ಕ್ಲೋರೊಫಿಲ್ (ಹರಿತ್ತು)
ಟೆಂಪ್ಲೇಟು:Fix bunching ಕ್ಲೋರೊಫಿಲ್ ಎಂಬುದು ಎಲ್ಲಾ ಗಿಡಗಳಲ್ಲಿ, ಆಲ್ಗೆಗಳಲ್ಲಿ, ಹಾಗುಸೈನೊಬ್ಯಾಕ್ಟೀರಿಯಗಳಲ್ಲಿ ಕಂಡು ಬರುವ ಹಸಿರು ವರ್ಣದ್ರವ್ಯವಾಗಿದೆ. ಇದರ ಹೆಸರನ್ನು ಗ್ರೀಕ್ ನ χλωρός (ಕ್ಲೋರೊಸ್ "ಹಸಿರು") ಮತ್ತು φύλλον (ಫಿಲೋನ್ "ಎಲೆ") ಎಂಬ ಪದಗಳಿಂದ ತೆಗೆದುಕೊಳ್ಳಲಾಗಿದೆ. ಕ್ಲೋರೊಫಿಲ್ ವಿದ್ಯುತ್ಕಾಂತೀಯ ರೋಹಿತದ ನೀಲಿ ಭಾಗದಲ್ಲಿ ಅತ್ಯಂತ ಕಡಿಮೆ ಬಣ್ಣವನ್ನು ಹೀರಿಕೊಳ್ಳುತ್ತದೆ. ಆದರೂ ಇದು ರೋಹಿತದ ಹಸಿರು ಮತ್ತು ಹಸಿರಿಗೆ ಸಮೀಪದ ಭಾಗದಲ್ಲಿ ಹಸಿರು ಬಣ್ಣವನ್ನು ಕಡಿಮೆ ಹೀರಿಕೊಳ್ಳುತ್ತದೆ. ಈ ಕಾರಣದಿಂದ ಕ್ಲೋರೊಫಿಲ್ ನ ಹಸಿರು ಬಣ್ಣಗಳು - ಅಂಗಾಂಶಗಳನ್ನು ಒಳಗೊಂಡಿರುತ್ತವೆ.[೧] ಕ್ಲೋರೊಫಿಲ್ ಅನ್ನು ಮೊಟ್ಟ ಮೊದಲನೆಯ ಬಾರಿಗೆ 1871 ರಲ್ಲಿ ಜೋಸೆಫ್ ಬೇನೇಮ್ ಕ್ಯಾವೆನ್ ಟೊ ಮತ್ತು ಪೈರೆ ಜೋಸೆಫ್ ಪಿಲ್ಲರ್ ಟೀಯರ್ ಎಂಬುವವರು ಪ್ರತ್ಯೇಕ ಪಡಿಸಿದರು.
ಕ್ಲೋರೊಫಿಲ್ ಮತ್ತು ದ್ಯುತಿಸಂಶ್ಲೇಷಣೆ
[ಬದಲಾಯಿಸಿ]ಕ್ಲೋರೊಫಿಲ್ ದ್ಯುತಿಸಂಶ್ಲೇಷಣೆ ಕ್ರಿಯೆಯ ಜೀವಧಾರಕವಾಗಿದ್ದು, ಗಿಡಗಳು ಬೆಳಕಿನಿಂದ ಶಕ್ತಿಯನ್ನು ಪಡೆಯಲು ಸಹಾಯಮಾಡುತ್ತದೆ.
ಕ್ಲೋರೊಫಿಲ್ ಕಣಗಳು ಪೋಟೋಸಿಸ್ಟಮ್ ಗಳ ಒಳಗೆ ಹಾಗು ಅದರ ಸುತ್ತಲೂ ಜೋಡಿಸಲ್ಪಟ್ಟಿರುತ್ತವೆ. ಇವು ಕ್ಲೋರೊಪ್ಲಾಸ್ಟ್ ಗಳ ಥೈಲಕೊಯ್ಡ್ ತಂತು ಮಯ ಸಂಯೋಜಕ ಅಂಗಾಂಶಗಳಗಳೊಡನೆ ಸೇರಿಕೊಂಡಿರುತ್ತವೆ. ಈ ಸಂಕೀರ್ಣದಲ್ಲಿ ಕ್ಲೋರೊಫಿಲ್ ಎರಡು ಮುಖ್ಯ ಕ್ರಿಯೆಗಳನ್ನು ನಡೆಸುತ್ತದೆ. ಅತ್ಯಂತ ಹೆಚ್ಚು ಕ್ಲೋರೊಫಿಲ್ ಗಳ ಕ್ರಿಯೆ ಏನೆಂದರೆ ( ಪ್ರತಿ ಪ್ರೋಟೋಸಿಸ್ಟಮ್ ನಲ್ಲಿರುವ ಅನೇಕ ನೂರು ಅಣುಗಳ ವರೆಗೆ)ಬೆಳಕನ್ನು ಹೀರಿಕೊಳ್ಳುವುದು ಹಾಗು ಪ್ರತಿಫಲನ ಶಕ್ತಿಯ ವರ್ಗಾವಣೆಯ ಮೂಲಕ ಆ ಬೆಳಕನ್ನು ಫೋಟೋಸಿಸ್ಟಮ್ ನ ಪ್ರತಿಕ್ರಿಯ ಕೇಂದ್ರದಲ್ಲಿ ಇರುವ ನಿರ್ದಿಷ್ಟ ಕ್ಲೋರೊಫಿಲ್ ಜೊತೆಗಳಿಗೆ ವರ್ಗಾಯಿಸುವುದು. ಹೀರಿಕೊಳ್ಳುವ ಬೆಳಕಿನ ತರಂಗದೂರಕ್ಕೆ ಸಂಬಂಧಿಸಿದಂತೆ ಕ್ಲೋರೊಫಿಲ್ ನ ಆಯ್ಕೆ ಸಾಧ್ಯತೆಯಿಂದ , ಎಲೆಯ ಭಾಗವು ಹಸಿರು ಬಣ್ಣದಂತೆ ಕಾಣುವ ಅಣುವನ್ನು ಒಳಗೊಂಡಿರುತ್ತದೆ.
