ಶೇಷಾದ್ರಿ ರಾಮಾನುಜನ್ ಚಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೇಷಾದ್ರಿ ರಾಮಾನುಜನ್ ಚಾರಿ
ವೈಯಕ್ತಿಕ ಮಾಹಿತಿ
ಪೌರತ್ವ ಭಾರತೀಯ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ರಶ್ಮಿ ಶೇಷಾದ್ರಿ ಚಾರಿ
ಮಕ್ಕಳು ಮಯಾಂಕ್ ಶೇಷಾದ್ರಿ ಚಾರಿ
ವಾಸಸ್ಥಾನ ನವ ದೆಹಲಿ, ಭಾರತ
ಅಭ್ಯಸಿಸಿದ ವಿದ್ಯಾಪೀಠ ಸೌತ್ ಇಂಡಿಯನ್ ಎಜುಕೇಶನ್ ಸೊಸೈಟಿ ಹೈ ಸ್ಕೂಲ್


ಚೆನೈ ಕಾಲೇಜು ಇಕಾಮರ್ಸ್ ಅಂಡ್ ಎಕನಾಮಿಕ್ಸ್
ಮುಂಬೈ ವಿಶ್ವವಿದ್ಯಾಲಯ

ವೃತ್ತಿ ಪತ್ರಕರ್ತ-ಬರಹಗಾರ

ರಾಜಕೀಯ-ಸಮಾಜ ಸೇವಕ ವಿದೇಶಾಂಗ ವ್ಯವಹಾರಗಳ ವಿಶ್ಲೇಷಕ

ಗೋವಾದ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶೇಷಾದ್ರಿ ಚಾರಿ

ಶೇಷಾದ್ರಿ ರಾಮಾನುಜನ್ ಚಾರಿ ಒಬ್ಬ ಭಾರತೀಯ ರಾಜಕಾರಣಿ, ಪತ್ರಕರ್ತ, ಲೇಖಕ ಮತ್ತು ವಿದೇಶಾಂಗ ನೀತಿ ವಿಶ್ಲೇಷಕ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಅರ್ ಎಸ್ ಎಸ್ )ಸ್ವಯಂಸೇವಕರು[೧]. ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ [೨]. ಹಿಂದೆ ಬಿಜೆಪಿ ಪ್ರಧಾನ ಕಛೇರಿಯಲ್ಲಿ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ[೩]. ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯು.ಎನ್.ಡಿ.ಪಿ) ಸಹಯೋಗದಲ್ಲಿ ಸೌತ್ ಸುಡಾನ್ನಿನ ಜುಬಾದಲ್ಲಿ ಆಡಳಿತದ ಸಲಹೆಗಾರರಾಗಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ತಂಜಾವೂರಿನ ತಮಿಳು ಬ್ರಾಹ್ಮಣರಾದ ರಾಮಾನುಜನ್ ಚಾರಿ ಮತ್ತು ಕಲ್ಯಾಣಿ ದಂಪತಿಗಳ ಐದು ಮಕ್ಕಳಲ್ಲಿ ಒಬ್ಬರಾಗಿ ಏಪ್ರಿಲ್ ೨, ೧೯೫೩ ರಂದು ಮುಂಬೈನ ಮಾಟುಂಗಾದಲ್ಲಿ (ಆಗಿನ ಬಾಂಬೆ) ಜನಿಸಿದರು.

