ಸದಸ್ಯ:Divyalj1610270/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಕಬ್ಬಿಣ (Iron)ಒಂದು ಮೂಲವಸ್ತು. ಮಾನವರಿಗೆ ತಿಳಿದ ಪ್ರಾಚೀನ ಲೋಹಗಳಲ್ಲಿ ಕಬ್ಬಿಣವೂ ಒಂದು. ತನ್ನ ಶುದ್ಧ ರೂಪದಲ್ಲಿ ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದು ಶುದ್ಧ ರೂಪದಲ್ಲಿ ದೊರೆಯುವುದೇ ಇಲ್ಲ. ಎಲ್ಲಾ ಜೀವಿಗಳ ಬೆಳವಣಿಗೆಗೆ ಕಬ್ಬಿಣ ಅತ್ಯವಶ್ಯಕವಾಗಿದೆ. ಅಲ್ಯೂಮಿನಿಯಮ್ನಂತೆ ಸುಲಭವಾಗಿ ವಿವಿಧ ರೂಪಗಳಿಗೆ ತರಬಹುದು. ಹೆಚ್ಚಿನ ಮೂಲವಸ್ತುಗಳೊಂದಿಗೆ ರಾಸಾಯನಿಕವಾಗಿ ಸುಲಭವಾಗಿ ಬೆರೆಯುವುದರಿಂದ ವ್ಯಾಪಕವಾಗಿ ಬಳಕೆಯಲ್ಲಿದೆ.

ಕಬ್ಬಿಣದ ಹಿತಿಹಾಸ

ಮೊದಲು ಕಬ್ಬಿಣ ಉತ್ಪಾದನೆಯಾಗಿದ್ದು ಮಧ್ಯ ಕಂಚು ಕಾಲದ ಸಮಯದಲ್ಲಿ.ಆದರೆ ಕಂಚಿನ ಜಾಗದಲ್ಲಿ ಕಬ್ಬಿಣ ಬರಲು ಸುಮಾರು ಶತಮಾನಗಳಾದವು.ಕರಗಿದ ಕಬ್ಬಿಣದ ಮಾದರಿ,ಮೊದಲು ಅಸ್ಮರ್,ಮೆಸಪಟೋಮಿಯ ಮತ್ತು ಸೈರಿಯಾದಲ್ಲಿ ಕ್ರಿಸ್ತಶಕ ೩೦೦೦ ಮತ್ತು ೨೭೦೦ರ ಮಧ್ಯೆ ಹುಟ್ಟಿತು.ಕ್ರಿಸ್ತಶಕ ೧೬೦೦ನಲ್ಲಿ ಹಿಟ್ಟೀಸ್ ಎಂಬ ರಾಜನ ಆಸ್ಥಾನದವರು ಕಬ್ಬಿಣದ ಉತ್ಪಾದನೆಯನ್ನು ಅರ್ಥೈಸಿಕೊಂಡರು.ಹಾಗೂ ಅದರ ಉತ್ಪಾದನೆಯಿಂದ ಹಲವು ವಸ್ತುಗಳನ್ನು ತಯಾರಿಸಿ ಇತರ ರಾಜ್ಯಗಳಿಗೆ ಕಳುಹಿಸಲು ಪ್ರಾರಂಭಿಸಿದರು.ಕೆಲವು ವರ್ಷಗಳು ಉರುಳಿದ ನಂತರ,ಈ ಕಬ್ಬಿಣ ಭಾರತದಲ್ಲಿ ಕ್ರಿಸ್ತ ೧೮೦೦ ರಿಂದ ೧೨೦೦ನಲ್ಲಿ ಕಂಡರು. ಪ್ರತಿಯೊಬ್ಬ ಮನುಷ್ಯನಿಗೆ ಬೇಕಾದ ವಸ್ತುಗಳಲ್ಲಿ ಕಬ್ಬಿಣ ಕೂಡ ಒಂದು.ಕಬ್ಬಿಣ ರಾಸಾಯನಿಕ ಶಾಸ್ತ್ರದ ಒಂದು ವಸ್ತು.ಕಬ್ಬಿಣ ಎಂಬುವುದು ಲ್ಯಾಟಿನ್ ಪದದ ಫೆರ್ರಮ್ ಎಂಬುದರಿಂದ ಬಂದಿದೆ.