ವಿಷಯಕ್ಕೆ ಹೋಗು

ವಿಪತ್ತು ಸನ್ನದ್ಧತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುರ್ತುಸ್ಥಿತಿ ನಿರ್ವಹಣೆ ಎಂಬುದು, ಸಂಸ್ಥೆಯ ಕಾರ್ಯತಂತ್ರದ ನಿರ್ವಹಣಾ ಪ್ರಕ್ರಿಯೆಗಳೊಂದಿಗೆ ವ್ಯವಹರಿಸುವ ಅಂತರಶಾಸ್ತ್ರೀಯ ಕ್ಷೇತ್ರವೊಂದರ ಸಾರ್ವತ್ರಿಕ ಹೆಸರಾಗಿದೆ. ವಿಪತ್ತುಗಳು ಅಥವಾ ದುರ್ಘಟನೆಗಳನ್ನು ಉಂಟುಮಾಡಬಲ್ಲ ಹಾನಿಯ ಅಪಾಯಗಳಿಂದ ಸಂಘಟನೆ/ಸಂಸ್ಥೆಯೊಂದರ ನಿರ್ಣಾಯಕ ಸ್ವತ್ತುಗಳನ್ನು ಸಂರಕ್ಷಿಸಲೆಂದು, ಮತ್ತು ಅವುಗಳ ಯೋಜಿತ ಜೀವಿತಾವಧಿಯೊಳಗೆ ಅವುಗಳ ನಿರಂತರತೆಯನ್ನು ಖಾತ್ರಿಪಡಿಸಲೆಂದು ಈ ಪ್ರಕ್ರಿಯೆಗಳನ್ನು ಬಳಸಲಾಗುತ್ತದೆ.[] ಸ್ವತ್ತುಗಳು ಒಂದೋ ಸಜೀವ ವಸ್ತುಗಳಾಗಿ, ನಿರ್ಜೀವ ವಸ್ತುಗಳಾಗಿ, ಸಾಂಸ್ಕೃತಿಕ ಅಥವಾ ಆರ್ಥಿಕ ವಸ್ತುಗಳಾಗಿ ವರ್ಗೀಕರಿಸಲ್ಪಡುತ್ತವೆ. ಅಪಾಯಗಳನ್ನು ಅವುಗಳ ಪರಿಣಾಮದ ಆಧಾರದ ಮೇಲೆ ಸ್ವಾಭಾವಿಕ ಅಥವಾ ಮಾನವ-ನಿರ್ಮಿತ ಎಂಬುದಾಗಿ ವರ್ಗೀಕರಿಸಲಾಗುತ್ತದೆ. ಪ್ರಕ್ರಿಯೆಗಳ ಗುರುತಿಸುವಿಕೆಯಲ್ಲಿ ನೆರವಾಗಲೆಂದು ಸಮಗ್ರ ಕಾರ್ಯತಂತ್ರದ ನಿರ್ವಹಣಾ ಪ್ರಕ್ರಿಯೆಯನ್ನು ನಾಲ್ಕು ಕ್ಷೇತ್ರಗಳಾಗಿ ವಿಭಜಿಸಲಾಗಿದೆ. ಅಪಾಯವನ್ನು ತಗ್ಗಿಸುವುದು, ಅಪಾಯಕ್ಕೆ ಪ್ರತಿಕ್ರಿಯಿಸುವುದಕ್ಕಾಗಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವುದು, ಅಪಾಯದಿಂದ ಉಂಟಾದ ವಾಸ್ತವಿಕ ಹಾನಿಗೆ ಪ್ರತಿಕ್ರಿಯಿಸುವುದು ಮತ್ತು ಮತ್ತಷ್ಟು ಹಾನಿಯಾಗದಂತೆ ಸೀಮಿತಗೊಳಿಸುವುದು (ಉದಾಹರಣೆಗೆ, ತುರ್ತುಸ್ಥಿತಿ ಸ್ಥಳಾಂತರಿಸುವಿಕೆ, ಸಂಪರ್ಕ ನಿಷೇಧ, ಸಾಮೂಹಿಕ ನಿರ್ಮಲೀಕರಣ, ಇತ್ಯಾದಿ), ಹಾಗೂ ಅಪಾಯದ ಘಟನೆಯು ಸಂಭವಿಸುವುದಕ್ಕೆ ಮುಂಚಿತವಾಗಿದ್ದ ಸ್ಥಿತಿಗೆ ಎಷ್ಟು ಸಾಧ್ಯವೋ ಅಷ್ಟು ನಿಕಟವಾಗಿ ಮರಳುವುದು ಇವೇ ಮೊದಲಾದವುಗಳೊಂದಿಗೆ ಈ ನಾಲ್ಕು ಕ್ಷೇತ್ರಗಳು ಸಾಮಾನ್ಯವಾಗಿ ವ್ಯವಹರಿಸುತ್ತವೆ. ಒಂದೇ ರೀತಿಯ ಪ್ರಕ್ರಿಯೆಗಳನ್ನು ಹಂಚಿಕೊಳ್ಳುವ ಮೂಲಕ ಸಾರ್ವಜನಿಕ ಮತ್ತು ಖಾಸಗಿ ವಲಯಗಳೆರಡರಲ್ಲೂ ಸದರಿ ಕ್ಷೇತ್ರವು ಕಂಡುಬರುತ್ತದೆಯಾದರೂ, ಅದು ವಿಭಿನ್ನ ಗಮನಗಳನ್ನು ಹೊಂದಿರುತ್ತದೆ ಎಂದು ಹೇಳಬಹುದು. ತುರ್ತುಸ್ಥಿತಿ ನಿರ್ವಹಣೆ ಎಂಬುದು ಒಂದು ಕಾರ್ಯತಂತ್ರದ ಪ್ರಕ್ರಿಯೆಯೇ ಹೊರತು, ಯುದ್ಧತಂತ್ರದ ಪ್ರಕ್ರಿಯೆಯಲ್ಲ; ಹೀಗಾಗಿ ಇದು ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಣಾಧಿಕಾರಿಯ ಮಟ್ಟ ದಲ್ಲಿ ಸಾಮಾನ್ಯವಾಗಿ ಉಳಿದುಕೊಳ್ಳುತ್ತದೆ. ಸಾಮಾನ್ಯವಾಗಿ ಇದು ನೇರ ಅಧಿಕಾರವನ್ನು ಹೊಂದಿಲ್ಲವಾದರೂ, ಸಾಮಾನ್ಯ ಗುರಿಯೊಂದನ್ನು ಪರಿಗಣನೆಯಲ್ಲಿಟ್ಟುಕೊಂಡು ಸಂಸ್ಥೆಯೊಂದರ ಎಲ್ಲಾ ಭಾಗಗಳ ಮೇಲೂ ಗಮನ ಹರಿಸಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸುವುದಕ್ಕೆ ಸಂಬಂಧಿಸಿದ ಒಂದು ಸಲಹೆ ನೀಡುವ ಅಥವಾ ಸುಸಂಘಟಿತವಾಗಿಸುವ ಚಟುವಟಿಕೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯ ಎಲ್ಲಾ ಮಟ್ಟಗಳಲ್ಲಿ ತುರ್ತುಸ್ಥಿತಿ ಯೋಜನೆಗಳ ಒಂದು ಸಂಪೂರ್ಣವಾದ ಸಮನ್ವಯವಾಗುವುದರ ಮೇಲೆ ತುರ್ತುಸ್ಥಿತಿಯ ಪರಿಣಾಮಕಾರಿ ನಿರ್ವಹಣೆಯು ನೆಚ್ಚಿಕೊಳ್ಳುತ್ತದೆ; ಅಷ್ಟೇ ಅಲ್ಲ, ತುರ್ತುಸ್ಥಿತಿಯನ್ನು ನಿರ್ವಹಿಸುವುದಕ್ಕೆ ಹೊಣೆಗಾರರಾಗಿರುತ್ತವೆ ಹಾಗೂ ಮೇಲಿನ ಮಟ್ಟಗಳಿಂದ ಸಂಪನ್ಮೂಲಗಳು ಮತ್ತು ನೆರವನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಅತಿ ಕೆಳಗಿನ ಮಟ್ಟಗಳು ಹೊಣೆಗಾರರಾಗಿರುತ್ತವೆ.

ಕಾರ್ಯಸೂಚಿಯನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಯಲ್ಲಿನ ಅತ್ಯಂತ ಹಿರಿಯ ವ್ಯಕ್ತಿಯನ್ನು ಓರ್ವ ತುರ್ತುಸ್ಥಿತಿ ನಿರ್ವಾಹಕ ಎಂಬುದಾಗಿ ಸಾಮಾನ್ಯವಾಗಿ ಕರೆಯಲಾಗುತ್ತದೆ; ಅಥವಾ ಸದರಿ ಕ್ಷೇತ್ರದಲ್ಲಿ ಬಳಸಲಾಗುವ ಪರಿಭಾಷೆಯನ್ನು ಆಧರಿಸಿ ಒಂದು ಜನ್ಯ ಸ್ವರೂಪದಿಂದ (ಉದಾಹರಣೆಗೆ, ವ್ಯವಹಾರ ನಿರಂತರತೆಯ ನಿರ್ವಾಹಕ) ಆತನನ್ನು ಉಲ್ಲೇಖಿಸಲಾಗುತ್ತದೆ.

ಈ ಅರ್ಥ ನಿರೂಪಣೆಯ ಅಡಿಯಲ್ಲಿ ಬರುವ ಕ್ಷೇತ್ರಗಳಲ್ಲಿ ಇವು ಸೇರಿವೆ:

  • ನಾಗರಿಕ ರಕ್ಷಣೆ (ಪರಮಾಣು ದಾಳಿಯಿಂದ ಪಡೆಯುವ ಸಂರಕ್ಷಣೆಯ ಮೇಲೆ ಗಮನ ಹರಿಸುವ ಇದನ್ನು, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಶೀತಲ ಸಮರದ ಅವಧಿಯಲ್ಲಿ ಬಳಸಲಾಯಿತು)
  • ನಾಗರಿಕ ಸಂರಕ್ಷಣೆ (ಐರೋಪ್ಯ ಒಕ್ಕೂಟದೊಂದಿಗೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ)
  • ಬಿಕ್ಕಟ್ಟು ನಿರ್ವಹಣೆ (ನಾಗರಿಕರ ಸಮುದಾಯದ ತತ್‌ಕ್ಷಣದ ಅಗತ್ಯಗಳನ್ನು ನೆರವೇರಿಸುವ ಕ್ರಮಕ್ಕಿಂತ ಹೆಚ್ಚಾಗಿ ರಾಜತಾಂತ್ರಿಕ ಮತ್ತು ಭದ್ರತಾ ಆಯಾಮಕ್ಕೆ ಇದು ಒತ್ತು ನೀಡುತ್ತದೆ. ) []
  • ವಿಪತ್ತು ಅಪಾಯ ತಗ್ಗಿಸುವಿಕೆ (ತುರ್ತುಸ್ಥಿತಿ ಚಕ್ರದ ತಗ್ಗಿಸುವಿಕೆ ಮತ್ತು ಸನ್ನದ್ಧತೆಯ ಮಗ್ಗುಲುಗಳ ಮೇಲಿನ ಗಮನ.) (ಕೆಳಗೆ ನೀಡಿರುವ ಸನ್ನದ್ಧತೆಯನ್ನು ನೋಡಿ)
  • ಸ್ವದೇಶ ಭದ್ರತೆ (ಭಯೋತ್ಪಾದನೆಯ ತಡೆಗಟ್ಟುವಿಕೆಯ ಮೇಲೆ ಗಮನ ಹರಿಸುವ ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಬಳಸಲಾಗುತ್ತದೆ. )
  • ವ್ಯವಹಾರದ ನಿರಂತರತೆ ಮತ್ತು ವ್ಯವಹಾರದ ನಿರಂತರತೆಯ ಯೋಜಿಸುವಿಕೆ (ಆದಾಯದ ಒಂದು ನಿರಂತರ ಊರ್ಧ್ವಗಾಮಿ ಪ್ರವೃತ್ತಿಯನ್ನು ಖಾತ್ರಿಪಡಿಸುವ ಕುರಿತು ಇದು ಗಮನ ಹರಿಸುತ್ತದೆ. )
  • ಸರ್ಕಾರದ ನಿರಂತರತೆ

ಹಂತಗಳು ಮತ್ತು ವೃತ್ತಿಪರ ಚಟುವಟಿಕೆಗಳು

[ಬದಲಾಯಿಸಿ]

ಸ್ಥಳೀಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಮೇಲೆ ನಿರ್ವಹಣೆಯ ಸ್ವರೂಪವು ಅವಲಂಬಿಸುತ್ತದೆ. ಒಂದು ದೃಷ್ಟಿಯಿಂದ ನೋಡಿದರೆ, ಆರ್ಥಿಕ ವಿಪತ್ತುಗಳು ಏಕೈಕ ನಿಜವಾದ ವಿಪತ್ತುಗಳಾಗಿವೆ ಎಂಬುದಾಗಿ ಫ್ರೆಡ್‌ ಕ್ಯೂನಿಯಂಥ ಕೆಲವೊಂದು ವಿಪತ್ತು ಪರಿಹಾರ ಪರಿಣಿತರು ಉಲ್ಲೇಖಿಸಿದ್ದಾರೆ.[] ಮೂಲಸೌಕರ್ಯ, ಸಾರ್ವಜನಿಕ ಅರಿವು, ಮತ್ತು ಮಾನವ ನ್ಯಾಯದ ವಿವಾದಾಂಶಗಳ ಕುರಿತಾದ ದೀರ್ಘಾವಧಿಯ ಕಾರ್ಯವನ್ನು ತುರ್ತುಸ್ಥಿತಿ ನಿರ್ವಹಣಾ ಚಕ್ರವು ಒಳಗೊಂಡಿರಬೇಕಾಗುತ್ತದೆ ಎಂಬುದಾಗಿ ಕ್ಯೂನಿಯಂಥ ಪರಿಣಿತರು ಬಹಳ ಹಿಂದೆಯೇ ಉಲ್ಲೇಖಿಸಿದ್ದಾರೆ. ತುರ್ತುಸ್ಥಿತಿ ನಿರ್ವಹಣೆಯ ಪ್ರಕ್ರಿಯೆಯು ನಾಲ್ಕು ಹಂತಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ: ತಗ್ಗಿಸುವಿಕೆ, ಸನ್ನದ್ಧತೆ, ಪ್ರತಿಕ್ರಿಯೆ, ಮತ್ತು ಚೇತರಿಕೆ.

ತುರ್ತುಸ್ಥಿತಿ ನಿರ್ವಹಣೆಯಲ್ಲಿನ ನಾಲ್ಕು ಹಂತಗಳ ಒಂದು ರೇಖಾಚಿತ್ರದ ಪ್ರತಿರೂಪ

ಸ್ವದೇಶ ಭದ್ರತೆಯ ಇಲಾಖೆ ಮತ್ತು FEMAಗಳು "ಚೇತರಿಸಿಕೊಳ್ಳುವಿಕೆ" ಮತ್ತು "ತಡೆಯುವಿಕೆ"ಯಂಥ ಪರಿಭಾಷೆಗಳನ್ನು EMನ ಮಾದರಿಯ ಒಂದು ಭಾಗವಾಗಿ ಇತ್ತೀಚೆಗಷ್ಟೇ ಅಳವಡಿಸಿಕೊಂಡಿವೆ. 'ತಡೆಯುವಿಕೆ' ಎಂಬ ಪರಿಭಾಷೆಯನ್ನು 2006ರ ಅಕ್ಟೋಬರ್‌ನಲ್ಲಿ ಕಾಯಿದೆಯಾಗಿ 2006ರ PKEMA ಆದೇಶಿಸಿತು ಮತ್ತು 2007ರ ಮಾರ್ಚ್‌ 31ರಂದು ಇದು ಶಾಸನವಾಗಿ ಜಾರಿಗೆ ಬಂದಿತು. ಈ ಎರಡು ಪರಿಭಾಷೆಗಳ ಅರ್ಥ ನಿರೂಪಣೆಗಳು ಪ್ರತ್ಯೇಕ ಹಂತಗಳಾಗಿ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ಅರ್ಥ ವಿವರಣೆಯ ಅನುಸಾರವಾಗಿ ಹೇಳುವುದಾದರೆ, ತಡೆಯುವಿಕೆ ಎಂಬುದು 100% ತಗ್ಗಿಸುವಿಕೆಯಾಗಿದೆ.[] ನಾಲ್ಕು ಹಂತಗಳ ಗುರಿಯನ್ನು ಚೇತರಿಸಿಕೊಳ್ಳುವಿಕೆಯು ವಿವರಿಸುತ್ತದೆ: ಇದು ದುರ್ಘಟನೆ ಅಥವಾ ಬದಲಾವಣೆಯಿಂದ[] ಚೇತರಿಸಿಕೊಳ್ಳುವಲ್ಲಿನ ಅಥವಾ ಅದರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವಲ್ಲಿನ ಒಂದು ಸಾಮರ್ಥ್ಯವಾಗಿರುತ್ತದೆ.

ತಗ್ಗಿಸುವಿಕೆ

[ಬದಲಾಯಿಸಿ]

ಅಪಾಯಗಳು ಒಟ್ಟಾರೆಯಾಗಿ ವಿಪತ್ತುಗಳಾಗಿ ಬೆಳೆಯದಂತೆ ತಡೆಗಟ್ಟಲು ತಗ್ಗಿಸುವಿಕೆಯ ಪ್ರಯತ್ನಗಳು ಪ್ರಯತ್ನಿಸುತ್ತವೆ, ಅಥವಾ ವಿಪತ್ತುಗಳ ಸಂಭವಿಸಿದಾಗ ಅವುಗಳ ಪ್ರಭಾವಗಳನ್ನು ತಗ್ಗಿಸಲು ಅವು ಪ್ರಯತ್ನಿಸುತ್ತವೆ. ಅಪಾಯದ ತಗ್ಗಿಸುವಿಕೆ ಅಥವಾ ನಿರ್ಮೂಲಗೊಳಿಸುವಿಕೆಗೆ ಸಂಬಂಧಿಸಿದ ದೀರ್ಘಾವಧಿಯ ಕ್ರಮಗಳ ಕುರಿತಾಗಿ ತಗ್ಗಿಸುವಿಕೆಯ ಹಂತವು ಗಮನಹರಿಸುವುದರಿಂದ, ಈ ಹಂತವು ಇತರ ಹಂತಗಳಿಗಿಂತ ಭಿನ್ನವಾಗಿರುತ್ತದೆ.[] ಒಂದು ವಿಪತ್ತು ಸಂಭವಿಸಿದ ನಂತರ ತಗ್ಗಿಸುವಿಕೆಯ ಕಾರ್ಯತಂತ್ರಗಳನ್ನು ಪ್ರಯೋಗಿಸಿದ್ದೇ ಆದಲ್ಲಿ, ಅವನ್ನು ಕಾರ್ಯರೂಪಕ್ಕೆ ತರುವುದನ್ನು ಚೇತರಿಕೆಯ ಪ್ರಕ್ರಿಯೆಯ ಒಂದು ಭಾಗವಾಗಿ ಪಡಿಗಣಿಸಬಹುದು.[] ಉಪಶಾಮಕ ಕ್ರಮಗಳು ರಾಚನಿಕ ಸ್ವರೂಪವನ್ನು ಹೊಂದಿರಬಹುದು ಅಥವಾ ರಾಚನಿಕವಲ್ಲದ ಸ್ವರೂಪವನ್ನು ಹೊಂದಿರಬಹುದು. ಪ್ರವಾಹ ತಡೆಗಳಂಥ ತಾಂತ್ರಿಕ ಪರಿಹಾರೋಪಾಯಗಳನ್ನು ರಾಚನಿಕ ಕ್ರಮಗಳು ಬಳಸಿಕೊಳ್ಳುತ್ತವೆ. ರಾಚನಿಕವಲ್ಲದ ಕ್ರಮಗಳಲ್ಲಿ ಶಾಸನ ರಚನೆ, ಭೂ-ಬಳಕೆಯನ್ನು ಯೋಜಿಸುವಿಕೆ (ಉದಾಹರಣೆಗೆ, ಉದ್ಯಾನವನಗಳಂಥ ಅನಾವಶ್ಯಕವಾದ ಭೂಮಿಯನ್ನು ಪ್ರವಾಹ ವಲಯಗಳಾಗಿ ಬಳಸುವಂತೆ ನಿಯೋಜಿಸುವುದು), ಮತ್ತು ವಿಮೆ ಮೊದಲಾದವು ಸೇರಿವೆ.[] ಅಪಾಯಗಳ ಪ್ರಭಾವವನ್ನು ತಗ್ಗಿಸುವುದಕ್ಕೆ ಸಂಬಂಧಿಸಿದಂತೆ ತಗ್ಗಿಸುವಿಕೆಯು ಅತ್ಯಂತ ವೆಚ್ಚ-ಪರಿಣಾಮಶೀಲ ವಿಧಾನವಾಗಿದೆಯಾದರೂ, ಇದು ಎಲ್ಲ ಸಮಯಗಳಲ್ಲೂ ಹೊಂದಿಕೊಳ್ಳುವುದಿಲ್ಲ. ಸ್ಥಳಾಂತರಿಸುವಿಕೆ, ಕಟ್ಟುಪಾಡುಗಳನ್ನು ಪಾಲಿಸಲು (ಕಡ್ಡಾಯದ ಸ್ಥಳಾಂತರಿಸುವಿಕೆಗಳಂಥವು) ನಿರಾಕರಿಸುವವರ ವಿರುದ್ಧದ ನಿರ್ಬಂಧಗಳು, ಮತ್ತು ಸಂಭಾವ್ಯ ಅಪಾಯಗಳ ಕುರಿತಾಗಿ ಸಾರ್ವಜನಿಕರೊಂದಿಗೆ ಸಂವಹನೆ ನಡೆಸುವುದು ಇವುಗಳಿಗೆ ಸಂಬಂಧಿಸಿದಂತಿರುವ ಕಟ್ಟುಪಾಡುಗಳನ್ನು ಒದಗಿಸುವುದು ತಗ್ಗಿಸುವಿಕೆಯಲ್ಲಿ ಸೇರಿರುವುದಿಲ್ಲ.[] ಕೆಲವೊಂದು ರಾಚನಿಕ ಸ್ವರೂಪದ ತಗ್ಗಿಸುವಿಕೆಯ ಕ್ರಮಗಳು ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪ್ರಭಾವಗಳನ್ನು ಹೊಂದಿರಬಹುದು.

ಅಪಾಯಗಳ ಗುರುತಿಸುವಿಕೆಯು ತಗ್ಗಿಸುವಿಕೆಗೆ ಸಂಬಂಧಿಸಿದ ಒಂದು ಪೂರ್ವವರ್ತಿ ಚಟುವಟಿಕೆಯಾಗಿದೆ. ಅಪಾಯಗಳನ್ನು ಗುರುತಿಸುವ ಮತ್ತು ಮೌಲ್ಯಮಾಪನ ಮಾಡುವ ಪ್ರಕ್ರಿಯೆಗೆ ಭೌತಿಕವಾಗಿ ಅಪಾಯವನ್ನು ಅಳೆಯುವಿಕೆ ಎಂದು ಉಲ್ಲೇಖಿಸಲಾಗುತ್ತದೆ.[] ಹಾನಿ-ಉದ್ದೇಶಿತ ಅಪಾಯವು (), ನಿರ್ದಿಷ್ಟ ಅಪಾಯವೊಂದರ ಸಂಭವನೀಯತೆ ಮತ್ತು ಪ್ರಭಾವದ ಮಟ್ಟ ಈ ಎರಡನ್ನೂ ಸಂಯೋಜಿಸುತ್ತದೆ. ಅಪಾಯವನ್ನು ಅದಕ್ಕೆ ಸಂಬಂಧಿಸಿದ ಸಮುದಾಯಗಳ ಈಡಾಗುವಿಕೆಯಿಂದ ಗುಣಿಸಿದಾಗ ಬರುವ ಉತ್ಪನ್ನವು ಒಂದು ಅಪಾಯದ ದುರ್ಘಟನಾ ಮಾದರಿಯ ನಿರೂಪಣೆಯಾಗಿರುತ್ತದೆ ಎಂಬುದಾಗಿ ಈ ಕೆಳಗೆ ತೋರಿಸಿರುವ ಸಮೀಕರಣವು ಹೇಳುತ್ತದೆ. ಅಪಾಯವು ಉನ್ನತವಾದಷ್ಟೂ, ಹಾನಿ-ಉದ್ದೇಶಿತ ಈಡಾಗುವಿಕೆಗಳು ತಗ್ಗಿಸುವಿಕೆ ಮತ್ತು ಸನ್ನದ್ಧತೆ ಪ್ರಯತ್ನಗಳಿಗೆ ಗುರಿಯಾಗುವ ರೀತಿಯೂ ತುರ್ತಾಗಿರುತ್ತದೆ. ಆದಾಗ್ಯೂ, ಅಲ್ಲಿ ಒಂದು ವೇಳೆ ಈಡಾಗುವಿಕೆಯು ಇಲ್ಲದಿದ್ದಲ್ಲಿ ಅಲ್ಲಿ ಅಪಾಯವಿರುವುದಿಲ್ಲ; ಯಾರೂ ವಾಸಿಸದ ಮರುಭೂಮಿಯೊಂದರಲ್ಲಿ ಸಂಭವಿಸುವ ಒಂದು ಭೂಕಂಪವು ಇದಕ್ಕೆ ಉದಾಹರಣೆಗೆಯಾಗಿದೆ.

