ಸದಸ್ಯ:ರಾಜಶೇಖರ.ಚಂ.ಡೊಂಬರಮತ್ತೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿಳ್ಳಂಗೋವಿ

'ಪಿಳ್ಳಂಗೋವಿ' ಎನ್ನುವುದು ಊದುವ 'ಉಸಿರು ವಾದ್ಯ'. ಇದು ಕೊಳಲು ವಾದ್ಯದ ಒಂದು ಚಿಕ್ಕ ಪ್ರಕಾರವಾಗಿದ್ದು ಒಂದು ತುದಿಯಲ್ಲಿರುವ ರಂಧ್ರದ ಗಾಳಿ ಊದುವ ಮೂಲಕ ಕೊಳವೆಯ ಮೇಲಿರುವ ರಂಧ್ರಗಳನ್ನು ಮುಚ್ಚುವ, ತೆರೆಯುವುದರಿಂದ ನಾದ ಹೊಮ್ಮಿಸಲಾಗುತ್ತದೆ. ಇದೊಂದು ಜನಪದ ಸಂಗೀತ ವಾದ್ಯ.

ಇದನ್ನು ಮೂಲದಲ್ಲಿ ದನಗಾಹಿಗಳು, ಕುರಿಗಾಹಿಗಳು, ಮಕ್ಕಳು ಮನರಂಜನೆಗಾಗಿ ಊದುವುದುಂಟು.

ಪಿಳ್ಳಂಗೋವಿಯನ್ನು ತಮಿಳಿನಲ್ಲಿ 'ಪಿಲ್ಲನಗ್ರೋವಿ (పిల్లనగ్రోవి), ಇಂಗ್ಲೀಷಿನಲ್ಲಿ 'ಫ್ಲ್ಯೂಟ್' (Flute) ಎನ್ನುವರು.

★ ಗೊರವರ ಕುಣಿತಗಳಲ್ಲಿ ಪಿಳ್ಳಗೋವಿ ಊದುತ್ತ, ಡಮರುಗ ಬಾರಿಸುತ್ತ ಮೈಲಾರಲಿಂಗ ದೇವರ ಪದಗಳನ್ನು ಹಾಡುತ್ತಾರೆ. (ಗೊರವರ ಕುಣಿತ)

★ ಊದುವ ವಾದ್ಯಗಳಾದ ಓಲಗ, ತುತ್ತೂರಿ, ಕೊಂಬು, ಕಹಳೆ, ಮುಖವೀಣೆ, ಕೊಳಲು, ಶಂಖ ಮುಂತಾದವುಗಳ ಪಟ್ಟಿಯಲ್ಲಿ ಪಿಳ್ಳಂಗೋವಿಯೂ ಸೇರಿದೆ.