ಪ್ರಸ್ತುದಲ್ಲಿ ಒಪ್ಪಿಕೊಂಡಿರುವ ಎರಡು ಫೋಟೋಸಿಸ್ಟಮ್ ಘಟಕಗಳು ಫೋಟೋಸಿಸ್ಟಮ್ II ಮತ್ತು ಫೋಟೋಸಿಸ್ಟಮ್ I ಆಗಿವೆ, ಅವುಗಳು ಅವುಗಳದೇ ಆದಂತಹ ವಿಭಿನ್ನ ಕ್ಲೋರೊಫಿಲ್ ಪ್ರಕ್ರಿಯಾ ಕೇಂದ್ರವನ್ನು ಹೊಂದಿವೆ ಅವುಗಳೆಂದರೆ; ಅನುಕ್ರಮವಾಗಿ P680 ಮತ್ತು P700.[೨] ಈ ವರ್ಣದ್ರವ್ಯಗಳನ್ನು ತರಂಗದೂರ (ನ್ಯಾನೊ ಮೀಟರ್ ಗಳಲ್ಲಿ) ಅವುಗಳ ಗರಿಷ್ಠ ಕೆಂಪು-ತುತ್ತತುದಿಯ ಹೀರಿಕೆಯ ನಂತರ ಹೆಸರಿಸಲಾಗುವುದು. ಪ್ರತಿಯೊಂದು ಫೋಟೋಸಿಸ್ಟಮ್ ನಲ್ಲಿರುವ ಕ್ಲೋರೊಫಿಲ್ ವಿಧಗಳ ಗುರುತಿನ , ಕ್ರಿಯೆಯ ಹಾಗು ರೋಹಿತದ ಗುಣಲಕ್ಷ ಣಗಳು ವಿಭಿನ್ನವಾಗುತ್ತವೆ. ಅಲ್ಲದೇ ಪರಸ್ಪರ ಹಾಗು ಅವುಗಳನ್ನು ಸುತ್ತುವರೆದಿರುವ ಪ್ರೋಟೀನ್ ವ್ಯವಸ್ಥೆಯೊಡನೆ ಪರಿಮಿತಿಯನ್ನು ಕಲ್ಪಿಸಿಕೊಂಡಿರುತ್ತವೆ. ಒಮ್ಮೆ ತೆಗೆದುಕೊಂಡ ಪ್ರೋಟೀನ್ ಅನ್ನು ಕರಗಿಸುವ (ಉದಾಹರಣೆಗೆ ಆಸಿಟೋನ್ ಅಥವಾ ಮೆತನಾಲ್),[೩][೪][೫] ಕ್ಲೋರೊಫಿಲ್ ವರ್ಣದ್ರವ್ಯಗಳನ್ನು ಸರಳವಾದ ಕಾಗದದ ವರ್ಣರೇಖನ ಪ್ರಯೋಗದ ಮೂಲಕ ಬೇರ್ಪಡಿಸಬಹುದು. ಅಲ್ಲದೇ ರಾಸಾಯನಿಕವಾಗಿ ಕಾಗದದಿಂದ ಬೇರ್ಪಡುವ ಕ್ಲೋರೊಫಿಲ್ a ಮತ್ತು ಕ್ಲೋರೊಫಿಲ್ b ಗಳ ನಡುವೆ ಇರುವ ಧ್ರುವೀಯ ಗುಂಪಿನ ಸಂಖ್ಯೆಗಳ ಆಧಾರದ ಮೇಲೂ ಬೇರ್ಪಡಿಸಬಹುದು.
ಅವುಗಳು ಹೀರಿಕೊಂಡಿರುವ ಶಕ್ತಿಯನ್ನು ಬಳಸುವುದು ಹಾಗು ಫೋಟೋಸಿಸ್ಟಮ್ ನಲ್ಲಿರುವ ಇತರ ಕ್ಲೋರೊಫಿಲ್ ವರ್ಣದ್ರವ್ಯಗಳನ್ನು ಬೇರ್ಪಡಿಸುವುದರ ಮೂಲಕ ಅದರೊಳಗೆ ವರ್ಗಾಯಿಸಿಕೊಳ್ಳುವುದು ಪ್ರಕ್ರಿಯಾ ಕೇಂದ್ರದಲ್ಲಿರುವ ಕ್ಲೋರೊಫಿಲ್ ನ ಕಾರ್ಯವಾಗಿದೆ. ನಿರ್ದಿಷ್ಟ ಆಕ್ಸಿಡೀಕರಣದ ಪ್ರಕ್ರಿಯೆಯಲ್ಲಿ ಎಲೆಕ್ಟ್ರಾನ್ ಟ್ರಾನ್ಸ್ ಪೋರ್ಟ್ ಚೈನ್(ವಾಹಕ ಸರಣಿ)ಎಂದು ಕರೆಯಲ್ಪಡುವ ಸರಣಿಯಲ್ಲಿರುವ ಮಧ್ಯಂತರ ಅಣುಗಳಿಗೆ ಕ್ಲೋರೊಫಿಲ್ ಎಲೆಕ್ಟ್ರಾನ್ಅನ್ನು ನೀಡುತ್ತದೆ.ನಂತರ ಸಂಚಿತ ಶಕ್ತಿಯ ಪ್ರಕ್ರಿಯಾ ಕೇಂದ್ರದ ಕ್ಲೋರೊಫಿಲ್ (P680+) ಎಲೆಕ್ಟ್ರಾನ್ ಅನ್ನು ತೆಗೆದುಕೊಂಡು ಅದರ ಹಿಂದಿನ ಸ್ಥಿತಿಗೆ ಮರಳುತ್ತದೆ. ಫೋಟೋಸಿಸ್ಟಮ್ II, ನಲ್ಲಿ P680+ ಕಡಿಮೆ ಮಾಡುವ ಎಲೆಕ್ಟ್ರಾನ್ , ಅಂತಿಮವಾಗಿ ಅನೇಕ ಮಧ್ಯಂತರ ಗಳ ಮೂಲಕ O2 ಮತ್ತು H+ ಆಗಿ ನೀರಿನ ಆಕ್ಸಿಡೀಕರಣದ ಮೂಲಕ ಬರುತ್ತದೆ. ಈ ಪ್ರಕ್ರಿಯೆ ದ್ಯುತಿಸಂಶ್ಲೇಷಕ ಜೀವಿಗಳಿಗೆ ಉದಾಹರಣೆಗಾಗಿ ;ಗಿಡಗಳು ಹೊರಹಾಕುವ O2 ಅನಿಲ, ಹಾಗು ವಾಸ್ತವಾಗಿ ಇದು ಭೂಮಿಯ ವಾತಾವರಣದಲ್ಲಿರುವ ಎಲ್ಲಾ O2 ಗಳ ಮೂಲವಾಗಿದೆ. ಫೋಟೋಸಿಸ್ಟಮ್ I , ಫೋಟೋಸಿಸ್ಟಮ್ II ನೊಡನೆ ಸರಣಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆಗ ಥೈಲಾಕೋಯ್ಡ್ ತಂತುಮಯ ಸಂಯೋಜಕ ಅಂಗಾಂಶಗಳಲ್ಲಿರುವ ಮಧ್ಯಂತರಗಳ ಮೂಲಕ ಎಲೆಕ್ಟ್ರಾನ್ ನಿಂದ ಅಂತಿಮವಾಗಿ ಫೋಟೋಸಿಸ್ಟಮ್ II ಮೂಲಕ ಫೋಟೋಸಿಸ್ಟಮ್ ನ P700+ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಥೈಲಾಕಾಯ್ಡ್ ತಂತುಮಯ ಸಂಯೋಜಕ ಅಂಗಾಂಶಗಳಲ್ಲಿ ನಡೆಯುವ ಎಲೆಕ್ಟ್ರಾನ್ ವರ್ಗಾವಣೆ ಪ್ರಕ್ರಿಯೆಯು ಸಂಕೀರ್ಣವಾಗಿರುತ್ತದೆ.ಅದರೂ ; P700+ ಕಡಿಮೆ ಮಾಡಲು ಬಳಸುವ ಎಲೆಕ್ಟ್ರಾನ್ ಗಳ ಮೂಲ P700+ ಭಿನ್ನವಾಗಿರುತ್ತದೆ.
ಪ್ರಕ್ರಿಯಾ ಕೇಂದ್ರದ ಕ್ಲೋರೊಫಿಲ್ ವರ್ಣದ್ರವ್ಯಗಳಿಂದ ಹರಿಯಲ್ಪಡುವ ಎಲೆಕ್ಟ್ರಾನ್ ನನ್ನು ಥೈಲಾಕಾಯ್ಡ್ ತಂತುಮಯ ಸಂಯೋಜಕ ಅಂಗಾಂಶಗಳುದ್ದಕ್ಕೂ H+ ಅಯಾನುಗಳು ಚಲಿಸುವಂತೆ ಮಾಡಲು ಬಳಸಲಾಗುತ್ತದೆ. ಪ್ರಬಲ ಕೆಮಿಯೋಸ್ಮೊಟಿಕ್ಅನ್ನು ATP ರಾಸಾಯನಿಕ ಶಕ್ತಿಯನ್ನು ಉತ್ಪಾದಿಸಲು ಬಳಸಲಾಗುತ್ತದೆ; ಅಲ್ಲದೇ ಆ ಎಲೆಕ್ಟ್ರಾನ್ ಗಳು ಅಂತಿಮವಾಗಿ NADPHಯನ್ನು NADP+ಗೆ ಇಳಿಸುತ್ತವೆ.ಇದು CO2 ವನ್ನು ಸಕ್ಕರೆಯಾಗಿ (ಪಿಷ್ಟ)ಬದಲಾಯಿಸುವ ಹಾಗು ಇತರ ಬಯೋಸಿಂಥಟಿಕ್ ಸಂಕೋಚನಗಳಿಗೆ ಬಳಸುವ ಸಾರ್ವತ್ರಿಕವಾಗಿ ಕಡಿಮೆಮಾಡುವುದರ ಪ್ರತಿನಿಧಿಯಾಗಿದೆ.
ಪ್ರಕ್ರಿಯಾ ಕೇಂದ್ರದ ಕ್ಲೋರೊಫಿಲ್-ಪ್ರೋಟೀನ್ ಸಂಯುಕ್ತಗಳು ಇತರ ಕ್ಲೋರೊಫಿಲ್ ವರ್ಣದ್ರವ್ಯಗಳಿಲ್ಲದೆಯೇ ಬೆಳಕನ್ನು ನೇರವಾಗಿ ಹೀರಿಕೊಳ್ಳುವ ಹಾಗು ಶಕ್ತಿಯನ್ನು ಬೇರ್ಪಡಿಸುವ ಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಹೀರಿಕೊಳ್ಳುವಿಕೆಯ ಕ್ರೀಯಾಸಂಭವನೀಯತೆಯು (ಕೊಟ್ಟಿರುವ ಬೆಳಕಿನ ತೀವ್ರತೆಯಲ್ಲಿ ಫೋಟಾನ್ ನನ್ನು ಹೀರಿಕೊಳ್ಳುವ ಸಾಧ್ಯತೆ) ಕಡಿಮೆ ಇರುತ್ತದೆ. ಫೋಟೋಸಿಸ್ಟಮ್ ನಲ್ಲಿ ಉಳಿದಿರುವ ಕ್ಲೋರೊಫಿಲ್ ಗಳು ಮತ್ತು ಪರಾಗತಂತು ವರ್ಣದ್ರವ್ಯಗಳ ಪ್ರೋಟೀನ್ ಸಂಯುಕ್ತಗಳು ಫೋಟೋಸಿಸ್ಟಮ್ ನೊಂದಿಗೆ ಕೂಡಿಕೊಂಡಿರುತ್ತವೆ. ಅಲ್ಲದೇ ಎಲ್ಲಾ ಜೊತೆಗೂಡಿ ಬೆಳಕನ್ನು ಹೀರಿಕೊಳ್ಳುತ್ತವೆ.ಹಾಗು ಪ್ರಕ್ರಿಯಾ ಕೇಂದ್ರಕ್ಕೆ ಕೊಳವೆಯ ಬೆಳಕನ್ನು ಹೀರಿಕೊಳ್ಳುತ್ತವೆ. ಕ್ಲೋರೊಫಿಲ್ a ಯನ್ನು ಹೊರತುಪಡಿಸಿ ಅನುಬಂಧ ವರ್ಣದ್ರವ್ಯಗಳು ಎಂದು ಕರೆಯಲ್ಪಡುವ ಅನೇಕ ವರ್ಣದ್ರವ್ಯಗಳಿವೆ . ಇವುಗಳು ವರ್ಣದ್ರವ್ಯಗಳ -ಪ್ರೋಟೀನ್ ಪರಾಗತಂತು ಸಂಕೀರ್ಣಗಳಲ್ಲಿ ಇರುತ್ತವೆ.
