ಸದಸ್ಯ:ರಾಜಶೇಖರ.ಚಂ.ಡೊಂಬರಮತ್ತೂರ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲ್ಲಿಕಾರ್ಜುನ ಬಿ. ಮಾನ್ಪಡೆ

thumb|ಡಾ.ಮಲ್ಲಿಕಾರ್ಜುನ ಮಾನ್ಪಡೆ

ಮಲ್ಲಿಕಾರ್ಜುನ ಮಾನ್ಪಡೆ ಯವರು ಯಾದಗಿರಿ ಜಿಲ್ಲೆಶಹಾಪುರ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ದಿನಾಂಕ : ೨೦.೦೭.೧೯೭೯ ರಲ್ಲಿ ಜನಿಸಿದರು. ಇವರ ತಂದೆ ಶ್ರೀಯುತ.ಭೀಮರಾಯ ರವರು, ತಾಯಿ ಶ್ರೀಮತಿ.ಲಕ್ಷ್ಮೀಬಾಯಿ ಯವರು. ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿ, ಸ್ನಾತಕೋತ್ತರ ಶಿಕ್ಷಣವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ, ಪಿಎಚ್.ಡಿ (ಸಮಾಜಶಾಸ್ತ್ರ) ಪದವಿಯನ್ನು ಹಂಪಿಕನ್ನಡ ವಿಶ್ವವಿದ್ಯಾಲಯದಿಂದ ‘ಕರ್ನಾಟಕ ವಿಮುಕ್ತ ಬುಡಕಟ್ಟುಗಳ ಸಾಮಾಜಿಕ ಅಧ್ಯಯನ’ ಎಂಬ ವಿಷಯದಲ್ಲಿ ಪಡೆದಿದ್ದಾರೆ. ಅಲ್ಲದೆ ಸಮಾಜಶಾಸ್ತ್ರದಲ್ಲಿ 'ಪೋಸ್ಟ್ ಡಾಕ್ಟರೇಟ್' ಪದವಿಯನ್ನು ‘ಅಲೆಮಾರಿ ಸಮುದಾಯಗಳ ಸಮಾಜೋ-ಆರ್ಥಿಕ ಸ್ಥಿತಿಗತಿ: ಒಂದು ಸಮಾಜಶಾಸ್ತ್ರೀಯ ಅಧ್ಯಯನ’ ಎಂಬ ವಿಷಯದಲ್ಲಿ ಪಡೆದುಕೊಂಡಿದ್ದಾರೆ. ಇದೀಗ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಎನ್‌.ಎಸ್.ಎಸ್‌ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಿನ್ನೆಲೆ ಮಾಹಿತಿ
ಹೆಸರು		: ಮಲ್ಲಿಕಾರ್ಜುನ ಬಿ. ಮಾನ್ಪಡೆ	
ಹುಟ್ಟಿದ ಸ್ಥಳ	: ಬೇವಿನಹಳ್ಳಿ. ಶಹಾಪೂರ ತಾಲೂಕು, ಯಾದಗಿರಿ ಜಿಲ್ಲೆ
ಹುಟ್ಟಿದ ದಿನಾಂಕ	: ೨೦.೦೭.೧೯೭೯
ತಂದೆ		: ಶ್ರೀಯುತ.ಭೀಮರಾಯ
ತಾಯಿ		: ಶ್ರೀಮತಿ.ಲಕ್ಷ್ಮೀಬಾಯಿ
ಖಾಯಂ ವಿಳಾಸ	: ಡಾ ಮಲ್ಲಿಕಾರ್ಜುನ ಬಿ. ಮಾನ್ಪಡೆ ಹಳ್ಳಿಕೇರಿ, ಕಮಲಾಪುರ, ಹೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ-೫೮೩ ೨೭೬
ಸಂಪರ್ಕಕ್ಕಾಗಿ	: Mobile: +೯೧ ೯೯೧೬೨ ೦೨೨೯೮, E-mail  : mbmanpade@gmail.com

ಮಲ್ಲಿಕಾರ್ಜುನ ಮಾನ್ಪಡೆಯವರದು ಮೂಲತಃ ಅಲೆಮಾರಿ ಕುಟುಂಬ. ಇವರ ತಂದೆ-ತಾಯಿಗಳು ಈಚಲು ಗರಿಗಳಿಲಂದ ಕಸಬರಿಗೆ(ಪೊರಕೆ), ಬುಟ್ಟಿಗಳನ್ನು ತಯಾರಿಸುವುದು ಇವರ ಮೂಲ ವೃತ್ತಿಯಾಗಿಸಿಕೊಂಡಿದ್ದರು. ಅದರಿಂದ ಬಂದ ಆದಾಯದಿಂದಲೇ ಜೀವನ ಕಟ್ಟಿಕೊಂಡು ಇವರನ್ನು ಓದಿಸಿದ್ದಾರೆ.

ಪ್ರಕಟಿತ ಲೇಖನಗಳು[ಬದಲಾಯಿಸಿ]

ಅಲೆಮಾರಿ ಸಮುದಾಯ, ಅಲೆಮಾರಿ ಬುಡಕಟ್ಟುಗಳ ಕುರಿತು ಅಪಾರವಾದ ಖಾಳಜಿ ಹಾಗೂ ಸಂಶೋಧನೆಯನ್ನು ಕೈಗೊಂಡಿರುವ ಇವರು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇದರಲ್ಲಿ ಕನ್ನಡ ಭಾಷೆಯ ನಲವತ್ತೊಂದು (೪೧), ಆಂಗ್ಲ ಭಾಷೆಯ ಹದಿಮೂರು (೧೩) ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಂತರರಾಷ್ಟ್ರೀಯ ಜರ್ನಲ್'ಗಳಲ್ಲಿ ಸುಮಾರು ಹದಿಮೂರು (೧೩) ಲೇಖನಗಳು ಪ್ರಕಟವಾಗಿವೆ. ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಅಲೆಮಾರಿ ಬುಡಕಟ್ಟುಗಳ ಕುರಿತು ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಶಿಬಿರಾರ್ಥಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೇಶ-ವಿದೇಶದೆಲ್ಲೆಡೆ ಸಂಚರಿಸಿದ್ದಾರೆ.

