ಶತಾಬ್ದಿ ಎಕ್ಸ್‌ಪ್ರೆಸ್
ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳು (ಹಿಂದಿ : शताब्दी एक्सप्रेस) ಬಹುವೇಗದ (ಭಾರತದಲ್ಲಿ ಸೂಪರ್‌ಫಾಸ್ಟ್ ಎಂದು ಕರೆಯಲಾಗುತ್ತದೆ) ಪ್ರಯಾಣಿಕ ರೈಲುಗಳ ಒಂದು ಸರಣಿಯಾಗಿದೆ. ಇವನ್ನು ಭಾರತೀಯ ರೈಲ್ವೆಯು ಮೆಟ್ರೋ ನಗರಗಳನ್ನು ಪ್ರವಾಸೋದ್ಯಮ, ಯಾತ್ರೆ ಅಥವಾ ವ್ಯಾಪಾರೋದ್ಯಮದ ದೃಷ್ಟಿಯಿಂದ ಪ್ರಮುಖವಾಗಿರುವ ನಗರಗಳಿಗೆ ಸಂಪರ್ಕಿಸಲು ನಡೆಸುತ್ತದೆ. ಶತಾಬ್ದಿ ಎಕ್ಸ್‌ಪ್ರೆಸ್ ಹಗಲಿನ ರೈಲುಗಳಾಗಿದ್ದು, ಅದೇ ದಿನ ಅವು ಮೂಲ ನೆಲೆಯ ನಿಲ್ದಾಣಗಳಿಗೆ ಮರಳಿ ಬರುತ್ತವೆ.
ಭಾರತದಲ್ಲಿ ಶತಾಬ್ದಿಗಳು ಅತ್ಯಂತ ವೇಗದ ರೈಲುಗಳಾಗಿದ್ದು, ಭಾರತಿಯ ರೈಲ್ವೆಯು ಅವುಗಳನ್ನು ಪ್ರತಿಷ್ಠಿತ ರೈಲುಗಳೆಂದು ಪರಿಗಣಿಸುತ್ತದೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳು ಅಲ್ಪದೂರದಿಂದ ಮಧ್ಯಮ ದೂರದವರೆಗೆ ಕ್ರಮಿಸುತ್ತವೆ. ಆದರೆ ರಾಜಧಾನಿ ಎಕ್ಸ್‌ಪ್ರೆಸ್‌ಗಳು ದೀರ್ಘ-ದೂರದ ರೈಲುಗಳಾಗಿದ್ದು, ದೇಶದ ರಾಜಧಾನಿ ನವದೆಹಲಿ ಯನ್ನು ರಾಜ್ಯದ ರಾಜಧಾನಿಗಳಿಗೆ ಸಂಪರ್ಕೀಸುತ್ತದೆ. ಈ ಎರಡೂ ಸರಣಿಯ ರೈಲುಗಳು ಗಂಟೆಗೆ 100–130 ಕಿ.ಮೀ. ನಿಯಮಿತ ವೇಗವನ್ನು ಹೊಂದಿವೆ. 2001 ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್ , ಗಂಟೆಗೆ 150 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಭಾರತದಲ್ಲಿ ಇದು ಅತ್ಯಂತ ವೇಗದ ರೈಲಾಗಿದೆ.
ಇತಿಹಾಸ
[ಬದಲಾಯಿಸಿ]"ಶತಾಬ್ದಿ" ಎಂದರೆ ಸಂಸ್ಕೃತ , ಹಿಂದಿ ಮತ್ತು ಇನ್ನಿತರ ಭಾರತೀಯ ಭಾಷೆಗಳಲ್ಲಿ ಶತಮಾನ ಎಂದರ್ಥ. ಮೊದಲ ಶತಾಬ್ದಿ ರೈಲನ್ನು 1988ರಲ್ಲಿ ಪಂಡಿತ ಜವಾಹರ ಲಾಲ್ ನೆಹರೂ (ಭಾರತದ ಮೊದಲ ಪ್ರಧಾನಿ)ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಆಗಿನ ರೈಲ್ವೆ ಸಚಿವರಾಗಿದ್ದ ಮಾಧವ್ ರಾವ್ ಸಿಂಧಿಯಾ , ಆರಂಭಿಸಿದರು. ಅದು ಮೊದಲು ನವ ದೆಹಲಿ ಯಿಂದ ಗ್ವಾಲಿಯರ್‌ಗೆ ಹೋಗುತ್ತಿತ್ತು. ನಂತರ ಅದನ್ನು ಝಾನ್ಸಿ ಜಂಕ್ಷನ್ ವರೆಗೆ ವಿಸ್ತರಿಸಲಾಯಿತು, ತದನಂತರ ಅಂತಿಮವಾಗಿ ಭೋಪಾಲ್ ಜಂಕ್ಷನ್ವರೆಗೆ ವಿಸ್ತರಿಸಲಾಯಿತು. ಈಗ ಅದನ್ನು ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್ ಎಂದೂ ಕರೆಯಲಾಗುತ್ತದೆ.
