ವಿಷಯಕ್ಕೆ ಹೋಗು

ಅಹಲ್ಯ ಬಲ್ಲಾಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಹಲ್ಯ ಬಲ್ಲಾಳ್
ಜನನ
ಅಹಲ್ಯ

(1963-12-01) ೧ ಡಿಸೆಂಬರ್ ೧೯೬೩ (ವಯಸ್ಸು ೬೦)
ಶಿಕ್ಷಣ ಸಂಸ್ಥೆಮಂಗಳೂರು ವಿಶ್ವವಿದ್ಯಾಲಯ ಮತ್ತು ಮುಂಬಯಿ ವಿಶ್ವವಿದ್ಯಾಲಯ.
ವೃತ್ತಿ(ಗಳು)ನಟಿ, ಕಂಠದಾನ ಕಲಾವಿದೆ, ಅನುವಾದಕಿ, ಭರತನಾಟ್ಯ ಕಲಾವಿದೆ, ಲೇಖಕಿ ಮತ್ತು ನಾಟಕ ನಿರ್ದೇಶಕಿ
ಗಮನಾರ್ಹ ಕೆಲಸಗಳುನಾಟಕ ನಿರ್ದೇಶನ, ಅಭಿನಯ
ಪೋಷಕ(ರು)ಪಿ.ಎನ್.ವೆಂಕಟ್‍ರಾವ್
ಜಾನಕಿ

ಅಹಲ್ಯ ಬಲ್ಲಾಳ್,[] ಕನ್ನಡದ ರಂಗಭೂಮಿ ನಟಿ ಮತ್ತು ನಿರ್ದೇಶಕಿ. ಮುಂಬಯಿ ನಗರದಲ್ಲಿ ಕನ್ನಡದ ಹಲವಾರು ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಹಲ್ಯ, ಭರತನಾಟ್ಯ ಕಲಾವಿದೆ, ಲೇಖಕಿ ಮತ್ತು ಅನುವಾದಕಿಯೂ ಆಗಿದ್ದಾರೆ.[][][]

ಜನನ,ವಿದ್ಯಾಭ್ಯಾಸ, ಕುಟುಂಬ

[ಬದಲಾಯಿಸಿ]

ಅಹಲ್ಯ[] ಹುಟ್ಟಿದ್ದು ಡಿಸೆಂಬರ್ ೦೧, ೧೯೬೩ರಲ್ಲಿ[ಸಾಕ್ಷ್ಯಾಧಾರ ಬೇಕಾಗಿದೆ]. ತಂದೆ ಪಿ. ಎನ್. ವೆಂಕಟ್‍ರಾವ್, ತಾಯಿಯ ಹೆಸರು ಜಾನಕಿ. ಚಲನಚಿತ್ರ ನಿರ್ದೇಶಕರಾದ ರಾಮಚಂದ್ರ ಪಿ. ಎನ್. ಅಹಲ್ಯಾರ ತಮ್ಮ. ಉಡುಪಿ, ಕುಂದಾಪುರ, ಧಾರವಾಡ, ಬೆಂಗಳೂರು ಮತ್ತು ಮುಂಬಯಿ ಯಲ್ಲಿ ವಿದ್ಯಾಭ್ಯಾಸ ಮಾಡಿದ ಅಹಲ್ಯ, ವಿಜ್ಞಾನ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.[]

ವಿವಾಹ

[ಬದಲಾಯಿಸಿ]

ಸಂತೋಷ ಬಲ್ಲಾಳರನ್ನು ಮದುವೆಯಾದ ಅಹಲ್ಯ ಅವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.

ಭರತನಾಟ್ಯ ರಂಗಪ್ರವೇಶ

[ಬದಲಾಯಿಸಿ]

೧೯೮೮ರಲ್ಲಿ ಬೆಂಗಳೂರಿನ ’ಯವನಿಕಾ’ ಸಭಾಂಗಣದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು. ಕರ್ನಾಟಕ, ಮುಂಬಯಿ ಹಾಗೂ ಇತರೆ ನಗರಗಳಲ್ಲಿ ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಅನೇಕ ನೃತ್ಯನಾಟಕಗಳಲ್ಲಿ ಭಾಗವಹಿಸಿದ್ದಾರೆ.

