ಸದಸ್ಯರ ಚರ್ಚೆಪುಟ:Atmalinga

ವಿಕಿಪೀಡಿಯ ಇಂದ
Jump to navigation Jump to search
ನಮಸ್ಕಾರ Atmalinga


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೫:೩೧, ೧೭ ಏಪ್ರಿಲ್ ೨೦೨೧ (UTC)

ಶೀರ್ಷಿಕೆ![ಬದಲಾಯಿಸಿ]

Atmalinga (ಚರ್ಚೆ) ೦೭:೦೭, ೨೨ ಏಪ್ರಿಲ್ ೨೦೨೧ (UTC) ಶೀರ್ಶಿಕೆಯಲ್ಲಿ ಪ್ರೊಫ಼ೆಸರ್ ಸೇರಿಸಬೇಡಿ ಎಂದು ಹೇಳುತ್ತೀರಿ. ಜಿ.ವಿ.ಯವರ ಲೇಖನದಲ್ಲಿ ಮೊದಲೇ ಪ್ರೊಫ಼ೆಸರ್ ಅಂತ ಇತ್ತು. ಇದಕ್ಕೆ ಉತ್ತರ ಕೊಡಿ. ನೀವು ಮುಂದೆ ಹೊಸ ಲೇಖನ ಶುರು ಮಾಡುವಾಗ ಶೀರ್ಷಿಕೆಯಲ್ಲಿ ಡಾ/ಪ್ರೊ. ಸೇರಿಸಬೇಡಿ. ಕೇವಲ ಹೆಸರು ಮಾತ್ರ ಇರಲಿ. NinadMysuru (ಚರ್ಚೆ) ೦೮:೧೯, ೧೮ ಏಪ್ರಿಲ್ ೨೦೨೧ (UTC)

Atmalinga, ನೀವು ಇಲ್ಲೇ ಉತ್ತರ ಕೊಡಬಹುದು. NinadMysuru (ಚರ್ಚೆ) ೧೧:೨೫, ೧೮ ಏಪ್ರಿಲ್ ೨೦೨೧ (UTC)

(Atmalinga (ಚರ್ಚೆ) ೧೨:೦೯, ೧೮ ಏಪ್ರಿಲ್ ೨೦೨೧ (UTC)) ಹೌದು. ಅದನ್ನು ಹೇಗೆ ತೆಗೆಯುವುದು ? ತಿಳಿಸಿ.

ಶೀರ್ಷಿಕೆ ಬದಲಾವಣೆ ಈಗ ನಿರ್ವಾಹಕರ ಅಧೀನದಲ್ಲಿದೆ. ನಿರ್ವಾಹಕರ ಗಮನಕ್ಕೆ ತರಬೇಕು. NinadMysuru (ಚರ್ಚೆ) ೧೨:೧೪, ೧೮ ಏಪ್ರಿಲ್ ೨೦೨೧ (UTC)
@Atmalinga:, ನೀವು ಪುನಃ ಉತ್ತರಿಸುವಾಗ :: ಹೀಗೆ ಚುಕ್ಕಿಗಳನ್ನು ಬಳಸಿದರೆ ಕ್ರಮಬದ್ಧವಾಗಿ ನಮ್ಮ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ನಮ್ಮ ಚರ್ಚೆಯ ಇತಿಹಾಸ ತೆಗೆದು ನೋಡಿ. ತಿಳಿಯುತ್ತದೆ. NinadMysuru (ಚರ್ಚೆ) ೧೨:೧೮, ೧೮ ಏಪ್ರಿಲ್ ೨೦೨೧ (UTC)
@NinadMysuru, Atmalinga: ಬಹುತೇಕ ಪುಟಗಳ ಶೀರ್ಷಿಕೆಯನ್ನು ಬದಲಾವಣೆ ಮಾಡಲು ನಿರ್ವಾಹಕರು ಬೇಕಾಗಿಲ್ಲ, ಯಾರ ಬೇಕಾದರೂ ಬದಲಾಯಿಸಬಹುದು. ನಾನು ಅದನ್ನು ಎಮ್. ಎಸ್. ವಿಜಯಾ ಹರನ್ ಎಂದು ಬದಲಾಯಿಸಿದ್ದೇನೆ.
ಹಾಗೆಯೇ Atmalinga ಅವರು ಇಲ್ಲಿ ಇದು ತಮ್ಮ ಎರಡನೇ ಖಾತೆ ಆಗಿರುವುದಾಗಿ ಹೇಳಿದ್ದಾರೆ. ಹಳೆಯ ಖಾತೆ ಯಾವುದೆಂದು ಬಳೆಕೆದಾರಪುಟದಲ್ಲಿ ಬಹಿರಂಗಪಡಿಸಿದರೆ ಒಳ್ಳೆಯದು. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೩:೪೪, ೧೮ ಏಪ್ರಿಲ್ ೨೦೨೧ (UTC)
@ಮಲ್ನಾಡಾಚ್ ಕೊಂಕ್ಣೊ: ಧನ್ಯವಾದಗಳು. ಹೇಗೆ ಎಂದು ತಿಳಿಸಿದರೆ ಉಪಕಾರವಾದೀತು. NinadMysuru (ಚರ್ಚೆ) ೧೩:೫೬, ೧೮ ಏಪ್ರಿಲ್ ೨೦೨೧ (UTC)
@NinadMysuru: ಪುಟದ ಮೇಲ್ಭಾಗದಲ್ಲಿ ವೀಕ್ಷಣಾಪಟ್ಟಿಯ ನಕ್ಷತ್ರ ಗುರುತಿನ ಪಕ್ಕದಲ್ಲಿರುವ "ಇನ್ನಷ್ಟು" ಗುಂಡಿಯನ್ನು ಒತ್ತಿ "ಸ್ಥಳಾಂತರಿಸಿ" ಆಯ್ಕೆ ಮಾಡಬೇಕು. ನಂತರ ಹೊಸ ಶೀರ್ಷಿಕೆ ಬರೆದು "ಪುಟವನ್ನು ಸ್ಥಳಾಂತರಿಸಿ" ಆಯ್ಕೆ ಮಾಡಬೇಕು. ಇದನ್ನು ಮೊಬೈಲಿನಲ್ಲಿ ಮಾಡಲು ಸಾಧ್ಯವಿಲ್ಲ, ಕೇವಲ ಡೆಸ್ಕ್‌ಟಾಪ್ ಮೋಡಿನಲ್ಲಿ ಮಾತ್ರ ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ - en:Help:How to move a page. ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೫:೨೫, ೧೮ ಏಪ್ರಿಲ್ ೨೦೨೧ (UTC)

