ಸದಸ್ಯ:Aaroha Malagi/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಂಗ್ ಬರ್ಡ್-ಆಫ್-ಪಾರಡೈಸ್

ಸ್ವರ್ಗದ ಹಕ್ಕಿಗಳು[ಬದಲಾಯಿಸಿ]

ಆಂಗ್ಲ ಭಾಷೆಯಲ್ಲಿ ಬರ್ಡ್ಸ್-ಆಫ್-ಪಾರಡೈಸ್ ಎಂದು ಗುರುತಿಸಲಾಗುವ ಈ ಅನನ್ಯ ಹಕ್ಕಿಗಳು ಪಾರಡಿಸಿಡೆ (Paradisaeidae) ಕುಟುಂಬದ  ಪಾಸೆರಿಫಾರ್ಮ್ಸ್ (Passeriformes) ಶ್ರೇಣಿಗೆ ಸೇರಿದೆ. ಪಾರಡಿಸಿಡೆ ಕುಟುಂಬದಲ್ಲಿ ಒಟ್ಟು ೧೫ ಕುಲದ ೪೨ ಜಾತಿಗಳಿವೆ. ಈ ಪಕ್ಷಿಯ ಬಹುತೇಕ ಸಂಖ್ಯೆಗಳು ಪೂರ್ವ ಇಂಡೊನೇಶಿಯ, ಪಾಪುಆ ನ್ಯೂ ಗಿನಿ ಹಾಗು ಪೂರ್ವ ಆಸ್ಟ್ರೇಲಿಯದಲ್ಲಿ ಕಂಡುಬರುತ್ತವೆ. ಈ ಕುಟುಂಬದ ವೈಶಿಷ್ಟ್ಯ ಇವುಗಳ ಗಂಡು ಹಕ್ಕಿಯ ಆಕರ್ಷಕ ಗರಿಗಳು. ವಿಶೇಷವಾಗಿ ಅದರ ಕೊಕ್ಕು, ರೆಕ್ಕೆ ಹಾಗೂ ಬಾಲದಿಂದ ಮೂಡುವ ಉದ್ದ ಮತ್ತು ಸುದೀರ್ಘವಾದ ಗರಿಗಳು. ಇವುಗಳ ವಾಸಸ್ಥಾನ ದಟ್ಟವಾದ ಮಳೆಕಾಡು ಪ್ರದೇಶ. ಈ ಹಕ್ಕಿಗಳ ಮುಖ್ಯ ಆಹಾರ ಹಣ್ಣು, ಕೆಲವೊಮ್ಮೆ ಕ್ರಿಮಿ-ಕೀಟಗಳನ್ನು ಸಹ ಭಕ್ಷಿಸುತ್ತವೆ.

ಈ ಕುಟುಂಬದ ಹಲವಾರು ಜಾತಿಗಳು ಮನುಷ್ಯರ ಚಟುಟಿಕೆಗಳಿಂದ ಅಪಾಯಕ್ಕೆ ಒಳಗಾಗಿವೆ.

ಜಾತಿಗಳು[ಬದಲಾಯಿಸಿ]

ಕುಲ : ಲೈ‍ಕೊಕೊರಾಕ್ಸ್

·         ಪಾರಡೈಸ್-ಕ್ರೊ, 

ಕುಲ : ಮನಕೊಡಿಯ

·         ಗ್ಲಾಸಿ-ಮಾಂಟಲ್ಡ್ ಮಾನುಕೊಡ್

·         ಜೊಬಿ ಮಾನುಕೊಡ್, 

·         ಕ್ರಿಂಕಲ್-ಕಾಲರ್ಡ್ ಮಾನುಕೊಡ್

·         ಕರ್ಲ್-ಕ್ರೆಸ್ಟೆಡ್ ಮಾನುಕೊಡ್

ಕುಲ: ಫೊನಿಗಾಮಸ್

·         ಟ್ರಂಪೆಟ್ ಮಾನುಕೊಡ್

ಕುಲ: ಪಾರಡಿಗಾಲ

·         ಲಾಂಗ್-ಟೇಲ್ಡ್ ಪಾರಡಿಗಲ್ಲಾ 

·         ಶಾರ್ಟ್-ಟೇಲ್ಡ್ ಪಾರಡಿಗಲ್ಲಾ

ಕುಲ: ಅಸ್ಟ್ರಾಪಿಯಾ

  • ಆಫ್ರಾಕ್ ಅಟ್ರಾಪಿಯಾ, 
  • ಸ್ಪ್ಲೆಂಡಿಡ್ ಆಟ್ರಾಪಿಯಾ
  • ರಿಬ್ಬನ್ತ್ ಟೇಲ್ಡ್ ಆಟ್ರಾಪಿಯಾ, 
  • ಪ್ರಿ ಸ್ಟೆಫನಿ ಆಟ್ರಾಪಿಯಾ, 
  • ಹುಆನ್ ಆಟ್ರಾಪಿಯಾ

