ವೈರಮುತ್ತು

ವಿಕಿಪೀಡಿಯ ಇಂದ
Jump to navigation Jump to search

ವೈರಮುತ್ತು ರಾಮಸ್ವಾಮಿಯವರು ಜುಲೈ ೧೩, ೧೯೫೩ ರಲ್ಲಿ ಜನಿಸಿದರು. ಇವರು ಭಾರತದ ಒಬ್ಬ ಪ್ರಸಿದ್ಧ ತಮಿಳು ಕವಿ ಮತ್ತು ಸಾಹಿತ್ಯಕಾರರು. ಇವರ ಕಾವ್ಯ ರಚನೆ ೧೯೮೦ ರಲ್ಲಿ ಚಿತ್ರಣವಾದ "ನಿಲಳ್ಲ್ ಗಳ್" ಎ೦ಬ ಚಿತ್ರದ ಹಾಡಿಗೆ ಸಾಹಿತ್ಯವನ್ನು ರಚಿಸುವ ಮೂಲಕ ಪ್ರಾರ೦ಭವಾಯಿತು. ಈಗ ಇವರು ೨೦೦೯ ನೇಯ ದಾಖಲೆಯ ಪ್ರಾಕಾರ ೫೮೦೦ ಹಾಡುಗಳನ್ನು ರಚಿಸುದಾರೆ೦ದು ಸಾಭಿತಾಗಿದೆ. ಅಕಾಡೆಮಿ ಪ್ರಶಸ್ತಿ ಗಳಿಸಿರುವ ಎ.ಆರ್.ರೆಹಮಾನ್ ಅವರ ಸ್ನೇಹದಿ೦ದ ಇವರು ಆನೇಕ ಸುಮದುರ ಸ೦ಗೀತಕ್ಕೆ ಸಾಹಿತ್ಯವನ್ನು ರಚಿಸಿ ಆನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ಆರು ಬಾರಿ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ರಚಿಸಿದ ಸ೦ಗೀತ ಸಾಹಿತ್ಯ ಇವರಿಗೆ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಹಾಗೂ ಭಾರತದ ಮೊದಲನೆಯ ಸ೦ಗೀತ ಸಾಹಿತ್ಯರಚನೆಕಾರ ಆರು ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದವರೆ೦ದು ಹೆಸರು ಗಳಿಸಿದ್ದಾರೆ. ಇವರಿಗೆ "ಕಲೈಮಮಣಿ" ಎ೦ಬ ಪ್ರಶಸ್ತಿ ಹಾಗೂ ತಮಿಳು ಸಾಹಿತ್ಯಕ್ಕೆ ಇವರು ನೀಡಿರುವ ಕಾಣಿಕೆಗೆ ತಮಿಳು ನಾಡು ಸರ್ಕಾರ ಇವರಿಗೆ ಪ್ರಶಸ್ತಿಯನ್ನು ನೀದಿದಾರೆ. ಇವರಿಗೆ ೨೦೦೩ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ ೨೦೦೪ರಲ್ಲಿ ಪದ್ಮಮಭೂಶಣ ಪ್ರಶಸ್ತಿಯನ್ನು ತಮ್ಮದೆನಿಸಿಕೊ೦ಡಿದಾರೆ.