೧೪:೧೦, ೧೮ ಏಪ್ರಿಲ್ ೨೦೨೧ (UTC)Atmalinga (ಚರ್ಚೆ)Atmalinga (ಚರ್ಚೆ) ೧೪:೦೯, ೧೮ ಏಪ್ರಿಲ್ ೨೦೨೧ (UTC) ಹಳೆಯ ಖಾತೆ 'ರಾಧಾತನಯ' ಎಂದು. ನಾನು ೨೦೦೫ ರಿಂದ ಕನ್ನಡ ವಿಕೀಪೀಡಿಯದಲ್ಲಿ ಕೆಲಸಮಾಡುತ್ತಿದ್ದೇನೆ. ಆಗಿನ್ನೂ ಕನ್ನಡ ವಿಕಿಪೀಡಿಯ ತನ್ನ ಗರಿಕೆದರಿಕೊಳ್ಳುತ್ತಿತ್ತು. (Atmalinga (ಚರ್ಚೆ) ೧೪:೨೦, ೧೮ ಏಪ್ರಿಲ್ ೨೦೨೧ (UTC)) ಹಿಂದೆ ನಾವೇ ಸ್ಟಾರ್ ಬಟನ್ ಒತ್ತಿ ಬದಲಾವಣೆ ಮಾಡ್ತಿದ್ವಿ. ತೊಂದರೆಗೆ ಕ್ಷಮೆಯಿರಲಿ.

ಧನ್ಯವಾದಗಳು @ಮಲ್ನಾಡಾಚ್ ಕೊಂಕ್ಣೊ:@Atmalinga:. NinadMysuru (ಚರ್ಚೆ) ೧೫:೩೩, ೧೮ ಏಪ್ರಿಲ್ ೨೦೨೧ (UTC)

