ಸದಸ್ಯ:Chandan k reddy/sandbox5
ಪತ್ತು ನಿರ್ಮಾಣ
[ಬದಲಾಯಿಸಿ]ಪತ್ತು,ಅಥವಾ,ಸಾಲ,ನಿರ್ಮಾಣವು ಆಧುನಿಕ ವಾಣಿಜ್ಯ ಬ್ಯಾಂಕುಗಳು ನಿರ್ವಹಿಸುತ್ತಿರುವ ಅತ್ಯಂತ ಮಹತ್ವದ ಕಾರ್ಯವಾಗಿದೆ.ಪ್ರೊ.ಸೇಯರ್ಸ್ ಅವರು ಹೇಳುವಮ್ತೆಬ್ಯಾಂಕುಗಳು ಕೇವಲ ಹಣವನ್ನು ಸರಬರಾಜು ಮಾಡುವ ಸಂಸ್ಥೆಗಳಲ್ಲ,ಅವು ಹಣವನ್ನು ನಿರ್ಮಿಸುವ ಸಂಸ್ಥೆಗಳೂ ಹೌದು.ಆದ್ದರಿಂದ ಆಧುನಿಕ ವಾಣಿಜ್ಯ ಬ್ಯಾಂಕುಗಳನ್ನು "ಪತ್ತು ನಿರ್ಮಾಣದ ಕಾರ್ಖಾನೆಗಳುಎಂದು ಕರೆಯಲಾಗಿದೆ.ಬ್ಯಾಂಕುಗಳು ತಮ್ಮ ಸಾಲ ನೀಡಿಕೆಯ ವ್ಯವಹಾರದ ಮೂಲಕ ದೆಶದಲ್ಲಿ ಒಟ್ಟು ಹಣದ ಪೂರೈಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತವೆ.ಇಅದರಿಂದಾಗಿ ಅವುಗಳ ಪತ್ತು ನಿರ್ಮಾಣದ ಪ್ರಕ್ರಿಯೆ ಆರ್ಥಿಕ ವ್ಯವಸ್ಥೆಯ ಮೇಲೆ ಗಾಢವಾದ ಪ್ರಭಾವ ಹೊಂದಿರುತ್ತದೆ.ಈ ಹಿನ್ನೆಲೆಯಲ್ಲಿ ಬ್ಯಾಂಕುಗಳ ಪತ್ತು ನಿರ್ಮಾಣ ಪ್ರಕ್ರಿಯೆಯನ್ನು ಕೂಲಂಕುಷವಾಗಿ ತಿಳಿಯುವ ಅಗತ್ಯವಿದೆ.
ಪತ್ತು ನಿರ್ಮಾಣದ ಪ್ರಕ್ರಿಯೆ
[ಬದಲಾಯಿಸಿ]ಪತ್ತು ಅಥವಾ ಸಾಲ ಎಂದರೆ ಸಾಲ ನೀಡಿಕೆಯ ಮುಖಾಂತರ ಬ್ಯಾಂಕು ಠೇವಣಿಗಳನ್ನು ವಿಸ್ತರಿಸುವ ಪ್ರಕ್ರಿಯೆಯಾಗಿದೆ.ಅಂದರೆ ಬ್ಯಾಂಕುಗಳು ತಮ್ಮ ಸಾಲ ಮಂಜೂರಾತಿ ಮತ್ತು ಹೂಡಿಕೆಯ ಮೂಲಕ ಠೇವಣಿಗಳನ್ನು ಸ್ರಿಷ್ಟಿಸಿ ಹಣದ ಸರಬರಾಜನ್ನು ಹೆಚ್ಚಿಸುವುದು ಪತ್ತು ನಿರ್ಮಾಣವಾಗುತ್ತದೆ.ಸಾಲಗಳು ಠೇವಣಿಗಳನ್ನು ಸ್ರಷ್ಟಿಸುತ್ತವೆ ಮತ್ತು ಠೇವಣಿಗಳು ಸಾಲಗಳನ್ನು ಸ್ರಷ್ಟಿಸುತ್ತವೆಎಂಬ ವಿನೋದದ ಮಾತಿನಂತೆ ಪತ್ತು ನಿರ್ಮಾಣ ಪ್ರಕ್ರಿಯೆ ಸಾಗುತ್ತಿರುತ್ತದೆ.