ಕಬ್ಬಿಣ ಒಂದು ಲೋಹ .ಕಬ್ಬಿಣವನ್ನು ನಾವು ಸಾಮಾನ್ಯವಾಗಿ ಭೂಮಿಯ ಹೊರಪದರದಲ್ಲಿ ಸಿಗುವ ವಸ್ತುಗಳಲ್ಲಿ ಕಾಣಬಹುದು. ಮನುಷ್ಯನ ಇತಿಹಾಸದ ಪ್ರಕಾರ ಕಬ್ಬಿಣ ಸುಮಾರು ಕಾಲಗಳಿಂದ ಉಪಯೋಗದಲ್ಲಿದೆ. ಕಬ್ಬಿಣ ಎಂಬುವುದು ಭೂಮಿಯ ಮೇಲೆ ಎರಡನೇ ಸಾಮಾನ್ಯ ಲೋಹ ಮತ್ತು ಹೆಚ್ಚಾಗಿ ಬಳಸುವ ಒಂದು ಲೋಹ ಕೂಡ ಆಗಿದೆ.ಇದು ರಾಸಾಯನಿಕ ಶಾಸ್ತ್ರದ ಪ್ರಕಾರ,ಇದರ ಆಟಾಮಿಕ್ ನಂಬರ್ ೨೬, ಇದು ೮ನೇ ಗುಂಪಿಗೆ ಸೇರುವಂತಹ ಹಾಗೂ ಬದಲಾಯಿಸಲಾಗುವ ಲೋಹ.ಇದರ ಗುರುತು ಫ಼ೆ(Fe)[೧].ಕಬ್ಬಿಣವನ್ನು ಎಲ್ಲರೂ ಹೆಚ್ಚಾಗಿ ಬಳಸುತ್ತಾರೆ.ಏಕೆಂದರೆ ಅದು ತುಂಬಾ ಗಟ್ಟಿ ಇರುತ್ತದೆ ಹಾಗೂ ಇದು ತುಂಬಾ ಕಡಿಮೆ ಬೆಲೆಯಲ್ಲಿ ದೊರಕುತ್ತದೆ.ಉಕ್ಕನ್ನು ತಯಾರಿಸುವ ಸಂದರ್ಭದಲ್ಲಿ ಕಬ್ಬಿಣ ಮುಖ್ಯವಾದ ಪಾತ್ರವಹಿಸುತ್ತದೆ.

ಕಬ್ಬಿಣ

ಕಬ್ಬಿಣ ಬೂದು ಹಾಗೂ ಬೆಳ್ಳಿ ಬಣ್ಣದ ಲೋಹ ಹಾಗೂ ಇದು ಕಾಂತೀಯ.ಇದನ್ನು ಗಣಿಯಿಂದ ಸುಲಭವಾಗಿ ತೆಗೆಯಬಹುದು ಹಾಗೂ ಇದು ತುಂಬ ಉಪಯೋಗಕರ[೨].ಶುದ್ಧವಾದ ಕಬ್ಬಿಣ ತುಂಬಾ ಮೃದುವಾಗಿರುತ್ತದೆ,ಆದರೆ ಕಬ್ಬಿಣವನ್ನು ಕರಗಿಸಿದರೆ ಅದು ಅಪ್ರಾಪ್ಯವಾಗುತ್ತದೆ.ಕಬ್ಬಿಣ ಜೊತೆ ಇಂಗಾಲವನ್ನು ಸೇರಿಸಿದರೆ ಅದು ಅಶುದ್ದವಾಗುತ್ತದೆ.ಇದನ್ನು ಅಶುದ್ದಮಾಡಿದಾಗ ಕಬ್ಬಿಣಕ್ಕೆ ಬಲ ಹಾಗೂ ಗಟ್ಟಿತನ ಬರುತ್ತದೆ. ಕಬ್ಬಿಣ ಸ್ಪಂದಿಸುವ ಲೋಹ. ಕಬ್ಬಿಣವು ಬೇರೆ ಆಮ್ಲಗಳ ಜೊತೆ ಸ್ಪಂದಿಸುತ್ತದೆ.ಉದಾಹರಣೆಗೆ ಸಲ್ಫ್ಯೂರಿಕ್ ಆಮ್ಲ. ಅಮ್ಲ ಬೆರಸಿದ ನಂತರ ಅದು ಫೆರ್ರೊ ಸಲ್ಫೇಟ್ ಆಗುತ್ತದೆ.ಈ ರೀತಿ ಸ್ಪಂದಿಸುವಂತೆ ಮಾಡಿದರೆ ಅದು ಲೋಹವನ್ನು ಶುದ್ಧಿಗೊಳಿಸುತ್ತದೆ.