(Atmalinga (ಚರ್ಚೆ) ೦೧:೨೩, ೧೯ ಏಪ್ರಿಲ್ ೨೦೨೧ (UTC))ನಮಸ್ಕಾರ. ಯಾಕೋ ಆ ಚುಕ್ಕಿಗಳನ್ನು ಮಾಡಿದಾಗ್ಯೂ ಕಾಣಿಸಿಕೊಳ್ಳುತ್ತಿಲ್ಲ. ನಿಮ್ಮ ಸವಿನಯ ಮಾರ್ಗದರ್ಶನಕ್ಕೆ ನಲ್ಮೆಗಳು. (Atmalinga (ಚರ್ಚೆ) ೦೨:೨೯, ೧೯ ಏಪ್ರಿಲ್ ೨೦೨೧ (UTC)) ಪ್ರೊ. ಜಿ. ವೆಂಕಟಸುಬ್ಬಯ್ಯನವರು (೧೦೮) ನಿನ್ನೆ ಬೆಂಗಳೂರಿನಲ್ಲಿ ನಿಧನರಾದ ಸಮಾಚಾರವನ್ನು ಮೊದಲು ವಿಕಿಪೀಡಿಯದಲ್ಲಿ ದಾಖಲಿಸಿದವ ನಾನು. ಶೀರ್ಷಿಕೆಯಲ್ಲಿ ಪ್ರೊಫೆಸರ್ ಎಂದು ಇದೆ.ಗಮನಿಸಿ.

ವ್ಯಕ್ತಿಪರಿಚಯದಲ್ಲಿ ಅನವಶ್ಯಕ ಮಾಹಿತಿ ಬೇಡ[ಬದಲಾಯಿಸಿ]

ದಯವಿಟ್ಟು ವ್ಯಕ್ತಿಪರಿಚಯ ಪುಟಗಳಲ್ಲಿ ಅನವಶ್ಯಕ ಮಾಹಿತಿಗಳನ್ನು ಸೇರಿಸಬೇಡಿ. ನೀವು ಬರೆದ ಬಹುತೇಕ ಲೇಖನಗಳು ಪತ್ರಿಕೆಗಳ ಲೇಖನಗಳ ಮಾದರಿಯಲ್ಲಿದ್ದು ಅತಿಯಾದ ಹೊಗಳಿಕೆ, ಅವರ ಕುಟುಂಬದವರ ಅನವಶ್ಯಕ ವಿವರಗಳು, ಕಾಲೆಜಿನಲ್ಲಿ ಏನೇನು ಮಾಡಿದ್ದರು, ಇತ್ಯಾದಿ ಅಗತ್ಯವಿಲ್ಲದ ಮಾಹಿತಿಗಳಿಂದ ತುಂಬಿವೆ. ದಯವಿಟ್ಟು ವ್ಯಕ್ತಿಯ ಸಾಧನೆಗಳ ಬಗೆಗೆ ಮಾತ್ರ ಲೇಖನ ಇರಲಿ. ಅವರಿಗೆ ಬಂದ ಪ್ರತಿಯೊಂದು ಚಿಕ್ಕಪುಟ್ಟ ಬಿರುದು, ಪ್ರಶಸ್ತಿಗಳು ಬೇಡ. ರಾಜ್ಯಮಟ್ಟದ, ರಾಷ್ಟ್ರಮಟ್ಟದ, ಸಾಹಿತ್ಯ ಅಕಾಡೆಮಿ, ವಿ.ವಿ.ಗಳ ಪುರಸ್ಕಾರಗಳು ಮಾತ್ರ ಸಾಕು. ಪ್ರಶಸ್ತಿ ಪಡೆದುಕೊಳ್ಳುವಾಗ ಮಾಡಿದ ಭಾಷಣಗಳು ಎಲ್ಲ ಬೇಡ.--ಪವನಜ ಯು. ಬಿ. (ಚರ್ಚೆ) ೧೫:೧೪, ೨೧ ಏಪ್ರಿಲ್ ೨೦೨೧ (UTC)