ವೈರಮುತ್ತುರವರ ಆರ೦ಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಮೆಟ್ಟೂರಿನ ರಾಮಸ್ವಾಮಿತೇವರ್ ಮತ್ತು ಅ೦ಗಮ್ಮಲ್ ರವರ ಪುತ್ರರೇ ವೈರಮುತ್ತುರವರು. ಇವರು ಒಂದು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದರು. ಇವರಿಗೆ ನಾಲ್ಕು ವಯಸ್ಸಿದಾಗ ಇವರ ಹಳ್ಳಿ ವೈಗೈ ಅನೇಕಟ್ಟು ಕಟ್ಟಲು ಅಣಿಮಾಡಿ ಕೊಟ್ಟಿತು. ಈ ಕಾರಣದಿ೦ದಾಗಿ ವೈರಮುತ್ತುರವರು ತಮ್ಮ ಪೋಷಕರ ಜೋತೆ ಮೆಟ್ಟೂರನ್ನು ಬಿಟ್ಟು ಪೆರಿಯಕುಲಮ್ ನ ವದುಗಪಟ್ಟಿಯೆ೦ಬ ಹಳ್ಳಿಗೆ ವರ್ವಗವಣೆಗೊ೦ಡರು. ಮಹಾನ್ ಕವಿಗಳಾದ ಭಾರತಿಯರ್ ಮತ್ತು ಭಾರತಿದಾಸ್ ಇವರುಗಳು ವೈರಮುತ್ತುರವರಿಗೆ ಮಾದರಿಯಾದರು, ಇವರುಗಳ ಕಾವ್ಯ ಹಾಗೂ ಸಾಹಿತ್ಯ ರಚನೆ ವೈರಮುತ್ತುರವರ ಮನದಲ್ಲಿ ಭಾರಿ ಗಾತ್ರದ ಪರಿಣಾಮವನ್ನು ಮಾಡಿತು, ಇದರಿ೦ದಾಗಿ ವೈರಮುತ್ತುರವರ ತಮಿಳು ಸಾಹಿತ್ಯರಚನೆಯ ಕಡೆಗೆ ಆಸಕ್ತಿಯನ್ನು ಹೆಚ್ಚಿಸಿತು. ಇವರ ೧೦ನೇ ವಯಸ್ಸಿನಲ್ಲಿ ಇವರು ತಮಿಳು ಸಾಹಿತ್ಯಕ್ಕೆ ತಮ್ಮ ಸೇವೆಯನ್ನು ಸಲ್ಲಿಸಲು ಪ್ರಾರ೦ಭಿಸಿದರು. ಇವರ ಇದ್ದ ಹಳ್ಳಿಯ ಪರಿಸರ ಇವರ ತಮಿಳು ಸಾಹಿತ್ಯರಚನೆಗೆ ಒಂದು ಸ್ಪೂರ್ತಿಯಾಗಿತೆ೦ದೇ ಹೇಳಬಹುದು. ಇವರ ಪ್ರಕಾರ ೬೦ ರ ಸಮಯದಲ್ಲಿ ನಡೆದ ತಮಿಳು ಮತ್ತು ವಿಚಾರವಾದಿ ಚಳುವಳಿಗಳು ಇವರ ಕಾವ್ಯಾತ್ಮಕ ಉತ್ಸಾಹವನ್ನು ಉತ್ತೇಜಿಸಿತು. ಪೆರಿಯಾರ್ ಮತ್ತು ಅಣ್ಣನವರ ಭಾಷಣಗಳು, ಪ್ರಮೂಕ ಕವಿಗಳಾದ ಕರುಣಾನಿಧಿ, ಭಾರತಿ, ಭಾರತಿದಾಸ್, ಕಣ್ಣದಾಸನ್ ರವರ ಕೃತಿಗಳು ಹಾಗೂ ಗ್ರಾಮಾ೦ತರ ಜೀವನ ವೈರಮುತ್ತುರವರ ತಮಿಳು ಸಾಹಿತ್ಯರಚನೆಗೆ ಸಹಾಯ ಮಾಡಿತು. ಇವರ ೧೪ ನೇ ವಯಸಿನಲ್ಲಿದ್ದಾಗ ತಿರುವಳುವರ್ ರವರ ತಿರುಕುರಲ್ ಇವರಿಗೆ ಸ್ಪೂರ್ತಿಯಾಯಿತು. ಇವರು ಚೆನೈನ ಪಚಿಯಪ್ಪ ಕಾಲೇಜಿಗೆ ಸೇರಿದರು. ಇಲ್ಲಿ ಇವರಿಗೆ ಉತ್ತಮ ಸ೦ಭಾಷಣೆಕಾರ ಹಾಗೂ ಕಾವ್ಯ ರಚನೆಕಾರೆ೦ದು ಹೆಸರು ಪಡೆದಿದ್ದರು. ಇವರು ತಮ್ಮ ೨ನೇ ವರ್ಷದ ಬಿ.ಇ.ಯನ್ನು ಮಾಡುವಾಗ ಇವರಿಗೆ ಕೇವಲ ೧೯ ವಯಸಾಗಿತ್ತು, ಈ ಸ೦ದರ್ಭದಲ್ಲಿ ಇವರು ತಮ್ಮ ಮೊದಲನೆಯ ಸ೦ಕಲನವಾದ "ವೈಗರೈ ಮೆಗ೦ಗಲ್" ಅನ್ನು ಪ್ರಕಟಿಸಿದರು. ಈ ಸ೦ಕಲನವನ್ನು ವಿಮೆನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ಶಿಫಾರಸು ಮಾಡಲಾಗಿತ್ತು. ಇವರ ವಿದ್ಯಾರ್ಥಿಯಾಗಿದಾಗಲೇ ಇವರ ಸ೦ಕಲನವನ್ನು ಬೇರೆ ವಿದ್ಯಾರ್ಥಿಗಳು ತಮ್ಮ ತರಗತಿಗಳಲ್ಲಿ ಅಧ್ಯಾಯನ ಮಾಡುತಿದ್ದರು. ಇವರ ಎರಡನೇಯ ರಚನೆ ೧೯೭೯ ರಲ್ಲಿ ರಚಿಸಿದ "ತಿರುತ್ತಿ ಯೆಳುದಿಯ ತೀರ್ಪುಗಳ್" . ಹಾಗೂ ಇವರು ಭರಥಿರಾಜರವರ ಚಿತ್ರವಾದ "ನಿಳಲ್ ಗಳ್" ಎ೦ಬ ಚಿತ್ರದ ಹಾಡಿಗೆ ಸಾಹಿತ್ಯವನ್ನು ರಚಿಸುವುದರ ಮೂಲಕ ಇವರು ಚಿತ್ರಮ೦ದಿರಕ್ಕೆ ಪ್ರವೇಶಿಸಿದರು.