ರಾಸಾಯನಿಕ ರಚನೆ
[ಬದಲಾಯಿಸಿ]ಕ್ಲೋರೊಫಿಲ್ ಕ್ಲೋರಿನ್ ನ ವರ್ಣದ್ರವ್ಯವಾಗಿದೆ.ಇದು ರಚನಾತ್ಮಕವಾಗಿ ಒಂದೇ ರೀತಿಯಾಗಿದೆ. ಅಲ್ಲದೇ ಇತರ ಪ್ರೋಫಿನ್ ವರ್ಣದ್ರವ್ಯಗಳು ಉದಾಹರಣೆಗೆ; ಹೀಮ್(ಅದರ ಇನ್ನೊಂದು ರೂಪ) ಉತ್ಪತ್ತಿಯಾಗುವ ಚಯಾಪಚಯಿ ಪ್ರತಿಕ್ರಿಯಾಸರಣಿಯ ಮೂಲಕವೇ ಉತ್ಪತ್ತಿಯಾಗುತ್ತವೆ. ಕ್ಲೋರಿನ್ ರಿಂಗ್ ಎಂಬುದು ಮ್ಯಾಗ್ನೀಸಿಯಮ್ ಅಯಾನುವಾಗಿದೆ. ಈ ಲೇಖನದಲ್ಲಿ ಚಿತ್ರಿರಿಸಿರುವ ರಚನೆಗಾಗಿ ಕೇಂದ್ರ Mg2+ಕ್ಕೆ ಅಂಟಿಕೊಂಡಿರುವ ಲಿಂಗಡ್ ಗಳನ್ನು ಸ್ಪಷ್ಟತೆಗಾಗಿ ಬಿಟ್ಟುಬಿಡಲಾಗಿದೆ. ಕ್ಲೋರಿನ್ ಸುರುಳಿ ಸಾಮಾನ್ಯವಾಗಿ ಉದ್ದವಾದ ಪಿಟಾಲ್ ನ ಸರಣಿಯನ್ನು ಒಳಗೊಂಡಂತೆ ವಿವಿಧ ಪಕ್ಕದ ಸರಪಣಿಗಳನ್ನು ಕೂಡ ಒಳಗೊಂಡಿರಬಲ್ಲದು. ಕೇವಲ ಕೆಲವು ಆಕಾರಗಳು ಮಾತ್ರ ಸಹಜವಾಗಿ ಕಂಡುಬರುತ್ತವೆ ಆದರೆ ಭೂಮಿಜ ಗಿಡಗಳಲ್ಲಿ ಅತ್ಯಂತ ಹೆಚ್ಚಾಗಿ ವಿತರಿಸಲ್ಪಟ್ಟ ಆಕಾರಗಳು ಕ್ಲೋರೊಫಿಲ್ a ಆಗಿರುತ್ತವೆ. ಕ್ಲೋರೊಫಿಲ್ a ಯ ಸಾಮಾನ್ಯ ರಚನೆಯನ್ನು 1940 ರಲ್ಲಿ ಹ್ಯಾನ್ಸ್ ಫಿಚರ್ ಎಂಬುವವನು ಸ್ಪಷ್ಟಪಡಿಸಿದನು. ಅಲ್ಲದೇ 1960 ರಲ್ಲಿ ಕ್ಲೋರೊಫಿಲ್ a ನ ಅತ್ಯಂತ ತ್ರೀವಿಮಿತಿಯಾಗಳನ್ನು ಕಂಡುಹಿಡಿದಾಗ, ರಾಬರ್ಟ್ ಬರ್ನ್ಸ್ ವುಡ್ ವರ್ಡ್ ನಮಗೆ ಗೊತ್ತಿರುವುದಕ್ಕಿಂತಲು ಜೀವಿಗಳ ಒಟ್ಟು ಸಂಶ್ಲೇಷಣೆಯ ಕಂಡುಹಿಡಿದನು.[೬] 1967 ರಲ್ಲಿ ಐನ್ ಫ್ಲೀಮಿಂಗ್,[೭] ಕೊನೆಯಲ್ಲಿ ಉಳಿದಿದ್ದ ಸ್ಟೀರಿಯೋಕೆಮಿಕಲ್ ಗಳನ್ನು ಸ್ಪಷ್ಟಪಡಿಸುವುದರ ಮೂಲಕ ಇದನ್ನು ಮುಕ್ತಾಯ ಮಾಡಿದ.ಅಲ್ಲದೇ 1990 ರಲ್ಲಿ ವುಡ್ ವರ್ಡ್ ಮತ್ತು ಇತರ ಲೇಖಕರು ಒಟ್ಟಿಗೆ ಸೇರಿ ಪರಿಷ್ಕೃತ ಸಂಶ್ಲೇಷಣೆಯನ್ನು ಪ್ರಕಟಿಸಿದರು.[೮]
ಕ್ಲೋರೊಫಿಲ್ ನ ವಿವಿಧ ರಚನೆಯನ್ನು ಕೆಳಗೆ ಸಂಗ್ರಹಿಸಲಾಗಿದೆ:
ಕ್ಲೋರೊಫಿಲ್ a | ಕ್ಲೋರೊಫಿಲ್ b | ಕ್ಲೋರೊಫಿಲ್ c1 | ಕ್ಲೋರೊಫಿಲ್ c2 | ಕ್ಲೋರೊಫಿಲ್ d | |
---|---|---|---|---|---|
ಅಣ್ವಿಕ ಸೂತ್ರ | C55H72O5N4Mg | C55H70O6N4Mg | C35H30O5N4Mg | C35H28O5N4Mg | C54H70O6N4Mg |
C3 group | -CH=CH2 | -CH=CH2 | -CH=CH2 | -CH=CH2 | -CHO |
C7 group | -CH3 | -CHO | -CH3 | -CH3 | -CH3 |