ಈ ಹಿನ್ನೆಲೆಯಲ್ಲಿ ಪ್ರೊ.ಬೆನ್ ಹ್ಯಾಂ ಅವರ "ಬ್ಯಾಂಕಿನ ಒಟ್ಟು ಠೇವಣಿಗಳನ್ನು ಹೆಚ್ಚಿಸುವ ಕ್ರಿಯೆಯೇ ಪತ್ತು ನಿರ್ಮಾಣ"ಎಂಬ ಮಾತು ಉಲ್ಲೇಖಾರ್ಹವೆನಿಸುತ್ತದೆ.[೧] ಬ್ಯಾಂಕು ಠೇವಣಿಗಳನ್ನು ಸಂಪೂರ್ಣವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಸ್ರಿಷ್ಟಿಸಲಾಗುತ್ತದೆ.ಬ್ಯಾಂಕು ನೀಡುವ ಪ್ರತಿಯೊಂದು ಸಾಲವು ಸರಿಸಮವಾದ ಠೇವಣಿಯನ್ನು ಸ್ರಿಷ್ಟಿಸುತ್ತದೆ.ವಾಸ್ತವವಾಗಿ ಎರಡು ಘಟನೆಗಳು ಏಕಕಾಲದಲ್ಲಿ ಜರಗುತ್ತಿರುತ್ತವೆ.ಅವುಗಳೆಂದರೆ:ಸಾಲದ ಮಂಜೂರಾತಿ ಠೇವಣಿಯನ್ನು ಸ್ರಿಷ್ಟಿಸುತ್ತದೆ ಮತ್ತು ಠೇವಣಿ ಸಾಲವನ್ನು ಸ್ರಷ್ಟಿಸುತ್ತದೆ.ಬ್ಯಾಂಕುಗಳು ಠೇವಣಿದಾರರು ಠೇವಣಿ ಇಡುವ ಹಣವನ್ನು ಪೂರ್ತಿಯಾಗಿ ನಗದು ರೂಪದಲ್ಲಿ ಇಟ್ಟುಕೊಳ್ಳುವ ಅವಶ್ಯಕತೆಯಿರುವುದಿಲ್ಲ.ಏಕೆಂದರೆ ಎಲ್ಲಾ ಠೇವಣಿದಾರರು ಹಣವನ್ನು ವಾಪಸು ಪಡೆಯಲು ಏಕಕಾಲದಲ್ಲಿ ಬರುವುದಿಲ್ಲ.ಇದರಿಂದಾಗಿ ಅವುಗಳು ತಮ್ಮ ಠೇವಣಿದಾರರ ಹಣದ ಬೇಡಿಕೆಯನ್ನು ಪೂರೈಸಲು ತಮ್ಮ ಠೇವಣಿಯ ಕೆಲಭಾಗವನ್ನು ಮಾತ್ರ ನಗದು ಮೀಸಲು ರೂಪದಲ್ಲಿ ಇಟ್ಟುಕೊಂಡರೆ ಸಾಕು.ಉಳಿದ ಠೇವಣಿ ಹಣದ ಸಹಾಯದಿಂದ ಅವು ಸಾಲ ಮತ್ತು ಠೇವಣಿ ಸ್ರಷ್ಟಿಮಾಡುತ್ತಾ ಹೋಗಿ ನಗದು ಹಣವನ್ನು ಕಳೆದುಕೊಳ್ಳದೆಯೇ ಬಡ್ಡಿ ರೂಪದ ಆದಾಯ ಪಡೆಯುತ್ತವೆ. ಬ್ಯಾಂಕುಗಳಲ್ಲಿ ಎರಡು ರೀತಿಯ ಠೇವಣಿಗಳು ಸ್ರಷ್ಟಿಯಾಗುತ್ತವೆ.ಅವುಗಳೆಂದರೆ:(೧)ಪ್ರಾಥಮಿಕ ಅಥವಾ ಮೂಲ ಠೇವಣಿ (೨)ನಿರ್ಮಿತ ಅಥವಾ ನಿಷ್ಪನ್ನ ಠೇವಣಿ.