ಕಬ್ಬಿಣ ಗಾಳಿ ಮತ್ತು ನೀರಿನ ಜೊತೆ ಸ್ಪಂದಿಸಿದರೆ ಅದು ತುಕ್ಕು ಹಿಡಿಯುತ್ತದೆ.ಸ್ವಲ್ಪ ಕಬ್ಬಿಣಕ್ಕೆ ತುಕ್ಕು ಹಿಡಿದರೆ ಸಾಕು,ಅದು ಹಬ್ಬಿಕೊಂಡು ಉಳಿದಿರುವುದನ್ನು ಕೂಡ ತುಕ್ಕು ಹಿಡಿಯುವಂತೆ ಮಾಡುತ್ತದೆ.ಕೊನೆಗೆ ಪೂರ್ತಿ ಕಬ್ಬಿಣ ತುಕ್ಕು ಹಿಡಿಯುತ್ತದೆ.ಇತರ ಲೋಹಗಳು ತುಕ್ಕು ಹಿಡಿಯುವುದಿಲ್ಲ.ಉದಹಾರಣೆಗೆ ಅಲ್ಯೂಮಿನಿಯಂ ಕಬ್ಬಿಣ. ಕ್ರೋಮಿಯಂ ಮತ್ತು ಇಂಗಾಲವನ್ನು ಸೇರಿಸಿದರೆ ಅದು ತುಕ್ಕು ಹಿಡಿಯದೆ ಉಕ್ಕಿನಂತೆ ಬದಲಾಗುತ್ತದೆ.

ಕಬ್ಬಿಣದ ಅದಿರು

ಕಬ್ಬಿಣದ ಅದಿರನ್ನು ಹೆಚ್ಚಾಗಿ ಉತ್ಪಾದಿಸುವ ದೇಶಗಳೆಂದರೆ ರಷ್ಯಾ,ಬ್ರೆಜ಼ಿಲ್,ಚೀನಾ,ಭಾರತ ಮತ್ತು ಅಮೇರಿಕಾ ಮುಂತಾದವು.ಪ್ರಪಂಚದಾದ್ಯಂತ ೫೦ ದೇಶಗಳಲ್ಲಿ ಕಬ್ಬಿಣದ ಅದಿರನ್ನು ಉತ್ಪಾದಿಸಬಹುದು,ಆದರೆ ೯೬% ರಷ್ಟು ಕಬ್ಬಿಣದ ಅದಿರನ್ನು ೧೫ ದೇಶಗಳು ಮಾತ್ರಾ ಉತ್ಪಾದಿಸುತ್ತಾರೆ.ಮೊದಲು ಭಾರತವು ಕಬ್ಬಿಣದ ಉತ್ಪಾದನೆಯಲ್ಲಿ ಇಡೀ ವಿಶ್ವಕ್ಕೆ ಹೆಸರುವಾಸಿಯಾಗಿತ್ತು,ಆದರೆ ಈಗ ಭಾರತವು ಕಬ್ಬಿಣದ ಉತ್ಪಾದನೆಯಲ್ಲಿ ೪ನೇ ಸ್ಥಾನದಲ್ಲಿದೆ.೯೫%ರಷ್ಟು ದೇಶದ ಕಬ್ಬಿಣದ ಅದಿರು;ಒರ್ರಿಸ,ಛತ್ತಿಸ್ಗಡ್,ಜಾರ್ಖಾಂಡ್,ಮಧ್ಯಪ್ರದೇಶ,ಗೋವಾ,ಕರ್ನಾಟಕ ಮುಂತಾದ ರಾಜ್ಯಗಳಿಂದ ಬರುತ್ತದೆ.ಭಾರತ ದೇಶದಲ್ಲಿ ೨೦೧೫ರಲ್ಲಿ ೧೨೯ ಮಿಲಿಯನ್ ಟನ್ ನಷ್ಟು ಕಬ್ಬಿಣದ ಅದಿರನ್ನು ಉತ್ಪಾದನೆಯಾಗಿತ್ತು[೩].ರಷ್ಯಾ ದೇಶವು ಕಬ್ಬಿಣದ ಉತ್ಪಾದನೆಯಲ್ಲಿ ೫ನೇ ಸ್ಥಾನದಲ್ಲಿದೆ,ಮತ್ತು ೨೦೧೫ರಲ್ಲಿ ಸಮಾರು ೧೧೨ ಮಿಲಿಯನ್ ಟನ್ ನಷ್ಟು ಕಬ್ಬಿಣದ ಅದಿರು ಉತ್ಪಾದನೆಯಾಗಿತ್ತು.