ರೈಲು
[ಬದಲಾಯಿಸಿ]ಭೋಪಾಲ್ ಶತಾಬ್ದಿ ಭಾರತದಲ್ಲಿ ಅತಿವೇಗದ ರೈಲು ಆಗಿದ್ದು, ಇದು ಸರಾಸರಿ ಗಂಟೆಗೆ 110 ಕಿ.ಮೀ. ಚಲಿಸುತ್ತದೆ. (ದಯವಿಟ್ಟು ನೋಡಿ : ಭಾರತದ ಅತಿವೇಗದ ರೈಲುಗಳು ) ಇದು ಮೂಲನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣದ ನಡುವೆ ಕೆಲವು ಕಡೆಗಳಲ್ಲಿ ಆಗ್ರಾ ಮತ್ತು ನವ ದೆಹಲಿ ನಿಲ್ದಾಣಗಳ ಮಧ್ಯೆ ಕೆಲವು ಕಡೆಗಳಲ್ಲಿ ಗಂಟೆಗೆ 150 ಕಿ.ಮೀ. ವೇಗದಲ್ಲಿಯೂ ಚಲಿಸುತ್ತದೆ. ಈ ರೈಲುಗಳು ಅಧಿಕ ಆರಾಮ ಒದಗಿಸಲು ಈಗ ಇತ್ತೀಚಿನ L.H.B. ರೇಕ್‌ಗಳನ್ನು ಬಳಸುತ್ತವೆ.
ಶತಾಬ್ದಿ ರೈಲು ಕೆಲವು ಸಂದರ್ಭಗಳಲ್ಲಿ ಬೆರೆ ರೈಲುಗಳಿಗಿಂತ ಹೆಚ್ಚು ಅನುಕೂಲಗಳನ್ನು ಹೊಂದಿವೆ. ಏಕೆಂದರೆ ಇವು ಸ್ವೀಕರಿಸುವ ಆದ್ಯತೆ ಮತ್ತು ನಿಲ್ದಾಣಗಳಲ್ಲಿ ಅತ್ಯುತ್ತಮ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲುತ್ತವೆ (ಸಾಮಾನ್ಯವಾಗಿ ಹೆಚ್ಚಿನ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ನಂ.1)
ಲಕ್ನೋ-ದೆಹಲಿi ಶತಾಬ್ದಿ ರೈಲು ಹೆಚ್ಚಿನ ವೇಳೆ 130 ಕಿ.ಮೀ/ಗಂಟೆ ವೇಗದಲ್ಲಿ ಚಲಿಸುವುದಾದರೂ, ಒಂದು ಬಾರಿ 144 ಕಿ.ಮೀ./ಗಂಟೆ ವೇಗದಲ್ಲಿ ಚಲಿಸಿ ದಾಖಲೆ ಮಾಡಿದೆ.
ಸಂಬಂಧಿತ ರೈಲುಗಳು
[ಬದಲಾಯಿಸಿ]ಶತಾಬ್ದಿ ಎಕ್ಸ್‌ಪ್ರೆಸ್‌ನ ಸ್ವಲ್ಪ ಮಾರ್ಪಾಡು ಮಾಡಿದ ರೈಲು, ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ , ಭಾರತೀಯ ರೈಲ್ವೆಯಲ್ಲಿ ಅತ್ಯಂತ ಐಷಾರಾಮಿ ರೈಲು ಎಂದು ಪರಿಗಣಿತವಾಗಿದೆ.
ಭಾರತೀಯ ರೈಲ್ವೆ ಯು ನಂತರದಲ್ಲಿ ಕಡಿಮೆ ದರದ ಆವೃತ್ತಿ ಜನ್-ಶತಾಬ್ದಿ ಎಕ್ಸ್‌ಪ್ರೆಸ್ ಗಳನ್ನು ಆರಂಭಿಸಿತು. ಇವು ಎಲ್ಲವೂ ಸರಿಸುಮಾರು ಹವಾನಿಯಂತ್ರಿತ ಸೌಲಭ್ಯ ಹೊಂದಿಲ್ಲದೇ ಇರುವ ರೈಲುಗಳಾಗಿದ್ದು, ಕೈಗೆಟುಕುವ ದರದಲ್ಲಿರುತ್ತವೆ.