ತಂದೆ ಶ್ರೀ ರಾಮ್ ಮಿಲ್ಸ್ ಮತ್ತು ಹಿಂದೂಸ್ತಾನ್ ಪಾಲಿಮರ್ಸ್‌ಗಾಗಿ ಕೆಲಸ ಮಾಡುತ್ತಿದ್ದಾಗ, ಇವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಬಾಲ್ಯದಲ್ಲಿ ಇವರ ತಾಯಿ ಹೆಚ್ಚಿನ ಪ್ರಭಾವ ಬೀರಿದರು. ಯುವಕ ಶೇಷಾದ್ರಿ ನಾಲ್ಕನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್ ಶಾಖೆಗೆ ಹೋಗಲು ಪ್ರಾರಂಭಿಸಿದರು, ಹದಿಹರೆಯದಲ್ಲಿ ಸಕ್ರಿಯಕಾರ್ಯಕರ್ತರಾದರು. ಆರ್‌ಎಸ್‌ಎಸ್ ಶಾಖೆಯ ಮುಖ್ಯ ಶಿಕ್ಷಕರಾಗಿದ್ದ ಇವರ ಶಾಖೆಗೆ ಕೇರಳದ ದೈನಂದಿನ ವೇತನದಾರರು ಹೆಚ್ಚಾಗಿ ಬರುತಿದ್ದರು. ಇವರು ಸಿಪಿಎಂ ನಾಯಕಿ ಅಹಲ್ಯಾ ರಂಗನೇಕರ್ ನೇತೃತ್ವದ ಕಾರ್ಮಿಕ ಸಂಘದಲ್ಲಿ ಸಕ್ರಿಯರಾಗಿದ್ದರು. ಈ ಒಡನಾಟವು ಇವರನ್ನು ಶ್ರೀ ರಂಗೇಕರ್ ಮತ್ತು ಕಾಮ್ರೇಡ್ ಬಿಟಿ ರಣದಿವ್ ಅವರ ಸಾಮಿಪ್ಯಕ್ಕೆ ತಂದಿತು, ಅವರೊಂದಿಗೆ ಅವರು ರಾಜಕೀಯ ಮತ್ತು ಸೈದ್ಧಾಂತಿಕ ಚರ್ಚೆಗಳಲ್ಲಿ ತೊಡಗಿದ್ದರು. ವಿಕೆ ಕೃಷ್ಣ ಮೆನನ್ ಇವರ ನಿಕಟವರ್ತಿ ಹಾಗು ಪಂ. ಜವಾಹರಲಾಲ್ ನೆಹರು ರವರು ಇವರ ಪತ್ರಿಕೋದ್ಯಮದ ಆಕಾಂಕ್ಷೆಗಳನ್ನು ಪೂಷಿಸಿದರು .

ಮುಂಬೈ ವಿಶ್ವವಿದ್ಯಾನಿಲಯದ ಚೈನಾಯ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್‌ನಲ್ಲಿ ಚರ್ಚಾಕಾರರಾಗಿ ಹಾಗು ವಿದ್ಯಾರ್ಥಿ ಕಾರ್ಯಕರ್ತರಾಗಿದ್ದರು , ತುರ್ತುಪರಿಸ್ಥಿತಿ ಯಲ್ಲಿ ಅರ್ ಎಸ್ ಎಸ್ ನಡೆಸುತಿದ್ದ ಭೂಗತ ಆಂದೋಲನದ "ಲೋಕಸಂಘರ್ಷ್ " ಸಮಿತಿಯ ಭಾಗವಾಗಿದ್ದರು. ಸತ್ಯಾಗ್ರಹವನ್ನು ಮಾಡಿದರು ಮತ್ತು ಆರ್ಥರ್ ರೋಡ್ ಜೈಲಿನಲ್ಲಿ ಬಂಧಿಸಲ್ಪಟ್ಟರು.

ತಮ್ಮ ಬಿ.ಕಾಮ್, ಎಲ್ ಎಲ್ ಬಿ ಮತ್ತು ಎಮ್. ಎ (ಇತಿಹಾಸ) ಪದವಿಗಳನ್ನು ಬಾಂಬೆ ವಿಶ್ವವಿದ್ಯಾಲಯದಿಂದ ಪಡೆದರು[೪]: 63 . "ಇಂಡೋ-ಪೆಸಿಫಿಕ್ ಪ್ರದೇಶದ ಪ್ರಾದೇಶಿಕ ಡೈನಾಮಿಕ್ಸ್ ಮತ್ತು ಭಾರತದ ವಿಸ್ತೃತ ನೆರೆಹೊರೆಯಲ್ಲಿ ಚೀನಾದ ಪ್ರಭಾವದ ಪರಿಣಾಮಗಳು" ಕುರಿತ ಪ್ರಬಂಧಕ್ಕಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಅವರಿಗೆ ಪಿಎಚ್‌ಡಿ ಯನ್ನು ನೀಡಲಾಯಿತು[೫].

