ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಸ್ಥಾಪನೆ೨೦೧೦
ಪ್ರಕಾರಸಾರ್ವಜನಿಕ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೊಟಗೋಡಿಯಲ್ಲಿ ೨೦೧೦ರಲ್ಲಿ ಪ್ರಾರಂಭವಾಯಿತು.

ಭಾರತದ ಪ್ರಪ್ರಥಮ ಜಾನಪದ ವಿಶ್ವವಿದ್ಯಾಲಯ ಹೆಗ್ಗಳಿಕೆಯೊಂದಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ೨೦೧೦ರ ಸೆಪ್ಟೆಂಬರ ೨೮ ರಂದು ಜಾರಿಗೆ ಬರುವಂತೆ ವಿಶೇಷಾಧಿಕಾರಿಗಳ ನೇಮಕದೊಂದಿಗೆ ಬೆಂಗಳೂರಿನಲ್ಲಿ ಸ್ಥಾಪಿತವಾಯಿತು.

ವಿಶೇಷಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರೊ. ಅಂಬಳಿಕೆ ಹಿರಿಯಣ್ಣ ಮಧ್ಯ ಕರ್ನಾಟಕದಲ್ಲಿ ಹಲವಾರು ಸ್ಥಳ ಪರಿವೀಕ್ಷಣೆ ಕಾರ್ಯ ಕೈಗೊಂಡು, ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲೂಕು ರಾಷ್ಟ್ರೀಯ ಹೆದ್ದಾರಿ - ೪ (ಬೆಂಗಳೂರು-ಪೂಣಾ ರಾ.ಹೆ.) ಕ್ಕೆ ಹೊಂದಿಕೊಂಡಂತಿರುವ ಗೊಟಗೋಡಿ ಎಂಬ ಸ್ಥಳವನ್ನು ಗುರುತಿಸಲಾಯಿತು. ವಿಶೇಷಾಧಿಕಾರಿಗಳಾಗಿದ್ದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರನ್ನೇ "ಉಪ ಕುಲಪತಿ"ಗಳಾಗಿ ನೇಮಿಸಲಾಯಿತು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ೨೦೧೨ರ ಜೂನ್ ೧೬ರಂದು ಗೊಟಗೋಡಿನಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು. [೧]

ಕುಲಾಧಿಪತಿಗಳು[ಬದಲಾಯಿಸಿ]

ಮಾನ್ಯ ಘನತೆವೆತ್ತ ರಾಜ್ಯಪಾಲರು ಕರ್ನಾಟಕ ಸರ್ಕಾರ, ಬೆಂಗಳೂರು 2015 - ಶ್ರೀ ವಾಜುಭಾಯ್ ವಾಲಾ , ಮಾನ್ಯ ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ಸರ್ಕಾರ

ವಸ್ತುಸಂಗ್ರಹಾಲಯ[ಬದಲಾಯಿಸಿ]

ಕರ್ನಾಟಕ - ಜಾನಪದ  ತಿಳಿವಳಿಕೆ ಮತ್ತು ಅವನು ಸಾಗಿಬಂದ ದಾರಿಯ ಹೊಳಹುಗಳನ್ನು ಅರಿಯಲು, ಸಾಧನ-ಸಲಕರಣೆಗಳು ಮತ್ತು ಉಪಕರಣಗಳ ವೈಜ್ಞಾನಿಕ ಅಧ್ಯಯನ ಒಂದು ಕಾಲಘಟ್ಟದಲ್ಲಿದ್ದ ಜನ ಸಮುದಾಯದ ಬದುಕಿನ ಭೌತಿಕ ಸಾಕ್ಷಿರೂಪಗಳನ್ನು ಒಪ್ಪ-ಓರಣಗೊಳಿಸುವ ದೇಸಿ ವಿಶಿಷ್ಟ ವಸ್ತು ಸಂಗ್ರಹಾಲಯ.  ಶಿಗ್ಗಾವಿ, ರಾಣೆಬೆನ್ನೂರು ಮತ್ತು ಹಾವೇರಿ ತಾಲ್ಲೂಕುಗಳಲ್ಲಿ 5000 ಕ್ಕೂ ಹೆಚ್ಚು ಅಮೂಲ್ಯವಾದ ಜನಪದ ವಸ್ತುಗಳನ್ನು ಸಂಗ್ರಹಿಸಿದ್ದಾರೆ.ವಿಶ್ವವಿದ್ಯಾಲಯದ ಸುಮಾರು 10 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಿಷ್ಟ ವಾಸ್ತು ಶೈಲಿಯಲ್ಲಿ ನಿರ್ಮಾಣ.