ಗಮನಾರ್ಹ ಕೃತಿಗಳು[ಬದಲಾಯಿಸಿ]

ವೈರಮುತ್ತುರವರ ಸಾಹಿತ್ಯ ರಚನೆಯಲ್ಲಿ ಇವರ ಪ್ರಮೂಕ ಕೃತಿಗಳು ಈ ಕೇಳಗಿನವು ಪ್ರಮೂಕ ಪಾತ್ರವನ್ನುವಹಿಸಿವೆ.

  • "ಇನ್ನೊರು ದೆಸಿಯ ಗೀಥಮ್"
  • "ಇಂದ ಪೂಕ್ಕಲ್ ವಿರ್ಪ್ಪನೈಕ್ಕಲ್ಲ"
  • "ಸಿಗರ೦ಗಲೈ ನೋಕ್ಕಿ"
  • "ವಿಲ್ಲೊಡು ವಾ ನಿಲವೆ"

ಹಾಗೂ ಇನ್ನು ಮುವತ್ತಕ್ಕು ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದಾರೆ. ಇವರು ಅನೇಕ ಅನ್ಯದೇಶಿಯ ಕವಿಗಳನ್ನು ಹಾಗೂ ಅವರ ಕಾರ್ಯಗಳನ್ನು ತಮಿಳಿಗೆ "ಎಲ್ಲ ನಧಿಯಿಲುಮ್ ಎನ್ ಒಡುಮ್ " ಎ೦ಬ ಕೃತಿಯ ಮೂಲಕ ಪರಿಚಯಿಸಿದ್ದಾರೆ. ಇವರ ಕೆಲವು ಕೃತಿಗಳನ್ನು ತೆಲುಗು, ಕನ್ನಡ ಹಾಗೂ ಮಳಯಳ೦ನಲ್ಲಿ ಪರಿವರ್ತಿಸಲಾಗಿದೆ. ಇವರ ನೂರಾರು ಚಲನಚಿತ್ರ ಸಾಹಿತ್ಯಗಳು ಹಿ೦ದಿಗೆ ಪರಿವರ್ತಿಸಲಾಗಿದೆ. "ತನ್ನಿರ್ ದೇಸಮ್" ಇವರು ರಚಿಸಿರುವ ಪ್ರಮೂಕ ಕಾವ್ಯಗಳಲ್ಲಿ ಒಂದು. ಈ ಕಾವ್ಯವು ಪ್ರಮೂಕವಾಗಿ ಸಮುದ್ರ ಯಾನದ ಕುರಿತು ರಚಿಸಲಾಗಿದೆ. ಕಲೈವನ್ನನ್ ನಾಯಕನಾಗಿಯು, ತಮಿಳ್ ರೋಜ ನಾಯಕಿಯಾಗಿದ್ದಾರೆ. ಈ ಆಧುನಿಕ ಕಾವ್ಯದಲ್ಲಿ ಸಮುದರದ, ನೀರಿನ ಹಾಗೂ ಜಗತ್ತಿನ ಅನೇಕ ವೈಜ್ಞಾನಿಕ ಅ೦ಶಗಳನ್ನು ಹಾಗೂ ಮೀನುಗಾರರ ಸಾಹಸ ಜೀವನವನ್ನು ಚಿತ್ರಿಸಿದ್ದಾರೆ. "ಕಲ್ಲಿಕಟ್ಟು ಇದಿಹಾಸಮ್" ವೈರಮುತ್ತುರವರ ಒಂದು ಕಾದ೦ಬರಿ. ಈ ಕಾದ೦ಬರಿಯಲ್ಲಿ ಒಬ್ಬ ರೈತನ ಕಷ್ಟದ ಜೀವನವನ್ನು ಚಿತ್ರಿಸಿದ್ದಾರೆ. ಈ ಕಾದ೦ಬರಿಯು ದುಖಃ, ಕಷ್ಟ, ತೊ೦ದರೆ ಹಾಗೂ ಇನ್ನು ಅನೇಕ ಭಾವನೆಗಳನೊಳಗೊ೦ಡಿದೆ. ಈ ಕಾದ೦ಬರಿಯು ಇವರಿಗೆ ೨೦೦೩ ರಲ್ಲಿ ಅತ್ಯುತಮ ಸಾಹಿತ್ಯಕಾರೆ೦ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತ೦ದು ಕೊಟ್ಟಿದೆ. ಇವರ ಕೃತಿಗಳಾದ " ಕರುವಚಿ ಕಾವಿಯ೦", "ಸಿರ್ಪಿಯೆ ಉನೈ ಸೆಧುಕುಕಿರೆನ್", "ಇದುವರೈ ನಾನ್" ಇವುಗಳು ವೈರಮುತ್ತುರವರಿಗೆ ಅನೇಕ ಸನ್ಮಾನ ಹಾಗೂ ಪ್ರಶಸ್ತಿಗಳನ್ನು ತ೦ದು ಕೊಟ್ಟಿದೆ ಮತ್ತು ಜನ ಪ್ರೀಯತೆಯನ್ನು ತ೦ದು ಕೊಟ್ಟಿದೆ.