ರೈಲ್ವೆ ಮಂತ್ರಿ ಲಾಲೂ ಪ್ರಸಾದ್ ಯಾದವ್ ಗರೀಬ್ ರಥ್ (ಬಡವರ ರಥ) ರೈಲನ್ನು ಆರಂಭಿಸಿದರು. ಇವು (ರಾಜಧಾನಿ ಮತ್ತು ಶತಾಬ್ದಿಗಳಂತೆ), ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಕಡಿಮೆ ದರದ ರೈಲುಗಳಾಗಿವೆ. ಈ ರೈಲುಗಳು ಸಾಕಷ್ಟು ಯಶಸ್ವಿಯಾಗಿವೆ ಮತ್ತು ಕೆಲವು ದೀರ್ಘ-ದೂರದ ಮಾರ್ಗಗಳಲ್ಲಿ ಕಡಿಮೆ ದರದ ವಿಮಾನಗಳೊಂದಿಗೆ ಪೈಪೋಟಿ ಮಾಡುವಂತಿವೆ.
ಸೇವೆ
[ಬದಲಾಯಿಸಿ]ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಿಗೆ ಕೆಲವೇ ಮಧ್ಯಂತರ ನಿಲ್ದಾಣಗಳಿದ್ದು, ವೇಗದ ಸಂಪರ್ಕವನ್ನು ಸಾಧ್ಯಗೊಳಿಸುತ್ತದೆ. ಅವು ಸಂಪೂರ್ಣ ಹವಾನಿಯಂತ್ರಿತ ರೈಲುಗಳಾಗಿದ್ದು, ಬಹುತೇಕ ಭಾರತೀಯ ರೈಲುಗಳಿಗಿಂತ ಅತ್ಯಂತ ಉತ್ತಮ ದರ್ಜೆಯ ರೈಲುಗಳಾಗಿವೆ. ಶತಾಬ್ದಿ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ತಿಂಡಿ ತಿನಿಸುಗಳು, ಊಟ, ಕಾಫಿ ಅಥವಾ ಟೀ, ಒಂದು ಲೀ. ನೀರಿನ ಬಾಟಲಿ ಮತ್ತು ಒಂದು ಲೋಟ ಹಣ್ಣಿನ ರಸ ಒದಗಿಸಲಾಗುತ್ತದೆ.
ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬರ್ತ್‌ಗಳು ಮತ್ತು ಆಸನಗಳನ್ನು ರೈಲು ಹತ್ತುವ ಮೊದಲೇ ಮುಂಗಡ ಬುಕ್ ಮಾಡಬೇಕಾಗುತ್ತದೆ. ಭಾರತದಲ್ಲಿರುವ ಬಹುತೇಕ ರೈಲುಗಳಲ್ಲಿ ಮುಂಗಡ ಬುಕಿಂಗ್ ಇಲ್ಲದೇ ಸೀಟ್ ದೊರೆಯುತ್ತದೆ, ಆದರೆ ಈ ರೈಲುಗಳಲ್ಲಿ ಮುಂಗಡ ಬುಕಿಂಗ್ ಇಲ್ಲದೆ ಸೀಟುಗಳು ದೊರೆಯುವುದಿಲ್ಲ. ಕೆಲವು ಶತಾಬ್ದಿಗಳು ಸದ್ಯದ ಬುಕಿಂಗ್ ವ್ಯವಸ್ಥೆಯನ್ನು ಹೊಂದಿರುತ್ತವೆ, ಆಗ ಟಿಕೆಟ್‌ಗಳನ್ನು ರೈಲು ಬಿಡುವ ಸ್ವಲ್ಪ ಮೊದಲು ಪಡೆದುಕೊಳ್ಳಬಹುದು. ಆದರೆ ಇವುಗಳಲ್ಲಿ ಕೂಡ ಟಿಕೆಟ್‌ಗಳ ಮೇಲೆ ಆಸನಗಳ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಭಾರತದ ಬೇರೆ ರೈಲುಗಳಲ್ಲಿ ಸೀಟ್ ಅಥವಾ ಬೋಗಿ ಸಂಖ್ಯೆಯನ್ನು ಟಿಕೆಟ್ ಮೇಲೆ ನಮೂದಿಸಿರುವುದಿಲ್ಲ.