C8 group | -CH2CH3 | -CH2CH3 | -CH2CH3 | -CH=CH2 | -CH2CH3 |
C17 group | -CH2CH2COO-Phytyl | -CH2CH2COO-Phytyl | -CH=CHCOOH | -CH=CHCOOH | -CH2CH2COO-Phytyl |
C17-C18 ಬಂಧ | ಏಕ | ಏಕ | ದ್ವಿಗುಣ | ದ್ವಿಗುಣ | ಏಕ |
ಸಂಭವಿಸುವುದು | ಸಾರ್ವತ್ರಿಕ | ಗಿಡಗಳಲ್ಲಿ ಬಹುಮಟ್ಟಿಗೆ | ವಿವಿಧ ಅಲ್ಗೆ | ವಿವಿಧ ಅಲ್ಗೆ | ಸೈನೊಬ್ಯಾಕ್ಟೀರಿಯ |
ಸಸ್ಯಗಳ ವೃದ್ಧಾಪ್ಯದ ಕ್ರಿಯೆಯಲ್ಲಿ ಎಲೆಗಳು ಹಸಿರು ಬಣ್ಣವನ್ನು ಕಳೆದುಕೊಂಡಾಗ , ಕ್ಲೋರೊಫಿಲ್ ನಾನ್ ಫ್ಲೋರೋಸೆಂಟ್ ಕ್ಲೋರೊಫಿಲ್ ಕ್ಯಟಬೋಲೈಟ್ (NCC's) ಎಂದು ಕರೆಯಲ್ಪಡುವ ಬಣ್ಣರಹಿತ ಟೆಟ್ರೋಪೈರೋಲ್ ಗಳ ಗುಂಪಾಗಿ ಸಾಮಾನ್ಯ ರಚನೆಯೊಂದಿಗೆ ಬದಲಾಗುತ್ತದೆ.
ಈ ಸಂಯುಕ್ತಗಳನ್ನು ಅನೇಕ ಮಾಗಿದ ಹಣ್ಣುಗಳಲ್ಲಿ ಕೂಡ ಗುರುತಿಸಲಾಗಿದೆ.[೯]
ರೋಹಿತ ದ್ಯುತಿಮಾಪನ
[ಬದಲಾಯಿಸಿ]ಸಸ್ಯಗಳ ಭಾಗಗಳಿಂದ ದ್ರವವನ್ನು ತೆಗೆದುಕೊಳ್ಳಲು ಬಳಸುವ ದ್ರವದಿಂದ ಬೆಳಕಿನ ಹೀರಿಕೊಳ್ಳುವಿಕೆಯನ್ನು ಅಳತೆ ಮಾಡುವುದು ಕಷ್ಟವಾಗಿದೆ. ಇದು ಪಡೆದುಕೊಂಡಿರುವುದರ ಪ್ರಮಾಣದ ಮೇಲೆ ಪ್ರಭಾವಬೀರುತ್ತದೆ.
- ಡೈಥಿಯಲ್ ಈಥರ್ ನಲ್ಲಿ , ಕ್ಲೋರೊಫಿಲ್ a ಗರಿಷ್ಠ 430 nm ರಿಂದ 662 nm, ಅನ್ನು ಹೀರಿಕೊಳ್ಳುತ್ತದೆ. ಕ್ಲೋರೊಫಿಲ್ b ಗರಿಷ್ಠ 453 nm ನಿಂದ 642 nm ಅನ್ನು ಹೀರಿಕೊಳ್ಳುತ್ತದೆ.[೧೦]
- ಕ್ಲೋರೊಫಿಲ್ a ಗರಿಷ್ಠ ಹೀರಿಕೊಳ್ಳುವಿಕೆ 665 nm ರಿಂದ 465 nm ಆಗಿದೆ. ಕ್ಲೋರೊಫಿಲ್ a ಪ್ರತಿದೀಪ್ತಿಯಲ್ಲಿ 673 nm (ಗರಿಷ್ಠ) ಮತ್ತು 726 nm ಆಗಿದೆ. ಕ್ಲೋರೊಫಿಲ್ a ಯ ಅತ್ಯಂತ ಹೆಚ್ಚು ಮೋಲಾರ್ ಹೀರಿಕೆ ಗುಣಾಂಕವು 105 M−1 cm−1 ಗಿಂತ ಹೆಚ್ಚಾಗಿರುತ್ತದೆ.ಇದು ಸಣ್ಣ ಕಣಗಳ ಕಾರ್ಬನಿಕ ಸಂಯುಕ್ತಗಳಿಗೆ ಅವುಗಳಲ್ಲೆಲ್ಲಾ ಅತ್ಯಂತ ಹೆಚ್ಚಾದುದ್ದಾಗಿದೆ. [ಸೂಕ್ತ ಉಲ್ಲೇಖನ ಬೇಕು]
ಜೈವಿಕ ಉತ್ಪತ್ತಿ
