ವಿದ್ಯುತ್ ಜನಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹರಿಯುವ ನೀರನ್ನು ಉಪಯೋಗಿಸುವ ಒಂದು ವಿದ್ಯುತ್ ಜನಕ.

ವಿದ್ಯುತ್ ಜನಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಒಂದು ಯಂತ್ರ.

ಶಕ್ತಿ ಸಂರಕ್ಷಣೆ ನಿಯಮದ ಪ್ರಕಾರ ಯಾವುದೇ ಶಕ್ತಿಯನ್ನು ನಾವು ಹುಟ್ಟಿ ಹಾಕಲು ಸಾದ್ಯವಿಲ್ಲ. ಕೇವಲ ಶಕ್ತಿಯನ್ನು ನಾವು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಯಿಸಬಹುದು.

ಇದರ ಪ್ರಕಾರ ವಿದ್ಯುತ್ ಜನಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಯಾಂತ್ರಿಕ ಶಕ್ತಿಯು ನೀರಿನಿಂದ, ಗಾಳಿಯಿಂದ, ಆವಿಯಿಂದ, ಸೂರ್ಯನ ಬಿಸಿಲಿನಿಂದ ಅಥವಾ ಬೇರೆ ರೂಪಗಳಲ್ಲಿ ಇರಬಹುದು.

ತಯಾರಿಕೆ[ಬದಲಾಯಿಸಿ]

Half-length portrait oil painting of a man in a dark suit
ವಿದ್ಯುತ್ ತಯಾರಿಕೆಯ ಯಂತ್ರವನ್ನು ಆವಿಷ್ಕಾರ ಮಾಡಿದ ಮೈಕೆಲ್ ಫ್ಯಾರಡೆ

ವಿದ್ಯುತ್ ತಯಾರಿಕೆಯನ್ನು ಮೊದಲು ಕಂಡುಹಿಡಿದಿದ್ದು 1791-1867 ರ ದಶಕದಲ್ಲಿ ಇಂಗ್ಲೆಂಡಿನ ಮೈಕೆಲ್ ಫ್ಯಾರಡೆ ಎಂಬ ಸಂಶೋಧಕ.


ಮೈಕೆಲ್ ಫ್ಯಾರಡೆ ಮೊದಲಿಗೆ ರಾಯಲ್ ಸೊಸೈಟಿ, ಲಂಟನ್ನಲ್ಲಿ ಕಾರ್ಯ ನಿವ೵ಹಿಸುತ್ತಿದ್ದಾಗ ಸರ್್ ಹಂಪ್ರೀಡೇವಿಯ ಸಹಾಯಕನಾಗಿದ್ದನು. ಇತ ಮೂಲತಃ ಪುಸ್ತಕ ಬೈಂಡಿಂಗ್ ಕೆಲಸಗಾರನಾಗಿದ್ದ. ಪುಸ್ತಕ ಬೈಂಡ್ ಮಾಡುವ ಸಮಯದಲ್ಲಿ ಅವನು ವಿಜ್ಞಾನದ ಅನೇಕ ಪುಸ್ತಕಗಳನ್ನು ಓದಿದ್ದನು.

ಮೈಕೆಲ್ ಫ್ಯಾರಡೆಯ ಅತಿ ಮಹತ್ವದ ಸಂಶೋಧನೆಗಳೂ: ವಿದ್ಯುತ್ ಕಾಂತೀಯ ಪ್ರೇರಣೆ ನಿಯಮಗಳೂ ವಿದ್ಯುದ್ವಿಭಜನಾ ನಿಯಮಗಳು