ಛತ್ರಪತಿ ಶಾಹು ಮಹಾರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಛತ್ರಪತಿ ಶಾಹು ಮಹಾರಾಜ್
Rajarshi Shahu Maharaj of Kolhapur
Portrait of Rajarshi Shahu Maharaj of Kolhapur(1912)
ರಾಜ್ಯಭಾರ1884–1922
ಜನನ(೧೮೭೪-೦೬-೨೬)೨೬ ಜೂನ್ ೧೮೭೪
ಮರಣMay 6, 1922(1922-05-06) (aged 47)
ಪೂರ್ವಾಧಿಕಾರಿಶಿವಾಜಿ VI
ಉತ್ತರಾಧಿಕಾರಿರಾಜಾರಾಮ್ III
Consort toಲಕ್ಷೀಬಾಯಿ
ಅರಮನೆBhonsle
ತಂದೆಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ
ತಾಯಿರಾಧಾಬಾಯಿ
ಧಾರ್ಮಿಕ ನಂಬಿಕೆಗಳುಹಿಂದೂ ಧರ್ಮ
ಮಹಾರಾಷ್ಟ್ರದಲ್ಲಿ ಕೊಲ್ಲಾಪುರ ಜಿಲ್ಲೆ
ಕೊಲ್ಲಾಪುರದ ಹೊಸ ಅರಮನೆ
Maharaja of Kolhapur in 1894
H.H. Shahu Chhatrapati Maharaj seated with palace servants
Group at Residency including the Maharaja of Kolhapur


ಛತ್ರಪತಿ ಶಾಹು ಮಹಾರಾಜ್(೨೬ ಜೂನ್ ೧೮೭೪-೬ನೇ ಮೇ ೧೯೨೨)[೧][೨][೩] ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ. ಮಹಾನ್ ದಾರ್ಶನಿಕ. ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿ. ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣದೊಂದಿಗೆ, ಅಧಿಕಾರದಲ್ಲಿ ಸಮಪಾಲು ಮತ್ತು ಸಾಮಾಜಿಕ ಸ್ಥಾನಮಾನ ದೊರಕಿಸಿ ಕೊಟ್ಟವರು. ಜೊತೆಗೆ ಮಹಾತ್ಮ ಜ್ಯೋತಿ ಬಾಪುಲೆ ಅವರ ಸತ್ಯಶೋಧ ಸಮಾಜ ಚಳುವಳಿಯನ್ನು ಮುಂದುವರೆಸಿದವರು. ಇವರ ಶಿಕ್ಷಣ ಸೇವೆಯನ್ನು ಗಮನಿಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ೧೯೦೨ರ ಜೂನ್ ೧೦ರಂದು ಇವರಿಗೆ ಎಲ್.ಎಲ್.ಡಿ ಪದವಿ ನೀಡಿ ಗೌರವಿಸಿದೆ.

ಜನನ/ಜೀವನ[ಬದಲಾಯಿಸಿ]

 • ಶಾಹು ಮಹಾರಾಜರು[೪] ಹುಟ್ಟಿದ್ದು 1874 ಜೂನ್ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‌ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು.
 • ಛತ್ರಪತಿ ಶಾಹು ಮಹಾರಾಜ್ ಹುಟ್ಟಿದ ಊರು ಮಹಾರಾಷ್ಟ್ರಕೊಲ್ಲಾಪುರ ಜಿಲ್ಲೆಯ ಕಾಗಲ್‍. ಸಾಕುತಾಯಿ ಆನಂದಿಬಾಯಿ. ತಾತ ಕಾಗಲ್ ಗ್ರಾಮದ ಪ್ರಸಿದ್ದ ವ್ಯಕ್ತಿ ಯಶವಂತರಾವ್ ಘಾಟ್ಗೆ. ಪತ್ನಿ ಲಕ್ಷೀಬಾಯಿ. ಮಕ್ಕಳು ರಾಧಾಬಾಯಿ, ೩ನೇ ರಾಜಾರಾಮ್, ಶ್ರೀಮಾನ್ ಮಹಾರಾಜಕುಮಾರ್ ಶಿವಾಜಿ ಮತ್ತು ರಾಜಕುಮಾರಿ ಅವುಬಾಯಿ. ಇವರು ವಿದ್ಯಾಭ್ಯಾಸವನ್ನು ರಾಜಕೋಟೆಯ ರಾಜಕುಮಾರ್ ಕಾಲೇಜಿನಲ್ಲಿ ಮಾಡಿದರು.

