ಸದಸ್ಯ:Chandan k reddy

ವಿಕಿಪೀಡಿಯ ಇಂದ
Jump to navigation Jump to search
ಚಂದನ್ ಕೆ ರೆಡ್ಡಿ
Rocking chandu.jpg
ಚಂದನ್ ಕೆ ರೆಡ್ಡಿ
ಜನ್ಮನಾಮ೧೩/೧೧/೧೯೯೭
ಬೆಂಗಳೂರು
ರಾಷ್ಟ್ರೀಯತೆಇಂಡಿಯನ್
ಬೇರೆ ಹೆಸರುಗಳುರೆಡ್ಡಿ
ವಿದ್ಯಾಭ್ಯಾಸಬೀ.ಕಾಂ
ವೃತ್ತಿವಿಧ್ಯಾರ್ಥಿ
ಹೆಸರುವಾಸಿಯಾದದ್ದುಕ್ರೀಡೆ,ಎನ್.ಸಿ.ಸಿ


ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಚಂದನ್ ಕೆ ರೆಡ್ಡಿ.ನನ್ನ ತಂದೆಯ ಹೆಸರು ಕೇಶವ ರೆಡ್ಡಿ,ತಾಯಿಯ ಹೆಸರು ಪುಷ್ಪ,ಮತ್ತು ನನಗೆ ಒಬ್ಬ ಅಣ್ಣನಿದ್ದಾನೆ,ಅವರ ಹೆಸರು ಚೇತನ್ ರೆಡ್ಡಿ.

ಜನನ[ಬದಲಾಯಿಸಿ]

ನಾನು ಬೆಂಗಳೂರಿನಲ್ಲಿ ೧೯೯೭ ರಲ್ಲಿ ನವೆಂಬರ್ ೧೪ ರಂದು ಜನಿಸಿದೆನು.

ಶಿಕ್ಷಣ[ಬದಲಾಯಿಸಿ]

ನಾನು ಸೆಂಟ್.ಫಿಲೋಮಿನಸ್ ಶಾಲೆಯಲ್ಲಿ ನರ್ಸರಿಯಿಂದ ೧೦ನೇ ತರಗತಿಯ ತನಕ ವ್ಯಾಸಂಗವನ್ನು ಮುಗಿಸಿದೆನು.ನನ್ನ ಶಿಕ್ಷಕರು ಮತ್ತು ಸ್ನೇಹಿತರು ನನೊಡನೆ ಬಹಳ ಸಂತೋಷದಿಂದ ಇದ್ದರು.ಶಿಕ್ಷಣ ಅರ್ಥ ಆಗುವಂತೆ ಹೇಳುತ್ತಿದ್ದರು.ಅದಾದನಂತರ ನಾನು ನನ್ನ ಪಿ.ಯು.ಸಿ ಯನ್ನು ಮಂಗಳೂರಿನಲ್ಲಿರುವ ಆಳ್ವಾಸ್ ಪಿ.ಯು ಕಾಲೇಜಿನಲ್ಲಿ ಓದಿದೆನು.ನಾನು ಮೊದಲ ಬಾರಿಗೆ ನನ್ನ ತಂಗಿಯನ್ನು ಹೈಸ್ಕೂಲ್ ಸೇರಿಸಲು ಆಳ್ವಾಸ್ ಬಂದಾಗ ಆ ಸುಂದರ ವಿದ್ಯಾಮಂದಿರ ನೋಡಿ ಸಂಪೂರ್ಣವಾಗಿ ನನ್ನನ್ನೇ ನಾನೇ ಮರೆತಂತಾಯಿತು.ಸುತ್ತಲೂ ಕಟ್ಟಡಗಳು,ನಡುವಲ್ಲಿ ಯಕ್ಷಗಾನ ಮೂರ್ತಿಗಳು,ಕಾರಂಜಿ ಒಂದೆಡೆ ಸ್ವಾಗತಿಸುತ್ತಿದ್ದರೆ,ಜನರನ್ನು ಕೈ ಬೀಸಿ ಕರೆಯುವಂತಹ ಕ್ಯಾಂಟಿನ್ ಕಣ್ಮನ ಸೆಳೆದವು.ಎಂಥ ಅದ್ಭುತ ಕಾಲೇಜಿದು ಎಂದು ಅನ್ನಿಸಿತು.ಅವತ್ತೇ ನಿರ್ಧರಿಸಿದೆ ಕಲಿತರೆ ಅಂಥ ಸಂಸ್ಕ್ರತಿಯೂಕ್ತ ಕಾಲೇಜಿನಲ್ಲಿಯೇ ಓದಬೇಕೆಂದು.ಮನೆಗೆ ಹೋಗಿ ಕಾಲೇಜಿನ ಬಗ್ಗೆ ವರ್ಣಿಸಿದ್ದೇ ವರ್ಣಿಸಿದ್ದು.ನನಗೆ ಕಣ್ಣು ಮುಚ್ಚಿದರೂ ಕಾಲೇಜೇ ಕಣ್ಣಮುಂದೆ ಬಂದಂತಾಗುತ್ತಿತ್ತು.ನಂತರ ಪಿ.ಯು.ಸಿಗೆ ನನಗೆ ಸೀಟು ಸಿಕ್ಕಿತು.ಅಲ್ಲಿನ ಶಿಸ್ತು,ನೀತಿ ನಿಯಮಗಳ ಬಗ್ಗೆ ಮೊದಲೇ ತಿಳಿದಿತ್ತು.ಪಿ.ಯು.ಸಿಗೆ ಹೊದಾಗ ಅಲ್ಲಿ ನೆರೆದಿದ್ದ ಜನ ಸಮೂಹ ಜಾತ್ರೆಯಂತೆ ಕಂಡಿತು.ಆದಿವಸ ಬಹುಶ ಇಡೀ ಕರ್ನಾಟಕವೇ ಆಳ್ವಾಸ್ ನಲ್ಲಿ ಸೇರಿತ್ತು ಅಥವಾ ಇಡೀ ಕರ್ನಾಟಕದ ಜಿಲ್ಲೆಗಳ ಸಂಗಮವೇ ಆಳ್ವಾಸ್ ನಲ್ಲಿ ಆಗಿತ್ತು,ಎಂದು ಹೇಳಿದರೆ ತಪ್ಪೇನಾಗದು.ಅಲ್ಲಿಯ ಹಾಸ್ಟೆಲಂತೂ ಸೂಪರ್.ನನಗೆ ಮೊದಲನೆಯಬಾರಿಗೆ ಹಾಸ್ಟೆಲ್ ನೋಡಿ ಏನೋ ಒಂಥರಾ ಭಯ ಆಯಿತು.ನನಗೆ ಹಾಸ್ಟೆಲ್ ಮೊದಲನೆಯಬಾರಿಯಾದ್ದರಿಂದ ಹೊಂದಿಕೊಳ್ಳಲು ಒಂದು ತಿಂಗಳು ಬೇಕಾಯಿತು.ನಂತರದ ದಿನಗಳಲ್ಲಿ ಹಾಸ್ಟೆಲ್ ನಲ್ಲಿರುವ ಒಳ್ಳೆಯ ಸ್ನೇಹ ಬಾಂಧವ್ಯದಿಂದ ಚನ್ನಾಗಿ ಓದಿ ಮುಂದುವರಿದೆ.ದ್ವಿತೀಯ ಪಿ.ಯು.ಸಿಯ ಕೊನೆಯಲ್ಲಿ ಶೇಕಡ ೯೦% ಅಂಕಗಳನ್ನು ಗಳಿಸಿ ಪಾಸಾದೆನು.ಈಗ ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಮೊದಲನೇ ವರ್ಷದ ಬಿ.ಕಾಂ ಓದುತ್ತಿದ್ದೇನೆ.