ಈ ದೇಶದಕ್ಕೆ ಅತಿ ಹೆಚ್ಚು ಕಬ್ಬಿಣದ ಅದಿರು ಸೆಂಟ್ರಲ್ ರಷ್ಯಾ,ಉಳಿದಿದ್ದು ಸೈಬೀರಿಯಾ ಹಾಗು ಯೂರಲ್ಸ್ ನಿಂದ ಬರುತ್ತದೆ.ಅಸ್ಟ್ರೆಲಿಯಾ ದೇಶವು ಕಬ್ಬಿಣದ ಅದಿರನ ಉತ್ಪಾದನೆಯಲ್ಲಿ ೨ನೇ ಸ್ಥಾನದಲ್ಲಿದೆ.ವೆಸ್ಟ್ನ ಅಸ್ಟ್ರಲಿಯನ್ ದೇಶದಲ್ಲಿರುವ ಪಿಲ್ಬರ ಪ್ರದೇಶದಲ್ಲಿ ಮುಖ್ಯವಾದ ಖನಿಜ ಕಂಡುಬರುತ್ತದೆ.ಇದು ೯೫%ರಷ್ಟು ಅಸ್ಟ್ರೇಲಿಯಾದ ಕಬ್ಬಿಣದ ಅದಿರನ್ನು ಪ್ರತಿನಿಧಿಸುತ್ತದೆ.೨೦೧೫ರಲ್ಲಿ ಅಸ್ಟ್ರೇಲಿಯಾ ದೇಶದಲ್ಲಿ ೮೨೪ ಮಿಲಿಯನ್ ಟನ್ ನಷ್ಟು ಕಬ್ಬಿಣದ ಅದಿರು ಉತ್ಪಾದನೆಯಾಗಿತ್ತು.ಬ್ರೆಜಿಲ್ ದೇಶವು ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಮೂರನೆ ಸ್ಥಾನದಲ್ಲಿದೆ,ಬ್ರೆಜಿಲ್ ದೇಶದಲ್ಲಿ ೨೦೧೫ರಲ್ಲಿ ೪೨೮ ಮಿಲಿಯನ್ ಟನ್ ನಷ್ಟು ಕಬ್ಬಿಣದ ಅದಿರಿನ ಉತ್ಪಾದನೆಯಾಗಿತ್ತು.೨೦೧೫ರಲ್ಲಿ ಬ್ರೆಜಿಲ್ ದೇಶದ ಕಬ್ಬಿಣದ ಅದಿರಿನ ಉತ್ಪಾದನೆಯು,ವಿಶ್ವದ ೧೨% ಕಬ್ಬಿಣದ ಅದಿರಿನ ಉತ್ಪಾದನೆಯನ್ನು ಪ್ರತಿನಿಧಿಸುತ್ತಿತ್ತು.

ಕಬ್ಬಿಣದ ಸೇತುವೆ

ಕಬ್ಬಿಣದಿಂದ ಹೆಚ್ಚು ಉಪಯೋಗಗಳಿವೆ.ಕಬ್ಬಿಣವನ್ನು ನಾವು ಬಳಸುವ ಸಂದರ್ಭಗಳು ಯಾವುದೆಂದರೆ, ಯಂತ್ರಗಳನ್ನು ಮಾಡುವಾಗ,ಯಂತ್ರಗಳ ಭಾಗಗಳನ್ನು ತಯಾರಿಸುವಾಗ,ಕಟ್ಟಡ ವಿನ್ಯಾಸಕ್ಕೆ,ಸೇತುವೆ ಕಟ್ಟುವುದಕ್ಕೆ,ವಾಹನಗಳು ಮತ್ತು ಉತ್ಪಾದನೆಗೆ ಮುಂತಾದವಕ್ಕೆ ಕಬ್ಬಿಣವನ್ನು ಬಳಸುತ್ತೇವೆ.ಅದಕ್ಕಿಂತ ಹೆಚ್ಚಾಗಿ ತುಕ್ಕು ಹಿಡಿಯದ ಉಕ್ಕಿನ ರೀತಿಯಲ್ಲಿರುವ ಕಬ್ಬಿಣವನ್ನು ವಸ್ತುಗಳು ಮತ್ತು ಸರ್ಜಿಕಲ್ ಉಪಕರಣಗಳನ್ನು ತಯಾರಿಸಲು ಬಳಸುತ್ತೇವೆ. ಕಬ್ಬಿಣವನ್ನು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತಯಾರಿಸುತ್ತಾರೆ.