ವೃಷಕೇತು
ಗೋಚರ
ವೃಷಕೇತು | |
---|---|
ಮಾಹಿತಿ | |
ಲಿಂಗ | ಪುರುಷ |
ಕುಟುಂಬ | ಯವನಂತನ ಮಗಳು (ಹೆಂಡತಿ) |
ವೃಷಕೇತು ಹಿಂದೂ ಸಂಸ್ಕೃತ ಮಹಾಕಾವ್ಯವಾದ ಮಹಾಭಾರತದಲ್ಲಿ ಕಂಡುಬರುವ ಒಂದು ಪಾತ್ರ. ಅವನು ಕರ್ಣ ಮತ್ತು ವೃಶಾಲಿಯ ಮಗ ಮತ್ತು ಕರ್ಣನ ಮಕ್ಕಳಲ್ಲಿ ಅವನೇ ಕಿರಿಯ ಮಗ. ಕುರುಕ್ಷೇತ್ರ ಯುದ್ಧದ ಘಟನೆಗಳ ನಂತರ ಅರ್ಜುನನು ವೃಷಕೇತುವಿಗೆ ತರಬೇತಿ ನೀಡುತ್ತಾನೆ ನಂತರ ಅವನನ್ನು ಅಂಗದ ರಾಜನನ್ನಾಗಿ ಮಾಡುತ್ತಾನೆ.
ದಂತಕಥೆ
[ಬದಲಾಯಿಸಿ]ವೃಷಕೇತು ಕರ್ಣನ ಕಿರಿಯ ಮಗನಾಗಿದ್ದನು. ಆತ ಕುರುಕ್ಷೇತ್ರ ಯುದ್ಧದಲ್ಲಿ ಬದುಕುಳಿದ ಕರ್ಣನ ಏಕೈಕ ಪುತ್ರನಾಗಿದ್ದನು. ಕುಂತಿಯ ಹಿರಿಯ ಮಗನೆಂಬ ಕರ್ಣನ ಗುರುತನ್ನು ಬಹಿರಂಗಪಡಿಸಿದ ನಂತರ ಅವನು ಪಾಂಡವರ ಆಶ್ರಯದಲ್ಲಿ ಬೆಳೆದು ಅಂಗ ರಾಜ್ಯವನ್ನು ಪಡೆದನು. ಯುಧಿಷ್ಠಿರ ಅಶ್ವಮೇಧ ಯಜ್ಞದ ಮೊದಲು ಅವನು ಹಲವಾರು ರಾಜರ ವಿರುದ್ಧ ಅರ್ಜುನನ ಯುದ್ಧಗಳಲ್ಲಿ ಭಾಗವಹಿಸಿದನು.[೧] ವೃಷಕೇತು ಯುಧಿಷ್ಠಿರನ ಅಶ್ವಮೇಧ ಯಜ್ಞದಲ್ಲಿ ಸಕ್ರಿಯವಾಗಿ ಭಾಗವಹಿಸಿ ಚಂದ್ರವಂಶ ರಾಜನಾದ ಅನುಶಲವನನ್ನು ಸೆರೆಹಿಡಿದನು.[೨]
ಉಲ್ಲೇಖಗಳು
[ಬದಲಾಯಿಸಿ]- ↑ Himanshu Agarwal, 2016, Mahabharata Retold: Part - 1, Notion Press.
- ↑ Garg, Gaṅgā Rām (1992). Encyclopaedia of the Hindu World (in ಇಂಗ್ಲಿಷ್). Concept Publishing Company. p. 528. ISBN 978-81-7022-375-7.