ಪ್ರಾಥಮಿಕ ಅಥವಾ ಮೂಲ ಠೇವಣಿ
[ಬದಲಾಯಿಸಿ]ಗ್ರಾಹಕರು ತಮ್ಮ ನಗದು ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಟ್ಟಾಗ ಪ್ರಾಥಮಿಕ ಠೇವಣಿ ಸ್ರಷ್ಟಿಯಾಗುತ್ತದೆ.ಈ ಠೇವಣಿಯ ಹಣವನ್ನು ಗ್ರಾಹಕರು ಯಾವಾಗ ಬೇಕಾದರೂ ಚೆಕ್ಕುಗಳ ಮೂಲಕ ಮರಳಿ ಪಡೆಯಲು ಅವಕಾಶವಿರುತ್ತದೆ.ಅಂದರೆ ಪ್ರಾಥಮಿಕ ಅಥವಾ ಮೂಲ ಠೇವಣಿಯ ಸ್ರಷ್ಟಿಯಲ್ಲಿ ಬ್ಯಾಂಕಿನದು ಯಾವುದೇ ಪಾತ್ರವಿರುವುದಿಲ್ಲ.ಆದರೆ ಈ ಪ್ರಾಥಮಿಕ ಠೇವಣಿಗಳು ಮುಂದೆ ಬ್ಯಾಂಕಿನ ಸಾಲ ನೀಡಿಕೆ ವ್ಯವಹಾರಕ್ಕೆ ಆಧಾರವಾಗುತ್ತವೆ.ವಾಸ್ತವವಾಗಿ ಪ್ರಾಥಮಿಕ ಠೇವಣಿಗಳು ಹಣದ ಪೂರೈಕೆಯನ್ನು ಹೆಚ್ಚಿಸುವುದಿಲ್ಲ.ಏಕೆಂದರೆ ಇವು ಚಲಾವಣೆಯಲ್ಲಿರುವ ಹಣವನ್ನು ಠೇವಣಿಗಳ ಮೂಲಕ ಬ್ಯಾಂಕಿಗೆ ವರ್ಗಾಯಿಸುತ್ತವೆಯಷ್ಟೆ.
ನಿರ್ಮಿತ ಅಥವಾ ನಿಷ್ಪನ್ನ ಠೇವಣಿ
[ಬದಲಾಯಿಸಿ]ಬ್ಯಾಂಕುಗಳು ಸಾಲ ನೀಡಿದಾಗ ಸ್ರಷ್ಟಿಯಾಗುವ ಠೇವಣಿಗಳನ್ನು ನಿರ್ಮಿತ ಅಥವಾ ನಿಶ್ಪನ್ನ ಠೇವಣಿ ಎನ್ನಲಾಗುತ್ತದೆ.ಈ ಠೇವಣಿಗಳು ಬ್ಯಾಂಕುಗಳು ಸಾಲ ನೀಡಿಕೆ ವ್ಯವಹಾರದ ಮೂಲಕ ಬ್ಯಾಂಕುಗಳಲ್ಲೇ ಉತ್ಪತ್ತಿಯಾಗುತ್ತದೆ.ಆದ್ದರಿಂದ ಮೂಲ ಠೇವಣಿಗಳು ಉತ್ಪನ್ನ ಅಥವಾ ನಿಷ್ಪನ್ನ ಠೇವಣಿ ಎನಿಸಿಕೊಳ್ಳುತ್ತವೆ.ಈ ಠೇವಣಿಗಳ ನಿರ್ಮಾಣದಲ್ಲಿ ವಾಣಿಜ್ಯ ಬ್ಯಾಂಕು ಸಕ್ರಿಯ ಪಾತ್ರ ವಹಿಸುತ್ತದೆ ಹಾಗು ನಿಷ್ಪನ್ನ ಠೇವಣಿಗಳು ದೇಶದಲ್ಲಿ ಹನದ ಪೂರೈಕೆಯನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.