ಸನ್ನದ್ಧತೆ

[ಬದಲಾಯಿಸಿ]

ಸನ್ನದ್ಧತೆ ಎಂಬುದು ಯೋಜಿಸುವಿಕೆ, ಸಂಘಟಿಸುವಿಕೆ, ತರಬೇತಿ ನೀಡುವಿಕೆ, ಸಜ್ಜುಗೊಳಿಸುವಿಕೆ, ಆಚರಣೆಗೆ ತರುವಿಕೆ, ಮೌಲ್ಯಮಾಪನ ಮತ್ತು ಸುಧಾರಣೆ ಚಟುವಟಿಕೆಗಳ ಒಂದು ನಿರಂತರ ಚಕ್ರವಾಗಿದೆ; ಸ್ವಾಭಾವಿಕ ವಿಪತ್ತುಗಳು, ಭಯೋತ್ಪಾದನಾ ಕೃತ್ಯಗಳು, ಮತ್ತು ಇತರ ಮನುಷ್ಯ-ನಿರ್ಮಿತ ವಿಪತ್ತುಗಳ ಪ್ರಭಾವಗಳನ್ನು ತಡೆಗಟ್ಟಲು, ಅವುಗಳಿಂದ ಸಂರಕ್ಷಿಸಲು, ಅವುಗಳಿಗೆ ಪ್ರತಿಕ್ರಿಯಿಸಲು, ಅವುಗಳಿಂದ ಚೇತರಿಸಿಕೊಳ್ಳಲು ಮತ್ತು ಅವುಗಳನ್ನು ತಗ್ಗಿಸಲು ಇರುವ ಸಾಮರ್ಥ್ಯಗಳ ಪರಿಣಾಮಕಾರಿ ಹೊಂದಾಣಿಕೆ ಮತ್ತು ವರ್ಧನೆಯನ್ನು ಖಾತ್ರಿಪಡಿಸುವುದು ಮೇಲಿನ ಎಲ್ಲಾ ಚಟುವಟಿಕೆಗಳ ಉದ್ದೇಶವಾಗಿರುತ್ತದೆ.[]

ಸನ್ನದ್ಧತೆಯ ಹಂತದಲ್ಲಿ, ಅವುಗಳ ಅಪಾಯಗಳನ್ನು ನಿರ್ವಹಿಸುವುದಕ್ಕೆ ಮತ್ತು ಎದುರಿಸುವುದಕ್ಕೆ ಬೇಕಿರುವ ಕ್ರಮದ ಯೋಜನೆಗಳನ್ನು ತುರ್ತುಸ್ಥಿತಿಯ ನಿರ್ವಾಹಕರು ಅಭಿವೃದ್ಧಿಪಡಿಸುತ್ತಾರೆ ಹಾಗೂ ಇಂಥ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಗತ್ಯವಿರುವ ಅವಶ್ಯಕ ಸಾಮರ್ಥ್ಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುತ್ತಾರೆ. ಸಾಮಾನ್ಯ ಸನ್ನದ್ಧತಾ ಕ್ರಮಗಳಲ್ಲಿ ಇವು ಸೇರಿವೆ:

  • ಸುಲಭವಾಗಿ ಅರ್ಥವಾಗುವ ಪರಿಭಾಷೆ ಮತ್ತು ವಿಧಾನಗಳನ್ನು ಹೊಂದಿರುವ ಸಂವಹನಾ ಯೋಜನೆಗಳು.
  • ಕಮ್ಯುನಿಟಿ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌‌‌‌‌‌ಗಳಂಥ ಸಾಮೂಹಿಕ ಮಾನವ ಸಂಪನ್ಮೂಲಗಳನ್ನು ಒಳಗೊಂಡಂತೆ, ತುರ್ತುಸ್ಥಿತಿಯ ಸೇವೆಗಳ ಸೂಕ್ತ ನಿರ್ವಹಣೆ ಮತ್ತು ತರಬೇತಿ.
  • ತುರ್ತುಸ್ಥಿತಿಯ ಆಶ್ರಯಗಳು ಮತ್ತು ಸ್ಥಳಾಂತರಿಸುವಿಕೆಯ ಯೋಜನೆಗಳ ಜೊತೆಗೆ ಸಂಯೋಜಿಸಲ್ಪಟ್ಟಿರುವ ತುರ್ತುಸ್ಥಿತಿಯ ಸಮುದಾಯದ ಎಚ್ಚರಿಕೆಯ ವಿಧಾನಗಳ ಅಭಿವೃದ್ಧಿ ಮತ್ತು ಆಚರಣೆ.
  • ಸಂಚಯಿಸುವಿಕೆ, ಸರಕು ಸಂಗ್ರಹ, ಹಾಗೂ ವಿಪತ್ತು ಪೂರೈಕೆಗಳು ಮತ್ತು ಸಲಕರಣೆಯ[] ನಿರ್ವಹಣೆ.
  • ನಾಗರಿಕರ ಸಮುದಾಯಗಳಿಗೆ ಸೇರಿದ ತರಬೇತು ಪಡೆದ ಸ್ವಯಂಸೇವಕರ ಸಂಘಟನೆಗಳನ್ನು ಅಭಿವೃದ್ಧಿಪಡಿಸುವುದು. ಸಾಮೂಹಿಕ ತುರ್ತುಸ್ಥಿತಿಗಳ ಸಂದರ್ಭದಲ್ಲಿ, ವೃತ್ತಿಪರ ತುರ್ತುಸ್ಥಿತಿ ಕಾರ್ಯಕರ್ತರ ಚಿತ್ತಸ್ಥೈರ್ಯವು ಕ್ಷಿಪ್ರವಾಗಿ ಕುಂದುತ್ತದೆ; ಆದ್ದರಿಂದ, ತರಬೇತು ಪಡೆದ, ಸಂಘಟಿತರಾಗಿರುವ, ಹೊಣೆಗಾರರಾಗಿರುವ ಸ್ವಯಂಸೇವಕರಿಗೆ ಹೆಚ್ಚಿನ ಬೆಲೆಯಿರುತ್ತದೆ. ಕಮ್ಯುನಿಟಿ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌‌‌‌‌‌ಗಳು ಮತ್ತು ರೆಡ್‌ ಕ್ರಾಸ್‌‌‌ನಂಥ ಸಂಘಟನೆಗಳು ತರಬೇತು ಪಡೆದ ಸ್ವಯಂಸೇವಕರ ಸಿದ್ಧ ಮೂಲಗಳಾಗಿರುತ್ತವೆ. ರೆಡ್‌ ಕ್ರಾಸ್‌ನ ತುರ್ತುಸ್ಥಿತಿ ನಿರ್ವಹಣಾ ವ್ಯವಸ್ಥೆಯು ಕ್ಯಾಲಿಫೋರ್ನಿಯಾ, ಮತ್ತು ಫೆಡರಲ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಏಜೆನ್ಸಿ (FEMA) ಈ ಎರಡೂ ಕಡೆಯಿಂದಲೂ ಉನ್ನತ ಶ್ರೇಯಾಂಕಗಳನ್ನು ಪಡೆದಿದೆ.

ದುರ್ಘಟನೆಯ ಭವಿಷ್ಯವು ಸನ್ನದ್ಧತೆಯ ಇನ್ನೊಂದು ಮಗ್ಗುಲಾಗಿದ್ದು, ಇದು ಒಂದು ನಿರ್ದಿಷ್ಟ ಘಟನೆಯಲ್ಲಿ ಎಷ್ಟು ಸಂಖ್ಯೆಯ ಸಾವುಗಳು ಅಥವಾ ಪೆಟ್ಟುಗಳು ಸಂಭವಿಸಬಹುದು ಎಂಬುದನ್ನು ನಿರೀಕ್ಷಿಸುವುದರ ಅಧ್ಯಯನವಾಗಿದೆ. ಒಂದು ನಿರ್ದಿಷ್ಟ ಬಗೆಯ ಘಟನೆಗೆ ಪ್ರತಿಕ್ರಿಯಿಸಲು ಯಾವ ಸಂಪನ್ಮೂಲಗಳನ್ನು ಯುಕ್ತ ಸ್ಥಳದಲ್ಲಿ ಇರಿಸುವುದು ಅಗತ್ಯ ಎಂಬುದರ ಕುರಿತಾದ ಪರಿಕಲ್ಪನೆಯೊಂದನ್ನು ಇದು ಯೋಜಕರಿಗೆ ನೀಡುತ್ತದೆ.

ಯೋಜಿಸುವಿಕೆಯ ಹಂತದಲ್ಲಿರುವ ತುರ್ತುಸ್ಥಿತಿ ನಿರ್ವಾಹಕರು ಸಂದರ್ಭಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಇರಬೇಕಾಗುತ್ತದೆ; ಅಂದರೆ, ಅವರು ಅಪಾಯಗಳನ್ನು ಮತ್ತು ಅವುಗಳ ಅನುಗುಣವಾದ ಪ್ರದೇಶಗಳ ಮುಖಗಳನ್ನು ಜಾಗರೂಕವಾಗಿ ಗುರುತಿಸಬೇಕಾಗುತ್ತದೆ ಹಾಗೂ ಅಸಾಂಪ್ರದಾಯಿಕವಾದ, ಮತ್ತು ಅಸಾಧಾರಣವಾದ ಬೆಂಬಲದ ವಿಧಾನವನ್ನು ಅವರು ಅಳವಡಿಸಿಕೊಳ್ಳಬೇಕಾಗುತ್ತದೆ. ಪ್ರದೇಶವನ್ನು ಅವಲಂಬಿಸಿ, ಪುರಸಭೆಯ ಅಥವಾ ಖಾಸಗಿ ವಲಯದ ತುರ್ತುಸ್ಥಿತಿ ಸೇವೆಗಳನ್ನು ಕ್ಷಿಪ್ರವಾಗಿ ಕುಗ್ಗಿಸಬಹುದು ಮತ್ತು ಅಗಾಧವಾಗಿ ತೆರಿಗೆ ವಿಧಿಸಬಹುದು. ಬಯಸಿದ ಸಂಪನ್ಮೂಲಗಳನ್ನು ನೀಡುವ ಸರ್ಕಾರೇತರ ಸಂಘಟನೆಗಳನ್ನು ಯೋಜನೆಯ ಆರಂಭಿಕ ಹಂತಗಳಲ್ಲಿ ಗುರುತಿಸಬೇಕು, ಮತ್ತು ಕ್ರಮಬದ್ಧತೆಯೊಂದಿಗೆ ಅವನ್ನು ಅನುಷ್ಠಾನಗೊಳಿಸಬೇಕು; ಅಂದರೆ, ಸ್ಥಳಾಂತರಿಸಲ್ಪಟ್ಟ ಮನೆ ಮಾಲೀಕರ ಸಾಗಾಣಿಕೆಯನ್ನು ಸ್ಥಳೀಯ ಕಾರ್ಯಕ್ಷೇತ್ರದ ಶಾಲಾ ಬಸ್ಸುಗಳ ನೆರವಿನಿಂದ ನಿರ್ವಹಿಸಬೇಕು, ಪ್ರವಾಹದ ಬಲಿಪಶುಗಳ ಸ್ಥಳಾಂತರಿಸುವಿಕೆಯನ್ನು ಅಗ್ನಿಶಾಮಕ ಇಲಾಖೆಗಳು ಮತ್ತು ರಕ್ಷಣಾ ಪಡೆಗಳ ನಡುವಿನ ಪರಸ್ಪರ ಸಹಾಯಕ ಒಪ್ಪಂದಗಳ ನೆರವಿನಿಂದ ನಿರ್ವಹಿಸಬೇಕು.

ಪ್ರತಿಕ್ರಿಯೆ

[ಬದಲಾಯಿಸಿ]

ಅವಶ್ಯಕ ತುರ್ತುಸ್ಥಿತಿ ಸೇವೆಗಳನ್ನು ಮತ್ತು ಮೊದಲ ಪ್ರತಿಕ್ರಿಯಾದಾರರನ್ನು ವಿಪತ್ತು ಪ್ರದೇಶದಲ್ಲಿ ಸಜ್ಜುಗೊಳಿಸುವುದು ಪ್ರತಿಕ್ರಿಯೆ ಹಂತದಲ್ಲಿ ಸೇರಿರುತ್ತದೆ. ಅಗ್ನಿಶಾಮಕ ಸೇವೆಗಳು, ಆರಕ್ಷಕ ಮತ್ತು ಸಂಚಾರಿ ಚಿಕಿತ್ಸಾಲಯದ ತಂಡಗಳಂಥ ಪ್ರಧಾನ ತುರ್ತುಸ್ಥಿತಿಯ ಸೇವೆಗಳ ಒಂದು ಮೊದಲ ಸ್ತರವನ್ನು ಇದು ಒಳಗೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ಒಂದು ಸೇನಾ ಕಾರ್ಯಾಚರಣೆಯ ರೀತಿಯಲ್ಲಿ ನಿರ್ವಹಿಸಿದಾಗ, ಇದನ್ನು ವಿಪತ್ತು ಪರಿಹಾರ ಕಾರ್ಯಾಚರಣೆ (ಡಿಸಾಸ್ಟರ್‌ ರಿಲೀಫ್‌ ಆಪರೇಷನ್‌-DRO) ಎಂದು ಕರೆಯಲಾಗುತ್ತದೆ ಮತ್ತು ಇದು ಅಸೈನಿಕ ಸ್ಥಳಾಂತರಿಕೆಯ ಕಾರ್ಯಾಚರಣೆಗೆ (ನಾನ್‌-ಕಾಂಬ್ಯಾಟ್‌ ಇವ್ಯಾಕ್ಯುಯೇಷನ್‌ ಆಪರೇಷನ್‌-NEO) ಇರುವ ಒಂದು ಮುಂಬರಿಕೆಯಾಗಬಹುದಾಗಿರುತ್ತದೆ. ವಿಶೇಷಜ್ಞತೆಯ ರಕ್ಷಣಾ ತಂಡಗಳಂಥ ಹಲವಾರು ದ್ವಿತೀಯಕ ತುರ್ತುಸ್ಥಿತಿ ಸೇವೆಗಳು ಅವಕ್ಕೆ ಬೆಂಬಲ ನೀಡಬಹುದು.

ಸನ್ನದ್ಧತೆಯ ಹಂತದ ಭಾಗವಾಗಿ ಅಭಿವೃದ್ಧಿಪಡಿಸಲ್ಪಟ್ಟ, ಉತ್ತಮವಾಗಿ ಪೂರ್ವತಯಾರಿ ನಡೆಸಿದ ಒಂದು ತುರ್ತುಸ್ಥಿತಿ ಯೋಜನೆಯು ರಕ್ಷಣೆಯ ಪರಿಣಾಮಶೀಲ ಹೊಂದಾಣಿಕೆಗೆ ಅನುವುಮಾಡಿಕೊಡುತ್ತದೆ. ಅಗತ್ಯ ಕಂಡುಬಂದ ಕಡೆ, ಶೋಧನೆ ಮತ್ತು ರಕ್ಷಣಾ ಪ್ರಯತ್ನಗಳು ಒಂದು ಮುಂಚಿನ ಹಂತದಲ್ಲಿ ಶುರುವಾಗುತ್ತವೆ. ತಾಪಮಾನದ ಹೊರಗಿನ ಬಲಿಪಶುವು ಅನುಭವಿಸಿದ ಪೆಟ್ಟುಗಳನ್ನು, ಮತ್ತು ಗಾಳಿ ಹಾಗೂ ನೀರಿಗೆ ಬಲಿಪಶುವು ಹೊಂದಿರುವ ಸಂಪರ್ಕವನ್ನು ಅವಲಂಬಿಸಿ, ಒಂದು ವಿಪತ್ತಿನಿಂದ ತೊಂದರೆಗೊಳಗಾದವರ ಪೈಕಿಯ ಬಹುಭಾಗದ ಜನರು ಪ್ರಭಾವದ ನಂತರದ 72 ಗಂಟೆಗಳ ಒಳಗಾಗಿ ಸಾಯುತ್ತಾರೆ.[೧೦]

ವಿಪತ್ತೆಂಬುದು ಸ್ವಾಭಾವಿಕವೇ ಆಗಿರಲಿ ಅಥವಾ ಭಯೋತ್ಪಾದಕ-ಸಂಬಂಧಿತವೇ ಆಗಿರಲಿ, ಯಾವುದೇ ಗಮನಾರ್ಹ ವಿಪತ್ತಿಗೆ ದೊರೆಯುವ ಸಾಂಸ್ಥಿಕ ಪ್ರತಿಕ್ರಿಯೆಯು, ಅಸ್ತಿತ್ವದಲ್ಲಿರುವ ಸಂಸ್ಥೆಯ ತುರ್ತುಸ್ಥಿತಿ ನಿರ್ವಹಣಾ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳ ಮೇಲೆ ಆಧರಿಸಿರುತ್ತದೆ: ಅಂದರೆ, ಫೆಡರಲ್‌ ರೆಸ್ಪಾನ್ಸ್‌ ಪ್ಲಾನ್‌ (FRP) ಮತ್ತು ಇನ್ಸಿಡೆಂಟ್‌ ಕಮ್ಯಾಂಡ್‌ ಸಿಸ್ಟಮ್‌ (ICS) ಎಂಬ ವ್ಯವಸ್ಥೆಗಳು ಇಲ್ಲಿ ಪರಿಗಣನೆಗೆ ಬರುತ್ತವೆ. ಏಕೀಕೃತ ಆದೇಶ (ಯೂನಿಫೈಡ್‌ ಕಮ್ಯಾಂಡ್‌-UC) ಮತ್ತು ಪರಸ್ಪರ ನೆರವಿನ (ಮ್ಯೂಚುಯಲ್‌ ಏಡ್‌-MA) ತತ್ತ್ವಗಳ ಮೂಲಕ ಈ ವ್ಯವಸ್ಥೆಗಳು ಬಲಗೊಳ್ಳುತ್ತವೆ.

ವಿಪತ್ತೊಂದಕ್ಕೆ ಪ್ರತಿಕ್ರಿಯಿಸುವುದರಲ್ಲಿ ಕಾರ್ಯವಿಧಾನ (ರಚನೆ, ಸಿದ್ಧಾಂತ, ಪ್ರಕ್ರಿಯೆ) ಮತ್ತು ಚಟುವಟಿಕೆ (ಸೃಜನಶೀಲತೆ, ಸಾಮಯಿಕ ಕಲ್ಪನೆ, ಹೊಂದಿಕೊಳ್ಳುವ ಗುಣ) ಇವೆರಡು ಸಹ ಅಗತ್ಯವಾಗಿರುತ್ತವೆ.[೧೧] ಒಂದು ಉನ್ನತವಾದ ಕಾರ್ಯಾತ್ಮಕ ನಾಯಕತ್ವವನ್ನು ಶೀಘ್ರವಾಗಿ ಏರುವ ಮತ್ತು ನಿರ್ಮಿಸುವುದರ ಅಗತ್ಯದೊಂದಿಗೆ ಅದನ್ನು ಸಂಯೋಜಿಸಬೇಕೆಂದರೆ, ಒಂದು ಶಿಸ್ತಿನ, ಪುನರುಕ್ತಿ ರೂಪದ ಪ್ರತಿಕ್ರಿಯಾ ಯೋಜನೆಗಳ ಗುಚ್ಛವನ್ನು ನಿಪುಣತೆಯಿಂದ ರೂಪಿಸುವುದು ಮತ್ತು ಕಾರ್ಯರೂಪಕ್ಕೆ ತರುವುದು ಓರ್ವ ನಾಯಕ ಮತ್ತು ಆತನ ಅಥವಾ ಆಕೆಯ ತಂಡದ ಕರ್ತವ್ಯವಾಗಿರುತ್ತದೆ ಎಂಬುದು ಇಲ್ಲಿ ಸೂಚಿಸಲ್ಪಡುತ್ತದೆ; ಏಕೆಂದರೆ, ಮೊದಲ ಪ್ರತಿಕ್ರಿಯಾಶೀಲರಿಂದ ಆಚೆಗೆ ಪ್ರಯತ್ನಗಳು ಬೆಳೆಯುವುದರಿಂದ, ಪ್ರಯತ್ನಗಳನ್ನು ಸುಸಂಘಟಿತವಾಗಿಸುವುದು ಮತ್ತು ನಿರ್ವಹಿಸುವುದು ಅಗತ್ಯವಾಗಿರುತ್ತದೆ. ಅಸ್ಪಷ್ಟವಾಗಿ ಸರಿಯಾಗಿರುವ ಮತ್ತು ಹಾದಿಯುದ್ದಕ್ಕೂ ಸಿಗುವ ಹೊಸ ಮಾಹಿತಿ ಹಾಗೂ ಬದಲಾಗುವ ಸಂದರ್ಭಗಳಿಗೆ ಹೊಂದಿಕೊಳ್ಳುವ ಸುಸಂಘಟಿತ, ಶಿಸ್ತಿನ ಪ್ರತಿಕ್ರಿಯೆಗಳೊಂದಿಗೆ ಮುಂದಕ್ಕೆ ಸಾಗಲು ಇದು ತಂಡಕ್ಕೆ ಅವಕಾಶ ನೀಡುತ್ತದೆ.[೧೨]

ಪಡೆದುಕೊಳ್ಳುವಿಕೆ

[ಬದಲಾಯಿಸಿ]

ತೊಂದರೆಗೊಳಗಾದ ಪ್ರದೇಶವನ್ನು ಅದು ಹಿಂದಿದ್ದ ಸ್ಥಿತಿಗೆ ಮತ್ತೆ ತರುವುದು ಚೇತರಿಕೆಯ ಹಂತದ ಗುರಿಯಾಗಿರುತ್ತದೆ. ಇದು ತನ್ನ ಗಮನದಲ್ಲಿ ಪ್ರತಿಕ್ರಿಯಾ ಹಂತಕ್ಕಿಂತ ಭಿನ್ನವಾಗಿರುತ್ತದೆ; ತತ್‌ಕ್ಷಣದ ಅವಶ್ಯಕತೆಗಳ ಕಡೆಗೆ ಗಮನಹರಿಸಲಾದ ನಂತರ ಕೈಗೊಳ್ಳಬೇಕಿರುವ ವಿಷಯಗಳು ಮತ್ತು ತೀರ್ಮಾನಗಳೊಂದಿಗೆ ಚೇತರಿಕೆಯ ಪ್ರಯತ್ನಗಳು ಸಂಬಂಧಿಸಿರುತ್ತವೆ.[] ನಾಶಗೊಂಡ ಆಸ್ತಿಯ ಮರುನಿರ್ಮಿಸುವಿಕೆ, ಮರು-ಬಳಸಿಕೊಳ್ಳುವಿಕೆ, ಮತ್ತು ಇತರ ಅತ್ಯಾವಶ್ಯಕ ಮೂಲಸೌಕರ್ಯಗಳ ದುರಸ್ತಿ ಇವುಗಳನ್ನು ಒಳಗೊಂಡಿರುವ ಕ್ರಮಗಳೊಂದಿಗೆ ಚೇತರಿಕೆಯ ಪ್ರಯತ್ನಗಳು ಪ್ರಧಾನವಾಗಿ ಸಂಬಂಧಿಸಿರುತ್ತವೆ.[] "ಮತ್ತೊಮ್ಮೆ ಉತ್ತಮವಾಗಿ ನಿರ್ಮಿಸುವುದರ" ಕಡೆಗೆ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ; ಈ ನಿಟ್ಟಿನಲ್ಲಿ, ಸಮುದಾಯ ಮತ್ತು ಮೂಲಸೌಕರ್ಯದಲ್ಲಿ ಅಂತರ್ಗತವಾಗಿರುವ ವಿಪತ್ತು-ಪೂರ್ವ ಅಪಾಯಗಳನ್ನು ತಗ್ಗಿಸುವ ಗುರಿಯನ್ನು ಹೊಂದಬೇಕಿರುತ್ತದೆ.[೩] ಅನ್ಯಥಾ ಜನಪ್ರಿಯವಲ್ಲದ ಕ್ರಮವೆನಿಸಿಕೊಳ್ಳಬಹುದಾದ ಉಪಶಾಮಕ ಕ್ರಮಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಂಬಂಧಿಸಿದಂತೆ, ಒಂದು ‘ಸದವಕಾಶದ ಕಾಲಾವಕಾಶ’ದ[೧೩] ಪ್ರಯೋಜನವನ್ನು ಪಡೆದುಕೊಳ್ಳುವುದು ಪರಿಣಾಮಕಾರಿ ಚೇತರಿಕೆಯ ಪ್ರಯತ್ನಗಳ ಒಂದು ಪ್ರಮುಖ ಮಗ್ಗುಲು ಎನಿಸಿಕೊಳ್ಳುತ್ತದೆ. ಇತ್ತೀಚಿನ ವಿಪತ್ತೊಂದು ತಾಜಾ ನೆನಪಿನಲ್ಲಿದ್ದಾಗ, ತೊಂದರೆಗೊಳಗಾದ ಪ್ರದೇಶದ ನಾಗರಿಕರು ಹೆಚ್ಚು ಉಪಶಾಮಕ ಬದಲಾವಣೆಗಳನ್ನು ಸ್ವೀಕರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, 2002ರ ಸ್ವದೇಶ ಭದ್ರತಾ ಕಾಯಿದೆಯಿಂದ ಒದಗಿಸಲ್ಪಟ್ಟ ಸಂಪನ್ಮೂಲಗಳನ್ನು ಚೇತರಿಕೆಯ ಪ್ರಯತ್ನಗಳಲ್ಲಿ ಹೇಗೆ ಬಳಸಲ್ಪಡಬೇಕು ಎಂಬುದನ್ನು ರಾಷ್ಟ್ರೀಯ ಪ್ರತಿಕ್ರಿಯಾ ಯೋಜನೆಯು ಆದೇಶಿಸುತ್ತದೆ.[] ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಚೇತರಿಕೆಯ ಪ್ರಯತ್ನಗಳಿಗೆ ಸಂಬಂಧಿಸಿದಂತೆ, ಬಹುಪಾಲು ತಾಂತ್ರಿಕ ನೆರವು ಮತ್ತು ಹಣಕಾಸಿನ ನೆರವನ್ನು ಒಕ್ಕೂಟ ಸರ್ಕಾರವೇ ಅನೇಕವೇಳೆ ಒದಗಿಸುತ್ತದೆ.[]

ಹಂತಗಳು ಮತ್ತು ವೈಯಕ್ತಿಕ ಚಟುವಟಿಕೆಗಳು

[ಬದಲಾಯಿಸಿ]

ತಗ್ಗಿಸುವಿಕೆ

[ಬದಲಾಯಿಸಿ]

ವೈಯಕ್ತಿಕ ತಗ್ಗಿಸುವಿಕೆ ಎಂಬುದು ಮುಖ್ಯವಾಗಿ ಅನಾವಶ್ಯಕ ಅಪಾಯಗಳನ್ನು ತಿಳಿದುಕೊಳ್ಳುವುದರ ಮತ್ತು ಅದನ್ನು ತಪ್ಪಿಸುವುದರ ಕುರಿತಾಗಿರುತ್ತದೆ. ವೈಯಕ್ತಿಕ ಆರೋಗ್ಯಕ್ಕೆ ಅಥವಾ ಕುಟುಂಬದ ಆರೋಗ್ಯಕ್ಕೆ ಮತ್ತು ವೈಯಕ್ತಿಕ ಆಸ್ತಿಗೆ ಆಗಬಹುದಾದ ಸಂಭವನೀಯ ಅಪಾಯಗಳ ಒಂದು ಅಳೆಯುವಿಕೆಯನ್ನು ಇದು ಒಳಗೊಳ್ಳುತ್ತದೆ.

