ವಿಷಯಕ್ಕೆ ಹೋಗು

ಸಣ್ಣ ಕರುಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Bhoomika563/WEP 2018-19 dec ಇಂದ ಪುನರ್ನಿರ್ದೇಶಿತ)

ಪರಿಚಯ

[ಬದಲಾಯಿಸಿ]
ಸಣ್ಣ ಕರುಳಿನ ಭಾಗಗಳು

ಸಣ್ಣ ಕರುಳು, ಹೊಟ್ಟೆ ಮತ್ತು ದೊಡ್ಡ ಕರುಳಿನ ನಡುವಿನ ಜೀರ್ಣಾಂಗವ್ಯೂಹದ ಭಾಗವಾಗಿದೆ, ಮತ್ತು ಅಲ್ಲಿ ಹೆಚ್ಚಿನ ಆಹಾರ ಸೇವನೆಯು ನಡೆಯುತ್ತದೆ.[]

ಭಾಗಗಳು

[ಬದಲಾಯಿಸಿ]

ಸಣ್ಣ ಕರುಳಿನಲ್ಲಿ ಮೂರು ಭಾಗಗಳಿವೆ - ಡ್ಯುಯೊಡಿನಮ್, ಜೆಜುನಮ್, ಮತ್ತು ಇಲಿಯಂ.[] ಸಣ್ಣ ಕರುಳಿನ ಕಡಿಮೆ ಭಾಗವಾದ ಡ್ಯುಯೊಡಿನಮ್‌ನಲ್ಲಿ ಹೀರಿಕೊಳ್ಳುವಿಕೆಯು ಪ್ರಾರಂಭಗೊಂಡು ಡ್ಯುಯೊಡಿನಮ್‌ನ ಜೋತುಬಿದ್ದ ಸ್ನಾಯುವಿನಲ್ಲಿ ಕೊನೆಗೊಳ್ಳುತ್ತದೆ.

ಜೀರ್ಣಕ್ರಿಯೆ

[ಬದಲಾಯಿಸಿ]

ಆಹಾರ ಜಠರದಿಂದ ಸಣ್ಣ ಕರುಳಿಗೆ ಒಂದು ಗಂಟೆಯ ನಂತರ ಬರುಲು ಪ್ರಾರಂಭವಾಗುತ್ತದೆ, ಮತ್ತು ಎರಡು ಗಂಟೆಗಳ ನಂತರ ಹೊಟ್ಟೆ ಖಾಲಿಯಾಗುವುದು. ಆ ಆಹಾರ ಮುದ್ದೆಯಾಗಿರುವ ಆಮ್ಲಪಿಷ್ಟದ ಗಂಜಿ, ಭಾಗಶಃ ಜೀರ್ಣವಾಗಿರುವ ಅರೆ ದ್ರವ ಆಮ್ಲರಸದಿಂದ ಕೂಡಿದ್ದು ತೀಕ್ಷ್ಣವಾಗಿರುತ್ತದೆ. ಸಣ್ಣ ಕರುಳಿನ ಪಿಎಚ್ (ಆಮ್ಲತೆಯ ಪ್ರಮಾಣ) ಮುಂದಿನ ಜೀರ್ಣಕ್ರಿಯೆಗೆ ನಿರ್ಣಾಯಕವಾಗಿರುತ್ತದೆ. ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುವ ಸಲುವಾಗಿ ಆಮ್ಲದ್ರವವನ್ನು ಸಮತೋಲಿತ (ಆಮ್ಲತೆಯನ್ನು ಪೂರ್ಣ ಕಡಿಮೆಮಾಡುವುದು) ಸ್ಥಿತಿಗೆ ತರುವ ಅಗತ್ಯವಿರುತ್ತದೆ. ಹೊಟ್ಟೆ ಬಿಡುಗಡೆ ಮಾಡಿದ ಆಹಾರದಲ್ಲಿ ಆಮ್ಲರಸ ಇರುವುದರಿಂದ ಅದನ್ನು ಕಡಿಮೆ ಪಿಎಚ್, ಮತ್ತು ಹೆಚ್ಚು ಕ್ಷಾರೀಯ ಮಾಡಲು ಆಹಾರಕ್ಕೆ ಪ್ಯಾಂಕ್ರಿಯಾಟಿಕ್ ನಾಳದಿಂದ ಬ್ರೂನರ್ಳ ಗ್ರಂಥಿಗಳು ಬೈಕಾರ್ಬನೇಟ್ ಅನ್ನು ಸ್ರವಿಸುತ್ತವೆ. ಈ ಡ್ಯುಯೊಡಿನಮ್ ಗ್ರಂಥಿಗಳು ಸ್ರವಿಸಿದ ಬೈಕಾರ್ಬನೇಟ್ ಭರಿತ ಲೋಳೆಯ ಸ್ರಾವದಲ್ಲಿ ಸಂಯೋಜಿತ ಪಿತ್ತರಸ ಸೇರ್ಪಡೆಯೊಂದಿಗೆ ಚಿಕ್ಕ ಕರುಳಿನಲ್ಲಿರುವ ರಸಭರಿತ ಆಹಾರದ ಆಮ್ಲ ಕಡಿಮೆಮಾಡಿ ಗ್ಯಾಸ್ಟ್ರಿಕ್ ಆಮ್ಲದಿಂದ ಕರುಳಿಗೆ ಹಾನಿಯಾಗದಂತೆ ಮಾಡುವುದು. ಕರುಳಿನ ಒಳಪದರಕ್ಕೆ ಲೋಳೆಯ ಘಟಕವು ಲೋಳೆಯನ್ನು ಸ್ರವಿಸಿ ಕರುಳಿನ ಗೋಡೆಗಳಲ್ಲಿ ಆಹಾರ ಜಾರುವಂತೆ ಮಾಡುತ್ತವೆ. ಸಣ್ಣಕರುಳು ಆಹಾರವನ್ನು ಕೇವಲ ಪಚನ ಮಾಡುವ ಕೆಲಸ ಒಂದನ್ನೇ ಮಾಡುವುದಿಲ್ಲ. ಅದನ್ನು ರಕ್ತಗತ ಮಾಡುವ ೯೦ ರಷ್ಷು ಹೊಣೆಯನ್ನು ಹೊತ್ತಿದೆ. ಅದರ ಒಳಮೈಯಲ್ಲಿ ಅಸಂಖ್ಯ ಸೂಕ್ಷ್ಮ ಮೊಗ್ಗುಗಳಂತಿರುವ ಲೋಮಕುಡಿಗಳಿವೆ. ಅವುಗಳೊಳಗೆ ಅತ್ಯಂತ ಸೂಕ್ಷ್ಮವಾದ ರಕ್ತನಾಳಗಳು ಪಸರಿಸಿವೆ. ಈ ರಕ್ತನಾಳಗಳ ನಡುನಡುವೆ ಲೆಕ್ಟೀಲುಗಳೆಂಬ ಆಹಾರನಾಳಗಳಿವೆ. ಅಲ್ಲಿ ನರಗಳ ಕುಡಿಗಳೂ ಇವೆ. ಅವು ಲೋಮದೊಳಗೆ ಹಬ್ಬಿಕೊಂಡಿರುತ್ತವೆ. ಈ ಬಗೆ ಅದ್ಭುತ ಏರ್ಪಾಟಿನಿಂದ ಆಹಾರವನ್ನು ರಕ್ತಕ್ಕೆ ಒದಗಿಸುವ ಬಹು ದೊಡ್ಡ ಕೆಲಸ ಇಲ್ಲಿ ನಡೆಯುತ್ತದೆ. ಇಲ್ಲಿ ಸೂಕ್ಷ್ಮ ರಕ್ತನಾಳಗಳೂ ಲೆಕ್ಟೀಲುಗಳೂ ಜೊತೆಗೂಡಿ ಕೆಲಸಮಾಡುತ್ತವೆ. ಕರುಳಿನ ಒಳಗಡೆ ಇರುವ ಸೂಕ್ಷ್ಮ ಲೋಮನಾಳಗಳ ಮೈತುಂಬ ಸಣ್ಣಸಣ್ಣ ಕಣಗಳಿವೆ. ಅಲ್ಲಿ ಪಚನಗೊಂಡ ಗ್ಲಿಜರೀನ, ಕೊಬ್ಬಿನಂತಹ ವಸ್ತುಗಳು ಬೆರೆತು ಹಾಲಿನಂಥ ದ್ರವವಾಗುತ್ತದೆ. ಅದನ್ನು ಲೆಕ್ಟೀಲ್ (ಲೆಕ್ಟೊ=ಹಾಲು) ಎಂಬ ದುಗ್ಧನಾಳ ಸೂಕ್ಷ್ಮ ರಕ್ತನಾಳಗಳಿಗೆ ಒದಗಿಸುತ್ತವೆ.[]