[ಬದಲಾಯಿಸಿ]ಸಸ್ಯಗಳಲ್ಲಿ ಕ್ಲೋರೊಫಿಲ್ succinyl-CoA ಮತ್ತು ಗ್ಲೈಸೀನ್ ನಿಂದ ಸಂಶ್ಲೇಷಿಸಲ್ಪಡಬಹುದು , ಆದರೂ ಕ್ಲೋರೊಫಿಲ್ a ಮತ್ತು b ಗೆ ತಕ್ಷಣದ ಪೂರ್ವವರ್ತಿಗಳು ಪ್ರೋಟೋಕ್ಲೋರೋಫಿಲೈಡ್ ಮಾಡುತ್ತವೆ. ಪುಷ್ಪಿಯಲ್ಲಿ ಕೊನೆ ಹಂತವಾದ ಪ್ರೋಟೋಕ್ಲೋರೋಫಿಲೈಡ್ ಅನ್ನು ಕ್ಲೋರೊಫಿಲ್ ಆಗಿ ಬದಲಾಯಿಸುವುದು , ಬೆಳಕನ್ನು ಅವಲಂಬಿಸಿರುತ್ತವೆ. ಅಲ್ಲದೇ ಆ ಸಸ್ಯಗಳು ಕತ್ತಲೆಯಲ್ಲಿ ಬೆಳೆಯದಿದ್ದರೆ ವಿವರ್ಣ (ಬಿಳಚಿಕೊಂಡ)ವಾಗಿರುತ್ತವೆ. ನಾಳರಹಿತ ಸಸ್ಯಗಳು ಮತ್ತು ಹಸಿರು ಅಲ್ಗೆ ಗಳು ಅಧಿಕ ಬೆಳಕನ್ನು ಹೀರಿಕೊಳ್ಳುವ ಕಿಣ್ವವನ್ನು ಹೊಂದಿರುತ್ತವೆ. ಅಲ್ಲದೇ ಕತ್ತಲೆಯಲ್ಲೂ ಹಸಿರಾಗಿ ಬೆಳೆಯುತ್ತವೆ.
ಪ್ರೋಟೀನ್ ಗಳಿಗೆ ಕ್ಲೋರೊಫಿಲ್ ಅದೇ ಪರಿಮಿತಿಯಾಗಿದೆ.ಅಲ್ಲದೇ ಅಗತ್ಯವಿರುವ ಭಾಗಗಳಿಗೆ ಹೀರಿಕೊಂಡ ಬೆಳಕನ್ನು ಸಾಗಿಸಬಲ್ಲದು. ಪ್ರೋಟೋಕ್ಲೋರೋಫಿಲೈಡ್, ಸಾಮಾನ್ಯವಾಗಿ ಮುಕ್ತ ಆಕಾರದಲ್ಲಿ ಕಂಡುಬರುತ್ತದೆ. ಅಲ್ಲದೇ ಬೆಳಕಿನಡಿಯಲ್ಲಿ ಅತ್ಯಂತ ಹೆಚ್ಚು ವಿಷಮಯ ಮುಕ್ತ ರಾಡಿಕಲ್ಸ್ ಅನ್ನು ಉತ್ಪತ್ತಿ ಮಾಡುವ ಮೂಲಕ ಪೋಟೋಸೆನ್ಸಿಟೈಸರ್ ಆಗಿ ವರ್ತಿಸುತ್ತದೆ.. ಈ ಕಾರಣದಿಂದ ಸಸ್ಯಗಳು, ಕ್ಲೋರೊಫಿಲ್ ನ ಪೂರ್ವವರ್ತಿಗಳ ಪ್ರಮಾಣವನ್ನು ನಿಯಂತ್ರಿಸುವ ಪ್ರಮಾಣಿಕ ಯಾಂತ್ರಿಕ ರಚನೆಯನ್ನು ಬೇಡುತ್ತವೆ. ಪುಷ್ಪಿಯಲ್ಲಿ ಇದನ್ನು ಜೈವಿಕ ಪ್ರತಿಕ್ರಿಯಾಸರಣಿಯಲ್ಲಿ ಇರುವಂತಹ ಮಧ್ಯಂತರ ಸಂಯುಕ್ತಗಳಲ್ಲಿ ಒಂದಾದ ಅಮಿನೊಲೆವ್ಯೂಲಿನಿಕ್ ಆಮ್ಲದ (ALA) ಹಂತದಲ್ಲಿ ಮಾಡಲಾಗುತ್ತದೆ. ALA ಯನ್ನು ಸೇವಿಸುವಂತಹ ಸಸ್ಯಗಳು ಪ್ರೋಟೋಕ್ಲೋರೊಫಿಲೈಡ್ ನಲ್ಲಿ ಅತ್ಯಂತ ಹೆಚ್ಚು ವಿಷದ ಮಟ್ಟವನ್ನು ಪಡೆದುಕೊಳ್ಳುತ್ತದೆ.[೧೧]
ಕ್ಲೋರೋಸಿಸ್ (ಬಿಳಿಚಿಕೆ) ಎಂಬುದು ಎಲೆಗಳು ಅಗತ್ಯವಿರುವಷ್ಟು ಕ್ಲೋರೊಫಿಲ್ ಅನ್ನು ಉತ್ಪತ್ತಿ ಮಾಡದೆ ಅವುಗಳನ್ನು ಹಳದಿಬಣ್ಣಕ್ಕೆ ತಿರುಗಿಸುವ ಕ್ರಿಯೆಯಾಗಿದೆ. ಕಬ್ಬಿಣದ ಬಿಳಿಚಿಕೆ ಎಂದು ಕರೆಯಲ್ಪಡುವ ಕಬ್ಬಿಣದ ಅಥವಾ ಮ್ಯಾಗೇಶಿಯಮ್ಅಥವಾ ನೈಟ್ರೋಜನ್ ಕೊರತೆಯನ್ನು ಒಳಗೊಂಡಂತೆ ಪೌಷ್ಠಿಕದ ಕೊರತೆಯಿಂದ ಕ್ಲೋರೋಸಿಸ್ ಉಂಟಾಗಬಹುದು. ಮಣ್ಣಿನಲ್ಲಿರುವ pH ಪೌಷ್ಠಿಕಾಂಶ ಉಂಟುಮಾಡುವ ಬಿಳಿಚಿಕೆಯಲ್ಲಿಯೂ ಕೂಡ ಕೆಲವೊಮ್ಮೆ ಪಾಲ್ಗೊಳ್ಳುತ್ತದೆ . ಅನೇಕ ಸಸ್ಯಗಳು ಮಣ್ಣಿನಲ್ಲಿ ನಿರ್ದಿಷ್ಟ pHs ನಲ್ಲಿ ಬೆಳೆಯಲ್ಪಡುತ್ತವೆ. ಅಲ್ಲದೇ ಮಣ್ಣಿನಿಂದ ಪೌಷ್ಠಿಕಗಳನ್ನು ಹೀರಿಕೊಳ್ಳುವ ಅವುಗಳ ಸಾಮರ್ಥ್ಯ ಮಣ್ಣಿನ pH ನ ಮೇಲೆ ಅವಲಂಬಿಸಿರುತ್ತದೆ.[೧೨] ವೈರಸ್ , ಬ್ಯಾಕ್ಟೀರಿಯ ಮತ್ತು ಶೀಲಿಂಧ್ರಗಳ ಸೋಂಕಿನಿಂದ ಅಥವಾ ನಿಸ್ಸಾರಗೊಳಿಸುವಂತಹ ಕ್ರಿಮಿಗಳಿಂದಲೂ ಕೂಡ ಬಿಳಿಚಿಕೆಯು ಉಂಟಾಗಬಹುದು.