ಅಪಾಯಗಳಿಗೆ ಒಡ್ಡಿಕೊಂಡಿರುವಂಥ, ಅಂದರೆ ಒಂದು ಪ್ರವಾಹ ಮೈದಾನದಲ್ಲಿರುವ, ಇಳಿಜಾರು ಅಥವಾ ಭೂಕುಸಿತದ ಪ್ರದೇಶಗಳಲ್ಲಿರುವ ಆಸ್ತಿಯೊಂದರ ಖರೀದಿಯನ್ನು ತಪ್ಪಿಸುವುದು ತಗ್ಗಿಸುವಿಕೆಯ ಒಂದು ಉದಾಹರಣೆಯಾಗಬಲ್ಲದು. ಅಪಾಯ ಬಂದು ಅಪ್ಪಳಿಸುವ ತನಕವೂ, ಇಂಥದೊಂದು ಆಸ್ತಿಯು ಅಪಾಯವೊಂದಕ್ಕೆ ಒಡ್ಡಿಕೊಂಡಿದೆ ಎಂಬ ಅಂಶವು ಮನೆ ಮಾಲೀಕರ ಅರಿವಿಗೆ ಬಾರದಿರಬಹುದು. ಆದಾಗ್ಯೂ, ಅಪಾಯ ಗುರುತಿಸುವಿಕೆ ಹಾಗೂ ನಿರ್ಧಾರಣೆಯ ಸಮೀಕ್ಷೆಗಳನ್ನು ನಿರ್ವಹಿಸಲು ಪರಿಣತರನ್ನು ನೇಮಿಸಿಕೊಳ್ಳಬಹುದು. ಅತ್ಯಂತ ಎದ್ದುಕಾಣುವ ಗುರುತಿಸಲ್ಪಟ್ಟ ಅಪಾಯಗಳಿಗೆ ರಕ್ಷಣೆ ನೀಡುವ ವಿಮೆಯ ಖರೀದಿಯು ಒಂದು ಸಾಮಾನ್ಯ ಕ್ರಮವಾಗಿದೆ.

ಭೂಕಂಪ ಪೀಡಿತ ಪ್ರದೇಶಗಳಲ್ಲಿನ ವೈಯಕ್ತಿಕವಾಗಿರುವ ರಾಚನಿಕ ಸ್ವರೂಪದ ತಗ್ಗಿಸುವಿಕೆಯು ಇವುಗಳನ್ನು ಒಳಗೊಂಡಿರುತ್ತದೆ: ಆಸ್ತಿಯೊಂದಕ್ಕೆ ಆಗುವ ಸ್ವಾಭಾವಿಕ ಅನಿಲದ ಪೂರೈಕೆಯನ್ನು ತತ್‌ಕ್ಷಣವೇ ನಿರೋಧಿಸಲು ಭೂಕಂಪ ಕವಾಟವೊಂದನ್ನು ಅಳವಡಿಸುವುದು, ಆಸ್ತಿಗೆ ಸಂಬಂಧಿಸಿದಂತೆ ಭೂಕಂಪ ಸಂಬಂಧಿ ಮರುಮಾರ್ಪಾಡು ಮಾಡುವುದು ಮತ್ತು ಮನೆಯಲ್ಲಿನ ಭೂಕಂಪ ಸಂಬಂಧಿ ಸುರಕ್ಷತೆಯನ್ನು ವರ್ಧಿಸಲು ಕಟ್ಟಡವೊಂದರೊಳಗಿನ ವಸ್ತುಗಳನ್ನು ಸುರಕ್ಷಿತಗೊಳಿಸುವುದು. ಮನೆಯೊಳಗಿನ ವಸ್ತುಗಳನ್ನು ಸುರಕ್ಷಿತಗೊಳಿಸುವ ಕ್ರಮಗಳಲ್ಲಿ ಪೀಠೋಪಕರಣ, ಶೀತಕಯಂತ್ರಗಳು, ನೀರಿನ ತಾಪಕಗಳು ಮತ್ತು ಒಡೆದು ಹೋಗುವ ವಸ್ತುಗಳನ್ನು ಗೋಡೆಗಳಿಗೆ ಏರಿಸುವುದು, ಮತ್ತು ಕಪಾಟು ಎತ್ತಗುಳಿಗಳನ್ನು ಸೇರ್ಪಡೆ ಮಾಡುವುದು ಸೇರಿಕೊಂಡಿರಬಹುದು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಂಬಗಳು/ಊರೆಗಂಬಗಳ ಮೇಲೆ ಮನೆಗಳನ್ನು ಕಟ್ಟಬಹುದು; ದಕ್ಷಿಣದ ಏಷ್ಯಾದ ಬಹುತೇಕ ಭಾಗದಲ್ಲಿ ಇದು ಕಂಡುಬರುತ್ತದೆ. ಸುದೀರ್ಘ ಅವಧಿಯವರೆಗಿನ ವಿದ್ಯುಚ್ಛಕ್ತಿಯ ಕತ್ತಲಿಸುವಿಕೆಯ, ಅಂದರೆ ದೀಪ ಆರಿಸುವಿಕೆಯ ಸಮಸ್ಯೆಯಿಂದ ಪೀಡಿತವಾಗಿರುವ ಪ್ರದೇಶಗಳಲ್ಲಿ ಉತ್ಪಾದಕವೊಂದನ್ನು ಅಳವಡಿಸುವುದು, ರಾಚನಿಕ ಸ್ವರೂಪದ ಪ್ರಶಸ್ತವಾದ ತಗ್ಗಿಸುವಿಕೆಯ ಕ್ರಮವೊಂದರ ಒಂದು ಉದಾಹರಣೆಯಾಗಬಲ್ಲದು. ಬಿರುಗಾಳಿ ನೆಲಮಾಳಿಗೆಗಳು ಮತ್ತು ವಿಕಿರಣ ಧೂಳಿಪಾತ ಆಶ್ರಯಗಳ ನಿರ್ಮಾಣಗಳು ವೈಯಕ್ತಿಕ ಉಪಶಾಮಕ ಕ್ರಮಗಳ ಮತ್ತಷ್ಟು ಉದಾಹರಣೆಗಳು ಎನಿಸಿಕೊಳ್ಳುತ್ತವೆ.

ವಿಪತ್ತುಗಳ ಪ್ರಭಾವವನ್ನು ಸೀಮಿತಗೊಳಿಸಲು ತೆಗೆದುಕೊಳ್ಳಲಾಗುವ ರಾಚನಿಕ ಮತ್ತು ರಾಚನಿಕವಲ್ಲದ ಕ್ರಮಗಳನ್ನು ತಗ್ಗಿಸುವಿಕೆಯು ಒಳಗೊಳ್ಳುತ್ತದೆ.

ರಾಚನಿಕ ಸ್ವರೂಪದ ತಗ್ಗಿಸುವಿಕೆ:-

ಕಟ್ಟಡವನ್ನು ಸೂಕ್ತವಾಗಿ ವಿನ್ಯಾಸಗೊಳಿಸುವುದನ್ನು, ಅದರಲ್ಲೂ ನಿರ್ದಿಷ್ಟವಾಗಿ ಅದನ್ನು ವಿಪತ್ತುಗಳಿಗೆ ನಿರೋಧಕವಾಗಿಸುವುದನ್ನು ಇದು ಒಳಗೊಳ್ಳುತ್ತದೆ.

ರಾಚನಿಕವಲ್ಲದ ಸ್ವರೂಪದ ತಗ್ಗಿಸುವಿಕೆ:-

ಕಟ್ಟಡದ ರಚನೆಯ ಸುಧಾರಣೆಯನ್ನು ಹೊರತುಪಡಿಸಿದ ಕ್ರಮಗಳನ್ನು ಇದು ಒಳಗೊಳ್ಳುತ್ತದೆ.

ಸನ್ನದ್ಧತೆ

[ಬದಲಾಯಿಸಿ]
ವಿಮಾನ ನಿಲ್ದಾಣ ತುರ್ತುಸ್ಥಿತಿ ಸನ್ನದ್ಧತೆಯ ಅಭ್ಯಾಸ.

ವಿಪತ್ತು ಸಂಭವಿಸದಂತೆ ತಡೆಯುವುದರ ಕಡೆಗೆ ಸನ್ನದ್ಧತೆಯು ಗುರಿಯಿಟ್ಟುಕೊಂಡಿದ್ದರೆ, ಒಂದು ವಿಪತ್ತು ಯಾವಾಗ ಸಂಭವಿಸುತ್ತದೋ ಆಗ ಬಳಸುವುದಕ್ಕಾಗಿರುವ ಸಲಕರಣೆ ಮತ್ತು ಕಾರ್ಯವಿಧಾನಗಳನ್ನು ಸಜ್ಜುಗೊಳಿಸುವುದರ ಕುರಿತು, ಅಂದರೆ ಯೋಜಿಸುವಿಕೆಯ ಕುರಿತು ವೈಯಕ್ತಿಕ ಸನ್ನದ್ಧತೆಯು ಗಮನ ಹರಿಸುತ್ತವೆ. ಸನ್ನದ್ಧತೆಯು ಕ್ರಮಗಳು ಅನೇಕ ರೂಪಗಳಲ್ಲಿರಬಹುದು; ಆಶ್ರಯಸ್ಥಾನಗಳ ನಿರ್ಮಾಣ, ಎಚ್ಚರಿಕೆ ಸಾಧನಗಳ ಅಳವಡಿಕೆ, ಮೀಸಲು ಜೀವರಕ್ಷಕ ಸೇವೆಗಳ (ಉದಾಹರಣೆಗೆ, ವಿದ್ಯುತ್ತು, ನೀರು, ಚರಂಡಿ) ಸೃಷ್ಟಿ, ಮತ್ತು ಸ್ಥಳಾಂತರಿಸುವಿಕೆಯ ಯೋಜನೆಗಳ ಪೂರ್ವತಯಾರಿ ನಡೆಸುವುದು ಇವೆಲ್ಲವೂ ಸನ್ನದ್ಧತೆಯ ಕ್ರಮಗಳೆನಿಸಿಕೊಳ್ಳುತ್ತವೆ. ಘಟನೆಯಲ್ಲಿ ಅಥವಾ ಸ್ಥಳಾಂತರಿಸುವಿಕೆಯಲ್ಲಿ ವ್ಯಕ್ತಿಯು ಭಾಗವಹಿಸದಂತೆ ಸಜ್ಜುಗೊಳಿಸುವುದಕ್ಕೆ ನೆರವಾಗಲು ಎರಡು ಸರಳ ಕ್ರಮಗಳು ಅವಶ್ಯಕವೆನಿಸಿವೆ. ಸ್ಥಳಾಂತರಿಕೆಗೆ ಸಂಬಂಧಿಸಿದಂತೆ, ವಿಪತ್ತು ಪೂರೈಕೆಗಳ ಚೀಲವೊಂದನ್ನು ಸಜ್ಜುಗೊಳಿಸಬಹುದು ಮತ್ತು ಆಶ್ರಯದ ಉದ್ದೇಶಗಳಿಗಾಗಿ ಪೂರೈಕೆಗಳ ಒಂದು ಸಂಚಯನವನ್ನು ಸೃಷ್ಟಿಸಬಹುದು. ಒಂದು "72-ಗಂಟೆಗಳ ಚೀಲ"ದಂಥ ಒಂದು ಉಳಿವಿನ ಚೀಲದ ಸಿದ್ಧತೆಯು ಅಧಿಕಾರಿ ವರ್ಗದವರಿಂದ ಅನೇಕವೇಳೆ ಸಮರ್ಥಿಸಲ್ಪಡುತ್ತದೆ. ಈ ಚೀಲಗಳು ಆಹಾರ, ಔಷಧಿ, ಬ್ಯಾಟರಿ ದೀಪಗಳು, ಮೇಣದ ಬತ್ತಿಗಳು ಮತ್ತು ಹಣವನ್ನು ಒಳಗೊಳ್ಳಬಹುದು. ಅಷ್ಟೇ ಅಲ್ಲ, ಮೌಲ್ಯಯುತ ವಸ್ತುಗಳನ್ನು ಸುರಕ್ಷಿತ ಪ್ರದೇಶದಲ್ಲಿ ಇಡುವುದನ್ನೂ ಸಹ ಶಿಫಾರಸು ಮಾಡಲಾಗುತ್ತದೆ.

ಪ್ರತಿಕ್ರಿಯೆ

[ಬದಲಾಯಿಸಿ]

ತುರ್ತುಸ್ಥಿತಿಯೊಂದರ ಪ್ರತಿಕ್ರಿಯಾ ಹಂತವು ಶೋಧನೆ ಮತ್ತು ರಕ್ಷಣೆಯೊಂದಿಗೆ ಆರಂಭವಾಗಬಹುದಾದರೂ, ಎಲ್ಲಾ ನಿದರ್ಶನಗಳಲ್ಲಿ ತೊಂದರೆಗೊಳಗಾದ ಸಮುದಾಯದ ಮೂಲಭೂತ ಜನೋಪಕಾರಿ ಅಗತ್ಯಗಳನ್ನು ಈಡೇರಿಸುವುದರ ಕಡೆಗೆ ಗಮನವು ಶೀಘ್ರವಾಗಿ ತಿರುಗುತ್ತದೆ. ಈ ನೆರವನ್ನು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಂಘಟನೆಗಳು ಒದಗಿಸಬಹುದು. ವಿಪತ್ತು ನೆರವಿನ ಪರಿಣಾಮಕಾರಿ ಹೊಂದಾಣಿಕೆಯು ಅನೇಕವೇಳೆ ನಿರ್ಣಾಯಕವಾಗಿರುತ್ತದೆ; ಅದರಲ್ಲೂ ನಿರ್ದಿಷ್ಟವಾಗಿ, ಅನೇಕ ಸಂಘಟನೆಗಳು ಪ್ರತಿಸ್ಪಂದಿಸುವಾಗ ಮತ್ತು ಸ್ಥಳೀಯ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಯ (ಲೋಕಲ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಏಜೆನ್ಸಿ-LEMA) ಸಾಮರ್ಥ್ಯವು ಬೇಡಿಕೆಯಿಂದ ಮಿತಿಮೀರಿದಾಗ ಅಥವಾ ಸ್ವತಃ ವಿಪತ್ತಿನಿಂದ ತಗ್ಗಿಸಲ್ಪಟ್ಟಾಗ ಇದು ಪರಿಗಣನೆಗೆ ಬರುತ್ತದೆ.

ವೈಯಕ್ತಿಕ ಮಟ್ಟವೊಂದರಲ್ಲಿ, ಪ್ರತಿಕ್ರಿಯೆಯು ಯುಕ್ತ ಸ್ಥಳದಲ್ಲಿನ ಆಶ್ರಯ ವೊಂದರ ಆಕಾರವನ್ನು ಅಥವಾ ಒಂದು ಸ್ಥಳಾಂತರಿಸುವಿಕೆ ಯ ಆಕಾರವನ್ನು ಪಡೆಯಬಹುದು. ಯುಕ್ತ-ಸ್ಥಳದಲ್ಲಿನ-ಆಶ್ರಯದ ಚಿತ್ರಣವೊಂದರಲ್ಲಿ, ಯಾವುದೇ ಸ್ವರೂಪದ ಬಾಹ್ಯ ಬೆಂಬಲವಿಲ್ಲದೆಯೇ ಕುಟುಂಬವೊಂದು ಅನೇಕ ದಿನಗಳವರೆಗೆ ತನ್ನ ಮನೆಯಲ್ಲಿ ಸ್ವತಃ ತನ್ನನ್ನು ಕಾಪಾಡಿಕೊಳ್ಳುವಂತಾಗಲು ಅದನ್ನು ಸಜ್ಜುಗೊಳಿಸಲಾಗುತ್ತದೆ. ಸ್ಥಳಾಂತರಿಸುವಿಕೆ ಯೊಂದರಲ್ಲಿ, ಕುಟುಂಬವೊಂದು ವಾಹನ ಅಥವಾ ಸಾಗಾಣಿಕೆಯ ಇತರ ವಿಧಾನದ ಮೂಲಕ ಆ ಪ್ರದೇಶವನ್ನು ಬಿಡುತ್ತದೆ ಹಾಗೂ ತನ್ನೊಂದಿಗೆ ತಾನು ಸಾಗಿಸಬಹುದಾದ ಪೂರೈಕೆಗಳ ಗರಿಷ್ಟ ಪ್ರಮಾಣವನ್ನು ಒಯ್ಯುತ್ತದೆ; ಇದರಲ್ಲಿ ಆಶ್ರಯಕ್ಕೆ ಮೀಸಲಾದ ಒಂದು ಗುಡಾರವೂ ಪ್ರಾಯಶಃ ಇರಬಹುದು. ಒಂದು ವೇಳೆ ಯಾಂತ್ರಿಕ ಸಾಗಾಣಿಕೆಯು ಲಭ್ಯವಿಲ್ಲದಿದ್ದರೆ, ಕಾಲು ನಡಿಗೆಯಲ್ಲಿ ಮಾಡಲಾಗುವ ಸ್ಥಳಾಂತರಿಕೆಯು, ಕನಿಷ್ಟಪಕ್ಷ ಮೂರು ದಿನಗಳವರೆಗೆ ಸಾಕಾಗುವ ಪೂರೈಕೆಗಳನ್ನು ಮತ್ತು ಮಳೆಯನೀರು ಹೋಗದ ಹಾಸಿಗೆ ಸಾಮಾನಿನ ಸಾಗಾಣಿಕೆಯನ್ನು ತಾತ್ತ್ವಿಕವಾಗಿ ಒಳಗೊಳ್ಳುತ್ತದೆ; ಒಂದು ತಾಡಪಾಲು ಹಾಗೂ ಕಂಬಳಿಗಳ ಒಂದು ಹಾಸಿಗೆ ಸುರುಳಿಯ ಸಾಗಣೆಯು ಕನಿಷ್ಟ ಅವಶ್ಯಕತೆಯಾಗಿರುತ್ತದೆ.

ಚೇತರಿಸಿಕೊಳ್ಳುವಿಕೆ

[ಬದಲಾಯಿಸಿ]

ಮಾನವ ಜೀವಕ್ಕೆ ಒದಗಿದ ತತ್‌ಕ್ಷಣದ ಬೆದರಿಕೆಯು ತಗ್ಗಿದ ನಂತರ, ಚೇತರಿಕೆಯ ಹಂತವು ಆರಂಭವಾಗುತ್ತದೆ. ಮರುನಿರ್ಮಾಣದ ಸಮಯದಲ್ಲಿ, ಆಸ್ತಿಯ ತಾಣ ಅಥವಾ ನಿರ್ಮಾಣ ಸಾಮಗ್ರಿಯನ್ನು ಪರಿಗಣಿಸುವಂತೆ ಶಿಫಾರಸು ಮಾಡಲಾಗುತ್ತದೆ.

ಮನೆಯಲ್ಲಿ ನಿರ್ಬಂಧಿಸಲ್ಪಡುವುದಕ್ಕೆ ಕಾರಣವಾಗುವ ಪರಮಾವಧಿಯ ಸನ್ನಿವೇಶಗಳಲ್ಲಿ ಯುದ್ಧ, ಕ್ಷಾಮ ಮತ್ತು ತೀವ್ರ ಸಾಂಕ್ರಾಮಿಕ ರೋಗಗಳು ಸೇರಿಕೊಂಡಿರಬಹುದು. ಆಮೇಲೆ ಮನೆಯೊಳಗೆ ಚೇತರಿಕೆಯು ನಡೆಯುತ್ತದೆ. ಈ ಘಟನೆಗಳಿಗೆ ಸಂಬಂಧಿಸಿರುವ ಯೋಜಕರು, ಬೃಹತ್‌ ಪ್ರಮಾಣದ ಆಹಾರ ವಸ್ತುಗಳು ಹಾಗೂ ಸೂಕ್ತವಾದ ಶೇಖರಣೆ ಮತ್ತು ಸಿದ್ಧತಾ ಸಲಕರಣೆಗಳನ್ನು ಸಾಮಾನ್ಯವಾಗಿ ಖರೀದಿಸುತ್ತಾರೆ ಹಾಗೂ ಸಾಮಾನ್ಯ ಜೀವನದ ಭಾಗವಾಗಿ ಆಹಾರವನ್ನು ಸೇವಿಸುತ್ತಾರೆ. ಜೀವಸತ್ವದ ಮಾತ್ರೆಗಳು, ತವಡು ತೆಗೆಯದ ಗೋಧಿ, ಬೀನ್ಸ್‌, ಶುಷ್ಕಕ್ಷೀರ, ಕಾಳು, ಮತ್ತು ಖಾದ್ಯ ತೈಲ ಇವುಗಳಿಂದ ಒಂದು ಸರಳ ಸಮತೋಲಿತ ಆಹಾರಕ್ರಮವನ್ನು ರೂಪಿಸಬಹುದು.[೧೪] ತರಕಾರಿಗಳು, ಹಣ್ಣುಗಳು, ಸಂಬಾರ ಪದಾರ್ಥಗಳು ಮತ್ತು ಮಾಂಸಗಳನ್ನು ಸಂಬಂಧಪಟ್ಟವರು ಸೇರಿಸಿಕೊಳ್ಳುವುದು ಅಗತ್ಯವಾಗಿದ್ದು, ಸಾಧ್ಯವಿದ್ದಾಗ ಇವನ್ನು ತಯಾರಿಸಬೇಕು ಮತ್ತು ಇವು ಕೈತೋಟದಲ್ಲಿ ಬೆಳೆದ-ತಾಜಾ ವಸ್ತುಗಳಾಗಿರಬೇಕು.

ಒಂದು ವೃತ್ತಿಯಾಗಿ

[ಬದಲಾಯಿಸಿ]

ತುರ್ತುಸ್ಥಿತಿಯ ಜೀವನ-ಚಕ್ರದ ಉದ್ದಕ್ಕೂ ತಮಗೆ ಬೆಂಬಲ ನೀಡುವಂಥ ಕಾರ್ಯವಿಧಾನಗಳ ಒಂದು ವ್ಯಾಪಕ ವೈವಿಧ್ಯತೆಯಲ್ಲಿ ತುರ್ತುಸ್ಥಿತಿಯ ನಿರ್ವಾಹಕರು ತರಬೇತು ಪಡೆದಿರುತ್ತಾರೆ. ಸರ್ಕಾರದ ಮತ್ತು ಸಮುದಾಯದ ಸನ್ನದ್ಧತೆ (ಕಾರ್ಯಾಚರಣೆಗಳ ನಿರಂತರತೆ/ಸರ್ಕಾರಿ ಯೋಜನೆಯ ನಿರಂತರತೆ), ಅಥವಾ ಖಾಸಗಿ ವ್ಯವಹಾರ ಸನ್ನದ್ಧತೆಯ (ವ್ಯವಹಾರ ನಿರಂತರತೆಯ ನಿರ್ವಹಣಾ ಯೋಜನೆ) ಮೇಲೆ ವೃತ್ತಿಪರ ತುರ್ತುಸ್ಥಿತಿ ನಿರ್ವಾಹಕರು ಗಮನಹರಿಸಬಹುದು. ಸ್ಥಳೀಯ, ರಾಜ್ಯದ, ಒಕ್ಕೂಟದ ಮತ್ತು ಖಾಸಗಿ ಸಂಘಟನೆಗಳಿಂದ ತರಬೇತಿಯು ಒದಗಿಸಲ್ಪಡುತ್ತದೆ; ಅಷ್ಟೇ ಅಲ್ಲ, ಸಾರ್ವಜನಿಕ ಮಾಹಿತಿ ಮತ್ತು ಮಾಧ್ಯಮಗಳೊಂದಿಗಿನ ಸಂಬಂಧಗಳಿಂದ ಮೊದಲ್ಗೊಂಡು, ಭಯೋತ್ಪಾದಕರು ಬಾಂಬ್‌ ದಾಳಿ ನಡೆಸಿದ ತಾಣವೊಂದರ ಅಧ್ಯಯನ ಮಾಡುವಿಕೆ ಅಥವಾ ತುರ್ತುಸ್ಥಿತಿಯ ಸನ್ನಿವೇಶವೊಂದರ ನಿಯಂತ್ರಿಸುವಿಕೆಯಂಥ ಉನ್ನತ-ಮಟ್ಟದ ಅನುಗತ ಆದೇಶ ಹಾಗೂ ಯುದ್ಧತಂತ್ರದ ಕುಶಲತೆಗಳವರೆಗೆ ಈ ತರಬೇತಿಯ ವ್ಯಾಪ್ತಿಯಿರುತ್ತದೆ.