ಇವರು ಮೂಲತಃ ಕುಣುಬಿ(ಕುರುಬ) ಸಮುಧಾಯಕ್ಕೆ ಸೇರಿದವರಾಗಿರುತ್ತಾರೆ. ಕೊಲ್ಲಪುರದ ಮಹಾರಾಣಿ ಆನಂಧಿಬಾಯಿರವರು ಮಾರ್ಚ್ 11, 1884ರಂದು ಶಾಹುರವರನ್ನು ದತ್ತು ಸ್ವೀಕಾರ ಮಾಡಿಕೊಳ್ಳುತ್ತಾರೆ.

ಸಾಮಾಜಿಕ ಸುಧಾರಣೆಗಳು[ಬದಲಾಯಿಸಿ]

 1. ವಿಧವಾ ಪುನರ್ ವಿವಾಹ ಪದ್ದತಿ ಜಾರಿಗೆ ತಂದರು.[ಸೂಕ್ತ ಉಲ್ಲೇಖನ ಬೇಕು]
 2. ೧೯೧೯ ರಲ್ಲಿ ಅಸ್ಪ್ರಶ್ಯತಾ ಆಚರಣೆ ವಿರುದ್ದ ಕಾನೂನು ಜಾರಿ ಮಾಡಿದರು.
 3. ಶಾಹು ಸತ್ಯಶೋಧಕ ಸಮಾಜವನ್ನು ಪ್ರಾರಂಭ ಮಾಡಿ ಸಾಮಾಜಿಕ ಪರಿವರ್ತನಾ ಚಳುವಳಿಗೆ ನಾಂದಿ ಹಾಡಿದರು.
 4. ೧೯೧೮ ರಲ್ಲಿ ಮಹರ್ ವತನ್ ಪದ್ದತಿಯನ್ನು ನಿಷೇಧಿಸಿ, ಅಸ್ಪ್ರಶ್ಯರಿಗೆ ವಂಶಾವಳಿಯಾಗಿ ಬಂದಿದ್ದ ಜೀತ ಪದ್ದತಿಯನ್ನು ನಿಷೇಧಿಸಲಾಯಿತು.
 5. ೧೯೧೯ರ ಜುಲೈ ೧೨ ರಂದು ಅಂತರಜಾತಿ ವಿವಾಹ ಕಾಯ್ದೆಯನ್ನು ಜಾರಿಗೆ ತಂದರು.[ಸೂಕ್ತ ಉಲ್ಲೇಖನ ಬೇಕು]
 6. ೧೦೨೦ ಜುಲೈ ೧೭ ರಂದು ದೇವದಾಸಿ ಪದ್ದತಿ ನಿರ್ಮೂಲನಾ ಕಾನೂನು ಜಾರಿಗೆ ಬಂತು.[ಸೂಕ್ತ ಉಲ್ಲೇಖನ ಬೇಕು]
 7. ೧೯೨೦ರ ಮೇ ೩೦ ರಂದು ನಾಗಪುರದಲ್ಲಿ ಡಿಪ್ರೆಸ್ಡ್ ಕಾಸ್ಟ್ ಅಧಿವೇಶನವನ್ನು ತಾವೇ ನಡೆಸಿದರು.
 8. ಡಾ.ಬಿ.ಆರ್.ಅಂಬೇಡ್ಕರ್ ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಧನ ಸಹಾಯವನ್ನು ಮಾಡಿದವರು.