ಶತಾಬ್ದಿ ಎಕ್ಸ್‌ಪ್ರೆಸ್ ಹಗಲಿನ ರೈಲುಗಳಾಗಿದ್ದು, ಅದೇ ದಿನ ಮರಳಿ ಬರುವುದರಿಂದ ಹೆಚ್ಚಿನ ಬೋಗಿಗಳಲ್ಲಿ ಹವಾನುಕೂಲಿತ ಆಸನಗಳು ಮಾತ್ರ ಇರುತ್ತವೆ (ಇವನ್ನು ಎಸಿ ಚೇರ್ ಕಾರ್ ಅಥವಾ ಸಿಸಿ ಎಂದು ಕರೆಯುತ್ತಾರೆ) ಮತ್ತು ಬರ್ತ್‌ಗಳನ್ನು ಹೊಂದಿರುವುದಿಲ್ಲ. ಎಲ್ಲ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳು ಒಂದು ಬೋಗಿ ಮೊದಲದರ್ಜೆ ಹವಾನಿಯಂತ್ರಿತ ಆಸನಗಳನ್ನು ಹೊಂದಿರುತ್ತವೆ. ಈ ಬೋಗಿಗಳು ಸಾಧಾರಣವಾದ ಹವಾನುಕೂಲಿತ ಆಸನಗಳಿಗೆ (ಸಿಸಿ)ಹೋಲಿಸಿದರೆ ವಿಶಾಲವಾದ ಕಾಲಿಡುವ ಸ್ಥಳಾವಕಾಶ (ಲೆಗ್‌ರೂಂ) ಹೊಂದಿರುತ್ತದೆ ಮತ್ತು ಉತ್ತಮವಾದ ಆಹಾರ ವ್ಯವಸ್ಥೆ ಇರುತ್ತದೆ.
ಕೆಲವು ಶತಾಬ್ದಿ ರೈಲುಗಳಲ್ಲಿ ಕುಳಿತೇ ಆನಂದಿಸುವ ಮನೋರಂಜನಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿರುತ್ತದೆ, ಪ್ರಯಾಣಿಕರು ಇಂಥಲ್ಲಿ ಸಿನಿಮಾಗಳನ್ನು ಮತ್ತು ಟಿವಿ ಧಾರಾವಾಹಿಗಳನ್ನು ಉಪಗ್ರಹದ ಮೂಲಕ ನೇರವಾಗಿ ವೀಕ್ಷಿಸಬಹುದು. ಅಹ್ಮದಾಬಾದ್ ಮುಂಬಯಿ ಶತಾಬ್ದಿ ಎಕ್ಸ್‌ಪ್ರೆಸ್ ಇಂತಹ ವ್ಯವಸ್ಥೆ ಹೊಂದಿದ ಪ್ರಪ್ರಥಮ ಶತಾಬ್ದಿ ರೈಲು.
ಶತಾಬ್ದಿ ರೈಲುಗಳ ಪಟ್ಟಿ
[ಬದಲಾಯಿಸಿ]ಭಾರತೀಯ ರೈಲ್ವೆಯು 2010 ಜುಲೈ, 1ರ ಪ್ರಕಾರ ಒಟ್ಟು 13 ಜೋಡಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಜೋಡಿ | ರೈಲು ಸಂಖ್ಯೆ | ಹೆಸರು | ಮೂಲ | ಬಿಡುವ ವೇಳೆ | ತಲುಪುವ ಸ್ಥಳ | ತಲುಪುವ ಸಮಯ | ಮಾರ್ಗ | ದೂರ(ಕಿ.ಮೀ.) | ಈ ದಿನಗಳಲ್ಲಿ ಓಡುತ್ತದೆ |
---|---|---|---|---|---|---|---|---|---|
1 | #2001/2001ಎ 2002/2002ಎ |
ಭೋಪಾಲ್-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ ನವ ದೆಹಲಿ-ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್ |
ಭೋಪಾಲ್ ನವ ದೆಹಲಿ |
14.40 06:15 |
ನವ ದೆಹಲಿ ಭೋಪಾಲ್ |
22.30 14:05 |
ಝಾನ್ಸಿ, ಆಗ್ರಾ, ಗ್ವಾಲಿಯರ್ | 701 | ಶುಕ್ರವಾರ ಹೊರತುಪಡಿಸಿ/ಶುಕ್ರವಾರ ಶುಕ್ರವಾರ ಹೊರತುಪಡಿಸಿ/ಶುಕ್ರವಾರ |
2 | 2003 2004 |
ಲಕ್ನೋ-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ ನವ ದೆಹಲಿ -ಲಕ್ನೋ ಶತಾಬ್ದಿ ಎಕ್ಸ್‌ಪ್ರೆಸ್ |
ಲಕ್ನೋ ನವ ದೆಹಲಿ |
15.35 06:15 |
ನವ ದೆಹಲಿ ಲಕ್ನೋ |
22.05 12:30 |
ಕಾನ್ಪುರ | 511 | ಪ್ರತಿದಿನ |
3 | 2005 |
