ವಿಷಯಕ್ಕೆ ಹೋಗು

ಶಾಂತತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇಮ್ಸ್ ಗಿಲ್ರೇನವರ ಎ ಕಾಮ್,
ಧ್ಯಾನವು ಶಾಂತ ಸ್ಥಿತಿಯಲ್ಲಿರಲು ಸಹಾಯ ಮಾಡತ್ತದೆ.

ಪ್ರತಿಭಟನೆ, ಉತ್ಸಾಹ ಅಥವಾ ಅಡಚಣೆಯಿಂದ ಮುಕ್ತವಾಗಿ ಶಾಂತವಾಗಿರುವ ಮನಸ್ಸಿನ ಮಾನಸಿಕ ಸ್ಥಿತಿಯನ್ನು ಶಾಂತತೆ ಎನ್ನುತ್ತಾರೆ.[] ಇದು ಪ್ರಶಾಂತತೆ, ನೆಮ್ಮದಿ ಅಥವಾ ಶಾಂತಿಯ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ.[]ಸಾಮಾನ್ಯ ವ್ಯಕ್ತಿಗೆ ವಿಶ್ರಾಂತಿಯಲ್ಲಿರುವಾಗ ಶಾಂತತೆಯು ಅನುಭವವಾಗುತ್ತದೆ, ಹಾಗೂ ಹೆಚ್ಚು ಎಚ್ಚರಿಕೆ ಮತ್ತು ಜಾಗೃತ ಸ್ಥಿತಿಗಳಲ್ಲಿಯೂ ಇದರ ಅನುಭವವಾಗುತ್ತದೆ .[] ಅಧ್ಯಯನದಂತಹ ಬಾಹ್ಯ ವಿಷಯದ ಮೇಲೆ ಅಥವಾ ಉಸಿರಾಟದಂತಹ ಆಂತರಿಕ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಾಗ ಮನಸ್ಸು ತುಂಬಾ ಶಾಂತವಾಗಿರುತ್ತದೆ ಎಂದು ಕೆಲವರು ಕಂಡುಕೊಳ್ಳುತ್ತಾರೆ.

ಬಾಲ್ಯದ ಮೂಲಗಳು

[ಬದಲಾಯಿಸಿ]

ಶೈಶವಾವಸ್ಥೆಯಲ್ಲಿ ಪೋಷಕರ ಹಿತಚಿಂತನೆಗಳು (ಹಿಡಿದುಕೊಳ್ಳುವಿಕೆ, ಇತ್ಯಾದಿ) ಸ್ವಯಂ-ಶಾಂತ ಸಾಮರ್ಥ್ಯದ ಅಡಿಪಾಯವನ್ನು ಹಾಕುತ್ತದೆ.[] ನಂತರ ಪರಿವರ್ತನೆಯ ವಸ್ತುಗಳು ಶಾಂತತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ,[]ಸಾಕುಪ್ರಾಣಿಗಳು ಸ್ವಯಂ-ವಸ್ತುಗಳಾಗಿ ಸಹ ಹಿತವನ್ನು ಮತ್ತು ಶಾಂತತೆಯನ್ನು ಉತ್ತೇಜಿಸುತ್ತವೆ.[]

ಶಾಂತತೆಯನ್ನು ಬೆಳೆಸುವುದು

[ಬದಲಾಯಿಸಿ]