ಹಿಂದಿನ ನಿದರ್ಶನಗಳಲ್ಲಿ, ತುರ್ತುಸ್ಥಿತಿ ನಿರ್ವಹಣೆಯ ಕ್ಷೇತ್ರವು ಒಂದು ಸೇನಾ ಹಿನ್ನೆಲೆ ಅಥವಾ ಮೊದಲ ಪ್ರತಿಕ್ರಿಯಾಶೀಲರ ಹಿನ್ನೆಲೆಯನ್ನು ಹೊಂದಿದ್ದ ಜನರಿಂದ ಬಹುತೇಕವಾಗಿ ತುಂಬಿಕೊಂಡಿತ್ತು. ಸೇನಾ ಇತಿಹಾಸ ಅಥವಾ ಮೊದಲ ಪ್ರತಿಕ್ರಿಯಾಶೀಲರ ಇತಿಹಾಸವಿರದ ವೈವಿಧ್ಯಮಯ ಹಿನ್ನೆಲೆಗಳಿಗೆ ಸೇರಿದ ಅನೇಕ ಪರಿಣಿತರನ್ನು ಹೊಂದುವುದರೊಂದಿಗೆ, ಪ್ರಸಕ್ತವಾಗಿ ಈ ಕ್ಷೇತ್ರದಲ್ಲಿನ ಸಮುದಾಯವು ಹೆಚ್ಚು ವೈವಿಧ್ಯಮಯವಾಗಿದೆ. ತುರ್ತುಸ್ಥಿತಿ ನಿರ್ವಹಣೆ ಅಥವಾ ಅದಕ್ಕೆ ಸಂಬಂಧಿಸಿದ ಕ್ಷೇತ್ರವೊಂದರಲ್ಲಿ ಸ್ನಾತಕಪೂರ್ವ ವ್ಯಾಸಂಗ ಮತ್ತು ಸ್ನಾತಕ ಪದವಿಗಳನ್ನು ಬಯಸುತ್ತಿರುವವರಿಗಾಗಿ ಶೈಕ್ಷಣಿಕ ಅವಕಾಶಗಳು ವರ್ಧಿಸುತ್ತಿವೆ. USನಲ್ಲಿ ತುರ್ತುಸ್ಥಿತಿ ನಿರ್ವಹಣೆ-ಸಂಬಂಧಿತ ಕಾರ್ಯಸೂಚಿಗಳನ್ನು ಹೊಂದಿರುವ 180ಕ್ಕೂ ಹೆಚ್ಚಿನ ಶಾಲೆಗಳಿವೆಯಾದರೂ, ನಿರ್ದಿಷ್ಟವಾಗಿ ತುರ್ತುಸ್ಥಿತಿ ನಿರ್ವಹಣೆಯಲ್ಲಿ ಡಾಕ್ಟರ್‌ ಪದವಿಯ ಕಾರ್ಯಸೂಚಿಯನ್ನು ಹೊಂದಿರುವ ಕೇವಲ ಒಂದು ಶಾಲೆಯಿದೆ.[೧೫]

ತುರ್ತುಸ್ಥಿತಿ ನಿರ್ವಹಣಾ ಸಮುದಾಯದಿಂದ, ಅದರಲ್ಲೂ ವಿಶೇಷವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಸಮುದಾಯದಿಂದ ಉನ್ನತ ವೃತ್ತಿಪರ ಪ್ರಮಾಣಕಗಳಿಗಾಗಿರುವ ಅಗತ್ಯವು ಗುರುತಿಸಲ್ಪಟ್ಟಿರುವುದರಿಂದ, ಸರ್ಟಿಫೈಡ್‌ ಎಮರ್ಜೆನ್ಸಿ ಮ್ಯಾನೇಜರ್‌ (CEM) ಮತ್ತು ಸರ್ಟಿಫೈಡ್‌ ಬಿಸಿನೆಸ್‌ ಕಂಟಿನ್ಯುಯಿಟಿ ಪ್ರೊಫೆಷನಲ್‌‌ನಂಥ (CBCP) ವೃತ್ತಿಪರ ಪ್ರಮಾಣೀಕರಣಗಳು ಹೆಚ್ಚು ಸಾಮಾನ್ಯವಾಗುತ್ತಿವೆ.

ತುರ್ತುಸ್ಥಿತಿ ನಿರ್ವಹಣೆಯ ತತ್ತ್ವಗಳು

[ಬದಲಾಯಿಸಿ]

2007ರಲ್ಲಿ, FEMAದ ತುರ್ತುಸ್ಥಿತಿ ನಿರ್ವಹಣೆಯ ಉನ್ನತ ಶಿಕ್ಷಣ ಯೋಜನೆಯ ಡಾ. ವೇಯ್ನ್‌ ಬ್ಲಾಂಚರ್ಡ್‌ ಎಂಬಾತ, FEMAದ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಯ ಅಧೀಕ್ಷಕನಾದ ಡಾ. ಕಾರ್ಟೆಜ್‌ ಲಾರೆನ್ಸ್‌ನ ನಿರ್ದೇಶನದ ಅನುಸಾರ, ತುರ್ತುಸ್ಥಿತಿ ನಿರ್ವಹಣೆಯ ತತ್ತ್ವಗಳನ್ನು ಪರಿಗಣಿಸುವುದಕ್ಕಾಗಿ ತುರ್ತುಸ್ಥಿತಿ ನಿರ್ವಹಣೆ ವೃತ್ತಿಗಾರರು ಮತ್ತು ವಿದ್ವಾಂಸರ ಒಂದು ಕಾರ್ಯನಿರತ ಗುಂಪಿನ ಸಭೆಕರೆದ. ವಿಷಯದ ಕುರಿತಾದ ಸಾಹಿತ್ಯದ ಒಂದು ಬೃಹತ್‌ ಶ್ರೇಣಿಯಲ್ಲೆಲ್ಲೂ ಇಲ್ಲದ “ತುರ್ತುಸ್ಥಿತಿ ನಿರ್ವಹಣೆಯ ತತ್ತ್ವಗಳಿಗೆ” ಉಲ್ಲೇಖಿಸಲ್ಪಟ್ಟ ಹಲವಾರು ಪುಸ್ತಕಗಳು, ಲೇಖನಗಳು ಮತ್ತು ಪ್ರೌಢಪ್ರಬಂಧಗಳು, ಈ ತತ್ತ್ವಗಳು ಏನಾಗಿದ್ದವೋ ಅದರ ಒಂದು ಸಮ್ಮತಿಸಲ್ಪಟ್ಟ ಅರ್ಥ ನಿರೂಪಣೆಯಾಗಿದ್ದವು ಎಂಬ ಅರಿವಿನಿಂದ ಈ ಯೋಜನೆಯು ಉತ್ತೇಜಿಸಲ್ಪಟ್ಟಿತ್ತು. ತುರ್ತುಸ್ಥಿತಿ ನಿರ್ವಹಣೆಯ ಸಿದ್ಧಾಂತವೊಂದರ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು ಬಳಸಲಾಗುವ ಎಂಟು ತತ್ತ್ವಗಳ ಕುರಿತಾಗಿ ಈ ಗುಂಪು ಸಮ್ಮತಿಸಿತು. ಕೆಳಗೆ ನೀಡಲಾಗಿರುವ ಸಾರಾಂಶವು ಈ ಎಂಟು ತತ್ತ್ವಗಳನ್ನು ಪಟ್ಟಿಮಾಡುತ್ತದೆ ಮತ್ತು ಪ್ರತಿಯೊಂದರ ಒಂದು ಸಂಕ್ಷಿಪ್ತ ವಿವರಣೆಯನ್ನು ಒದಗಿಸುತ್ತದೆ.

ತತ್ತ್ವಗಳು: ತುರ್ತುಸ್ಥಿತಿ ನಿರ್ವಹಣೆಯು ಹೀಗಿರಬೇಕಾಗುತ್ತದೆ:

  1. ವ್ಯಾಪಕವಾಗಿರಬೇಕು: ವಿಪತ್ತುಗಳಿಗೆ ಸುಸಂಬದ್ಧವಾಗಿರುವ ಎಲ್ಲಾ ಅಪಾಯಗಳು, ಎಲ್ಲಾ ಹಂತಗಳು, ಎಲ್ಲಾ ಮಧ್ಯಸ್ಥಗಾರರು ಮತ್ತು ಎಲ್ಲಾ ಪ್ರಭಾವಗಳನ್ನು ತುರ್ತುಸ್ಥಿತಿ ನಿರ್ವಾಹಕರು ಪರಿಗಣಿಸುತ್ತಾರೆ ಮತ್ತು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ.
  2. ಪ್ರಗತಿಶೀಲವಾಗಿರಬೇಕು: ತುರ್ತುಸ್ಥಿತಿಯ ನಿರ್ವಾಹಕರು ಭವಿಷ್ಯದ ವಿಪತ್ತುಗಳನ್ನು ಮುಂಗಾಣುತ್ತಾರೆ ಮತ್ತು ವಿಪತ್ತು-ನಿರೋಧಕ ಹಾಗೂ ವಿಪತ್ತಿನಿಂದ ಚೇತರಿಸಿಕೊಳ್ಳುವ ಸಮುದಾಯಗಳನ್ನು ನಿರ್ಮಿಸುವ ಸಲುವಾಗಿ ನಿರೋಧಕ ಮತ್ತು ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳುತ್ತಾರೆ.
  3. ಅಪಾಯ-ಪ್ರಚೋದಿತವಾಗಿರಬೇಕು: ಆದ್ಯತೆಗಳು ಮತ್ತು ಸಂಪನ್ಮೂಲಗಳನ್ನು ನಿಯೋಜಿಸುವಲ್ಲಿ ಬಲವಾದ ಅಪಾಯ ನಿರ್ವಹಣಾ ತತ್ತ್ವಗಳನ್ನು (ಅಪಾಯ ಗುರುತಿಸುವಿಕೆ, ಅಪಾಯ ವಿಶ್ಲೇಷಣೆ, ಮತ್ತು ಪ್ರಭಾವ ವಿಶ್ಲೇಷಣೆ) ತುರ್ತುಸ್ಥಿತಿ ನಿರ್ವಾಹಕರು ಬಳಸಿಕೊಳ್ಳುತ್ತಾರೆ.
  4. ಸಮನ್ವಯಗೊಂಡದ್ದಾಗಿರಬೇಕು: ಸರ್ಕಾರದ ಎಲ್ಲಾ ಮಟ್ಟಗಳು ಹಾಗೂ ಸಮುದಾಯವೊಂದರ ಎಲ್ಲಾ ಅಂಶಗಳ ನಡುವೆ ಪ್ರಯತ್ನದ ಏಕತೆಯಾಗುವುದನ್ನು ತುರ್ತುಸ್ಥಿತಿಯ ನಿರ್ವಾಹಕರು ಖಾತ್ರಿಪಡಿಸುತ್ತಾರೆ.
  5. ಸಹಯೋಗದ ಸ್ವರೂಪವನ್ನು ಹೊಂದಿರಬೇಕು: ವಿಶ್ವಾಸವನ್ನು ಉತ್ತೇಜಿಸಲು, ಒಂದು ತಂಡದ ವಾತಾವರಣವನ್ನು ಸಮರ್ಥಿಸಲು, ಜನಾಭಿಪ್ರಾಯವನ್ನು ನಿರ್ಮಿಸಲು, ಮತ್ತು ಸಂವಹನೆಯನ್ನು ಅನುವುಗೊಳಿಸಲೆಂದು, ವ್ಯಕ್ತಿಗಳು ಮತ್ತು ಸಂಘಟನೆಗಳ ನಡುವೆ ವಿಶಾಲವಾದ ಮತ್ತು ಪ್ರಾಮಾಣಿಕವಾದ ಸಂಬಂಧಗಳನ್ನು ತುರ್ತುಸ್ಥಿತಿಯ ನಿರ್ವಾಹಕರು ಸೃಷ್ಟಿಸುತ್ತಾರೆ ಮತ್ತು ಆಧಾರವಾಗಿರುತ್ತಾರೆ.
  6. ಸುಸಂಘಟಿತವಾಗಿರಬೇಕು: ಒಂದು ಸಾಮಾನ್ಯ ಉದ್ದೇಶವನ್ನು ಸಾಧಿಸುವುದಕ್ಕಾಗಿ ಎಲ್ಲಾ ಸುಸಂಬದ್ಧ ಮಧ್ಯಸ್ಥಗಾರರ ಚಟುವಟಿಕೆಗಳನ್ನು ತುರ್ತುಸ್ಥಿತಿ ನಿರ್ವಾಹಕರು ಏಕಕಾಲಿಕವಾಗಿಸುತ್ತಾರೆ.
  7. ಸಂದರ್ಭಕ್ಕೆ ಹೊಂದಿಕೊಳ್ಳುವ: ವಿಪತ್ತಿನ ಸವಾಲುಗಳನ್ನು ಪರಿಹರಿಸುವಲ್ಲಿ ಸೃಜನಶೀಲ ಮತ್ತು ಬದಲಾವಣೆ ತರುವ ಕಾರ್ಯವಿಧಾನಗಳನ್ನು ತುರ್ತುಸ್ಥಿತಿ ನಿರ್ವಾಹಕರು ಬಳಸುತ್ತಾರೆ.
  8. ವೃತ್ತಿಪರವಾಗಿರಬೇಕು: ತುರ್ತುಸ್ಥಿತಿ ನಿರ್ವಾಹಕರು ವಿಜ್ಞಾನ ಮತ್ತು ಜ್ಞಾನಾಧಾರಿತ ಕಾರ್ಯವಿಧಾನವೊಂದನ್ನು ಗೌರವಿಸುತ್ತಾರೆ; ಇದು ಶಿಕ್ಷಣ, ತರಬೇತಿ, ಅನುಭವ, ನೈತಿಕ ಆಚರಣೆ, ಸಾರ್ವಜನಿಕ ವ್ಯವಸ್ಥಾಪಕತ್ವ ಮತ್ತು ನಿರಂತರ ಸುಧಾರಣೆಯನ್ನು ಆಧರಿಸಿರುತ್ತದೆ.

ಈ ತತ್ತ್ವಗಳ ಒಂದು ಸಂಪೂರ್ಣವಾದ ವಿವರಣೆಯನ್ನು ತುರ್ತುಸ್ಥಿತಿ ನಿರ್ವಹಣೆಯ ತತ್ತ್ವಗಳಲ್ಲಿ ಕಾಣಬಹುದು

ಉಪಕರಣಗಳು

[ಬದಲಾಯಿಸಿ]

ಇತ್ತೀಚಿನ ವರ್ಷಗಳಲ್ಲಿ ತುರ್ತುಸ್ಥಿತಿ ನಿರ್ವಹಣೆಯ ನಿರಂತರತೆ ಲಕ್ಷಣವು ತುರ್ತುಸ್ಥಿತಿ ನಿರ್ವಹಣೆಯ ಮಾಹಿತಿ ವ್ಯವಸ್ಥೆಗಳು (ಮ್ಯಾನೇಜ್‌ಮೆಂಟ್‌ ಇನ್ಫರ್ಮೇಷನ್‌ ಸಿಸ್ಟಮ್ಸ್‌-EMIS) ಎಂಬ ಒಂದು ಹೊಸ ಪರಿಕಲ್ಪನೆಯನ್ನು ರೂಪಿಸಿದೆ. ತುರ್ತುಸ್ಥಿತಿ ನಿರ್ವಹಣೆಯ ಮಧ್ಯಸ್ಥಗಾರರ ನಡುವಿನ ನಿರಂತರತೆ ಮತ್ತು ಅಂತರ-ಚಾಲನಸಾಧ್ಯತೆಗೆ ಸಂಬಂಧಿಸಿದಂತೆ, ತುರ್ತುಸ್ಥಿತಿ ನಿರ್ವಹಣಾ ಪ್ರಕ್ರಿಯೆಯನ್ನು EMIS ಬೆಂಬಲಿಸುತ್ತದೆ; ಸರ್ಕಾರಿ ಮತ್ತು ಸರ್ಕಾರೇತರ ತೊಡಗಿಸಿಕೊಳ್ಳುವಿಕೆಯ ಎಲ್ಲಾ ಮಟ್ಟಗಳಲ್ಲಿ ತುರ್ತುಸ್ಥಿತಿ ಯೋಜನೆಗಳನ್ನು ಸಂಯೋಜಿಸುವ ಮೂಲಸೌಕರ್ಯವೊಂದನ್ನು ಒದಗಿಸುವ ಮೂಲಕ ಹಾಗೂ ತುರ್ತುಸ್ಥಿತಿಗಳ ಎಲ್ಲಾ ನಾಲ್ಕು ಹಂತಗಳಿಗೆ ಮೀಸಲಾಗಿರುವ ಎಲ್ಲಾ ಸಂಬಂಧಿತ ಸಂಪನ್ಮೂಲಗಳ (ಮಾನವ ಮತ್ತು ಇತರ ಸಂಪನ್ಮೂಲಗಳನ್ನೂ ಒಳಗೊಂಡಂತೆ) ನಿರ್ವಹಣೆಯನ್ನು ಬಳಸಿಕೊಳ್ಳುವ ಮೂಲಕ ಅದು ಸದರಿ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ. ಆರೋಗ್ಯ-ಪಾಲನೆಯ ಕ್ಷೇತ್ರದಲ್ಲಿ ಆಸ್ಪತ್ರೆಗಳು HICSನ್ನು (ಹಾಸ್ಪಿಟಲ್‌ ಇನ್ಸಿಡೆಂಟ್‌ ಕಮ್ಯಾಂಡ್‌ ಸಿಸ್ಟಮ್‌) ಬಳಸಿಕೊಳ್ಳುತ್ತವೆ; ಈ ವ್ಯವಸ್ಥೆಯು ಒಂದು ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟ ಆದೇಶ ಸರಣಿಯೊಂದರಲ್ಲಿ, ಪ್ರತಿಯೊಂದು ವಿಭಾಗಕ್ಕೆ ಮೀಸಲಾದ ಹೊಣೆಗಾರಿಕೆಗಳ ಗುಚ್ಛದೊಂದಿಗೆ ರಚನೆ ಮತ್ತು ಸಂಘಟನೆಯನ್ನು ಒದಗಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಇತರ ವೃತ್ತಿಗಳ ವ್ಯಾಪ್ತಿಯೊಳಗೆ

[ಬದಲಾಯಿಸಿ]

ತುರ್ತುಸ್ಥಿತಿ ನಿರ್ವಹಣೆಯ (ವಿಪತ್ತು ಸನ್ನದ್ಧತೆ) ಕ್ಷೇತ್ರವು ಬೆಳೆಯುತ್ತಾ ಹೋದಂತೆ, ವೈವಿಧ್ಯಮಯ ಹಿನ್ನೆಲೆಗಳಿಗೆ ಸೇರಿದ ವೃತ್ತಿಗಾರರು ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಸ್ಮರಣ-ಸಂಗ್ರಹಣಾ ಸಂಸ್ಥೆಗಳಿಗೆ (ಉದಾಹರಣೆಗೆ, ವಸ್ತುಸಂಗ್ರಹಾಲಯಗಳು, ಐತಿಹಾಸಿಕ ಸಂಘಗಳು, ಗ್ರಂಥಾಲಯಗಳು, ಮತ್ತು ದಫ್ತರಖಾನೆಗಳು) ಸೇರಿದ ವೃತ್ತಿಪರರು ತಮ್ಮ ಸಂಗ್ರಹಗಳಲ್ಲಿ ಸೇರಿರುವ ವಸ್ತುಗಳು ಮತ್ತು ದಾಖಲೆಗಳ ನಿಗಾವಣೆಯನ್ನು ನೋಡಿಕೊಳ್ಳುವ ಮೂಲಕ, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದಕ್ಕೆ ಸಮರ್ಪಿಸಿಕೊಂಡಿರುತ್ತಾರೆ. ಇದು 2001ರಲ್ಲಿ ಆದ ಸೆಪ್ಟೆಂಬರ್‌ 11 ದಾಳಿಗಳು, 2005ರಲ್ಲಿನ ಚಂಡಮಾರುತಗಳು, ಹಾಗೂ ಕಲೋನ್‌ ದಫ್ತರಖಾನೆಗಳ ಕುಸಿತವನ್ನು ಅನುಸರಿಸಿಕೊಂಡು ಹೆಚ್ಚಿಸಿಕೊಂಡ ಅರಿವಿನ ಒಂದು ಪರಿಣಾಮವಾಗಿ, ಈ ಕ್ಷೇತ್ರದಲ್ಲಿ ವರ್ಧಿಸುತ್ತಿರುವ ಒಂದು ಪ್ರಮುಖ ಅಂಗಭಾಗವಾಗಿದೆ.

ಮೌಲ್ಯಯುತ ದಾಖಲೆಗಳ ಒಂದು ಯಶಸ್ವೀ ಪುನರ್ವಶಕ್ಕೆ ಸಂಬಂಧಿಸಿದ ಸದವಕಾಶವನ್ನು ಹೆಚ್ಚಿಸುವ ಸಲುವಾಗಿ, ಒಂದು ಸುಸ್ಥಾಪಿತವಾದ ಮತ್ತು ಆಳವಾಗಿ ಪರೀಕ್ಷಿಸಲ್ಪಟ್ಟ ಯೋಜನೆಯನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಈ ಯೋಜನೆಯು ಅತಿಯೆನ್ನಿಸುವಷ್ಟು ಸಂಕೀರ್ಣವಾಗಿರಬಾರದು, ಬದಲಿಗೆ ಪ್ರತಿಕ್ರಿಯೆ ಮತ್ತು ಪುನರ್ವಶಕ್ಕೆ ನೆರವು ನೀಡುವ ಸಲುವಾಗಿ ಸರಳತೆಗೆ ಒತ್ತು ನೀಡುವಂತಿರಬೇಕು. ಸರಳತೆಯ ಒಂದು ಉದಾಹರಣೆಯಾಗಿ, ಪ್ರತಿಕ್ರಿಯೆ ಮತ್ತು ಪುನರ್ವಶದ ಹಂತದಲ್ಲಿ ನಿರ್ವಹಿಸುವ ನಿಯೋಜಿತ ಕಾರ್ಯಗಳು, ಸಾಮಾನ್ಯ ಸ್ಥಿತಿಗತಿಗಳ ಅಡಿಯಲ್ಲಿ ಅವರು ಅವನ್ನು ನಿರ್ವಹಿಸುವ ರೀತಿಯಲ್ಲಿಯೇ ಇರಬೇಕು. ಸಿಂಪರಿಕಗಳ ಅಳವಡಿಕೆಯಂಥ ತಗ್ಗಿಸುವಿಕೆ ಕಾರ್ಯತಂತ್ರಗಳೂ ಸಹ ಸಂಸ್ಥೆಯೊಳಗೆ ಸೇರಿರಬೇಕು. ಓರ್ವ ಅನುಭವಿ ಅಧ್ಯಕ್ಷನ ನೇತೃತ್ವವನ್ನು ಹೊಂದಿರುವ ಸುಸಂಘಟಿತ ಸಮಿತಿಯೊಂದರ ಸಹಕಾರವು ಈ ನಿಯೋಜಿತ ಕಾರ್ಯಕ್ಕೆ ಬೇಕಾಗುತ್ತದೆ.[೧೬] ಅಪಾಯವನ್ನು ತಗ್ಗಿಸಿ ಪುನರ್ವಶವನ್ನು ಹೆಚ್ಚಿಸಲೆಂದು ಆಚರಣೆಯಲ್ಲಿರುವ ಸಾಧನಗಳು ಮತ್ತು ಸಂಪನ್ಮೂಲಗಳೊಂದಿಗೆ ವ್ಯಕ್ತಿಗಳನ್ನು ಸದ್ಯೋಚಿತವಾಗಿ ಇರಿಸುವ ಸಲುವಾಗಿ, ವೃತ್ತಿಪರ ಸಂಘಗಳು ನಿಯತವಾದ ಕಾರ್ಯಾಗಾರಗಳ ಕಾರ್ಯಯೋಜನೆಯನ್ನು ಸಿದ್ಧಪಡಿಸುತ್ತವೆ ಮತ್ತು ವಾರ್ಷಿಕ ಸಮಾವೇಶಗಳಲ್ಲಿ ಗಮನದ ಸಭೆಗಳನ್ನು ಹಮ್ಮಿಕೊಳ್ಳುತ್ತವೆ.