ನವ ದೆಹಲಿ -ಕಾಲ್ಕ ಶತಾಬ್ದಿ ಎಕ್ಸ್‌ಪ್ರೆಸ್ ಕಾಲ್ಕ-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ |
ನವ ದೆಹಲಿ ಕಾಲ್ಕ |
17:25 06:15 |
ಕಾಲ್ಕ ನವ ದೆಹಲಿ |
21:20 10:15 |
ಅಂಬಾಲಾ, ಚಂಡೀಗಡ್ | 303 | ಪ್ರತಿದಿನ |
4 | 2007 2008 |
ಚೆನೈ-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ಮೈಸೂರು-ಚೆನೈ ಶತಾಬ್ದಿ ಎಕ್ಸ್‌ಪ್ರೆಸ್ |
ಚೆನೈ ಮೈಸೂರ್ |
06:00 14:15 |
ಮೈಸೂರ್ ಚೆನ್ನೈ |
13:00 21:25 |
ಬೆಂಗಳೂರು | 500 | ಬುಧವಾರ ಹೊರತುಪಡಿಸಿ |
5 | 2009 2010 |
ಮುಂಬಯಿ-ಅಹ್ಮದಾಬಾದ್ ಶತಾಬ್ದಿ ಎಕ್ಸ್‌ಪ್ರೆಸ್ ಅಹ್ಮದಾಬಾದ್-ಮುಂಬಯಿ ಶತಾಬ್ದಿ ಎಕ್ಸ್‌ಪ್ರೆಸ್ |
ಮುಂಬಯಿ ಅಹ್ಮದಾಬಾದ್ |
06:25 14:30 |
ಅಹ್ಮದಾಬಾದ್ ಮುಂಬಯಿ |
13:10 21:35 |
ಸೂರತ್, ವಡೋದರ | 491 | ಭಾನುವಾರ ಹೊರತುಪಡಿಸಿ |
6 | 2011 2012 |
ನವ ದೆಹಲಿ -ಕಾಲ್ಕ ಶತಾಬ್ದಿ ಎಕ್ಸ್‌ಪ್ರೆಸ್ ಕಾಲ್ಕ-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ |
ನವ ದೆಹಲಿ ಕಾಲ್ಕ |
07:40 17:45 |
ಕಾಲ್ಕ ನವ ದೆಹಲಿ |
11:45 21:50 |
ಅಂಬಾಲಾ, ಚಂಡೀಗಡ್ | 303 | ಪ್ರತಿದಿನ |
7 | 2013 2014 |
ನವ ದೆಹಲಿ -ಅಮೃತ್‌ಸರ್ ಶತಾಬ್ದಿ ಎಕ್ಸ್‌ಪ್ರೆಸ್ ಅಮೃತ್‌ಸರ್-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ |
ನವ ದೆಹಲಿ ಅಮೃತ್‌ಸರ್ |
16:30 05:10 |
ಅಮೃತ್‌ಸರ್ ನವ ದೆಹಲಿ |
22:35 11:15 |
ಲುಧಿಯಾನ, ಜಾಲಂಧರ್ | 448 | ಪ್ರತಿದಿನ |
8 | 2015 2016 |
ನವ ದೆಹಲಿ -ಅಜ್ಮೀರ್ ಶತಾಬ್ದಿ ಎಕ್ಸ್‌ಪ್ರೆಸ್ ಅಜ್ಮೀರ್-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ |
ನವ ದೆಹಲಿ ಅಜ್ಮೀರ್ |
06:05 15:50 |
ಅಜ್ಮೀರ್ ನವ ದೆಹಲಿ |
13:00 22:40 |
ಜೈಪುರ್ | 443 | ಬುಧವಾರ ಹೊರತುಪಡಿಸಿ |
9 | 2017 2018 |
ನವ ದೆಹಲಿ -ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್ ದೆಹರಾದೂನ್-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ |
ನವ ದೆಹಲಿ ಡೆಹ್ರಾಡೂನ್ |
06:50 17:00 |
ಡೆಹ್ರಾಡೂನ್ ನವ ದೆಹಲಿ |
12:40 22:45 |
ಹರಿದ್ವಾರ್ | 315 | ಪ್ರತಿದಿನ |
10 | 2019 2020 |
ಹೌರಾ-ರಾಂಚಿ ಶತಾಬ್ದಿ ಎಕ್ಸ್‌ಪ್ರೆಸ್ ರಾಂಚಿ-ಹೌರಾ ಶತಾಬ್ದಿ ಎಕ್ಸ್‌ಪ್ರೆಸ್ |
ಹೌರಾ ರಾಂಚಿ |
06:05 13:45 |
