ವಿಷಯಕ್ಕೆ ಹೋಗು

ಉಧಮ್ ಸಿಂಗ್(ಫಿಲ್ಡ್ ಹಾಕಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Bhagyalakshmi561/ನನ್ನ ಪ್ರಯೋಗಪುಟ ಇಂದ ಪುನರ್ನಿರ್ದೇಶಿತ)
ಉಧಮ್ ಸಿಂಗ್
Personal information
ಪೂರ್ಣ ಹೆಸರು ಉಧಮ್ ಸಿಂಗ್ ಕುಲರ್
ಜನನ (೧೯೨೮-೦೮-೦೪)೪ ಆಗಸ್ಟ್ ೧೯೨೮
ಸನ್ಸರ್ಪುರ್, ಜಲಂಧರ್, ಪಂಜಾಬ್ , ಭಾರತ
ಮರಣ ೨೩ ಮಾರ್ಚ್ ೨೦೦೦
ಸನ್ಸರ್ಪುರ್, ಜಲಂಧರ್, ಪಂಜಾಬ್ , ಭಾರತ
ಎತ್ತರ ೫ ಆಡಿ ೬ ಇಂಚುಗಳು
Playing position ಕೇಂದ್ರ ಮುಂದಕ್ಕೆ
ರಾಷ್ಟ್ರೀಯ ತಂಡ
ಭಾರತ

ಉಧಮ್ ಸಿಂಗ್ ಕುಲರ್ ಅವರು ಉಧಮ್ ಸಿಂಗ್(೧೯೨೮-೨೦೦೦) ಎಂದೇ ಪ್ರಕ್ಯಾತಗೊಂಡಿದ್ದಾರೆ. ಭಾರತವು ಹಿಂದೆಂದು ಕಂಡಿರದ ಅತ್ಯುತ್ತಮ ಹಾಕಿ ಆಟಗಾರರಲ್ಲಿ ಇವರು ಒಬ್ಬರಾಗಿದ್ದಾರೆ.ಅವರು ಹಾಫ್ ಬ್ಯಾಕ್ ಮತ್ತು ಲೆಫ್ಟ್ ಇನ್ಸೈಡ್, ರೈಟ್ ಇನ್ಸೈಡ್, ಸೆಂಟರ್ ಫಾರ್ವಡ್ ಮತ್ತು ಸೆಂಟರ್ ಹಾಫ್ ಸ್ಥಾನಗಳಿಂದ ಆಡುವ ಚಾರ್ತುಯ ಹೊಂದಿದ್ದರು

ಬಾಲ್ಯ

[ಬದಲಾಯಿಸಿ]

ಇವರು ೪ ಆಗಷ್ಟ ೧೯೨೮ರಂದು ಪಂಜಾಬ್ಜಲಾಂಧರ್ ಕಂಟೋನ್ಮೆಂಟ್ ಸಮೀಪದ ಸನ್ಸಾರ್ಪುರದಲ್ಲಿ ಜನಿಸಿದರು. ಅವರು ವಿಕ್ಟರ್ ಹೈಸ್ಕೂಲ್ ಮತ್ತು ಡಿಎವಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. .

ರಾಷ್ಟ್ರೀಯ ಸಾಧನೆಗಳು

[ಬದಲಾಯಿಸಿ]

ಇವರು ಕೇವಲ ೫ ಅಡಿ ೬ ಇಂಚುಗಳಷ್ಟು ಎತ್ತರವಿದ್ದು ಮತ್ತು ೫೮ ಕೆಜಿ ತೂಕವನ್ನು ಹೊಂದಿದ್ದರೂ, ಅದು ಅವರ ಆಟದ ಮೇಲೆ ಎಂದು ಪ್ರಭಾವ ಬೀರಲಿಲ್ಲ.ಇವರು ಒಲಂಪಿಕ್ಸ್ ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ.ಲಿಸ್ಲಿ ಕ್ಲಾಡಿಯಸ್ ಹೊರತುಪಡಿಸಿ, ೩ ಚಿನ್ನದ ಪದಕ ಹಾಗು ೧ ಬೆಳ್ಳಿ ಪದಕವನ್ನು ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ಗೆಲ್ಲಲು ಸಾಧ್ಯವಾದ ಆಟಗಾರರಿವರಾಗಿದ್ದಾರೆ.೧೯೪೭ರಲ್ಲಿ ಅವರ ಕಾಲೇಜಿನ ಹಾಕಿ ತಂಡದ ನಾಯಕರಾಗಿದ್ದರು ಹಾಗೂ ಅದೇ ವರ್ಷದಲ್ಲಿ ಪಂಜಾಬ್ ಪೊಲೀಸರಿಂದ ನೇಮಕಗೊಂಡರು. ಆ ಸಮಯದಲ್ಲಿ ರಾಷ್ಟ್ರದ ಅತ್ಯುತ್ತಮ ಹಾಕಿ ತಂಡಗಳಲ್ಲಿ ಇದು ಒಂದಾಗಿತ್ತು. ೧೮ ವರ್ಷಗಳ ಕಾಲ ಅವರು ಪಂಜಾಬ್ ಪೊಲೀಸರ ಪರ ಆಡಿದರು ಮತ್ತು ಈ ಅವದಿಯಲ್ಲಿ ತಂಡವನ್ನು ಒಂದೆರಡು ಬಾರಿ ಮುನ್ನಡೆಸಿದರು. ಇವರನ್ನು ೧೯೫೪ ರಲ್ಲಿ ಪಂಜಾಬ್ ರಾಜ್ಯ ಹಾಕಿ ತಂಡದ ನಾಯಕನನ್ನಾಗಿ ನೇಮಿಸಲಯಿತು.

