದಲಾಯಿಸಿ]ಎಂ ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ. ಮೂಲತಃ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಎಂದು ಕರೆಯಲಾಗುತಿದ್ದ ಈ ಕ್ರೀಡಾಂಗಣ, ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗು ೧೯೭೭ರಿಂದ ೧೯೮೦ರವರೆಗೆ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಎಮ್. ಚಿನ್ನಸ್ವಾಮಿಯವರ ಹೆಸರನ್ನು ಪಡೆಯಿತು. ಸುಮಾರು ೫೫,೦೦೦ ಆಸನ ಕ್ಷಮತೆ ಹೊಂದಿರುವ ಈ ಕ್ರೀಡಾಂಗಣ ಬೆಂಗಳೂರು ನಗರದ ಮಧ್ಯದಲ್ಲಿ ಕಬ್ಬನ್ ಪಾರ್ಕ್ ಹಾಗು ಮಹಾತ್ಮಗಾಂಧಿ ರಸ್ತೆಗೆ ಹೊಂದಿಕೊಂಡಿದೆ.
ವಿವರ
[ಬದಲಾಯಿಸಿ]ಕರ್ನಾಟಕ ರಾಜ್ಯ ಸರ್ಕಾರದಿಂದ ನಿವೇಶನ ಪಡೆದ ನಂತರ ಈ ಕ್ರೀಡಾಂಗಣದ ಅಡಿಗಲ್ಲು ಮೇ ೧೯೬೯ರಲ್ಲಿ ಹಾಕಲಾಯಿತು ಮತ್ತು, ನಿರ್ಮಾಣ ಕಾರ್ಯ ೧೯೭೦ರಲ್ಲಿ ಪ್ರಾರಂಭಿಸಲಾಯಿತು. ೧೯೭೨-೭೩ರಲ್ಲಿ ಕ್ರಿಕೆಟ್ ಋತುವಿನಲ್ಲಿ ಮೊದಲ ದರ್ಜೆಯ ಕ್ರಿಕೆಟ್ ಪಂದ್ಯ ಈ ಕ್ರೀಡಾಂಗಣದಲ್ಲಿ ಆಡಲ್ಪಟ್ಟಿತು. ಈ ಕ್ರೀಡಾಂಗಣ ೧೯೭೪-೭೫ರಲ್ಲಿ ಭಾರತ ಹಾಗು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಕಾಲದಲ್ಲಿ ಟೆಸ್ಟ್ ಕೇಂದ್ರದ ಅರ್ಹತೆ ಪಡೆಯಿತು. ೧೯೭೪ರ ನವೆಂಬರ್ ೨೨-೨೭ರ ನಡುವೆ ನಡೆದ ಈ ಟೆಸ್ಟಿನಲ್ಲಿ ಆಕಾಲಿಕ ಮಳೆಯಿಂದ ಮೊದಲೆರಡು ದಿನ ಆಟ ತಡವಾಗಿ ಪ್ರಾರಂಭವಾದರೂ, ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಟೈಗರ್ ಪಟೌಡಿ ನೇತೃತ್ವದ ಭಾರತವನ್ನು ೨೬೭ ರನ್ನುಗಳಿಂದ ಮಣಿಸಿತು. ಇದೆ ಪಂದ್ಯದಲ್ಲಿ ವೆಸ್ಟ್ ಇಂಡೀಸ್‍ನ ಹೆಸರಾಂತ ದಾಂಡಿಗರಾದ ವಿವಿಯನ್ ರಿಚರ್ಡ್ಸ್ ಹಾಗು ಗೊರ್ಡನ್ ಗ್ರೀನಿಡ್ಜ್ ಟೆಸ್ಟ್ ರಂಗಕ್ಕೆ ಪದಾರ್ಪಣೆ ಮಾಡಿದರು.
ಈ ಕ್ರೀಡಾಂಗಣದಲ್ಲಿ ಭಾರತಕ್ಕೆ ಪ್ರಥಮ ವಿಜಯ ೧೯೭೬-೭೭ರಲ್ಲಿ ಟೋನಿ ಗ್ರೆಗ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ದೊರಕಿತು. ಈ ಕ್ರೀಡಾಂಗಣದಲ್ಲಿ ೧೯೮೨ರ ಸೆಪ್ಟಂಬರ್ ೨೬ರೊಂದು ಪ್ರಥಮ ಬಾರಿಗೆ ಎಕದಿನದ ಅಂತರಾಷ್ಟ್ರೀಯ ಪಂದ್ಯ. ಭಾರತ ಹಾಗು ಶ್ರೀಲಂಕಾ ನಡುವೆ ನೆಡೆಯಿತು. ಭಾರತ ಈ ಪಂದ್ಯದಲ್ಲಿ ೬ ವಿಕೆಟ್ ಜಯ ಸಾಧಿಸಿತು. ೧೯೯೬ ವಿಶ್ವ ಕಪ್ ಪಂದ್ಯಾವಳಿಯ ಸಮಯದಲ್ಲಿ ನೆಡೆದ ನವೀಕರಣದೊಂದಿಗೆ ಈ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಯಿತು. ಈ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಹಗಲು-ರಾತ್ರಿ ಎಕದಿನದ ಅಂತರಾಷ್ಟ್ರೀಯ ಪಂದ್ಯ ೧೯೯೬ರ ಮಾರ್ಚ್ ೯ರೊಂದು ಭಾರತ ಹಾಗು ಪಾಕಿಸ್ತಾನದ ನಡುವೆ ನೆಡೆಯಿತು. ಈ ವಿಶ್ವ ಕಪ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ೩೯ ರನ್ನುಗಳಿಂದ ಪರಾಭವಗೊಳಿಸಿತು.
ಈ ಕ್ರೀಡಾಂಗಣದ ಎರಡು ಬೌಲಿಂಗ್ ತುದಿಗಳು ಪೆವಿಲಿಯನ್ ತುದಿ ಹಾಗು ಬೆಮೆಲ್(ಬಿ.ಇ.ಎಮ್.ಎಲ್) ತುದಿ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ೨೦೦೦ ಇಸವಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿತು ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಭಾರತದ ಮುಂದಿನ ಪೀಳಿಗೆಯ ಕ್ರಿಕೆಟ್ ಪಟುಗಳನ್ನು ತಯಾರಿಸುವ ತಾಣವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಸದ್ಯದಲ್ಲಿಯೆ ಕ್ರೀಡಾಂಗಣದ ಆಸನ ಕ್ಷಮತೆಯನ್ನು ೭೦,೦೦೦ಕ್ಕೆ ಹೆಚ್ಚಿಸಲಿದೆ. ಭಾರತದ ಶ್ರೇಷ್ಟ ಕ್ರಿಕೆಟ್ ಕ್ರೀಡಾಂಗಣಗಳಲ್ಲೊಂದು ಎಂದು ಪರಿಗಣಿಸಲಾಗುವ ಈ ಕ್ರೀಡಾಂಗಣದಲ್ಲಿ ಹಲವಾರು ರೋಮಾಂಚಕಾರಿ ಪಂದ್ಯಗಳ ನೆಡೆದಿವೆ ಹಾಗು ಹಲವಾರು ದಾಖಲೆಗಳು ಮಾಡಲ್ಪಟ್ಟಿದೆ.
*********** ********************** *********************** *************************** ****************************
[ಬದಲಾಯಿಸಿ]ಇನ್ನು ಹಲವಾರು ......................
ವ೦ದನೆಗಳು