ಸಂಗ್ರಹ[ಬದಲಾಯಿಸಿ]

ಉಪಕರಣಗಳಾದ ಕೂರಿಗೆ ಬಟ್ಟಲು, ನೇಗಿಲು ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳು, ಪೂಜಾ ಸಾಮಗ್ರಿಗಳು, ವಸ್ತ್ರಾಭರಣಗಳು ಮತ್ತು ಕರಕುಶಲ  ವಸ್ತುಗಳ ದೇಸೀ ಜ್ಞಾನ ಪರಂಪರೆಯ ಪ್ರತೀಕಗಳಾದ ಪರಿಕರಗಳನ್ನು ಸಮಗ್ರವಾಗಿ ಸಂಗ್ರಹಿಸಿ, `ಮಾದರಿ ದೇಸೀ ವಸ್ತುಸಂಗ್ರಹಾಲಯ ನಿರ್ಮಿಸಲಾಗುತ್ತಿದೆ.

ಶಿಕ್ಷಣ[ಬದಲಾಯಿಸಿ]

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ೨೦೧೨-೧೩ನೇ ಸಾಲಿನಿಂದ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಾನಪದ ವಿಶ್ವವಿದ್ಯಾಲಯದಲ್ಲಿ ೬ ನಿಕಾಯಗಳಿದ್ದು, ಒಟ್ಟು ೧೭ ಅಧ್ಯಯನ ವಿಭಾಗಗಳಿವೆ. ಎಂಟು ಅಲ್ಪಾವಧಿ ಶೈಕ್ಷಣಿಕ ಕಾರ್ಯಕ್ರಮದಡಿ ೭೮ ಸರ್ಟಿಫಿಕೆಟ್ ಮತ್ತು ಸ್ನತಕೋತ್ತರ ಡಿಪ್ಲೊಮಾ ಕೋರ್ಸಗಳನ್ನು ಪ್ರಾರಂಭಿಸಲಾಗಿದೆ.

ನಿಕಾಯಗಳು[ಬದಲಾಯಿಸಿ]

  1. ಸಾಮಾನ್ಯ ಜಾನಪದ
  2. ಶಾಬ್ದಿಕ ಜಾನಪದ
  3. ಜನಪದ ಕಲಾ ಪರಂಪರೆ
  4. ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ
  5. ಅಲಕ್ಷಿತ ಅಧ್ಯಯನಗಳು
  6. ಆನ್ವಯಿಕ ಜಾನಪದ


ವಿಭಾಗಗಳು[ಬದಲಾಯಿಸಿ]

ಎಂ. ಫಿಲ್.[ಬದಲಾಯಿಸಿ]

ಪಿಎಚ್.ಡಿ[ಬದಲಾಯಿಸಿ]

ಸ್ನಾತಕೋತ್ತರ ಶಿಕ್ಷಣ( ಎಂ.ಎ)[ಬದಲಾಯಿಸಿ]

ಅ. ಜನಪದ ಸಾಹಿತ್ಯ   
ಆ. ಜಾನಪದ ವಿಜ್ಞಾನ 
ಇ. ಜನಪದ ಸಂವಹನ
ಈ. ಜನಪದ ಕಲೆ 
ಉ. ಜನಪದ ಪ್ರವಾಸೋದ್ಯಮ

ಸ್ನಾತಕೋತ್ತರ ಶಿಕ್ಷಣ(ಎಂ.ಬಿ.ಎ)[ಬದಲಾಯಿಸಿ]

ಊ. ಗ್ರಾಮೀಣ ಹಾಗೂ ಬುಡಕಟ್ಟು ವ್ಯವಹಾರ ನಿರ್ವಹಣೆ

ಅಲ್ಪಾವಧಿ ಶಿಕ್ಷಣ[ಬದಲಾಯಿಸಿ]

ಸರ್ಟಿಫಿಕೇಟ್ ಕೋರ್ಸ್

ಉಲ್ಲೇಖ[ಬದಲಾಯಿಸಿ]