ಶೈಕ್ಷಣಿಕ/ಆಡಳಿತಾತ್ಮಕ ಜವಬ್ದಾರಿಗಳು[ಬದಲಾಯಿಸಿ]

  • ಸಂಯೋಜನಾಧಿಕಾರಿಗಳು : ಎನ್.ಎಸ್.ಎಸ್ ಕೋಶ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ.2018 ರಿಂದ.
  • ರಾಜ್ಯ ನೋಡಲ್ ಅಧಿಕಾರಿಗಳು : ಡಾ.ಬಿ.ಆರ್.ಅಂಬೇಡ್ಕರ್ ಪ್ರಚಾರ ಅಭಿಯಾನ, ರಾಜ್ಯ ಎನ್.ಎಸ್.ಎಸ್ ಕೋಶ, ಬೆಂಗಳೂರು.2019 ರಿಂದ.


ಅಲೆಮಾರಿ ಬುಡಕಟ್ಟು ಕುರಿತು ಕೈಗೊಂಡ ಸಂಶೋಧನೆ/ ನಿರ್ವಹಿಸಿದ ಯೋಜನೆಗಳು[ಬದಲಾಯಿಸಿ]

  • ಅಲೆಮಾರಿ ಕೊರಮ ಸಮುದಾಯದ ಅಧ್ಯಯನ, ಪ್ರಾಯೋಜನೆ: ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, 2019-20
  • ಅಲೆಮಾರಿ ಸಮುದಾಯಗಳ ಸಮಾಜೋ-ಆರ್ಥಿಕ ಸ್ಥಿತಿಗತಿ: ಒಂದು ಸಮಾಜಶಾಸ್ತ್ರೀಯ ಅಧ್ಯಯನ (Socio-Economic status of Nomads : A Study) ಪೋಸ್ಟ್ ಡಾಕ್ಟರೇಟ್(ಸಮಾಜಸಾಸ್ತ್ರ), (ಯುಜಿಸಿ ನವ ದೆಹಲಿ), ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ- 2012-17 (5 ವರ್ಷ)
  • ಅಲೆಮಾರಿ ಚೆನ್ನದಾಸರ್ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ, ಪ್ರಾಯೋಜನೆ: ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, 2015-16
  • ಅಲೆಮಾರಿ ಗಂಟಿಚೋರ್ ಸಮುದಾಯ, ಪ್ರಾಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು, 2014-15
  • ಅಲೆಮಾರಿ ಚಪ್ಪರಬಂದ್ ಸಮುದಾಯ. ಪ್ರಾಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು, 2014-15
  • ಯಾದಗಿರಿ ಜಿಲ್ಲೆಯ ಚೆಂಚು ಬುಡಕಟ್ಟು ಸಂಸ್ಕೃತಿ(ಕಿರು ಸಂಶೋಧನಾ ಯೋಜನೆ), ಪ್ರಾಯೋಜನೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, 2013-2014
  • ಅಲೆಮಾರಿ ಕೊರಮ ಸಮುದಾಯ, ಪ್ರಾಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು, 2007-08

ಅಲೆಮಾರಿ ಬುಡಕಟ್ಟುಗಳ ಕುರಿತು ಪ್ರಕಟಗೊಂಡ ಪುಸ್ತಕಗಳು[ಬದಲಾಯಿಸಿ]

  • ಚೆಂಚು ಬುಡಕಟ್ಟು ಸಂಸ್ಕೃತಿ(ಯಾದಗಿರಿ ಜಿಲ್ಲೆಯನ್ನು ಅನುಲಕ್ಷಿಸಿ)-2019
  • ಸೂಕ್ಷ್ಮ ಜಾತಿಗಳು-2018
  • ಚೆಂಚು ಬುಡಕಟ್ಟು-2018
  • Korama Sociological Study-2018
  • ಚನ್ನದಾಸರ ಸಮುದಾಯ-2016
  • ಗಂಟಿಚೋರ್-2015
  • ಚಪ್ಪರಬಂದ್-2015
  • ತಂತಿಬೇಲಿಯೊಳಗಿನ ಜಗತ್ತು(ವಿಮುಕ್ತ ಬುಡಕಟ್ಟುಗಳ ಅಧ್ಯಯನ)-2014
  • ಕೊರಮ ಸಮುದಾಯ-2008

ವಿವಿಧ ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ, ಸಲಹೆಗಾರರಾಗಿ[ಬದಲಾಯಿಸಿ]

  • ರಾಜ್ಯಾಧಕ್ಷರು : ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ.
  • ರಾಜ್ಯಾಧಕ್ಷರು : ಯುವ ಘಟಕದ ವಿಶ್ವವಿದ್ಯಾಲಯಗಳ ಅತಿಥಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಒಕ್ಕೂಟ.

ಸಧ್ಯಕ್ಕೆ ಅಲೆಮಾರಿ ಬುಡಕಟ್ಟುಗಳನ್ನು ಕೇಂದ್ರಿಕರಿಸಿ ಅಧ್ಯಯನ, ಸಂಶೋಧನೆ, ಸಂಘಟನೆಯಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸನ್ಮಾನ/ಪ್ರಶಸ್ತಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]