ಲೋಳೆ ಸರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Aloë
Starr 011104-0040 Aloe vera.jpg
ಲೊಳೆ ಸರ
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಸಸ್ಯವರ್ಗ
ಗಣ: ಆಸ್ಪ್ಯಾರಗಲ್ಸ್
ಕುಟುಂಬ: ಸ್ಫಾಡೆಲೇಸಿ
ಕುಲ: ಆಲೋ
L.
Species

See Species

ಲೊಳೆ ಸರ


ಲೋಳೆಸರ[ಬದಲಾಯಿಸಿ]

ಲೋಳೆಸರ (ಆಲೊವೆರಾ-Aloe Vera) ಒಂದು ರಸಭರಿತ ಜಾತಿಯ ಗಿಡ. ಇದರ ಹುಟ್ಟು ಆದದ್ದು ಉತ್ತರ ಆಫ್ರಿಕಾದಲ್ಲಿ. ಈ ಗಿಡವು ಕ್ರಿ.ಶ. ಒಂದನೆಯ ಶತಮಾನದಿಂದಲೂ ಒಂದು ಗಿಡಮೂಲಿಕೆಯ ಸಸ್ಯವೆಂದು ಕರೆಯಲ್ಪಟ್ಟಿದೆ. ಇದರ ರಸವನ್ನು ಊತ ಮತ್ತು ನೋವಿನ ಔಷಧವಾಗಿ ಬಳಸುವುದು ವಾಡಿಕೆಯಲ್ಲಿದೆ. ಈ ಸಸ್ಯವು ಸ್ವಾಭಾವಿಕವಾಗಿ ಹುಟ್ಟದೇ ಇದ್ದರೂ ಸಸ್ಯಗಳ ಗುಂಪಿನಲ್ಲಿ ಬೆಳೆದು ಬಂದಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಇದರ ರಸವನ್ನು ಸೌಂದರ್ಯವರ್ಧಕ ಹಾಗೂ ಔಷಧಕ್ಕಾಗಿ ಬಳಸಬಹುದೆಂದು ಹೇಳಲಾಗಿದೆ. [೧].

ಇದು ಆಸ್ಫಾಡೆಲೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಪೂದೆ/ಹೊದರು. ಸಸ್ಯಶಾಸ್ತ್ರ ಹೆಸರು ;ಅಲೊ ವೆರ(Aloe vera). ನೀರುಲಭ್ಯವಿಲ್ಲದ ಸಮಯದಲ್ಲಿ,ಎಲೆಯದಲ್ಲಿರುವ ಕ್ಲೋರೋಫಿಲ್ (cholorophill)ಮಡಿದು,ರೋಡೋಕ್ಸಾನ್ಥಿನ್(Rhodoxanthin)ಅನ್ನುವ ಕೆಂಪುಬಣ್ಣಪದಾರ್ಥಹುಟ್ಟುತ್ತದೆ. ಇದರಿಂದ ಎಲೆಗಳು ಕೆಂಪಾಗಿ ಕಾಣಿಸುತ್ತದೆ ಮತ್ತು ನೀರು ಸಿಕ್ಕಿದಾಗ ಎಲೆಗಳಲ್ಲಿ ಕ್ಲೋರೋಪಿಲ್ ವೃದ್ಧಿ ಅಗುತ್ತದೆ. ಹೆಚ್ಚು-ಕಡಿಮೆ ಎಲ್ಲಾ ಲೋಳೆಸರ ಗಿಡಗಳು ಇಂತಹ ಲಕ್ಷಣವನ್ನು ಹೊಂದಿರುತ್ತವೆ. ಈ ಗುಣವನ್ನು ಆಪ್ಟಿಕಲ್ ಪ್ರಾಪರ್ಟಿ(optical property) ಎಂದು ಕರೆಯಲಾಗಿದೆ.