ಅಡುಗೆಗೆ ಬಳಸುವಂತವು
[ಬದಲಾಯಿಸಿ]ಕ್ಲೋರೊಫಿಲ್ ಆಹಾರಗಳಿಗೆ ಸೇರಿಸುವಂತಹ ವರ್ಣದ್ರವ್ಯವಾಗಿದೆ.ಅಲ್ಲದೇ ಇದರ E ಸಂಖ್ಯೆE140 ಆಗಿದೆ. ಅಡುಗೆ ಮಾಡುವವರು ಕ್ಲೋರೊಫಿಲ್ ಅನ್ನು ವಿವಿಧ ಅಡುಗೆಗಳಿಗೆ ಹಾಗು ಹಸಿರು ಪಾನೀಯಗಳಿಗೆ ಬಣ್ಣವನ್ನು ನೀಡಲು ಬಳಸುತ್ತಾರೆ. ಉದಾಹರಣೆಗೆ;ಶಾವಿಗೆಯಂತಹವುಗಳಿಗೆ ಹಾಗು ಮಂಚಿಪತ್ರೆಯ ಸಾರಗಳಿಗೆ ಬಳಸುತ್ತಾರೆ .[೧೩] ಕ್ಲೋರೊಫಿಲ್ ನೀರಿನಲ್ಲಿ ಕರಗದ ಕಾರಣ ನಮಗೆ ಬೇಕಾದ ಫಲಿತಾಂಶವನ್ನು ಪಡೆಯಲು ಅದನ್ನು ಮೊದಲು ಸ್ವಲ್ಪ ಎಣ್ಣೆಯಲ್ಲಿ ಕಲಸಬೇಕು. 1997 ರಲ್ಲಿ ಫ್ಯ್ರಾಂಕ್ S ಮತ್ತು ಲಿಸಾ ಸಂಗ್ಲೀಯಾನೊ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ದ್ರವರೂಪದ ಕ್ಲೋರೊಫಿಲ್ ಅನ್ನುತಂಪಾಗಿಸಿ-ಒಣಗಿಸಿ ಬಳಸುವವರೆಗು ಹಾಗು ಅದನ್ನು ಪುಡಿಯ ರೂಪದಲ್ಲಿ ಮುಂದಿನ ದಿನಗಳ ಪ್ರಯೋಜನಗಳಿಗೆಂದು ಇರಿಸುವವರೆಗೂ, ಹೀರಿಕೊಳ್ಳುವಿಕೆಯಿಂದ ತೆಗೆದುಕೊಂಡ ದ್ರವರೂಪದ ಕ್ಲೋರೊಫಿಲ್ ಅಸ್ಥಿರ ಹಾಗು ಅದರ ಸ್ವಭಾವವನ್ನು ಯಾವಾಗಲೂ ಕಳೆದುಕೊಳ್ಳುತ್ತಿರುತ್ತದೆ ಎಂದು ನಿರ್ಧರಿಸಲಾಗಿತ್ತು.
ಇವನ್ನೂ ನೋಡಿ
[ಬದಲಾಯಿಸಿ]- ಪೋಟೋಟ್ರೋಫಿಕ್ ಬ್ಯಾಕ್ಟೀರಿಯದಲ್ಲಿರುವ ಬ್ಯಾಕ್ಟೀರಿಯೋಕ್ಲೋರೋಫಿಲ್ ಗೆ ಸಂಬಂಧಪಟ್ಟ ಸಂಯುಕ್ತಗಳು
- ಕ್ಲೋರೊಫಿಲಿನ್ ಎಂಬುದು ಕ್ಲೋರೊಫಿಲ್ ನ ಅರೆ-ಸಂಶ್ಲೇಷಿತ ಜನ್ಯವಾಗಿದೆ
- ಗ್ರೋ ಲೈಟ್ , ದ್ಯುತಿಸಂಶ್ಲೇಷಣೆ ಗೆ ಸಹಾಯ ಮಾಡುವಂತಹ ದೀಪವಾಗಿದೆ
- ಗರಿಷ್ಠ ಆಳವಾದ ಕ್ಲೋರೊಫಿಲ್
- ಕ್ಲೋರೊಫಿಲ್ a, ಅತ್ಯಂತ ಪ್ರಮುಖ ಕ್ಲೋರೊಫಿಲ್ ವರ್ಣದ್ರವ್ಯವಾಗಿದೆ
ಆಕರಗಳು
[ಬದಲಾಯಿಸಿ]- ↑ ಸ್ಪೀರ್, ಬ್ರೇನ್ R. (1997). UCMP ಶಬ್ದಾವಳಿ(ಆನ್ ಲೈನ್) ನಲ್ಲಿ "ದ್ಯುತಿಸಂಶೇಷಕ ವರ್ಣದ್ರವ್ಯಗಳು". ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ, ಬಾರ್ಕ್ಲೇಯಲ್ಲಿರುವ ಪ್ಯಾಲೆನ್ಟಾಲಜಿ ಸಂಗ್ರಹಾಲಯ. ಲಭ್ಯತೆಯನ್ನು ಪರಿಶೀಲಿಸಿರುವುದು ಮಾರ್ಚ್ 12, 2007.