ಕುಲ: ಪರೊಟಿಯ

·         ವೆಸ್ಟರ್ನ್ ಪರೋಟಿಯ

·         ಕ್ವೀನ್ ಕರೊಲಾನ ಪರೋಟಿಯ

·         ಬ್ರಾನ್ಸ್ ಪರೋಟಿಯ

·         ಲಾಸ್ ನ ಪರೋಟಿಯ

·         ಇಸ್ಟರ್ನ್ ಪರೋಟಿಯ

ಕುಲ: ಟಿಲೊರಿಸ್

·         ಮ್ಯಾಗ್ನಿಫಿಸೆಂಟ್ ರೈಫಲ್ ಬರ್ಡ್

·         ಗ್ರೌಲಿಂಗ್ ರೈಫಲ್ ಬರ್ಡ್

·         ಪಾರಡೈಸ್ ರೈಫಲ್ ಬರ್ಡ್

·         ವಿಕ್ಟೊರಿಯಾಸ್ ರೈಫಲ್ ಬರ್ಡ್

ಕುಲ: ಎಪಿಮಾಕಸ್

·         ಬ್ಲಾಕ್ ಸಿಕಲ್ ಬಿಲ್

·         ಬ್ರೌನ್ ಸಿಕಲ್ ಬಿಲ್

ಕುಲ: ಡ್ರೆಪರ್ನೊನಿಸ್

·         ಬ್ಲಾಕ್-ಬಿಲ್ಡ್ ಸಿಕಲ್ ಬಿಲ್

·         ಪೆಲ್-ಬಿಲ್ಡ್ ಸಿಕಲ್ ಬಿಲ್

ಕುಲ: ಸಿಸಿನಿರಸ್

·         ಮಾಗ್ನಿಫಿಸೆಂಟ್ ಬರ್ಡ್-ಆಫ್-ಪಾರಡೈಸ್

·         ವಿಲ್ಸನ್ ಬರ್ಡ್-ಆಫ್-ಪಾರಡೈಸ್

·         ಕಿಂಗ್-ಆಫ್-ಪಾರಡೈಸ್

ಕುಲ : ಪಾರಡಿಸಿಡೆ

·         ಲೆಸರ್ ಬರ್ಡ್-ಆಫ್-ಪಾರಡೈಸ್

·         ಗ್ರೇಟರ್ ಬರ್ಡ್-ಆಫ್-ಪಾರಡೈಸ್

·         ರಾಗಿಯಾನ ಬರ್ಡ್-ಆಫ್-ಪಾರಡೈಸ್

·         ಗೊಲ್ಡಿಸ್ ಬರ್ಡ್-ಆಫ್-ಪಾರಡೈಸ್

·         ರೆಡ್ ಬರ್ಡ್-ಆಫ್-ಪಾರಡೈಸ್

·         ಎಂಪರರ್ ಬರ್ಡ್-ಆಫ್-ಪಾರಡೈಸ್

·         ಬ್ಲೂ ಬರ್ಡ್-ಆಫ್-ಪಾರಡೈಸ್[೧]

ವಿವರಣೆ[ಬದಲಾಯಿಸಿ]

ಸ್ವರ್ಗದ ಹಕ್ಕಿಗಳು ಕಾಗೆ ಜಾತಿಯ ಬಹಳ ಹತ್ತಿರದ ಸಂಬಂದಿಗಳು. ಇವುಗಳ ಗಾತ್ರ ೫೦ ಗ್ರಾಮ್ ನ ಕಿಂಗ್-ಆಫ್-ಪಾರಡೈಸ್ ನಿಂದ ಹಿಡಿದು ೪೩೦ ಗ್ರಾಮ್ ನ ಕರ್ಲ್-ಕ್ರೆಸ್ತೆಡ್ ಮಾನುಕೊಡ್ ತನಕ ಕಾಣಬಹುದು. ಬಹಳಷ್ಟು ಜಾತಿಗಳಲ್ಲಿ, ಗಂಡಿನ ಬಾಲ ಹೆಣ್ಣಿನ ಬಾಲಕಿಂತ ಉದ್ದವಾಗಿರುತ್ತದೆ. ಕೆಲವು ಜಾತಿಯ ಗಂಡುಗಳಲ್ಲಿ ಪುಕ್ಕವು ಮೊಂಡು ಅಥವ ರಚನಾತ್ಮಕ ಬದಲಾವಣೆಯನ್ನು ಒಳಗೊಂಡು ಶಬ್ದವನ್ನು ಉತ್ಪತ್ತಿಸುತ್ತವೆ. ಕೊಕ್ಕೆಯ ಆಕಾರದಲ್ಲಿ ಕುಟುಂಬದ ಮಧ್ಯೆ ಬಹಳಷ್ಟು ವ್ಯತ್ಯಾಸವಿದೆ. ಸಿಕಲ್ ಬಿಲ್ಸ್ (ಕುಡಗೋಲು ಆಕಾರ) ಕೊಕ್ಕೆಯ ತರ ತಿರುವಿ ಹಾಗು ಉದ್ದವಾಗಿರಬಹುದು, ಅಥವ ಆಸ್ಟ್ರೆಪಿಯಸ್ ನ ತರಹ ಸಣ್ಣ ಮತ್ತು ತೆಳ್ಳಗಿರಬಹುದು. ದೇಹದ ಗಾತರದ ತರ ಕೊಕ್ಕೆಯ ಅಳತೆಯಲ್ಲು ಲಿಂಗದ ನಡುವೆ ವ್ಯತ್ಯಾಸವಿದೆ, ಬಹಳಷ್ಟು ಜಾತಿಯಲ್ಲಿ ಹೆಣ್ಣಿನಲ್ಲಿ ಉದ್ದವಾದ ಕೊಕ್ಕೊ ಕಾಣಬಹದು.