ಗಾತ್ರ ಹಾಗೂ ಹೀರಿಕೊಳ್ಳುವಿಕೆ

[ಬದಲಾಯಿಸಿ]

ಸಣ್ಣ ಕರುಳಿನ ಉದ್ದವು ೯.೮೫ ಮೀ (೩೨.೩ ಅಡಿ) ನಿಂದ ೧೦.೪೯ ಮೀ (೩೪.೪ ಅಡಿ) ವರೆಗೆ ಬಹಳ ಭಿನ್ನವಾಗಿರುತ್ತದೆ.[] ಜೀವಂತ ವ್ಯಕ್ತಿಯಲ್ಲಿ ಸಣ್ಣ ಕರುಳಿನ ವಿಶಿಷ್ಟವಾದ ಉದ್ದ ೩ ಮೀ - ೫ ಮೀ ಆಗಿದೆ. ವ್ಯಕ್ತಿಯ ಎತ್ತರದ ಮೇಲೆ ಸಣ್ಣ ಕರುಳಿನ ಉದ್ದವು ಅವಲಂಬಿತವಾಗಿರುತ್ತದೆ. ಎತ್ತರದ ಜನರು ಸಾಮಾನ್ಯವಾಗಿ ಉದ್ದವಾದ ಸಣ್ಣ ಕರುಳನ್ನು ಹೊಂದಿರುತ್ತಾರೆ. ಇದು ಪಿತ್ತರಸ ಮತ್ತು ಪ್ಯಾಂಕ್ರಿಯಾಟಿಕ್ ರಸವನ್ನು ಮೇದೋಜೀರಕ ನಾಳದ ಮೂಲಕ ಪಡೆಯುತ್ತದೆ, ಇದು ಒಡಿಡಿಯ ಸ್ಪಿನ್ಸ್ಟರ್ನಿಂದ ನಿಯಂತ್ರಿಸಲ್ಪಡುತ್ತದೆ. ಸಣ್ಣ ಕರುಳಿನ ಪ್ರಾಥಮಿಕ ಕಾರ್ಯವು ಆಹಾರದಿಂದ ಪೌಷ್ಟಿಕಾಂಶಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆ. ಇದರ ಸಣ್ಣ ಬೆರಳಿನಂತಹ ಮುಂಚಾಚುವಿಕೆಯೇ ವಿಲ್ಲಿ. ಇಲ್ಲಿನ ಲೋಮ (ಲೋಮಕುಡಿ) ಗಳಲ್ಲಿ ಪ್ರೊಟೀನುಗಳಿಂದ ಎಮಿನೊ ದ್ರಾವಕಗಳು ಸಿದ್ಧವಾಗುತ್ತವೆ. ಹೀಗೆ ಸಣ್ಣಕರುಳಿನಲ್ಲಿ ಬಹುಮುಖವಾದ ಕಾರ್ಯಗಳು ನಡೆಯುತ್ತವೆ. ಸಣ್ಣಕರುಳಿನ ಗೋಡೆಗಳು ಉಂಗುರಾಕೃತಿಯ ಸ್ನಾಯುಗಳಿಂದ ರಚನೆಗೊಂಡಿದ್ದು ಪಚನಗೊಂಡ ಆಹಾರವನ್ನು ಕ್ರಮಾಗತ ಸಂಕೋಚನದಿಂದ ಮುಂದೆಮುಂದಕ್ಕೆ ತಳ್ಳುತ್ತದೆ. ಮುಂದುವರಿದ ಆಹಾರವು ಮುಂದಿನ ಭಾಗ ದೊಡ್ಡ ಕರುಳಿಗೆ ಸೇರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.britannica.com/science/small-intestine
  2. https://www.healthline.com/human-body-maps/small-intestine#1
  3. "ಆರ್ಕೈವ್ ನಕಲು". Archived from the original on 2019-02-07. Retrieved 2019-02-12.
  4. "ಆರ್ಕೈವ್ ನಕಲು". Archived from the original on 2019-03-29. Retrieved 2019-02-12.