ಕೃಷಿಗೆ ಸಂಬಂಧಪಟ್ಟ ಸುಧಾರಣೆ[ಬದಲಾಯಿಸಿ]

 1. ಭೂ ಹೀನರಿಗೆ ಉಚಿತವಾಗಿ ಭೂಮಿಯನ್ನು ಹಂಚಲಾಯಿತು.
 2. ಒಣ ಭೂಮಿಯಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸಿ ಹೆಚ್ಚು ಬೆಳೆಗಳನ್ನು ತೆಗೆಯಲು ಪ್ರೋತ್ಸಾಹ ನೀಡಿದರು.
 3. ಬಡ್ಡಿರಹಿತ ಸಾಲ ಸೌಲಭ್ಯಗಳನ್ನು ಜಾರಿಗೆ ತಂದರು.
 4. ಕಾಡಿನ ಸಂಪತ್ತಿನ ಶೋಷಣೆಯ ವಿರುದ್ದ ಸಮರ ಸಾರಿದರು.
 5. ಸಹಕಾರಿ ಮಾರುಕಟ್ಟೆ ಪದ್ದತಿಯನ್ನು ಮೊದಲಬಾರಿ ತಮ್ಮ ಪ್ರಾಂತ್ಯದಲ್ಲಿ ಜಾರಿಗೆ ತಂದರು.

ಛತ್ರಪತಿ ಶಾಹು ಮಹಾರಾಜ್‍ರ ಕೊಡುಗೆ[ಬದಲಾಯಿಸಿ]

 1. "ಶೂದ್ರರಿಗೆ 50% ಮೀಸಲಾತಿ"[೫] ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯೆಂಬ ಯೋಜನೆಯನ್ನು ಕಂಡುಹಿಡಿದ ಕೀರ್ತಿ ಶಾಹು ಮಹಾರಾಜರದು. ಮೀಸಲಾತಿಯ ಜನಕ "ಛತ್ರಪತಿ ಶಾಹು ಮಹಾರಾಜ್".
 2. ಶಾಹು ಮಹಾರಾಜರು ಅಸ್ಪೃಶ್ಯರಿಗೋಸ್ಕರ 18 ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸುತ್ತಾರೆ.
 3. 1908ರಲ್ಲಿ ವಿಧ್ಯಾಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ.
 4. 1896 ರಿಂದ 1912ರ ಅವಧಿಯಲ್ಲಿ ಶೂದ್ರರಿಗೆ 22, ಅಸ್ಪೃಶ್ಯರಿಗೆ 27 ಶಾಲೆಗಳನ್ನು ಸ್ಥಾಪಿಸುತ್ತಾರೆ.
 5. 1918 ರಲ್ಲಿ ಶೂದ್ರರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು "ಮೂಕ ನಾಯಕ್" ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.
 6. 1918 ರಲ್ಲಿ ಮಹಾತ್ಮ ಜೋತಿಬಾಫುಲೆ ರವರ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು "ಶಾಹು ಸತ್ಯ ಶೋಧಕ ಸಮಾಜ"ವನ್ನು ಸ್ಥಾಪನೆ ಮಾಡುತ್ತಾರೆ.

ಮೀಸಲಾತಿಗೆ ವಿರೋಧ[ಬದಲಾಯಿಸಿ]