ರಾಂಚಿ ಹೌರಾ |
13:10 21:10 |
ಧನಬಾದ್ | 423 | ಭಾನುವಾರ ಹೊರತುಪಡಿಸಿ |
11 | 2027 2028 |
ಚೆನೈ -ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ ಬೆಂಗಳೂರು -ಚೆನೈ ಶತಾಬ್ದಿ ಎಕ್ಸ್‌ಪ್ರೆಸ್ |
ಚೆನೈ ಬೆಂಗಳೂರು |
17:30 06:00 |
ಬೆಂಗಳೂರು ಚೆನ್ನೈ |
22:30 11:00 |
ಕಟ್ಪಾಡಿ | 362 | ಮಂಗಳವಾರ ಹೊರತುಪಡಿಸಿ |
12 | 2029/2031 2030/2032 |
ನವ ದೆಹಲಿ -ಅಮೃತ್‌ಸರ್ ಶತಾಬ್ದಿ ಎಕ್ಸ್‌ಪ್ರೆಸ್ ಅಮೃತ್‌ಸರ್-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ |
ನವ ದೆಹಲಿ ಅಮೃತ್‌ಸರ್ |
07:20 17:00 |
ಅಮೃತ್‌ಸರ್ ನವ ದೆಹಲಿ |
13:25 23:05 |
ಲುಧಿಯಾನ, ಜಾಲಂಧರ್ | 448 | ಗುರುವಾರ ಹೊರತುಪಡಿಸಿ/ಗುರುವಾರ ಗುರುವಾರ ಹೊರತುಪಡಿಸಿ/ಗುರುವಾರ |
13 | 2033 2034 |
ಕಾನ್ಪುರ್-ನವ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ ನವ ದೆಹಲಿ -ಕಾನ್ಪುರ್ ಶತಾಬ್ದಿ ಎಕ್ಸ್‌ಪ್ರೆಸ್ |
ಕಾನ್ಪುರ್ ನವ ದೆಹಲಿ |
06:00 16:00 |
ನವ ದೆಹಲಿ ಕಾನ್ಪುರ್ |
11:05 20:50 |
ನಿಲುಗಡೆರಹಿತ ಮಾರ್ಗ ಅಲಿಗಡ್ | 437 | ಭಾನುವಾರ ಹೊರತುಪಡಿಸಿ |
ಶತಾಬ್ದಿ ಎಕ್ಸ್‌ಪ್ರೆಸ್‌ನ ಕೆಲವು ವಿಶೇಷ ಲಕ್ಷಣಗಳು
[ಬದಲಾಯಿಸಿ]- ಎಲ್ಲ ಶತಾಬ್ದಿ ರೈಲುಗಳು ಒಂದೇ ದಿನದಲ್ಲಿ ಹೋಗಿ, ವಾಪಸು ಬರುವ ಪ್ರಯಾಣವನ್ನು ಒಳಗೊಂಡಿರುತ್ತವೆ.
- ಸರಾಸರಿ ಪ್ರಯಾಣದ ದೂರ 300ರಿಂದ 700 ಕಿ.ಮೀ. ಒಳಗೆ ಇರುತ್ತದೆ.
- ಸರಾಸರಿ ಪ್ರಯಾಣದ ಸಮಯ 4ರಿಂದ 8 ಗಂಟೆ ಒಳಗೆ ಇರುತ್ತದೆ.
- ಭೋಪಾಲ್ ಶತಾಬ್ದಿಯು ಮೊದಲ ಶತಾಬ್ದಿ ರೈಲು ಆಗಿದೆ.
- ಭೋಪಾಲ್ ಶತಾಬ್ದಿಯು ಅತ್ಯಂತ ಉದ್ದ ಶತಾಬ್ದಿ ರೈಲು.
- ಕಾಲ್ಕ ಶತಾಬ್ದಿಯು ಅತ್ಯಂತ ಚಿಕ್ಕ ಶತಾಬ್ದಿ ರೈಲು.
- ಕಾನ್ಪುರ್ ಶತಾಬ್ದಿ ಮಾತ್ರವೇ ನಿಲುಗಡೆರಹಿತ ಶತಾಬ್ದಿ ರೈಲು ಆಗಿದೆ.
- ಅಂಬಾಲಾ, ಅಮೃತ್‌ಸರ್ , ಬೆಂಗಳೂರು , ಚಂಡೀಗಡ್, ಚೆನೈ , ಕಾಲ್ಕ ಮತ್ತು ಕಾನ್ಪುರ್ ಒಂದಕ್ಕಿಂತ ಹೆಚ್ಚು ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳನ್ನು ಹೊಂದಿವೆ.
- ಪ್ರತಿ ನಿಮಿಷಕ್ಕೆ 1510 ಮೀಟರ್ ಸರಾಸರಿ ವೇಗ ಹೊಂದಿರುವ 2034 ಕಾನ್ಪುರ್ ಶತಾಬ್ದಿಯು ಅತ್ಯುತ್ತಮ ಶತಾಬ್ದಿ ರೈಲು ಆಗಿದೆ. ಪ್ರತಿ ನಿಮಿಷಕ್ಕೆ 1490 ಮೀಟರ್ ಸರಾಸರಿ ವೇಗ ಹೊಂದಿರುವ 2001 ಭೋಪಾಲ್ ಶತಾಬ್ದಿಯು ತದನಂತರದ ಉತ್ತಮ ಸ್ಥಾನದಲ್ಲಿದೆ.
