ಶಾಂತತೆ
ಪ್ರತಿಭಟನೆ, ಉತ್ಸಾಹ ಅಥವಾ ಅಡಚಣೆಯಿಂದ ಮುಕ್ತವಾಗಿ ಶಾಂತವಾಗಿರುವ ಮನಸ್ಸಿನ ಮಾನಸಿಕ ಸ್ಥಿತಿಯನ್ನು ಶಾಂತತೆ ಎನ್ನುತ್ತಾರೆ.[೧] ಇದು ಪ್ರಶಾಂತತೆ, ನೆಮ್ಮದಿ ಅಥವಾ ಶಾಂತಿಯ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ.[೨]ಸಾಮಾನ್ಯ ವ್ಯಕ್ತಿಗೆ ವಿಶ್ರಾಂತಿಯಲ್ಲಿರುವಾಗ ಶಾಂತತೆಯು ಅನುಭವವಾಗುತ್ತದೆ, ಹಾಗೂ ಹೆಚ್ಚು ಎಚ್ಚರಿಕೆ ಮತ್ತು ಜಾಗೃತ ಸ್ಥಿತಿಗಳಲ್ಲಿಯೂ ಇದರ ಅನುಭವವಾಗುತ್ತದೆ .[೩] ಅಧ್ಯಯನದಂತಹ ಬಾಹ್ಯ ವಿಷಯದ ಮೇಲೆ ಅಥವಾ ಉಸಿರಾಟದಂತಹ ಆಂತರಿಕ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಾಗ ಮನಸ್ಸು ತುಂಬಾ ಶಾಂತವಾಗಿರುತ್ತದೆ ಎಂದು ಕೆಲವರು ಕಂಡುಕೊಳ್ಳುತ್ತಾರೆ.
ಬಾಲ್ಯದ ಮೂಲಗಳು
[ಬದಲಾಯಿಸಿ]ಶೈಶವಾವಸ್ಥೆಯಲ್ಲಿ ಪೋಷಕರ ಹಿತಚಿಂತನೆಗಳು (ಹಿಡಿದುಕೊಳ್ಳುವಿಕೆ, ಇತ್ಯಾದಿ) ಸ್ವಯಂ-ಶಾಂತ ಸಾಮರ್ಥ್ಯದ ಅಡಿಪಾಯವನ್ನು ಹಾಕುತ್ತದೆ.[೪] ನಂತರ ಪರಿವರ್ತನೆಯ ವಸ್ತುಗಳು ಶಾಂತತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ,[೫]ಸಾಕುಪ್ರಾಣಿಗಳು ಸ್ವಯಂ-ವಸ್ತುಗಳಾಗಿ ಸಹ ಹಿತವನ್ನು ಮತ್ತು ಶಾಂತತೆಯನ್ನು ಉತ್ತೇಜಿಸುತ್ತವೆ.[೬]
ಶಾಂತತೆಯನ್ನು ಬೆಳೆಸುವುದು
[ಬದಲಾಯಿಸಿ]ಶಾಂತತೆಯು ಒಂದು ಗುಣವಾಗಿದ್ದು ಅದನ್ನು ಅಭ್ಯಾಸದೊಂದಿಗೆ ಬೆಳೆಸಬಹುದು ಮತ್ತು ಹೆಚ್ಚಿಸಬಹುದು, [೭]ಅಥವಾ ಮಾನಸಿಕ ಚಿಕಿತ್ಸೆಯ ಮೂಲಕ ಅಭಿವೃದ್ಧಿಪಡಿಸಬಹುದು.[೮]ವಿಭಿನ್ನ ಪ್ರಚೋದನೆಗಳಿಂದ ಮತ್ತು ಸಂಭವನೀಯ ಗೊಂದಲಗಳಿಂದ, ವಿಶೇಷವಾಗಿ ಭಾವನಾತ್ಮಕವಾದವುಗಳಿಂದ ಶಾಂತವಾಗಿರಲು ಒಬ್ಬರ ಮನಸ್ಸಿಗೆ ಸಾಮಾನ್ಯವಾಗಿ ತರಬೇತಿಯ ಅಗತ್ಯವಿರುತ್ತದೆ. ಶಾಂತ ಮನಸ್ಸನ್ನು ಬೆಳೆಸಲು ಪ್ರಯತ್ನಿಸುವವರಿಗೆ ನಕಾರಾತ್ಮಕ ಭಾವನೆಗಳು ದೊಡ್ಡ ಸವಾಲಾಗಿರುತ್ತದೆ. ಪ್ರಾರ್ಥನೆ, ಯೋಗ, ತೈ ಚಿ, ಕದನ ಕಲೆಗಳು, ರಂಗಭೂಮಿ ಕಲೆಗಳು, ತೋಟಗಾರಿಕೆ,,[೯] ವಿಶ್ರಾಂತಿ ತರಬೇತಿ, ಉಸಿರಾಟದ ತರಬೇತಿ ಮತ್ತು ಧ್ಯಾನ ಶಾಂತತೆಯನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಕೆಲವು ವಿಭಾಗಗಳು.ಜಾನ್ ಕಬತ್-ಜಿನ್ ಹೇಳುವಂತೆ "ನಿಮ್ಮ ಮನಸ್ಸು ಶಾಂತ ಮತ್ತು ಸ್ಥಿರವಾಗಿರುವ ಸಾಮರ್ಥ್ಯದಷ್ಟು ಮಾತ್ರ ನಿಮ್ಮ ಮನಸ್ಸು ದೃಢವಾಗಿರುತ್ತದೆ. ಶಾಂತತೆಯಿಲ್ಲದೆ ಮನಸ್ಸು, ಸಾವಧಾನತೆಯ ಕನ್ನಡಿಯು ಉದ್ರೇಕಗೊಂಡಂತೆ ಮತ್ತು ಅಸ್ತವ್ಯಸ್ತವಾಗಿರುವ ಮೇಲ್ಮೈಯನ್ನು ಹೊಂದಿರುವಂತೆ ಇರುತ್ತದೆ ಮತ್ತು ಯಾವುದೇ ನಿಖರತೆಯೊಂದಿಗೆ ವಿಷಯಗಳನ್ನು ಪ್ರತಿಬಿಂಬಿಸಲು ಸಾಧ್ಯವಾಗುವುದಿಲ್ಲ."[೧೦]