ನಾಟಕಗಳಲ್ಲಿ ಅಭಿನಯ

[ಬದಲಾಯಿಸಿ]

ಮುಂಬಯಿನ ಕನ್ನಡ ಕಲಾಕೇಂದ್ರ, ಮೈಸೂರ್ ಅಸೋಸಿಯೇಷನ್, ಮುಂಬಯಿ, ’ದೃಶ್ಯ’ ತಂಡ ಮತ್ತು ಮಾತುಂಗ ಕರ್ನಾಟಕ ಸಂಘದ ಕಲಾಭಾರತಿ ತಂಡಗಳ ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಅಭಿನಯಿಸಿದ ನಾಟಕಗಳು

[ಬದಲಾಯಿಸಿ]

[ಸಾಕ್ಷ್ಯಾಧಾರ ಬೇಕಾಗಿದೆ]

  • ಪದ್ಮಶ್ರೀ ದುಂಢೀರಾಜ್ (ನಿರ್ದೇಶನ: ಕಿಶೋರಿ ಬಲ್ಲಾಳ)
  • ಸಹ್ಯಾದ್ರಿಯ ಸ್ವಾಭಿಮಾನ (ರಚನೆ: ಆರ್.ಡಿ.ಕಾಮತ, ನಿ: ಶ್ರೀಪತಿ ಬಲ್ಲಾಳ)
  • ತರುಣ ದುರ್ದಂಡ ಮುದುಕ ಮಾರ್ತಾಂಡ (ಮರಾಠಿ ಮೂಲದ ಕನ್ನಡ ರೂಪಾಂತರ ಮತ್ತು ನಿರ್ದೇಶನ: ಶ್ರೀಪತಿ ಬಲ್ಲಾಳ)
  • ನಮ್ಮ ನಮ್ಮಲ್ಲಿ ( ಮರಾಠಿಯ ’ಚಾರ್ ಚೌಗಿಯ’ ನಾಟಕದ ರೂಪಾಂತರ ಮತ್ತು ನಿರ್ದೇಶನ: ಸಂತೋಷ ಬಲ್ಲಾಳ)
  • ಬಾಕಿ ಇತಿಹಾಸ (ಮೂಲ ಕೃತಿ:ಬಾದಲ್ ಸರ್ಕಾರ್, ನಿ: ರಮೇಶ್ ಶಿವಪುರ)
  • ಬೆಂದಕಾಳೂರು (ರಚನೆ ಮತ್ತು ನಿರ್ದೇಶನ: ಡಾ.ಬಿ.ಆರ್.ಮಂಜುನಾಥ್)
  • ಪುಷ್ಪರಾಣಿ (ರಚನೆ: ಚಂದ್ರಶೇಖರ ಕಂಬಾರ, ನಿ: ಜಯಲಕ್ಷ್ಮೀ ಪಾಟೀಲ್)
  • ಮಂಥರಾ (ರಚನೆ: ಡಾ.ಹೆಚ್.ಎಸ್.ವೆಂಕಟೇಶಮೂರ್ತಿ, ನಿ: ಜಯಲಕ್ಷ್ಮೀ ಪಾಟೀಲ್)
  • ಎಲ್ಲಮ್ಮ (ಮೂಲ ನಾಟಕ: ಲೋರ್ಕಾ, ರೂಪಾಂತರ ಮತ್ತು ನಿರ್ದೇಶನ: ಬಿ. ಬಾಲಚಂದ್ರ ರಾವ್)
  • ಅಂಬೆ (ಕನ್ನಡಕ್ಕೆ: ಸರಜೂ ಕಾಟ್ಕರ್, ನಿರ್ದೇಶನ:ಭರತ್ ಕುಮಾರ್ ಪೊಲಿಪು)
  • ಅಂಬೆ [ತುಳು] (ನಿ: ಭರತ್ ಕುಮಾರ್ ಪೊಲಿಪು)
  • ಕುವೆಂಪು ಕಂಡ ಮಂಥರೆ (ಮೂಲ : ಕುವೆಂಪು, ರಂಗರೂಪ ಮತ್ತು ನಿರ್ದೇಶನ ಸಾ ದಯಾ[ದಯಾನಂದ ಸಾಲ್ಯಾನ])
  • ಮಾಯಾವಿ ಸರೋವರ.[]
  • ಚೌಕಟ್ಟಿನಾಚೆಯ ಚಿತ್ರಗಳು.[]

ನಿರ್ದೇಶಿಸಿದ ನಾಟಕಗಳು

[ಬದಲಾಯಿಸಿ]

[ಸಾಕ್ಷ್ಯಾಧಾರ ಬೇಕಾಗಿದೆ]