ಟಿಪ್ಪಣಿ : ಶತಾಬ್ದಿ ರೈಲುಗಳ ಮೇಲಿನ ಕೋಷ್ಟಕದಲ್ಲಿ ನೀಡಿದ ದತ್ತಾಂಶಗಳ ಆಧಾರದ ಮೇಲೆ ಮೇಲಿನ ಗುಣಲಕ್ಷಣಗಳನ್ನು ಪಟ್ಟಿ ಮಾಡಲಾಗಿದೆ.
ಭವಿಷ್ಯ (ಫ್ಯೂಚರ್ )
[ಬದಲಾಯಿಸಿ]ಭಾರತೀಯ ರೈಲ್ವೆಯ ಪ್ರಯಾಣಿಕ ಸೇವೆಗಳ ವ್ಯಾಪ್ತಿಯಲ್ಲಿ ಯಾವುದೇ ಸ್ಪರ್ಧೆ ಇಲ್ಲವಾದ್ದರಿಂದ, ಸೇವೆಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿಲ್ಲ ಎಂದು ಕೆಲವರು [who?]ವಾದಿಸುತ್ತಾರೆ.
ಜೊತೆಗೆ, ಭಾರತೀಯ ವಾಯುಯಾನ ವಲಯದಲ್ಲಿ ತೀವ್ರ ಪೈಪೋಟಿ ಇದೆ ಮತ್ತು ದೇಶೀಯ ಮಾರ್ಗಗಳಲ್ಲಿ ಕಡಿಮೆ-ದರದ ಮಾರುಕಟ್ಟೆಯನ್ನು ಪ್ರೋತ್ಸಾಹಿಸುತ್ತಿವೆ. ಹೀಗಾಗಿ ಮೇಲ್ದರ್ಜೆಯ ರೈಲು ಪ್ರಯಾಣಿರಿಗೆ ವಾಯುಯಾನ ಆಕರ್ಷಣೆ ಹುಟ್ಟಿಸುತ್ತಿದ್ದು, ವಿಮಾನ ಪ್ರಯಾಣದತ್ತ ಹೊರಳುತ್ತಿದ್ದಾರೆ. ಜೊತೆಗೆ, ಅತ್ಯುತ್ತಮ ಮಟ್ಟದ ಸೇವೆಯನ್ನು ಕಾಪಾಡಿಕೊಳ್ಳಲು ಅಸಮರ್ಥವಾಗಿರುವುದು ಸೇರಿಕೊಂಡು, ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಗ್ರಾಹಕರನ್ನು ಕಾಯ್ದುಕೊಳ್ಳಲು ಹೆಚ್ಚೆಚ್ಚು ಕಷ್ಟವಾಗುತ್ತಿದೆ.[೧]
ಕರ್ನಾಟಕದ ರಾಜ್ಯದ ರೈಲುಗಳಿಗೂ ಸಿಗಲಿದೆಯೇ ‘ವೇಗ ಭಾಗ್ಯ’
[ಬದಲಾಯಿಸಿ]- ಇರುವ ಮಾರ್ಗಗಳನ್ನೇ ಬಲಪಡಿಸಿ ಪ್ರಯಾಣಿಕ ರೈಲುಗಳು ಹಾಗೂ ಸರಕು ಸಾಗಣೆ ರೈಲುಗಳು ಈಗ ಸಂಚರಿಸುತ್ತಿರುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವಂತೆ ಮಾಡುವ ‘ಮಿಷನ್ ರಫ್ತಾರ್’ ಯೋಜನೆಗೆ ರೈಲ್ವೆ ಇಲಾಖೆ 2016ರಲ್ಲಿ ಚಾಲನೆ ನೀಡಿದೆ. ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ಆರು ಮಾರ್ಗಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ರಾಜ್ಯದ ಒಂದೂ ಮಾರ್ಗವೂ ಇಲ್ಲ.