ಆವಾಸ ಸ್ಥಾನ[ಬದಲಾಯಿಸಿ]

ಪಾರಡೈಸ್ ಹಕ್ಕಿಗಳ ಮುಖ್ಯ ವೈವಿಧ್ಯತೆ ನ್ಯೂ ಗಿನಿಯ ದ್ವೀಪದಲ್ಲಿ ಕಾಣಬಹುದು; ಎರಡು ಕುಲಗಳು ಮಾತ್ರ ಬೇರೆ ಸ್ಥಳದಲ್ಲಿ ಕಂಡುಬರುತ್ತವೆ. ಈ ಕುಲಗಳು ಲೈಕೊಕೊರಾಕ್ಸ್ ಮತ್ತು ಸೆಮಿಯಾಪ್ಟೆರ, ಈ ಎರಡು ಜಾತಿಗಳು ಮಲುಕು ದ್ವೀಪದಲ್ಲಿ ಮಾತ್ರ ಕಂಡು ಬರುತ್ತದೆ. ಟಿಲೊರಿಸ್ ಕುಲದ ರೈಫಲ್-ಬರ್ಡ್ ನಲ್ಲಿ (ಬಂದೂಕು ಹಕ್ಕಿ) ಒಂದು ಜಾತಿ ಆಸ್ಟ್ರೇಲಿಯದ ಪಶ್ಚಿಮ ಕರಾವಳಿಗೆ ಮತ್ತು ನ್ಯೂ ಗಿನಿಗೆ ಸೀಮಿತವಾಗಿದೆ. ಬೇರೆ ಎಲ್ಲಾ ಸ್ವರ್ಗದ ಪಕ್ಷಿಗಳು ನ್ಯೂ ಗಿನಿ ಹಾಗು ಅದರ ಸುತ್ತ-ಮುತ್ತಲಿನ ದ್ವೀಪದಲ್ಲಿ ಮಾತ್ರ ಕಂಡುಬರುತ್ತದೆ. ಅದರಲ್ಲೂ, ಬಹಳಷ್ಟು ಜಾತಿಗಳಿಗೆ ನಿರ್ಬಂಧಿತ ವ್ಯಾಪ್ತಿ ಇವೆ.

ಬಹುತೇಕ ಸ್ವರ್ಗದ ಪಕ್ಷಿಗಳು ಉಷ್ಣವಲಯದ ಅರಣ್ಯದಲ್ಲಿ ವಾಸಿಸುತ್ತವೆ, ಜೊತೆಯಲ್ಲಿ ಮಳೆಕಾಡುಗಳು, ಕೆಸರು ಹಾಗು ಜೌಗು ಅರಣ್ಯದಲ್ಲೂ ಸಹ ವಾಸಿಸುತ್ತಾವೆ. ಸುಮಾರಾಗಿ ಎಲ್ಲಾ ಹಕ್ಕಿಗಳು ಹಲಾವಾರು ಜಾತಿಗಳು ಮ್ಯಾಂಗ್ರೋವ್ ( ಕಾಂಡ್ಲ ಸಸ್ಯದ ಅರಣ್ಯ) ನಲ್ಲಿ ಕೂಡ ಕಂಡು ಬಂದಿವೆ. ಅತೀ ದಕ್ಷಿಣ ಮಟ್ಟದಲ್ಲಿ ವಾಸಿಸುವ ಈ ಕುಲದ ಹಕ್ಕಿಯ ಹೆಸರು ಆಸ್ಟ್ರೇಲಿಯಾದಲ್ಲಿ ಸಿಗುವ ಪಾರಡೈಸ್ ರೈಫಲ್-ಬರ್ಡ್, ಇವು ಉಪೋಷ್ಣವಲದಲ್ಲಿ ಹಾಗು ಸಮಸಿತೋಷ್ಣ. ಈ ಕುಲದ ೪೦ ಜಾತಿಗಳಲ್ಲಿ ಸುಮಾರು ೩೦ ಜಾತಿಗಳು ಹೆಚ್ಚಾಗಿ ಪರ್ವತ, ಗುಡ್ಡ-ಬೆಟ್ಟಗಳ ವಾತಾವರದಲ್ಲಿ ಕಂಡುಬರುತ್ತವೆ.[೨]

  1. http://www.cornell.edu/video/birds-of-paradise-project
  2. https://www.nationalgeographic.org/education/birds-of-paradise/