ಇಲ್ಲಿ ಕಬ್ಬಿಣದಲ್ಲಿರುವ ಹಿಮಟೈಟ್ ಅನ್ನು, ಇಂಗಾಲ ಬಳಸಿ ಕಡಿಮೆಗೊಳಿಸುತ್ತಾರೆ.ಇದನ್ನು ಬೇರ್ಪಡಿಸಲು ನಮಗೆ ಧಾರಕಗಳು ಬೇಕು.ಮೊದಲು ಧಾರಕಕ್ಕೆ ಕಬ್ಬಿಣದ ಅದಿರು,ಇಂಗಾಲ ಮತ್ತು ಸುಣ್ಣದ ಕಲ್ಲು ಹಾಕುತ್ತಾರೆ.ಅನಂತರ ಧಾರಕದ ಒಳಗೆ ತುಂಬಾ ಬಿಸಿಯಾದ ಗಾಳಿಯನ್ನು ಒಡೆಯುತ್ತಾರೆ.ಅದು ಇಂಗಾಲವನ್ನು ಸುಡುತ್ತದೆ.ಅಂತಹ ಬಿಸಿ ಗಾಳಿ ಕಬ್ಬಿಣದ ಅದಿರಿನ ಜೊತೆ ಇಂಗಾಲ ಬೆರೆಯುವಂತೆ ಮಾಡುತ್ತದೆ.ಬೆರೆಸಿದ ನಂತರ ಕಬ್ಬಿಣದಲ್ಲಿರುವ ಆಮ್ಲಜನಕ ತೆಗೆಯುತ್ತದೆ ಮತ್ತು ಇಂಗಾಲಕ್ಕೆ ಡೈಆಕ್ಸೈಡ್ ಸೇರುತ್ತದೆ.ಆ ಇಂಗಾಲದ ಆಕ್ಸೈಡ್ ಗ್ಯಾಸ್ ಆಗಿದ್ದರಿಂದ,ಬೆರೆತಿರುವ ಅಂಶದಿಂದ ಹೊರಟುಹೋಗುತ್ತದೆ.ಕ್ಯಾಲ್ಸಿಯಂ ಕಾರ್ಬೊನೇಟ್ ನಿಂದ ತಯಾರಾದ ಸುಣ್ಣದ ಕಲ್ಲು ಕ್ಯಾಲ್ಸಿಯಂ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ ಮತ್ತು ಸುಣ್ಣದ ಕಲ್ಲು ಬಿಸಿಯಾಗಿದ್ದಾಗ ಅದು ಕಾರ್ಬನ್ ಡೈಆಕ್ಸೆಡ್ ಆಗುತ್ತದೆ.ಕ್ಯಾಲ್ಸಿಯಂ ಆಕ್ಸೈಡ್ ಜೊತೆಗೆ ಮರಳು ಬೆರೆತರೆ,ಅದು ದ್ರವ ಪದಾರ್ಥದಂತೆ ಬದಲಾಗುತ್ತದೆ.ಅದನ್ನು ಸ್ಲ್ಯಾಗ್ ಎನ್ನುತ್ತಾರೆ.ಈ ಸ್ಲ್ಯಾಗ್ ಒಣಗಿದ ನಂತರ ಅದು ಕಬ್ಬಿಣವನ್ನು ಬಿಟ್ಟು ಬಿಡುತ್ತದೆ.ಆದರೆ ಸ್ಪಂದಿಸುವ ಗುಣ ಮತ್ತು ಶುದ್ಧ ದ್ರವ ರೂಪದ ಕಬ್ಬಿಣ ಆಗಿ ಬ್ಲಾಸ್ಟ್ ಫರ್ನೇಸ್ ನಲ್ಲಿ ಇರುತ್ತದೆ.ಅದು ತಣ್ಣಗಾದ ಮೇಲೆ ಕಬ್ಬಿಣವನ್ನು ಆಕಾರಕ್ಕೆ ತರಬಹುದು. ಜೀವಶಸ್ತ್ರದಲ್ಲಿ ಕಬ್ಬಿಣದಪಾತ್ರ ಪ್ರಮುಖವಾದದ್ದು.ಸರಾಸರಿ ಉದ್ದ ಇರುವ ಗಂಡಿಗೆ ಸುಮಾರು ೪ ಗ್ರಾಂ ನಷ್ಟು ಶರೀರದಲ್ಲಿ ಇರಬೇಕು,ಅದೇ ರೀತಿ ಒಂದು ಹೆಣ್ಣಿಗೆ ೩.