ವಿಷಯಕ್ಕೆ ಹೋಗು

ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಧಿ, ಭತ್ತ,ಎಳ್ಳು, ಕಡಲೆ ಕಾಳು, ಹೆಸರು ಕಾಳು, ತೊಗರಿಬೇಳೆ,ಉದ್ದಿನ ಬೇಳೆ,ಅವರೇ ಕಾಳು ಮತ್ತು ಹುರುಳಿ ಕಾಳುಗಳಂತಹ ಒಂಬತ್ತು ಬಗೆಯ ಆಹಾರ ಧಾನ್ಯಗಳು ನವಧಾನ್ಯವನ್ನು ಸೂಚಿಸುತ್ತದೆ.[][] ಭಾರತೀಯ ಭಾಷೆಗಳಲ್ಲಿ "ಒಂಬತ್ತು ಧಾನ್ಯಗಳು"ಎಂದರೆ ನವಧಾನ್ಯ ಎಂದರ್ಥ ಮತ್ತು ಇದು ಭಾರತೀಯ ಪಾಕಪದ್ಧತಿಯ ಅತ್ಯಗತ್ಯ ಭಾಗವಾಗಿದೆ..[]

ಹಿಂದೂ ಧರ್ಮಶಾಸ್ತ್ರ

[ಬದಲಾಯಿಸಿ]

ನವಧಾನ್ಯವು ನವಗ್ರಹವನ್ನು (ಒಂಬತ್ತು ಗ್ರಹಗಳು) ಪ್ರತಿನಿಧಿಸುತ್ತದೆ ಎಂದು ಹಿಂದೂ ವಿಶ್ವವಿಜ್ಞಾನ ಪರಿಗಣಿಸುತ್ತದೆ.[] ಅವುಗಳು ಈ ಕೆಳಗಿನಂತಿವೆ:

[]

ನವಗ್ರಹ:
ಸಂಖ್ಯೆ. ಚಿತ್ರ ಹೆಸರು ಪಾಶ್ಚಾತ್ಯ ಸಮಾನ ದಿನ ಆಹಾರ ಧಾನ್ಯ
೧. ಸೂರ್ಯ ಸೂರ್ಯ ಭಾನುವಾರ ಗೋಧಿ
೨. ಚಂದ್ರ ಚಂದ್ರ ಸೋಮವಾರ ಭತ್ತ
3. ಮಂಗಳ ಮಂಗಳ ಮಂಗಳವಾರ ತೊಗರಿಬೇಳೆ
4. ಬುಧ ಬುಧ ಬುಧವಾರ ಹೆಸರು ಕಾಳು
5. ಬೃಹಸ್ಪತಿ ಗುರು ಗುರುವಾರ ಕಡಲೆ ಕಾಳು
6. ಶುಕ್ರ ಶುಕ್ರ ಶುಕ್ರವಾರ ಅವರೇ ಕಾಳು
7. ಶನಿ ಶನಿ ಶನಿವಾರ ಎಳ್ಳು
8. ರಾಹು ಚಂದ್ರ ನೋಡ್ ನ ಆರೋಹಣ ಉದ್ದಿನ ಬೇಳೆ
9. ಕೇತು ಚಂದ್ರ ನೋಡ್ ನ ಆವರೋಹಣ ಹುರುಳಿ ಕಾಳು

ಪೂಜೆ ಮತ್ತು ಆಚರಣೆಗಳು

[ಬದಲಾಯಿಸಿ]

ಹಿಂದೂಗಳು ಕೆಲವು ಆಚರಣೆಗಳಲ್ಲಿ ಮತ್ತು ಮಂಗಳಕರ ಕಾರ್ಯಕ್ರಮಗಳಲ್ಲಿ ನವದಾನ್ಯವನ್ನು ಬಳಸುವುದು ವಾಡಿಕೆಯಾಗಿದೆ.[][]ವಿದ್ಯಾರ್ಥಿಯ ಸ್ವೀಕಾರವನ್ನು ಸೂಚಿಸುವ ಉಪನಯನದಂತಹ ಸಾಂಪ್ರದಾಯಿಕ ಹಿಂದೂ ದೀಕ್ಷಾ ಸಮಾರಂಭಗಳಲ್ಲಿ ಮತ್ತು ಮಗುವಿನ ಔಪಚಾರಿಕ ಶಿಕ್ಷಣವನ್ನು ಪ್ರಾರಂಭಿಸುವ ಮೊದಲು ನಡೆಸಲಾಗುವ ವಿದ್ಯಾರಂಭದಲ್ಲಿ ನವಧಾನ್ಯವನ್ನು ಅರ್ಪಿಸಲಾಗುತ್ತದೆ.[]ಸರಸ್ವತಿ ಪೂಜೆಯಂತಹ ಹಬ್ಬಗಳ ಸಂದರ್ಭದಲ್ಲಿ ನವಧಾನ್ಯದ ಮೇಲೆ ಹೊಸ ಸುರುಳಿ ಮತ್ತು ಬರವಣಿಗೆ ಉಪಕರಣವನ್ನು ಇಡಲಾಗುತ್ತದೆ.[]