ಶಾಂತವಾಗಿರಲು ಒಂದು ಮಾರ್ಗವಾಗಿ ಆಯ್ಕೆಗಳಿಗೆ/ನಿರ್ಧಾರಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಸಾರಾ ವಿಲ್ಸನ್ ಶಿಫಾರಸು ಮಾಡುತ್ತಾರೆ.[೧೧]
ಮನಃಶಾಂತಿ
[ಬದಲಾಯಿಸಿ]ಶಾಂತತೆಗೆ ಸಂಬಂಧಿಸಿದ ಇನ್ನೊಂದು ಪದವೆಂದರೆ "ಮನಃಶಾಂತಿ".[೧] ಶಾಂತಿ ಅಥವಾ ಶಾಂತವಾಗಿರುವ ಮನಸ್ಸು ದೇಹವು ಕಡಿಮೆ ಒತ್ತಡದ ಹಾರ್ಮೋನ್ಗಳನ್ನು ಉತ್ಪಾದಿಸಲು ಕಾರಣವಾಗುತ್ತದೆ; ಇದು ವ್ಯಕ್ತಿಗೆ ಸ್ಥಿರವಾದ ಭಾವನಾತ್ಮಕ ಸ್ಥಿತಿಯನ್ನು ನೀಡುತ್ತದೆ ಮತ್ತು ಮದುವೆ ಸೇರಿದಂತೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ.[೧೨] ವಿಶೇಷವಾಗಿ ಒತ್ತಡದ ಘಟನೆಗಳ ಸಂದರ್ಭದಲ್ಲಿ ಶಾಂತವಾಗಿರುವುದಕ್ಕೆ ಪ್ರಯೋಜನಕಾರಿಯಾಗುತ್ತದೆ.[೧೩]
ವ್ಯುತ್ಪತ್ತಿ
[ಬದಲಾಯಿಸಿ]ಈ ಪದವು ಮಧ್ಯ ಇಂಗ್ಲಿಷ್ ದಿಂದ ಶಾಂತ(ಕಾಮ್), ಹಳೆಯ ಫ್ರೆಂಚ್ನಿಂದ, ಹಳೆಯ ಇಟಾಲಿಯನ್ ದಿಂದ ಕ್ಯಾಲ್ಮೊ, ಲೇಟ್ ಲ್ಯಾಟಿನ್ ದಿಂದ ಕೌಮಾ, ಅಂದರೆ "ದಿನದ ಶಾಖ", "ದಿನದ ಶಾಖದಲ್ಲಿ ವಿಶ್ರಾಂತಿ ಸ್ಥಳ" ಎಂದರ್ಥ, ಗ್ರೀಕ್ ದಿಂದ ಕೌಮಾ, ಅಂದರೆ ಸುಡುವ ಶಾಖ, ಕೈಯಿನ್ ನ ಸುಡಲು ಅರ್ಥದಿಂದ ಬಂದಿದೆ.[೨]
ಸಾಂಸ್ಕೃತಿಕ ಉದಾಹರಣೆಗಳು
[ಬದಲಾಯಿಸಿ]- ಗಿಬ್ಬನ್ ಬೋಥಿಯಸ್ನನ್ನು ಶ್ಲಾಘಿಸುತ್ತಾ: "ಋಷಿಯೊಬ್ಬರು ಒಂದೇ ಕೃತಿಯಲ್ಲಿ ತತ್ವಶಾಸ್ತ್ರ, ಕಾವ್ಯ ಮತ್ತು ವಾಕ್ಚಾತುರ್ಯದ ವಿವಿಧ ಸಂಪತ್ತುಗಳನ್ನು ಕಲಾತ್ಮಕವಾಗಿ ಸಂಯೋಜಿಸಿದವರೂ, ಅವರು ಹುಡುಕುತ್ತಿರುವ ನಿರ್ಭೀತ ಶಾಂತತೆಯನ್ನು ಈಗಾಗಲೇ ಹೊಂದಿರಬೇಕು" ಎಂದರು.[೧೪]
- ರಿಯರ್ ಅಡ್ಮಿರಲ್ ಸ್ಪ್ರೂಯನ್ಸ್, ಮಿಡ್ವೇ ಕದನದಲ್ಲಿ ಕ್ಯಾರಿಯರ್ ಕಮಾಂಡರ್ಗೆ "ಎಲೆಕ್ಟ್ರಿಕ್ ಬ್ರೇನ್" ಎಂದು ಅಡ್ಡಹೆಸರು ನೀಡಿದರು ಏಕೆಂದರೆ ಅವರು ಕಠಿಣವಾದ ಸಂದರ್ಭದಲ್ಲಿಯೂ ಶಾಂತತೆಯಿಂದಿದ್ದರು.[೧೫]
- ಲಾರ್ಡ್ ಡೇವಿಡ್ ಸೆಸಿಲ್ ಅವರು “ ಚಂಡಮಾರುತದ ತತ್ವ ಮತ್ತು ಸೌಮ್ಯ, ಕರುಣಾಮಯಿ, ನಿಷ್ಕ್ರಿಯ, ಮತ್ತು ಹತೋಟಿಯ ತತ್ವಗಳ ನಡುವಿನ ವ್ಯತ್ಯಾಸದ ಆಧಾರದ ಮೇಲೆ ವೂದರಿಂಗ್ ಹೈಟ್ಸ್ ನ್ನು ಕಂಡರು.[೧೬]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "calm". www.merriam-webster.com. 30 July 2023.
