ವಿಷಯಕ್ಕೆ ಹೋಗು

ಶೋಭಾ ಗುರ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೋಭಾ ಗುರ್ಟು
ಹಿನ್ನೆಲೆ ಮಾಹಿತಿ
ಜನ್ಮನಾಮಭಾನುಮತಿ ಶಿರೋದ್ಕರ್
ಜನನ೮ ಫೆಬ್ರವರಿ ೧೯೨೫
ಬೆಳಗಾವಿ,ಕರ್ನಾಟಕ,ಭಾರತ
ಮರಣ೨೭ ಸೆಪ್ಟೆಂಬರ್ ೨೦೦೪
ಮುಂಬೈ,ಭಾರತ
ಸಂಗೀತ ಶೈಲಿಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ವೃತ್ತಿಗಾಯಕಿ
ಸಕ್ರಿಯ ವರ್ಷಗಳು೧೯೪೦-೨೦೦೪

ಶೋಭಾ ಗುರ್ಟು (೧೯೨೫-೨೦೦೪) ರವರು ಭಾರತದ ಹಿಂದೂಸ್ತಾನಿ ಶಾಸ್ತ್ರೀಯ ಶೈಲಿಯ ಗಾಯಕಿಯಾಗಿದ್ದರು. ಇವರನ್ನು ಠುಮ್ರಿ ರಾಣಿ ಎಂದು ಕೂಡ ಕರೆಯುತ್ತಾರೆ. [][]

ಆರಂಭಿಕ ಜೀವನ

[ಬದಲಾಯಿಸಿ]

ಭಾನುಮತಿ ಶಿರೋದ್ಕರ್ ಎಂಬುದು ಅವರ ಜನ್ಮ ನಾಮ. ಇವರು ೮ ಫೆಬ್ರವರಿ ೧೯೨೫ರಂದು ಕರ್ನಾಟಕ ಜಿಲ್ಲೆಯ ಬೆಳಗಾವಿಯಲ್ಲಿ ಜನಿಸಿದರು. ಆರಂಭಿಕ ದಿನಗಳಲ್ಲಿ ವೃತ್ತಿಪರ ನರ್ತಕಿಯಾಗಿದ್ದ ತಮ್ಮ ತಾಯಿ ಮೆನೆಕಬಾಯ್ ಶಿರೋದ್ಕರ್ ರವರಿಂದ ತರಬೇತಿ ಪಡೆದರು. ಅವರ ತಾಯಿ ಉಸ್ತಾದ್ ಅಲ್ಲಾದಿಯಾ ಖಾನ್ ರವರ ಶಿಷ್ಯೆಯಾಗಿದ್ದರು.[][]

ವೃತ್ತಿಜೀವನ

[ಬದಲಾಯಿಸಿ]

