ಸದಸ್ಯ:Bhagyalakshmi561

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ಎಲ್ಲರಿಗೂ ನನ್ನ ನಮಸ್ಕಾರಗಳು.ನನ್ನ ಹೆಸರು ಭಾಗ್ಯಲಕ್ಶ್ಮಿ ಎನ್ ಹಿರೇಮಠ. ನನ್ನ ತಂದೆ ನಾಗಯ್ಯ ಹಿರೇಮಠ, ತಾಯಿ ನಳಿನಾಕ್ಶಿ,ಹಾಗೂ ಅಣ್ಣ ಮೋಹಿತ್. ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ.ನನ್ನ ತಂದೆ ಎಚ್ ಎ ಎಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ತಂದೆ ತಾಯಿ ಮೂಲತ ಬೆಳಗಾವಿಯವರಾಗಿದ್ದು ಕೆಲಸಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಮ್ಮದು ಒಂದು ಪುಟ್ಟ ಸಂಸಾರ. ಯಾವಾಗಲು ಸಂತೋಷದಿಂದ ಕೂಡಿರುತ್ತದೆ. ನನ್ನ ತಂದೆ ತಾಯಿ ಯಾವಾಗಲೂ ನಮ್ಮ ಸಂತೋಷದಲ್ಲೇ ಅವರ ಸಂತೋಷವನ್ನು ಕಾಣುತ್ತಾರೆ.ನಾನು ಬಹಳ ಮೃದು ಸ್ವಭಾವದವಳು. ಚಿಕ್ಕ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತೇನೆ.ನನಗೆ ಬಹಳ ಮಿತ್ರರು ಇಲ್ಲ ಆದರೆ ಇರುವ ಮಿತ್ರರು ನಿಜವಾದ ಮಿತ್ರರು. ನಾನು ನನ್ನ ಅಣ್ಣ ಬಹಳ ಜಗಳ ಮಾಡುತ್ತೇವೆ ಆದರೆ ಸ್ವಲ್ಪ ಸಮಯ ಮಾತ್ರ ಆನಂತರ ಮತ್ತೆ ಒಂದಾಗಿ ಬಿಡುತ್ತೇವೆ. ಇನ್ನು ಅಜ್ಜಿ ತಾತರ ಪ್ರೀತಿಯನ್ನು ಬಹಳ ದಿನ ಅನುಭವಿಸುವ ಅವಕಾಶ ನನಗಿರಲಿಲ್ಲ..ನನಗೆ ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳುವುದು ಎಂದರೆ ಬಹಳ ಇಷ್ಟ.

ನನ್ನ ಶಿಕ್ಷಣ[ಬದಲಾಯಿಸಿ]

ನಾನು ೧-೫ನೇ ತರಗತಿಯನ್ನು ಎಚ್ ಎ ಎಲ್ ಶಾಲೆಯಲ್ಲಿ ನಡೆಸಿದ್ದೇನೆ. ನಾವು ಸ್ವಂತ ಮನೆ ಮಾಡಿದ ಕಾರಣ ಶಾಲೆಯನ್ನು ಬದಲಾಯಿಸಬೇಕಾಗಿತ್ತು. ೬-೧೦ನೇ ತರಗತಿಯನ್ನು ಜ್ಯೂಬಿಲಿ ಶಾಲೆಯಲ್ಲಿ ನಡೆಸಿದ್ದೇನೆ. ಹಾಗೂ ಪಿ.ಯು.ಸಿಯನ್ನು ನ್ಯೂ ಹಾರಿಜನ್ ನಲ್ಲಿ ನಡೆಸಿದ್ದೇನೆ.ಈಗ ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್. ಸಿ ಮಾಡುತ್ತಿದ್ದೇನೆ.

ನನ್ನ ಹವ್ಯಾಸಗಳು[ಬದಲಾಯಿಸಿ]

ನನಗೆ ಸಂಗೀತ ಆಲಿಸುವುದೆಂದರೆ ಬಹಳ ಇಷ್ಟ. ಇನ್ನು ನನ್ನ ಹವ್ಯಾಸಗಳೆಂದರೆ ಪುಸ್ತಕ ಓದುವುದು,ಚಿತ್ರ ಬಿಡಿಸುವುದು,ಹರಟೆ ಹೊಡೆಯುವುದು,ಹಾಗೂ ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳುವುದು.