ಉಪಕರಣಗಳು

[ಬದಲಾಯಿಸಿ]

ವೃತ್ತಿಪರ ಸಂಘಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಸಂಸ್ಥೆಗಳ ಜಂಟಿ ಪ್ರಯತ್ನಗಳು, ವಿಪತ್ತು ಮತ್ತು ಪುನರ್ವಶದ ಯೋಜನೆಗಳಲ್ಲಿ ವೃತ್ತಿಪರರು ಸಜ್ಜುಗೊಳ್ಳುವುದಕ್ಕೆ ನೆರವಾಗುವ ಒಂದು ವೈವಿಧ್ಯಮಯವಾದ ವಿಭಿನ್ನ ಸಾಧನಗಳ ಅಭಿವೃದ್ಧಿಗೆ ಕಾರಣವಾಗಿವೆ. ಅನೇಕ ನಿದರ್ಶನಗಳಲ್ಲಿ, ಬಾಹ್ಯ ಬಳಕೆದಾರರಿಗೆ ಈ ಸಾಧನಗಳು ಲಭ್ಯವಾಗುವಂತೆ ಮಾಡಲಾಗುತ್ತದೆ. ಅಸ್ತಿತ್ವದಲ್ಲಿರುವ ಸಂಘಟನೆಗಳಿಂದ ಸೃಷ್ಟಿಸಲ್ಪಡುವ ಯೋಜನಾ ಮಾದರಿಗಳೂ ಸಹ ವೆಬ್‌ಸೈಟುಗಳಲ್ಲಿ ಆಗಾಗ ಲಭ್ಯವಿರುತ್ತವೆ; ಒಂದು ವಿಪತ್ತು ಯೋಜನೆಯನ್ನು ಸಜ್ಜುಗೊಳಿಸುವ ಅಥವಾ ಅಸ್ತಿತ್ವದಲ್ಲಿರುವ ಯೋಜನೆಯೊಂದನ್ನು ಪರಿಷ್ಕರಿಸುವ ಯಾವುದೇ ಸಮಿತಿ ಅಥವಾ ಗುಂಪಿಗೆ ಈ ಮಾದರಿಗಳು ಪ್ರಯೋಜನಕಾರಿಯಾಗಿರಬಹುದು. ತಮ್ಮದೇ ಆದ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಯೋಜನೆಗಳು ಮತ್ತು ಸಾಧನಗಳನ್ನು ಪ್ರತಿಯೊಂದು ಸಂಸ್ಥೆಯು ಸೂತ್ರೀರಿಸಬೇಕಾದ ಅಗತ್ಯವಿರುವ ಸಂದರ್ಭದಲ್ಲೇ, ಯೋಜಿಸುವಿಕೆಯ ಪ್ರಕ್ರಿಯೆಯಲ್ಲಿ ಉಪಯುಕ್ತ ಆರಂಭದ ತಾಣಗಳಾಗಿ ಹೊರಹೊಮ್ಮುವ ಇಂಥ ಸಾಧನಗಳ ಒಂದಷ್ಟು ಉದಾಹರಣೆಗಳನ್ನೂ ಇಲ್ಲಿ ಕಾಣಬಹುದು. ಇವನ್ನು ಬಾಹ್ಯ ಕೊಂಡಿಗಳ ವಿಭಾಗದಲ್ಲಿ ಸೇರಿಸಲಾಗಿದೆ.

2009ರಲ್ಲಿ, US ಏಜೆನ್ಸಿ ಫಾರ್‌ ಇಂಟರ್‌ನ್ಯಾಷನಲ್‌ ಡೆವಲಪ್‌ಮೆಂಟ್‌ ಎಂಬ ಸಂಸ್ಥೆಯು, ವಿಪತ್ತುಗಳಿಂದ ಪ್ರಭಾವಿಸಲ್ಪಟ್ಟ ಸಮುದಾಯಗಳನ್ನು ಅಂದಾಜಿಸುವುದಕ್ಕೆ ಸಂಬಂಧಿಸಿದಂತೆ ಒಂದು ವೆಬ್‌-ಆಧಾರಿತ ಸಾಧನವನ್ನು ಸೃಷ್ಟಿಸಿತು. ಪಾಪ್ಯುಲೇಷನ್‌ ಎಕ್ಸ್‌ಪ್ಲೋರರ್‌ ಎಂದು ಕರೆಯಲ್ಪಡುವ ಈ ಸಾಧನವು ಓಕ್‌ ರಿಡ್ಜ್‌ ನ್ಯಾಷನಲ್‌ ಲ್ಯಾಬರೇಟರಿ ವತಿಯಿಂದ ಅಭಿವೃದ್ಧಿಪಡಿಸಲ್ಪಟ್ಟ ಭೂವೀಕ್ಷಣೆಯ ಸಮುದಾಯದ ದತ್ತಾಂಶವನ್ನು ಬಳಸಿಕೊಳ್ಳುತ್ತದೆ; ಪ್ರಪಂಚದಲ್ಲಿನ ಎಲ್ಲಾ ದೇಶಗಳಿಗೆ ಸಂಬಂಧಿಸಿದಂತೆ 1 ಕಿ.ಮೀ.2ನಷ್ಟಿರುವ ಒಂದು ಪ್ರಮಾಣದಲ್ಲಿ ಸಮುದಾಯವನ್ನು ವಿತರಿಸುವುದು ಇದರ ವಿಶಿಷ್ಟತೆಯಾಗಿದೆ. ಆಹಾರದ ಅಭದ್ರತೆಗೆ ಈಡಾಗುವ ಮತ್ತು ಅದರಿಂದ ಪ್ರಭಾವಿಸಲ್ಪಟ್ಟ ಸಮುದಾಯಗಳನ್ನು ಅಂದಾಜಿಸುವ ಸಲುವಾಗಿ USAIDನ FEWS NETನಿಂದ ಬಳಸಲ್ಪಡುವ ಈ ಪಾಪ್ಯುಲೇಷನ್‌ ಎಕ್ಸ್‌ಪ್ಲೋರರ್‌ ಈಗ ಜನಪ್ರಿಯತೆಯನ್ನು ಗಳಿಸುತ್ತಿದ್ದು, ತುರ್ತುಸ್ಥಿತಿ ವಿಶ್ಲೇಷಣೆ ಮತ್ತು ಪ್ರತಿಕ್ರಿಯಾ ಕ್ರಮಗಳ ಒಂದು ಶ್ರೇಣಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ; 2009ರಲ್ಲಿ ಪೆಸಿಫಿಕ್‌ ಸಾಗರದ ವಲಯದಲ್ಲಿ ಕಂಡುಬಂದ ಒಂದು ಸುನಾಮಿ ಘಟನೆ ಹಾಗೂ ಮಧ್ಯ ಅಮೆರಿಕಾದಲ್ಲಿ ಕಂಡುಬಂದ ಪ್ರವಾಹಗಳಿಂದ ಪ್ರಭಾವಿಸಲ್ಪಟ್ಟ ಸಮುದಾಯಗಳ ಅಂದಾಜಿಸುವಿಕೆಯೂ ಇದರಲ್ಲಿ ಸೇರಿದೆ.

ತುರ್ತುಸ್ಥಿತಿ ಪ್ರತಿಕ್ರಿಯೆಯಲ್ಲಿ ಸಹಭಾಗಿತ್ವವನ್ನು ಪರ್ಯಾಲೋಚಿಸುತ್ತಿರುವ ಪಶುವೈದ್ಯರಿಗೆ ಸಂಬಂಧಿಸಿದಂತೆ 2007ರಲ್ಲಿ ಜರ್ನಲ್‌ ಆಫ್‌ ದಿ ಅಮೆರಿಕನ್‌ ವೆಟರ್ನರಿ ಮೆಡಿಕಲ್‌ ಅಸೋಸಿಯೇಷನ್‌ನಲ್ಲಿ ಒಂದು ತಾಳೆಪಟ್ಟಿಯು ಪ್ರಕಟಿಸಲ್ಪಟ್ಟಿತು; ತುರ್ತುಸ್ಥಿತಿಯೊಂದರ ಸಂದರ್ಭದಲ್ಲಿ ನೆರವಾಗಿ ನಿಲ್ಲುವುದಕ್ಕೆ ಮುಂಚಿತವಾಗಿ ಓರ್ವ ವೃತ್ತಿಪರನು ತನ್ನನ್ನು ತಾನು ಕೇಳಿಕೊಳ್ಳಬೇಕಾದ, ಎರಡು ವಿಭಾಗಗಳಲ್ಲಿರುವ ಪ್ರಶ್ನೆಗಳನ್ನು ಇದು ಹೊಂದಿತ್ತು: ಸಹಭಾಗಿತ್ವಕ್ಕೆ ಸಂಬಂಧಿಸಿದಂತಿರುವ ಪರಿಪೂರ್ಣ ಅವಶ್ಯಕತೆಗಳು: ಭಾಗವಹಿಸುವುದನ್ನು ನಾನು ಆರಿಸಿಕೊಂಡಿದ್ದೇನೆಯೇ?, ನಾನು ICS ತರಬೇತಿಯನ್ನು ತೆಗೆದುಕೊಂಡಿದ್ದೇನೆಯೇ?, ಅಗತ್ಯವಿರುವ ಇತರ ಹಿನ್ನೆಲೆ ಶಿಕ್ಷಣ ಕ್ರಮಗಳನ್ನು ನಾನು ಪಡೆದುಕೊಂಡಿದ್ದೇನೆಯೇ?, ಇದನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ನಾನು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇನೆಯೇ?, ನನ್ನ ಕುಟುಂಬದೊಂದಿಗೆ ನಾನು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇನೆಯೇ?

ಘಟನೆಯ ಸಹಭಾಗಿತ್ವ: ಭಾಗವಹಿಸಲೆಂದು ನಾನು ಆಹ್ವಾನಿಸಲ್ಪಟ್ಟಿದ್ದೇನೆಯೇ?, ಸದರಿ ಧ್ಯೇಯಕ್ಕೆ ಸಂಬಂಧಿಸಿದಂತೆ ನನ್ನ ಕುಶಲತೆಯು ಹೊಂದಿಕೊಳ್ಳುತ್ತದೆಯೇ?, ಕುಶಲತೆಗಳನ್ನು ಚುರುಕುಗೊಳಿಸಿಕೊಳ್ಳುವ ಸಲುವಾಗಿರುವ ತರಬೇತಿಗೆ ನನಗೆ ಸಕಾಲದಲ್ಲಿ ಪ್ರವೇಶಲಭ್ಯತೆಯಿದೆಯೇ ಅಥವಾ ಅಗತ್ಯವಿರುವ ಹೊಸ ಕುಶಲತೆಗಳನ್ನು ನಾನು ಪಡೆದುಕೊಳ್ಳಬಲ್ಲೆನೇ?, ಇದೊಂದು ಸ್ವಾವಲಂಬನೆಯ ಧ್ಯೇಯಯಾಗಿದೆಯೇ?, ಮೂರರಿಂದ ಐದು ದಿನಗಳವರೆಗಿನ ಸ್ವಾವಲಂಬನೆಗೆ ಸಂಬಂಧಿಸಿದಂತೆ ಅಗತ್ಯವಾಗಿರುವ ಪೂರೈಕೆಗಳನ್ನು ನಾನು ಹೊಂದಿದ್ದೇನೆಯೇ?

ಈ ತಾಳೆಪಟ್ಟಿಯು ಪಶುವೈದ್ಯರಿಗಾಗಿ ಬರೆಯಲ್ಪಟ್ಟಿರುವುದು ಮಾತ್ರವಲ್ಲದೇ, ತುರ್ತುಸ್ಥಿತಿಯೊಂದರ ಸಂದರ್ಭದಲ್ಲಿ ನೆರವಾಗುವುದಕ್ಕೆ ಮುಂಚಿತವಾಗಿ ಯಾವುದೇ ವೃತ್ತಿಪರನು ಪರಿಗಣಿಸಬೇಕಾದ ಅಗತ್ಯಗಳಿಗೆ ಅನ್ವಯವಾಗುತ್ತದೆ.[೧೭]

ಅಂತರರಾಷ್ಟ್ರೀಯ ಸಂಘಟನೆಗಳು

[ಬದಲಾಯಿಸಿ]

ಇಂಟರ್‌‌ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಎಮರ್ಜೆನ್ಸಿ ಮ್ಯಾನೇಜರ್ಸ್‌

[ಬದಲಾಯಿಸಿ]

ಇಂಟರ್‌‌ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಎಮರ್ಜೆನ್ಸಿ ಮ್ಯಾನೇಜರ್ಸ್‌ (IAEM) ಎಂಬುದು ಲಾಭಗಳಿಕೆಯ-ಉದ್ದೇಶವಿಲ್ಲದ ಒಂದು ಶೈಕ್ಷಣಿಕ ಸಂಘಟನೆಯಾಗಿದ್ದು, ತುರ್ತುಸ್ಥಿತಿಗಳು ಮತ್ತು ವಿಪತ್ತುಗಳ ಸಂದರ್ಭದಲ್ಲಿ ಜೀವಗಳನ್ನು ಉಳಿಸುವ ಹಾಗೂ ಆಸ್ತಿಯನ್ನು ಸಂರಕ್ಷಿಸುವ ಗುರಿಗಳನ್ನು ಪ್ರವರ್ತಿಸುವುದಕ್ಕೆ ಇದು ತನ್ನನ್ನು ಸಮರ್ಪಿಸಿಕೊಂಡಿದೆ. ಮಾಹಿತಿ, ಜಾಲಬಂಧಕಾರ್ಯ ಮತ್ತು ವೃತ್ತಿಪರ ಅವಕಾಶಗಳನ್ನು ಒದಗಿಸುವ ಮೂಲಕ ತನ್ನ ಸದಸ್ಯರಿಗೆ ಸೇವೆ ಸಲ್ಲಿಸುವುದು, ಹಾಗೂ ತುರ್ತುಸ್ಥಿತಿ ನಿರ್ವಹಣಾ ವೃತ್ತಿಯನ್ನು ಪ್ರಗತಿಪಥದತ್ತ ಕೊಂಡೊಯ್ಯುವುದು IAEMನ ಧ್ಯೇಯವಾಗಿದೆ.

ಪ್ರಸಕ್ತವಾಗಿ ಇದು ವಿಶ್ವಾದ್ಯಂತ ಏಳು ಪರಿಷತ್ತುಗಳನ್ನು ಹೊಂದಿದೆ. ಅವುಗಳೆಂದರೆ: ಏಷ್ಯಾ, ಕೆನಡಾ, ಯುರೋಪ, ಅಂತರರಾಷ್ಟ್ರೀಯ, ಓಷನಿಯಾ, ವಿದ್ಯಾರ್ಥಿ ಮತ್ತು USA

ವೃತ್ತಿಯ ಪರವಾಗಿ ಈ ಕೆಳಕಂಡ ಕಾರ್ಯಸೂಚಿಗಳನ್ನೂ ಸಹ IAEM ನಿರ್ವಹಿಸುತ್ತದೆ: ಸರ್ಟಿಫೈಡ್‌ ಎಮರ್ಜೆನ್ಸಿ ಮ್ಯಾನೇಜರ್‌(CEM) ವಿದ್ಯಾರ್ಥಿ ವೇತನ ಕಾರ್ಯಸೂಚಿ

ದಿ ಏರ್‌ ಫೋರ್ಸ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್ (www.af-em.org ಮತ್ತು www.3e9x1.com) ಎಂಬುದು IAEMನೊಂದಿಗಿನ ಸದಸ್ಯತ್ವದಿಂದಾಗಿ ಬಿಡಿಬಿಡಿಯಾಗಿ ಮಾನ್ಯತೆಯನ್ನು ಪಡೆದಿರುವ ಸಂಸ್ಥೆಯಾಗಿದ್ದು, US ವಾಯುಪಡೆಯ ತುರ್ತುಸ್ಥಿತಿ ನಿರ್ವಾಹಕರಿಗೆ ಸಂಬಂಧಿಸಿದಂತೆ ತುರ್ತುಸ್ಥಿತಿ ನಿರ್ವಹಣಾ ಮಾಹಿತಿ ಮತ್ತು ಜಾಲಬಂಧಕಾರ್ಯವನ್ನು ಇದು ಒದಗಿಸುತ್ತದೆ.

ರೆಡ್‌ ಕ್ರಾಸ್‌/ರೆಡ್‌ ಕ್ರೆಸೆಂಟ್‌

[ಬದಲಾಯಿಸಿ]

ತುರ್ತುಸ್ಥಿತಿಗಳಿಗೆ ಪ್ರತಿಕ್ರಿಯಿಸುವಲ್ಲಿ ರಾಷ್ಟ್ರೀಯ ರೆಡ್‌ ಕ್ರಾಸ್‌/ರೆಡ್‌ ಕ್ರೆಸೆಂಟ್‌ ಸಂಘಗಳು ಅನೇಕವೇಳೆ ನಿರ್ಣಾಯಕ ಪಾತ್ರಗಳನ್ನು ವಹಿಸಿವೆ. ಮೇಲಾಗಿ, ಇಂಟರ್‌ನ್ಯಾಷನಲ್‌ ಫೆಡರೇಷನ್‌ ಆಫ್‌ ರೆಡ್‌ ಕ್ರಾಸ್‌ ಅಂಡ್‌ ರೆಡ್‌ ಕ್ರೆಸೆಂಟ್‌ ಸೊಸೈಟೀಸ್‌ (IFRC, ಅಥವಾ "ದಿ ಫೆಡರೇಷನ್‌") ಸಂಸ್ಥೆಯು ಮೌಲ್ಯಮಾಪನಾ ತಂಡಗಳನ್ನು (ಉದಾಹರಣೆಗೆ ಫೀಲ್ಡ್‌ ಅಸೆಸ್‌ರ್ಮೆಟ್‌ ಅಂಡ್‌ ಕೋಆರ್ಡಿನೇಷನ್‌ ಟೀಮ್‌ - FACT Archived 2011-01-22 ವೇಬ್ಯಾಕ್ ಮೆಷಿನ್ ನಲ್ಲಿ.) ತೊಂದರೆಗೊಳಗಾದ ದೇಶಕ್ಕೆ ನಿಯೋಜಿಸಬಹುದು. ಇದು ನೆರವೇರಬೇಕೆಂದರೆ ರಾಷ್ಟ್ರೀಯ ರೆಡ್‌ ಕ್ರಾಸ್‌ ಅಥವಾ ರೆಡ್‌ ಕ್ರೆಸೆಂಟ್‌ ಸಂಘಗಳು ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಅಗತ್ಯಗಳನ್ನು ನಿರ್ಣಯಿಸಿದ ನಂತರ, ತೊಂದರೆಗೊಳಗಾದ ದೇಶ ಅಥವಾ ಪ್ರದೇಶಕ್ಕೆ ಎಮರ್ಜೆನ್ಸಿ ರೆಸ್ಪಾನ್ಸ್‌ ಯುನಿಟ್ಸ್‌ನ್ನು (ERUಗಳು) Archived 2010-11-15 ವೇಬ್ಯಾಕ್ ಮೆಷಿನ್ ನಲ್ಲಿ. ನಿಯೋಜಿಸಬಹುದು. ತುರ್ತುಸ್ಥಿತಿಯ ನಿರ್ವಹಣಾ ಚೌಕಟ್ಟಿನ ಪ್ರತಿಕ್ರಿಯೆಯ ಅಂಗಭಾಗದಲ್ಲಿ ಅವು ವಿಶೇಷಜ್ಞತೆಯನ್ನು ಪಡೆದಿರುತ್ತವೆ.

ವಿಶ್ವಸಂಸ್ಥೆ

[ಬದಲಾಯಿಸಿ]

ವಿಶ್ವಸಂಸ್ಥೆಯ ವ್ಯವಸ್ಥೆಯೊಳಗೆ ತುರ್ತುಸ್ಥಿತಿಯ ಪ್ರತಿಕ್ರಿಯೆಗೆ ಸಂಬಂಧಿಸಿದ ಹೊಣೆಗಾರಿಕೆಯು, ತೊಂದರೆಗೊಳಗಾದ ದೇಶದೊಳಗಿನ ಸ್ಥಾನಿಕ ಸಂಯೋಜಕರೊಂದಿಗೆ ಉಳಿದುಕೊಂಡಿರುತ್ತದೆ. ಆದಾಗ್ಯೂ, ಒಂದು ವೇಳೆ ತೊಂದರೆಗೊಳಗಾದ ದೇಶದ ಸರ್ಕಾರದಿಂದ, UN ಜನೋಪಕಾರಿ ವ್ಯವಹಾರಗಳ ಹೊಂದಾಣಿಕೆಗೆ ಸಂಬಂಧಿಸಿದ ಕಚೇರಿಯಿಂದ (UN-OCHA) ಮನವಿ ಮಾಡಲ್ಪಟ್ಟಲ್ಲಿ, UNನ ವಿಪತ್ತು ಅಳೆಯುವಿಕೆ ಮತ್ತು ಹೊಂದಾಣಿಕೆ (UNDAC) ತಂಡವನ್ನು ನಿಯೋಜಿಸುವ ಮೂಲಕ ಅಂತರರಾಷ್ಟ್ರೀಯ ಪ್ರತಿಕ್ರಿಯೆಯನ್ನು ಆಚರಣೆಯಲ್ಲಿ ಸುಸಂಘಟಿತವಾಗಿಸಲಾಗುವುದು.

ವಿಶ್ವ ಬ್ಯಾಂಕ್

[ಬದಲಾಯಿಸಿ]

1980ರಿಂದಲೂ, ವಿಪತ್ತು ನಿರ್ವಹಣೆಗೆ ಸಂಬಂಧಿಸಿರುವ 500ಕ್ಕೂ ಹೆಚ್ಚಿನ ಕಾರ್ಯಾಚರಣೆಗಳನ್ನು ವಿಶ್ವ ಬ್ಯಾಂಕ್‌ ಅನುಮೋದಿಸಿದ್ದು, ಇದಕ್ಕೆ ಸಂಬಂಧಿಸಿದ ಮೊತ್ತವು 40 ಶತಕೋಟಿ US$ಗಿಂತಲೂ ಹೆಚ್ಚಿರುವುದು ಗಮನಾರ್ಹ ಸಂಗತಿ. ವಿಪತ್ತಿನ-ನಂತರದ ಮರುನಿರ್ಮಾಣ ಯೋಜನೆಗಳು ಮಾತ್ರವೇ ಅಲ್ಲದೆ, ಅರ್ಜೆಂಟೈನಾ, ಬಾಂಗ್ಲಾದೇಶ, ಕೊಲಂಬಿಯಾ, ಹೈಟಿ, ಭಾರತ, ಮೆಕ್ಸಿಕೊ, ಟರ್ಕಿ ಮತ್ತು ವಿಯೆಟ್ನಾಂನಂಥ ದೇಶಗಳಲ್ಲಿನ ವಿಪತ್ತಿನ ಪ್ರಭಾವಗಳನ್ನು ತಡೆಗಟ್ಟುವ ಮತ್ತು ತಗ್ಗಿಸುವ ಕಡೆಗೆ ಗುರಿಯಿಟ್ಟುಕೊಂಡಿರುವ ಅಂಶಗಳನ್ನು ಹೊಂದಿರುವ ಯೋಜನೆಗಳೂ ಸಹ ಇವುಗಳಲ್ಲಿ ಸೇರಿವೆ.[೧೮]

ತಡೆಯುವಿಕೆಯ ಮತ್ತು ತಗ್ಗಿಸುವಿಕೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಗಮನ ಹರಿಸಲಾಗುವ ಸಾಮಾನ್ಯ ಕ್ಷೇತ್ರಗಳಲ್ಲಿ ಇವು ಸೇರಿವೆ: ಕಾಳ್ಗಿಚ್ಚುಗಳಿಗೆ ಕಾರಣವಾಗುವಂಥ, ಕೃಷಿ ಉತ್ಪನ್ನವನ್ನು ಸಿಗಿಯುವ ಮತ್ತು ಸುಟ್ಟುಹಾಕುವ ಕ್ರಮಗಳನ್ನು ಮಾಡದಂತೆ ಕೃಷಿಕರನ್ನು ತಡೆಯಲು ನಡೆಸುವ ಪೂರ್ವಭಾವಿ ಎಚ್ಚರಿಕೆ ಕ್ರಮಗಳು ಮತ್ತು ಶಿಕ್ಷಣ ಪ್ರಚಾರಾಂದೋಲನಗಳಂಥ ಅರಣ್ಯದ ಅಗ್ನಿಯನ್ನು ತಡೆಯುವ ಕ್ರಮಗಳು; ಕಡಲತೀರ ಸಂರಕ್ಷಣೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜಗಲಿ ಕಟ್ಟುವಿಕೆಯಿಂದ ಮೊದಲ್ಗೊಂಡು ಉತ್ಪಾದನೆಯ ಹೊಂದಾವಣೆಯವರೆಗೆ ವ್ಯಾಪ್ತಿಯನ್ನು ಹೊಂದಿರುವ ಪ್ರವಾಹ ತಡೆಯುವಿಕೆಯ ಕಾರ್ಯವಿಧಾನಗಳು; ಮತ್ತು ಭೂಕಂಪ-ಸಂಭವದ ನಿರ್ಮಾಣವನ್ನು ತಡೆಯುವುದು.[೧೯]

ಕೊಲಂಬಿಯಾ ವಿಶ್ವವಿದ್ಯಾಲಯದ ಜೊತೆಗಿನ ಜಂಟಿ-ಸಾಹಸವೊಂದರಲ್ಲಿ, ಪ್ರೋವೆನ್ಷನ್‌ ಕನ್ಸೋರ್ಟಿಯಂ ಅಡಿಯಲ್ಲಿ, ಸ್ವಾಭಾವಿಕ ವಿಪತ್ತಿನ ಅಪಾಯದ ಪ್ರದೇಶಗಳ ಒಂದು ಜಾಗತಿಕ ಅಪಾಯದ ವಿಶ್ಲೇಷಣೆಯನ್ನು ವಿಶ್ವ ಬ್ಯಾಂಕ್‌ ಸ್ಥಾಪಿಸಿದೆ.[೨೦]