 • ಮಹಾರಾಜರ ಮೀಸಲಾತಿಯ ವಿಚಾರವನ್ನು ಬಹುತೇಕ ಬ್ರಾಹ್ಮಣರು ವಿರೋಧ ಮಾಡುತ್ತಿರುತ್ತಾರೆ, ಬೇಸೆತ್ತ ಕೆಲವು ಗೂಂಡಗಳಿಂದ ಮಹಾರಾಜರನ್ನು ಕೊಲೆ ಮಾಡುವ ಪ್ರಯತ್ನವು ನಡೆಯುತ್ತದೆ. ಶಾಹುರವರಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆದರೆ ಆ ಕೊಲೆಯ ಪ್ರಯತ್ನವು ವಿಫಲವಾಗಿಬಿಡುತ್ತದೆ. ಒಮ್ಮೆ ಮಹಾರಾಜರು ಅರಮನೆಯ ಆವರಣದಲ್ಲಿ ಗಾಳಿ ಸಂಚಾರ (walking) ಮಾಡುತ್ತಿರುತ್ತಾರೆ.
 • ಆ ಸಮಯದಲ್ಲಿ ಗಣಪತಿರಾವ್ ಎಂಬ ಬ್ರಾಹ್ಮಣ ವಕೀಲ ಶಾಹುರವರನ್ನು ಕಾಣಲು ಬರುತ್ತಾರೆ ಮೀಸಲಾತಿಯ ಬಗ್ಗೆ ಚರ್ಚೆ ಮಾಡುತ್ತಾ ಅರ್ಹತೆಯಿಲ್ಲದವರಿಗೆಲ್ಲಾ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಾಗೂ ಎಲ್ಲಾ ರಂಗಗಳಲ್ಲೂ ನೀವು ಮೀಸಲಾತಿ ಕೊಟ್ಟರೆ ಪ್ರತಿಭೆಗೆ ದಕ್ಕೆಯುಂಟಾಗುವುದಿಲ್ಲವೇ? ಎಂದು ಮಹಾರಾಜರನ್ನು ಪ್ರಶ್ನಿಸುತ್ತಾನೆ.
 • ಆಗ ಶಾಹು ಮಹಾರಾಜರು ಓ ನಿಮಗೆ ಆ ರೀತಿ ಅರ್ಥವಾಗಿದೆಯೇ ಬನ್ನಿ ನನ್ನ ಜೊತೆ ಎಂದು ಆ ವಕೀಲನನ್ನು ಕರೆದುಕೊಂಡು ಸಂಚಾರ ಮಾಡುತ್ತಾ ಮಾಡುತ್ತಾ ಅರಮನೆಯ ಆವರಣದಲ್ಲಿ ಕುದುರೆಗಳನ್ನು ಕಟ್ಟಿರುವ ಜಾಗಕ್ಕೆ ತಲುಪುತ್ತಾರೆ ಅಲ್ಲಿ ಕುದುರೆಗಳನ್ನು ಗುಂಪು ಗುಂಪುಗಳಾಗಿ ಮಾಡಿ ಮೇವನ್ನು ಹಾಕಲಾಗಿರುತ್ತದೆ. ಇದನ್ನು ಗಮನಿಸಿದ ಮಹಾರಾಜರು ಯಾರಲ್ಲಿ ಈ ಕುದುರೆಗಳನ್ನು ಕಟ್ಟಿದವರು ಎಂದಾಗ ಸ್ಥಳದಲ್ಲೇ ಇದ್ದ ಕುದುರೆಗಳನ್ನು ನೋಡಿಕೊಳ್ಳುವವನು ನಾನೇ ಪ್ರಭು ಎನ್ನುತ್ತಾನೆ.
 • ಆಗ ಮಹಾರಾಜರು ಅವನನ್ನು "ಏನಯ್ಯ ನಿನಗೆ ಬುದ್ಧಿ ಇದೆಯಾ? ಕುದುರೆಗಳನ್ನು ಏಕೆ ಈ ರೀತಿ ಗುಂಪುಗುಂಪುಗಳನ್ನಾಗಿ ವಿಂಗಡನೆ ಮಾಡಿ ಬೇರೆ ಬೇರೆ ಕಡೆ ಮೇವನ್ನಕಿದ್ದೀಯಾ? ಎಲ್ಲಾ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬಹುದಾ ಗಿತ್ತಲ್ಲವೇ? ಎಂದು ಪ್ರಶ್ನಿಸಿ ಜೊತೆಯಲ್ಲಿದ್ದ ವಕೀಲನನ್ನು ಕೇಳುತ್ತಾರೆ ಗಣಪತಿರಾವ್ ರವರೇ ನಾನು ಕೇಳಿದ್ದು ಸರಿ ತಾನೆ? ಎಂದಾಗ ಆ ವಕೀಲ ಹೌದು ಮಹಾರಾಜರೇ ನೀವು ಕೇಳಿದ್ದು ಸರಿಯಾಗಿದೆ.
 • ಅವನು ಆ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬೇಕಿತ್ತು ಎನ್ನುತ್ತಾನೆ. ಆಗ ಸೇವಕನು ಮಹಾರಾಜರ ಪ್ರಶ್ನೆಗಳನ್ನು ಉದ್ದೇಶಿಸಿ "ಮಹಾರಾಜರೇ ಈ ಕುದುರೆಗಳಲ್ಲಿ ಕೆಲವು ವಯಸ್ಸಾಗಿರುವ ಕುದುರೆಗಳಿವೆ, ಗಾಯಗಳಾಗಿ ಪೆಟ್ಟು ಮಾಡಿ ಕೊಂಡಿರುವ ಕುದುರೆಗಳಿವೆ, ಸಣ್ಣ ಪ್ರಾಯದ ಕುದುರೆಗಳಿವೆ ಹಾಗೂ ದಷ್ಟಪುಷ್ಟವಾದ ಬಲಿಷ್ಟವಾಗಿರುವ ಕುದುರೆಗಳಿವೆ ಈ ಎಲ್ಲಾ ಕುದುರೆಗಳನ್ನು ಒಂದೇ ಕಡೆ ಸೇರಿಸಿ ಮೇವನ್ನಾಕಿದರೆ ಯಾವ ಕುದುರೆಗಳಿಗೆ ಹೆಚ್ಚು ಶಕ್ತಿ ಇದೆಯೋ ಅಂದರೆ ದಷ್ಟಪುಷ್ಟವಾದ ಕುದುರೆಗಳು ಮೇವೆಲ್ಲಾ ತಿಂದು ಬಿಡುತ್ತವೆ. ಆಗ ವಯಸ್ಸಾದ ಕುದುರೆಗಳಿಗೆ, ಗಾಯಗಳಾಗಿರುವ ಕುದುರೆಗಳಿಗೆ, ಸಣ್ಣ ಪ್ರಾಯದ ಕುದುರೆಗಳಿಗೆ ಮೇವು ಸಿಗದೇ ದುರ್ಬಲವಾಗಿ ಹಸಿವಿನಿಂದಲೇ ಸತ್ತು ಹೋಗುತ್ತವೆ.
 • ಆದ್ದರಿಂದ ವಯಸ್ಸಾದ ಕುದುರೆಗಳಿಗೆ ಒಂದು ಕಡೆ, ಸಣ್ಣ ಪ್ರಾಯದ ಕುದುರೆಗಳಿಗೆ ಒಂದು ಕಡೆ, ಗಾಯಗೊಂಡಿರುವ ಕುದುರೆಗಳಿಗೆ ಒಂದು ಕಡೆ, ಬಲಿಷ್ಟ ಕುದುರೆಗಳಿಗೊಂದು ಕಡೆ ಮೇವನ್ನಾಕಿದ್ದೇನೆ ಆಗ ಎಲ್ಲಾ ಕುದುರೆಗಳಿಗೂ ಮೇವು ಸಿಗುತ್ತದೆ" ಎಂದು ಉತ್ತರಿಸುತ್ತಾನೆ. ಆಗ ಆ ಬ್ರಾಹ್ಮಣ ವಕೀಲನಿಗೆ ಮೀಸಲಾತಿಯ ಬಗ್ಗೆ ಅರ್ಥವಾಗಿ "ಮಹಾರಾಜರೇ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಮೀಸಲಾತಿಯ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತೆಂದು" ಅಲ್ಲಿಂದ ಹೊರಟುಹೋಗುತ್ತಾನೆ.