ನನ್ನ ಪ್ರವಾಸ[ಬದಲಾಯಿಸಿ]

ಮುರುಡೇಶ್ವರ
ಜೋಗ ಜಲಪಾತ
ಮೈಸೂರು
ಮಲೆ ಮಹದೇಶ್ವರ

ನಾನು ಈಗಾಗಲೆ ಕರ್ನಾಟಕದ ಎಲ್ಲಾ ಭಾಗಗಳನ್ನುನೋಡಿದ್ದೇನೆ. ಇದು ನನಗೆ ಬಹಳ ಸಂತೋಷದ ವಿಷಯ.ನಮ್ಮವರ ಜೊತೆ ಪ್ರವಾಸಕ್ಕೆ ಹೊಗುವುದೆಂದರೆ ಎಲ್ಲಿಲ್ಲದ ಆನಂದ. ನಾವು ಹೀಗೆ ಪ್ರವಾಸಕ್ಕೆ ತೆರಳಿದ್ದಾಗ ಬಹಳ ಭಯಂಕರ ಘಟನೆಗಳು ಸಂಭವಿಸಿದುಂಟು ಹಾಗು ಅಷ್ಟೇ ಆನಂದದ ಅನುಭವವು ಆಗಿದ್ದುಂಟು. ಈ ಎಲ್ಲಾ ವಿಷಯವನ್ನು ಈಗ ನೆನಪಿಸಿಕೊಂಡಾಗ ಆನಂದದ ಜೊತೆಗೆ ಆಶ್ಚರ್ಯವೂ ಆಗುತ್ತದೆ. ನಾವು ಪ್ರತಿ ವರ್ಷ ಮಲೆ ಮಹದೇಶ್ವರ ಬೆಟ್ಟಕ್ಕೆ ಬೇಟಿ ನೀಡುತ್ತೇವೆ. ಅಲ್ಲಿನ ಆ ಪ್ರಕೃತಿ ಸೌಂದರ್ಯವನ್ನು ಸವಿದವರೆ ಬಲ್ಲರು. ನಾವು ಇತ್ತೀಚಿಗಷ್ಟೇ ಮಡಿಕೇರಿಗೆ ಹೋಗಿ ಬಂದೆವು. ಆ ಪ್ರಕೃತಿ ಸೌಂದರ್ಯ ಎಲ್ಲಿ ಹುಡುಕಿದರು ಸಿಗದು. ನಾವು ಕರ್ನಾಟಕದಲ್ಲಿ ಸುತ್ತಿರುವ ಅಷ್ಟು ಜಾಗಗಳಲ್ಲಿ ನನಗೆ ಇಷ್ಟವಾದ ಸ್ಥಳವೆಂದರೆ ಜೋಗ ಜಲಪಾತ, ಮುರುಡೇಶ್ವರ, ಹೊರನಾಡು, ಶೃಂಗೇರಿ, ಐಹೊಳೆ, ಹಂಪಿ, ಸಾತ್ತೊಡ್ಡಿ ಜಲಪಾತ, ಯಾಣ, ಮಡಿಕೇರಿ, ಧರ್ಮಸ್ಠಳ, ಕೊಡಚಾದ್ರಿ, ಕೆಮ್ಮನಗುಂಡಿ, ಕಲತ್ತಗಿರಿ ಜಲಪಾತ, ನಂದಿ ಬೆಟ್ಟಇನ್ನು ಹಲವಾರು. ಇನ್ನೂ ನನ್ನ ಸ್ನೇಹಿತರ ಜೊತೆಗೆ ೧೦ನೇ ತರಗತಿಯಲ್ಲಿ ಇರುವಾಗ ಮೈಸೂರಿಗೆ ಕರೆದುಕೊಡು ಹೋಗಿದ್ದರು. ಮೈಸೂರು ಎಂದ ಕೂಡಲೆ ನಮ್ಮ ನೆನಪಿಗೆ ಬರುವುದೆ ಭವ್ಯವಾದ ಅರಮನೆ. ಅರಮನೆಯ ನೋಟವೆ ಚಂದ, ಎಷ್ಟು ನೋಡಿದರು ಮತ್ತೆ ನೋಡಬೇಕೆಂಬ ಆಸೆ ಹೆಚ್ಚುತ್ತಲೆ ಇರುತ್ತದೆ. ಅಲ್ಲಿಂದ ನಮ್ಮನ್ನು ಕೆ.ಆರ್.ಎಸ್ ಅಣೆಕಟ್ಟಿಗೆ ಕರೆದುಕೊಂಡು ಹೋದರು. ಆಗ ಸಾಯಂಕಾಲದ ಸಮಯ. ಅಲ್ಲಿನ ಆರ್ಕಷನೀಯವಾದ ನೀರಿನ ನೃತ್ಯವನ್ನು ನೋಡಿ ನಾವು ಮೈಮರೆತು ನಿಂತುಬಿಟ್ಟೆವು. ಅಲ್ಲಿಗೆ ನಮ್ಮ ಮೈಸೂರು ಪ್ರವಾಸವನ್ನು ಪೂರ್ಣಗೊಳಿಸಿ ನಮ್ಮ ಮನೆಗೆ ಹಿಂತಿರುಗಿದೆವು. ನನಗೂ ಮೈಸೂರಿಗೂ ಬಹಳ ನಂಟು ಎಂದೆನಿಸುತ್ತದೆ ಏಕೆಂದರೆ ನಾನು ದ್ವಿತೀಯ ಪಿಯುಸಿಯಲ್ಲಿದ್ದಾಗ, ಮತ್ತೆ ಮೈಸುರಿಗೆ ಕರೆದುಕೊಂಡು ಹೋಗಿದ್ದರು. ನಮ್ಮನ್ನು ರೇಶ್ಮೆ ಹುಳುಸಾಕುವ ಹಾಗು ರೇಶ್ಮ್ ತಯಾರಿಸುವ ಕಾರ್ಖಾನೆಗೆ ಕರೆದುಕೊಂಡು ಹೋಗಿದ್ದರು.ಅಲ್ಲಿ ನಾವು ಬಹಳ ಕಲಿತೆವು. ಒಂದು ಸೀರೆ ತಯಾರಿಸಲು ಅವರು ಪಡುವ ಕಷ್ಟ ಎಷ್ಟು ಎಂದು ನಮಗೆ ತಿಳಿಯಿತು.