2006ರ ಜೂನ್‌ನಲ್ಲಿ, ವಿಪತ್ತಿನ ತಗ್ಗಿಸುವಿಕೆ ಮತ್ತು ಚೇತರಿಕೆಗೆ ಸಂಬಂಧಿಸಿದ ಜಾಗತಿಕ ಸೌಕರ್ಯವನ್ನು (ಗ್ಲೋಬಲ್‌ ಫೆಸಿಲಿಟಿ ಫಾರ್‌ ಡಿಸಾಸ್ಟರ್‌ ರಿಡಕ್ಷನ್‌ ಅಂಡ್‌ ರಿಕವರಿ-GFDRR) ವಿಶ್ವ ಬ್ಯಾಂಕ್‌ ಸ್ಥಾಪಿಸಿತು; ಇದು ನೆರವು ನೀಡುವ ಇತರ ದಾತರೊಂದಿಗಿನ ಒಂದು ಸುದೀರ್ಘ ಅವಧಿಯ ಭಾಗೀದಾರಿಕೆಯಾಗಿದ್ದು, ಅಭಿವೃದ್ಧಿಯ ಪಥದಲ್ಲಿರುವ ವಿಪತ್ತಿನ ಅಪಾಯದ ತಗ್ಗಿಸುವಿಕೆಯನ್ನು ಹ್ಯೋಗೋ ಫ್ರೇಮ್‌ವರ್ಕ್‌ ಫಾರ್‌ ಆಕ್ಷನ್‌ ಸಂಸ್ಥೆಯ ನೆರವಿನೊಂದಿಗೆ ಮುಖ್ಯವಾಹಿನಿಗೆ ತರುವ ಮೂಲಕ ವಿಪತ್ತಿನ ನಷ್ಟಗಳನ್ನು ತಗ್ಗಿಸುವ ಉದ್ದೇಶವನ್ನು ಅದು ಹೊಂದಿದೆ. ವಿಪತ್ತಿನ ತಡೆಯುವಿಕೆ ಮತ್ತು ತುರ್ತುಸ್ಥಿತಿಯ ಸನ್ನದ್ಧತೆಗೆ ಸಂಬಂಧಿಸಿದಂತಿರುವ ಸ್ಥಳೀಯ ಸಾಮರ್ಥ್ಯಗಳನ್ನು ವರ್ಧಿಸುವ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಸೂಚಿಗಳಿಗೆ ಧನಸಹಾಯ ನೀಡುವಂತಾಗಲು ಈ ಸೌಕರ್ಯವು ಅಭಿವೃದ್ಧಿಶೀಲ ದೇಶಗಳಿಗೆ ನೆರವು ನೀಡುತ್ತದೆ.[೨೧]

ಐರೋಪ್ಯ ಒಕ್ಕೂಟ

[ಬದಲಾಯಿಸಿ]

2001ರಿಂದಲೂ ಐರೋಪ್ಯ ಒಕ್ಕೂಟವು (EU) ನಾಗರಿಕ ಸಂರಕ್ಷಣೆಗೆ ಸಂಬಂಧಿಸಿದಂತಿರುವ ಸಮುದಾಯ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದ್ದು, ಇದು ಜಾಗತಿಕ ಸನ್ನಿವೇಶದಲ್ಲಿ ಒಂದು ಗಮನಾರ್ಹ ಪಾತ್ರವನ್ನು ನಿರ್ವಹಿಸಲು ಶುರುಮಾಡಿತು. ತುರ್ತು ಪ್ರತಿಕ್ರಿಯಾ ಕ್ರಮಗಳ ಅಗತ್ಯವನ್ನು ಹೊಂದಿರಬಹುದಾದ ಪ್ರಮುಖ ತುರ್ತುಸ್ಥಿತಿಗಳ ಸಂದರ್ಭದಲ್ಲಿ, ನಾಗರಿಕ ಸಂರಕ್ಷಣೆಯ ನೆರವಿನ ಮಧ್ಯಸ್ಥಿಕೆಗಳಲ್ಲಿ ಸಹ-ಕಾರ್ಯಾಚರಣೆಯನ್ನು ಅನುವುಗೊಳಿಸುವುದು ಸದರಿ ಕಾರ್ಯವಿಧಾನದ ಮುಖ್ಯ ಪಾತ್ರವಾಗಿದೆ. ಇಂಥ ಪ್ರಮುಖ ತುರ್ತುಸ್ಥಿತಿಗಳ ಒಂದು ಸನ್ನಿಹಿತ ಬೆದರಿಕೆಯನ್ನು ಹೊಂದಿರಬಹುದಾದ ಸನ್ನಿವೇಶಗಳಿಗೂ ಇದು ಅನ್ವಯಿಸುತ್ತದೆ.

ಮೇಲ್ವಿಚಾರಣೆ ಮತ್ತು ಮಾಹಿತಿ ಕೇಂದ್ರವು ಈ ಕಾರ್ಯವಿಧಾನದ ಹೃದಯಭಾಗವಾಗಿರುತ್ತದೆ. ಇದು ಐರೋಪ್ಯ ಆಯೋಗದ ಜನೋಪಕಾರಿ ನೆರವು ಮತ್ತು ನಾಗರಿಕ ಸಂರಕ್ಷಣೆಗೆ ಸಂಬಂಧಿಸಿದ ಮಹಾ-ನಿರ್ದೇಶನಾಲಯದ ಭಾಗವಾಗಿದ್ದು, ದಿನದ 24 ಗಂಟೆಗಳಲ್ಲಿ ಇದನ್ನು ಸಂಪರ್ಕಿಸಬಹುದಾಗಿದೆ. ತೊಡಗಿಸಿಕೊಳ್ಳುವ ಎಲ್ಲಾ ರಾಜ್ಯಗಳ ನಡುವೆ ಲಭ್ಯವಿರುವ ನಾಗರಿಕ ಸಂರಕ್ಷಣಾ ವಿಧಾನದ ಏಕಗವಾಕ್ಷಿ ನೆಲೆಯೊಂದಕ್ಕೆ, ವೇದಿಕೆಯೊಂದಕ್ಕೆ ದೇಶಗಳು ಸಂಪರ್ಕಹೊಂದಲು ಇದು ಅನುವುಮಾಡಿಕೊಡುತ್ತದೆ. ಒಂದು ಪ್ರಮುಖ ವಿಪತ್ತಿನಿಂದ ತೊಂದರೆಗೊಳಗಾಗಿರುವ, ಒಕ್ಕೂಟದ ಒಳಗೆ ಅಥವಾ ಹೊರಗಿರುವ ಯಾವುದೇ ದೇಶವು, MIC ಮೂಲಕ ನೆರವಿಗಾಗಿ ಮನವಿಯೊಂದನ್ನು ಸಲ್ಲಿಸಬಹುದಾಗಿದೆ. ಭಾಗವಹಿಸುವ ರಾಜ್ಯಗಳು, ತೊಂದರೆಗೊಳಗಾದ ದೇಶ ಮತ್ತು ರವಾನಿಸಲ್ಪಟ್ಟ ಕ್ಷೇತ್ರ ಪರಿಣಿತರ ನಡುವಿನ ಒಂದು ಸಂವಹನಾ ಕೇಂದ್ರವಾಗಿ ಇದು ಕೇಂದ್ರಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತದೆ. ಚಾಲ್ತಿಯಲ್ಲಿರುವ ತುರ್ತುಸ್ಥಿತಿಯೊಂದರ ವಾಸ್ತವಿಕ ಸ್ಥಿತಿಗತಿಯ ಕುರಿತಾದ ಉಪಯುಕ್ತ ಮತ್ತು ಪರಿಷ್ಕರಿಸಿದ ಮಾಹಿತಿಯನ್ನೂ ಇದು ಒದಗಿಸುತ್ತದೆ.[೨೨]

ಅಂತರರಾಷ್ಟ್ರೀಯ ಚೇತರಿಕೆಯ ವೇದಿಕೆ

[ಬದಲಾಯಿಸಿ]

ಅಂತರರಾಷ್ಟ್ರೀಯ ಚೇತರಿಕೆಯ ವೇದಿಕೆಯು (ಇಂಟರ್‌‌ನ್ಯಾಷನಲ್‌ ರಿಕವರಿ ಪ್ಲ್ಯಾಟ್‌ಫಾರಂ-IRP), 2005ರ ಜನವರಿಯಲ್ಲಿ ಜಪಾನ್‌ನ ಹ್ಯೋಗೋದ ಕೋಬ್ ಎಂಬಲ್ಲಿ ನಡೆದ ವಿಪತ್ತು ತಗ್ಗಿಸುವಿಕೆಯ ಕುರಿತಾದ ವಿಶ್ವ ಸಮಾವೇಶದಲ್ಲಿ (ವರ್ಲ್ಡ್‌ ಕಾನ್ಫರೆನ್ಸ್‌ ಆನ್‌ ಡಿಸಾಸ್ಟರ್‌ ರಿಡಕ್ಷನ್‌-WCDR) ರೂಪಿಸಲ್ಪಟ್ಟಿತು. ವಿಪತ್ತು ತಗ್ಗಿಸುವಿಕೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಕಾರ್ಯತಂತ್ರ (ಇಂಟರ್‌ನ್ಯಾಷನಲ್‌ ಸ್ಟ್ರಾಟಜಿ ಫಾರ್‌ ಡಿಸಾಸ್ಟರ್‌ ರಿಡಕ್ಷನ್‌-ISDR) ವ್ಯವಸ್ಥೆಯ ಒಂದು ವಿಷಯಾಧಾರಿತ ವೇದಿಕೆಯಾಗಿರುವ IRPಯು, 2005-2015ರ ಹ್ಯೋಗೋ ಕ್ರಿಯಾಸಂಬಂಧಿ ಚೌಕಟ್ಟನ್ನು (ಹ್ಯೋಗೋ ಫ್ರೇಮ್‌ವರ್ಕ್‌ ಫಾರ್‌ ಆಕ್ಷನ್‌-HFA) ಕಾರ್ಯರೂಪಕ್ಕೆ ತರುವುದಕ್ಕೆ ಸಂಬಂಧಿಸಿದ ಒಂದು ಪ್ರಧಾನ ಆಧಾರಸ್ತಂಭವಾಗಿದೆ: ವಿಪತ್ತುಗಳಿಗೆ ಈಡಾಗಿರುವ ರಾಷ್ಟ್ರಗಳು ಮತ್ತು ಸಮುದಾಯಗಳ ಚೇತರಿಸಿಕೊಳ್ಳುವಿಕೆಯಲ್ಲಿ ತೊಡಗಿಸಿಕೊಂಡಿರುವ ಈ ಚೌಕಟ್ಟು, WCDRನಲ್ಲಿರುವ 168 ಸರ್ಕಾರಗಳಿಂದ ದಶಕಗಳಿಂದಲೂ ಅಳವಡಿಸಿಕೊಳ್ಳಲ್ಪಟ್ಟಿರುವ, ವಿಪತ್ತು ಅಪಾಯವನ್ನು ತಗ್ಗಿಸುವುದಕ್ಕೆ ಸಂಬಂಧಿಸಿದ ಒಂದು ಜಾಗತಿಕ ಯೋಜನೆಯಾಗಿದೆ.

ವಿಪತ್ತಿನ-ನಂತರದ ಚೇತರಿಕೆಯಲ್ಲಿ ಅನುಭವಿಸಲ್ಪಟ್ಟ ಅಂತರಗಳು ಮತ್ತು ನಿರ್ಬಂಧಗಳನ್ನು ಗುರುತಿಸುವುದು ಹಾಗೂ ಚೇತರಿಸಿಕೊಳ್ಳುವ ಪುನರ್ವಶಕ್ಕೆ ಸಂಬಂಧಿಸಿದಂತೆ ಸಾಧನಗಳು, ಸಂಪನ್ಮೂಲಗಳು, ಮತ್ತು ಸಾಮರ್ಥ್ಯದ ಅಭಿವೃದ್ಧಿಗಾಗಿ ಒಂದು ವೇಗವರ್ಧಕದಂತೆ ಕಾರ್ಯನಿರ್ವಹಿಸುವುದು IRPಯ ಪ್ರಧಾನ ಪಾತ್ರವಾಗಿದೆ. ಉತ್ತಮವಾದ ಚೇತರಿಕೆಯ ಪರಿಪಾಠದ ಕುರಿತಾದ ಜ್ಞಾನದ ಒಂದು ಅಂತರರಾಷ್ಟ್ರೀಯ ಮೂಲವಾಗುವುದರ ಕಡೆಗೆ IRP ಗುರಿಯಿಟ್ಟುಕೊಂಡಿದೆ.[೪]

ರಾಷ್ಟ್ರೀಯ ಸಂಘಟನೆಗಳು

[ಬದಲಾಯಿಸಿ]

ಆಸ್ಟ್ರೇಲಿಯಾ

[ಬದಲಾಯಿಸಿ]

ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಆಸ್ಟ್ರೇಲಿಯಾ (EMA) ಎಂಬುದು ಆಸ್ಟ್ರೇಲಿಯಾದಲ್ಲಿನ ತುರ್ತುಸ್ಥಿತಿ ನಿರ್ವಹಣೆಗೆ ಸಂಬಂಧಿಸಿದ, ಸುಸಂಘಟಿತವಾಗಿಸುವ ಮತ್ತು ಸಲಹೆ ನೀಡುವ ಪ್ರಧಾನ ಒಕ್ಕೂಟ ಘಟಕವಾಗಿದೆ. ಐದು ರಾಜ್ಯಗಳು ಮತ್ತು ಎರಡು ಅಧೀನರಾಜ್ಯಗಳು ತಮ್ಮದೇ ಆದ ರಾಜ್ಯದ ತುರ್ತುಸ್ಥಿತಿ ಸೇವೆಯನ್ನು ಹೊಂದಿವೆ. ರಾಜ್ಯದ ಆರಕ್ಷಕ, ಅಗ್ನಿಶಾಮಕ ಮತ್ತು ಸಂಚಾರಿ ಚಿಕಿತ್ಸಾಲಯದ ಸೇವೆಗಳನ್ನು ಸಂಪರ್ಕಿಸಲು, ಒಂದು ರಾಷ್ಟ್ರೀಯ 000 ತುರ್ತುಸ್ಥಿತಿ ದೂರವಾಣಿ ಸಂಖ್ಯೆಯನ್ನು ತುರ್ತು ಕರೆಯ ಸೇವೆಯು ಒದಗಿಸುತ್ತದೆ. ರಾಜ್ಯದ ಮತ್ತು ಒಕ್ಕೂಟದ ಸಹಕಾರಕ್ಕೆ ಸಂಬಂಧಿಸಿದಂತೆ ವ್ಯವಸ್ಥೆಗಳನ್ನು ಯುಕ್ತ ಸ್ಥಳದಲ್ಲಿ ಮಾಡಲಾಗಿದೆ.

ಕೆನಡಾ

[ಬದಲಾಯಿಸಿ]

ಪಬ್ಲಿಕ್‌ ಸೇಫ್ಟಿ ಕೆನಡಾ ಎಂಬುದು ಕೆನಡಾದ ರಾಷ್ಟ್ರೀಯ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಯಾಗಿದೆ. ತುರ್ತುಸ್ಥಿತಿಗಳೊಂದಿಗೆ ವ್ಯವಹರಿಸುವುದಕ್ಕಾಗಿ ಪ್ರತಿಯೊಂದು ಪ್ರಾಂತವೂ ಯುಕ್ತ ಸ್ವರೂಪದ ಶಾಸನವನ್ನು ಹೊಂದುವ ಮತ್ತು ತನ್ನದೇ ಆದ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಗಳನ್ನು ಸ್ಥಾಪಿಸುವ ಅಗತ್ಯವಿದ್ದು, ಇದನ್ನು ಒಂದು "ತುರ್ತುಸ್ಥಿತಿಯ ಕ್ರಮಗಳ ಸಂಘಟನೆ" (ಎಮರ್ಜೆನ್ಸಿ ಮೆಷರ್ಸ್‌ ಆರ್ಗನೈಸೇಷನ್‌-EMO) ಎಂಬುದಾಗಿ ವಿಶಿಷ್ಟವಾಗಿ ಕರೆಯಲಾಗುತ್ತದೆ; ಇದು ಪುರಸಭೆ ಮತ್ತು ಒಕ್ಕೂಟದ ಮಟ್ಟದೊಂದಿಗಿನ ಪ್ರಧಾನ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತದೆ.

ರಾಷ್ಟ್ರೀಯ ಭದ್ರತೆ ಹಾಗೂ ಕೆನಡಿಯನ್ನರ ಸುರಕ್ಷತೆಯನ್ನು ಖಾತ್ರಿಪಡಿಸುವ ಒಕ್ಕೂಟ ಸಂಘಟನೆಗಳ ಪ್ರಯತ್ನಗಳನ್ನು ಪಬ್ಲಿಕ್‌ ಸೇಫ್ಟಿ ಕೆನಡಾ ಸಂಸ್ಥೆಯು ಸುಸಂಘಟಿತವಾಗಿಸುತ್ತದೆ ಮತ್ತು ಬೆಂಬಲಿಸುತ್ತದೆ. ಸರ್ಕಾರದ ಇತರ ಮಟ್ಟಗಳು, ಮೊದಲ ಪ್ರತಿಕ್ರಿಯಾಶೀಲರು, ಸಮುದಾಯ ಗುಂಪುಗಳು, ಖಾಸಗಿ ವಲಯ (ನಿರ್ಣಾಯಕ ಮೂಲಸೌಕರ್ಯದ ಕಾರ್ಯನಿರ್ವಾಹಕರು) ಮತ್ತು ಇತರ ರಾಷ್ಟ್ರಗಳೊಂದಿಗೂ ಅದು ಕಾರ್ಯನಿರ್ವಹಿಸುತ್ತದೆ.

ಸಾರ್ವಜನಿಕ ಸುರಕ್ಷತೆಯ ಅಧಿಕಾರಗಳು, ಕರ್ತವ್ಯಗಳು ಮತ್ತು ಚಟುವಟಿಕೆಗಳನ್ನು ವ್ಯಾಖ್ಯಾನಿಸುವ, ಸಾರ್ವಜನಿಕ ಸುರಕ್ಷತೆ ಮತ್ತು ತುರ್ತುಸ್ಥಿತಿ ಸನ್ನದ್ಧತಾ ಕಾಯಿದೆಯ ಮೂಲಕ ರೂಪರೇಖೆಯನ್ನು ರಚಿಸಲಾದ ಕಾರ್ಯನೀತಿಗಳು ಮತ್ತು ಶಾಸನದ ಒಂದು ವ್ಯಾಪಕ ಶ್ರೇಣಿಯ ಮೇಲೆ, ಪಬ್ಲಿಕ್‌ ಸೇಫ್ಟಿ ಕೆನಡಾ ಸಂಸ್ಥೆಯ ಕಾರ್ಯವು ಆಧರಿಸಿದೆ. ಇತರ ಕ್ರಮಗಳು ತಿದ್ದುಪಡಿಗಳು, ತುರ್ತುಸ್ಥಿತಿ ನಿರ್ವಹಣೆ, ಕಾನೂನು ವಿಧಿಸುವಿಕೆ, ಮತ್ತು ರಾಷ್ಟ್ರೀಯ ಭದ್ರತೆಯಂಥ ಕ್ಷೇತ್ರಗಳಿಗೆ ನಿರ್ದಿಷ್ಟವಾಗಿವೆ.

ಜರ್ಮನಿ

[ಬದಲಾಯಿಸಿ]

ಜರ್ಮನಿಯಲ್ಲಿ, ಒಕ್ಕೂಟ ಸರ್ಕಾರವು ಜರ್ಮನ್‌ ಕ್ಯಾಟಸ್ಟ್ರೋಫೆನ್‌ಸ್ಕುಟ್ಜ್‌ (ವಿಪತ್ತು ಪರಿಹಾರ) ಮತ್ತು ಝಿವಿಲ್‌ಸ್ಕುಟ್ಜ್‌ (ನಾಗರಿಕ ಸಂರಕ್ಷಣೆ) ಕಾರ್ಯಸೂಚಿಗಳನ್ನು ನಿಯಂತ್ರಿಸುತ್ತದೆ. ಜರ್ಮನ್‌ ಅಗ್ನಿಶಾಮಕ ಇಲಾಖೆ ಮತ್ತು ಟೆಕ್ನಿಸ್ಕೆಸ್‌ ಹಿಲ್ಫ್ಸ್‌ವೆರ್ಕ್‌ (ತಾಂತ್ರಿಕ ಪರಿಹಾರಕ್ಕೆ ಸಂಬಂಧಿಸಿದ ಒಕ್ಕೂಟ ಸಂಸ್ಥೆ , THW) ಇವುಗಳ ಸ್ಥಳೀಯ ಘಟಕಗಳು ಈ ಕಾರ್ಯಸೂಚಿಗಳ ಭಾಗವಾಗಿವೆ. ಜರ್ಮನ್‌ ಸಶಸ್ತ್ರ ಪಡೆಗಳು (ಬಂಡೆಸ್ವೆಹ್ರ್‌), ಜರ್ಮನ್‌ ಒಕ್ಕೂಟದ ಆರಕ್ಷಕರು ಮತ್ತು 16 ರಾಜ್ಯ ಆರಕ್ಷಕ ಪಡೆಗಳು (ಲ್ಯಾಂಡರ್‌ಪೊಲೀಜೀ) ಇವೆಲ್ಲವೂ ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದೆ. ಜರ್ಮನ್‌ ರೆಡ್‌ ಕ್ರಾಸ್‌[ಸೂಕ್ತ ಉಲ್ಲೇಖನ ಬೇಕು] ಮಾತ್ರವೇ ಅಲ್ಲದೇ, ಸೇಂಟ್‌ ಜಾನ್‌ ಸಂಚಾರಿ ಚಿಕಿತ್ಸಾಲಯಕ್ಕೆ ಸಮನಾಗಿರುವ ಜರ್ಮನ್‌ ಘಟಕವಾದ ಜೋಹಾನ್ನಿಟರ್‌-ಉನ್ಫಾಲ್‌ಹಿಲ್ಫೆ,[ಸೂಕ್ತ ಉಲ್ಲೇಖನ ಬೇಕು] ಮಾಲ್ಟ್‌‌ಸೆರ್‌-ಹಿಲ್ಫ್ಸ್‌ಡಿಯೆನ್ಸ್ಟ್‌,[ಸೂಕ್ತ ಉಲ್ಲೇಖನ ಬೇಕು] ಆರ್ಬೀಟರ್-ಸಮಾರೈಟರ್‌-ಬಂಡ್‌,[ಸೂಕ್ತ ಉಲ್ಲೇಖನ ಬೇಕು] ಮತ್ತು ಇತರ ಖಾಸಗಿ ಸಂಘಟನೆಗಳು ಜನೋಪಕಾರಿ ನೆರವನ್ನು ನೀಡುತ್ತಿವೆ. ಇವೆಲ್ಲವೂ ಬೃಹತ್‌-ಪ್ರಮಾಣ ತುರ್ತುಸ್ಥಿತಿಗಳಿಗೆ ಸಂಬಂಧಿಸಿದಂತೆ ಸಜ್ಜುಗೊಳಿಸಲ್ಪಟ್ಟಿರುವ ಅತಿದೊಡ್ಡ ಪರಿಹಾರ ಸಂಘಟನೆಗಳಾಗಿವೆ. 2006ರ ವೇಳೆಗೆ ಇದ್ದಂತೆ, ಬಾನ್‌ ವಿಶ್ವವಿದ್ಯಾಲಯದಲ್ಲಿರುವ ಒಂದು ಜಂಟಿ ವ್ಯಾಸಂಗಕ್ರಮವು "ವಿಪತ್ತು ತಡೆಯುವಿಕೆ ಮತ್ತು ಅಪಾಯ ನಿಯಂತ್ರಣದಲ್ಲಿನ ಮಾಸ್ಟರ್‌"[೨೩] ಪದವಿಯನ್ನು ನೀಡುತ್ತಿದೆ.

ಭಾರತದಲ್ಲಿ ತುರ್ತುಸ್ಥಿತಿ ನಿರ್ವಹಣೆಯ ಪಾತ್ರವನ್ನು ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಹಿಸಿಕೊಳ್ಳುತ್ತದೆ; ಇದು ಸ್ವದೇಶಿ ವ್ಯವಹಾರಗಳ ಖಾತೆಗೆ ಅಧೀನವಾಗಿರುವ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಾಮುಖ್ಯತೆಯಲ್ಲಿ ಒಂದು ಬದಲಾವಣೆ ಕಂಡುಬಂದಿದೆ; ಅಂದರೆ, ಪ್ರತಿಕ್ರಿಯೆ ಮತ್ತು ಚೇತರಿಕೆಯಿಂದ ಕಾರ್ಯತಂತ್ರದ ಅಪಾಯ ನಿರ್ವಹಣೆ ಮತ್ತು ತಗ್ಗಿಸುವಿಕೆಗೆ, ಹಾಗೂ ಸರ್ಕಾರಿ-ಕೇಂದ್ರಿತ ಕಾರ್ಯವಿಧಾನವೊಂದರಿಂದ ವಿಕೇಂದ್ರೀಕೃತ ಸಮುದಾಯ ಸಹಭಾಗಿತ್ವಕ್ಕೆ ಪ್ರಾಮುಖ್ಯತೆಯು ಬದಲಾಗಿರುವುದು ಕಂಡುಬಂದಿದೆ. ತುರ್ತುಸ್ಥಿತಿ ನಿರ್ವಹಣಾ ಪ್ರಕ್ರಿಯೆಗೆ, ಶೈಕ್ಷಣಿಕ ಜ್ಞಾನ ಮತ್ತು ಭೂವಿಜ್ಞಾನಿಗಳ ಪರಿಣತಿಯನ್ನು ತರುವ ಮೂಲಕ ಸಂಶೋಧನೆಯನ್ನು ಅನುವುಗೊಳಿಸುವ ಆಂತರಿಕ ಸಂಸ್ಥೆಯೊಂದಕ್ಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯು ಬೆಂಬಲಿಸುತ್ತದೆ.