ವಿವರಣೆ[ಬದಲಾಯಿಸಿ]

ಲೋಳೆಸರ ಒಂದು ಬೇರುರಹಿತ ಅಥವಾ ಅತಿ ಚಿಕ್ಕ ಬೇರುಳ್ಳ ಅಂಟು-ರಸಭರಿತ ಗಿಡ. ಇದು ಸುಮಾರು ೬೦ ರಿಂದ ೧೦೦ ಸೆಂ.ಮೀ. (೨೪ ರಿಂದ ೩೯ ಇಂಚು) ಎತ್ತರ ಹಾಗೂ ಪಕ್ಕಪಕ್ಕದಲ್ಲೇ ಹರಡಿಕೊಳ್ಳುವ ಗಿಡ. ಇದರ ಎಲೆಗಳು ದಪ್ಪ ಮತ್ತು ಮೆದುವಾಗಿದ್ದು ಹಸಿರುಬಣ್ಣ ದಿಂದ ಕೂಡಿರುತ್ತದೆ. ತುದಿ ಹಾಗೂ ಬೇರಿನ ಹತ್ತಿರ ಬೆಳ್ಳಗಿರುತ್ತದೆ. ಈ ಎಲೆಯ ಅಂಚು ಗರಗಸದಂತೆ ಅಲ್ಲಲ್ಲಿ ಚೂಪಾಗಿದ್ದು ಬಿಳಿಯ ಹಲ್ಲುಗಳಂತಹ ರಚನೆಯಿರುತ್ತದೆ. ಎಲೆಯ ಮುಳ್ಳುಗಳಲ್ಲಿ ಬೇಸಿಗೆಯಲ್ಲಿ ಹೂ ಬಿಡುವ ಸಾಧ್ಯತೆಗಳು ಇರುತ್ತದೆ. [೨]. ಆ ಹೂವು ಸುಮಾರು ೯೦ ಸೆಂ.ಮೀ. ಉದ್ದವಿದ್ದು ಇದರ ಹಳದಿಗೊಂಚಲು ೨ ರಿಂದ ೩ ಸೆಂ.ಮೀ. ಉದ್ದವಿರುತ್ತದೆ. ಲೋಳೆಸರವು ಆರ್ಬಸ್ಕುಲಾರ್ ಮೈಕಾರಿಸಾ ಎಂಬ ಜೈವಿಕ ಚಟುವಟಿಕೆಯ ಮೂಲಕ ಮಣ್ಣಿನ ಪೌಷ್ಟಿಕಾಂಶವನ್ನು ಹೀರಿಕೊಳ್ಳುತ್ತದೆ.

ಉಪಯುಕ್ತತೆ (ಬಳಕೆಗಳು)[ಬದಲಾಯಿಸಿ]

  • ಇದನ್ನು ಸೌಂದರ್ಯವರ್ಧಕಗಳು ಮತ್ತು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ.
  • ಜೀರ್ಣಕ್ರಿಯ ವೃದ್ಧಿ ಆಗುವದಕ್ಕು, ಎದೆ ಉರಿಯನ್ನು ಕಡೆಮೆಮಾಡುವುದರಲ್ಲಿ, ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾಧಿಗಳ ನಿವಾರಣೆಗೆ ಇದರ ರಸ ಚೆನ್ನಾಗಿ ಕೆಲಸಮಾಡುತ್ತದೆ.
  • ಇದರ ಸಾರ/ರಸವನ್ನು ಲೋಷನ್‌ಗಳು, ಕ್ರೀಂ‌ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
  • ದಂತಕ್ಷಯ ನಿವಾರಣ ಮಾಡುತ್ತದೆ.
  • ಲೋಳೆಸರದ ರಸ/ಎಣ್ಣೆಯಂತಹ ಅಂಶವು ತಲೆಕೂದಲು ನೆರಯುವುದನ್ನು ಮತ್ತು ಬಿಳುಪಾಗುದನ್ನು ಕಡಿಮೆಮಾಡುತ್ತದೆ
  • ಆಯುರ್ವೇದದ ಪ್ರಕಾರ ಲೋಳೆಸರದ ಅಂಟು ರಸವನ್ನು ಜೇನಿನೊಂದಿಗೆ ಸತತವಾಗಿ ೩ತಿಂಗಳು ಸೇವಿಸುವುದರಿಂದ ಯಾವುದೇ ತರಹದ ಮುಟ್ಟಿನ ತೊಂದರೆಗಳು ಹಾಗು ಆ ಸಮಯದಲ್ಲಿ ಉಂಟಾಗುವ ಸೋಂಕುಗಳು ನಿವಾರಣೆ ಹೊಂದುತ್ತದೆ.
  • ಲೋಳೆಸರ ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತದೆ.

ಉಲ್ಲೇಖನಗಳು[ಬದಲಾಯಿಸಿ]

"https://kn.wikipedia.org/w/index.php?title=ಲೋಳೆ_ಸರ&oldid=778712" ಇಂದ ಪಡೆಯಲ್ಪಟ್ಟಿದೆ