ಶಾಂತತೆಯು ಒಂದು ಗುಣವಾಗಿದ್ದು ಅದನ್ನು ಅಭ್ಯಾಸದೊಂದಿಗೆ ಬೆಳೆಸಬಹುದು ಮತ್ತು ಹೆಚ್ಚಿಸಬಹುದು, []ಅಥವಾ ಮಾನಸಿಕ ಚಿಕಿತ್ಸೆಯ ಮೂಲಕ ಅಭಿವೃದ್ಧಿಪಡಿಸಬಹುದು.[]ವಿಭಿನ್ನ ಪ್ರಚೋದನೆಗಳಿಂದ ಮತ್ತು ಸಂಭವನೀಯ ಗೊಂದಲಗಳಿಂದ, ವಿಶೇಷವಾಗಿ ಭಾವನಾತ್ಮಕವಾದವುಗಳಿಂದ ಶಾಂತವಾಗಿರಲು ಒಬ್ಬರ ಮನಸ್ಸಿಗೆ ಸಾಮಾನ್ಯವಾಗಿ ತರಬೇತಿಯ ಅಗತ್ಯವಿರುತ್ತದೆ. ಶಾಂತ ಮನಸ್ಸನ್ನು ಬೆಳೆಸಲು ಪ್ರಯತ್ನಿಸುವವರಿಗೆ ನಕಾರಾತ್ಮಕ ಭಾವನೆಗಳು ದೊಡ್ಡ ಸವಾಲಾಗಿರುತ್ತದೆ. ಪ್ರಾರ್ಥನೆ, ಯೋಗ, ತೈ ಚಿ, ಕದನ ಕಲೆಗಳು, ರಂಗಭೂಮಿ ಕಲೆಗಳು, ತೋಟಗಾರಿಕೆ,,[] ವಿಶ್ರಾಂತಿ ತರಬೇತಿ, ಉಸಿರಾಟದ ತರಬೇತಿ ಮತ್ತು ಧ್ಯಾನ ಶಾಂತತೆಯನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಕೆಲವು ವಿಭಾಗಗಳು.ಜಾನ್ ಕಬತ್-ಜಿನ್ ಹೇಳುವಂತೆ "ನಿಮ್ಮ ಮನಸ್ಸು ಶಾಂತ ಮತ್ತು ಸ್ಥಿರವಾಗಿರುವ ಸಾಮರ್ಥ್ಯದಷ್ಟು ಮಾತ್ರ ನಿಮ್ಮ ಮನಸ್ಸು ದೃಢವಾಗಿರುತ್ತದೆ. ಶಾಂತತೆಯಿಲ್ಲದೆ ಮನಸ್ಸು, ಸಾವಧಾನತೆಯ ಕನ್ನಡಿಯು ಉದ್ರೇಕಗೊಂಡಂತೆ ಮತ್ತು ಅಸ್ತವ್ಯಸ್ತವಾಗಿರುವ ಮೇಲ್ಮೈಯನ್ನು ಹೊಂದಿರುವಂತೆ ಇರುತ್ತದೆ ಮತ್ತು ಯಾವುದೇ ನಿಖರತೆಯೊಂದಿಗೆ ವಿಷಯಗಳನ್ನು ಪ್ರತಿಬಿಂಬಿಸಲು ಸಾಧ್ಯವಾಗುವುದಿಲ್ಲ."[೧೦]

ಶಾಂತವಾಗಿರಲು ಒಂದು ಮಾರ್ಗವಾಗಿ ಆಯ್ಕೆಗಳಿಗೆ/ನಿರ್ಧಾರಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಸಾರಾ ವಿಲ್ಸನ್ ಶಿಫಾರಸು ಮಾಡುತ್ತಾರೆ.[೧೧]


ಮನಃಶಾಂತಿ

[ಬದಲಾಯಿಸಿ]

ಶಾಂತತೆಗೆ ಸಂಬಂಧಿಸಿದ ಇನ್ನೊಂದು ಪದವೆಂದರೆ "ಮನಃಶಾಂತಿ".[] ಶಾಂತಿ ಅಥವಾ ಶಾಂತವಾಗಿರುವ ಮನಸ್ಸು ದೇಹವು ಕಡಿಮೆ ಒತ್ತಡದ ಹಾರ್ಮೋನ್‌ಗಳನ್ನು ಉತ್ಪಾದಿಸಲು ಕಾರಣವಾಗುತ್ತದೆ; ಇದು ವ್ಯಕ್ತಿಗೆ ಸ್ಥಿರವಾದ ಭಾವನಾತ್ಮಕ ಸ್ಥಿತಿಯನ್ನು ನೀಡುತ್ತದೆ ಮತ್ತು ಮದುವೆ ಸೇರಿದಂತೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ.[೧೨] ವಿಶೇಷವಾಗಿ ಒತ್ತಡದ ಘಟನೆಗಳ ಸಂದರ್ಭದಲ್ಲಿ ಶಾಂತವಾಗಿರುವುದಕ್ಕೆ ಪ್ರಯೋಜನಕಾರಿಯಾಗುತ್ತದೆ.[೧೩]

ವ್ಯುತ್ಪತ್ತಿ

[ಬದಲಾಯಿಸಿ]

ಈ ಪದವು ಮಧ್ಯ ಇಂಗ್ಲಿಷ್ ದಿಂದ ಶಾಂತ(ಕಾಮ್), ಹಳೆಯ ಫ್ರೆಂಚ್‌ನಿಂದ, ಹಳೆಯ ಇಟಾಲಿಯನ್ ದಿಂದ ಕ್ಯಾಲ್ಮೊ, ಲೇಟ್ ಲ್ಯಾಟಿನ್ ದಿಂದ ಕೌಮಾ, ಅಂದರೆ "ದಿನದ ಶಾಖ", "ದಿನದ ಶಾಖದಲ್ಲಿ ವಿಶ್ರಾಂತಿ ಸ್ಥಳ" ಎಂದರ್ಥ, ಗ್ರೀಕ್ ದಿಂದ ಕೌಮಾ, ಅಂದರೆ ಸುಡುವ ಶಾಖ, ಕೈಯಿನ್‌ ನ ಸುಡಲು ಅರ್ಥದಿಂದ ಬಂದಿದೆ.[]