ಮೂಲ ಠೇವಣಿಯ ಆಧಾರದಲ್ಲಿ ಬ್ಯಾಂಕು ಯಾವುದೇ ವ್ಯಕ್ತಿಗೆ ಸಾಲ ನೀಡಿದಾಗ ಅಥವಾ ಸಾಲ ಮಂಜೂರು ಮಾಡಿದಾಅಗ ಅದು ಹಣವನ್ನು ನೇರವಾಗಿ ಆ ವ್ಯಕ್ತಿಗೆ ಕೊಡುವುದಿಲ್ಲ.ಪ್ರತಿಯಾಗಿ ತಾನು ಮಂಜೂರು ಮಾಡಿದ ಸಾಲದ ಹಣವನ್ನು ಹೊಸದಾಗಿ ತೆರೆದ ಅಥವಾ ಪ್ರಸ್ತುತ ಇರುವ ಸಾಲಗಾರನ ಖಾತೆಗೆ ಜಮಾ ಮಾಡುತ್ತದೆ.ಈ ಹಣವನ್ನು ಸಾಲಗಾರ ತನಗಿಷ್ಟ ಬಂದ ಸಮಯದಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿರುತ್ತದೆ.ಆದ್ದರಿಂದ ಬ್ಯಾಂಕು ಸಾಲ ನೀಡಿದ್ದರಿಂದಾಗಿ ಹೊಸ ಠೇವಣಿಯನ್ನು ಸ್ರಷ್ಟಿಸಿದಂತಾಗುತ್ತದೆ.ಬ್ಯಾಂಕುಗಳು ಸಾಲ ಮತ್ತು ಮುಂಗಡಗಳನ್ನು ನೀಡಿದಾಗ ಹೊಸ ಠೇವಣಿಗಳು ಉತ್ಪತ್ತಿಯಾಗಿ ಹಣದ ಪೂರೈಕೆ ಹೆಚ್ಚುತ್ತದೆ.ಈ ಹೆನ್ನೆಲೆಯಲ್ಲಿ ಪ್ರತಿಯೊಂದು ಸಾಲವು ಒಂದು ಠೇವಣಿಯನ್ನು ನಿರ್ಮಿಸುತ್ತದೆ ಎಂಬ ಪ್ರಸಿದ್ದ ತತ್ವದ ಜನನವಾಗಿದೆ.ಬ್ಯಾಂಕುಗಳು ತಮ್ಮ ಮೂಲ ಠೇವಣಿಯ ಸಹಾಯದಿಂದ ಎಷ್ಟು ಪ್ರಮಾಣದ ಪತ್ತು ನಿರ್ಮಾಣ ಮಾಡುತ್ತವೆ ಎಂಬ ವಿಚಾರ ಪತ್ತು ನಿರ್ಮಾಣ ಗುಣಕದ ಮೌಲ್ಯವನ್ನು ಅವಲಂಭಿಸಿರುತ್ತದೆ.ವಾಣಿಜ್ಯ ಬ್ಯಾಂಕುಗಳು ತಮ್ಮ ಬಳಿ ಇರುವ ಠೇವಣಿಗಳ ಸಹಾಯದಿಂದ ಹಲವಾರು ಪಟ್ಟು ಅಧಿಕ ಪ್ರಮಾಣದ ಪತ್ತನ್ನು ಸ್ರಷ್ಟಿಸೌವ ಸಾಮರ್ಥ್ಯ ಹೊಂದಿರುತ್ತವೆ.ಒಟ್ಟಾರೆಯಾಗಿ ಅವು ಎಷ್ಟು ಪ್ರಮಾಣದ ಪತ್ತನ್ನು ನಿರ್ಮಿಸಬಹುದು ಎಂಬ ವಿಚಾರ ಅವುಗಳ ನಗದು ಮೀಸಲು ನಿಧಿಯ ಪ್ರಮಾಣ ಮತ್ತು ಠೇವಣಿ ಅಥವಾ ಪತ್ತು ನಿರ್ಮಾಣ ಗುಣಕವನ್ನು ಅವಲಂಬಿಸಿರುತ್ತದೆ.