4,ನವೆಂಬರ್, 1927, ಸಂಪಾದಕೀಯ[ಬದಲಾಯಿಸಿ]

 • ಕಳೆದ ಮೂರು ಸಂಚಿಕೆಗಳಲ್ಲಿ “ಮಹರ್ ಮತ್ತು ವತನ” ಕುರಿತಂತೆ ಮೂರು ಮುಖ್ಯ ಲೇಖನಗಳನ್ನು ಪ್ರಕಟಿಸಿದ್ದೆವು. ಆ ಲೇಖನಗಳಲ್ಲಿ ಈ ‘ವತನ’ ಪದ್ಧತಿಯಿಂದ ಮಹರ ಸಮುದಾಯವು ಶೋಷಣೆಯಿಂದ ನರಳುತ್ತಿರುವುದನ್ನು ಮತ್ತು ವತನ ಪದ್ಧತಿಯಲ್ಲಿ ಸುಧಾರಣೆಯ ಅಗತ್ಯವನ್ನು ವಿವರಿಸಿದ್ದೆವು. ನಮ್ಮ ಈ ಲೇಖನಗಳಲ್ಲಿನ ಚಿಂತನೆಗಳಿಗೆ ಪೂರಕವಾಗಿ ಯಾರಾದರೂ ತಮ್ಮ ಅಭಿಪ್ರಾಯಗಳನ್ನು ಸೂಚಿಸುವುದಿದ್ದರೆ ನಮಗೆ ಬರೆದು ಕಳುಹಿಸಬೇಕೆಂದು ಸಹ ಕೇಳಿದ್ದೆವು.
 • ನಾವು ಪ್ರತಿಕ್ರಿಯೆಗಾಗಿ,ಅಭಿಪ್ರಾಯಕ್ಕಾಗಿ ಕಾಯುತ್ತಿದ್ದರೆ ಹಠಾತ್ತಾಗಿ ಮುಂಬೈನಲ್ಲಿ ನಡೆದ ಎರಡು ಸಭೆಗಳಲ್ಲಿ ನಮ್ಮ ಬೇಡಿಕೆಗಳು ಮತ್ತು ಸಲಹೆಗಳನ್ನು ವಿರೋಧಿಸಿ ಈ ಸುಧಾರಣೆಯ ವಿರುದ್ಧ ಗೊತ್ತುವಳಿಯನ್ನು ಅನುಮೋದಿಸಲಾಯಿತು. ನಮಗೆ ಸಲಹೆಗಳನ್ನು ನೀಡುವುದರ ಬದಲಾಗಿ ನಮ್ಮ ಸುಧಾರಣೆಯ ವಿರುಧ್ದ ದನಿ ಎತ್ತಿದ್ದು ನಮಲ್ಲಿ ಆಶ್ಚರ್ಯ ಮೂಡಿಸಿದೆ. ನಂತರ ಇದನ್ನು ಕೂಲಂಕುಷವಾಗಿ ವಿಚಾರಿಸಿದಾಗ ಈ ಸಭೆಯನ್ನು ನಮ್ಮ ವಿರೋಧಿಗಳು ಆಯೋಜಿಸಿದ್ದರು ಎಂದು ಗೊತ್ತಾಯಿತು.
 • ಮಹರ್ ಸಮುದಾಯದ ವತನ್ ಅನ್ನು ನಿರ್ಮೂಲನೆ ಮಾಡಿ” ಎನ್ನುವ ನಮ್ಮ ಹಕ್ಕೊತ್ತಾಯವನ್ನು ನಮ್ಮ ವಿರೋಧಿಗಳು ತಿರುಚಿ ಮಹರ್ ಸಮುದಾಯವನ್ನು ವತನ ಪದ್ಧತಿಯಿಂದ ಬಲವಂತವಾಗಿ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ವಿವರಣೆ ಕೊಡುತ್ತಿದ್ದೇವೆ. ನಮ್ಮ ಅಭಿಪ್ರಾಯದಲ್ಲಿ ‘ಮಹರ್ ವತನ’ ಎನ್ನುವುದು ತುಂಬಾ ಅಪಾಯಕಾರಿ ಮತ್ತು ಆದಷ್ಟು ಬೇಗ ರದ್ದಾಗುವುದು ಒಳಿತು.