- ‘ಹೈಸ್ಪೀಡ್ ರೈಲುಗಳನ್ನು ಓಡಿಸಲು ಜೋಡಿ ಮಾರ್ಗಗಳಿರಬೇಕು. ಚಾಲಕನಿಗೆ ಕನಿಷ್ಠ 2 ಕಿ.ಮೀ.ಗಳಷ್ಟು ದೂರದವರೆಗೂ ಹಳಿ ಕಾಣುವಂತಿರಬೇಕು. ಇರುವ ಮಾರ್ಗವನ್ನೇ ಬಲಪಡಿಸಿ ರೈಲುಗಳ ವೇಗವನ್ನು ಹೆಚ್ಚಿಸಲು, ಅಗತ್ಯವಿರುವ ಕಡೆ ರೈಲ್ವೆ ಮಾರ್ಗದ ತಿರುವುಗಳನ್ನು ಕಡಿಮೆಗೊಳಿಸಬೇಕು. ಲೆವೆಲ್ ಕ್ರಾಸಿಂಗ್ಗಳಿರುವಲ್ಲಿ ಸೇತುವೆ ನಿರ್ಮಿಸಬೇಕು. ಸಿಗ್ನಲಿಂಗ್ ವ್ಯವಸ್ಥೆ ಮೇಲ್ದರ್ಜೆಗೇರಿಸಬೇಕು. ಸೇತುವೆ ಹಳೆಯದಾಗಿದ್ದರೆ, ಅದರ ಸಾಮರ್ಥ್ಯ ವೃದ್ಧಿ ಮಾಡಬೇಕು. ಹಳಿ ಹೆಚ್ಚು ಇಳಿಜಾರಿನಿಂದ (ಗ್ರೇಡಿಯೆಂಟ್) ಕೂಡಿರಬಾರದು. ಈ ಎಲ್ಲ ಕೆಲಸಗಳು ಪೂರ್ಣಗೊಂಡ ಬಳಿಕವಷ್ಟೇ ರೈಲುಗಳ ವೇಗ ಹೆಚ್ಚಿಸಲು ಸಾಧ್ಯ. ಈ ಪೂರ್ವ ಸಿದ್ಧತೆಯಲ್ಲಿ ರಾಜ್ಯ ಹಿಂದೆ ಉಳಿದಿದೆ. ಮಾರ್ಗಗಳನ್ನು ಬಲಪಡಿಸುವ ಕಾರ್ಯ ಇನ್ನೂ ವೇಗ ಪಡೆದಿಲ್ಲ’ ಎನ್ನುತ್ತಾರೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಯೊಬ್ಬರು. ಇತ್ತೀಚೆಗೆ ಬೆಂಗಳೂರು–ತುಮಕೂರು ಮಾರ್ಗದಲ್ಲಿ ಈ ಕಾರ್ಯ ನಡೆದಿದೆ. ಇಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ರೈಲನ್ನು ಚಲಾಯಿಸಲು ರೈಲು ಸುರಕ್ಷತಾ ಆಯುಕ್ತರು ಅನುಮತಿಯನ್ನೂ ನೀಡಿದ್ದಾರೆ.[೨]
ಇವನ್ನೂ ಗಮನಿಸಿ
[ಬದಲಾಯಿಸಿ]- ಭೋಪಾಲ್ ಶತಾಬ್ದಿ
- ಭೋಪಾಲ್ ಎಕ್ಸ್‌ಪ್ರೆಸ್
- ಭಾರತೀಯ ರೈಲ್ವೆ
- ಭಾರತದ ಅತಿವೇಗದ ರೈಲುಗಳು
- ರಾಜಧಾನಿ ಎಕ್ಸ್‌ಪ್ರೆಸ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳ ಪೂರ್ಣ ಪಟ್ಟಿ Archived 2013-07-23 ವೇಬ್ಯಾಕ್ ಮೆಷಿನ್ ನಲ್ಲಿ.
- ಜನ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳ ಪೂರ್ಣ ಪಟ್ಟಿ
- ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಪೂರ್ಣ ಪಟ್ಟಿ
- ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್‌ನ ವಿಡಿಯೋಗಳು
ಉಲ್ಲೇಖಗಳು
[ಬದಲಾಯಿಸಿ]- ↑ "Business Travel Still On Track". FE Business Travel. Archived from the original on 2008-12-22. Retrieved 2010-10-19.
- ↑ ರಾಜ್ಯದ ರೈಲುಗಳಿಗೂ ಸಿಗಲಿದೆಯೇ ‘ವೇಗ ಭಾಗ್ಯ’?;ಪ್ರವೀಣ್ ಕುಮಾರ್ ಪಿ.ವಿ.;17 Jun, 2017
- Pages using the JsonConfig extension
- All articles with specifically marked weasel-worded phrases
- Articles with specifically marked weasel-worded phrases from April 2010
- Articles with invalid date parameter in template
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಹೆಸರಿಸಲಾದ ಭಾರತದ ಪ್ರಯಾಣಿಕ ರೈಲುಗಳು
- 1988 ಪೀಠಿಕೆಗಳು
- ಭಾರತೀಯ ರೈಲ್ವೆ
- ಸಂಚಾರ ವ್ಯವಸ್ಥೆ
- ರೈಲುಗಳು