ಬ್ಯಾಂಕುಗಳು ತಮ್ಮ ಪ್ರಾಥಮಿಕ ಠೇವಣಿಗಳ ಸಹಾಯದಿಂದ ಹೇಗೆ ಪತ್ತು ನಿರ್ಮಾಣವನ್ನು ಮಾಡುತ್ತವೆ ಎಂಬ ಪ್ರಕ್ರಿಯೆಯನ್ನು ಸುಲಭವಾಗಿ ತಿಳಿದುಕೊಳ್ಳುವ ದ್ರಷ್ಟಿಯಿಂದ ಈ ಕೆಳಗಿನ ಕಲ್ಪನೆಗಳನ್ನು ಮಾಡಿಕೊಳ್ಳಬಹುದು.ಪ್ರತಿಯೊಂದು ಬ್ಯಾಂಕು ತನ್ನ ಠೇವಣಿಗಳ ವಿರುದ್ದವಾಗಿ ಶೇಕಡ ೧೦ರಷ್ಟು ನಗದು ಮೀಸಲು ನಿಧಿಯನ್ನು ಇಡಬೇಕಾಗುತ್ತದೆ.ಮೊದಲ ಬ್ಯಾಂಕು ಅಂದರೆ ಆ ಬ್ಯಾಂಕು ರೂ.೧೦೦೦ಗಳ ಠೇವಣಿ ಹೊಂದಿದೆ.ಒಂದು ಬ್ಯಾಂಕಿನಲ್ಲಿ ಪಡೆಯಲಾದ ಸಾಲವನ್ನು ಗ್ರಾಹಕ ಇನ್ನೊಂದು ಬ್ಯಾಂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಠೇವಣಿ ಇಡುತ್ತಾನೆ.ಅಲ್ಲಿಂದ ಮತ್ತೊಂದು ಬ್ಯಾಂಕಿನಲ್ಲಿ,ಮಗದೊಂದು ಬ್ಯಾಂಕಿನಲ್ಲಿ ಹೀಗೇ ಮುಂದುವರಿಯುತ್ತದೆ.ಪ್ರತಿಯೊಂದು ಬ್ಯಾಂಕು ಇನ್ನೊಂದು ಬ್ಯಾಂಕಿನ ಸಾಲಗಾರ ಠೇವಣಿ ಇಡುವ ಹಣದ ಮೂಲಕ ಪ್ರಾರಂಭದ ಠೇವಣಿಯಿಂದ ಕಾರ್ಯಾರಂಭ ಮಾಡುತ್ತದೆ.
ನಗದು ಹಣದ ಪ್ರಮಾಣ
[ಬದಲಾಯಿಸಿ]ಬ್ಯಾಂಕುಗಳ ಪತ್ತು ನಿರ್ಮಾಣ ಸಾಮರ್ಥ್ಯವು ಅವುಗಳ ಬಳಿ ಲಭ್ಯವಿರುವ ನಗದು ಹಣದ ಪ್ರಮಾಣವನ್ನು ಅವಲಂಬಿಸಿರುತ್ತದೆ.ಅದರ ಬಳಿ ಅಭ್ಯವಿರುವ ನಗದು ಹಣದ ಪ್ರಮಾಣ ಅಧಿಕವಿದ್ದಾಗ ಅದರ ಪತ್ತು ನಿರ್ಮಾಣದ ಸಾಮರ್ಥ್ಯ ಅಧಿಕವಿರುತ್ತದೆ ಹಾಗು ನಗದು ಹಣ ಕಡಿಮೆಯಿದ್ದಾಗ ಪತ್ತು ನಿರ್ಮಾಣದ ಸಾಮರ್ಥ್ಯ ಕಡಿಮೆಯಿರುತ್ತದೆ.ಆದರೆ ಬ್ಯಾಂಕು ತನ್ನ ಬಳಿ ಅಭ್ಯವಾಗುವ ನಗದು ಹಣದ ಪ್ರಮಾಣವನ್ನು ತಾನೇ ನಿರ್ಧರಿಸುವುದು ಸಾಧ್ಯವಾಗುವುದಿಲ್ಲ.ಏಕೆಂದರೆ ಅದು ಠೇವಣಿದಾರರು ಇಡುವ ಪ್ರಾಥಮಿಕ ಠೇವಣಿಗಳನ್ನು ಅವಲಂಬಿಸಿರುತ್ತದೆ.