ಸಾಂಸ್ಕೃತಿಕ ಉದಾಹರಣೆಗಳು

[ಬದಲಾಯಿಸಿ]
  • ಗಿಬ್ಬನ್ ಬೋಥಿಯಸ್‌ನನ್ನು ಶ್ಲಾಘಿಸುತ್ತಾ: "ಋಷಿಯೊಬ್ಬರು ಒಂದೇ ಕೃತಿಯಲ್ಲಿ ತತ್ವಶಾಸ್ತ್ರ, ಕಾವ್ಯ ಮತ್ತು ವಾಕ್ಚಾತುರ್ಯದ ವಿವಿಧ ಸಂಪತ್ತುಗಳನ್ನು ಕಲಾತ್ಮಕವಾಗಿ ಸಂಯೋಜಿಸಿದವರೂ, ಅವರು ಹುಡುಕುತ್ತಿರುವ ನಿರ್ಭೀತ ಶಾಂತತೆಯನ್ನು ಈಗಾಗಲೇ ಹೊಂದಿರಬೇಕು" ಎಂದರು.[೧೪]
  • ರಿಯರ್ ಅಡ್ಮಿರಲ್ ಸ್ಪ್ರೂಯನ್ಸ್, ಮಿಡ್‌ವೇ ಕದನದಲ್ಲಿ ಕ್ಯಾರಿಯರ್ ಕಮಾಂಡರ್‌ಗೆ "ಎಲೆಕ್ಟ್ರಿಕ್ ಬ್ರೇನ್" ಎಂದು ಅಡ್ಡಹೆಸರು ನೀಡಿದರು ಏಕೆಂದರೆ ಅವರು ಕಠಿಣವಾದ ಸಂದರ್ಭದಲ್ಲಿಯೂ ಶಾಂತತೆಯಿಂದಿದ್ದರು.[೧೫]
  • ಲಾರ್ಡ್ ಡೇವಿಡ್ ಸೆಸಿಲ್ ಅವರು “ ಚಂಡಮಾರುತದ ತತ್ವ ಮತ್ತು ಸೌಮ್ಯ, ಕರುಣಾಮಯಿ, ನಿಷ್ಕ್ರಿಯ, ಮತ್ತು ಹತೋಟಿಯ ತತ್ವಗಳ ನಡುವಿನ ವ್ಯತ್ಯಾಸದ ಆಧಾರದ ಮೇಲೆ ವೂದರಿಂಗ್ ಹೈಟ್ಸ್ ನ್ನು ಕಂಡರು.[೧೬]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "calm". www.merriam-webster.com. 30 July 2023.
  2. ೨.೦ ೨.೧ "calmness". The Free Dictionary. Retrieved 2016-04-01.
  3. Ben-Ze’er, Aaron (2001). The Subtlety of Emotions. p. 57.
  4. Schore, Allan N. (1994). Affect Regulation and the Origin of Self. Hillsdale. p. 226.
  5. Winnicott, D.W. (1973). The Child, the Family, and the inside World. Penguin. pp. 168–69.
  6. Blazina, Christopher; Boyraz, Guler; Shen-Miller, David, eds. (2011). The Psychology of the Human-Animal Bond. Springer. p. 154.
  7. "The Psychology of Cool, Calm, & Collected". December 3, 2008. Archived from the original on May 13, 2011. Retrieved April 23, 2009.
  8. "The Psychology of Cool, Calm, & Collected". December 3, 2008. Archived from the original on May 13, 2011. Retrieved April 23, 2009.
  9. Thompson, Richard (2018). "past president". Clinical Medicine. 18 (3). Royal College of Physicians, London: 201–205. doi:10.7861/clinmedicine.18-3-201. PMC 6334070. PMID 29858428.
  10. "Calmness Quotes". www.goodreads.com.
  11. Wilson, Sarah (2018). First, We Make the Beast Beautiful: A New Journey Through Anxiety. London: Dey Street Books. pp. 210–11.
  12. ABC News. "Study: Bad Hormones Lead to Bad Marriages". ABC News. Retrieved 2016-04-01.
  13. "Controlling Anger — Before It Controls You". APA Psychology Topics. 3 March 2022. Retrieved 2016-04-01.
  14. Gibbon, Edward (2005). Abridged Decline and Fall. Penguin. p. 444.
  15. Overy, R. (2006). Why the Allies Won. London. p. 46.{{cite book}}: CS1 maint: location missing publisher (link)
  16. Quoted in Wallace, R. (2008). Emily Bronte and Beethoven. p. 49.


"https://kn.wikipedia.org/w/index.php?title=ಶಾಂತತೆ&oldid=1261108" ಇಂದ ಪಡೆಯಲ್ಪಟ್ಟಿದೆ