Atmalinga (ಚರ್ಚೆ) ೦೨:೦೧, ೨೨ ಏಪ್ರಿಲ್ ೨೦೨೧ (UTC) ಗೊತ್ತಾಯಿತು. ಧನ್ಯವಾದಗಳು. (Atmalinga (ಚರ್ಚೆ) ೦೭:೦೪, ೨೨ ಏಪ್ರಿಲ್ ೨೦೨೧ (UTC)) ಮೈಸೂರು ಅಸೋಸಿಯೇಷನ್ ಲೇಖನವನ್ನು ಪರಿಶ್ಕೃತ ಗೊಳಿಸಿರುವೆ.
ಧನ್ಯವಾದಗಳು.--ಪವನಜ ಯು. ಬಿ. (ಚರ್ಚೆ) ೧೩:೩೭, ೨೩ ಏಪ್ರಿಲ್ ೨೦೨೧ (UTC)
(Atmalinga (ಚರ್ಚೆ) ೦೭:೨೧, ೨೨ ಏಪ್ರಿಲ್ ೨೦೨೧ (UTC))ಅಹಲ್ಯ ಬಲ್ಲಾಳ್ ರವರ ಲೇಖನದಲ್ಲಿ ಅವರ ಜನನದ ಕಾಲಂನಲ್ಲಿ ನಮೂದಿಸಿರುವ ತಾರೀಖಿಗೆ 'ಸಾಕ್ಷ್ಯಾಧಾರ ಬೇಕು' ಎಂದಿದ್ದೀರಿ. ಇದೆಷ್ಟು ಸಮರ್ಪಕ ಸ್ವಾಮಿ ? ಬಹುಶ: ಜನನ ಪತ್ರದ ದಾಖಲೆಯ ಅಗತ್ಯವಿದೆಯೆ ತಮಗೆ ?
Atmalinga (ಚರ್ಚೆ) ೧೩:೦೪, ೨೩ ಏಪ್ರಿಲ್ ೨೦೨೧ (UTC) ಶಂಕರ ನಾಗ್ ಆಕಾಶವಾಣಿ ನಡೆಸಿದ ಸಂದರ್ಶನ ಎಷ್ಟು ಕೆಟ್ಟದಾಗಿ ದಾಖಲಿಸಲ್ಪಟ್ಟಿದೆ. ನೀವೇ ನೋಡಿ.
ಅದು ಅನವಶ್ಯಕ. ತೆಗೆದು ಹಾಕಿದ್ದೇನೆ. ಈ ಕೆಲಸವನ್ನು ನೀವೇ ಮಾಡಬಹುದಿತ್ತು.--ಪವನಜ ಯು. ಬಿ. (ಚರ್ಚೆ) ೧೩:೩೭, ೨೩ ಏಪ್ರಿಲ್ ೨೦೨೧ (UTC)
(Atmalinga (ಚರ್ಚೆ) ೧೪:೦೨, ೨೩ ಏಪ್ರಿಲ್ ೨೦೨೧ (UTC)) ಸರಿ ನೀವು ಹೇಳುವುದು. ಈ ಸಂವಾದದಲ್ಲಿ ಮಹತ್ವದ ಮಾಹಿತಿಗಳಿವೆ. ಅವನ್ನು ವ್ಯವಸ್ಥಿತವಾಗಿ ಸರಿಜೋಡಿಸುವುದು ಮುಖ್ಯ. ಯಾರು ಈ ಲೇಖನ ಬರೆದರೋ ಅವರ ಬಗ್ಗೆ ನನಗೆ ಗೊತ್ತಿಲ್ಲ. ಹಿಂದೆ ಬರೆದಿದ್ದಾರೆ. ಹೊಸ ತಂತ್ರಜ್ಞಾನ ಅರಿಯದವರು. ಆ ಮಾಹಿತಿ ತೆಗೆದು ಹಾಕಿದರೆ ನೊಂದುಕೊಳ್ಳುವುದಿಲ್ಲವೇ ? ಸಿನಿ ಚಿತ್ರನಟ, ಕಮಲಹಾಸನ್ ಲೇಖನ ಸ್ವಲ್ಪ ನೋಡಿ. ಅದೆಷ್ಟು ಪುರಾಣ ಬರೆದಿದ್ದಾರೆ. ಇಂತಹ ಲೇಖನಗಳು ಹಲವಾರು. ದಯಮಾಡಿ ಸರಿಯಾಗಿ ನೋಡಿ. ಟ್ಯಾಗ್ ಹಾಕುವ ಕೆಲಸ ದಯಮಾಡಿ ಕಡಿಮೆಮಾಡಿ.

(Atmalinga (ಚರ್ಚೆ) ೧೪:೧೦, ೨೩ ಏಪ್ರಿಲ್ ೨೦೨೧ (UTC)) ಅಗತ್ಯವಿಲ್ಲದ ಮಾಹಿತಿಗಳಿಂದ ತುಂಬಿವೆ. ದಯವಿಟ್ಟು ವ್ಯಕ್ತಿಯ ಸಾಧನೆಗಳ ಬಗೆಗೆ ಮಾತ್ರ ಲೇಖನ ಇರಲಿ. ಇದು ತಮ್ಮ ಮಾತು.

