ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೪
ಗೋಧಿ, ಭತ್ತ,ಎಳ್ಳು, ಕಡಲೆ ಕಾಳು, ಹೆಸರು ಕಾಳು, ತೊಗರಿಬೇಳೆ,ಉದ್ದಿನ ಬೇಳೆ,ಅವರೇ ಕಾಳು ಮತ್ತು ಹುರುಳಿ ಕಾಳುಗಳಂತಹ ಒಂಬತ್ತು ಬಗೆಯ ಆಹಾರ ಧಾನ್ಯಗಳು ನವಧಾನ್ಯವನ್ನು ಸೂಚಿಸುತ್ತದೆ.[೧][೨] ಭಾರತೀಯ ಭಾಷೆಗಳಲ್ಲಿ "ಒಂಬತ್ತು ಧಾನ್ಯಗಳು"ಎಂದರೆ ನವಧಾನ್ಯ ಎಂದರ್ಥ ಮತ್ತು ಇದು ಭಾರತೀಯ ಪಾಕಪದ್ಧತಿಯ ಅತ್ಯಗತ್ಯ ಭಾಗವಾಗಿದೆ..[೩]
ಹಿಂದೂ ಧರ್ಮಶಾಸ್ತ್ರ
[ಬದಲಾಯಿಸಿ]ನವಧಾನ್ಯವು ನವಗ್ರಹವನ್ನು (ಒಂಬತ್ತು ಗ್ರಹಗಳು) ಪ್ರತಿನಿಧಿಸುತ್ತದೆ ಎಂದು ಹಿಂದೂ ವಿಶ್ವವಿಜ್ಞಾನ ಪರಿಗಣಿಸುತ್ತದೆ.[೪] ಅವುಗಳು ಈ ಕೆಳಗಿನಂತಿವೆ:
ಸಂಖ್ಯೆ. | ಚಿತ್ರ | ಹೆಸರು | ಪಾಶ್ಚಾತ್ಯ ಸಮಾನ | ದಿನ | ಆಹಾರ ಧಾನ್ಯ |
---|---|---|---|---|---|
೧. | ಸೂರ್ಯ | ಸೂರ್ಯ | ಭಾನುವಾರ | ಗೋಧಿ | |
೨. | ಚಂದ್ರ | ಚಂದ್ರ | ಸೋಮವಾರ | ಭತ್ತ | |
3. | ಮಂಗಳ | ಮಂಗಳ | ಮಂಗಳವಾರ | ತೊಗರಿಬೇಳೆ | |
4. | ಬುಧ | ಬುಧ | ಬುಧವಾರ | ಹೆಸರು ಕಾಳು | |
5. | ಬೃಹಸ್ಪತಿ | ಗುರು | ಗುರುವಾರ | ಕಡಲೆ ಕಾಳು | |
6. | ಶುಕ್ರ | ಶುಕ್ರ | ಶುಕ್ರವಾರ | ಅವರೇ ಕಾಳು | |
7. | ಶನಿ | ಶನಿ | ಶನಿವಾರ | ಎಳ್ಳು | |
8. | ರಾಹು | ಚಂದ್ರ ನೋಡ್ ನ ಆರೋಹಣ | ಉದ್ದಿನ ಬೇಳೆ | ||
9. | ಕೇತು | ಚಂದ್ರ ನೋಡ್ ನ ಆವರೋಹಣ | ಹುರುಳಿ ಕಾಳು |
ಪೂಜೆ ಮತ್ತು ಆಚರಣೆಗಳು
[ಬದಲಾಯಿಸಿ]ಹಿಂದೂಗಳು ಕೆಲವು ಆಚರಣೆಗಳಲ್ಲಿ ಮತ್ತು ಮಂಗಳಕರ ಕಾರ್ಯಕ್ರಮಗಳಲ್ಲಿ ನವದಾನ್ಯವನ್ನು ಬಳಸುವುದು ವಾಡಿಕೆಯಾಗಿದೆ.[೬][೭]ವಿದ್ಯಾರ್ಥಿಯ ಸ್ವೀಕಾರವನ್ನು ಸೂಚಿಸುವ ಉಪನಯನದಂತಹ ಸಾಂಪ್ರದಾಯಿಕ ಹಿಂದೂ ದೀಕ್ಷಾ ಸಮಾರಂಭಗಳಲ್ಲಿ ಮತ್ತು ಮಗುವಿನ ಔಪಚಾರಿಕ ಶಿಕ್ಷಣವನ್ನು ಪ್ರಾರಂಭಿಸುವ ಮೊದಲು ನಡೆಸಲಾಗುವ ವಿದ್ಯಾರಂಭದಲ್ಲಿ ನವಧಾನ್ಯವನ್ನು ಅರ್ಪಿಸಲಾಗುತ್ತದೆ.[೮]ಸರಸ್ವತಿ ಪೂಜೆಯಂತಹ ಹಬ್ಬಗಳ ಸಂದರ್ಭದಲ್ಲಿ ನವಧಾನ್ಯದ ಮೇಲೆ ಹೊಸ ಸುರುಳಿ ಮತ್ತು ಬರವಣಿಗೆ ಉಪಕರಣವನ್ನು ಇಡಲಾಗುತ್ತದೆ.[೯]