ನನ್ನ ಗುರಿ[ಬದಲಾಯಿಸಿ]

ನನ್ನ ತಂದೆ ತಾಯಿ ನನಗೆ ಯಾವುದೇ ರೀತಿಯ ಕಷ್ಟವನ್ನು ಕೊಡದೆ ಬೆಳೆಸಿದ್ದಾರೆ. ಒಳ್ಳೆ ತಂದೆ ತಾಯಿಯಾಗಿ ಮಕ್ಕಳಿಗೆ ಏನು ಮಾಡಬೇಕೊ ಎಲ್ಲವನ್ನು ಅವರು ಮಾಡ್ಡಿದಾರೆ. ಇನ್ನೂ ನಮ್ಮ ಕೆಲಸವನ್ನು ನಾವು ನಿರ್ವಹಿಸಬೇಕು ಅಷ್ಟೇ. ಒಮ್ಮೊಮ್ಮೆ ಗೊತ್ತಿಲ್ಲದೆ ನಮ್ಮ ತಂದೆ ತಾಯಿಯ ಮೇಲೆ ನಾವು ರೇಗುತ್ತೇವೆ.ಆದರೂ ಅದನ್ನು ಮನ್ನಸ್ಸಿನ್ನಲ್ಲಿ ಇಟ್ಟುಕೊಳ್ಳದೆ ಇರುವುದು ಅವರ ದೊಡ್ಡು ಗುಣ. ಇಷ್ಟು ಕಷ್ಟ ಪಡುವ ಅವರಿಗೆ ನಾನು ಏನಾದರು ಮಾಡಲೆಬೇಕು . ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದೆ ನನ್ನ ಆಸೆ.