ಲೇಖನ ಬರೆದವರಿಗೆ ಬೇಸರವಾಗುತ್ತದೆ ಎಂದು ವಿಶ್ವಕೋಶದ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳುವುದು ಸಾಧ್ಯವಿಲ್ಲದ ಮಾತು. ಯಾವುದೋ ಲೇಖನದಲ್ಲಿ ತಪ್ಪುಗಳಿವೆ, ಆದುದರಿಂದ ನಾನೂ ತಪ್ಪು ಮಾಡುತ್ತೇನೆ ಎಂಬುದು ಅಪ್ರಬುಧ್ಧರು ಮಾಡುವ ವಾದ. ನೀವು ಇಂತಹ ವಾದ ಮಾಡುವ ಬದಲು ಅಂತಹ ಲೇಖನಗಳನ್ನು ಹುಡುಕಿ ಅವುಗಳನ್ನು ಸರಿಪಡಿಸುವುದು ಉತ್ತಮ. ದಯವಿಟ್ಟು ಸ್ವಲ್ಪ ಸಮಯ ಯಾವುದೇ ವ್ಯಕ್ತಿ ಪರಿಚಯ ಬರೆಯುವ ಬದಲು ಇರುವ ಲೇಖನಗಳನ್ನು ಸರಿಪಡಿಸಿ. ಇದು ಕನ್ನಡ ವಿಕಿಪೀಡಿಯಕ್ಕೆ ನೀವು ನೀಡಬಹುದಾದ ಅತ್ಯಮೂಲ್ಯ ಕೊಡುಗೆ.--ಪವನಜ ಯು. ಬಿ. (ಚರ್ಚೆ) ೧೦:೩೭, ೨೫ ಏಪ್ರಿಲ್ ೨೦೨೧ (UTC)
ನೀವು ಮತ್ತೆ ಹಿರೇಮಗಳೂರು ಕಣ್ಣನ್ ಬಗ್ಗೆ ಪತ್ರಿಕಾಲೇಖನದ ಧಾಟಿಯಲ್ಲಿ ಅತಿಯಾಗಿ ಹೊಗಳಿಕೆ, ಅನವಶ್ಯಕ ಮಾಹಿತಿಗಳನ್ನು ತುಂಬಿದ ಲೇಖನವನ್ನು ಬರೆದಿದ್ದೀರಿ. ನಾನು ಅದನ್ನು ಸರಿಪಡಿಸಿದ್ದೇನೆ. ದಯವಿಟ್ಟು ಮತ್ತೆ ಮತ್ತೆ ಇಂತಹ ಲೇಖನಗಳನ್ನು ಬರೆಯಬೇಡಿ. ನಮಗೆ ನಿಮ್ಮ ಲೇಖನಗಳನ್ನು ಸರಿಪಡಿಸುವುದೇ ಕೆಲಸವಾಗುತ್ತದೆ.--ಪವನಜ ಯು. ಬಿ. (ಚರ್ಚೆ) ೧೦:೩೩, ೨೫ ಏಪ್ರಿಲ್ ೨೦೨೧ (UTC)

(Atmalinga (ಚರ್ಚೆ) ೧೨:೧೭, ೫ ಮೇ ೨೦೨೧ (UTC)) ಕಮಲ ಹಾಸನ್ ರವರ ಲೇಖನವನ್ನು ತಾವು ಹೇಗೆ ಅರ್ಥೈಸುತ್ತೀರೋ ದೇವರಿಗೇ ಗೊತ್ತು. ಇನ್ನೂ ಅದನ್ನು ತಿದ್ದುವ ಪ್ರಯತ್ನವನ್ನು ತಾವು ಮಾಡಿಲ್ಲ.ಏಕೆ ? 'ಬಿಲ್ ಗೇಟ್ಸ್' ಇಂಗ್ಲೀಷ್/ಕನ್ನಡ ಲೇಖನ ನೋಡಿ. ಅದೆಷ್ಟು ಮಾಹಿತಿಗಳನ್ನು ಅದು ಹೊಂದಿದೆ. ವಿಶ್ವಕೋಶದಲ್ಲಿ ಸರಿಯಾದಕಡೆಗಳಲ್ಲಿ ಸಮರ್ಪಕವಾದ ಮಾಹಿತಿಗಳು ಬೇಕಾಗುತ್ತವೆ. 'ಬಂದ, ಹೋದ' ಎನ್ನುವುದು ವಿಶ್ವಕೋಶವಾಗುತ್ತದೆಯೇ ? ಹಾಗಿದ್ದರೆ ಯಾರು ವಿಕಿಪೀಡಿಯ ನೋಡುತ್ತಾರೆ ? ವಿಕಿಪೀಡಿಯ ತ್ವರಿತಗತಿಯಲ್ಲಿ ವಿಶ್ವದ ಆಗುಹೋಗುಗಳನ್ನು ವೇಗವಾಗಿ ಮತ್ತು ಖಚಿತವಾಗಿ ತಲುಪಿಸುವ ಕೆಲಸಮಾಡಬೇಕು. ಅನಾವಶ್ಯಕ ಎನ್ನುವುದು ವ್ಯಕ್ತಿಗಳಿಗೆ ಸಂಬಂಧಿಸಿತ್ತು. ನಿಮಗೆ ಅನಾವಶ್ಯಕ ಬೇರೆ ಓದುಗರಿಗೆ ಅತಿ ಸಂಪನ್ಮೂಲ ಮಾಹಿತಿಯಾಗಿರಲಿಕ್ಕೂ ಸಾಧ್ಯವಿದೆ. ದಯವಿಟ್ಟು ಗಮನಿಸಿ. 'ಬಿಲ್ ಗೇಟ್ಸ್' ನ ಲೇಖನದಲ್ಲಿ ಇರುವುದೆಲ್ಲಾ ಅತ್ಯಾವಶ್ಯಕವೇ ! ಪತ್ರಿಕಾಧಾಟಿ ಸಲ್ಲದು. ಅದು ನನ್ನ ಒಂದು ತೃಟಿ. ಅದನ್ನು ನಾನು ಒಪ್ಪಿದ್ದೇನೆ. ಎಲ್ಲಾ, ಯಾವುದೇ ಇಂಗ್ಲೀಷ್ ವಿಕಿಪೀಡಿಯ ಲೇಖನಗಳೂ ಮಾಹಿತಿಗಳಿಂದ ತುಂಬಿರುತ್ತವೆ. ನಮಸ್ಕಾರ. ಇದಕ್ಕೆ ಉತ್ತರಿಸಬೇಡಿ. ನಾನೊಬ್ಬ ಕಡಿಮೆ ತಿಳುವಳಿಕೆಯವ. ಅದಕ್ಕೆ ಕನ್ನಡದಲ್ಲಿ ವ್ಯಕ್ತಿ ಚಿತ್ರ ಬರೆಯಲು ನಿಲ್ಲಿಸಿದ್ದೇನೆ.(ನಿಮ್ಮ ಅಪ್ಪಣೆಯ ಮೇಲೆ)