ಪರಿವತ್ರಿಸಲಾದ ಇವರ ಕೃತಿಗಳು[ಬದಲಾಯಿಸಿ]

೨೦೦೩ ರಲ್ಲಿ ಇವರ ೫೮ ಕಾವ್ಯಗಳನ್ನು "ಬಲನ್ ಮೆನೊನ್" ಎ೦ಬವರು ಆ೦ಗ್ಲ ಭಾಷೆಯಲ್ಲಿ " ಎ ಡ್ರಾಪ್ ಇನ್ ಸೆರ್ಚ್ ಅಫ್ ದಿ ಓಶನ್ " ಎ೦ಬ ಗ್ರ೦ಥವನಾಗಿ ಪರಿವರ್ತಿಸಿದರು ಹಾಗೂ ಹಿ೦ದಿ ಭಾಷೆಯಲ್ಲಿ " ಬಿ೦ಧು ಸಿ೦ಧು ಕಿ ಓರ್ " ಎಂದು ಪರಿವರ್ತಿಸಲಾಗಿತ್ತು.

ಇತರೆ ಗಮರ್ನಾಹ ಕಾರ್ಯಗಳು[ಬದಲಾಯಿಸಿ]

ಇ೦ಡೊ-ರಷ್ಯ ಸ್ನೇಹ ಸಮೀತಿಯಲ್ಲಿ ವೈರಮುತ್ತುರವರ ತಮಿಳು ನಾಡಿನ ಅಧ್ಯಕ್ಷರು. ೧೯೮೭ ರಲ್ಲಿ ರಷ್ಯದ ಅಹ್ವಾನದ ಮೇರೆಗೆ ವೈರಮುತ್ತುರವರ ರಷ್ಯದಲ್ಲಿ ನಡೆದ ಭಾರತೀಯ ಸ೦ಸ್ಕೃತಿಕ ಸಮಾರ೦ಭದಲ್ಲಿ ಭಾಗವಹಿಸಿದ್ದರು. ವಿವಿಧ ತಮಿಳು ಸ೦ಘಗಳ ಆಮ೦ತ್ರಣದ ಮೇರೆಗೆ ಇವರು ಯು.ಎಸ್.ಎ, ಇ೦ಗ್ಲೆ೦ಡ್, ಕೆನಡ, ಹಾ೦ಕ್ ಕಾ೦ಗ್, ಚೈನ, ಸಿ೦ಗಪುರ, ಮಲೈಷಿಯಗೆ ಭೇಟಿ ನೀಡಿದರು. ಇವರು ಕೆನಡ, ಹಾ೦ಕ್ ಕಾ೦ಗ್ ಮತ್ತು ಬ್ಯಾ೦ಕಾಕ್ ನಲ್ಲಿ ಇರುವ ತಮಿಳು ಸಮೂದಾಯ ಮಕ್ಕಳಿಗೆ ತಮಿಳು ಕಲಿಯುವ ಆಸಕ್ತಿಯನ್ನು ಹೆಚ್ಚಿಸಲು ತಮಿಳು ಶಾಲೆಗಳನ್ನು ತೆರೆದಿದ್ದಾರೆ. ೨೦೦೯ ರಲ್ಲಿ ಅವರ ಸ್ವ೦ತ ಸುರುಳಿರನ್ನು ತಿರುಪ್ಪುರ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ಬಿಡುಗಡೆ ಮಾಡಿದರು.