  • ನಕ್ಕಳಾ ರಾಜಕುಮಾರಿ (ರಚನೆ: ಪಾಷಾ)
  • ಗುಮ್ಮ (ರಚನೆ: ಎ.ಎಸ್. ಮೂರ್ತಿ)
  • ಸೂರ್ಯ ಬಂದ (ರಚನೆ: ವೈದೇಹಿ)
  • ಯಾರು ಶ್ರೇಷ್ಠರು (ಇಂಗ್ಲೀಷ್ ಮೂಲದ ನಾಟಕ, ಕನ್ನಡ ರೂಪಾಂತರ: ಅಹಲ್ಯ ಬಲ್ಲಾಳ್)
  • ಹಕ್ಕಿ ಹಾಡು (ರಚನೆ: ವೈದೇಹಿ)

ಕೈಲಾಸಂ ಸ್ಮರಣೆಯ ದಿನದಂದು ನಾಟಕ ಪ್ರದರ್ಶನ

[ಬದಲಾಯಿಸಿ]

ಮೈಸೂರು ಅಸೋಸಿಯೇಷನ್, ಮುಂಬಯಿನಲ್ಲಿ ಏಕ-ವ್ಯಕ್ತಿ ಪ್ರಧಾನವಾದ ನಾಟಕ "ಅವಳ ಕಾಗದ" ವನ್ನು ಅಹಲ್ಯಾ ಬಲ್ಲಾಳ್ ರವರಿಂದ ೨೮,ಆಗಸ್ಟ್, ೨೦೨೨ ರಂದು ಪ್ರದರ್ಶಿಸಲಾಯಿತು. ಈ ಕಿರು-ಬೆಂಗಾಲಿ ನಾಟಕ,'ಸ್ತ್ರೀರ್ ಪತ್ರ'ದ ಕನ್ನಡ ರೂಪಾಂತರವೇ 'ಅವಳ ಕಾಗದ'. []

ಪ್ರಶಸ್ತಿ ಹಾಗೂ ಪುರಸ್ಕಾರಗಳು

[ಬದಲಾಯಿಸಿ]

ಚಿತ್ರಗಳು

[ಬದಲಾಯಿಸಿ]

|

ಉಲ್ಲೇಖಗಳು

[ಬದಲಾಯಿಸಿ]
  1. ಸೊಬಗು, 'ಕನ್ನಡನಾಡಿನ ಸಿರಿವಂತಿಕೆ'-ಅಹಲ್ಯ ಬಲ್ಲಾಳ್
  2. Mumbai: Dramas convey social and cultural message; Ahalya Ballal, 17 Jan 2014
  3. Ahalya Ballal, thorough and good
  4. 10 ಏಪ್ರಿಲ್ 2015, vArtabharati, ಅಂಕಣ - ಮುಂಬಯಿ ಮೇರಿ ಜಾನ್‌ ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ ಬುಧವಾರ - ಫೆಬ್ರವರಿ -08-2012
  5. Science Graph[ಶಾಶ್ವತವಾಗಿ ಮಡಿದ ಕೊಂಡಿ]
  6. ಅಹಲ್ಯಾ ಬಲ್ಲಾಳ್ ಒಂದೊಂದೂ ನೆನಪು ಪುಟಗಳ ನಡುವಿನ ನವಿಲುಗರಿ: ಅಹಲ್ಯಾಬಲ್ಲಾಳ್, Wednesday, 22 May,
  7. one India kannada, June 19, 2014, ಜೂ. 21ರಂದು ಮಾಯಾವಿ ಸರೋವರ ನಾಟಕ
  8. kannada ranga bhumi, facebook, `ಮುಂಬಯಿ ಚುಕ್ಕಿ ಸಂಕುಲ’ ತಂಡದಿಂದ, ‘ಚೌಕಟ್ಟಿನಾಚೆಯ ಚಿತ್ರಗಳು’
  9. ಅಭಿನೇತ್ರಿ ಅಹಲ್ಯ ಬಲ್ಲಾಳರನ್ನು ಅಧ್ಯಕ್ಷೆ ಕಮಲ ಕಾಂತರಾಜ್, ಪುಷ್ಪಗುಚ್ಛದಿಂದ ಗೌರವಿಸುತ್ತಿದ್ದಾರೆ. ಜೊತೆಯಲ್ಲಿ ಲಕ್ಷ್ಮಿಸೀತಾರಾಂ ಸಹ ಇದ್ದಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. ಅವಧಿ,ಕ್ವಿಜ಼್ :'ಬಂತು ಸರಿ ಉತ್ತರ, ಕನ್ಗ್ರಾಟ್ಸ್, ಅಹಲ್ಯ ಬಲ್ಲಾಳ್',ಮಾರ್ಚ್,೨೨,೨೦೧೦