ಸ್ವಾಮಿ, ಈ ರೀತಿ whataboutery ಮಾಡುವುದರಿಂದ ಕನ್ನಡ ವಿಕಿಪೀಡಿಯ ಬೆಳೆಯುವುದಿಲ್ಲ. ನಿಮಗೆ ಪುರುಸೊತ್ತು ಇದ್ದರೆ ಅದನ್ನು ತಿದ್ದಿ. ನೀವು ಯಾಕೆ ಮಾಡಿಲ್ಲ ಎಂದು ಕೇಳುವುದು ಪ್ರಜ್ಞಾವಂತ ನಾಗರಿಕರ ಲಕ್ಷಣ ಅಲ್ಲ.
ಕನ್ನಡ ವಿಕಿಪೀಡಿಯದ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ ಯಾವತ್ತೋ ಪ್ರಾರಂಭವಾಗಿ ಮುಂದೆ ಸಾಗಿಲ್ಲ. ನೀವು ಆ ಯೋಜನೆಯ ಮುಂದಾಳತ್ವ ವಹಿಸಿ. ತಿದ್ದಬೇಕಾದ ಲೇಖನಗಳ ಒಂದು ಪಟ್ಟಿ ಮಾಡಿ. ಅದನ್ನು ಈ ಯೋಜನಾಪುಟಕ್ಕೆ ಸೇರಿಸಿ. ಆ ನಂತರ ಲೇಖನಗಳನ್ನು ಒಂದೊಂದಾಗಿ ತಿದ್ದುತ್ತಾ ಹೋಗಿ. ಇದೇ ನೀವು ಕನ್ನಡ ವಿಕಿಪೀಡಿಯಕ್ಕೆ ನಿಡಬಹುದಾದ ಅತ್ಯುತ್ತಮ ಕೊಡುಗೆ. ಮಾಡುತ್ತೀರಲ್ಲ?--ಪವನಜ ಯು. ಬಿ. (ಚರ್ಚೆ) ೧೩:೩೪, ೫ ಮೇ ೨೦೨೧ (UTC)

ಟೆಂಪ್ಲೇಟು ತೆಗೆಯುವ ಬಗ್ಗೆ[ಬದಲಾಯಿಸಿ]

ಆರ್. ವಿ. ಮೂರ್ತಿಯವರ ಲೇಖನವನ್ನು ಸ್ವಚ್ಛಮಾಡಬೇಕು ಎಂದು ನಾನು ಸೇರಿಸಿದ್ದ ಟೆಂಪ್ಲೇಟನ್ನು ನೀವು ಲೇಖನವನ್ನು ಸ್ವಚ್ಛ ಮಾಡದೇ ತೆಗೆದಿದ್ದೀರಿ. ಇದು ತಪ್ಪು. ದಯವಿಟ್ಟು ಹಾಗೆ ಮಾಡಬೇಡಿ.--ಪವನಜ ಯು. ಬಿ. (ಚರ್ಚೆ) ೧೬:೩೮, ೮ ಮೇ ೨೦೨೧ (UTC)