ಅಂತರಾಷ್ಟ್ರೀಯ ಸಾಧನೆಗಳು

[ಬದಲಾಯಿಸಿ]

೧೯೪೮ ರ ಲಂಡನ್ ಒಲಂಪಿಕ್ಸ್ ನಲ್ಲಿ ತಮ್ಮಚೊಚ್ಚಲ ಪಂದ್ಯವನ್ನು ಆಡಿತ್ತಿದ್ದರು, ಆದರೆ ಅವರ ಬೆರಳಿಗಾದ ಗಾಯದ ಕಾರಣದಿಂದ ಅವಕಾಶ ಕಳೆದುಕೊಂಡರು.ಅವರು ೧೯೪೯ ರಲ್ಲಿ ಅಫ್ಘಾನಿಸ್ಠಾನ ವಿರುದ್ಧದ ಹಾಕಿ ಸರಣಿಯಲ್ಲಿ ಆಡಿದರು, ಸರಣಿಯಲ್ಲಿ ಭಾರತವು ಗೆದ್ದಿತು. ೧೯೫೨ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಂಪಿಕ್ಸ್ ಪಂಧ್ಯದಲ್ಲಿ ಉಧಮ್ ಸಿಂಗ್ ಅವರು ಕೆ.ಡಿ. ಸಿಂಗ್ ಬಾಬು ಅವರ ನಾಯಕತ್ವದಲ್ಲಿ ಚಿನ್ನದ ಪದಕ ಗೆದ್ದರು. ಹಾಗು ೧೯೫೬ ರ ಮೆಲ್ಬೋರ್ನ್ ಒಲಂಪಿಕ್ಸ್ ಪಂದ್ಯದಲ್ಲಿ ಬಲ್ ಬೀರ್ ಸಿಂಗ್ ಅವರ ನಾಯಕತ್ವದಲ್ಲಿ ಭಾರತ ತಂಡವು ಚಿನ್ನದ ಪದಕ ಗೆಲ್ಲುವುದರಲ್ಲಿ ಯಶಸ್ವಿಯಾದರು. ೧೯೬೦ ರ ರೋಮ್ ಒಲಂಪಿಕ್ಸ್ ನಲ್ಲಿ ಇವರು ಭಾಗವಹಿಸಿದರು. ಇವರ ೪ನೇ ಹಾಗು ಕೊನೆಯ ಒಲಂಪಿಕ್ಸ್ ಟೋಕಿಯೊದಲ್ಲಿ ೧೯೬೪ ರಲ್ಲಿ ನಡೆಯಿತು. ರೋಮ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನವು ಭಾರತ ತಂಡ್ದ ವಿರುದ್ಢ ಆಡಿ ಚಿನ್ನದ ಪದಕ ಗೆದ್ದಿತು. ಆದರೆ ಟೋಕಿಯೊದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ೧-೦ ಅಂಕದಲ್ಲಿ ಸೋಲಿಸಿ ಚಿನ್ನದ ಪದಕವನ್ನು ತಮ್ಮ ಮುಡಿಗೆ ಏರಿಸಿಕೊಂಡರು.

ಪ್ರಶಸ್ತಿ ಹಾಗೂ ಪದಕಗಳು

[ಬದಲಾಯಿಸಿ]

ಉಧಮ್ ಸಿಂಗ್ ಅವರ ಹಾಕಿ ಕಡೆಗಿನ ಸೇವೆ ಮತ್ತು ಕೊಡುಗೆಗಳನ್ನು ನೋಡಿ ಭಾರತ ಸರ್ಕಾರವು ಇವರಿಗೆ ೧೯೬೫ ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. ೩ ಚಿನ್ನದ ಪದಕ ಹಾಗೂ ೧ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ

ನಾಯಕತ್ವ

[ಬದಲಾಯಿಸಿ]

ಇವರು ೧೯೫೫ ರಲ್ಲಿ ವಾರ್ಸಾ ಮತ್ತು ೧೯೫೯ ರಲ್ಲಿ ಆಫ್ರಿಕಾ ಪ್ರವಾಸಕ್ಕೆ ತೆರಳಿದ ಭಾರತ ಹಾಕಿ ಫೆಡರೇಷನ್ ತಂಡದ ನಾಯಕರಗಿದ್ದರು. ಉಧಿ ಅವರ ತೃತ್ವದಲ್ಲಿ ಲಿಯೊನ್ಸ್ ನಲ್ಲಿ ನಡೆದ ವಿಶ್ವಕಪ್ ಹಾಕಿ ಪಂದ್ಯದಲ್ಲಿ ಭಾರತ ತಂಡವು ಭಾಗವಹಿಸಿತು.

ತರಬೇತಿ

[ಬದಲಾಯಿಸಿ]

ಉಧಮ್ ಸಿಂಗ್ ಅವರು ಭಾರತೀಯ ಹಾಕಿ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೬೮ ರ ಮೆಕ್ಸಿಕೊ ಒಲಂಪಿಕ್ಸ್ ನಲ್ಲಿ ತಮ್ಮ ತಂಡ ಕಂಚಿನ ಪದಕ ಗೆಲ್ಲುವುದರಲ್ಲಿ ಸಹಾಯ ಮಾಡಿದರು. ೧೯೭೦ರ ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದರು. ಹಾಕಿಯಲ್ಲಿ ಸಕ್ರೀಯರಾಗಿ ತೊಡಗುವ ಕಾರಣದಿಂದಾಗಿ ಅವರು ನಿವೃತ್ತಿಯ ನಂತರವು ಚಿಕ್ಕ ಹುಡುಗರಿಗೆ ತರಬೇತಿ ನೀಡುತ್ತಿದ್ದರು.

ಉಲ್ಲೇಖಗಳು

[ಬದಲಾಯಿಸಿ]

[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2020-04-17. Retrieved 2018-10-27.