- ↑ ಹಸಿರು, 1984
- ↑ Marker, A. F. H. (1972), "The use of acetone and methanol in the estimation of chlorophyll in the presence of phaeophytin", Freshwater Biology, 2: 361, doi:10.1111/j.1365-2427.1972.tb00377.x
- ↑ Jeffrey, S. W.; Shibata, Kazuo (1969), "SOME SPECTRAL CHARACTERISTICS OF CHLOROPHYLL c FROM TRIDACNA CROCEA ZOOXANTHELLAE", Biol Bull, 136 (1), Marine Biological Laboratory: 54–62, doi:10.2307/1539668, JSTOR 10.2307/1539668
{{citation}}
: Unknown parameter|month=
ignored (help) - ↑ "ಆರ್ಕೈವ್ ನಕಲು". Archived from the original on 2008-04-14. Retrieved 2010-06-24.
- ↑ R. B. Woodward, W. A. Ayer, J. M. Beaton, F. Bickelhaupt, R. Bonnett, P. Buchschacher, G. L. Closs, H. Dutler, J. Hannah, F. P. Hauck, S. Itô, A. Langemann, E. Le Goff, W. Leimgruber, W. Lwowski, J. Sauer, Z. Valenta, and H. Volz (1960). "The total synthesis of chlorophyll" (PDF). Journal of the American Chemical Society. 82: 3800–3802. doi:10.1021/ja01499a093.
{{cite journal}}
: CS1 maint: multiple names: authors list (link) - ↑ Ian Fleming (1967), "Absolute Configuration and the Structure of Chlorophyll", Nature, 216: 151–152, doi:10.1038/216151a0.
{{citation}}
: Unknown parameter|month=
ignored (help) - ↑ Robert Burns Woodward, William A. Ayer, John M. Beaton, Friedrich Bickelhaupt, Raymond Bonnett, Paul Buchschacher, Gerhard L. Closs, Hans Dutler, John Hannah, Fred P. Hauck; et al. (1990). "The total synthesis of chlorophyll a". Tetrahedron. 46 (22): 7599–7659. doi:10.1016/0040-4020(90)80003-Z.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ ಮಾಗಿರುವ ಹಣ್ಣುಗಳಲ್ಲಿ ಕಂಡುಬರುವ ವರ್ಣರಹಿತ ಟೆಟ್ರಫೈರೊಲಿಕ್ ಕ್ಲೋರೊಫಿಲ್ ಕ್ಯಾಟ್ ಬೋಲೈಟ್ ಗಳು ಅತ್ಯಂತ ಪರಿಣಾಮಕಾರಿ ಪ್ರತಿಕೂಲ ಆಕ್ಸಿಡಿಕರಣವಾಗಿದೆ. ಥಮಾಸ್ ಮ್ಯುಲ್ಲರ್ , ಮಾರ್ಕುಸ್ ಅಲ್ ರಿಚ್, ಕರ್ಲ್-ಹ್ಯಾನ್ಸ್ ಆನ್ ಗೋನಿಯ, ಮತ್ತು ಬರ್ನಾರ್ಡ್ ಕ್ರೌಟ್ ಲರ್ ಅನ್ ಜಿವ್. Chem. Int. Ed. 2007 , 46, 8699 –8702 doi:10.1002/anie.200703587
- ↑ ಗ್ರೋಸ್, 1991
- ↑ "ಆರ್ಕೈವ್ ನಕಲು". Archived from the original on 2020-10-24. Retrieved 2010-06-24.
- ↑ ಟರ್ಫೊಗ್ರಾಸ್ ನಲ್ಲಿರುವ ಕಬ್ಬಿಣದ ಬಿಳಿಚಿಕೆ
- ↑ Adams, Jad (2004), Hideous absinthe : a history of the devil in a bottle, Madison, Wisconsin: University of Wisconsin Press, p. 22, ISBN 9780299200008
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಒರೆಗನ್ ಯುನಿವರ್ಸಿಟಿ ಆಫ್ ಹೆಲ್ತ್ ಅಂಡ್ ಸೈನ್ಸ್
- PDF ವಿಮರ್ಶೆ-ಕ್ಲೋರೊಫಿಲ್ d: ದಿ ಪಸಲ್ ರಿಸಾಲ್ವಡ್ Archived 2012-03-13 ವೇಬ್ಯಾಕ್ ಮೆಷಿನ್ ನಲ್ಲಿ.
- ಕ್ಲೋರೊಫಿಲ್ ನಿಂದ ಬೆಳಕಿನ ಹೀರಿಕೆ – NIH ಪುಸ್ತಕಗಳು
- Pages using the JsonConfig extension
- CS1 errors: unsupported parameter
- CS1 maint: multiple names: authors list
- CS1 errors: explicit use of et al.
- Articles with unsourced statements from September 2009
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಟೆಟ್ರಾಪೈರೋಲ್ಸ್
- ದ್ಯುತಿಸಂಶ್ಲೇಷಕ ವರ್ಣದ್ರವ್ಯಗಳು