ನಮಸ್ಕಾರ. ನಾನು ಸುಮಾರು ೧೯೬೮ ರಿಂದ ಮುಂಬೈ ಕನ್ನಡಿಗರಲ್ಲಿ ಮೇರು ವ್ಯಕ್ತಿಗಳಾಗಿದ್ದ ಡಾ.ಆರ್.ಎಲ್.ಐಯ್ಯಂಗಾರ್,ಆರ್.ವಿ.ಮೂರ್ತಿ, ಆರ್.ಡಿ.ಚಾರ್. ಚಂಪಕನಾಥ್, ಡಾ.ಸಿ.ನಂಜುಂಡಯ್ಯ. ನಾರಾಯಣಸ್ವಾಮಿ, ಮೊದಲಾದವರನ್ನು ಹತ್ತಿರದಿಂದ ನೋಡಿಬಲ್ಲೆ. ಅಷ್ಟು ದೊಡ್ಡ ಸಾಧಕರಾಗಿದ್ದಾಗ್ಯೂ ಅವರ ಬಗ್ಗೆ ಲೇಖನ ಬರೆಯಲು ನನಗೆ ಉಲ್ಲೇಖಗಳ ಕೊರತೆಯಿತ್ತು. ಕಾರಣ ನನ್ನ ಲ್ಯಾಬೋರೇಟರಿಯ ನಿರ್ದೇಶಕರ ವತಿಯಿಂದ ಎಲ್ಲರ ಪರಿಚಯವಾಗಿತ್ತು. ಕೆಲವು ಲೇಖನಗಳನ್ನು ಬರೆದನಾದರೂ ಡಾ.ಲೀಲಾರವರ ಪುಸ್ತಕ ಪ್ರಕಟವಾಗುವವರೆವಿಗೂ ನನಗೆ ಒಟ್ಟಾರೆ ಸಾಮಗ್ರಿಗಳು ಸಿಕ್ಕಿರಲಿಲ್ಲ. ಕಾಮರ್ಸ್ ಪತ್ರಿಕೆಯಂತಹ ಪ್ರತಿಷ್ಠಿತ ಪತ್ರಿಕೆಯ ಸಂಪಾದಕರಾಗುವುದು, ಇಂಗ್ಲೆಂಡ್ ನಲ್ಲಿ ೧೦ ಡೌನಿಂಗ್ ಸ್ಟ್ರೀಟ್ ನ ನಿವಾಸಿ,ಬ್ರಿಟನ್ ಪ್ರಧಾನಿ, ಮಿ.ಆಟ್ಲಿಯವರ ಹತ್ತಿರ ಪೂರ್ವಪರವಾನಗಿ ಪಡೆಯದೆ, ದಿಢೀರ್ ಎಂದು ಅವರ ಆಫೀಸಿನೊಳಗೆ ಹೋಗಿ ೪೫ ನಿಮಿಷಗಳಿಗಿಂತ ಹೆಚ್ಚು ಸಮಯದಲ್ಲಿ ಸಂವಾದ ಮಾಡಿದ ಭಾರತೀಯ ಪತ್ರಕರ್ತ ಎಂಬುದನ್ನು ಅರ್ಥಮಾಡಿಕೊಳ್ಳುವವರಿಗೆ ಹೇಳಬಹುದು. ಅದೆಷ್ಟೋ ವಿಶಯಗಳು ನನಗೆ ಗೊತ್ತು. (೧೯೪೪ ರಲ್ಲಿ ಜನಿಸಿದವನಲ್ಲವೇ)

ಇನ್ನು ನಿಮ್ಮ ಮಾತಿನಲ್ಲೇ ಹೇಳುವುದಾದರೆ, ಸ್ವಛ್ಛಮಾಡುವ ಕೆಲಸ. ದಯಮಾಡಿ ತಾವು ಏನು ಮಾಡುತ್ತೀರೋ ಮಾಡಿ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. (Atmalinga (ಚರ್ಚೆ) ೦೨:೦೯, ೯ ಮೇ ೨೦೨೧ (UTC))