ಒಂದು ಸಾರ್ವಜನಿಕ/ಖಾಸಗಿ ಭಾಗೀದಾರಿಕೆಯನ್ನು ಪ್ರತಿನಿಧಿಸುವ ಗುಂಪೊಂದನ್ನು ಇತ್ತೀಚೆಗಷ್ಟೇ ಭಾರತ ಸರ್ಕಾರವು ರೂಪಿಸಿದೆ. ಭಾರತದ ಮೂಲದ ಒಂದು ದೊಡ್ಡ ಕಂಪ್ಯೂಟರ್‌ ಕಂಪನಿಯು ಇದಕ್ಕೆ ಧನಸಹಾಯವನ್ನು ನೀಡಿದೆ; ವಿಪತ್ತುಗಳು ಎಂಬುದಾಗಿ ವಿವರಿಸಲ್ಪಡಬಹುದಾದಂಥ ಘಟನೆಗಳ ಜೊತೆಗೆ, ತುರ್ತುಸ್ಥಿತಿಗಳೆಡೆಗೆ ಸಮುದಾಯಗಳು ತೋರಿಸುವ ಸಾರ್ವತ್ರಿಕ ಪ್ರತಿಕ್ರಿಯೆಯನ್ನು ಸುಧಾರಿಸುವ ಕಡೆಗೆ ಇದು ಗುರಿಯಿಟ್ಟುಕೊಂಡಿದೆ. ಮೊದಲ ಪ್ರತಿಕ್ರಿಯಾಶೀಲರಿಗೆ ಸಂಬಂಧಿಸಿದ ತುರ್ತುಸ್ಥಿತಿ ನಿರ್ವಹಣಾ ತರಬೇತಿಯ ಮುನ್ನೇರ್ಪಾಡು (ಇದು ಭಾರತದಲ್ಲಿ ಮೊದಲನೆಯದು), ತುರ್ತುಸ್ಥಿತಿಯ ಏಕೈಕ ದೂರವಾಣಿ ಸಂಖ್ಯೆಯೊಂದರ ಸೃಷ್ಟಿ, ಹಾಗೂ EMS ಸಿಬ್ಬಂದಿ, ಸಲಕರಣೆ ಮತ್ತು ತರಬೇತಿಗೆ ಸಂಬಂಧಿಸಿದ ಪ್ರಮಾಣಕಗಳ ನೆಲೆಗೊಳಿಸುವಿಕೆ ಇವುಗಳು ಗುಂಪುಗಳ ಕೆಲವೊಂದು ಆರಂಭಿಕ ಪ್ರಯತ್ನಗಳಲ್ಲಿ ಸೇರಿವೆ. ಪ್ರಸಕ್ತವಾಗಿ ಇದು ಮೂರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆಯಾದರೂ, ರಾಷ್ಟ್ರ-ವ್ಯಾಪಿಯಾಗಿ ಇದನ್ನು ಒಂದು ಪರಿಣಾಮಕಾರಿ ಗುಂಪನ್ನಾಗಿ ಮಾಡುವಲ್ಲಿನ ಪ್ರಯತ್ನಗಳು ಜಾರಿಯಲ್ಲಿವೆ.

ನೆದರ್ಲೆಂಡ್ಸ್‌

[ಬದಲಾಯಿಸಿ]

ನೆದರ್ಲೆಂಡ್ಸ್‌‌‌ನಲ್ಲಿ, ಆಂತರಿಕ ಮತ್ತು ರಾಜ್ಯ ಸಂಬಂಧಗಳ ಖಾತೆಯು, ರಾಷ್ಟ್ರೀಯ ಮಟ್ಟದಲ್ಲಿನ ತುರ್ತುಸ್ಥಿತಿ ಸನ್ನದ್ಧತೆ ಹಾಗೂ ತುರ್ತುಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಹೊಣೆಗಾರನಾಗಿದ್ದು, ಇದು ರಾಷ್ಟ್ರೀಯ ಬಿಕ್ಕಟ್ಟು ಕೇಂದ್ರವೊಂದನ್ನು (ನ್ಯಾಷನಲ್‌ ಕ್ರೈಸಿಸ್‌ ಸೆಂಟರ್‌-NCC) ನಿರ್ವಹಿಸುತ್ತದೆ. 25 ಸುರಕ್ಷತಾ ಪ್ರದೇಶಗಳಲ್ಲಿ (ವೀಲಿಘೀಡ್ಸ್‌ರೆಜಿಯೊ) ದೇಶವನ್ನು ವಿಭಜಿಸಲಾಗಿದೆ. ಪ್ರತಿ ಸುರಕ್ಷತಾ ಪ್ರದೇಶಕ್ಕೆ ಮೂರು ಸೇವೆಗಳು ರಕ್ಷಣೆ ನೀಡುತ್ತವೆ. ಅವುಗಳೆಂದರೆ: ಆರಕ್ಷಕ ಸೇವೆ, ಅಗ್ನಿಶಾಮಕ ಸೇವೆ ಮತ್ತು ಸಂಚಾರಿ ಚಿಕಿತ್ಸಾಲಯದ ಸೇವೆ. ಸುಸಂಘಟಿತ ಪ್ರಾದೇಶಿಕ ಘಟನಾ ನಿರ್ವಹಣೆಯ ವ್ಯವಸ್ಥೆಯ ಅನುಸಾರವಾಗಿ ಎಲ್ಲಾ ಪ್ರದೇಶಗಳು ಕಾರ್ಯನಿರ್ವಹಿಸುತ್ತವೆ. ರಕ್ಷಣಾಖಾತೆ, ನೀರಿನ ಮಂಡಳಿ(ಗಳು), ರಿಜ್ಕ್ಸ್‌ವಾಟರ್‌ಸ್ಟಾಟ್‌‌‌‌ ಇತ್ಯಾದಿಯಂಥ ಇತರ ಸೇವೆಗಳು ಕೂಡಾ ತುರ್ತುಸ್ಥಿತಿ ನಿರ್ವಹಣೆಯ ಪ್ರಕ್ರಿಯೆಯಲ್ಲಿ ಒಂದು ಸಕ್ರಿಯ ಪಾತ್ರವನ್ನು ವಹಿಸಲು ಸಾಧ್ಯವಿದೆ.

ನ್ಯೂಜಿಲೆಂಡ್‌‌

[ಬದಲಾಯಿಸಿ]

ನ್ಯೂಜಿಲೆಂಡ್‌‌‌‌ನಲ್ಲಿ, ತುರ್ತುಸ್ಥಿತಿಯ ಅಥವಾ ಅಪಾಯ ತಗ್ಗಿಸುವಿಕೆಯ ಕಾರ್ಯಕ್ರಮದ ಸ್ವರೂಪವನ್ನು ಅವಲಂಬಿಸಿ ತುರ್ತುಸ್ಥಿತಿ ನಿರ್ವಹಣೆಗೆ ಸಂಬಂಧಿಸಿದ ಹೊಣೆಗಾರಿಕೆಯು ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟಕ್ಕೆ ಸಾಗುತ್ತದೆ. ಒಂದು ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯೊಳಗೆ ಒಂದು ತೀವ್ರ ಬಿರುಗಾಳಿಯನ್ನು ನಿರ್ವಹಿಸಬಹುದಾಗಿರುತ್ತದೆ ಮತ್ತು ರಾಷ್ಟ್ರೀಯ ಸಾರ್ವಜನಿಕ ಶಿಕ್ಷಣದ ಪ್ರಚಾರಾಂದೋಲನವೊಂದನ್ನು ಕೇಂದ್ರಸರ್ಕಾರವು ನಿರ್ದೇಶಿಸುತ್ತದೆ. ಪ್ರತಿ ಪ್ರದೇಶದ ವ್ಯಾಪ್ತಿಯೊಳಗೆ, ಸ್ಥಳೀಯ ಸರ್ಕಾರಗಳು 16 ನಾಗರಿಕ ರಕ್ಷಣೆಯ ತುರ್ತುಸ್ಥಿತಿ ನಿರ್ವಹಣಾ ಗುಂಪುಗಳಾಗಿ (ಸಿವಿಲ್‌ ಡಿಫೆನ್ಸ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಗ್ರೂಪ್ಸ್‌-CDEMGಗಳು) ಒಗ್ಗೂಡಿಸಲ್ಪಟ್ಟಿವೆ. ಸ್ಥಳೀಯ ತುರ್ತುಸ್ಥಿತಿ ನಿರ್ವಹಣೆಯು ಸಾಧ್ಯವಾದಷ್ಟು ಮಟ್ಟಿಗೆ ದೃಢವಾಗಿದೆ ಎಂಬುದನ್ನು ಖಾತ್ರಿಪಡಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿ CDEMGಯು ಹೊಣೆಗಾರನಾಗಿದೆ. ತುರ್ತುಸ್ಥಿತಿಯೊಂದರ ಕಾರಣದಿಂದ ಸ್ಥಳೀಯ ವ್ಯವಸ್ಥೆಗಳ ಚಿತ್ತಸ್ಥೈರ್ಯವು ಕುಂದಬಹುದಾದ್ದರಿಂದ, ಪೂರ್ವಭಾವಿಯಾಗಿ-ಅಸ್ತಿತ್ವದಲ್ಲಿರುವ ಪರಸ್ಪರ-ಬೆಂಬಲದ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗುತ್ತದೆ. ಹಿಂದೆ ಸಮರ್ಥಿಸಲ್ಪಟ್ಟಂತೆ, ನಾಗರಿಕ ರಕ್ಷಣೆ ಮತ್ತು ತುರ್ತುಸ್ಥಿತಿ ನಿರ್ವಹಣಾ ಖಾತೆಯ (ಮಿನಿಸ್ಟ್ರಿ ಆಫ್‌ ಸಿವಿಲ್‌ ಡಿಫೆನ್ಸ್‌ ಅಂಡ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌-MCDEM) ವತಿಯಿಂದ ನಿರ್ವಹಿಸಲ್ಪಡುವ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಕೇಂದ್ರದ (ನ್ಯಾಷನಲ್‌ ಕ್ರೈಸಿಸ್‌ ಮ್ಯಾನೇಜ್‌ಮೆಂಟ್‌ ಸೆಂಟರ್‌-NCMC) ಮೂಲಕ, ಪ್ರತಿಕ್ರಿಯೆಯನ್ನು ಸುಸಂಘಟಿತವಾಗಿಸುವ ಅಧಿಕಾರವನ್ನು ಕೇಂದ್ರಸರ್ಕಾರವು ಹೊಂದಿರುತ್ತದೆ. ಈ ರಚನೆಗಳು ಅಧಿಕೃತ ಅಪ್ಪಣೆಯಿಂದ[೨೪] ವಿಶದೀಕರಿಸಲ್ಪಟ್ಟಿವೆ ಮತ್ತು U.S.ನ ಫೆಡರಲ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಏಜೆನ್ಸಿಯ ರಾಷ್ಟ್ರೀಯ ಪ್ರತಿಕ್ರಿಯಾ ಚೌಕಟ್ಟಿಗೆ ಸರಿಸುಮಾರಾಗಿ ಸಮಾನವಾಗಿರುವ ದಿ ಗೈಡ್‌ ಟು ದಿ ನ್ಯಾಷನಲ್‌ ಸಿವಿಲ್‌ ಡಿಫೆನ್ಸ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಪ್ಲಾನ್‌ 2006 ಎಂಬುದರಲ್ಲಿ ಅತ್ಯುತ್ತಮವಾಗಿ ವಿವರಿಸಲ್ಪಟ್ಟಿವೆ.

ಪರಿಭಾಷೆ

[ಬದಲಾಯಿಸಿ]

ಇಂಗ್ಲಿಷ್‌-ಮಾತನಾಡುವ ಪ್ರಪಂಚದ ಉಳಿದ ಭಾಗಗಳಿಗೆ ಹೋಲಿಸಿದಾಗ, ತುರ್ತುಸ್ಥಿತಿ ನಿರ್ವಹಣೆಗೆ ಸಂಬಂಧಿಸಿದ ಅನನ್ಯ ಪರಿಭಾಷೆಯನ್ನು ನ್ಯೂಜಿಲೆಂಡ್‌ ಬಳಸುತ್ತದೆ.

ತುರ್ತುಸ್ಥಿತಿ ನಿರ್ವಹಣಾ ಚಕ್ರವನ್ನು ಸ್ಥಳೀಯವಾಗಿ ವಿವರಿಸಲು 4Rs ಎಂಬ ಒಂದು ಪರಿಭಾಷೆಯನ್ನು ಬಳಸಲಾಗುತ್ತದೆ. ನ್ಯೂಜಿಲೆಂಡ್‌ನಲ್ಲಿ ಸದರಿ ನಾಲ್ಕು ಹಂತಗಳನ್ನು ಈ ರೀತಿಯಲ್ಲಿ ಉಲ್ಲೇಖಿಸಲಾಗುತ್ತದೆ:[೨೫]
  • (ರಿಡಕ್ಷನ್‌) ತಗ್ಗಿಸುವಿಕೆ = ಉಪಶಾಮಕತೆ
  • (ರೆಡಿನೆಸ್‌) ಸಿದ್ಧತೆ = ಸನ್ನದ್ಧತೆ
  • (ರೆಸ್ಪಾನ್ಸ್‌) ಪ್ರತಿಕ್ರಿಯೆ
  • (ರಿಕವರಿ) ಪಡೆದುಕೊಳ್ಳುವಿಕೆ
ತುರ್ತುಸ್ಥಿತಿ ನಿರ್ವಹಣೆ ಯನ್ನು ಸ್ಥಳೀಯವಾಗಿ ಅಪರೂಪವಾಗಿ ಬಳಸಲಾಗುತ್ತದೆ; ನಾಗರಿಕ ರಕ್ಷಣೆ ಎಂಬ ಪರಿಭಾಷೆಯ ಬಳಕೆಯನ್ನು ಅನೇಕ ಸರ್ಕಾರಿ ಪ್ರಕಟಣೆಗಳು ಉಳಿಸಿಕೊಂಡಿವೆ.[೨೬] ಉದಾಹರಣೆಗೆ, ನಾಗರಿಕ ರಕ್ಷಣಾ ಸಚಿವನು ಕೇಂದ್ರಸರ್ಕಾರದ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆಯಾದ MCDEMಗೆ ಸಂಬಂಧಿಸಿದಂತೆ ಹೊಣೆಗಾರನಾಗಿರುತ್ತಾನೆ.
ನಾಗರಿಕ ರಕ್ಷಣಾ ತುರ್ತುಸ್ಥಿತಿ ನಿರ್ವಹಣೆ ಎಂಬುದು ತನ್ನ ಸ್ವಂತ ಹಕ್ಕಿನಿಂದ ಒಂದು ಪರಿಭಾಷೆ ಎನಿಸಿಕೊಂಡಿದೆ. ಅನೇಕವೇಳೆ CDEM ಎಂಬುದಾಗಿ ಸಂಕ್ಷೇಪಿಸಲ್ಪಟ್ಟಿರುವ ಇದನ್ನು, ವಿಪತ್ತುಗಳಿಂದ ಆಗುವ ಹಾನಿಯನ್ನು ತಡೆಗಟ್ಟುವುದಕ್ಕೆ ಇರುವ ಜ್ಞಾನದ ಅನ್ವಯವಾಗಿ ಶಾಸನವು ವ್ಯಾಖ್ಯಾನಿಸುತ್ತದೆ.[೨೭]
ವಿಪತ್ತು ಎಂಬುದು ಅಧಿಕೃತ ಪ್ರಕಟಣೆಗಳಲ್ಲಿ ಅತ್ಯಂತ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ನ್ಯೂಜಿಲೆಂಡ್‌ನ ಸನ್ನಿವೇಶವೊಂದರಲ್ಲಿ, ವಿಪತ್ತುಗಳ ಕುರಿತಾಗಿ ಸಾಧಾರಣವಾಗಿ ಮಾತನಾಡುವಾಗ ತುರ್ತುಸ್ಥಿತಿ ಮತ್ತು ಘಟನೆ ಎಂಬ ಪರಿಭಾಷೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.[೨೮] ಅಧಿಕಾರಿ ವರ್ಗದವರಿಂದ ಒಂದು ಪ್ರತಿಕ್ರಿಯೆಯನ್ನು ಪಡೆದಿದ್ದ ತುರ್ತುಸ್ಥಿತಿಯೊಂದನ್ನು ವಿವರಿಸುವಾಗ, ಘಟನೆ ಎಂಬ ಪರಿಭಾಷೆಯನ್ನೂ ಬಳಸಲಾಗುತ್ತದೆ. ಉದಾಹರಣೆಗೆ, “ಕ್ಯಾಂಟರ್‌ಬರಿ ಹಿಮ ಘಟನೆ 2002”ಕ್ಕೆ[೨೯] ಪ್ರಕಟಣೆಗಳು ಉಲ್ಲೇಖಿಸುತ್ತವೆ.

ರಷ್ಯಾ‌

[ಬದಲಾಯಿಸಿ]

ರಷ್ಯಾದಲ್ಲಿ, ತುರ್ತುಸ್ಥಿತಿ ಸನ್ನಿವೇಶಗಳ ಖಾತೆಯು (EMERCOM) ಅಗ್ನಿಶಾಮಕ ಕಾರ್ಯ, ನಾಗರಿಕ ರಕ್ಷಣೆ, ಸ್ವಾಭಾವಿಕ ಮತ್ತು ಮಾನವ-ನಿರ್ಮಿತ ವಿಪತ್ತುಗಳ ನಂತರದ ರಕ್ಷಣಾ ಸೇವೆಗಳನ್ನು ಒಳಗೊಂಡಿರುವ ಶೋಧನೆ ಮತ್ತು ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ.

ಯುನೈಟೆಡ್‌ ಕಿಂಗ್‌ಡಂ

[ಬದಲಾಯಿಸಿ]

2000ನೇ ಇಸವಿಯ UK ಇಂಧನ ಪ್ರತಿಭಟನೆಗಳು, ಅದೇ ವರ್ಷದಲ್ಲಿ ಕಂಡುಬಂದ ತೀವ್ರ ಪ್ರವಾಹ ಮತ್ತು 2001ರ ಯುನೈಟೆಡ್‌ ಕಿಂಗ್‌ಡಂ ಕಾಲುಬಾಯಿಜ್ವರ ಬಿಕ್ಕಟ್ಟು ಇವುಗಳ ನಂತರ ಯುನೈಟೆಡ್‌ ಕಿಂಗ್‌ಡಂ ತನ್ನ ಗಮನವನ್ನು ತುರ್ತುಸ್ಥಿತಿ ನಿರ್ವಹಣೆಯ ಮೇಲೆ ಸರಿಹೊಂದಿಸಿತು. ಇದು 2004ರ ನಾಗರಿಕ ಆಕಸ್ಮಿಕಗಳ ಕಾಯಿದೆಯ (ಸಿವಿಲ್‌ ಕಾಂಟಿಂಜೆನ್ಸೀಸ್‌ ಆಕ್ಟ್‌-CCA) ಸೃಷ್ಟಿಗೆ ಕಾರಣವಾಯಿತು; ಈ ಕಾಯಿದೆಯು ಕೆಲವೊಂದು ಸಂಘಟನೆಗಳನ್ನು ವರ್ಗ 1 ಮತ್ತು 2ರ ಪ್ರತಿಕ್ರಿಯಾಶೀಲರು ಎಂಬುದಾಗಿ ವ್ಯಾಖ್ಯಾನಿಸಿತು. ತುರ್ತುಸ್ಥಿತಿ ಸನ್ನದ್ಧತೆ ಮತ್ತು ಪ್ರತಿಕ್ರಿಯೆಗೆ ಸಂಬಂಧಿಸಿದ ಶಾಸನದ ಅಡಿಯಲ್ಲಿನ ಹೊಣೆಗಾರಿಕೆಗಳನ್ನು ಈ ಪ್ರತಿಕ್ರಿಯಾಶೀಲರು ಹೊಂದಿದ್ದಾರೆ. ಪ್ರಾದೇಶಿಕ ಚೇತರಿಕೆಯ ವೇದಿಕೆಗಳ ಮೂಲಕ ಮತ್ತು ಸ್ಥಳೀಯ ಪ್ರಾಧಿಕಾರದ ಮಟ್ಟದಲ್ಲಿ, ನಾಗರಿಕ ಆಕಸ್ಮಿಕಗಳ ಆಡಳಿತ ಕಚೇರಿಯಿಂದ ಈ CCA ನಿರ್ವಹಿಸಲ್ಪಡುತ್ತದೆ.

ವಿಪತ್ತು ನಿರ್ವಹಣಾ ತರಬೇತಿಯನ್ನು ಸಾಮಾನ್ಯವಾಗಿ ಸ್ಥಳೀಯ ಮಟ್ಟದಲ್ಲಿ ನಡೆಸಲಾಗುತ್ತದೆ ಮತ್ತು ಯಾವುದೇ ಪ್ರತಿಕ್ರಿಯೆಯಲ್ಲಿ ತೊಡಗಿಕೊಂಡಿರುವ ಸಂಘಟನೆಗಳು ಇದನ್ನು ನಡೆಸುತ್ತವೆ. ತುರ್ತುಸ್ಥಿತಿ ಯೋಜನಾ ಕಾಲೇಜಿನಲ್ಲಿ ಕೈಗೊಳ್ಳಬಹುದಾದ ವೃತ್ತಿಪರ ಶಿಕ್ಷಣ ಕ್ರಮಗಳ ಮೂಲಕ ಇದು ಕ್ರೋಡೀಕರಿಸಲ್ಪಡುತ್ತದೆ. ಮತ್ತಷ್ಟು ಡಿಪ್ಲೊಮಾಗಳು, ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಹತೆಗಳನ್ನು ದೇಶದ ಉದ್ದಗಲಕ್ಕೂ ಗಳಿಸಲು ಸಾದ್ಯವಿದೆ - ಈ ಬಗೆಯ ಮೊದಲ ವ್ಯಾಸಂಗಕ್ರಮವನ್ನು ಕೊವೆಂಟ್ರಿ ವಿಶ್ವವಿದ್ಯಾಲಯವು ರಲ್ಲಿ1994ರಲ್ಲಿ ನಿರ್ವಹಿಸಿತು. ದಿ ಇನ್‌‌ಸ್ಟಿಟ್ಯೂಟ್‌ ಆಫ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಎಂಬುದು 1996ರಲ್ಲಿ ಸ್ಥಾಪನೆಯಾದ ಒಂದು ದತ್ತಿಸಂಸ್ಥೆಯಾಗಿದ್ದು, ಸರ್ಕಾರ, ಮಾಧ್ಯಮಗಳು ಮತ್ತು ವಾಣಿಜ್ಯ ವಲಯಗಳಿಗೆ ಸಂಬಂಧಿಸಿದಂತೆ ಇದು ಸಮಾಲೋಚನೆಯ ಸೇವೆಗಳನ್ನು ಒದಗಿಸುತ್ತದೆ.