ನಗದು ಮೀಸಲು ಅನುಪಾತ
[ಬದಲಾಯಿಸಿ]ವಾಣಿಜ್ಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಷ್ಟು ಪ್ರಮಾಣದ ಪತ್ತನ್ನು ನಿರ್ಮಿಸಲಾಗುತ್ತದೆ ಎಂಬ ಅಂಶ ಬ್ಯಾಂಕುಗಳು ತಮ್ಮ ಠೇವಣಿಗಳ ಮೇಲೆ ಎಷ್ಟು ಪ್ರಮಾಣದ ನಗದು ಮೀಸಲು ನಿಧಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ ಎಂಬುದನ್ನು ಅವಲಂಬಿಸಿಸುತ್ತದೆ.ಅವುಗಳು ಇಟ್ಟುಕೊಳ್ಳಬೇಕಾದ ನಗದು ಮೀಸಲು ಪ್ರಮಾಣ ಅಧಿಕವಿದ್ದಾಗ ಅವುಗಳ ಪತ್ತು ನಿರ್ಮಾಣ ಸಾಮರ್ಥ್ಯ ಕುಗ್ಗುತ್ತದೆ.ತದ್ವಿರುದ್ದವಾಗಿ ನಗದು ಮೀಸಲು ಪ್ರಮಾಣ ಕಡಿಮೆಯಿದ್ದ್ದಾಗ ಅವುಗಳ ಬಳಿ ಅಭ್ಯವಾಗುವ ನಗದು ಹಣದ ಪ್ರಮಾಣ ಹೆಚ್ಚುತ್ತದೆ.ಇದರಿಂದಾಗಿ ಅವುಗಳ ಪತ್ತು ನಿರ್ಮಾಣ ಸಾಮರ್ಥ್ಯ ಹೆಚ್ಚುತ್ತೆದೆ.
ಸರಿಯಾದ ಭದ್ರತೆಗಳು
[ಬದಲಾಯಿಸಿ]ಸಾಲಗಾರರು ತಮ್ಮ ಸಾಲದ ಮೇಲೆ ನೀಡುವ ಭದ್ರತೆಗಳು ಪತ್ತು ನಿರ್ಮಾಣವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.ಬ್ಯಾಂಕುಗಳು ಗ್ರಾಹಕರಿಂದ ಸರಿಯಾದ ಭದ್ರತೆಗಳನ್ನು ತೆಗೆದುಕೊಂಡೇ ಸಾಲ ನೀಡ ಬೇಕಾಗುತ್ತದೆ.ಇಲ್ಲವಾದಲ್ಲಿ ಕೆಟ್ಟ ಸಾಲಗಳ ಹೊರೆ ಹೆಚ್ಚುತ್ತದೆ.ಆದರೆ ಗ್ರಾಹಕರು ಉತ್ತಮ ಭದ್ರತೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಬ್ಯಾಂಕುಗಳು ತಮ್ಮ ಬಳಿ ಸಾಲ ನೀಡುವ ಅಧಿಕ ಸಾಮರ್ಥ್ಯವಿದ್ದಾಗ್ಯೂ ಸಹ ಸಾಲ ನೀಡುವುದು ಸಾಧ್ಯವಾಗುವುದಿಲ್ಲ.