 • ಅವರ ವತನ ಪದ್ಧತಿಯಿಂದ ಮಹರ್ ಸಮುದಾಯವನ್ನು ಬೇರ್ಪಡಿಸಲು ನಾವು ಒತ್ತಡವನ್ನು ಹೇರಬೇಕಾಗಿ ಬಂದರೂ ಸಹ ಅದು ತಪ್ಪಲ್ಲ ಎಂದು ನಮ್ಮ ಅಭಿಪ್ರಾಯ. ಮಹರ್ ಸಮುದಾಯದ ಗುಲಾಮಗಿರಿಯನ್ನು ಅವರಿಗೆ ವಿವರಿಸಲು ಅವರಿಗೆ ಸೂಕ್ತ ಮತ್ತು ಕಡ್ಡಾಯ ಶಿಕ್ಷಣವನ್ನು ಕೊಡಬೇಕೆಂದು ನಾವು ಒತ್ತಾಯಿಸುತ್ತೇವೆ. ಶಾಹು ಮಹಾರಾಜ ಅವರು ಮಹರ್ ಸಮುದಾಯದ ಶತೃಗಳಲ್ಲ.
 • ಅಸ್ಪಶ್ಯರ ಹಕ್ಕುಗಳ ಪರವಾಗಿ ಬದುಕಿದ ಶಾಹು ಮಹಾರಾಜ್ ‘ಮಹರ್ ಸಮುದಾಯವು ಈ ವತನ ಪದ್ಧತಿಯ ಕಾರಣದಿಂದಾಗಿಯೇ ಇಂದು ಅತ್ಯಂತ ದುಸ್ಥಿಯಲ್ಲಿದ್ದಾರೆ ಎಂದು ನಂಬಿದ್ದಾರೆ’. ಹೀಗಾಗಿ ತಮ್ಮ ಅಧಿಕಾರವನ್ನು ಬಳಸಿಕೊಂಡು ಶಾಹು ಮಹಾರಾಜ್ ಅವರು ಕೊಲ್ಹಾಪುರ ಪ್ರಾಂತದಲ್ಲಿ ಮಹರ್ ಸಮುದಾಯದ ವತನ್ ಅನ್ನು ರದ್ದು ಪಡಿಸಿದ್ದಾರೆ. ಇದನ್ನು ವಿರೋಧಿಸಲು ಮಹರ್ ಸಮುದಾಯಕ್ಕೆ ಕಾರಣಗಳೇ ಇರಲಿಲ್ಲ.
 • ಈ ಕಾನೂನು ತಮ್ಮ ಒಳಿತಿಗಾಗಿ ಇದೆ ಎಂದು ಮಹರ್ ಸಮುದಾಯಕ್ಕೆ ಬಲುಬೇಗನೆ ಅರಿವಾಗತೊಡಗಿದೆ. ಅವರು ಸ್ವಯಂಪ್ರೇರಿತರಾಗಿ ಸರ್ಕಾರಕ್ಕೆ ಇದರಿಂದ ತಮ್ಮನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿಕೊಳ್ಳತೊಡಗಿದ್ದಾರೆ. ಕೊಲ್ಹಾಪುರ ಪ್ರಾಂತದ ಮಹರ್ ಸಮುದಾಯ ಇಂದು ಹೊಸ ಗಾಳಿಯನ್ನು ಉಸಿರಾಡುತ್ತಿದ್ದಾರೆ. (ಬಾಂಬೆ ವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರ್ ಮಂಡಿಸಿದ ‘ಮಹರ್ ವತನ ಮಸೂದೆ’ ಕುರಿತಾದ ಪ್ರತಿಕಾ ವರದಿ: ಹಂಟರ್ 11.11.1927)