ರಾಜಕೀಯ ವೃತ್ತಿಜೀವನ[ಬದಲಾಯಿಸಿ]

ತುರ್ತು ಪರಿಸ್ಥಿತಿಯ ನಂತರ, ಅವರು ಮೊದಲು ಮುಂಬೈ ಮಹಾನಗರ ಮತ್ತು ನಂತರ ಥಾಣೆಯಲ್ಲಿ ಪ್ರಚಾರಕರಾದರು. ೧೯೮೮ ರಲ್ಲಿ ಇವರನ್ನು ಬಿಜೆಪಿಗೆ ವರ್ಗಾಯಿಸಲಾಯಿತು, ಅಲ್ಲಿ ಅವರು ಬಿಜೆಪಿ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿಯಾದರು.

ಆರ್‌ಎಸ್‌ಎಸ್‌ನ ಸಾಪ್ತಾಹಿಕ ಜರ್ನಲ್ ಆರ್ಗನೈಸರ್‌ ವಾರ ಪತ್ರಿಕೆಯ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸಿದರು. ಇವರು ೧೯೯೨ ರಿಂದ ೨೦೦೪ ರವರೆಗೆ ತಮ್ಮ ಅಧಿಕಾರಾವಧಿಯಲ್ಲಿ ವ್ಯಾಪಕ ಲೇಖನವನ್ನು ಬರೆದಿದ್ದಾರೆ [೪] : 63 [೬] : 76 [೭]

ಇವರು ಪ್ರಸ್ತುತ ಸರ್ಕಾರದ ಕೌನ್ಸಿಲ್ ಸದಸ್ಯರಾಗಿ, ಚೀನಾ ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ, ಎಸ್ಎಕ್ಯುಟಿವ್ ಡೈರೆಕ್ಟರ್ ಅಟ್ ಫೋರಮ್ ಫಾರ್ ಸ್ಟ್ರಾಟೆಜಿಕ್ & ಸೆಕ್ಯೂರಿಟಿ ಸ್ಟಡೀಸ್ ಆಗಿ ಕರ್ಯನಿರ್ವಹಿಸುತ್ತಿದ್ದಾರೆ[೮][೯]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "No RSS role in Jaswant's expulsion: Seshadri Chari". Zee News. 19 August 2009. Retrieved 5 May 2018.
  2. "Guest Lecturer - Shri. Seshadri Chari". MIT School of Government. Archived from the original on 5 ಮೇ 2018. Retrieved 5 May 2018.
  3. "Tamils issue an internal matter of Sri Lanka: Chari". Zee News. 30 July 2014. Retrieved 5 May 2018.
  4. ೪.೦ ೪.೧ "Studies in International Strategic Issues". 9. 2006. {{cite journal}}: Cite journal requires |journal= (help)
  5. "Title of Thesis : Regional Dynamics of the Indo Pacific Region and Implications of Chinas Influence in Indias Extended Neighbourhood". Shodhganga. Retrieved 7 December 2021.
  6. Saltzman, Devyani (2015). Shooting Water: A Mother-daughter Journey and the Making of a Film. Penguin Books India. ISBN 9780144001026.
  7. "Is data mining to better poll prospects legal?". The Free Press Journal. 25 March 2018. Archived from the original on 5 ಮೇ 2018. Retrieved 5 May 2018.
  8. https://twitter.com/seshadrichari
  9. https://www.linkedin.com/in/seshadri-chari-a74a5150/?originalSubdomain=in