ನಗದು ಹಣದೊಲವು
[ಬದಲಾಯಿಸಿ]ಜನರ ನಗದು ಹಣದೊಲವು ಅಥವಾ ಅಭಿಲಾಷೆಯು ಪತ್ತು ನಿರ್ಮಾಣವನ್ನು ನಿರ್ಧರಿಸುವ ಇನ್ನೊಂದು ಪ್ರಮುಖ ಅಂಶವಾಗಿದೆ.ಜನರು ಹೆಚ್ಚು ಪ್ರಮಾಣದ ಹಣವನ್ನು ತಮ್ಮ ಬಳಿಯಲ್ಲಿಯೇ ನಗದು ರೂಪದಲ್ಲಿ ಇಟ್ಟುಕೊಳ್ಳಲು ಬಯಸಿದರೆ ಬ್ಯಾಂಕು ಠೇವಣಿಯ ಪ್ರಮಾಣ ಕಡಿಮೆಗೊಳ್ಳುತ್ತದೆ.ಇದರಿಂದಾಗಿ ಅವುಗಳ ಪತ್ತು ನಿರ್ಮಾಣದ ಸಾಮರ್ಥ್ಯವು ಕುಂದುತ್ತದೆ.ತದ್ವಿರುದ್ಧವಾಗ್ ಜನರ ನಗದು ಹಣದೊಲವು ಕಡಿಮೆಯಿದ್ದರೆ ಅವರು ತಮ್ಮ ಹಣವನ್ನು ಹೆಚ್ಚು ಪ್ರಮಾಣದಲ್ಲಿ ಠೇವಣಿ ಇಡುತ್ತಾರೆ.ಆಗ ಬ್ಯಾಂಕು ಬಳಿ ಲಭ್ಯವಾಗುವ ಹಣದ ಪ್ರಮಾಣ ಹೆಚ್ಚುತ್ತದೆ ಹಾಗು ಪತ್ತು ನಿರ್ಮಾಣ ಅಧಿಕವಿರುತ್ತದೆ.
ಇತರ ಬ್ಯಾಂಕುಗಳ ವರ್ತನೆ
[ಬದಲಾಯಿಸಿ]ಪತ್ತು ನಿರ್ಮಾಣದ ಸಾಮರ್ಥ್ಯವು ಇತರ ಬ್ಯಾಂಕುಗಳ ವರ್ತನೆಯನ್ನು ಅವಲಂಬಿಸಿರುತ್ತದೆ.ಒಂದು ವೇಳೆ ಕೆಲವು ಬ್ಯಾಂಕುಗಳು ತಾವು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನೈಜವಾಗಿ ಕೊಡಬೇಕಾಗಿದ್ದ ಸಾಲದ ಪ್ರಮಾಣವನ್ನು ಕೊಡದೇ ಇದ್ದಾಗ ಸಾಲದ ವಿಸ್ತರಣೆಯ ಸರಣಿಯಲ್ಲಿ ವ್ಯತ್ಯಯಗಳುಂಟಾಗುತ್ತವೆ.[೨]ಇದರಿಂದಾಗಿ ಪತ್ತು ನಿರ್ಮಾಣ ಹಾನಿಗೊಳಗಾಗುತ್ತದೆ.ಹೀಗೆ ಪತ್ತು ನಿರ್ಮಾಣದ ಸಾಮರ್ಥ್ಯ ಅನೇಕ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ.ಬ್ಯಾಂಕುಗಳ ಈ ಪತ್ತು ನಿರ್ಮಾಣದ ಕಾರ್ಯವು ಹೆಚ್ಚಿನ ಪ್ರಾಯೋಗಿಕ ಮಹತ್ವ ಪಡೆದಿದೆ.ಪತ್ತು ನಿರ್ಮಾಣವು ಆರ್ಥಿಕತೆಯಲ್ಲಿನ ಒಟ್ಟಾರೆ ಹಣದ ಪೂರೈಕೆಯನ್ನು ಹೆಚ್ಚಿಸುವ ಸಾಮರ್ಥ್ಯ ಪಡೆದಿರುವುದರಿಂದ ಆದಾಯ,ಉತ್ಪನ್ನ ಮತ್ತು ಉದ್ಯೋಗಾವಕಾಶಗಳು ವ್ರದ್ಧಿಗೊಳ್ಳುವ ಅವಕಾಶಗಳು ಲಭ್ಯವಾಗುತ್ತವೆ.ಆದರೆ ಪತ್ತು ನಿರ್ಮಾಣವು ಕಡಿಮೆಯಿದ್ದ ಸಂದರ್ಭದಲ್ಲಿ ಇವುಗಳು ಕಡಿಮೆಗೊಳ್ಳುವ ಅಪಾಯವೂ ಇರುತ್ತದೆ.