ಬ್ರಾಹ್ಮಣೇತರ ಚಳುವಳಿಗಳ ಸಂಪರ್ಕ[ಬದಲಾಯಿಸಿ]

 • ತಮಿಳುನಾಡಿನ ಬ್ರಾಹ್ಮಣೇತರ ಚಳುವಳಿಗಳ ಬಗ್ಗೆ ಅಪಾರ ಒಲವಿದ್ದ ಶಾಹು ಮಹಾರಾಜರು ಸತ್ಯಶೋಧಕ ಸಮಾಜದ ಸಭೆಗಳಿಗೆ ಜಸ್ಟೀಸ್ ಪಾರ್ಟಿಯ ನೇತಾರರಾಗಿದ್ದ ಡಾ.ಟಿ.ಎಂ.ನಾಯರ್, ಸರ್.ಪಿ.ಟಿ.ಚೆಟ್ಟಿಯಾರ್, ರಾಮಸ್ವಾಮಿ ಮೊದಲಿಯಾರ್ ಮುಂತಾದವರನ್ನು ಆಹ್ವಾನಿಸುತ್ತಿದ್ದರು.
 • ಎರಡು ಚಳುವಳಿಗಳು ಒಂದೇ ದೃಷ್ಟೀಕೋನಗಳನ್ನು ಇಟ್ಟುಕೊಂಡಿದ್ದರಿಂದ ಸ್ವತಃ ಶಾಹು ಮಹಾರಾಜರು ಜಸ್ಟೀಸ್ ಪಾರ್ಟಿಗೆ ಅನೇಕ ಸಲ ಕಾಗದ ಪತ್ರಗಳನ್ನು ಬರೆದು ವಿಚಾರ ವಿನಿಮಯ ನಡೆಸುತ್ತಿದ್ದರು. ೧೯೨೦ ಏಪ್ರಿಲ್ ೧೫ ರಂದು ನಾಸಿಕ್‍ನಲ್ಲಿ ನಡೆದ ಸತ್ಯಶೋಧಕ ಸಮಾಜದದ ಅಧಿವೇಶನದಲ್ಲಿ ಮದ್ರಾಸಿನ ಪನಗಲ್ ಮಹಾರಾಜರು ಭಾಗವಹಿಸಿದ್ದರು.
 • ೧೯೧೯-೨೦ರಲ್ಲಿ ನಡೆದ ದಸರಾ ಉತ್ಸವದ ಸಂದರ್ಭದಲ್ಲಿ ಅಖಿಲ ಭಾರತ ಕಾಸ್ಟ್ ಕಾನ್ಫರೆನ್ಸ್ ನಡೆದಿತ್ತು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಶಾಹು ಮಹಾರಾಜರಿಗೆ ಆಮಂತ್ರಣ ನೀಡಿ, ಈ ಅಧಿವೇಶನದಲ್ಲಿ ಪಾಲ್ಗೊಳ್ಳ ಬೇಕೆಂದು ಕೋರಿದರು. ಆದರೆ ಶಾಹು ಮಹಾರಾಜರು ಅದರಲ್ಲಿ ತಾವು ಭಾಗವಹಿಸದ ಕಾರಣದಿಂದ ಶ್ರೀ ವಿ.ಆರ್.ಶಿಂದೆ ಎಂಬ ಸತ್ಯಶೋಧಕ ಸಮಾಜದ ಮುಖಂಡರನ್ನು ಮೈಸೂರಿಗೆ ಕಳುಹಿಸಿದ್ದರು.

ಗೌರವ/ಪುರಸ್ಕಾರ[ಬದಲಾಯಿಸಿ]

ಶಾಹು ಮಹಾರಾಜರ ಶಿಕ್ಷಣ ಸೇವೆಯನ್ನು ಗಮನಿಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ೧೯೦೨ರ ಜೂನ್ ೧೦ರಂದು ಇವರಿಗೆ ಎಲ್.ಎಲ್.ಡಿ ಪದವಿ ನೀಡಿ ಗೌರವಿಸಿದೆ.

ನಿಧನ[ಬದಲಾಯಿಸಿ]

ಹಿಂದುಳಿದವರಿಗೆ, ದಮನಿತರಿಗೆ ಆಶಾಕಿರಣವಾಗಿದ್ದು, ಸಾಮಾಜಿಕ ಕ್ರಾಂತಿಯಲ್ಲಿ ತಮ್ಮದೇ ಆದ ಛಾಪನ್ನೊತ್ತಿ, ಸಮಾಜದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದ ಶಾಹು ಮಹಾರಾಜರು, ಕೆಲವು ಕಾಲ ಸಕ್ಕರೆ ಕಾಯಿಲೆಯಲ್ಲಿ ಬಳಲಿ, ಮೇ ೬, ೧೯೨೨ರಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

 1. http://www.prajavani.net/news/article/2013/07/28/185199.html[ಶಾಶ್ವತವಾಗಿ ಮಡಿದ ಕೊಂಡಿ]
 2. ಪುಣೆ-ಶಾಹು-ಮಹಾರಾಜ್‌-ಪ್ರತಿಮೆ-ಅನಾವರಣ[ಶಾಶ್ವತವಾಗಿ ಮಡಿದ ಕೊಂಡಿ]
 3. http://www.udayavani.com/kannada/news/mysore-news/225281/others-were-motivated-by-the-chhatrapati-shahu-maharaj
 4. "ಅಂಬೇಡ್ಕರ್ ಚಿಂತನೆ-9". Archived from the original on 2016-09-02. Retrieved 2017-08-17.
 5. ಅಸ್ಪಶ್ಯತೆ, ಮೀಸಲಾತಿ ಮತ್ತು ತಲೆಮಾರಿನ ಪ್ರಶ್ನೆ