ಆಸಕ್ತಿ[ಬದಲಾಯಿಸಿ]

ನನ್ನ ಹವ್ಯಾಸ ಕ್ರಿಕೆಟ್ ಆಡುವುದು.ನಾನು ಮುಂದೆ ಎಂ.ಬಿ.ಯೆವನ್ನು ಓದಿ ಅದಾದನಂತರ ಒಳ್ಳೆಯ ಕೆಲಸಕ್ಕೆ ಸೇರಿ ಜೀವನವನ್ನು ಸಾಗಿಸಬೇಕೆಂದು ನಿರ್ಧರಿಸಿದ್ದೇನೆ.

ಉಪಸಂಹಾರ[ಬದಲಾಯಿಸಿ]

ವಿಕಿಪೀಡಿಯಾದ ಬಗ್ಗೆ ಹೇಳಬೇಕೆಂದರೆ ಅದು ಎಲ್ಲಾ ಭಾಷೆಯವರಿಗು ಉಪಯುಕ್ತವಾದದ್ದು.ವಿಕಿಪೀಡಿಯದ ಸಹಾಯದಿಂದ ಯಾವುದೇ ಭಾಷೆ ಮತ್ತು ಅಕ್ಷರಗಳನ್ನು ಕಲಿಯಬಹುದು.ವಿಕಿಪೀಡಿಯದ ಸಹಾಯದಿಂದ ನಮ್ಮ ಮನದಲ್ಲಿರುವ ಭಾವನೆಗಳು ಅಥವ ಒಂದು ವಿಷಯದ ಬಗೆಗಿನ ನಿಲುವುಗಳನ್ನು ಬಹು ಜನ ಕಾಣುವಂತೆ ಮಾಡಬಹುದು.ಮೊದಲಿನಲ್ಲಿ ವಿಕಿಪೀಡಿಯದ ಬಳಕೆ ಕಷ್ಟಕರವಾಗಿ ಕಾಣಿತು.ನಂತರ ದಿನಗಳಲ್ಲಿ ಅಭ್ಯಾಸದ ಫಲವಾಗಿ,ಸುಲಭವಾಗಿ ಉಪಯೋಗಿಸ ತೊಡಗಿದೆ.ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶವಾಗಿರುವುದರಿಂದ ಪ್ರಪಂಚದ ಯಾವುದೇ ಮೂಲೆಗಳಿಂದವಾದರೂ ಅದನ್ನು ಉಪಯೋಗಿಸಬಹುದು,ಯಾವುದೇ ಭಾಷೆಯವರಾದರೂ ಉಪಯೋಗಿಸಬಹುದು.

Indian School.pngThis user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Chandan k reddy