ದಕ್ಷಿಣ ಭಾರತದಲ್ಲಿ ನಡೆಯುವ ಮಾರಿಯಮ್ಮನ ಆರಾಧನೆಯಲ್ಲಿ, ಸಾಂಪ್ರದಾಯಿಕವಾಗಿ ಮುಲ್ಲೈಪಾರಿ ಎಂದು ಕರೆಯಲ್ಪಡುವ ಈ ಆಹಾರ ಧಾನ್ಯಗಳ ಮೊಳಕೆಯು,ಅಲ್ಲಿನ ಹಬ್ಬಗಳ ಮತ್ತು ಆಚರಣೆಗಳ ಪ್ರಮುಖ ಭಾಗವಾಗಿದೆ.[೧೦] ಬೀಜಗಳನ್ನು ತಾತ್ಕಾಲಿಕವಾಗಿ ತಟ್ಟೆಗಳಲ್ಲಿ ಅಥವಾ ಮಡಕೆಗಳಲ್ಲಿ ಬೆಳೆಯಲಾಗುತ್ತದೆ ಮತ್ತು ದೇವಾಲಯದಲ್ಲಿ ಅವುಗಳನ್ನು ಮೊಳಕೆಯೊಡೆಯಲು ಇಡಲಾಗುತ್ತದೆ ಅಥವಾ ಮೊಳಕೆಯೊಡೆದ ನಂತರ ದೇವಾಲಯಗಳಿಗೆ ಕೊಂಡೊಯ್ಯಲಾಗುತ್ತದೆ. ಬೀಜಗಳು ಆರೋಗ್ಯಕರವಾಗಿ ಮೊಳಕೆಯೊಡೆದರೆ, ಅದು ಒಳ್ಳೆಯ ಸಂಕೇತ ಮತ್ತು ಮುಂಬರುವ ಉತ್ತಮ ಸುಗ್ಗಿಯ ಸೂಚನೆ ಎಂದು ಪರಿಗಣಿಸಲಾಗುತ್ತದೆ.[೧೧]
ಉಲ್ಲೇಖಗಳು
[ಬದಲಾಯಿಸಿ]- ↑ Subrahmanya, Susheela (1992). Southern Economist. Vol. 31. University of Illinois at Urbana-Champaign. p. 26.
- ↑ Krishna, Nanditha (2017). Hinduism and Nature. Penguin Random House India. ISBN 978-9-387-32654-5.
- ↑ The Bloomsbury Handbook of Indian Cuisine. Bloomsbury Publishing. 2023. p. 331. ISBN 978-1-350-12865-1.
- ↑ Talamantez, Inés M. (2006). Teaching Religion and Healing. Oxford University Press. p. 71. ISBN 978-0-199-72737-7.
- ↑ Brouwer, Jan (1995). The Makers of the World:Caste, Craft, and Mind of South Indian Artisans. Oxford University Press. p. 89. ISBN 978-0-195-63091-6.
- ↑ Jan Brouwer (1995). The Makers of the World: Caste, Craft, and Mind of South Indian Artisans. Oxford University Press. p. 155. ISBN 978-0-195-63091-6.
- ↑ Knipe, David M. (2015). Vedic Voices:Intimate Narratives of a Living Andhra Tradition. Oxford University Press. ISBN 978-0-190-26673-8.
- ↑ Mathur, Nita (2002). Cultural Rhythms in Emotions, Narratives and Dance. University of Michigan. p. 62. ISBN 978-8-121-50993-0.
- ↑ Aruṇācalam, Mu (1980). Festivals of Tamil Nadu. University of Michigan. p. 74.
- ↑ Religious Experience in the Hindu Tradition. Mdpi AG. 2019. p. 147. ISBN 978-3-039-21050-3.
- ↑ Journal for the Study of Religion. Vol. 18. Association for the Study of Religion. 2005. p. 56.