- ↑ ೨.೦ ೨.೧ "calmness". The Free Dictionary. Retrieved 2016-04-01.
- ↑ Ben-Ze’er, Aaron (2001). The Subtlety of Emotions. p. 57.
- ↑ Schore, Allan N. (1994). Affect Regulation and the Origin of Self. Hillsdale. p. 226.
- ↑ Winnicott, D.W. (1973). The Child, the Family, and the inside World. Penguin. pp. 168–69.
- ↑ Blazina, Christopher; Boyraz, Guler; Shen-Miller, David, eds. (2011). The Psychology of the Human-Animal Bond. Springer. p. 154.
- ↑ "The Psychology of Cool, Calm, & Collected". December 3, 2008. Archived from the original on May 13, 2011. Retrieved April 23, 2009.
- ↑ "The Psychology of Cool, Calm, & Collected". December 3, 2008. Archived from the original on May 13, 2011. Retrieved April 23, 2009.
- ↑ Thompson, Richard (2018). "past president". Clinical Medicine. 18 (3). Royal College of Physicians, London: 201–205. doi:10.7861/clinmedicine.18-3-201. PMC 6334070. PMID 29858428.
- ↑ "Calmness Quotes". www.goodreads.com.
- ↑ Wilson, Sarah (2018). First, We Make the Beast Beautiful: A New Journey Through Anxiety. London: Dey Street Books. pp. 210–11.
- ↑ ABC News. "Study: Bad Hormones Lead to Bad Marriages". ABC News. Retrieved 2016-04-01.
- ↑ "Controlling Anger — Before It Controls You". APA Psychology Topics. 3 March 2022. Retrieved 2016-04-01.
- ↑ Gibbon, Edward (2005). Abridged Decline and Fall. Penguin. p. 444.
- ↑ Overy, R. (2006). Why the Allies Won. London. p. 46.
{{cite book}}
: CS1 maint: location missing publisher (link) - ↑ Quoted in Wallace, R. (2008). Emily Bronte and Beethoven. p. 49.