ದಿ ಪ್ರೊಫೆಷನಲ್‌ ಸೊಸೈಟಿ ಫಾರ್‌ ಎಮರ್ಜೆನ್ಸಿ ಪ್ಲಾನರ್ಸ್‌ ಎಂಬುದು ಒಂದು ತುರ್ತುಸ್ಥಿತಿ ಸಂಬಂಧಿತ ಯೋಜನಾ ಸಂಘವಾಗಿದೆ.[೩೦]

UKಯಲ್ಲಿನ ಅತಿದೊಡ್ಡ ತುರ್ತುಸ್ಥಿತಿ ಅಭ್ಯಾಸಗಳ ಪೈಕಿ ಒಂದನ್ನು ಉತ್ತರ ಐರ್ಲೆಂಡ್‌‌‌‌ನ ಬೆಲ್‌ಫಾಸ್ಟ್‌ ಸಮೀಪದಲ್ಲಿ 2007ರ ಮೇ 20ರಂದು ನಿರ್ವಹಿಸಲಾಯಿತು, ಮತ್ತು ಬೆಲ್‌ಫಾಸ್ಟ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ವಿಮಾನವೊಂದರ ಅಪ್ಪಳಿಸುವಿಕೆಯ ಸನ್ನಿವೇಶವನ್ನು ಇದು ಒಳಗೊಂಡಿತ್ತು. ಐದು ಆಸ್ಪತ್ರೆಗಳು ಮತ್ತು ಮೂರು ವಿಮಾನ ನಿಲ್ದಾಣಗಳಿಗೆ ಸೇರಿದ ಸಿಬ್ಬಂದಿವರ್ಗದವರು ಈ ನಿಯತ ಶಿಕ್ಷಣ ಕ್ರಮದಲ್ಲಿ ಭಾಗವಹಿಸಿದ್ದರು, ಮತ್ತು ಹೆಚ್ಚೂಕಮ್ಮಿ 150 ಅಂತರರಾಷ್ಟ್ರೀಯ ವೀಕ್ಷಕರು ಇದರ ಪರಿಣಾಮಕಾರಿತ್ವವನ್ನು ನಿರ್ಣಯಿಸಿದರು.[೩೧]

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

[ಬದಲಾಯಿಸಿ]

ಸ್ವದೇಶ ಭದ್ರತಾ ಇಲಾಖೆಯ (ಡಿಪಾರ್ಟ್‌ಮೆಂಟ್‌ ಆಫ್‌ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ-DHS) ಅಡಿಯಲ್ಲಿನ ಫೆಡರಲ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಏಜೆನ್ಸಿಯು (FEMA) ತುರ್ತುಸ್ಥಿತಿ ನಿರ್ವಹಣೆಗೆ ಸಂಬಂಧಿಸಿದ ಒಂದು ಅಗ್ರಗಣ್ಯ ಸಂಸ್ಥೆಯಾಗಿದೆ. FEMAದಿಂದ ಅಭಿವೃದ್ಧಿಪಡಿಸಲ್ಪಟ್ಟ HAZUS ತಂತ್ರಾಂಶ ರೂಪರೇಷೆಯು ದೇಶದಲ್ಲಿನ ಅಪಾಯ ಅಳೆಯುವ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. FEMAದ ತುರ್ತುಸ್ಥಿತಿ ನಿರ್ವಹಣಾ ಉದ್ದೇಶಗಳಿಗೆ ಸಂಬಂಧಿಸಿರುವ ಹತ್ತು ಪ್ರದೇಶಗಳ ಪೈಕಿ ಒಂದರಿಂದ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಅದರ ಅಧೀನ ರಾಜ್ಯಗಳಿಗೆ ರಕ್ಷಣೆ ಸಿಗುತ್ತದೆ. ಬುಡಕಟ್ಟಿನ, ರಾಜ್ಯದ, ಜಿಲ್ಲೆಯ ಮತ್ತು ಸ್ಥಳೀಯ ಸರ್ಕಾರಗಳು,

ತುರ್ತುಸ್ಥಿತಿ ನಿರ್ವಹಣಾ ಕಾರ್ಯಸೂಚಿಗಳು/ಇಲಾಖೆಗಳನ್ನು ಅಭಿವೃದ್ಧಿಪಡಿಸುತ್ತವೆ ಮತ್ತು ಪ್ರತಿ ಪ್ರದೇಶದ ವ್ಯಾಪ್ತಿಯೊಳಗೆ ಅವು ಶ್ರೇಣಿವ್ಯವಸ್ಥೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪಕ್ಕದ ಅಧಿಕಾರ ವ್ಯಾಪ್ತಿಗಳೊಂದಿಗಿನ ಪರಸ್ಪರ ನೆರವಿನ ಒಪ್ಪಂದಗಳನ್ನು ಬಳಸಿಕೊಳ್ಳುವ ಮೂಲಕ, ಸಾಧ್ಯವಾದಷ್ಟೂ ಅತ್ಯಂತ-ಸ್ಥಳೀಯ ಮಟ್ಟದಲ್ಲಿ ತುರ್ತುಸ್ಥಿತಿಗಳನ್ನು ನಿರ್ವಹಿಸಲಾಗುತ್ತದೆ. ಒಂದು ವೇಳೆ ತುರ್ತುಸ್ಥಿತಿಯು ಭಯೋತ್ಪಾದಕ ಸಂಬಂಧಿತವಾಗಿದ್ದರೆ ಅಥವಾ ಒಂದು "ರಾಷ್ಟ್ರೀಯ ಪ್ರಾಮುಖ್ಯತೆಯ ಘಟನೆ" ಎಂಬುದಾಗಿ ಘೋಷಿಸಲ್ಪಟ್ಟಿದ್ದರೆ, ಸ್ವದೇಶ ಭದ್ರತೆಯ ಕಾರ್ಯದರ್ಶಿಯು ರಾಷ್ಟ್ರೀಯ ಪ್ರತಿಕ್ರಿಯಾ ಚೌಕಟ್ಟಿಗೆ (ನ್ಯಾಷನಲ್‌ ರೆಸ್ಪಾನ್ಸ್‌ ಫ್ರೇಮ್‌ವರ್ಕ್‌-NRF) ಚಾಲನೆನೀಡುತ್ತಾನೆ. ಈ ಯೋಜನೆಯ ಅಡಿಯಲ್ಲಿ, ಒಕ್ಕೂಟದ ಸಂಪನ್ಮೂಲಗಳ ತೊಡಗಿಸಿಕೊಳ್ಳುವಿಕೆಯನ್ನು ಮಾಡಲು ಸಾಧ್ಯವಿದ್ದು, ಸ್ಥಳೀಯ, ಜಿಲ್ಲೆಯ, ರಾಜ್ಯದ, ಅಥವಾ ಬುಡಕಟ್ಟಿನ ಅಸ್ತಿತ್ವಗಳೊಂದಿಗೆ ಸಂಯೋಜಿಸುವ ಮೂಲಕ ಇದನ್ನು ಕೈಗೊಳ್ಳಲಾಗುತ್ತದೆ. ರಾಷ್ಟ್ರೀಯ ಘಟನಾ ನಿರ್ವಹಣೆಯ ವ್ಯವಸ್ಥೆಯನ್ನು (ನ್ಯಾಷನಲ್‌ ಇನ್ಸಿಡೆಂಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ-NIMS) ಬಳಸಿಕೊಳ್ಳುವ ಮೂಲಕ, ಸಾಧ್ಯವಾದಷ್ಟೂ ಅತಿ ಕೆಳಗಿನ ಮಟ್ಟದಲ್ಲಿ ನಿರ್ವಹಣೆಯ ನಿಭಾವಣೆಯನ್ನು ಮುಂದುವರಿಸಬಹುದಾಗಿದೆ.

ಸಿಟಿಜನ್‌ ಕಾರ್ಪ್ಸ್‌‌ ಎಂಬುದು ಸ್ವಯಂಸೇವಕ ಸೇವಾ ಕಾರ್ಯಸೂಚಿಗಳ ಒಂದು ಸಂಘಟನೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿನ ಇದರ ಆಡಳಿತವನ್ನು ಹಾಗೂ ರಾಷ್ಟ್ರೀಯ ಮಟ್ಟದಲ್ಲಿನ ಇದರ ಸುಸಂಘಟನೆಯನ್ನು DHS ನೋಡಿಕೊಳ್ಳುತ್ತದೆ; ಇದು ವಿಪತ್ತನ್ನು ತಗ್ಗಿಸಲು ಬಯಸುತ್ತದೆ ಹಾಗೂ ಸಾರ್ವಜನಿಕ ಶಿಕ್ಷಣ, ತರಬೇತಿ, ಮತ್ತು ಪ್ರಭಾವದ ಮೂಲಕ ತುರ್ತುಸ್ಥಿತಿ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಸಮುದಾಯವನ್ನು ಸಜ್ಜುಗೊಳಿಸುತ್ತದೆ. ಕಮ್ಯುನಿಟಿ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌‌‌ ಎಂಬುದು ಸಿಟಿಜನ್‌ ಕಾರ್ಪ್ಸ್‌‌ನ ಒಂದು ಕಾರ್ಯಸೂಚಿಯಾಗಿದ್ದು, ವಿಪತ್ತು ಸನ್ನದ್ಧತೆಯ ಹಾಗೂ ಮೂಲಭೂತ ವಿಪತ್ತು ಪ್ರತಿಕ್ರಿಯಾ ಕುಶಲತೆಗಳನ್ನು ಬೋಧಿಸುವುದರ ಕುರಿತಾಗಿ ಇದು ಗಮನ ಹರಿಸುತ್ತದೆ. ಸಾಂಪ್ರದಾಯಿಕ ತುರ್ತುಸ್ಥಿತಿಯ ಸೇವೆಗಳ ಚಿತ್ತಸ್ಥೈರ್ಯವನ್ನು ವಿಪತ್ತು ಕುಂದಿಸಿದಾಗ, ತುರ್ತುಸ್ಥಿತಿ ಬೆಂಬಲವನ್ನು ಒದಗಿಸಲು ಈ ಸ್ವಯಂಸೇವಕ ತಂಡಗಳನ್ನು ಬಳಸಿಕೊಳ್ಳಲಾಗುತ್ತದೆ.

ಏಷ್ಯಾ-ಪೆಸಿಫಿಕ್‌ ಪ್ರದೇಶದಲ್ಲಿ ವಿಪತ್ತು ಸನ್ನದ್ಧತೆ ಮತ್ತು ಸಾಮಾಜಿಕ ಚೇತರಿಕೆಯನ್ನು ಪ್ರವರ್ತಿಸುವ ಸಲುವಾಗಿ, ವಿಪತ್ತು ನಿರ್ವಹಣೆ ಮತ್ತು ಜನೋಪಕಾರಿ ನೆರವಿನಲ್ಲಿನ ಶ್ರೇಷ್ಠತೆಗೆ ಸಂಬಂಧಿಸಿದ ಕೇಂದ್ರವನ್ನು (COE) ಪ್ರಧಾನ ಸಂಸ್ಥೆಯಾಗಿ US ಕಾಂಗ್ರೆಸ್‌ ಸ್ಥಾಪಿಸಿತು. ಇದರ ಆದೇಶದ ಭಾಗವಾಗಿ, ಸ್ವದೇಶಿ, ವಿದೇಶಿ ಮತ್ತು ಅಂತರರಾಷ್ಟ್ರೀಯ ಅರ್ಹತೆ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ, ವಿಪತ್ತು ಸನ್ನದ್ಧತೆ, ಪರಿಣಾಮ ನಿರ್ವಹಣೆ ಮತ್ತು ಆರೋಗ್ಯ ಭದ್ರತೆಯಲ್ಲಿನ ಶಿಕ್ಷಣ ಮತ್ತು ತರಬೇತಿಯನ್ನು COE ಅನುವುಗೊಳಿಸುತ್ತದೆ.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಕನ್ಸೋರ್ಟಿಯಂ ಆಫ್‌ ಬ್ರಿಟಿಷ್‌ ಹ್ಯುಮ್ಯಾನಿಟೇರಿಯನ್‌ ಏಜೆನ್ಸೀಸ್‌
  • ವಿಪತ್ತು ಹೊಣೆಗಾರಿಕೆಯ ಯೋಜನೆ (ಡಿಸಾಸ್ಟರ್‌ ಅಕೌಂಟಬಿಲಿಟಿ ಪ್ರಾಜೆಕ್ಟ್‌-DAP)
  • ಅಂತರರಾಷ್ಟ್ರೀಯ ವಿಪತ್ತು ತುರ್ತುಸ್ಥಿತಿ ಸೇವೆ (ಇಂಟರ್‌ನ್ಯಾಷನಲ್‌ ಡಿಸಾಸ್ಟರ್‌ ಎಮರ್ಜೆನ್ಸಿ ಸರ್ವೀಸ್‌-IDES)
  • ನೆಟ್‌ಹೋಪ್‌
  • ಪೂರಕವಾಗಿರುವ ಸ್ವಾಭಾವಿಕ ವಿಪತ್ತು ಸಂರಕ್ಷಣೆ
  • ನೀರಿನ ಭದ್ರತೆ ಮತ್ತು ತುರ್ತುಸ್ಥಿತಿಯ ಸನ್ನದ್ಧತೆ

ಉಲ್ಲೇಖಗಳು‌

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ Haddow. ಆಂಸ್ಟರ್ಡ್ಯಾಮ್: Butterworth-Heinemann. ISBN 0-7506-7689-2. {{cite book}}: Missing or empty |title= (help)
  2. Armitage, David (2005). Strategic Forum No. 218. Institute for National Strategic Studies, National Defense University. {{cite book}}: Unknown parameter |coauthor= ignored (|author= suggested) (help)
  3. Cuny, Fred C. (1983). Disasters and Development. Oxford: Oxford University Press.
  4. [೧], ತಡೆಗಟ್ಟುವಿಕೆಯ ಅರ್ಥ ನಿರೂಪಣೆ.
  5. [೨], ಚೇತರಿಸಿಕೊಳ್ಳುವಿಕೆಯ ಅರ್ಥ ನಿರೂಪಣೆ
  6. ವಿಲ್ಸನ್‌, ಜೇಮ್ಸ್‌ ಪಾರ್ಕರ್‌‌, "ಪಾಲಿಸಿ ಆಕ್ಷನ್ಸ್‌ ಆಫ್‌ ಟೆಕ್ಸಾಸ್‌ ಗಲ್ಫ್‌ ಕೋಸ್ಟ್‌ ಸಿಟೀಸ್‌ ಟು ಮಿಟಿಗೇಟ್‌ ಹರಿಕೇನ್‌ ಡ್ಯಾಮೇಜ್‌" (2009). ಅಪ್ಲೈಡ್ ರಿಸರ್ಚ್ ಪ್ರಾಜೆಕ್ಟ್ಸ್‌. ಟೆಕ್ಸಾಸ್ ಸ್ಟೇಟ್ ಯೂನಿವರ್ಸಿಟಿ. ಪ್ರೌಢಪ್ರಬಂಧ 276. http://ecommons.txstate.edu/arp/312 Archived 2011-08-16 ವೇಬ್ಯಾಕ್ ಮೆಷಿನ್ ನಲ್ಲಿ..
  7. ‌ಲಿಂಡೆಲ್, M., ಪ್ರೇಟರ್‌, C., ಮತ್ತು ಪೆರ್ರಿ, R. (2006). ಫಂಡಮೆಂಟಲ್ಸ್‌ ಆಫ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌. http://training.fema.gov/EMIWeb/edu/fem.asp.ನಿಂದ 2009ರ ಜನವರಿ 9ರಂದು ಸಂಪಾದಿಸಲಾಯಿತು
  8. ನ್ಯಾಷನಲ್‌ ಪ್ರಿಪೇರ್ಡ್‌ನೆಸ್‌ ಗೈಡ್‌‌ಲೈನ್ಸ್‌, FEMA ಸ್ವದೇಶ ಭದ್ರತಾ ಇಲಾಖೆ
  9. ಮಾಡೆಲಿಂಗ್‌ ಕ್ರಿಟಿಕಲ್‌ ವ್ಯಾಕ್ಸೀನ್‌ ಸಪ್ಲೈ ಲೊಕೇಷನ್‌: ಪ್ರೊಟೆಕ್ಟಿಂಗ್‌ ಕ್ರಿಟಿಕಲ್‌ ಇನ್‌ಫ್ರಾಸ್ಟ್ರಕ್ಚರ್‌ ಅಂಡ್‌ ಪಾಪ್ಯುಲೇಷನ್‌ ಇನ್‌ ಸೆಂಟ್ರಲ್‌ ಫ್ಲೋರಿಡಾ Archived 2009-03-20 ವೇಬ್ಯಾಕ್ ಮೆಷಿನ್ ನಲ್ಲಿ. ಪಾಲ್‌ J. ಮಾಲಿಸ್‌‌ಜೆವ್ಸ್‌ಕಿ (2008)
  10. Walker, Peter (1991). International Search and Rescue Teams, A League Discussion Paper. Geneva: League of the Red Cross and Red Crescent Societies.
  11. ‌ಜಾನ್ ಹೆರಾಲ್ಡ್‌ in ಅಜಿಲಿಟಿ ಅಂಡ್‌ ಡಿಸಿಪ್ಲೀನ್‌: ಕ್ರಿಟಿಕಲ್‌ ಸಕ್ಸಸ್‌ ಫ್ಯಾಕ್ಟರ್ಸ್‌ ಫಾರ್‌ ಡಿಸಾಸ್ಟರ್‌ ರೆಸ್ಪಾನ್ಸ್‌ , ಅಮೆರಿಕನ್‌ ಅಕಾಡೆಮಿ ಆಫ್‌ ಪೊಲಿಟಿಕಲ್‌ ಅಂಡ್‌ ಸೋಷಿಯಲ್‌ ಸೈನ್ಸ್‌ನ ೨೦೦೬ರ ವಾರ್ಷಿಕ ವರದಿ; 604; 256
  12. ‌J.ವೈಲಿ ಅಂಡ್‌ ಸನ್ಸ್‌ ವತಿಯಿಂದ ಪ್ರಕಟಿಸಲ್ಪಟ್ಟಿರುವ ದಿ ನ್ಯೂ ಲೀಡರ್‌‌'ಸ್‌ 100-ಡೇ ಆಕ್ಷನ್‌ ಪ್ಲಾನ್‌ ಕೃತಿಯ ಮೂರನೇ ಆವೃತ್ತಿಯಾಗಿ ಪ್ರಕಟಿಸಲ್ಪಡಬೇಕಿರುವ, ಜಾರ್ಜ್ ಬ್ರಾಟ್‌‌‌ನ ಲೀಡಿಂಗ್‌ ಥ್ರೂ ಎ ಕ್ರೈಸಿಸ್‌ - ದಿ ನ್ಯೂ ಲೀಡರ್‌'ಸ್‌ 100-ಅವರ್‌ ಆಕ್ಷನ್‌ ಪ್ಲಾನ್‌ , PrimeGenesis website ನಲ್ಲಿ ಒಂದು ಶ್ವೇತಪತ್ರವಾಗಿ ಪ್ರಸಕ್ತವಾಗಿ ಲಭ್ಯವಿದೆ
  13. Alexander, David (2002). Principles of Emergency planning and Management. Harpenden: Terra Publishing. ISBN 1-903544-10-6.
  14. www.fema.gov ಫೆಡರಲ್‌ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಏಜೆನ್ಸಿಯ ವೆಬ್‌ಸೈಟ್‌‌
  15. Jaffin, Bob (September 17, 2008). "Emergency Management Training: How to Find the Right Program". Emergency Management Magazine. Archived from the original on 2009-04-23. Retrieved 2008-11-15.
  16. ‌ಬುಚಾನನ್, ಸ್ಯಾಲಿ. "ಎಮರ್ಜೆನ್ಸಿ ಪ್ರಿಪೇರ್ಡ್‌ನೆಸ್‌." ಲೇಖಕರು: ಪಾಲ್‌ ಬ್ಯಾಂಕ್ಸ್‌‌ ಮತ್ತು ರಾಬರ್ಟಾ ಪಿಲೆಟ್ಟೆ. ಪ್ರಿಸರ್ವೇಷನ್‌ ಇಷ್ಯೂಸ್‌ ಅಂಡ್‌ ಪ್ಲಾನಿಂಗ್‌ . ಚಿಕಾಗೊ: ಅಮೆರಿಕನ್‌ ಲೈಬ್ರರಿ ಅಸೋಸಿಯೇಷನ್‌, 2000. 159-165. ISBN 978-0-8389-0776-4
  17. ದಿ ವೆಟರ್ನರಿ ಪ್ರೊಫೆಷನ್‌'ಸ್‌ ಡ್ಯೂಟಿ ಆಫ್‌ ಕೇರ್‌ ಇನ್‌ ರೆಸ್ಪಾನ್ಸ್‌ ಟು ಡಿಸಾಸ್ಟರ್ಸ್‌ ಅಂಡ್‌ ಫುಡ್‌ ಅನಿಮಲ್‌ ಎಮರ್ಜೆನ್ಸೀಸ್‌. ಜರ್ನಲ್‌ ಆಫ್‌ ದಿ ಅಮೆರಿಕನ್‌ ವೆಟರ್ನರಿ ಮೆಡಿಕಲ್‌ ಅಸೋಸಿಯೇಷನ್‌, ಸಂಪುಟ 231, ಸಂ. 2, ಜುಲೈ 15, 2007
  18. ವಿಶ್ವ ಬ್ಯಾಂಕ್‌ನ ವಿಪತ್ತು ಅಪಾಯ ನಿರ್ವಹಣಾ ಯೋಜನೆಗಳ Archived 2016-04-15 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ವಿಪತ್ತು ನಿರ್ವಹಣಾ ಅಂಗಭಾಗಳೊಂದಿಗಿನ ವಿಶ್ವ ಬ್ಯಾಂಕ್‌ ಯೋಜನೆಗಳ ಪಟ್ಟಿ Archived 2016-04-15 ವೇಬ್ಯಾಕ್ ಮೆಷಿನ್ ನಲ್ಲಿ.
  19. "ವಿಶ್ವ ಬ್ಯಾಂಕ್‌ನ ವಿಪತ್ತು ಅಪಾಯ ನಿರ್ವಹಣಾ ಯೋಜನೆಗಳು". Archived from the original on 2016-04-15. Retrieved 2011-03-13.
  20. ಸ್ವಾಭಾವಿಕ ವಿಪತ್ತಿನ ಅಪಾಯದ ಪ್ರದೇಶಗಳು
  21. "ವಿಪತ್ತು ತಗ್ಗಿಸುವಿಕೆ ಮತ್ತು ಚೇತರಿಕೆಗೆ ಸಂಬಂಧಿಸಿದ ಜಾಗತಿಕ ಸೌಕರ್ಯ". Archived from the original on 2020-04-14. Retrieved 2021-08-10.
  22. "Civil Protection - The Community mechanism for civil protection". Ec.europa.eu. Archived from the original on 2010-05-27. Retrieved 2010-07-29.
  23. Marc Jansen (2010-06-29). "Startseite des Studiengangs Katastrophenvorsorge und -management". Kavoma.de. Retrieved 2010-07-29.
  24. ೨೦೦೫ರ ರಾಷ್ಟ್ರೀಯ ನಾಗರಿಕ ರಕ್ಷಣಾ ತುರ್ತುಸ್ಥಿತಿ ಯೋಜನೆಯ ಆದೇಶ
  25. 2007ರ ರಾಷ್ಟ್ರೀಯ ನಾಗರಿಕ ರಕ್ಷಣಾ ತುರ್ತುಸ್ಥಿತಿ ನಿರ್ವಹಣಾ ಕಾರ್ಯತಂತ್ರ Archived 2008-09-10 ವೇಬ್ಯಾಕ್ ಮೆಷಿನ್ ನಲ್ಲಿ., ಪುಟ 5. ಆಂತರಿಕ ವ್ಯವಹಾರಗಳ ಇಲಾಖೆ, ವೆಲಿಂಗ್ಟನ್‌‌, ನ್ಯೂಜಿಲೆಂಡ್‌ 2008. ಡಿಜಿಟಲ್‌ ಆವೃತ್ತಿ. 2008ರ ಆಗಸ್ಟ್‌ 3ರಂದು ಮರುಸಂಪಾದಿಸಲಾಯಿತು. ISBN 0-478-29453-0.
  26. ನೋಡಿ: ತುರ್ತುಸ್ಥಿತಿ ನಿರ್ವಹಣೆಯ ಕುರಿತಾದ ಸಂಸತ್ತಿನ ಮಾಧ್ಯಮ ಪ್ರಕಟಣೆಗಳು Archived 2009-06-19 ವೇಬ್ಯಾಕ್ ಮೆಷಿನ್ ನಲ್ಲಿ.,
    ರಿಸರ್ವ್‌ ಬ್ಯಾಂಕ್‌ ಆಫ್‌‌ ನ್ಯೂಜಿಲೆಂಡ್‌‌‌‌ನ ಬಿಕ್ಕಟ್ಟು ನಿರ್ವಹಣಾ ಸಾಮಗ್ರಿ Archived 2008-08-10 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು
    ಒಟ್ಟಾರೆಯಾಗಿ ‘ತುರ್ತುಸ್ಥಿತಿ ನಿರ್ವಹಣೆ’ ಎಂಬ ಪರಿಭಾಷೆಯನ್ನು ಬಿಟ್ಟುಬಿಡುವ Archived 2012-07-14 at Archive.is ಸಾಮಾಜಿಕ ಅಭಿವೃದ್ಧಿ ಖಾತೆಯ ವೆಬ್‌ಸೈಟ್‌, 2008ರ ಆಗಸ್ಟ್‌ 3ರಂದು ಮರುಸಂಪಾದಿಸಲಾಯಿತು.
  27. 2002ರ ನಾಗರಿಕ ರಕ್ಷಣೆ ತುರ್ತುಸ್ಥಿತಿ ನಿರ್ವಹಣೆ ಕಾಯಿದೆ, s4.. 2008ರ ಅಗಸ್ಟ್ 3ರಂದು ಮರುಸಂಪಾದಿಸಲಾಯಿತು.
  28. ಉದಾಹರಣೆಗೆ, ನ್ಯೂಜಿಲೆಂಡ್‌ನ ತುರ್ತುಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಅನುವುಗೊಳಿಸುವ ಶಾಸನವಾದ 2002ರ ನಾಗರಿಕ ರಕ್ಷಣೆ ತುರ್ತುಸ್ಥಿತಿ ನಿರ್ವಹಣಾ ಕಾಯಿದೆ ಯಲ್ಲಿ ವಿಪತ್ತನ್ನು ಬಳಸಲಾಗಿಲ್ಲ
  29. ರಿಟ್ರೈವ್ಡ್‌ 3 ಆಗಸ್ಟ್‌ ಅಕಾರ್ಡಿಂಗ್‌ ಟು ಎಂಆರ್‌ ರಾಹುಲ್‌ ಜೈನ್‌ ದಿ ಫ್ಲೂಡ್ಸ್‌ ಅಂಡ್‌ ನ್ಯಾಚುರಲ್‌ ಅನ್‌ಸರ್ಟನಿಟೀಸ್‌ ಆರಿ ಇನ್‌ಕ್ಲೂಡೆಡ್‌ ಇನ್‌ ಮ್ಯಾನೇಜ್‌ಮೆಂಟ್‌ ಇಟ್‌ ಈಸ್‌ ನೋನ್‌ ಆಸ್‌ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ 2008
  30. ಎಮರ್ಜೆನ್ಸಿ ಪ್ಲಾನಿಂಗ್‌ ಸೊಸೈಟಿ
  31. ಮಾಕ್‌ ಪ್ಲೇನ್‌ ಕ್ರಾಶ್‌ ಟೆಸ್ಟ್ಸ್‌ NI ಕ್ರ್ಯೂಸ್‌, BBC ನ್ಯೂಸ್‌, ಮೇ 20, 2007

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]