ಶೋಭಾ ಗುರ್ಟು ರವರು ಠುಮ್ರಿ, ದಾದ್ರ,ಕಾಜ್ರಿ,ಹೋರಿ ಮುಂತಾದ ಅರೆ ಶಾಸ್ರೀಯ ರೂಪಗಳಲ್ಲಿ ಪರಿಣಿತರಾಗಿದ್ದರು. ಗಾಯಕಿ ಬೇಗಂ ಅಖ್ತರ್ ಹಾಗೂ ಗಾಯಕ ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ರವರಿಂದ ಪ್ರಭಾವಿತರಾಗಿದ್ದರು. ಅವರು ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿಯೂ ಸಹ ಸಂಗೀತವನ್ನು ಪ್ರದರ್ಶಿಸಿದ್ದಾರೆ. ಅವರು ಕಮಾಲ್ ಅಮ್ರೋಹಿರವರ ಪಕೀಝಹ್ (೧೯೭೨) ಚಲನಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿದ್ದಾರೆ. ನಂತರ ಫಾಗುನ್ (೧೯೭೩) ಚಿತ್ರದಲ್ಲಿ 'ಬೇದರ್ದೀ ಬನ್ ಗಯೆ ಕೊಯಿ ಜಾವೋ ಮನಾವೋ ಮೋರ್ ಸಯ್ಯನ್' ಎಂಬ ಹಾಡನ್ನು ಹಾಡಿದ್ದಾರೆ. ಮೈನ್ ತುಲ್ಸಿ ತೆರೆ ಆಂಗನ್ ಕಿ (೧೯೭೮) ಚಲನಚಿತ್ರದ 'ಸಯ್ಯನ್ ರೂತ್ ಗಯೇ' ಹಾಡಿಗಾಗಿ ಅವರು ಮಹಿಳಾ ಹಿನ್ನೆಲೆ ಗಾಯಕಿಯಾಗಿ ಫಿಲ್ಮ್ಫೇರ್ ನಾಮನಿರ್ದೇಶನವನ್ನು ಗಳಿಸಿದರು. ಮರಾಠಿ ಚಿತ್ರರಂಗದಲ್ಲಿ ಸಾಮ್ನಾ ಮತ್ತು ಲಾಲ್ ಮತಿ ಚಿತ್ರಗಳಿಗೆ ಹಾಡಿದ್ದಾರೆ. ಸಂಗೀತ ಕಚೇರಿಗಳಿಗಾಗಿ ಪ್ರಪಂಚದಾದ್ಯಂತ ಪ್ರಯಾಣಿಸಿದ್ದಾರೆ. ಅವರು ಮೆಹದಿ ಹಸನ್ ರವರೊಂದಿಗೆ ಮಾಡಿದ ಗಝಲ್ "ಟಾರ್ಜ್" ಆಲ್ಬಂ ಜನಪ್ರಿಯವಾಗಿದೆ. ಭಾರತದ ೫೦ನೇ ವರ್ಷದ ಗಣರಾಜ್ಯ ದಿನವನ್ನು ಗುರುತಿಸಲು ೨೦೦೦ರದಲ್ಲಿ ಬಿಡುಗಡೆಗೊಂಡ ಜನ ಗಣ ಮನ ವಿಡಿಯೋದಲ್ಲಿ ಅವರು ಕಾಣಿಸಿಕೊಂಡರು, ಅಲ್ಲದೆ ಭಾರತದ ಇತರ ಪ್ರಮುಖ ಶಾಸ್ತ್ರೀಯ ಗಾಯಕರು ಮತ್ತು ಸಂಗೀತಗಾರರೊಂದಿಗೆ ಭಾರತದ ರಾಷ್ಟ್ರಗೀತೆ, ಜನ ಗಣ ಮನವನ್ನು ಹಾಡಿದ್ದಾರೆ.[][]

ಶೋಭಾ ಗುರ್ಟು ರವರು ೨೭ ಸೆಪ್ಟೆಂಬರ್ ೨೦೦೪ರಲ್ಲಿ ಮರಣ ಹೊಂದಿದರು.[]

ಪ್ರಶಸ್ತಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://wegotguru.wordpress.com/2017/06/26/the-queen-of-thumri/
  2. https://www.britannica.com/biography/Shobha-Gurtu
  3. https://allaboutbelgaum.com/lifestyle/stars-of-belgaum/shobha-gurtu-was-born-in-belgaum/
  4. https://underscorerecords.com/artistes/detail/137/Shobha-Gurtu
  5. "ಆರ್ಕೈವ್ ನಕಲು". Archived from the original on 2020-09-25. Retrieved 2019-03-25.
  6. "ಆರ್ಕೈವ್ ನಕಲು". Archived from the original on 2020-09-18. Retrieved 2019-03-25.
  7. https://www.rediff.com/news/2004/sep/27gurtu.htm
  8. "ಆರ್ಕೈವ್ ನಕಲು". Archived from the original on 2020-09-19. Retrieved 2019-03-25.
  9. https://padmaawards.gov.in/AboutAwards.aspx