ಶ್ರೇಯಸ್ ಐಯ್ಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಶ್ರೇಯಸ್ ಸಂತೋಷ್ ಐಯ್ಯರ್

ಶ್ರೇಯಸ್ ಸಂತೋಷ್ ಐಯ್ಯರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಹಾಗು ಬಲಗೈ ಲೆಗ್‌ಬ್ರೇಕ್ ಬೌಲರ್. ರಣಜಿ ಟ್ರೋಫೀ‌‌ಯಲ್ಲಿ ಮುಂಬೈ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡುತ್ತಾರೆ.

ಆರಂಭಿಕ ಜೀವನ[ಬದಲಾಯಿಸಿ]

ಶ್ರೇಯಸ್ ಐಯ್ಯರ್ ಡಿಸೆಂಬರ್ ೦೬, ೧೯೯೪ ರಂದು ಮಹಾರಾಷ್ಟ್ರಮುಂಬೈ ನಗರದಲ್ಲಿ ಜನಿಸಿದರು. ತಮ್ಮ ೧೨ನೇ ವಯಸ್ಸಿನಲ್ಲಿ ಇವರು ಪ್ರವೀನ್ ಆಮ್ರೆ ಅವರ ಬಳಿ ತರಬೇತಿ ಪಡೆದರು. ಶಿಕ್ಷಣವನ್ನು ಪೋಡರ್ ಕಾಲೇಜಿನಲ್ಲಿ ಮುಗಿಸಿದರು. ಕಾಲೇಜಿನಲ್ಲಿ ವಿದ್ಯಾಭ್ಯಾಸದ ವೇಳೆಯಲ್ಲಿ ಹಲವಾರು ಟ್ರೋಫೀಗಳನ್ನು ಗೆದ್ದಿದ್ದರು. ಇವರ ಬಾಲ್ಯ ಹಾಗು ಆರಂಭಿಕ ಜೀವನದ ಬಗ್ಗೆ ಒಂದು ಸಾಕ್ಷ್ಯಚಿತ್ರವೂ ಹೊರಬಂದಿದೆ.[೧][೨][೩]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ್ ೦೯, ೨೦೧೫ರಂದು ಬೆಂಗಳೂರಿನ ಎಮ್.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ೨ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ಇಲ್ಲಿವರೆಗೆ ಒಟ್ಟು 1868 ರನ್ ಕಲೆಹಾಕಿದ್ದಾರೆ.[೪]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ನವಂಬರ್ ೦೧, ೨೦೧೭ರಲ್ಲಿಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ನ್ಯೂಜೀಲ್ಯಾಂಡ್ ವಿರುದ್ದ ನಡೆದ ಮೊದಲನೇ ಟಿ-೨೦ ಪಂದ್ಯದ ಮೂಲಕ ಶ್ರೇಯಸ್ ಐಯ್ಯರ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಡಿಸೆಂಬರ್ ೧೦, ೨೦೧೭ರಲ್ಲಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೫][೬]

ಪಂದ್ಯಗಳು[ಬದಲಾಯಿಸಿ]

 • ಟಿ-೨೦ ಕ್ರಿಕೆಟ್ : ೦೬ ಪಂದ್ಯಗಳು.[೭][೮]
 • ಏಕದಿನ ಕ್ರಿಕೆಟ್ : ೦೬ ಪಂದ್ಯಗಳು
 • ಐಪಿಎಲ್ ಕ್ರಿಕೆಟ್ : ೪೬ ಪಂದ್ಯಗಳು

ಅರ್ಧ ಶತಕಗಳು

 • ಐಪಿಎಲ್ ಪಂದ್ಯಗಳಲ್ಲಿ  : ೧೦
 • ಏಕದಿನ ಪಂದ್ಯಗಳಲ್ಲಿ  : ೦೨

ಉಲ್ಲೇಖಗಳು[ಬದಲಾಯಿಸಿ]

 1. https://sports.ndtv.com/cricket/players/64384-shreyas-santosh-iyer-playerprofile
 2. https://www.mid-day.com/articles/despite-injury-shreyas-claims-six-in-podars-win/155910
 3. https://www.youtube.com/watch?v=PnDkLNciTJc
 4. https://www.cricbuzz.com/live-cricket-scorecard/14595/chennai-super-kings-vs-delhi-daredevils-2nd-match-indian-premier-league-2015
 5. https://www.cricbuzz.com/live-cricket-scorecard/19193/india-vs-sri-lanka-1st-odi-sri-lanka-tour-of-india-2017
 6. https://www.cricbuzz.com/live-cricket-scorecard/18959/india-vs-new-zealand-1st-t20i-new-zealand-tour-of-india-2017
 7. https://www.cricbuzz.com/profiles/9428/shreyas-iyer
 8. http://www.espncricinfo.com/india/content/player/642519.html