ದಕ್ಷಿಣ ಭಾರತದಲ್ಲಿ ನಡೆಯುವ ಮಾರಿಯಮ್ಮನ ಆರಾಧನೆಯಲ್ಲಿ, ಸಾಂಪ್ರದಾಯಿಕವಾಗಿ ಮುಲ್ಲೈಪಾರಿ ಎಂದು ಕರೆಯಲ್ಪಡುವ ಈ ಆಹಾರ ಧಾನ್ಯಗಳ ಮೊಳಕೆಯು,ಅಲ್ಲಿನ ಹಬ್ಬಗಳ ಮತ್ತು ಆಚರಣೆಗಳ ಪ್ರಮುಖ ಭಾಗವಾಗಿದೆ.[೧೦] ಬೀಜಗಳನ್ನು ತಾತ್ಕಾಲಿಕವಾಗಿ ತಟ್ಟೆಗಳಲ್ಲಿ ಅಥವಾ ಮಡಕೆಗಳಲ್ಲಿ ಬೆಳೆಯಲಾಗುತ್ತದೆ ಮತ್ತು ದೇವಾಲಯದಲ್ಲಿ ಅವುಗಳನ್ನು ಮೊಳಕೆಯೊಡೆಯಲು ಇಡಲಾಗುತ್ತದೆ ಅಥವಾ ಮೊಳಕೆಯೊಡೆದ ನಂತರ ದೇವಾಲಯಗಳಿಗೆ ಕೊಂಡೊಯ್ಯಲಾಗುತ್ತದೆ. ಬೀಜಗಳು ಆರೋಗ್ಯಕರವಾಗಿ ಮೊಳಕೆಯೊಡೆದರೆ, ಅದು ಒಳ್ಳೆಯ ಸಂಕೇತ ಮತ್ತು ಮುಂಬರುವ ಉತ್ತಮ ಸುಗ್ಗಿಯ ಸೂಚನೆ ಎಂದು ಪರಿಗಣಿಸಲಾಗುತ್ತದೆ.[೧೧]

ಉಲ್ಲೇಖಗಳು

[ಬದಲಾಯಿಸಿ]
  1. Subrahmanya, Susheela (1992). Southern Economist. Vol. 31. University of Illinois at Urbana-Champaign. p. 26.
  2. Krishna, Nanditha (2017). Hinduism and Nature. Penguin Random House India. ISBN 978-9-387-32654-5.
  3. The Bloomsbury Handbook of Indian Cuisine. Bloomsbury Publishing. 2023. p. 331. ISBN 978-1-350-12865-1.
  4. Talamantez, Inés M. (2006). Teaching Religion and Healing. Oxford University Press. p. 71. ISBN 978-0-199-72737-7.
  5. Brouwer, Jan (1995). The Makers of the World:Caste, Craft, and Mind of South Indian Artisans. Oxford University Press. p. 89. ISBN 978-0-195-63091-6.
  6. Jan Brouwer (1995). The Makers of the World: Caste, Craft, and Mind of South Indian Artisans. Oxford University Press. p. 155. ISBN 978-0-195-63091-6.
  7. Knipe, David M. (2015). Vedic Voices:Intimate Narratives of a Living Andhra Tradition. Oxford University Press. ISBN 978-0-190-26673-8.
  8. Mathur, Nita (2002). Cultural Rhythms in Emotions, Narratives and Dance. University of Michigan. p. 62. ISBN 978-8-121-50993-0.
  9. Aruṇācalam, Mu (1980). Festivals of Tamil Nadu. University of Michigan. p. 74.
  10. Religious Experience in the Hindu Tradition. Mdpi AG. 2019. p. 147. ISBN 978-3-039-21050-3.
  11. Journal for the Study of Religion. Vol. 18. Association for the Study of Religion. 2005. p. 56.