ಸ್ವಾಮೀ, ನೀವು ಎಷ್ಟು ವರ್ಷಗಳಿಂದ ಮುಂಬಯಿಯಲ್ಲಿ ಇದ್ದೀರಿ, ಮುಂಬಯಿಯಲ್ಲಿ ಕನ್ನಡಿಗರು ಎಷ್ಟು ಸಾಧನೆ ಮಾಡಿದ್ದಾರೆ, ಇತ್ಯಾದಿಗಳ ಬಗ್ಗೆ ಅಲ್ಲ ನಾನು ನಿಮ್ಮ ಚರ್ಚಾಪುಟದಲ್ಲಿ ಬರೆದುದು. ಸ್ವಚ್ಛಗೊಳಿಸಬೇಕಾಗಿದೆ ಎಂದು ನಾನು ಸೇರಿಸಿದ ಟೆಂಪ್ಲೇಟನ್ನು ನೀವು ಲೇಖನವನ್ನು ಸ್ವಚ್ಛ ಮಾಡದೆಯೇ ತೆಗೆದುಹಾಕಿದ್ದು ಯಾಕೆ? ಹಾಗೆ ಮಾಡಬಾರದು ಎಂದು ನಾನು ತಿಳಿಸಿದ್ದು. ದಯವಿಟ್ಟು ವ್ಯಂಗ್ಯ ಬಿಟ್ಟು ಪ್ರಬುದ್ಧರಾಗಿ ಚರ್ಚಾಪುಟದಲ್ಲಿ ಬರೆಯಿರಿ.--ಪವನಜ ಯು. ಬಿ. (ಚರ್ಚೆ) ೦೨:೫೫, ೯ ಮೇ ೨೦೨೧ (UTC)

ಎಷ್ಟೇ ಆಗಲಿ,ನನ್ನ ವಯಸ್ಸು ಒಂದು ಪ್ರಭಾವ ಬೀರುತ್ತಿರುವುದನ್ನು ಗಮನಿಸುತ್ತಿದ್ದೇನೆ. ಮನೆಯಲ್ಲಿ ಮತ್ತೆ ಹೊರಗೆ ಸಹಿತ. ಇನ್ನೊಂದು ವಿಷಯ. ನನ್ನ ಮನೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಬಗ್ಗೆ ವ್ಯಸ್ತನಾಗಿದ್ದೇನೆ. ನನ್ನ ಗಮನ ಅತ್ತಕಡೆ ಹೆಚ್ಚಿದೆ. ನನಗೆ ತಿಳಿದಂತೆ ಕೆಲವು ಸಾಲುಗಳನ್ನು ತೆಗೆದುಹಾಕಿದ್ದೇನೆ. ಇದನ್ನು ಬಿಟ್ಟರೆ ನನಗೆ ಹೆಚ್ಚು ತಿಳಿಯದು. ಅದಕ್ಕೇ ನಾನು ನಿಮಗೆ ಹೇಳಿದ್ದು. ತಾವು ತಮಗೆ ತಿಳಿದಂತೆ ಮಾಡಿ. (Atmalinga (ಚರ್ಚೆ) ೦೩:೨೮, ೯ ಮೇ ೨೦೨೧ (UTC))

ವ್ಯಕ್ತಿ ಪರಿಚಯ[ಬದಲಾಯಿಸಿ]

ನೀವು ಮತ್ತೆ ಮತ್ತೆ ವ್ಯಕ್ತಿಪರಿಚಯ ಮಾತ್ರ ಬರೆಯುವುದು, ಇರುವ ಲೇಖನಗಳಿಗೆ ಇನ್ನಷ್ಟು ಅನಗತ್ಯ ಮಾಹಿತಿ ಸೇರಿಸುವುದು, ಅತಿಯಾದ ಹೊಗಳಿಕೆಯ ಧಾಟಿಯಲ್ಲಿ ಬರೆಯುವುದು ಇವುಗಳನ್ನು ಮುಂದುವರೆಸಿದ್ದೀರಿ. ಇದೇ ರೀತಿ ಮುಂದುವರೆಸಿದರೆ ನಿಮ್ಮನ್ನು ಕನ್ನಡ ವಿಕಿಪೀಡಿಯದಲ್ಲಿ ಸಂಪಾದನೆ ಮಾಡದಂತೆ ನಿರ್ಬಂಧಿಸಬೇಕಗುತ್ತದೆ. ಇದು ಮೊದಲನೇ ಸಲವಲ್ಲ ನಿಮಗೆ ಎಚ್ಚರಿಸುತ್ತಿರುವುದು. ಇದು ಅಂತಿಮ ಎಚ್ಚರಿಕೆ.--ಪವನಜ ಯು. ಬಿ. (ಚರ್ಚೆ) ೦೪:೫೦, ೬ ಜೂನ್ ೨೦೨೧ (UTC)