೫ ಗ್ರಾಂ ನಷ್ಟು ಕಬ್ಬಿಣಾಂಶ ಇರಬೇಕು.ಕಬ್ಬಿಣವು ಹಿಮೋಗ್ಲೋಬಿನ್,ಅಂಗಾಂಗಗಳು,ಸ್ನಾಯುಗಳು,ರಕ್ತದ ಪ್ರೋಟಿನ್,ಮೂಳೆ ಮಜ್ಜೆ ಮುಂತಾದ ದೇಹದ ಭಾಗದಲ್ಲಿ ವಿತರಣೆಯಾಗಿದೆ. ಕಬ್ಬಿಣವು ಮಾಂಸದಲ್ಲಿ ಕಂಡುಬರುತ್ತದೆ,ಅದೇ ರೀತಿ ಕಬ್ಬಿಣವು ಇಡೀ ಊಟದ ಉತ್ಪನ್ನಗಳಲ್ಲಿ ಹಾಗೂ ತರಕಾರಿಗಳಲ್ಲಿ ಕಂಡುಬರುತ್ತದೆ[೪].ಮಾನವನ ದೇಹ ಸಸ್ಯ ಉತ್ಪನ್ನಗಳಲ್ಲಿರುವ ಕಬ್ಬಿಣಗಿಂತ, ಪ್ರಾಣಿಗಳ ಉತ್ಪನ್ನಗಳಲ್ಲಿರುವ ಕಬ್ಬಿಣವು ಅತಿ ವೇಗವಾಗಿ ಹೀರಿಕೊಳ್ಳುತ್ತದೆ.ಕಬ್ಬಿಣವು ಹಿಮೋಗ್ಲೋಬಿನಲ್ಲಿ ಒಂದು ಅಗತ್ಯವಾದ ಭಾಗ.ಅದರಿಂದ ಆಮ್ಲಜನಕ ದೇಹದ ಉದ್ದಕ್ಕೂ ರಕ್ತದ ಮೂಲಕ ಸಂಚರಿಸುತ್ತದೆ.ಮಾನವನಿಗಿರುವ ಅತಿ ಹೆಚ್ಚು ಸಾಮಾನ್ಯ ಸಮಸ್ಯೆ ಎಂದರೆ ಕಬ್ಬಿಣದ ಕೊರತೆ,ಈ ಕಬ್ಬಿಣದ ಕೊರತೆಯಿಂದಾಗಿ ಮಾನವನಲ್ಲಿ ರಕ್ತಹೀನತೆ ಕಂಡುಬರುತ್ತದೆ.ಕಬ್ಬಿಣ ಅರ್ಸೊನ್ಟೆ,ಪರಿಸರಕ್ಕೆ ತುಂಬ ಅಪಾಯಕಾರಿ.ಅದರಿಂದ ವಿಶೇಷ ಗಮನವನ್ನು ಗಿಡ,ಗಾಳಿ ಮತ್ತು ನೀರಿನ ಕಡೆ ತೆಗೆದುಕೊಳ್ಳಬೇಕು.ಅದಕ್ಕಾಗಿ ಬಲವಾದ ಸಲಹೆ ಎನೆಂದರೆ ರಾಸಾಯನಿಕವನ್ನು ಪರಿಸರದೊಳಗೆ ಬರದಂತೆ ನೋಡಿಕೊಳ್ಳಬೇಕು.ಏಕೆಂದರೆ ಒಂದು ಸಾರಿ ರಾಸಾಯನಿಕಗಳು ಪರಿಸರದಲ್ಲಿ ಬೆರೆತರೆ ಸಾಕು,ಅದು ಅಲ್ಲಿಯೇ ಉಳಿದು ಬಿಡುತ್ತದೆ.

"ಉಲ್ಲೇಖನಗಳು"[ಬದಲಾಯಿಸಿ]

  1. https://en.wikipedia.org/wiki/Iron
  2. https://simple.wikipedia.org/wiki/Iron
  3. http://www.worldatlas.com/articles/top-iron-ore-producing-countries-in-the-world.html
  4. http://www.lenntech.com/periodic/elements/fe.htm